ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಯ ಫೋಬಿಯಾ ಆಗದಿರಲಿ

ಅಪಾಯವನ್ನು ಕಂಡಾಗ ಎಚ್ಚೆತ್ತುಕೊಳ್ಳುವುದು, ಅಪರಿಚಿತ ಪರಿಸ್ಥಿತಿಯಲ್ಲಿ ಹಿಂಜರಿಯುವುದು, ಪರೀಕ್ಷೆ ಅಥವಾ ಸಂದರ್ಶನದ ಮುನ್ನ ಆತಂಕ ಇವೆಲ್ಲ ಸಾಮಾನ್ಯ. ಕೆಲವೊಮ್ಮೆ ಅಪಾಯ ಹೊರಗಿ ರುವುದಿಲ್ಲ ನಮ್ಮ ಮನಸ್ಸು ಅದನ್ನು ಸೃಷ್ಟಿಸಿರುತ್ತದೆ. ಆದರೆ ಯಾವುದೇ ನಿಜವಾದ ಅಪಾಯವಿಲ್ಲ ದಿದ್ದರೂ ಒಂದು ನಿರ್ದಿಷ್ಟ ವಸ್ತು, ವ್ಯಕ್ತಿ, ಸ್ಥಳ, ಪ್ರಾಣಿ ಅಥವಾ ಪರಿಸ್ಥಿತಿಯ ಬಗ್ಗೆ ಅತಿಯಾದ, ನಿರಂತರ ಮತ್ತು ನಿಯಂತ್ರಿಸಲಾಗದ ಭಯ ಉಂಟಾದರೆ ಅದನ್ನು ಸಾಮಾನ್ಯ ಭಯ ಎಂದು ಹೇಳಲಾಗುವುದಿಲ್ಲ. ಇಂತಹ ಸ್ಥಿತಿಯನ್ನು ‘ಫೋಬಿಯಾ’ ಎಂದು ಕರೆಯಲಾಗುತ್ತದೆ.

ಡಾ.ಮೈತ್ರಿ ಭಟ್, ವಿಟ್ಲ

ಲಿಫ್ಟ್ ಬಾಗಿಲು ತೆರೆಯಿತು. ಎಲ್ಲರೂ ಸಹಜವಾಗಿ ಒಳಗೆ ಹೋದರು. ಆದರೆ ಅವಳು ಮಾತ್ರ ಅ ನಿಂತಳು. ಇಷ್ಟು ಚಿಕ್ಕ ಲಿಫ್ಟ್‌ʼಗೆ ಹೆದರ್ತೀಯಾ? ಎಂಬ ಸ್ನೇಹಿತೆಯ ಮಾತಿಗೆ ನಗಲು ಪ್ರಯತ್ನಿಸಿ‌ ದಳು. ಆದರೆ ಅವಳ ಮನಸ್ಸಿನಲ್ಲಿ ಆಗಲೇ ಭಯದ ಅಲೆ. ಬಾಗಿಲು ಮುಚ್ಚುವ ಕಲ್ಪನೆಯೇ ಉಸಿರನ್ನು ಭಾರವಾಗಿಸುತ್ತಿತ್ತು. ಇದು ಕೇವಲ ಹೆದರಿಕೆಯೇ ಅಥವಾ ಮನಸ್ಸು ಒಂದು ನಿರ್ದಿಷ್ಟ ಭಯಕ್ಕೆ ಸಿಕ್ಕಿಹಾಕಿಕೊಂಡಿದೆಯೇ? ಭಯ ಎಂಬುದು ಮನುಷ್ಯನ ಸಹಜ ಭಾವನೆ.

ಅಪಾಯವನ್ನು ಕಂಡಾಗ ಎಚ್ಚೆತ್ತುಕೊಳ್ಳುವುದು, ಅಪರಿಚಿತ ಪರಿಸ್ಥಿತಿಯಲ್ಲಿ ಹಿಂಜರಿಯುವುದು, ಪರೀಕ್ಷೆ ಅಥವಾ ಸಂದರ್ಶನದ ಮುನ್ನ ಆತಂಕ ಇವೆಲ್ಲ ಸಾಮಾನ್ಯ. ಕೆಲವೊಮ್ಮೆ ಅಪಾಯ ಹೊರಗಿ ರುವುದಿಲ್ಲ ನಮ್ಮ ಮನಸ್ಸು ಅದನ್ನು ಸೃಷ್ಟಿಸಿರುತ್ತದೆ. ಆದರೆ ಯಾವುದೇ ನಿಜವಾದ ಅಪಾಯವಿಲ್ಲ ದಿದ್ದರೂ ಒಂದು ನಿರ್ದಿಷ್ಟ ವಸ್ತು, ವ್ಯಕ್ತಿ, ಸ್ಥಳ, ಪ್ರಾಣಿ ಅಥವಾ ಪರಿಸ್ಥಿತಿಯ ಬಗ್ಗೆ ಅತಿಯಾದ, ನಿರಂತರ ಮತ್ತು ನಿಯಂತ್ರಿಸಲಾಗದ ಭಯ ಉಂಟಾದರೆ ಅದನ್ನು ಸಾಮಾನ್ಯ ಭಯ ಎಂದು ಹೇಳಲಾಗುವುದಿಲ್ಲ. ಇಂತಹ ಸ್ಥಿತಿಯನ್ನು ‘ಫೋಬಿಯಾ’ ಎಂದು ಕರೆಯಲಾಗುತ್ತದೆ.

ಫೋಬಿಯಾ ಹೊಂದಿರುವ ವ್ಯಕ್ತಿಗೆ ತಾನು ಹೆದರುತ್ತಿರುವ ವಿಷಯ ಅಪಾಯಕಾರಿ ಅಲ್ಲ ಎಂಬ ಅರಿವು ಇದ್ದರೂ, ಆ ಭಯವನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗದೇ ಇರಬಹುದು. ಪರಿಣಾಮವಾಗಿ ಆ ವ್ಯಕ್ತಿ ತನ್ನ ದಿನನಿತ್ಯದ ಚಟುವಟಿಕೆಗಳನ್ನೇ ಬದಲಿಸಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದು.

ಇದನ್ನೂ ಓದಿ: Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಭಯ ವರ್ಸಸ್ ಫೋಬಿಯಾ ಭಯ ನಮ್ಮನ್ನು ರಕ್ಷಿಸುವ ಸಹಜ ಜೀವರಕ್ಷಣಾ ವ್ಯವಸ್ಥೆ. ಉದಾ ಹರಣೆಗೆ, ರಸ್ತೆಯಲ್ಲಿ ವೇಗವಾಗಿ ಬರುತ್ತಿರುವ ವಾಹನವನ್ನು ಕಂಡಾಗ ಹಿಂದೆ ಸರಿಯುವುದು ಅಗತ್ಯ ಪ್ರತಿಕ್ರಿಯೆ. ಆದರೆ ಅದೇ ರೀತಿ, ಯಾವುದೇ ಅಪಾಯವಿಲ್ಲದಿದ್ದರೂ ವಾಹನದ ಚಿತ್ರವನ್ನೇ ನೋಡಿದಾಗ ತೀವ್ರ ಆತಂಕ ಉಂಟಾಗಿ, ರಸ್ತೆಗೆ ಹೋಗುವುದನ್ನೇ ತಪ್ಪಿಸಿ ಕೊಳ್ಳುವಂತಾದರೆ ಅದು ಸಾಮಾನ್ಯ ಭಯದ ಮಿತಿಯನ್ನು ಮೀರಿರಬಹುದು.

ಫೋಬಿಯಾದಲ್ಲಿ ಭಯವು ಸಾಮಾನ್ಯವಾಗಿ ನಿರ್ದಿಷ್ಟ ವಿಷಯ, ವಸ್ತು ಅಥವಾ ಪರಿಸ್ಥಿತಿಗೆ ಸಂಬಂಧಿಸಿರುತ್ತದೆ. ಆ ವಿಷಯವನ್ನು ಎದುರಿಸುವ ಸಾಧ್ಯತೆಯಷ್ಟೇ ಅಲ್ಲ, ಅದರ ಬಗ್ಗೆ ಯೋಚಿಸುವುದರಿಂದಲೂ ಆತಂಕ ಉಂಟಾಗಬಹುದು. ಈ ಕಾರಣದಿಂದ ವ್ಯಕ್ತಿ ತನ್ನ ಜೀವನದಲ್ಲಿ ಹಲವು ನಿರ್ಬಂಧಗಳನ್ನು ಹಾಕಿಕೊಳ್ಳಬಹುದು.

ಫೋಬಿಯಾದ ಪ್ರಮುಖ ವಿಧಗಳು: ಫೋಬಿಯಾಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಸಾಮಾನ್ಯ ವಾಗಿ ಕಂಡುಬರುವವು ಅರಕ್ನೋ-ಬಿಯಾ (ಜೇಡಗಳ ಬಗ್ಗೆ ತೀವ್ರ ಭಯ), ಅಕ್ರೋ-ಬಿಯಾ (ಎತ್ತರದ ಸ್ಥಳಗಳ ಬಗ್ಗೆ ಅತಿಯಾದ ಭಯ), ಕ್ಲಾಸ್ಟ್ರೋಫೋಬಿಯಾ (ಲಿಫ್ಟ್, ಸಣ್ಣ ಕೊಠಡಿ ಅಥವಾ ಮುಚ್ಚಿದ ಸ್ಥಳಗಳ ಬಗ್ಗೆ ತೀವ್ರ ಭಯ), ಅಗೋರಾಫೋಬಿಯಾ (ತಪ್ಪಿಸಿಕೊಳ್ಳುವುದು ಕಷ್ಟವೆನಿಸುವ ಅಥವಾ ಸಹಾಯ ದೊರೆಯುವುದಿಲ್ಲವೆಂದು ಭಾಸವಾಗುವ ಕೆಲವು ಸಾರ್ವಜನಿಕ ಸ್ಥಳಗಳು ಅಥವಾ ಪರಿಸ್ಥಿತಿಗಳ ಬಗ್ಗೆ ತೀವ್ರ ಆತಂಕ) ಹೀಗೆ. ಇವುಗಳ ಹೊರತಾಗಿ ರಕ್ತ, ಗಾಯ, ಸೂಜಿ, ದಂತ ವೈದ್ಯಕೀಯ ಚಿಕಿತ್ಸೆ, ವಿಮಾನ ಪ್ರಯಾಣ, ನೀರು ಮುಂತಾದವುಗಳಿಗೆ ಸಂಬಂಧಿಸಿದ ನಿರ್ದಿಷ್ಟ ಭಯಗಳೂ ಕಂಡುಬರ ಬಹುದು.

ಫೋಬಿಯಾದ ಲಕ್ಷಣಗಳು: ಫೋಬಿಯಾ ಎದುರಾದಾಗ ಮನಸ್ಸಿನಲ್ಲಷ್ಟೇ ಅಲ್ಲ, ದೇಹದಲ್ಲಿಯೂ ಹಲವು ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಹೃದಯ ಬಡಿತ ಹೆಚ್ಚಾಗುವುದು, ಬೆವರುವುದು, ಕೈಕಾಲು ನಡುಗುವುದು, ಉಸಿರಾಟದ ಗತಿ ಹೆಚ್ಚುವುದು, ತಲೆಸುತ್ತುವ ಅನುಭವ, ಹೊಟ್ಟೆಯಲ್ಲಿ ಅಸ್ವಸ್ಥತೆ, ಅಶಾಂತಿ, ಅಳುವ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳುವ ಬಲವಾದ ಆಸೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಭಯ ಹೆಚ್ಚಾದಂತೆ ವ್ಯಕ್ತಿಯ ಶಿಕ್ಷಣ, ಉದ್ಯೋಗ, ಪ್ರಯಾಣ, ಸಾಮಾಜಿಕ ಜೀವನ ಮತ್ತು ಸಂಬಂಧಗಳ ಮೇಲೂ ಪರಿಣಾಮವನ್ನು ಬೀರಬಹುದು.

ಕಾರಣಗಳು: ಫೋಬಿಯಾಗೆ ಇದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ವ್ಯಕ್ತಿಯ ಅನುಭವಗಳು, ಕುಟುಂಬದ ವಾತಾವರಣ, ಹಿಂದಿನ ಭಯಾನಕ ಅನುಭವಗಳು ಮತ್ತು ಆತಂಕಕ್ಕೆ ಸಂಬಂಧಿಸಿದ ಮನೋವೈeನಿಕ ಅಂಶಗಳು ಇದರ ಬೆಳವಣಿಗೆಯಲ್ಲಿ ಪಾತ್ರವನ್ನು ವಹಿಸಬಹುದು. ಕೆಲವೊಮ್ಮೆ ಬಾಲ್ಯದಲ್ಲಿ ನಡೆದ ಒಂದು ಅಹಿತಕರ ಘಟನೆ ನಂತರದ ಜೀವನದಲ್ಲಿ ನಿರ್ದಿಷ್ಟ ಭಯವಾಗಿ ಉಳಿಯಬಹುದು. ಇನ್ನು ಕೆಲವೊಮ್ಮೆ ಇತರರನ್ನು ನೋಡಿ ಭಯವನ್ನು ಕಲಿಯುವ ಸಾಧ್ಯತೆಯೂ ಇದೆ. ಫೋಬಿಯಾದ ದೊಡ್ಡ ಸಮಸ್ಯೆ ಎಂದರೆ ಭಯದ ವಸ್ತುವಿಗಿಂತಲೂ ಭಯದಿಂದ ತಪ್ಪಿಸಿಕೊಳ್ಳುವ ಅಭ್ಯಾಸ ಜೀವನದಲ್ಲಿ ಕೆಲವೊಂದನ್ನು ಸದಾ ದೂರವಿಡುವಂತೆ ಮಾಡಬಹುದು.

ಎತ್ತರದ ಪ್ರದೇಶದ ಭಯವಿರುವ ವಿದ್ಯಾರ್ಥಿ ಕೆಲವೊಂದು ಶೈಕ್ಷಣಿಕ ಚಟುವಟಿಕೆಗಳನ್ನು ತಪ್ಪಿಸಿ ಕೊಳ್ಳಬಹುದು. ಸಾಮಾಜಿಕ ಸಂದರ್ಭಗಳ ಬಗ್ಗೆ ತೀವ್ರ ಭಯವಿರುವ ವ್ಯಕ್ತಿ ಸ್ನೇಹಿತರೊಂದಿಗೆ ಬೆರೆಯುವುದನ್ನು ಅಥವಾ ಸಾರ್ವಜನಿಕವಾಗಿ ಮಾತನಾಡುವುದನ್ನು ತಪ್ಪಿಸಿಕೊಳ್ಳಬಹುದು. ವಿಮಾನ ಪ್ರಯಾಣದ ಭಯವಿರುವವರು ದೂರದ ಪ್ರಯಾಣವನ್ನೇ ಕೈಬಿಡಬಹುದು. ಚಿಕಿತ್ಸೆ ಸಾಧ್ಯವೇ? ಫೋಬಿಯಾ ಚಿಕಿತ್ಸೆಗೆ ಒಳಪಡಬಹುದಾದ ಮಾನಸಿಕ ಆರೋಗ್ಯ ಸಮಸ್ಯೆ.

ವ್ಯಕ್ತಿಯ ಸ್ಥಿತಿ, ಭಯದ ಸ್ವರೂಪ ಮತ್ತು ಅದರ ತೀವ್ರತೆಯನ್ನು ಆಧರಿಸಿ ತಜ್ಞರು ಸೂಕ್ತ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡುತ್ತಾರೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ(ಸಿಬಿಟಿ)ಯಂತಹ ಮನೋಚಿಕಿತ್ಸಾ ವಿಧಾನಗಳು ಅನೇಕ ಫೋಬಿಯಾಗಳ ನಿರ್ವಹಣೆಯಲ್ಲಿ ಉಪಯುಕ್ತ. ಇದರಲ್ಲಿ ಭಯವನ್ನು ಹೆಚ್ಚಿಸುವ ಆಲೋಚನೆಗಳನ್ನು ಗುರುತಿಸಿ, ಅವುಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಎಕ್ ಪೋಶರ್ ಆಧಾರಿತ ಥೆರಪಿಯನ್ನೂ ಬಳಸಲಾಗುತ್ತದೆ. ಇದರಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ವ್ಯಕ್ತಿಯನ್ನು ಭಯದ ವಿಷಯವನ್ನು ಕ್ರಮೇಣ ಮತ್ತು ಸುರಕ್ಷಿತ ರೀತಿಯಲ್ಲಿ ಎದುರಿಸಲು ಕಲಿಸಲಾಗುತ್ತದೆ. ಇದು ವ್ಯಕ್ತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ಮುಂದುವರಿಯುವ ಚಿಕಿತ್ಸಾ ವಿಧಾನವಾಗಿದೆ. ಕೆಲವು ತೀವ್ರ ಪ್ರಕರಣಗಳಲ್ಲಿ ವೈದ್ಯರು ಔಷಧೋಪಚಾರವನ್ನು ಪರಿಗಣಿಸಬಹುದು.

ಫೋಬಿಯಾ ಹೊಂದಿರುವ ವ್ಯಕ್ತಿಯನ್ನು ಹೀಯಾಳಿಸುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರ ಗೊಳಿಸಬಹುದು. ಅವರ ಭಯವನ್ನು ಅರ್ಥಮಾಡಿಕೊಳ್ಳುವುದು ಉತ್ತಮ. ಕುಟುಂಬದವರು ಸಹಾನುಭೂತಿಯಿಂದ ಮಾತನಾಡಬೇಕು. ಅಗತ್ಯವಿದ್ದರೆ ಮನೋವೈದ್ಯರು ಅಥವಾ ಮನೋ ವಿಜ್ಞಾನಿಗಳ ಸಹಾಯವನ್ನು ಪಡೆಯಬೇಕು.