ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮದುವೆ ಆಗಿ ನೋಡು, ಮಗು ತೂಗಿ ನೋಡು

ಮದು ಮಗನಿಗೆ ಎಲ್ಲಿಲ್ಲದ ಖುಷಿ. ಆ ದಿನ ಬಂದೇಬಿಟ್ಟಿತು. ಕೆಲವೇ ಗಂಟೆಗಳ ಪ್ರಯಾಣದ ಊರು, ಹೆಣ್ಣಿನ ಮನೆಗೆ ಫಲ-ತಾಂಬೂಲ ಸಮೇತ ಮಧ್ಯಾಹ್ನದ ವೇಳೆಗೆ ಬಂದಿದ್ದಾರೆ ವರನ ಮನೆಯವರು. ಹಾಗೆ ಬಂದವರನ್ನು ನೋಡಿದ ಹೆಣ್ಣಿನ ಮನೆಯವರಿಗೆ ಆಶ್ಚರ್ಯವಾಗಿ, “ಯಾರು ನೀವು? ಏನು ಬಂದಿರಿ?" ಎಂದೆಲ್ಲಾ ಕೇಳಿಯೇಬಿಟ್ಟರು!

ಮಿರ್ಲೆ ಚಂದ್ರಶೇಖರ, ಮೈಸೂರು

ಹುಡುಗನಿಗೆ ವಯಸ್ಸು ಮೂವತ್ತೈದು ಆಗಿದ್ದರೂ ಇನ್ನೂ ಮದುವೆಯಾಗಿಲ್ಲ. ಅವನೇನೊ ಮದುವೆಯಾಗಲು ತುದಿಗಾಲಲ್ಲಿ ನಿಂತು ಹಲವು ವರ್ಷಗಳೇ ಆಗಿದ್ದವು; ಆದರೆ ಮದುವೆಗೆ ಹೆಣ್ಣು ಸಿಗಬೇಕಲ್ಲ, ಸಿಕ್ಕರೂ ಒಪ್ಪಬೇಕಲ್ಲ?! ನೂರೆಂಟು ಕಂಡಿಷನ್‌ಗಳು... ಎಲ್ಲವೂ ಸರಿಯಾಗಿ ಇದ್ದವರಿಗೇ ಹೆಣ್ಣು ಸಿಗುವುದು ಕಷ್ಟ. ಅಂಥದ್ದರಲ್ಲಿ ಕಡಿಮೆ ಸಂಬಳದ ಗುತ್ತಿಗೆ ಕೆಲಸದಲ್ಲಿರುವ ಮತ್ತು ಆಸ್ತಿವಂತನೂ ಅಲ್ಲದ ಹುಡುಗನನ್ನು ಮದುವೆ ಆಗಲು ಯಾವ ಹೆಣ್ಣು ಮುಂದೆ ಬರುತ್ತಾಳೆ?

ಆದರೆ, ಈ ಮೂವತ್ತೈದರ ಯುವಕನಿಗೆ ಅದೃಷ್ಟವೆಂಬಂತೆ ಒಂದು ಸಂಬಂಧ ಕೂಡಿ ಬರುವಂತಿದೆ. ಮನೆಮಂದಿಗೆಲ್ಲಾ ಸಂಭ್ರಮ, ಹೆಣ್ಣನ್ನು ನೋಡಿ ಬರುವುದಕ್ಕೆ ಸಿದ್ಧತೆಯಲ್ಲಿ ದ್ದಾರೆ. ಮೊಬೈಲ್ ಮೂಲಕ ಮಾತಾಡಿ ಮುಂದಿನ ವಾರ ಕನ್ಯೆಯನ್ನು ನೋಡುವ ಶಾಸ್ತ್ರ ವನ್ನು ಗೊತ್ತುಪಡಿಸಿದರು.

ಮದು ಮಗನಿಗೆ ಎಲ್ಲಿಲ್ಲದ ಖುಷಿ. ಆ ದಿನ ಬಂದೇಬಿಟ್ಟಿತು. ಕೆಲವೇ ಗಂಟೆಗಳ ಪ್ರಯಾಣದ ಊರು, ಹೆಣ್ಣಿನ ಮನೆಗೆ ಫಲ-ತಾಂಬೂಲ ಸಮೇತ ಮಧ್ಯಾಹ್ನದ ವೇಳೆಗೆ ಬಂದಿದ್ದಾರೆ ವರನ ಮನೆಯವರು. ಹಾಗೆ ಬಂದವರನ್ನು ನೋಡಿದ ಹೆಣ್ಣಿನ ಮನೆಯವರಿಗೆ ಆಶ್ಚರ್ಯ ವಾಗಿ, “ಯಾರು ನೀವು? ಏನು ಬಂದಿರಿ?" ಎಂದೆಲ್ಲಾ ಕೇಳಿಯೇಬಿಟ್ಟರು!

ಇದನ್ನೂ ಓದಿ: Samantha Marriage: ನಟಿ ಸಮಂತಾ ಜೊತೆ 2ನೇ ಮದುವೆಯಾದ ಈ ರಾಜ್‌ ನಿಡಿಮೋರು ಯಾರು? ಇವರ ವಯಸ್ಸೆಷ್ಟು?

ಇವರಿಗೂ ಪರಮಾಶ್ಚರ್ಯ. “ನಾವು ತಮ್ಮ ಮಗಳನ್ನು ನೋಡಿ, ಮದುವೆ ಮಾತುಕತೆ ಆಡಲು ಬಂದಿದ್ದೇವೆ. ಇಂಥ ದಿನ ಬರುತ್ತೇವೆ ಅಂತ ಕಳೆದ ವಾರವೇ ನಿಮಗೆ ಕರೆ ಮಾಡಿದ್ದೆ ವಲ್ಲಾ? ಯಾಕೆ ಮರೆತಿರಾ?" ಎಂದು ಕೇಳಿದರು.

ಅದಕ್ಕೆ ಹೆಣ್ಣಿನ ಮನೆಯವರು, “ಅಯ್ಯೋ, ಬೆಳಗ್ಗೆಯೇ ಒಂದು ಮನೆಯವರು ಬಂದಿದ್ದರು. ಫಲ-ತಾಂಬೂಲ ತಟ್ಟೆಯನ್ನು ಬದಲಾಯಿಸಿಕೊಂಡು ಮಾತುಕತೆಯನ್ನೂ ನಡೆಸಿದೆವು. ಬಳಿಕ ನಾವು ಲಗ್ನಪತ್ರಿಕೆಯನ್ನು ಬರೆಯಿಸಿ ಈಗಷ್ಟೇ ಮುದ್ರಣಕ್ಕೂ ಕೊಟ್ಟೆವಲ್ಲಾ..? ಹಾಗಾದರೆ ನೀವು ಯಾರು?" ಎಂಬ ಮರುಪ್ರಶ್ನೆ ಹಾಕಿದರು. ನಿಜಸಂಗತಿಯೇನು ಎಂದು ತಿಳಿದ ನಂತರ, ತಾವು ಬೇಸ್ತು ಬಿದ್ದಿರುವುದು ಎರಡೂ ಮನೆಯವರಿಗೆ ತಿಳಿಯಿತು.

ಆಗಿದ್ದು ಇಷ್ಟೇ: ಮೂವತ್ತೈದು ವಯಸ್ಸಿನ ವರನ ಮನೆಯಲ್ಲಿ ಕನ್ಯೆಯನ್ನು ನೋಡಲು ಹೋಗುವ ಸಂಭ್ರಮ. ಹೇಗೋ ನಮ್ಮ ಮಗನಿಗೆ ಹೆಣ್ಣು ಸಿಗುತ್ತಿದೆ ಎಂಬ ಹಿಗ್ಗು. ಆದರೆ, ‘ಯಾರಿಗೂ ಈಗಲೇ ಹೇಳೋದು ಬೇಡ; ವಿಷಯ ಗೊತ್ತಾದರೆ ನಡೆಯುವ ಮದುವೆಗೂ ಯಾರಾದರೂ ಕಲ್ಲುಹಾಕಿ ನಿಲ್ಲಿಸಿಬಿಡಬಹುದು’ ಎಂಬ ಭಯ ಮನೆಯ ಎಲ್ಲರಲ್ಲೂ.

ದರೆ, ಹೆಣ್ಣಿಗಾಗಿ ಕಾದುನಿಂತಿದ್ದ ವರನು, ಮನೆಯಿಂದ ಹೊರಬಂದು ಮರೆಯಲ್ಲಿ ನಿಂತು, ತನ್ನ ಆಪ್ತಮಿತ್ರನಿಗೆ ಮೊಬೈಲ್ ಕರೆ ಮಾಡಿ, ತಾನು ಹೆಣ್ಣು ನೋಡಲು ಹೋಗುತ್ತಿರುವ ವಿಷಯವನ್ನೂ, ಸಮಯ, ಸ್ಥಳ, ಅದು ಯಾರ ಮನೆ ಇತ್ಯಾದಿ ಪೂರ್ಣವಿವರವನ್ನೂ ಹೇಳಿ ಬಿಟ್ಟ!

ಇವನಂತೆಯೇ ತನ್ನ ಮಗನಿಗೆ ಕನ್ಯೆ ಸಿಗದೆ ಬಸವಳಿದಿದ್ದ ಎದುರು ಮನೆಯಾಕೆ, ಅವನು ಹಾಗೆ ಮೊಬೈಲ್‌ನಲ್ಲಿ ಮಾತಾಡಿದ್ದೆಲ್ಲವನ್ನೂ ಕದ್ದು ಕೇಳಿಸಿಕೊಂಡಳು. ಹೆಣ್ಣು ಸಿಗದೆ ಅಕ್ಷರಶಃ ಬರಗೆಟ್ಟಿದ್ದ ಆ ಮನೆಯವರು, ಸ್ಥಳ ಮತ್ತು ಮನೆಯ ಸಮೇತ ವಿವರಗಳು ದಕ್ಕು ತ್ತಿದ್ದಂತೆ ತಮ್ಮ ಖತರ್‌ನಾಕ್ ಬುದ್ಧಿಯನ್ನು ಉಪಯೋಗಿಸಿದರು.

ಕನ್ಯೆಯನ್ನು ಗೊತ್ತುಮಾಡಿಕೊಂಡಿದ್ದ ಮನೆಯವರಿಗಿಂತ ಮೊದಲೇ, ಅವರು ನಿಗದಿ ಪಡಿಸಿದ್ದ ದಿನದಂದೇ, ಅವರಿಗಿಂತಲೂ ಮುಂಚೆ ಬೆಳ್ಳಂಬೆಳಗ್ಗೆಯೇ ಕನ್ಯೆಯ ಮನೆಗೆ ‘ಬರಗೆಟ್ಟಿದ್ದ ವರ’ನೊಂದಿಗೆ ತೆರಳಿಬಿಟ್ಟರು! ಫೋನ್ ಮಾಡಿ ದಿನವನ್ನು ನಿಗದಿಪಡಿಸಿದ್ದು ತಾವೇ ಎಂಬ ಶೈಲಿಯಲ್ಲಿ ಮಾತನಾಡಿ, ಕನ್ಯೆಯ ಅಪ್ಪ-ಅಮ್ಮನ ಮನವೊಲಿಸಿ, ತಾಂಬೂಲ ಬದಲಾಯಿಸಿಕೊಂಡು, ಮದುವೆಯ ದಿನಾಂಕವನ್ನೂ ನಿಶ್ಚಯ ಮಾಡಿ ಕೊಂಡು, ಮುಂದಿನ ಕೆಲಸ-ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ‘ಬಂದೋಬಸ್ತ್’ ಮಾಡಿಕೊಂಡು ಊರಿಗೆ ಮರಳಿಬಿಟ್ಟಿದ್ದರು!

ಇದು ನಡೆದಿದ್ದ ಒಳಸಂಚಿನ ಪರಿ...! ಪರಿಣಾಮವಾಗಿ, ವಯಸ್ಸು ಮೂವತ್ತೈದು ಆಗಿದ್ದ ಹುಡುಗ ಇನ್ನೂ ಅವಿವಾಹಿತನಾಗಿಯೇ ಉಳಿಯಬೇಕಾಯಿತು...‘ಮದುವೆಗೆ ಹೆಣ್ಣು ಸಿಗು ತ್ತಿಲ್ಲ, ಹಾಗಾಗಿ ನಮಗೆ ಮಠವನ್ನು ಕಟ್ಟಿಕೊಡಿ’ ಅಂತ ಅದೆಲ್ಲೋ ಒಂದು ಕಡೆ ಯುವಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದನ್ನು ಕೇಳಿದ್ದೇವೆ. ಹೆಣ್ಣನ್ನು ದಕ್ಕಿಸಿಕೊಳ್ಳುವುದಕ್ಕೆ ಯುದ್ಧ ಗಳೇ ನಡೆದಿರುವುದನ್ನುಇತಿಹಾಸದ ಕಥೆಗಳಲ್ಲಿ ಓದಿದ್ದೇವೆ. ಮೇಲೆ ಉಲ್ಲೇಖಿಸಿ ರುವಂಥ ನಿದರ್ಶನಗಳನ್ನು ಓದಿದಾಗ/ಕಂಡಾಗ, ಬಹುಶಃ ಇತಿಹಾಸವು ಮರುಕಳಿಸುತ್ತಿರಬಹುದು ಎನಿಸುತ್ತದೆ...!

ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸಹೃದಯಿಗಳಿಗೆ ಒಂದು ಮಾತನ್ನು ಹೇಳು ವುದಿದೆ: ‘ಸಂಸಾರದ ಗುಟ್ಟು, ವ್ಯಾಧಿ ರಟ್ಟು’ ಅಂತ ಹೇಳೋದು ಇದಕ್ಕೇನೇ! ಯಾರೆ ಷ್ಟೇ ಆಪ್ತರಾಗಿರಲಿ, ವಿಶ್ವಾಸಿಗಳು ಎನಿಸಿಕೊಂಡಿರಲಿ, ಕೆಲವೊಂದು ಕೌಟುಂಬಿಕ ವಿಷಯ ಗಳು ಹೊರಗೆ ಗೊತ್ತಾಗದಂತೆ ನೋಡಿಕೊಳ್ಳಬೇಕಾಗುತ್ತದೆ, ಗುಟ್ಟು ಮಾಡ ಬೇಕಾಗುತ್ತದೆ.

ಇದರಲ್ಲಿ ತಪ್ಪೇನಿಲ್ಲ. ‘ಇಷ್ಟೊಂದು ಮಹತ್ವದ ವಿಷಯವನ್ನು ನಮಗೆ ಹೇಳಲೇ ಇಲ್ಲವಲ್ಲಾ?’ ಎಂದು ಇಂಥ ಸಂದರ್ಭದಲ್ಲಿ ಕೆಲವರು ಆಕ್ಷೇಪಿಸಬಹುದು, ಆದರೆ ಅಂಥ ಆಕ್ಷೇಪಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ನಮ್ಮ ಮನೆಯನ್ನು ಮತ್ತು ಮನೆಯವರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಇದು ಸ್ವಾರ್ಥವಲ್ಲ, ಕೌಟುಂಬಿಕ ಬದ್ಧತೆ.