ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಲೆಯಿರುವ ಜಾಗದಲ್ಲಿರೋಣ

ಹುಡುಗನಿಗೆ ಆಶ್ಚರ್ಯ ಉಂಟಾಗಿ ‘ಸರಿ, ನಮ್ಮ ಅಜ್ಜನಿಗೆ ಕೇಳಿ ಬರುತ್ತೇನೆ’ ಎಂದ. ಅಜ್ಜನ ಹತ್ತಿರ ಬಂದು ‘ಅಜ್ಜಾ...ಈ ವಾಚಿಗೆ ಒಂದೊಂದು ಅಂಗಂಡಿಯಲ್ಲಿ ಒಂದೊಂದು ಬೆಲೆಯಿದೆ’ ಎಂದಾಗ ಅಜ್ಜ, ‘ಮಗು ನಮಗೆ ಹೆಚ್ಚು ಬೆಲೆ ಸಿಗುವ ಜಾಗದಲ್ಲಿ ನಾವಿರಬೇಕು, ಅಂದಾಗ ಮಾತ್ರ ನಮ್ಮ ವ್ಯಕ್ತಿತ್ವ ಇಮ್ಮಡಿ ಗೊಳ್ಳುತ್ತದೆ ಮತ್ತು ಹೆಚ್ಚು ಗೌರವ ದೊರಕುತ್ತದೆ’ ಎಂದಾಗ ಮಗುವಿಗೆ ಅಜ್ಜನ ಮಾತು ಅರ್ಥವಾಗಿತ್ತು.

ಶಂಕರಾನಂದ ಹೆಬ್ಬಾಳ

ಪ್ರಪಂಚದ ಎಲ್ಲ ಪ್ರಾಣಿಗಳಿಗೂ ಒಂದು ಬೆಲೆಯಿದೆ, ಅಂದರೆ ಪ್ರತಿ ವಸ್ತುವಿಗೂ ತನ್ನದೆಯಾದ ಮೌಲ್ಯವಿದೆ ಎಂದರ್ಥ. ಮೌಲ್ಯ ಇಲ್ಲದಿರುವ ಒಂದು ವಸ್ತುವನ್ನು ನಾವು ಊಹಿಸಿಕೊಳ್ಳಲು ಅಸಾಧ್ಯ. ಹಾಗೆಂದ ಮೇಲೆ ಆ ಬೆಲೆಯನ್ನು ಅರಿತು ನಾವು ಅರಿತು ಬಾಳಬೇಕೆ ಹೊರತು, ಆ ಬೆಲೆ ಯನ್ನು ಅಲ್ಲಗಳೆದು ಬದುಕುವುದು ಸರಿಯಲ್ಲ.

ಒಬ್ಬ ತಂದೆ ತನ್ನ ಮಗನಿಗೆ ಮನುಷ್ಯನ ಮೌಲ್ಯದ ಕುರಿತು ಪಾಠ ಹೇಳುವಾಗ ಒಂದು ಹಳೆಯ ಕಾಲದ ಕೈಗಡಿಯಾರವನ್ನು ಕೊಟ್ಟು ಮಗು, ‘ಇದನ್ನು ಹೆಚ್ಚಿನ ಬೆಲೆಗೆ ಮಾರಿಕೊಂಡು ಬಾ’ ಎಂದು ಕಳಿಸಿದ. ಸರಿ ಎಂದು ಮಗು ಹೊರಟಿತು.

ಇದನ್ನೂ ಓದಿ: Gururaj Gantihole Column: ಕರಾವಳಿ ಸುರಕ್ಷತೆ: ಕರ್ನಾಟಕದ ಹೊಣೆಗಾರಿಕೆ, ಭಾರತದ ಭದ್ರತೆ

ಮೊದಲು ಒಂದು ಗುಜರಿ ಅಂಗಡಿಯಲ್ಲಿ ತೋರಿಸಿ ‘ಇದನ್ನು ಎಷ್ಟಕ್ಕೆ ಕೊಳ್ಳುತ್ತಿರಾ..?’ ಎಂದು ಕೇಳಿದ. ಅಂಗಡಿಯವ ಇದು ಬಹಳ ಹಳೆಯದಾಗಿದ್ದು, ‘ಐವತ್ತರಿಂದ ನೂರು ರೂಪಾಯಿ ಕೊಡ ಬಹುದು’ ಎಂದ. ಹುಡುಗನು ಮತ್ತೆ ಅಲ್ಲಿಯೂ ಕೊಡಲಾಗದೆ ಒಂದು ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು ಅಲ್ಲಿ ವಾಚನ್ನು ತೋರಿಸಿ, ‘ಇದನ್ನು ಎಷ್ಟು ರೂಪಾಯಿಗೆ ಕೊಂಡುಕೊಳ್ಳುತ್ತೀರಿ..?’ ಎಂದಾಗ ಮ್ಯೂಸಿಯಂನವರು, ‘ಇದು ತುಂಬಾ ಹಳೆಯ ವಾಚು, ಸುಮಾರು ನೂರೈವತ್ತು ವರ್ಷ ಹಳೆಯದಿದೆ, ಅದಕ್ಕಾಗಿ ಐದರಿಂದ ಆರು ಲಕ್ಷ ರೂಪಾಯಿಗೆ ಕೊಳ್ಳುತ್ತೀವಿ’ ಎಂದರು.

ಹುಡುಗನಿಗೆ ಆಶ್ಚರ್ಯ ಉಂಟಾಗಿ ‘ಸರಿ, ನಮ್ಮ ಅಜ್ಜನಿಗೆ ಕೇಳಿ ಬರುತ್ತೇನೆ’ ಎಂದ. ಅಜ್ಜನ ಹತ್ತಿರ ಬಂದು ‘ಅಜ್ಜಾ...ಈ ವಾಚಿಗೆ ಒಂದೊಂದು ಅಂಗಂಡಿಯಲ್ಲಿ ಒಂದೊಂದು ಬೆಲೆಯಿದೆ’ ಎಂದಾಗ ಅಜ್ಜ, ‘ಮಗು ನಮಗೆ ಹೆಚ್ಚು ಬೆಲೆ ಸಿಗುವ ಜಾಗದಲ್ಲಿ ನಾವಿರಬೇಕು, ಅಂದಾಗ ಮಾತ್ರ ನಮ್ಮ ವ್ಯಕ್ತಿತ್ವ ಇಮ್ಮಡಿಗೊಳ್ಳುತ್ತದೆ ಮತ್ತು ಹೆಚ್ಚು ಗೌರವ ದೊರಕುತ್ತದೆ’ ಎಂದಾಗ ಮಗುವಿಗೆ ಅಜ್ಜನ ಮಾತು ಅರ್ಥವಾಗಿತ್ತು.

ಒಟ್ಟಿನಲ್ಲಿ ಮನುಷ್ಯನು ಬೆಲೆಯಿರುವ ಜಾಗದಲ್ಲಿ ಬದುಕಬೇಕು. ಒಂದು ಜಾಗದಲ್ಲಿ ಒಬ್ಬನಿಗೆ ಬೆಲೆ ಇದೆಯೆಂದರೆ ಆ ವ್ಯಕ್ತಿಯ ಹೆಸರು ಮತ್ತು ಅವನು ಹಾಕುವ ಮೆಟ್ಟಿಗೂ ಅಲ್ಲಿ ಬೆಲೆಯಿರುತ್ತದೆ. ಅದೆ ವ್ಯೆಕ್ತಿಗೆ ಅಲ್ಲಿ ಬೆಲೆಯಿಲ್ಲ ಎಂದಾದರೆ ಅವನೇ ಅಲ್ಲಿದ್ದರೂ ಪ್ರಯೋಜನ ಇಲ್ಲದಂತಾಗುತ್ತದೆ.