Dr Karaveera Prabhu Kyalakonda Column: ಮಕ್ಕಳ ಸಾಧನೆಗೆ ಮಾನ್ಯತೆ ಬೇಕು
ಬೆಳವಣಿಗೆಯ ಮತ್ತೊಂದು ಮೆಟ್ಟಲು ಹತ್ತಿದಾಗ ಮತ್ತು ಹೊಸ ಕೌಶಲ್ಯಗಳನ್ನು ಕಲಿತಾಗ ಮೆಚ್ಚುಗೆ ಗಾಗಿ, ಮಾನ್ಯತೆಗಾಗಿ ತಂದೆ -ತಾಯಿಗಳತ್ತ, ಉಪಾಧ್ಯಾಯರತ್ತ, ಹಿರಿಯರತ್ತ ನೋಡುತ್ತದೆ. ಅವರು ಮಗು ವಿನ ಸಾಧನೆಯನ್ನು ಗುರುತಿಸಿ, ಭೇಷ್ ಎಂದರೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ, ಅದು ಇಮ್ಮಡಿ ವೇಗದಿಂದ ಮತ್ತಷ್ಟು ಸಾಧಿಸಲು, ಕಲಿಯಲು ಪ್ರೇರೇಪಿಸುತ್ತದೆ.
![Kid ok](https://cdn-vishwavani-prod.hindverse.com/media/images/Kid_ok.max-1280x720.jpg)
![Profile](https://vishwavani.news/static/img/user.5c7ca8245eec.png)
ಡಾ. ಕರವೀರಪ್ರಭು ಕ್ಯಾಲಕೊಂಡ, ಬಾದಾಮಿ
ಮಗುವಿನ ಸಾಧನೆಯನ್ನು ಗುರುತಿಸಿ ಮಾನ್ಯತೆ ನೀಡದೇ ಹೋದರೆ, ಅದಕ್ಕಿಂತ ಅಪಾಯ ಬೇರೊಂ ದಿಲ್ಲ. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿ, ರ‍್ಯಾಂಕ್ ಪಡೆದಾಗ, ಕ್ರೀಡಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ಹಿರಿ ಹಿರಿ ಹಿಗ್ಗುತ್ತಾ ಮನೆಗೆ ಬಂದ ಮಗುವಿನ ಸಾಧನೆಯನ್ನು ಗಮನಿಸಿ, ಹುರುಪು ಹುಮ್ಮಸ್ಸು ತುಂಬಿ, ಪ್ರೋತ್ಸಾಹಕರ ಮಾತುಗಳನ್ನು ಆಡದಿದ್ದರೆ, ಮಗುವಿನ ಉತ್ಸಾಹ ಜರ್ರನೆ ಇಳಿದು ಹೋಗು ತ್ತದೆ. ತನ್ನ ಸಾಧನೆಗೆ ಮಾನ್ಯತೆ ಇಲ್ಲದಿದ್ದರೆ ನಾನೇಕೆ ಕಷ್ಟಪಡಬೇಕು ಎಂದು ಅದು ಯೋಚಿಸುತ್ತದೆ. ಬೆಳೆಯುವ ಮಕ್ಕಳ ಸಾಧನೆಗೆ ಮಾನ್ಯತೆ ಎಷ್ಟು ಅವಶ್ಯಕ ಎನ್ನುವುದು ಶಿಕ್ಷಣ ತಜ್ಞರಿಗೆ, ನುರಿತ ಶಿಕ್ಷಕರಿಗೆ ಗೊತ್ತು. ಪೌಷ್ಟಿಕ ಆಹಾರ, ಪ್ರೀತಿ , ಮಮತೆಗಳಂತೆ ಮಾನ್ಯತೆ ಪ್ರೋತ್ಸಾಹಗಳು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅತ್ಯಗತ್ಯ.
ಬೆಳವಣಿಗೆಯ ಮತ್ತೊಂದು ಮೆಟ್ಟಲು ಹತ್ತಿದಾಗ ಮತ್ತು ಹೊಸ ಕೌಶಲ್ಯಗಳನ್ನು ಕಲಿತಾಗ ಮೆಚ್ಚುಗೆ ಗಾಗಿ, ಮಾನ್ಯತೆಗಾಗಿ ತಂದೆ -ತಾಯಿಗಳತ್ತ, ಉಪಾಧ್ಯಾಯರತ್ತ, ಹಿರಿಯರತ್ತ ನೋಡುತ್ತದೆ. ಅವರು ಮಗುವಿನ ಸಾಧನೆಯನ್ನು ಗುರುತಿಸಿ, ಭೇಷ್ ಎಂದರೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ, ಅದು ಇಮ್ಮಡಿ ವೇಗದಿಂದ ಮತ್ತಷ್ಟು ಸಾಧಿಸಲು, ಕಲಿಯಲು ಪ್ರೇರೇಪಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಅಲ್ಲಿ ಚೆರ‍್ರಿ ಹೂವು ಅರಳಿದರೆ ಜಗತ್ತಿಗೆಲ್ಲ ಪುಳಕ !
ಶಾಲೆಯಲ್ಲಿ ಉಪಾಧ್ಯಾಯರ ಮೆಚ್ಚುಗೆ ಗಳಿಸಲು, ಪ್ರಿಯ ಶಿಷ್ಯನಾಗಲು ಮಕ್ಕಳ ನಡುವೆ ತೀವ್ರ ಸ್ಪರ್ಧೆ ಇರುತ್ತದೆ. ತಂದೆ-ತಾಯಿ, ಶಿಕ್ಷಕರು ಸ್ವಲ್ಪ ಉದಾಸೀನ ಮಾಡಿ, ಮಗುವಿನ ಸಾಧನೆಯನ್ನು ಗುರುತಿಸಿ ಮಾನ್ಯತೆ ಮಾಡದೆ ಹೋದರೆ ಅದಕ್ಕಿಂತ ಅಪಾಯ ಮತ್ತೊಂದಿಲ್ಲ. ಬೆಂಕಿ ಪೊಟ್ಟಣ ಗಳಿಂದ, ಇತರ ವಸ್ತುಗಳಿಂದಲೋ ಮಗು ಆಟದ ಸಾಮಾನು ಮಾಡಿದಾಗ ಅಥವಾ ಬಣ್ಣದಿಂದ ಚಿತ್ರ ಬಿಡಿಸಿದಾಗ , ಮನೆಯವರು ಅದನ್ನು ನೋಡಿ ‘ಭೇಷ್ ಎಷ್ಟು ಚೆನ್ನಾಗಿದೆ’ ಎಂದಾಗ ಇತರರಿಗೆ ಅದನ್ನು ತೋರಿಸಿ ‘ನೋಡಿ , ಇದನ್ನು ನಮ್ಮ ಹುಡುಗನೇ ಮಾಡಿದ್ದು’ ಎಂದಾಗ ಮಗುವಿನ ಮುಖ ಹೇಗೆ ಅರಳುತ್ತದೆ, ಅವನು ಹೆಮ್ಮೆಯಿಂದ ಹೇಗೆ ಬೀಗುತ್ತಾನೆ ಎಂಬುದನ್ನು ನೀವೇ ಕಣ್ಣಾರೆ ಕಾಣುತ್ತೀರಿ.
ಈ ಮಾನ್ಯತೆಯಿಂದ ಆತ ಇನ್ನಷ್ಟು ಚುರುಕಾಗಿ , ಇನ್ನೂ ಹೆಚ್ಚಿನದನ್ನು ಸಾಧಿಸುತ್ತಾನೆ. ಇದರಲ್ಲೇ ನೂ ಸಂಶಯಬೇಡ. ಒಳ್ಳೆಯ ಚಟುವಟಿಕೆಗಳಿಗೆ, ರಚನಾತ್ಮಕ ಕೆಲಸಗಳಿಗೆ ದೊಡ್ಡವರಿಂದ ಮಾನ್ಯತೆ ದೊರೆಯದೇ ಹೋದರೆ ಮಕ್ಕಳು ಮಾನ್ಯತೆ ದೊರಕಿಸಿಕೊಳ್ಳಲು ಅಡ್ಡದಾರಿ ಹಿಡಿಯುವುದು ಅಪ ರೂಪವೇನಲ್ಲ. ತೀಟೆ ಮಾಡಿ, ಜಗಳತಂದು, ಹೊಡೆದಾಟ ಮಾಡಿ, ಅವಶ್ಯ ಹಾಗೂ ಬೆಲೆ ಬಾಳುವ ವಸ್ತುಗಳನ್ನು ನಾಶ ಮಾಡಿ, ಅವಿಧೇಯವಾಗಿ, ಶಾಲೆಗೆ ಚಕ್ಕರ್ ಹೊಡೆದು, ಸುಳ್ಳು,ತಗಲು, ಕಳ್ಳತನ ಮತ್ತಿತರ ಅಪರಾಧ ಮಾಡಿ, ಬೇಕೆಂತಲೇ ಓದದೆ ಪರೀಕ್ಷೆಯಲ್ಲಿ ಫೇಲಾಗಿ, ದೊಡ್ಡವರ, ಮನೆಯವರ, ಶಿಕ್ಷಕರ ಗಮನ ಸೆಳೆದು ನಕಾರಾತ್ಮಕ ರೀತಿಯಲ್ಲಿ ಮಕ್ಕಳು ಮಾನ್ಯತೆ ಪಡೆಯಲು ಕೆಲವು ಮಕ್ಕಳು ಪ್ರಯತ್ನಿಸುತ್ತಾರೆ, ಬಾಲಾಪರಾಧಿಗಳಾಗುತ್ತಾರೆ.
ಅನಾಥಾಶ್ರಮಗಳಲ್ಲಿ, ಹಾಸ್ಟೆಲ್ ಗಳಲ್ಲಿ, ಜನಸಂದಣಿ ಇರುವ ಬೋರ್ಡಿಂಗ್ ಶಾಲೆಗಳಲ್ಲಿ, ಬೇರೆ ಯವರ ಮನೆಗಳಲ್ಲಿ ಬೆಳೆಯುವ ಮಕ್ಕಳು ಮಾನ್ಯತೆಯ ಕೊರತೆಯಿಂದ ಬಳಲುವ ಸಂದರ್ಭ ಹೆಚ್ಚು. ಅಂಥವರಿಗೆ ಪ್ರೋತ್ಸಾಹ, ಪ್ರೇರಣೆ, ಪುರಸ್ಕಾರ ಸಿಕ್ಕಲ್ಲಿ ಎಲ್ಲರಂತೆ ಸಾಧನೆ ಸಾಧಿಸುವಲ್ಲಿ ಹಿಂದೆ ಬೀಳುವುದಿಲ್ಲ.