ವಿಶ್ವಯೋಗ
ಡಾ.ಪತಂಜಲಿ ಆಚಾರ್ಯ
ಅಭ್ಯಾಸಕ್ರಮ: ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಹೊಟ್ಟೆಯ ಮೇಲೆ ಮಲಗಿ. ಬೆನ್ನಿನ ಹಿಂದಿನಿಂದ ಹಿಂಗಾಲುಗಳನ್ನು ಹಿಡಿದುಕೊಳ್ಳಿ. ಹೀಗೆ ಮಾಡಿದಾಗ ಶರೀರವು ಬಗ್ಗಿಸಿದ ಬಿಲ್ಲಿನ ಆಕೃತಿಯನ್ನು ತಳೆಯುವುದು. ಈ ಹಂತದಲ್ಲಿ ಉಸಿರನ್ನು ಬಿಟ್ಟು ಶ್ವಾಸವನ್ನು ತಡೆಯಿರಿ. ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಿ, ತಲೆಯನ್ನು ಹಿಂದಕ್ಕೆ ದೂಡಿ ದೃಷ್ಟಿಯನ್ನು ಮೇಲ್ಮುಖವಾಗಿರಿಸಿ ಹೊಟ್ಟೆಯನ್ನು ನೆಲಕ್ಕೆ ಮುಟ್ಟಿಸಿ. ಈಗ ಸರಾಗವಾಗಿ ಉಸಿರಾಡಿ. 2 ಸೆಕೆಂಡುಗಳಿಂದ 2-3 ನಿಮಿಷಗಳವರೆಗೆ ಈ ಆಸನದ ಭಂಗಿಯಲ್ಲಿದ್ದು, 4-5 ಬಾರಿ ಪುನರಾವರ್ತಿಸಬೇಕು.
ಪ್ರಯೋಜನಗಳು: ಈ ಆಸನವನ್ನು ನಿಯತವಾಗಿ ಅಭ್ಯಾಸ ಮಾಡುವುದರಿಂದಾಗಿ ಬೆನ್ನುಮೂಳೆಯು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ, ಅದರ ಸ್ಥಿತಿಸ್ಥಾಪಕತ್ವ ಹೆಚ್ಚುತ್ತದೆ. ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ. ಉದರ ಭಾಗದ ಕೊಬ್ಬು ಕರಗುತ್ತದೆ. ಮಂಡಿ ಗಳ ಬಿಗಿತ, ಸೊಂಟನೋವು, ಸಂಧಿವಾತ ನಿವಾರಣೆಯಾಗುತ್ತವೆ. ಮಹಿಳೆಯರ ಮಾಸಿಕ ಋತುಧರ್ಮ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ.