ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hosmane Muttu Column: ಒನಕೆ ತೂಬು: ಪುರಾತನ ಭಾರತದ ಜಲವಿಜ್ಞಾನದ ಅದ್ಭುತ

ಇಲ್ಲಿರುವ ಕಂಬಗಳ ನಡುವೆ, ಮೇಲೆ ಮತ್ತು ಕೆಳಕ್ಕೆ ರಂಧ್ರ ಗಳಿರುವ ಕಲ್ಲಿನ ಪಟ್ಟಿಗಳನ್ನು ಅಳವಡಿಸ ಲಾಗಿರುತ್ತದೆ. ಈ ರಂಧ್ರಕ್ಕೆ ಸರಿಯಾಗಿ ಹೊಂದುವಂತೆ, ತುದಿಯಲ್ಲಿ ಬಿರಟೆಯಂಥ ಆಕಾರವಿರುವ ಉದ್ದನೆಯ ಮರದ ಕಂಬವೊಂದನ್ನು (ಒನಕೆ ಮಾದರಿಯ ಕಂಬ) ಮೇಲಿಂದ ಇಳಿಸಲಾಗಿರುತ್ತದೆ. ನೀರು ಬೇಕಾದಾಗ ಈ ಕಂಬವನ್ನು ಮೇಲೆತ್ತಲಾಗುತ್ತಿತ್ತು. ಆಗ ನೀರು ಕೆರೆಯ ಕೆಳಭಾಗದ ಕಾಲುವೆ ಗಳ ಮೂಲಕ ಗದ್ದೆ-ತೋಟಗಳಿಗೆ ಹರಿಯುತ್ತಿತ್ತು.

ಹೊಸ್ಮನೆ ಮುತ್ತು

ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ರಾಜ್ಯದ ಹಲವಾರು ಪುರಾತನ ಕೆರೆಗಳಲ್ಲಿ ಕಲ್ಲಿನ ಚೌಕಟ್ಟಿನ ವಿಶೇಷ ರಚನೆಯೊಂದನ್ನು ಕಾಣಬಹುದು. ಇವು ಕೆರೆಯ ಒಡಲಿನಲ್ಲಿರುವ ನೀರನ್ನು ಅತ್ಯಂತ ಜಾಣ್ಮೆಯಿಂದ ಕೃಷಿ ಭೂಮಿಗೆ ಹರಿಸುವ ಪ್ರಮುಖ ಅಂಗಗಳಾಗಿದ್ದು, ಇವುಗಳನ್ನು ‘ಒನಕೆ ತೂಬು’ ಎನ್ನಲಾಗುತ್ತದೆ.

ಈ ಕಲ್ಲಿನ ತೂಬುಗಳು ನೀರಾವರಿ ವ್ಯವಸ್ಥೆಯಲ್ಲಿನ ಅತ್ಯಂತ ಪ್ರಾಚೀನ ಹಾಗೂ ಪರಿಣಾಮಕಾರಿ ತಂತ್ರಜ್ಞಾನ. ಕೆರೆಯ ಏರಿಯನ್ನು ಕೊರೆಯದೆಯೇ ನೀರನ್ನು ಸುರಕ್ಷಿತವಾಗಿ ಹೊರಬಿಡಲು ಬಳಸುವ ಈ ವ್ಯವಸ್ಥೆಯು ಸಿವಿಲ್ ಎಂಜಿನಿಯರಿಂಗ್‌ನ ಅದ್ಭುತಗಳಲ್ಲಿ ಒಂದು. ಅತಿ ಹೆಚ್ಚು ಮಳೆ ಬೀಳುವ ಮಲೆನಾಡು ಭಾಗದಲ್ಲಿ ಸಂಗ್ರಹವಾಗುವ ಕೆರೆಯ ನೀರನ್ನು ಅಗತ್ಯವಿದ್ದಾಗ ಗದ್ದೆಗಳಿಗೆ ಹರಿಸಲು ಇಂಥ ಬಲಿಷ್ಠವಾದ ಕಲ್ಲಿನ ಚೌಕಟ್ಟು ಹೊಂದಿರುವ ಗೇಟ್‌ಗಳು (ಖ್ಝ್ಠಜ್ಚಿಛಿ ಜZಠಿಛಿo) ಬಳಕೆಯಾಗುತ್ತಿದ್ದವು.

ಇವುಗಳ ವಿನ್ಯಾಸ ಮತ್ತು ನೀರಿನ ಒತ್ತಡವನ್ನು ನಿಭಾಯಿಸುವ ರೀತಿ ಇಂದಿಗೂ ಕುತೂಹಲಕಾರಿ ಸಂಗತಿಯಾಗಿದೆ. ರಚನೆ ಮತ್ತು ಕಾರ್ಯವಿಧಾನ: ಕೆರೆಯ ಏರಿಯ ಒಳಭಾಗದಲ್ಲಿ ಒಂದು ಕಲ್ಲಿನ ಮಂಟಪದಂಥ ರಚನೆ ಇರುತ್ತದೆ. ಇಲ್ಲಿರುವ ಕಂಬಗಳ ನಡುವೆ, ಮೇಲೆ ಮತ್ತು ಕೆಳಕ್ಕೆ ರಂಧ್ರ ಗಳಿರುವ ಕಲ್ಲಿನ ಪಟ್ಟಿಗಳನ್ನು ಅಳವಡಿಸಲಾಗಿರುತ್ತದೆ. ಈ ರಂಧ್ರಕ್ಕೆ ಸರಿಯಾಗಿ ಹೊಂದುವಂತೆ, ತುದಿಯಲ್ಲಿ ಬಿರಟೆಯಂಥ ಆಕಾರವಿರುವ ಉದ್ದನೆಯ ಮರದ ಕಂಬವೊಂದನ್ನು (ಒನಕೆ ಮಾದರಿಯ ಕಂಬ) ಮೇಲಿಂದ ಇಳಿಸಲಾಗಿರುತ್ತದೆ. ನೀರು ಬೇಕಾದಾಗ ಈ ಕಂಬವನ್ನು ಮೇಲೆತ್ತ ಲಾಗುತ್ತಿತ್ತು. ಆಗ ನೀರು ಕೆರೆಯ ಕೆಳಭಾಗದ ಕಾಲುವೆ ಗಳ ಮೂಲಕ ಗದ್ದೆ-ತೋಟಗಳಿಗೆ ಹರಿಯುತ್ತಿತ್ತು. ನೀರನ್ನು ನಿಲ್ಲಿಸಬೇಕಾದಾಗ ಕಂಬವನ್ನು ರಂಧ್ರದೊಳಗೆ ಭದ್ರವಾಗಿ ಇರಿಸಲಾಗು ತ್ತಿತ್ತು. ಇದರ ನಿರ್ವಹಣೆಯನ್ನು ‘ನೀರುಗಂಟಿ’ ಎನ್ನುವವರು ಮಾಡುತ್ತಿದ್ದರು.

ಅವರು ಮಳೆ ಮತ್ತು ಬೆಳೆಯ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಹರಿಸುವ ತೀರ್ಮಾನ ಕೈಗೊಳ್ಳು ತ್ತಿದ್ದರು. ಇದು ಅಂದಿನ ಕಾಲದ ಸಮುದಾಯ ಆಧಾರಿತ ಜಲ ನಿರ್ವಹಣೆ ಹಾಗೂ ನೀರಾವರಿ ವ್ಯವಸ್ಥೆಯ ಮೇಲಿದ್ದ ಕಾಳಜಿಗೆ ಸಾಕ್ಷಿಯಾಗಿದೆ.

ಇಂದಿನ ಸಿಮೆಂಟ್ ಮತ್ತು ಕಬ್ಬಿಣದ ಗೇಟುಗಳು 40-50 ವರ್ಷಗಳ ತುಕ್ಕು ಹಿಡಿದು ಹಾಳಾಗುತ್ತವೆ. ಆದರೆ, ನೂರಾರು ವರ್ಷಗಳ ಹಿಂದೆ ಕಲ್ಲಿನಿಂದ ನಿರ್ಮಿಸಿದ ಈ ತೂಬುಗಳು ಇಂದಿಗೂ ಭದ್ರ ವಾಗಿದ್ದು ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ತೂಬುಗಳು ಕೇವಲ ಎಂಜಿನಿಯರಿಂಗ್ ಮಾದರಿಗಳಲ್ಲದೆ, ಕಲಾತ್ಮಕವಾಗಿಯೂ ಮೌಲ್ಯಯುತವಾಗಿವೆ. ಇವುಗಳ ಮೇಲೆ ಜಲದೇವತೆಗಳ ಸುಂದರ ಕೆತ್ತನೆಗಳನ್ನು ನಾವು ಕಾಣಬಹುದು. ಇು ನಮ್ಮ ಪೂರ್ವಜರ ತಾಂತ್ರಿಕ ನೈಪುಣ್ಯ ಮತ್ತು ಪ್ರಕೃತಿಯ ಮೇಲಿದ್ದ ಭಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.