ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kapu MLA Gurme Suresh Shetty: ಬಡತನದ ಬೇಗೆಯಿಂದ ವಿಧಾನಸೌಧದ ಮೆಟ್ಟಿಲವರೆಗೆ: ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಗುರ್ಮೆ ಸುರೇಶ್ ಶೆಟ್ಟಿ ಅವರ ಆರಂಭಿಕ ಜೀವನ ಕಷ್ಟದಾಯಕವಾಗಿತ್ತು. ಊರಿನಲ್ಲೊಂದು ಸಣ್ಣ ಹುಲ್ಲಿನ ಮನೆ. ಮನೆಯಲ್ಲಿ ನಾಲ್ಕು ಜನ ಅಕ್ಕ-ತಂಗಿಯರು ಹಾಗೂ ತಾಯಿ. ತಂದೆಯ ನೆರಳಿಲ್ಲದ ಆ ಕುಟುಂಬಕ್ಕೆ ಇವರೇ ದೊಡ್ಡ ಮಗ. ಕಾಲೇಜಿಗೆ ಸೇರಲು ಕೇವಲ 130 ರುಪಾಯಿ ಫೀಸ್ ಕಟ್ಟಲಾ ಗದೆ, ಕೇವಲ ಒಂದು ಜತೆ ಬಟ್ಟೆಯನ್ನು ಕೈಯಲ್ಲಿ ಹಿಡಿದು ಬದುಕನ್ನು ಹುಡುಕುತ್ತಾ ದೂರದ ಬಳ್ಳಾರಿಗೆ ರೈಲು ಹತ್ತಿದವರು ಸುರೇಶ್ ಶೆಟ್ಟಿ.

ಬಡತನದಲ್ಲೇ ಬಾಲ್ಯವನ್ನು ಕಳೆದ ಈ ಶಾಸಕರು, ಸ್ವಂತ ಪರಿಶ್ರಮದಿಂದ ಹೋಟೆಲ್ ಉದ್ಯಮಿಯಾಗಿ ಬೆಳೆದರು, ಜನಸಾಮಾನ್ಯರ ಕಷ್ಟಗಳನ್ನು ಗುರುತಿಸಿ, ಅವರ ದನಿಯಾದರು. ಜನರ ಸ್ನೇಹ ಗಳಿಸಿದರು. ನಂತರ ಶಾಸಕರಾಗಿ ಆಯ್ಕೆಯಾಗಿ ಬಂದು, ಕಾಪು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.

ರಾಜಕೀಯ ಎನ್ನುವುದು ಕೇವಲ ಹಣ, ಅಧಿಕಾರ ಅಥವಾ ಆಸ್ತಿ ಮಾಡುವ ದಾರಿಯಲ್ಲ, ಅದೊಂದು ಜನಸೇವೆಯ ಪವಿತ್ರ ಮಾಧ್ಯಮ ಎಂಬುದನ್ನು ತಮ್ಮ ನಡೆ- ನುಡಿಯ ಮೂಲಕ ಸಾಬೀತುಪಡಿಸುತ್ತಿರುವವರು, ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ.

ತೀರಾ ಸಾಧಾರಣ ಕುಟುಂಬದಿಂದ ಬಂದು, ಕಷ್ಟದ ಸರಮಾಲೆಯನ್ನೇ ಎದುರಿಸಿ, ಇಂದು ಯಶಸ್ವಿ ಉದ್ಯಮಿಯಾಗಿ, ಜನಪ್ರಿಯ ಶಾಸಕರಾಗಿ ಬೆಳೆದು ನಿಂತಿರುವ ಇವರ ಜೀವನ ಸಾಧನೆ ಪ್ರತಿಯೊಬ್ಬ ರಿಗೂ ಸ್ಪೂರ್ತಿಯ ಸೆಲೆ.

ಗುರ್ಮೆ ಸುರೇಶ್ ಶೆಟ್ಟಿ ಅವರ ಆರಂಭಿಕ ಜೀವನ ಕಷ್ಟದಾಯಕವಾಗಿತ್ತು. ಊರಿನಲ್ಲೊಂದು ಸಣ್ಣ ಹುಲ್ಲಿನ ಮನೆ. ಮನೆಯಲ್ಲಿ ನಾಲ್ಕು ಜನ ಅಕ್ಕ-ತಂಗಿಯರು ಹಾಗೂ ತಾಯಿ. ತಂದೆಯ ನೆರಳಿಲ್ಲದ ಆ ಕುಟುಂಬಕ್ಕೆ ಇವರೇ ದೊಡ್ಡ ಮಗ. ಕಾಲೇಜಿಗೆ ಸೇರಲು ಕೇವಲ 130 ರುಪಾಯಿ ಫೀಸ್ ಕಟ್ಟಲಾ ಗದೆ, ಕೇವಲ ಒಂದು ಜತೆ ಬಟ್ಟೆಯನ್ನು ಕೈಯಲ್ಲಿ ಹಿಡಿದು ಬದುಕನ್ನು ಹುಡುಕುತ್ತಾ ದೂರದ ಬಳ್ಳಾರಿಗೆ ರೈಲು ಹತ್ತಿದವರು ಸುರೇಶ್ ಶೆಟ್ಟಿ.

ದೊಡ್ಡಪ್ಪನ ಹೋಟೆಲ್‌ನಲ್ಲಿ ಕೆಲಸ ಅಲ್ಲಿಂದಲೇ ಇವರ ನಿಜವಾದ ಹೋರಾಟದ ಬದುಕು ಆರಂಭ ವಾಯಿತು. ಪ್ರತಿದಿನ ಬೆಳಗ್ಗೆ 4.30ಕ್ಕೆ ಎದ್ದು, 7 ಗಂಟೆಯವರೆಗೆ ಹೋಟೆಲ್ ನಲ್ಲಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಹೋಟೆಲ್ ಕೆಲಸ ಮುಗಿಸಿದ ನಂತರ ಅಲ್ಲಿನ ವೀರಶೈವ ಕಾಲೇಜಿಗೆ ಹೋಗಿ ಬಿ.ಕಾಂ. ಪದವಿ ಪೂರೈಸಿದರು.

ಇದನ್ನೂ ಓದಿ: Dr Sadhanashree Column: ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು

ಉದ್ಯಮಿಯಾಗಿ ಬೆಳವಣಿಗೆ

ಬಳ್ಳಾರಿಯಲ್ಲಿದ್ದ ಇವರ ದೊಡ್ಡಪ್ಪ-ದೊಡ್ಡಮ್ಮ ಇಬ್ಬರೂ ತೀರಿಕೊಂಡ ನಂತರ, ಹಠ ಬಿಡದೆ ವ್ಯಾಪಾರವನ್ನು ಮುಂದುವರಿಸಿದರು; ಹೋಟೆಲ್ ಕೆಲಸದಲ್ಲೇ ಗಮನವಿಟ್ಟರು; ಕ್ರಮೇಣ ಒಂದೊಂದೇ ಕ್ಯಾಂಟೀನ್ ತೆರೆಯುತ್ತಾ, ಮುಂದೆ ಒಂದರ ಹಿಂದೆ ಒಂದರಂತೆ ಹೋಟೆಲ್‌ಗಳನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದರು. ‘ಬಡತನ ಕಲಿಸಿದ ಪಾಠವನ್ನು ಸಿರಿತನ ಎಂದಿಗೂ ಕಲಿಸುವುದಿಲ್ಲ’ ಎಂದು ಹೆಮ್ಮೆಯಿಂದ ತಮ್ಮ ಆ ದಿನಗಳನ್ನು ನೆನಪಿಸಿಕೊಳ್ಳುವ ಸುರೇಶ್ ಶೆಟ್ಟಿ ಅವರಿಗೆ ಬಳ್ಳಾರಿಯ ಜನರ ಒರಟು ಭಾಷೆಯ ಹಿಂದಿರುವ ಮೃದುವಾದ ಭಾವನೆಗಳೇ ಬದುಕಿನ ದೊಡ್ಡ ಪಾಠಗಳಾಗಿವೆಯಂತೆ.

ರಾಜಕೀಯ ಪ್ರವೇಶ

ಗುರ್ಮೆ ಸುರೇಶ್ ಶೆಟ್ಟಿ ಅವರು ಎಂದಿಗೂ ರಾಜಕೀಯಕ್ಕೆ ಬರಬೇಕು ಎಂದು ಕನಸು ಕಂಡವರಲ್ಲ. ತಮ್ಮ ಉದ್ಯಮದಿಂದ ಬಂದ ಲಾಭದಲ್ಲಿ ಶೇ.10ರಷ್ಟನ್ನು ಸಮಾಜ ಸೇವೆಗೆ ಬಳಸುತ್ತಿದ್ದರು. ಒಮ್ಮೆ ಇವರ ಊರಿನಲ್ಲಿ ‘ಐಎಸ್‌ಪಿಆರ್’ ಕಂಪನಿ ವಿರುದ್ಧ ಜನರ ಮನೆ-ಮಠ ಉಳಿಸುವ ಹೋರಾಟ ಎದುರಾದಾಗ, ಸಾವಿರಾರು ಜನರನ್ನು ಒಟ್ಟುಗೂಡಿಸಿ ಬೃಹತ್ ಹೋರಾಟದ ನೇತೃತ್ವ ವಹಿಸಿದರು. ಜನರ ಹಿತಾಸಕ್ತಿ ಕಾಯುವಲ್ಲಿ, ಸ್ವಾರ್ಥ ರಹಿತ ಸೇವೆ ಮಾಡುವಲ್ಲಿ ಬದುಕಿನ ಅರ್ಥವಿದೆ ಎಂದು ಆಗ ಕಂಡುಕೊಂಡರು. ಆ ಹೋರಾಟದ ಹಾದಿಯಲ್ಲಿ ಸಾಕಷ್ಟು ಜನಸಂಪರ್ಕವಾಯಿತು. ಆ ಪ್ರದೇಶದ ಜನರ ನಾಡಿ ಮಿಡಿತವೂ ಅರಿವಾಯಿತು. ‘ಜನರ ಒತ್ತಾಯ ಹಾಗೂ ದೇವರ ಇಚ್ಛೆಯಂತೆ ರಾಜಕೀಯಕ್ಕೆ ಬರಬೇಕಾಯಿತು’ ಎನ್ನುತ್ತಾರಿವರು.

G S S1

ಕಾಪು ಕ್ಷೇತ್ರದ ಶಾಸಕರಾಗಿ

‘ಚುನಾವಣೆ ಗೆದ್ದ ಮರುದಿನದಿಂದ ನೀನು ಪಕ್ಷಾತೀತ, ಧರ್ಮಾತೀತ ಹಾಗೂ ಜಾತ್ಯತೀತವಾಗಿ, ತಾಯಿಯ ಸ್ಥಾನದಲ್ಲಿ ನಿಂತು ಕ್ಷೇತ್ರದ ಜನರನ್ನು ಪಾಲನೆ ಮಾಡಬೇಕು’ ಎಂಬ ಹಿರಿಯರ ಕಿವಿಮಾತನ್ನು ಇವರು ಶಿರಸಾವಹಿಸಿ ಪಾಲಿಸುತ್ತಿದ್ದಾರೆ.

‘ನನ್ನ ಕೈ ಭ್ರಷ್ಟ ಆಗಿಲ್ಲ, ನನ್ನ ಬಾಯಿ ಭ್ರಷ್ಟ ಆಗಿಲ್ಲ. ರಾಜಕೀಯದಲ್ಲಿ ಹಣ ಮಾಡಲು ನಾನು ಬಂದಿಲ್ಲ’ ಎಂದು ಇಂದಿಗೂ, ಕಾಪುವಿನಲ್ಲಿರುವ ಮಾರಿಗುಡಿಯ ಸಾಕ್ಷಿಯಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸದ್ಯ ವಿರೋಧ ಪಕ್ಷದ ಶಾಸಕರಾಗಿರುವುದರಿಂದ ಸರಕಾರದ ಕಡೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗುತ್ತಿಲ್ಲ ಎಂಬ ಬೇಸರ ಅವರಲ್ಲಿದ್ದರೂ, ಲಭ್ಯವಿರುವ ಅವಕಾಶದಲ್ಲೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಆಶಯ ಹೊಂದಿದ್ದಾರೆ.

ಗೋ ಮಾತೆಯ ಸೇವೆ

ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಗೋವುಗಳೆಂದರೆ ಅಪಾರ ಗೌರವ. ಅವರು ಶಾಸಕರಾದ ತಕ್ಷಣ ‘ಗೋ ರುದ್ರಭೂಮಿ’ (ಗೋವುಗಳ ಗೌರವಯುತ ಶವ ಸಂಸ್ಕಾರದ ಜಾಗ) ನಿರ್ಮಾಣಕ್ಕೆ ದ ಗುದ್ದಲಿ ಪೂಜೆ ಮಾಡಿದರು. ಜತೆಗೆ, ಹಸು ಸಾಕಾಣಿಕೆಯು ಅವರ ನೆಚ್ಚಿನ ಹವ್ಯಾಸ. ಪ್ರಸ್ತುತ ಅವರ ಡೈರಿಯಲ್ಲಿ ನೂರಕ್ಕೂ ಹೆಚ್ಚು ಹಸುಗಳಿದ್ದು, ಇತ್ತೀಚೆಗಷ್ಟೇ ತಿರುಪತಿಯಿಂದ ಪುಂಗನೂರು ತಳಿಯ ಹಸುಗಳನ್ನು ತರಿಸಿದ್ದಾರೆ. ‘ರಾಜಕೀಯದ ಎಲ್ಲ ಒತ್ತಡಗಳ ನಡುವೆ ಹಸುಗಳ ಮಧ್ಯೆ ಇರುವುದೇ ತಮಗೆ ಪಾಸಿಟಿವ್ ಎನರ್ಜಿ ನೀಡುತ್ತದೆ’ ಎನ್ನುತ್ತಾರಿವರು.

Gss 2

ಶಿಕ್ಷಣ ಮತ್ತು ಆಧ್ಯಾತ್ಮಿಕ ಕೇಂದ್ರ

ಉಡುಪಿ ಜಿಲ್ಲೆಯು ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲೇ ಮೊದಲ ಎರಡು ಸ್ಥಾನಗಳಲ್ಲಿರುವ ಶಿಕ್ಷಣದ ಕಾಶಿಯಾಗಿದೆ. ಜತೆಗೆ ಇತ್ತೀಚೆಗಷ್ಟೇ ಸಾರ್ವಜನಿಕರ ಸಹಕಾರದಿಂದ 80 ಕೋಟಿ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಪ್ರಸಿದ್ಧ ಕಾಪು ಮಾರಿಗುಡಿ ದೇವಸ್ಥಾನದ ಉಲ್ಲೇಖ ಮಾಡುತ್ತಾ, ಈ ಕ್ಷೇತ್ರವನ್ನು ಅಧ್ಯಾತ್ಮಿಕ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಇವರು ಶ್ರಮಿಸುತ್ತಿದ್ದಾರೆ.

Gaa 3

ಸರಕಾರದ ಲಭ್ಯ ಅನುದಾನದಲ್ಲೇ ಸಾಕಷ್ಟು ಕೆಲಸಗಳನ್ನು ಮಾಡಿದ್ದರ ಜತೆ, ಅಸೆಂಬ್ಲಿಯಲ್ಲಿ ಕ್ಷೇತ್ರದ ಧ್ವನಿಯಾಗಿ ಮುಂಚೂಣಿಯಲ್ಲಿ ನಿಲ್ಲುವ ಗುರ್ಮೆ ಸುರೇಶ್ ಶೆಟ್ಟಿ ಅವರು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಗ್ರಾಮೀಣ ರಸ್ತೆಗಳು, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ಸಂಕಲ್ಪ ಮಾಡಿದ್ದಾರೆ. ‘ಭಗವಂತನಲ್ಲಿ ಪ್ರತಿದಿನ ನನ್ನ ಕೈಯಿಂದ ಯಾರಿಗೂ ಕೆಟ್ಟದ್ದಾಗಬಾರದು’ ಎಂದು ಪ್ರಾರ್ಥಿಸಿ ಹೊರಡುವ ಇಂತಹ ಜನಪ್ರತಿನಿಧಿ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಪ್ರವಾಸೋದ್ಯಮ, ಕರಾವಳಿ ಕಾರಿಡಾರ್

ಕಾಪು ವಿಧಾನಸಭಾ ಕ್ಷೇತ್ರವು ನೈಸರ್ಗಿಕ ಸೌಂದರ್ಯದಿಂದ ಸಮೃದ್ಧವಾಗಿದೆ. ಪ್ರವಾಸೋದ್ಯಮ ಉತ್ತೇಜಿಸಲು ಇವರು ಹಮ್ಮಿಕೊಂಡಿದ್ದ ‘ಕಡಲ ಸಂಭ್ರಮ’ ಕಾರ್ಯಕ್ರಮಕ್ಕೆ ಕೇವಲ ಮೂರೇ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದರು. ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಅವಕಾಶವಿದೆ ಎಂದು ಗುರುತಿಸಿದ್ದಾರೆ; ಅದರಿಂದಾಗಿ, ಸಣ್ಣ ಪುಟ್ಟ ವ್ಯಾಪಾರ ಸ್ಥರಿಗೆ, ವಾಹನ ಚಾಲಕರಿಗೆ ಉದ್ಯೋಗಾವಕಾಶ ದೊರಕುತ್ತದೆ ಎನ್ನುತ್ತಾ, ಆ ನಿಟ್ಟಿನಲ್ಲಿ ಗಮನ ಹರಿಸಿದ್ದಾರೆ. ಅಲ್ಲದೆ, ಕರಾವಳಿ ಕಾರಿಡಾರ್ ಅಭಿವೃದ್ಧಿಪಡಿಸಿ ಹೋಂ ಸ್ಟೇ, ರೆಸಾರ್ಟ್‌ಗಳ ಮೂಲಕ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ದೊಡ್ಡ ಯೋಜನೆ ಯನ್ನು ಹೊಂದಿದ್ದಾರೆ. ಕರಾವಳಿ ಭಾಗದಲ್ಲಿ ಕಡಲ ಕೊರೆತ ಉಂಟಾದಾಗ ತಕ್ಷಣವೇ ಸ್ಪಂದಿಸಿ ಕಾಮಗಾರಿ ನಡೆಸಿದ್ದಾರೆ.

image

ಬಡತನ ಕಲಿಸಿದ ಪಾಠವನ್ನು ಸಿರಿತನ ಎಂದಿಗೂ ಕಲಿಸುವುದಿಲ್ಲ. ಜನಸಮಾನ್ಯರ ಸೇವೆಯಲ್ಲಿ ಅಪಾರ ತೃಪ್ತಿ ದೊರಕುತ್ತದೆ.

ಗುರ್ಮೆ ಸುರೇಶ ಶೆಟ್ಟಿ, ಶಾಸಕರು, ಕಾಪು ಕ್ಷೇತ್ರ