Surendra Pai Column: ಕೋಟೆ ನಾಡಿನಲ್ಲಿ ಮೃಗಾಲಯ
Surendra Pai Column: ಕೋಟೆ ನಾಡಿನಲ್ಲಿ ಮೃಗಾಲಯ
Ashok Nayak
December 20, 2024
ಸುರೇಂದ್ರ ಪೈ, ಭಟ್ಕಳ
ಚಿತ್ರದುರ್ಗದಿಂದ 9.5 ಕಿಲೋಮೀಟರ್ ದೂರದಲ್ಲಿರುವ ಜೋಗಿಮಟ್ಟಿಯ ನಿಸರ್ಗಧಾಮದಿಂದ 500 ಮೀಟರ್ ದೂರದಲ್ಲಿ ಆಡುಮಲ್ಲೇಶ್ವರ ಮೃಗಾಲಯವಿದೆ. ಕಳೆದೊಂದು ವರ್ಷದಿಂದ ಮೃಗಾಲಯಕ್ಕೆ ಆಧುನಿಕ ಸ್ಪರ್ಶವನ್ನು ನೀಡಿ, ದುರಸ್ತಿ ಕಾರ್ಯಮಾಡಿ ಮೈಸೂರು ಮೃಗಾಲಯದಿಂದ ಹಲವು ಪ್ರಾಣಿಗಳನ್ನು ಅದರಲ್ಲೂ ವಿಶೇಷವಾಗಿ ಹುಲಿಯನ್ನು ತರಲಾಗಿದೆ.
ಇನ್ನುಳಿದಂತೆ ಈ ಮೃಗಾಲಯದಲ್ಲಿ ಹುಲಿ, ಚಿರತೆ, ಎಮು, ಕೃಷ್ಣಮೃಗ, ಚುಕ್ಕಿ ಜಿಂಕೆ, ಮುಳ್ಳಂದಿ, ಗಿಳಿಗಳು, ಮೊಸಳೆ, ನವಿಲು, ಕರಡಿ, ಹೆಬ್ಬಾವು, ಗುಳ್ಳೆ ನರಿ, ಸಿಲ್ವರ್ ಫೆಸೆಂಟ್, ಬಡ್ಜರಿಗರ್, ಗೋಲ್ಡನ್ ಫೆಸೆಂಟ್ ನಂತಹ ಪಕ್ಷಿ ಹಾಗೂ ಪ್ರಾಣಿಗಳಿವೆ. ಮೃಗಾಲಯದ ಮಧ್ಯದಲ್ಲಿ ಸುಂದರವಾದ ಉದ್ಯಾನವನವಿದ್ದು ಪ್ರಕೃತಿಯ ಮಡಿಲಿನಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಕುಟುಂಬದೊಂದಿಗೆ ಭೇಟಿ ಕೊಡಬಹುದು.
ಮೃಗಾಲಯ ಚಿಕ್ಕದಾಗಿದೆ ಎಂಬ ಬೇಸರ ಬೇಡವೇ ಬೇಡ - ಎಕೆಂದರೆ ಮೃಗಾಲಯದ ಒಳಭಾಗದಲ್ಲಿ ಮಕ್ಕಳಿಗಾಗಿ ಆಟವಾಡಲು ವಿಶಾಲವಾದ ಆಟದ ಸಲಕರಣೆಗಳುಳ್ಳ ಆಟದ ಪಾರ್ಕ್ ಇದೆ. ಕುಡಿಯಲು ನೀರಿನ ವ್ಯವಸ್ಥೆ, ಶೌಚಾ ಲಯ ಹಾಗೂ ಪುಟ್ಟ ಕ್ಯಾಂಟೀನ್ ಸೌಲಭ್ಯವಿದೆ. ಈ ಮೃಗಾಲಯಕ್ಕೆ ಪ್ರತಿ ಮಂಗಳವಾರ ರಜೆ.ಇರುತ್ತದೆ. ಮಕ್ಕಳಿಗೆ ರೂ.20 ಹಾಗೂ ವಯಸ್ಕರಿಗೆ ರೂ.೪೦ ಪ್ರವೇಶ ದರವನ್ನು ನಿಗದಿ ಪಡಿಸಲಾಗಿದೆ. ಆದರೆ ಚಿತ್ರದುರ್ಗದಿಂದ ಮೃಗಾಲಯಕ್ಕೆ ಹೋಗಲು ತಮ್ಮದೇ ಆದ ಖಾಸಗಿ ವಾಹನದಲ್ಲಿ ತೆರಳಬೇಕು.
ಇಲ್ಲಿ ಯಾವುದೇ ಸರಕಾರಿ ವಾಹನವಾಗಲಿ, ಇತರೆ ಖಾಸಗಿ ಸಾರಿಗೆಯ ವ್ಯವಸ್ಥೆ ಇಲ್ಲ.
ಇದನ್ನೂ ಓದಿ: Surendra Pai Column: ಮಣ್ಣಿನ ಹಣತೆ ಬೆಳಗೋಣ