ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Padyana Brahmakalashotsava: ಪದ್ಯಾಣ ಬ್ರಹ್ಮಕಲಶೋತ್ಸವ: ವಿದ್ವಾಂಸರು, ಕಲಾವಿದರ ಸಾಂಸ್ಕೃತಿಕ ನೆಲೆಬೀಡು

ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಶ್ರೀ ಚಕ್ರ ಪೂಜೆ. 1975ರಲ್ಲಿ ದೇವಸ್ಥಾನದ ನವೀಕರಣ ದ ಸಂದರ್ಭದಲ್ಲಿ ಶ್ರೀಚಕ್ರ ಸಹಿತ ಶ್ರೀ ಮಹಾ ಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆ ಮಾಡಲಾಗಿತ್ತು. ಒಂದು ಕಾಲದಲ್ಲಿ ಪಾಳುಬಿದ್ದಿದ್ದ ಈ ದೇಗುಲವನ್ನು 1975ರಲ್ಲಿ ದಿ.ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಭಕ್ತರ ಸಹಕಾರದೊಂದಿಗೆ ಪುನರ್‌ನಿರ್ಮಿಸಲಾಯಿತು.

ಜಿತೇಂದ್ರ ಕುಂದೇಶ್ವರ

ವಿಶೇಷ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆ ಇರುವ ಕರ್ನಾಟಕ- ಕೇರಳ ಗಡಿಭಾಗದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮಾರ್ಚ್ 30ರಿಂದ ಏ.6ರವರೆಗೆ ನಡೆಯಲಿದೆ. ಈ ಬಾರಿಯ ಬ್ರಹ್ಮಕಲಶೋತ್ಸವವು ಖ್ಯಾತ ನ್ಯಾಯವಾದಿ ಡಾ. ಅರುಣ ಶ್ಯಾಮ್ ಅಧ್ಯಕ್ಷತೆಯಲ್ಲಿ, ಐಎಎಸ್ ಅಧಿಕಾರಿ ಡಾ.ಟಿ.ಶಾಮ ಭಟ್ ಗೌರವಾಧ್ಯಕ್ಷತೆ ಯಲ್ಲಿ, ಶ್ಯಾಮ ಸುದರ್ಶನ ಹೊಸಮೂಲೆ ಅವರ ಕಾರ್ಯಾಧ್ಯಕ್ಷತೆಯಲ್ಲಿ ಮತ್ತು ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಮೊದಲಾದ ಊರ ಗಣ್ಯರ ಮಾರ್ಗದರ್ಶನ ದಲ್ಲಿ ನಡೆಯಲು ಸಂಪೂರ್ಣ ಸಜ್ಜಾಗಿದೆ.

ನಾಡಿನ ವಿವಿಧ ಮಠಾಧೀಶರು ಮತ್ತು ಚಿಂತಕರು ಈ ವೇಳೆ ಭಾಗವಹಿಸಲಿದ್ದಾರೆ.

? ಕ್ಷೇತ್ರದ ಮಹಿಮೆ ಮತ್ತು ಇತಿಹಾಸ

ಸುಮಾರು 600 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ರಮ್ಯ ಪ್ರಕೃತಿಯ ಮಡಿಲಲ್ಲಿದೆ. ಈ ದೇವಸ್ಥಾನವು ಪಶ್ಚಿಮಕ್ಕೆ ಮುಖ ಮಾಡಿದ್ದು, ಸಪರಿವಾರ ಶ್ರೀ ಮಹಾಲಿಂಗೇಶ್ವರ ಇಲ್ಲಿ ನೆಲೆಯಾಗಿದ್ದಾನೆ.

ಫಲಪ್ರದಾಯಕ ಕ್ಷೇತ್ರ: ಇಲ್ಲಿನ ದೇವರಲ್ಲಿ ಪ್ರಾರ್ಥಿಸಿದರೆ ವಿದ್ಯೆ, ಬುದ್ಧಿ, ಆರೋಗ್ಯ, ಉದ್ಯೋಗ, ವಿವಾಹ, ಸತ್ಸಂತಾನ ಹಾಗೂ ಕೃಷಿ ಸಮೃದ್ಧಿಯನ್ನು ದೇವರು ಕರುಣಿಸುತ್ತಾನೆ ಎಂಬುದು ಭಕ್ತರ ದೃಢ ನಂಬಿಕೆ.

ಇದನ್ನೂ ಓದಿ: Shashidhara Halady Column: ಘಮಘಮಿಸುವ ಆ ವ್ಯಂಜನವನ್ನು ತಯಾರಿಸುವ ಕಾಲ !

ಶ್ರೀಚಕ್ರಾರಾಧನೆಯ ವೈಶಿಷ್ಟ್ಯ: ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಶ್ರೀ ಚಕ್ರ ಪೂಜೆ. 1975ರಲ್ಲಿ ದೇವಸ್ಥಾನದ ನವೀಕರಣದ ಸಂದರ್ಭದಲ್ಲಿ ಶ್ರೀಚಕ್ರ ಸಹಿತ ಶ್ರೀ ಮಹಾ ಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆ ಮಾಡಲಾಗಿತ್ತು. ಒಂದು ಕಾಲದಲ್ಲಿ ಪಾಳುಬಿದ್ದಿದ್ದ ಈ ದೇಗುಲವನ್ನು 1975ರಲ್ಲಿ ದಿ.ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಭಕ್ತರ ಸಹಕಾರದೊಂದಿಗೆ ಪುನರ್‌ನಿರ್ಮಿಸಲಾಯಿತು.

ಕ್ಷೇತ್ರದ ತಂತ್ರಿಗಳ ಮಾರ್ಗ ದರ್ಶನದಂತೆ 2006ರಲ್ಲಿ ನಾಗ-ಶಾಸ್ತಾರ ಪ್ರತಿಷ್ಠೆ ನಡೆಯಿತು. ದೇವಸ್ಥಾನದ ಆವರಣದಲ್ಲಿ ಧೂಮಾವತಿ ಮತ್ತು ಕೊರತಿ ದೈವಗಳ ಆರಾಧನೆಯೂ ನಿರಂತರವಾಗಿ ನಡೆಯುತ್ತಿದೆ.

ಸಾಂಸ್ಕೃತಿಕ ಕಲಾಪ್ರಿಯತೆ: ಪದ್ಯಾಣವು ಯಕ್ಷಗಾನ, ಸಂಗೀತ, ಸಾಹಿತ್ಯ ಮತ್ತು ಗಮಕ ಕಲೆಗಳ ತವರೂರು. ಇಲ್ಲಿನ ಮನೆ ಮನೆಗಳಲ್ಲಿ ಕಲಾವಿದರು ಮತ್ತು ಕಲಾಸಕ್ತರನ್ನು ಕಾಣ ಬಹುದು. ಇದೀಗ ಸಾಫ್ಟ್‌ʼವೇರ್ ಎಂಜಿನಿಯರ್ ಪದ್ಯಾಣದ ಪರಂಪರೆಯಲ್ಲಿ ಕಾಣ ಸಿಗುತ್ತಾರೆ.

ಯಕ್ಷಗಾನಕ್ಕೆ ಅನುಪಮ ಕೊಡುಗೆ: ಪದ್ಯಾಣ ಮನೆತನವು ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳಕ್ಕೆ ದೊಡ್ಡ ಕೊಡುಗೆ ನೀಡಿದೆ. ಮಾಂಬಾಡಿ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್ ಸೇರಿದಂತೆ ಅನೇಕ ಶ್ರೇಷ್ಠ ಕಲಾವಿದರು ಈ ಮಣ್ಣಿನವರು. ಪದ್ಯಾಣದದ ಪರಿಸರದಲ್ಲಿ ಪ್ರತಿ ಮನೆಗೊಬ್ಬ ಕಲಾವಿದನಿದ್ದಾನೆ ಎಂಬ ಪ್ರತೀತಿ ಇದೆ.

Padyana 3

ಸಾಧಕರ ನೆಲೆ: ಪತ್ರಕರ್ತರು, ಐಎಎಸ್ ಅಧಿಕಾರಿಗಳು ಸೇರಿದಂತೆ ಈ ಭಾಗದ ಪಾದೇಕಲ್ಲು ನರಸಿಂಹ ಭಟ್ಟರು, ನೀರ್ಪಾಜೆ ಭೀಮಭಟ್ಟರಂಥ ಸಾಹಿತಿಗಳು ಈ ಪ್ರದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

? ಪದ್ಯಾಣ ಊರಿನ ಗಣ್ಯ ಮಹನೀಯರು ಈ ಕುಟುಂಬವು ಆಡಳಿತ, ಸಾಹಿತ್ಯ, ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅನೇಕ ಸಾಧಕರನ್ನು ನೀಡಿದೆ:

? ಆಡಳಿತ ಮತ್ತು ನಾಗರಿಕ ಸೇವೆ

ಮಾಂಬಾಡಿ ಶಂಭು ಭಟ್ಟ: ಹವ್ಯಕ ಬ್ರಾಹ್ಮಣ ಸಮಾಜದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ಸರಕಾರದಿಂದ ಐಸಿಎಸ್ ಪದವಿ ಪಡೆದವರು.

ಟಿ.ಶ್ಯಾಮ ಭಟ್: ಐಎಎಸ್ ಅಧಿಕಾರಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದವರು.

ಶಂಭು ರಾಮಚಂದ್ರ ಭಟ್: ವಿಶ್ವಸಂಸ್ಥೆಗೆ ಮಹಿಳಾ ಶೋಷಿತ ವರ್ಗದವರ ಅಭಿವೃದ್ಧಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದವರು.

ಮಾಂಬಾಡಿ ಶಂಭು ಭಟ್ಟರ ಪುತ್ರ: ಪಶ್ಚಿಮ ಬಂಗಾಳ ಸರಕಾರದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದವರು.

Screenshot_8

ಯಕ್ಷಗಾನ ಮತ್ತು ಸಂಗೀತ ಸಾಧಕರು

ಮಾಂಬಾಡಿ ನಾರಾಯಣ ಭಾಗವತರು: ಯಕ್ಷಗಾನದ ಪ್ರಸಿದ್ಧ ಗುರುಗಳು ಮತ್ತು ಭಾಗವತರು. ‌

ಪದ್ಯಾಣ ಪುಟ್ಟು ನಾರಾಯಣ ಭಟ್ಟರು:

ಹಿರಿಯ ಭಾಗವತರು.

ಪದ್ಯಾಣ ಗಣಪತಿ ಭಟ್: ವರ್ತಮಾನದ ಅಗ್ರಮಾನ್ಯ ಭಾಗವತರು ಮತ್ತು ನಿರ್ದೇಶಕರು.

ಪದ್ಯಾಣ ಶಂಕರನಾರಾಯಣ ಭಟ್: ‘ನಾದಶಂಕರ’ ಬಿರುದಾಂಕಿತ ಪ್ರಸಿದ್ಧ ಚಂಡೆ ಮತ್ತು ಮದ್ದಲೆ ವಾದಕರು.

ಪೆರುವೋಡಿ ನಾರಾಯಣ ಭಟ್ ಮತ್ತು ಪೆರುವೋಡಿ ಸುಬ್ರಹ್ಮಣ್ಯ ಭಟ್: ಹಿರಿಯ ಹಾಸ್ಯಗಾರರು.

ತಲೆಂಗಳ ಗೋಪಾಲಕೃಷ್ಣ ಭಟ್: ಪ್ರಸಿದ್ಧ ಹಿಮ್ಮೇಳ ವಾದಕರು.

ಸಂಗೀತವಾಹಿನೀ ಪದ್ಯಾಣ ತಿಮ್ಮಣ್ಣ ಭಟ್: ಸಂಗೀತಜ್ಞರು ಮತ್ತು ಶಿಕ್ಷಕರು.

ಸಾಹಿತ್ಯ ಮತ್ತು ಪತ್ರಿಕೋದ್ಯಮ

ತಲೆಂಗಳ ವಿದ್ವಾನ್ ರಾಮಕೃಷ್ಣ ಭಟ್ಟರು: ಸಾಹಿತಿಗಳು ಮತ್ತು ಯಕ್ಷಗಾನ

ಪ್ರಸಂಗಕರ್ತರು.

ಪ.ಗೋ. ಪದ್ಯಾಣ ಗೋಪಾಲಕೃಷ್ಣ ಭಟ್: ಪ್ರಸಿದ್ಧ ಪತ್ರಕರ್ತರು.

ಮಾಂಬಾಡಿ ಕೇಶವ ಭಟ್: ಇವರು ಬರೆದ ಇಂಗ್ಲಿಷ್ ಗ್ರಾಮರ್ ಪುಸ್ತಕವು ಮದ್ರಾಸ್ ಪ್ರಾಂತ್ಯದಲ್ಲಿ ಪಠ್ಯಪುಸ್ತಕವಾಗಿತ್ತು.

ನಯನಗೌರಿ ಸೇರಾಜೆ: ಹರಿಕಥಾ ಪ್ರವೀಣೆ.

Padyana 3

ಸಾಂಸ್ಕೃತಿಕ ಮತ್ತು ಕುಟುಂಬ ಪರಂಪರೆ ಮೂಲ: ಈ ಕುಟುಂಬದ ಮೂಲವು ಉತ್ತರ ಕನ್ನಡ ಮತ್ತು ಸಾಗರದ ಆಸುಪಾಸಿನ ಹವ್ಯಕ ಸಮುದಾಯಕ್ಕೆ ಸೇರಿದ್ದಾಗಿದೆ.

ಹೆಸರಿನ ಅರ್ಥ: ಸಂಸ್ಕೃತದಲ್ಲಿ ’ಪದ್ಯಾಣ’ ಎಂದರೆ ಪದ್ಯವನ್ನು ಹೇಳುವವನು ಅಥವಾ ಶಬ್ದ ಮಾಡುವವನು ಎಂಬ ಅರ್ಥವಿದೆ.

ಕಲಾ ಪರಂಪರೆ: ಪದ್ಯಾಣ ಕುಟುಂಬವು ಯಕ್ಷಗಾನ ಮತ್ತು ಸಂಗೀತಕ್ಕೆ ಪಾರಂಪರಿಕವಾದ ಕೊಡುಗೆಯನ್ನು ನೀಡಿದೆ. ಈ ಕುಟುಂಬದ ಸಂಬಂಧಗಳು ಕುರಿಯ, ಮೂಡಂಬೈಲು ಮತ್ತು ಕಜೆ ಮುಂತಾದ ಕಲಾ ಮನೆತನಗಳೊಂದಿಗೆ ಬೆಸೆದುಕೊಂಡಿವೆ.

ಕುಟುಂಬ ಶಾಖೆಗಳು: 2010ರಲ್ಲಿ ನಡೆದ ’ಅಘಸಂಕೋಚ’ ಕಾರ್ಯಕ್ರಮದ ಪ್ರಕಾರ ಪ್ರಮುಖ ಶಾಖೆಗಳೆಂದರೆ ಪದ್ಯಾಣ (ಶಂಕಣ್ಣ ಭಟ್), ತಲೆಂಗಳ (ಶಂಭಟ್ಟ) ಮತ್ತು ಪದ್ಯಾಣ (ಕೇಶವ ಭಟ್).

ದೇವಸ್ಥಾನದ ಮಹತ್ವ, ವೈಶಿಷ್ಟ್ಯಗಳು

ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಈ ಕುಟುಂಬದ ಶ್ರದ್ಧಾಕೇಂದ್ರವಾಗಿದೆ.

ದೇವತೆಗಳು: ಇಲ್ಲಿ ಶ್ರೀ ಮಹಾಲಿಂಗೇಶ್ವರ ಮುಖ್ಯ ದೇವರಾಗಿದ್ದು, ಶ್ರೀ ಮಹಾಗಣಪತಿ ಉಪದೇವನಾಗಿzನೆ. ಧೂಮಾವತಿ ಮತ್ತು ಕೊರತಿ ಇಲ್ಲಿನ ಧರ್ಮ ದೈವಗಳು.

ಶ್ರೀಚಕ್ರಾರಾಧನೆ: ಈ ದೇವಸ್ಥಾನದ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ನಡೆಯುವ ಶ್ರೀಚಕ್ರದ ನಿರಂತರಾರಾಧನೆ.

ಭಜನಾ ಪರಂಪರೆ: ಪ್ರತಿ ಸೋಮವಾರ ದೇವಸ್ಥಾನದಲ್ಲಿ ಭಜನೆ ನಡೆಯುತ್ತದೆ. ಇದನ್ನು ಸೇರಾಜೆ ನಾರಾಯಣ ಭಟ್ಟರು ಆರಂಭಿಸಿದರು. ಇಲ್ಲಿನ ಭಜನೆಯು ಭಕ್ತಿ ಮತ್ತು ಸಂಗೀತದ ಮಾಧುರ್ಯಕ್ಕೆ ಹೆಸರಾಗಿದೆ.

ನವೀಕರಣ: 2008ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಷ್ಟಬಂಧ ಪ್ರತಿಷ್ಠೆ ನಡೆದಿದೆ. 2016ರಲ್ಲಿ ಧೂಮಾವತಿ ಗುಡಿಯನ್ನು ನೂತನವಾಗಿ ನಿರ್ಮಿಸಲಾಗಿದೆ.