ಡಾ.ಮೈತ್ರಿ ಭಟ್, ವಿಟ್ಲ
ಇಂದು ಜನವರಿ-1, ಹೊಸ ವರ್ಷಾಚರಣೆಯ ಜತೆಗೆ ಜಾಗತಿಕ ಕುಟುಂಬ ದಿನವೂ ಹೌದು. ಪ್ರತೀ ವರ್ಷದ ಮೊದಲ ದಿನದಂದು ಎಲ್ಲಾ ಕುಟುಂಬಗಳು ಒಂದೇ ಸಮಾಜವಾಗಿ ಸೇರು ವಂತೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬವನ್ನು ಪ್ರೀತಿಸುವ ಮೂಲಕ ಇಡೀ ವಿಶ್ವವನ್ನೇ ಪ್ರೀತಿಸಬೇಕೆಂಬ ಸದಾಶಯ ಈ ಆಚರಣೆಯ ಹಿಂದಿದೆ.
ಪ್ರತೀ ವರ್ಷ ಜನವರಿ-1ನ್ನು ‘ಜಾಗತಿಕ ಕುಟುಂಬ ದಿನ’ವಾಗಿ ಆಚರಿಸಲಾಗುತ್ತದೆ. ಕುಟುಂಬ ಕಲ್ಪನೆಯ ಮೂಲಕ ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ಏಕತೆ, ವೈವಿಧ್ಯತೆಯನ್ನು ಗೌರವಿಸುವುದು, ಇತರೆ ದೇಶಗಳ ಕುರಿತು ನಕಾರಾತ್ಮಕ ಧೋರಣೆ ಹೊಂದುವುದನ್ನು ತಡೆಯುವುದು, ಶತ್ರು ರಾಷ್ಟ್ರವನ್ನು ಕೆರಳಿಸಬಾರದು ಎನ್ನುವುದು ಇದರ ಉದ್ದೇಶ. ಆದರೆ ಜಗತ್ತು ವಿಶ್ವ ಕುಟುಂಬ ದಿನ ಆಚರಣೆ ಮಾಡುವ ಮುನ್ನವೇ ನಮ್ಮ ಹೆಮ್ಮೆಯ ಭಾರತವು ವಸುಧೈವ ಕುಟುಂಬಕಂ ಎಂದು ಜಗತ್ತಿಗೆ ತಿಳಿಸಿತ್ತು.
ಜನವರಿ 1ನ್ನು ವಿಶ್ವ ಕುಟುಂಬ ದಿನವಾಗಿ ಆಚರಿಸಬೇಕೆಂದು ಲೇಖಕಿ ಗ್ರೋವರ್ ಬಯಸಿದ್ದರೆ, ಒನ್ ಡೇ ಪೀಸ್ ಪುಸ್ತಕದಲ್ಲಿಯೂ ಈ ದಿನದ ಮಹತ್ವವನ್ನು ಸಾರಿರುವ ಕಾರಣ ಜನವರಿ-1ನ್ನು ವಿಶ್ವ ದೆಲ್ಲೆಡೆ ಗ್ಲೋಬಲ್ ಫ್ಯಾಮಿಲಿ ಡೇ ಎಂದು ಆಚರಿಸಲಾಗುತ್ತದೆ. ಹಿಂದೆ ಈ ದಿನವನ್ನು ವಿಶ್ವಸಂಸ್ಥೆ ಯು ಡೇ ಆಫ್ ಪೀಸ್ ಎಂದು ಆಚರಿಸುತ್ತಿತ್ತು.
ಪ್ರತೀ ವರ್ಷದ ಮೊದಲ ದಿನದಂದು ಎಲ್ಲಾ ಕುಟುಂಬಗಳು ಒಂದೇ ಸಮಾಜವಾಗಿ ಸೇರುವಂತೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಭಾಷೆ, ಧರ್ಮ, ದೇಶ, ಜನಾಂಗ, ರಾಜಕೀಯ ಸಂಬಂಧವನ್ನು ಬದಿಗಿಟ್ಟು ಒಂದಾಗಿ ಬದುಕುವಂತೆ ಈ ದಿನ ಪ್ರೇರೇಪಿಸುತ್ತದೆ. ಕುಟುಂಬ ಪ್ರೀತಿ ಮತ್ತು ವಿಶ್ವ ಪ್ರೀತಿಯೇ ಈ ಆಚರಣೆಯ ಹಿಂದಿನ ಸಾರವಾಗಿದೆ.
ಇದನ್ನೂ ಓದಿ: Gururaj Gantihole Column: ಕರಾವಳಿ ಸುರಕ್ಷತೆ: ಕರ್ನಾಟಕದ ಹೊಣೆಗಾರಿಕೆ, ಭಾರತದ ಭದ್ರತೆ
ಪ್ರತಿಯೊಬ್ಬರೂ ತಮ್ಮ ಕುಟುಂಬವನ್ನು ಪ್ರೀತಿಸುವ ಮೂಲಕ ಇಡೀ ವಿಶ್ವವನ್ನೇ ಪ್ರೀತಿಸಬೇಕೆಂಬ ಸದಾಶಯ ಈ ಆಚರಣೆಯ ಹಿಂದಿದೆ. ಕುಟುಂಬವೇ ನಮಗೆ ನಮ್ಮ ಅಸ್ತಿತ್ವವನ್ನು ತಿಳಿಸಿ, ನಾಯ ಕತ್ವ ಗುಣವನ್ನು ಕಲಿಸಿ, ಮಾರ್ಗದರ್ಶನ ನೀಡಿ ಆ ಮೂಲಕ ವಿವಿಧ ರೂಪದಲ್ಲಿ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ವ್ಯವಸ್ಥೆಯಾಗಿದೆ.
ಜಗತ್ತು ಆಧುನಿಕತೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿರುವ ಈ ಸಂಕ್ರಮಣ ಕಾಲದಲ್ಲಿ ತಂತ್ರ ಜ್ಞಾನ ಮನುಷ್ಯನ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಮೌಲ್ಯ, ಸಂಸ್ಕೃತಿ, ನೈತಿಕತೆ, ಸದಾಚಾರ ಗಳೆಲ್ಲವೂ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿರುವ ಈ ಸಂದರ್ಭದಲ್ಲಿ ಕೌಟುಂಬಿಕ ವ್ಯವಸ್ಥೆಗೆ ಹೆಚ್ಚಿನ ಪಾಶಸ್ತ್ಯ ನೀಡಬೇಕಾದ ಅನಿವಾರ್ಯತೆಯಿದೆ.
ಮನುಷ್ಯ ಹುಟ್ಟಿದ ಕ್ಷಣದಿಂದಲೇ ಬೆಸೆದುಕೊಳ್ಳುವ ಈ ಬಾಂಧವ್ಯವೇ ಮಗುವಿನ ಏಳ್ಗೆಗೆ ಭದ್ರ ಬುನಾದಿ ಎನ್ನಬಹುದು, ಹೀಗಾಗಿ ಕುಟುಂಬ ವ್ಯವಸ್ಥೆಯ ಬಗ್ಗೆ ಅಷ್ಟೇನೂ ಆಸ್ಥೆ ಹೊಂದಿರದ ವಿದೇಶೀಯರಿಗೂ ಇತ್ತೀಚೆಗೆ ಈ ವ್ಯವಸ್ಥೆಯ ಮಹತ್ವದ ಬಗ್ಗೆ ಅವಲೋಕಿಸುತ್ತಿದ್ದಾರೆ.
ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೇ ಸಾರಿದ ನಾವಿಂದು ಕೌಟುಂಬಿಕ ಮೌಲ್ಯಗಳನ್ನು ಕಳೆದುಕೊಳ್ಳುವತ್ತ ನಡೆದಿದ್ದೇವೆ. ನಾನು, ನನ್ನ ಕುಟುಂಬ, ನನ್ನ ಬಂಧುಗಳು, ನನ್ನ ಊರು, ನನ್ನ ರಾಜ್ಯ, ನನ್ನ ದೇಶ ಇವೆಲ್ಲವುಗಳಿಗೂ ಮೀರಿದೆ ನನ್ನ ವಿಶ್ವ. ಇಂದು ನಮಗೆ ಬೇಕಾಗಿರುವುದು ಮಾನವಪ್ರೀತಿಯ ನೆಲೆಗಟ್ಟಿನ ಸಮಾಜ. ಯಾವುದೇ ಭೇದ-ಭಾವ, ಜಾತಿ ಸಿದ್ಧಾಂತ ಗಳ ಭಿನ್ನಾಭಿಪ್ರಾಯವಿಲ್ಲದ ಸಮಾಜ. ಹಲವಾರು ಸವಾಲುಗಳ ನಡುವೆಯೂ ನ್ಯಾಯ, ಸ್ವಾತಂತ್ರ್ಯ, ಸಮಾನತೆಗಳೇ ಬಂಧುತ್ವದ ಮೂಲಮಂತ್ರ. ವೈವಿಧ್ಯತೆ ನಮ್ಮ ವಿಶೇಷತೆಯಾದರೂ ಏಕತೆ ನಮ್ಮ ಆಧಾರಸ್ತಂಭವಾಗಿದೆ.
ಕುಟುಂಬ ಎನ್ನುವುದು ಕೇವಲ ಭಾವನಾತ್ಮಕವಾದ ಸಂಬಂಧ ಮಾತ್ರವಲ್ಲ, ಅದು ಮಾನಸಿಕ ಸಂಬಂಧವೂ ಹೌದು. ವ್ಯಕ್ತಿಯ ಪ್ರತಿಯೊಂದು ಸಂದರ್ಭದಲ್ಲೂ ಜತೆಯಾಗಿ ನಿಂತು ಕಷ್ಟ ಬಂದಾಗ ಹೆಗಲು ಕೊಟ್ಟು ಸುಖ ಬಂದಾಗ ನಗುವನ್ನು ಹಂಚಿಕೊಳ್ಳುವ ಏಕೈಕ ತಾಣವೂ ಆಗಿದೆ.
ಬದಲಾವಣೆಗೆ ಹೊಂದಿ ನಡೆಯಬೇಕಿರುವುದು ಸಹಜ, ಆದರೆ ಆಧುನಿಕತೆ ಬೆಳೆದಷ್ಟು ಮನುಷ್ಯ ತನ್ನದೇ ಚಿಪ್ಪಿನಲ್ಲಿ ಹುದುಗುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಇದು ದೀರ್ಘಕಾಲದಲ್ಲಿ ಖಿನ್ನತೆ ಯಂತಹ ಮಾನಸಿಕ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ. ಕುಟುಂಬ ವ್ಯವಸ್ಥೆಯು ಸಹಬಾಳ್ವೆ, ಸಾಹಚರ್ಯ, ಸಹಕಾರ, ಸಮರಸ, ಹಂಚಿಕೊಳ್ಳುವ ಗುಣಗಳನ್ನು ಬೆಳೆಸಿ, ಸಂಕುಚಿತ ಭಾವಗಳನ್ನು ಬಿಡಿಸಿ ಆರೋಗ್ಯಪೂರ್ಣ ಅನುಬಂಧ ಬೆಳೆಸಿಕೊಳ್ಳಲು ಸಹಕಾರಿ. ಅದರಲ್ಲೂ ಶಾಂತಿ, ಸೌಹಾರ್ದತೆ ಗಳು ಬಾಳಿನ ಉಸಿರಾದಾಗ ಮನೆಗೆದ್ದು, ಮಾರು ಗೆಲ್ಲುವ ಈ ಕಾರ್ಯದಿಂದ ಹೊಸ ದಿಗಂತದೆಡೆಗೆ ತೆರೆದುಕೊಳ್ಳಲು ಸಾಧ್ಯ.
ಇಡೀ ಜಗತ್ತಿಗೆ ಭಾರತವು ಸಾರಿದ ವಸುಧೈವ ಕುಟುಂಬಕಂ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು ಭಾವಿಸುವ ವಿಶಾಲ ಮನೋಭಾವ ಒಂದು ಸುಮಧುರ ಹಾಗೂ ಅಮೂಲ್ಯ ಪರಿಕಲ್ಪನೆ. ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈ ವ್ಯವಸ್ಥೆ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಲು ಅನಿವಾರ್ಯವಾದುದಾಗಿದೆ. ಜಗತ್ತಿನಾದ್ಯಂತ ಇರುವ ಜನರು ತಮ್ಮ ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ ಒಂದೇ ಎಂದು ತಿಳಿಯುವುದು ವಿಶಿಷ್ಟ ಚಿಂತನೆಯೇ ಸರಿ...!