ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr N Someshwara Column: ಕೋಮಾದಲ್ಲಿದ್ದವನು ಅಮ್ಮಾ...ಎಂದು ಕರೆದ !

ಅವನು ಕಣ್ಣು ಬಿಟ್ಟು ಎದ್ದಾಗ ಬೆಳಿಗ್ಗೆಯಾಗಿತ್ತು. ಆದರೆ ಅವನಿಗೆ ಎಲ್ಲವೂ ಬದಲಾದಂತೆ ಭಾಸವಾ ಯಿತು. ಅವನ ನಾಯಿ ಅಲ್ಲಿರಲಿಲ್ಲ, ಅವನ ಗನ್ ಹಳೆಯದಾಗಿ ತುಕ್ಕು ಹಿಡಿದಿತ್ತು, ಮತ್ತು ಅವನ ಗಡ್ಡ ತುಂಬಾ ಉದ್ದವಾಗಿ ಬೆಳೆದಿತ್ತು. ಅವನು ಕಷ್ಟಪಟ್ಟು ತನ್ನ ಹಳ್ಳಿಗೆ ಮರಳಿ ಬಂದಾಗ, ಅವನಿಗೆ ಅಲ್ಲಿನ ಯಾವೊಬ್ಬ ವ್ಯಕ್ತಿಯೂ ಗುರುತು ಸಿಗಲಿಲ್ಲ. ಹಳ್ಳಿಯಲ್ಲಿದ್ದ ಮನೆಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಬದಲಾಗಿದ್ದವು. ಜನರು ಅವನನ್ನು ನೋಡಿ ವಿಚಿತ್ರವಾಗಿ ಮಾತನಾಡಿಕೊಳ್ಳುತ್ತಿದ್ದರು.

ಹಿಂದಿರುಗಿ ನೋಡಿದಾಗ

ರಿಪ್ ವ್ಯಾನ್ ವಿಂಕಲ್ ಅಮೆರಿಕದ ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ದಯಾಳು ಮತ್ತು ಸೋಮಾರಿ ವ್ಯಕ್ತಿ. ಅವನಿಗೆ ಎಲ್ಲರಿಗೂ ಸಹಾಯ ಮಾಡುವುದೆಂದರೆ ಇಷ್ಟ, ಆದರೆ ತನ್ನ ಸ್ವಂತ ಕೆಲಸಗಳನ್ನು ಮಾಡಲು ಮಾತ್ರ ತುಂಬಾ ಸೋಮಾರಿತನ. ಅವನ ಹೆಂಡತಿ ಅವನ ಈ ಸೋಮಾರಿ ತನಕ್ಕೆ ಯಾವಾಗಲೂ ಬೈಯುತ್ತಿದ್ದಳು. ಒಂದು ದಿನ, ಹೆಂಡತಿಯ ಬೈಗುಳಿಂದ ತಪ್ಪಿಸಿಕೊಳ್ಳಲು ರಿಪ್ ತನ್ನ ನಾಯಿಯ ಜೊತೆ ಕಾಟ್ಸ್ ಕಿಲ್ ಬೆಟ್ಟಗಳ ಕಡೆಗೆ ಹೋದ. ಅಲ್ಲಿ ಅವನಿಗೆ ವಿಚಿತ್ರ ವಾದ ಬಟ್ಟೆಗಳನ್ನು ಧರಿಸಿದ ಕುಬ್ಜ ವ್ಯಕ್ತಿಗಳ ಗುಂಪೊಂದು ಸಿಕ್ಕಿತು.

ಅವರು ನಿಗೂಢ ಆಟವನ್ನು ಆಡುತ್ತಿದ್ದರು ಮತ್ತು ಒಂದು ಪಾತ್ರೆಯಿಂದ ವಿಚಿತ್ರವಾದ ಪಾನೀಯ ವನ್ನು ಕುಡಿಯು ತ್ತಿದ್ದರು. ಅವರು ರಿಪ್‌ಗೂ ಆ ಪಾನೀಯವನ್ನು ನೀಡಿದರು. ಆ ಪಾನೀಯವನ್ನು ಕುಡಿದ ತಕ್ಷಣ ರಿಪ್‌ಗೆ ತೀವ್ರವಾದ ನಿದ್ದೆ ಬಂದಿತು ಮತ್ತು ಅವನು ಅ ಗಾಢವಾಗಿ ಮಲಗಿದನು.

ಎಚ್ಚರವಾದಾಗ...

ಅವನು ಕಣ್ಣು ಬಿಟ್ಟು ಎದ್ದಾಗ ಬೆಳಿಗ್ಗೆಯಾಗಿತ್ತು. ಆದರೆ ಅವನಿಗೆ ಎಲ್ಲವೂ ಬದಲಾದಂತೆ ಭಾಸ ವಾಯಿತು. ಅವನ ನಾಯಿ ಅಲ್ಲಿರಲಿಲ್ಲ, ಅವನ ಗನ್ ಹಳೆಯದಾಗಿ ತುಕ್ಕು ಹಿಡಿದಿತ್ತು, ಮತ್ತು ಅವನ ಗಡ್ಡ ತುಂಬಾ ಉದ್ದವಾಗಿ ಬೆಳೆದಿತ್ತು. ಅವನು ಕಷ್ಟಪಟ್ಟು ತನ್ನ ಹಳ್ಳಿಗೆ ಮರಳಿ ಬಂದಾಗ, ಅವನಿಗೆ ಅಲ್ಲಿನ ಯಾವೊಬ್ಬ ವ್ಯಕ್ತಿಯೂ ಗುರುತು ಸಿಗಲಿಲ್ಲ. ಹಳ್ಳಿಯಲ್ಲಿದ್ದ ಮನೆಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಬದಲಾಗಿದ್ದವು. ಜನರು ಅವನನ್ನು ನೋಡಿ ವಿಚಿತ್ರವಾಗಿ ಮಾತನಾಡಿ ಕೊಳ್ಳುತ್ತಿದ್ದರು.

ಇದನ್ನೂ ಓದಿ: Dr N Someshwara Column: ನೀಲಿ ಮಕ್ಕಳಿಗೆ ಹೊಸ ಬದುಕನ್ನು ನೀಡಿದ ತ್ರಿಮೂರ್ತಿಗಳು

ಕೊನೆಗೆ ರಿಪ್‌ಗೆ ಏನು ತಿಳಿಯಿತೆಂದರೆ, ಅವನು ಕೇವಲ ಒಂದು ರಾತ್ರಿ ಮಲಗಿರಲಿಲ್ಲ, ಬದಲಿಗೆ 20 ವರ್ಷಗಳ ಕಾಲ ಸುದೀರ್ಘವಾಗಿ ನಿದ್ರಿಸಿದ್ದ! ಈ 20 ವರ್ಷಗಳಲ್ಲಿ ಅವನ ಹೆಂಡತಿ ತೀರಿಕೊಂಡಿ ದ್ದಳು, ಅವನ ಮಕ್ಕಳು ದೊಡ್ಡವರಾಗಿ ದ್ದರು ಮತ್ತು ಅಮೆರಿಕ ದೇಶವು ಬ್ರಿಟಿಷರ ಆಡಳಿತದಿಂದ ಸ್ವತಂತ್ರವಾಗಿ ಹೊಸ ದೇಶವಾಗಿ ಮಾರ್ಪಟ್ಟಿತ್ತು. ಇದು ನಮ್ಮ ಬಾಲ್ಯದಲ್ಲಿ ನಾವು ಓದಿ ಆಶ್ಚರ್ಯ ಪಟ್ಟಿದ್ದ ಕಥೆ. ಇದು ಕೇವಲ ಕಥೆಯಲ್ಲ, ನಿಜಜೀವನದಲ್ಲೂ ಹೀಗೆ ಘಟಿಸಲು ಸಾಧ್ಯ ಎಂದರೆ ನಂಬಲಾದೀತೆ? ನಂಬಲೇಬೇಕು. ಅಂತಹ ಮೂರು ಪ್ರಕರಣಗಳನ್ನು ಸಂಕ್ಷಿಪ್ತವಾಗಿ ಗಮನಿಸೋಣ.

ಟೆರ್ರಿ ವಾಲಿಸ್: 19 ವರ್ಷಗಳ ನಂತರ ಮಾತನಾಡಿದ ಚಮತ್ಕಾರ. ಅಮೆರಿಕಾದ ಅರ್ಕಾನ್ಸಾಸ್‌ನ ಟೆರ್ರಿ ವಾಲಿಸ್ ಕಥೆ ವೈದ್ಯಕೀಯ ಇತಿಹಾಸದ ಅತ್ಯಂತ ರೋಮಾಂಚಕವಾದುದು. 1984ರಲ್ಲಿ, ತನ್ನ 19ನೇ ವಯಸ್ಸಿನಲ್ಲಿ ಟೆರ್ರಿ ಭೀಕರ ಕಾರು ಅಪಘಾತಕ್ಕೆ ಒಳಗಾದರು.ಅವರ ಕಾರು ನದಿಗೆ ಬಿದ್ದಿತ್ತು. ಅಪಘಾತದಲ್ಲಿ ಅವರ ಮಿದುಳಿಗೆ ತೀವ್ರ ಹಾನಿಯಾಗಿ, ಅವರು ಸಂಪೂರ್ಣ ಕೋಮಾ (ಪರ್ಸಿ ಸ್ಟಂಟ್ ವೆಜೆಟೇಟಿವ್ ಸ್ಟೇಟ್) ಸ್ಥಿತಿಗೆ ಜಾರಿದರು. ದಿನಗಳು, ತಿಂಗಳುಗಳು ಉರುಳಿ ವರ್ಷಗಳಾದವು. ಟೆರ್ರಿಯವರ ತಾಯಿ ಮತ್ತು ಹೆಂಡತಿ ಆತನನ್ನು ಪ್ರತಿದಿನ ಆರೈಕೆ ಮಾಡುತ್ತಿ ದ್ದರು. ವೈದ್ಯರು ಆತ ಇನ್ನು ಎಂದಿಗೂ ಎಚ್ಚರವಾಗುವುದಿಲ್ಲ ಎಂದೇ ಕೈಚೆಲ್ಲಿದ್ದರು.

ಬರೋಬ್ಬರಿ 19 ವರ್ಷಗಳ ನಂತರ, ಅಂದರೆ 2003ರಲ್ಲಿ ಟೆರ್ರಿ ಇದ್ದಕ್ಕಿದ್ದಂತೆ ಕಣ್ಣು ಬಿಟ್ಟರು. ಅಷ್ಟೇ ಅಲ್ಲ, ಎದುರಿಗಿದ್ದ ತಾಯಿಯನ್ನು ನೋಡಿ ಮೋಮ್ (ಅಮ್ಮ) ಎಂದು ಕರೆದರು! ಟೆರ್ರಿ ಎಚ್ಚರವಾದಾಗ ವಿಜ್ಞಾನಿಗಳು ಅವರ ಮಿದುಳನ್ನು ಸ್ಕ್ಯಾನ್ ಮಾಡಿದರು. ಅಲ್ಲಿ ಕಂಡ ದೃಶ್ಯ ಅದ್ಭುತವಾಗಿತ್ತು. ಟೆರ್ರಿಯವರ ಮಿದುಳು 19 ವರ್ಷಗಳ ಕಾಲ ಅತ್ಯಂತ ನಿಧಾನಗತಿಯಲ್ಲಿ ಹಾನಿ ಗೊಳಗಾದ ನರಗಳ ಸುತ್ತ ಹೊಸ ನರಗಳ ಸಂಪರ್ಕವನ್ನು (ನ್ಯೂ ನ್ಯೂರಲ್ ಪಾತ್‌ವೇಸ್) ಬೆಳೆಸಿ ಕೊಂಡಿತ್ತು. ಇದನ್ನು ಮಿದುಳಿನ ಪುನರ್ವಿನ್ಯಾಸಕ್ಕೆ (ನ್ಯೂರೋಪ್ಲಾಸ್ಟಿಸಿಟಿ) ಅತ್ಯುತ್ತಮ ಉದಾಹರಣೆ ಎಂದು ಇಂದಿಗೂ ಪರಿಗಣಿಸಲಾಗಿದೆ.

2026-07-08 15_29_12-vishwavani-epaper-2026-07-08 (1) ok

ಮುನೀರಾ ಅಬ್ದು: 27 ರ್ಷಗಳ ಬಳಿಕ ಮಗನಿಗಾಗಿ ಎಚ್ಚರಾದ ತಾಯಿ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮುನೀರಾ ಅಬ್ದು ಅವರ ಕಥೆ ಮಾತೃಪ್ರೇಮದ ಪರಮಾವಧಿ ಎನ್ನಬಹುದು. 1991ರಲ್ಲಿ ಮುನೀರಾ ತನ್ನ 4 ವರ್ಷದ ಮಗ ಓಮರ್‌ನನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದಾಗ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆಯಿತು.

ಅಪಘಾತದ ಕ್ಷಣದಲ್ಲಿ ಮುನೀರಾ ತನ್ನ ಮಗನಿಗೆ ಪೆಟ್ಟಾಗದಂತೆ ಗಟ್ಟಿಯಾಗಿ ತಬ್ಬಿಕೊಂಡು ರಕ್ಷಿಸಿದರು. ಮಗ ಬದುಕಿದ, ಆದರೆ ಮುನೀರಾ ತಲೆಗೆ ಬಲವಾದ ಪೆಟ್ಟು ಬಿದ್ದು ಕೋಮಾ ಸ್ಥಿತಿಗೆ ತಲುಪಿದರು. ಮಗ ಓಮರ್ ಬೆಳೆದು ದೊಡ್ಡವನಾದ. ಅತ್ಯಂತ ಜವಾಬ್ದಾರಿಯುತ ಮಗನಾಗಿ ತಾಯಿಯ ಆರೈಕೆಯನ್ನು ನಿರ್ವಹಿಸಿದ.

ತಾಯಿಯನ್ನು ಜರ್ಮನಿಯ ಅತ್ಯುತ್ತಮ ಆಸ್ಪತ್ರೆಗೆ ಸೇರಿಸಿ, ಅಲ್ಲಿ ಚಿಕಿತ್ಸೆಯನ್ನು ಕೊಡಿಸಿದ. ಬರೋಬ್ಬರಿ 27 ವರ್ಷಗಳ ನಂತರ, ಆಸ್ಪತ್ರೆಯಲ್ಲಿ ಮಗ ಓಮರ್ ಯಾರೊಂದಿಗೋ ಜೋರಾಗಿ ವಾದ ಮಾಡುತ್ತಿದ್ದಾಗ, ತಾಯಿ ಮುನೀರಾಗೆ ಇದ್ದಕ್ಕಿದ್ದ ಹಾಗೆ ಜಾಗೃತಿ ಬಂದಿತು. ಮಗನು ಅಪಾಯ ದಲ್ಲಿದ್ದಾನೆ ಎಂದು ಅವರ ಸುಪ್ತ ಮನಸ್ಸಿಗೆ ಅನಿಸಿರಬೇಕು! ಅವರು ಮಗನ ಹೆಸರನ್ನು ಕೂಗುತ್ತಾ ಎಚ್ಚರಾದರು.

2026-07-08 15_29_35-vishwavani-epaper-2026-07-08 (1).pdf

17 ವರ್ಷಗಳ ಕಾಲ ಕೋಮಾದಲ್ಲಿದ್ದ ವ್ಯಕ್ತಿ ಸಂಪೂರ್ಣ ಪ್ರಜ್ಞಾವಸ್ಥೆಗೆ ಮರಳಿ, ಕುರಾನ್ ಶ್ಲೋಕಗಳನ್ನು ಪಠಿಸುವಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದು ವೈದ್ಯಕೀಯ ಲೋಕಕ್ಕೆ ಅಚ್ಚರಿ ಯನ್ನು ಉಂಟು ಮಾಡುವುದರ ಜೊತೆಯಲ್ಲಿ ಭವ್ಯ ಭರವಸೆಯ ಬೆಳಕನ್ನು ನೀಡಿತು.

ಅನ್ನಿ ಶಾಪಿರೋ:30 ವರ್ಷಗಳ ಬಳಿಕ ಬದಲಾದ ಜಗತ್ತಿಗೆ ಕಣ್ಣು ತೆರೆದ ಮಹಿಳೆ. ಅನ್ನಿ ಶಾಪಿರೋ ಅವರ ಕಥೆ ಕಾಲದ ಪಯಣದ (ಟೈಮ್ ಟ್ರಾವೆಲ್) ನಿಜವಾದ ಅನುಭವ ದಂತಿದೆ. 1963ರಲ್ಲಿ ಕೆನಡಾದ ಒಂಟಾರಿಯೊದ ನಿವಾಸಿಯಾ ಗಿದ್ದ ಅನ್ನಿ ಶಾಪಿರೋ ಅವರಿಗೆ ತೀವ್ರ ಹೃದಯಾಘಾತ ವಾಗಿ ಮಿದುಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡು ಕೋಮಾ ಸ್ಥಿತಿಗೆ ಜಾರಿದರು. ಆಗ ಅವರಿಗೆ 50 ವರ್ಷ ವಯಸ್ಸು. ಅನ್ನಿಕೋಮಾದಲ್ಲಿದ್ದಾಗ ಜಗತ್ತಿನಲ್ಲಿ ಎಷ್ಟೋ ಬದಲಾವಣೆಗಳಾದವು.

ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿದ್ದ, ಬಣ್ಣದ ಟಿವಿಗಳು ಬಂದಿದ್ದವು, ಕಂಪ್ಯೂಟರ್ ಯುಗ ಆರಂಭವಾ ಗಿತ್ತು. 1992ರಲ್ಲಿ, ಬರೋಬ್ಬರಿ 30 ವರ್ಷಗಳ ನಂತರ ಅನ್ನಿ ಇದ್ದಕ್ಕಿದ್ದಂತೆ ಎಚ್ಚರ ವಾದರು. ಅವರು ಎಚ್ಚರವಾದಾಗ ಅವರ ವಯಸ್ಸು 60 ಆಗಿತ್ತು! ಅವರು ಕಣ್ಣು ಬಿಟ್ಟಾಗ

ಜಗತ್ತು ಸಂಪೂರ್ಣ ಬದಲಾಗಿತ್ತು. ಆಸ್ಪತ್ರೆಯಲ್ಲಿದ್ದ ರಿಮೋಟ್ ಕಂಟ್ರೋಲ್ಡ್ ಟಿವಿ ನೋಡಿ ಅವರು ಆಶ್ಚರ್ಯಚಕಿತರಾದರು. ಅತ್ಯಂತ ಬೇಸರದ ಸಂಗತಿಯೆಂದರೆ, ಅವಳು ಕಣ್ಣು ಮುಚ್ಚಿದಾಗ ಯುವಕರಾಗಿದ್ದ ಅವಳ ಮಕ್ಕಳು ಈಗ ವೃದ್ಧರಾಗಿದ್ದರು, ಮತ್ತು ಅವರ ಪತಿ ಆಗಲೇ ಮರಣ ಹೊಂದಿದ್ದರು. ಅನ್ನಿ ಶಾಪಿರೋ ಅವರ ಕಥೆನಾವು ಕಳೆದುಕೊಳ್ಳುವ ಕಾಲ ಮತ್ತು ಜಗತ್ತಿನ ಓಟ ಎಷ್ಟು ವೇಗವಾದುದು ಎಂಬುದನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು.

2026-07-08 15_30_07-vishwavani-epaper-2026-07-08 (1).pdf

ವೈವಿಧ್ಯತೆ: ಜನಸಾಮಾನ್ಯರ ದೃಷ್ಟಿಯಲ್ಲಿ ಮೇಲಿನ ಮೂರು ಪ್ರಕರಣಗಳಲ್ಲಿ ವ್ಯಕ್ತಿಯು ಕೋಮಾ ದಲ್ಲಿದ್ದ; ಹಲವು ದಶಕಗಳ ನಂತರ ಎಚ್ಚರಗೊಂಡ ಎಂಬ ಸರಳ ತೀರ್ಮಾನಕ್ಕೆ ಬರಬಹುದು. ಆದರೆ ವೈದ್ಯರ ದೃಷ್ಟಿಯಲ್ಲಿ ನಾವು ಕೋಮ ಎಂದು ಭಾವಿಸುವ ಸ್ಥಿತಿಯು ವಾಸ್ತವದಲ್ಲಿ ಕೋಮ ಅಲ್ಲದಿರ ಬಹುದು. ಹಾಗಾಗಿ ನರವೈದ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿರು ವವರನ್ನು ನಾಲ್ಕು ಗುಂಪು ಗಳಲ್ಲಿ ವರ್ಗೀಕರಿಸುವರು.

ಕೋಮಾ: ಇದು ಅತೀವವಾದ ಮತ್ತು ದೀರ್ಘಕಾಲದ ಪ್ರಜ್ಞಾಹೀನ ಸ್ಥಿತಿ. ರೋಗಿಯು ಗಾಢ ನಿದ್ರೆ ಯಲ್ಲಿದ್ದಂತೆಯೇ ಕಾಣುತ್ತಾನೆ. ರೋಗಿಯನ್ನು ಎಚ್ಚರಿಸಲು ಸಾಧ್ಯವಿಲ್ಲ. ಯಾವುದೇ ಬಾಹ್ಯ ಪ್ರಚೋದನೆಗಳಿಗೆ ಅರ್ಥಪೂರ್ಣವಾಗಿ ಪ್ರತಿಕ್ರಿಯಿಸುವುದಿಲ್ಲ. ಇದು ಸಹಜವಾಗಿ ಸಂಘಟಿಸ ಬಹುದು ಹಾಗೂ ಕೆಲವು ಅಪರೂಪದ ಪ್ರಕರಣಗಳಲ್ಲಿ ವೈದ್ಯರೇ ಕೋಮಾವನ್ನು ಪ್ರಚೋದಿಸ ಬಹುದು.

ಮೈಕೆಲ್ ಶುಮೇಕರ್: ವೈದ್ಯಕೀಯ ಪ್ರೇರಿತ ಕೋಮಾ (ಮೆಡಿಕಲಿ ಇಂಡ್ಯೂಸ್ಡ್ ಕೋಮ್). ಶುಮೇಕರ್ ಅವರ ಪ್ರಕರಣವು ‘ವೈದ್ಯಕೀಯವಾಗಿ ಪ್ರೇರಿತ ಕೋಮಾ’ ಅಥವಾ ‘ಬಾರ್ಬಿಚು ರೇಟ್ಕೋಮಾ’ ಎಂಬ ತಂತ್ರಕ್ಕೆ ಅತ್ಯುತ್ತಮ ಉದಾಹರಣೆ. ಇದು ಆಕಸ್ಮಿಕವಾಗಿ ಸಂಭವಿಸುವ ಕೋಮಾಗಿಂತ ಭಿನ್ನ.

ತಲೆಗೆ ಗಂಭೀರವಾದ ಪೆಟ್ಟು ಬಿದ್ದಾಗ ಮಿದುಳಿನಲ್ಲಿ ರಕ್ತಸ್ರಾವವಾಗಿ ಅಥವಾ ಉರಿಯೂತದಿಂದ ಮಿದುಳಿನ ಜೀವಕೋಶಗಳು ಸಾಯುವ ಸಾಧ್ಯತೆ ಇರುತ್ತದೆ. ಮಿದುಳಿನ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಮೂಲಕ (ಇಂಡ್ಯೂಸ್ಡ್ ಕೋಮ್), ಮಿದುಳಿಗೆ ಬೇಕಾಗುವ ಆಮ್ಲಜನಕ ಮತ್ತು ರಕ್ತದ ಹರಿವಿನ ಬೇಡಿಕೆಯನ್ನು ಕಡಿಮೆ ಮಾಡುವರು. ಇದರಿಂದ ಮಿದುಳಿನ ಒಳಭಾಗದಲ್ಲಿ ಉಂಟಾಗುವ ಒತ್ತಡವನ್ನು ನಿಯಂತ್ರಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ. ಇದು ಗುಣಪಡಿಸುವ ಕ್ರಿಯೆಯಲ್ಲ, ಬದಲಾಗಿ ಮಿದುಳಿನ ಹೆಚ್ಚಿನ ಹಾನಿಯನ್ನು ತಡೆಯುವ ಒಂದು ರಕ್ಷಣಾತ್ಮಕ ಕ್ರಮವಾಗಿದೆ.

ಸಸ್ಯಕ ಸ್ಥಿತಿ (ವೆಜಿಟೇಟಿವ್ ಸ್ಟೇಟ್): ಕೋಮಾದಲ್ಲಿದ್ದ ವ್ಯಕ್ತಿಯು ಕಣ್ಣು ಎಚ್ಚರ-ನಿದ್ರೆಯ ಅವಸ್ಥೆಯನ್ನು ಮರಳಿ ಪಡೆಯಬಹುದು. ಅಂದರೆ ಬೆಳಗಾದಾಗ ಎಚ್ಚರವಾಗಿ ಕಣ್ಣು ಬಿಡಬಹುದು. ಆದರೆ ಆ ನೋಟದಲ್ಲಿ ಜೀವವಿರುವುದಿಲ್ಲ. ತಮ್ಮ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಯಾವುದೇ ಅರಿವು ಇರುವುದಿಲ್ಲ. ಇಲ್ಲಿ ‘ಸಸ್ಯಕ- ವೆಜಿ ಟೇಟಿವ್’ ಎಂದರೆ ಉಸಿರಾಟ, ಹೃದಯ ಬಡಿತದಂತಹ ಸ್ವಯಂಚಾಲಿತ ದೇಹಕ್ರಿಯೆಗಳು ಮಾತ್ರ ಉಳಿದುಕೊಂಡಿರುತ್ತವೆ ಎಂದರ್ಥ.

ಟೆರ್ರಿ ಶಿಯಾವೋ: ಇವರ ಪ್ರಕರಣವು ಕೇವಲ ವೈದ್ಯಕೀಯವಾಗಿ ಅಲ್ಲದೆ, ನೈತಿಕ ಮತ್ತು ಕಾನೂನು ದೃಷ್ಟಿಯಿಂದ ಇತಿಹಾಸ ನಿರ್ಮಿಸಿತು. 1990ರಲ್ಲಿ ಹೃದಯಾಘಾತದಿಂದ ಮಿದುಳಿಗೆ ಆಕ್ಸಿಜನ್ ಪೂರೈಕೆಯು ಸ್ಥಗಿತಗೊಂಡಿದ್ದರಿಂದ ಅವರ ಮಿದುಳಿನ ತೊಗಟೆಯು (ಸೆರೆಬ್ರಲ್ ಕಾರ್ಟೆಕ್ಸ್ -ಯೋಚನೆ, ಪ್ರeಯನ್ನು ನಿಯಂತ್ರಿಸುವ ಭಾಗ) ಶಾಶ್ವತವಾಗಿ ಹಾನಿಗೊಳಗಾಯಿತು. ಆದರೆ ಮಿದುಳಿನ ಕಾಂಡ (ಬ್ರೈನ್ ಸ್ಟೆಮ್) ಕಾರ್ಯನಿರ್ವಹಿಸುತ್ತಿದ್ದರಿಂದ ಅವರ ಕಣ್ಣು ತೆರೆಯುವಿಕೆ, ಉಸಿರಾಟ, ಮತ್ತು ಜೀರ್ಣ ಕ್ರಿಯೆಗಳು ಸರಾಗವಾಗಿ ನಡೆಯುತ್ತಿತ್ತು.

ಪ್ರಜ್ಞೆಯಲ್ಲಿ ಇಲ್ಲದ ವ್ಯಕ್ತಿಯೊಬ್ಬರಿಗೆ ಕೃತಕವಾಗಿ ಅನ್ನನಾಳದ ಮೂಲಕ ಆಹಾರ ನೀಡುವುದನ್ನು ಮುಂದು ವರಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಅಮೆರಿಕಾದ ನ್ಯಾಯಾಲಯಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಅಂತಿಮವಾಗಿ, ಇದು ‘ಬದುಕುವ ಹಕ್ಕು’ (ರೈಟ್ ಟು ಲಿವ್) ಕುರಿತಾದ ಜಾಗತಿಕ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಕನಿಷ್ಠ ಜಾಗೃತ ಸ್ಥಿತಿ (ಮಿನಿಮಲಿ ಕಾನ್ಷಿಯಸ್ ಸ್ಟೇಟ್): ಈ ಸ್ಥಿತಿಯಲ್ಲಿ ವ್ಯಕ್ತಿಗೆ ತನ್ನ ಪರಿಸರದ ಬಗ್ಗೆ ಅಲ್ಪ ಪ್ರಮಾಣದ ಅರಿವು ಇರುತ್ತದೆ. ಅವರು ಸರಳ ಆಜ್ಞೆಗಳನ್ನು ಪಾಲಿಸಬಹುದು, ವಸ್ತುಗಳನ್ನು ಹಿಡಿಯಲು ಪ್ರಯತ್ನಿಸಬಹುದು ಅಥವಾ ನಗುವಿನಂತಹ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡಬಹುದು. ಆದರೆ ಇದು ಸ್ಥಿರವಾಗಿರುವುದಿಲ್ಲ.

ಟೆರ್ರಿ ವ್ಯಾಲೆಸ್: ಟೆರ್ರಿ ವ್ಯಾಲೆಸ್ ಅವರ ಪ್ರಕರಣವು ಮಿದುಳಿನ‌ ಪುನರ್ವಿನ್ಯಾಸಕ್ಕೆ (ಪ್ಲಾಸ್ಟಿಸಿಟಿ. ಮಿದುಳು ಹೊಸ ಹೊಸ ನರಸಂಪರ್ಕಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯ) ಒಂದು ನೈಜ ಸಾಕ್ಷಿ. ಬಹುತೇಕ ವೈದ್ಯರು ಟೆರ್ರಿ ವ್ಯಾಲೆಸ್ ಅವರು ಎಂದಿಗೂ ಮಾತನಾಡುವುದಿಲ್ಲ ಎಂದು ಭಾವಿಸಿ ದ್ದರು. ಆದರೆ ಅವರ ಮಿದುಳು ನಿಧಾನವಾಗಿ ಹೊಸ ನರ ಸಂಪರ್ಕಗಳನ್ನು (ಆಕ್ಸಾನಲ್ ಸ್ಪ್ರೌಟಿಂಗ್) ಬೆಳೆಸಿಕೊಳ್ಳುವ ಮೂಲಕ ತನ್ನ ಹಾನಿಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿತು.

19 ವರ್ಷಗಳ ನಂತರ ಅವರು ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಅಮ್ಮ ಎಂದು ಕರೆದದ್ದು ಇಡೀ ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿತು. ಇದು ಕೋಮಾ ಅಥವಾ ವೆಜಿಟೇಟಿವ್ ಸ್ಥಿತಿಯಲ್ಲಿದ್ದ ರೋಗಿಗಳ ಮಿದುಳು ದೀರ್ಘಕಾಲದ ನಂತರವೂ ಚೇತರಿಸಿಕೊಳ್ಳುವ ಸಾಧ್ಯತೆಯನ್ನು ತೋರಿಸಿಕೊಟ್ಟಿತು.

ಸ್ವಬಂಧಿತ ಲಕ್ಷಣಾವಳಿ (ಲಾಕ್ಡ್-ಇನ್ ಸಿಂಡ್ರೋಮ್): ಇಲ್ಲಿ ವ್ಯಕ್ತಿಯು ಸಂಪೂರ್ಣ ಪ್ರಜ್ಞಾವಂತರಾಗಿರುತ್ತಾರೆ. ಅವರು ಆಲೋಚಿಸಬಲ್ಲರು. ಸುತ್ತಮುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ಮಿದುಳಿನ ಕಾಂಡವು ಪಾರ್ಶ್ವವಾಯುವಿಗೆ ತುತ್ತಾಗಿರುವ ಕಾರಣ, ಅವನು ತನ್ನ ಕಣ್ಣಿನ ರೆಪ್ಪೆಯನ್ನು ಹೊರತುಪಡಿಸಿ ಉಳಿದ ಯಾವುದೇ ಸ್ನಾಯುವನ್ನು ಸ್ವಯಮಿಚ್ಛೆಯಿಂದ ಚಲಿಸಲಾರ.

ಜೀನ್-ಡೊಮಿನಿಕ್ ಬಾಬಿ: ಇದು ಅತ್ಯಂತ ವಿಶಿಷ್ಟ ಮತ್ತು ತೀವ್ರ ಮಾನಸಿಕ ದುಸ್ಥಿತಿ. ಬಾಬಿ-ಯ ಮಿದುಳಿನ ಕಾಂಡಕ್ಕೆ ಲಕ್ವ ಹೊಡೆದಿತ್ತು. ಇದು ಮಿದುಳಿನ ಸೆರೆಬ್ರಲ್ ಕಾರ್ಟೆಕ್ಸ್ -ಯೋಚನೆ, ಪ್ರಜ್ಞೆಯನ್ನು ನಿಯಂತ್ರಿಸುವ ಭಾಗದೊಡನೆ- ಸಂಪರ್ಕವನ್ನು ಕಳೆದುಕೊಂಡಿತ್ತು. ಬಾಬಿ ಸಂಪೂರ್ಣವಾಗಿ ಎಚ್ಚರವಿದ್ದರು. ವೈದ್ಯರು, ಬಂಧುಬಾಂಧವರು ಮಾತನಾಡುವುದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರು, ಅರ್ಥಮಾಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಪ್ರತಿಕ್ರಿಯೆಯನ್ನು ಅಂದರೆ ಮಾತನಾಡಲು ಅಥವಾ ಕೈಕಾಲುಗಳನ್ನು ಅಡಿಸಲು ಆಗುತ್ತಿರಲಿಲ್ಲ.

ಬಾಬಿ ಅವರು ಒಂದು ಪವಾಡವನ್ನೇ ಮಾಡಿದರು. ಒಂದು ಅಕ್ಷರದ ನಂತರ ಇನ್ನೊಂದು ಅಕ್ಷರ ವನ್ನು ಆಯ್ಕೆ ಮಾಡಲು ತನ್ನ ಎಡಗಣ್ಣನ್ನು ಮಿಟುಕಿಸುವ ಮೂಲಕ ಒಂದು ಪೂರ್ತಿ ಪುಸ್ತಕ ವನ್ನು ರಚಿಸಿದರು. ಅವರು ಒಬ್ಬ ವ್ಯಕ್ತಿಯು ಊಹಿಸಲು ಸಾಧ್ಯವಾಗದ ಮಿತಿಗಳ ನಡುವೆಯೂ ಸೃಜನಶೀಲತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾದರು. ‘ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್ - ’ ಎನ್ನುವ ಪುಸ್ತಕವನ್ನು ಬರೆದರು. ಆ ಪುಸ್ತಕವನ್ನು ಆಧರಿಸಿ ಜೂಲಿಯನ್ ಸ್ನಾಬೆಲ್, ಅದೇ ಹೆಸರಿನ ಚಿತ್ರವನ್ನು ನಿರ್ದೇಶಿಸಿದರು. ಇದು ಮಾನವನ ಮನೋಬ ಲದ ಅತೀವ ದ್ಯೋತಕವಾಗಿದೆ.

ಸಾರಾಂಶ: ಮಿದುಳಿನ ಪ್ರeಹೀನ ಸ್ಥಿತಿಯ ವಿವಿಧ ಆಯಾಮಗಳನ್ನು ಗಮನಿಸಿದ ಮೇಲೆ ಎರಡು ಅಂಶಗಳು ಸ್ಪಷ್ಟವಾಗುತ್ತವೆ.

೧. ಮಿದುಳನ್ನು ನಾವು ಸೀಮಿತ ಪ್ರಮಾಣದಲ್ಲಿ ಮಾತ್ರ ಅರ್ಥ ಮಾಡಿಕೊಂಡಿದ್ದೇವೆ. ನಮಗಿನ್ನೂ ತಿಳಿಯದ ಅನೇಕ ನಿಗೂಢ ರಹಸ್ಯಗಳು ಮಿದುಳಿನಲ್ಲಿವೆ.

೨. ಪ್ರೀತಿ ಮತ್ತು ನಂಬಿಕೆಯ ಶಕ್ತಿ: ಕೋಮಕ್ಕೊಳಗಾದ ವ್ಯಕ್ತಿಯ ಮನೆಯವರು ಎಂತಹ ವಿಷಮ ಸ್ಥಿತಿಯಲ್ಲೂ ತಮ್ಮ ನಂಬಿಕೆಯನ್ನು ಕಳೆದುಕೊಳ್ಳದೆ, ದಶಕಗಳ ಕಾಲ ಮಾಡಿದ ಆರೈಕೆಯೇ, ಆ ರೋಗಿಗಳಿಗೆ ಹೊಸ ಜೀವನ ದೊರೆಯುವಂತೆ ಮಾಡಿತು. ಕೋಮಾ ಎನ್ನುವುದು ಬದುಕಿನ ಅಂತ್ಯವಲ್ಲ, ಅದೊಂದು ಸುಪ್ತ ಚೇತರಿಕೆಯ ಹಾದಿ ಎಂಬುದನ್ನು ಈ ಕಥೆಗಳು ಜಗತ್ತಿಗೆ ಸಾರಿದವು.

ಡಾ.ನಾ. ಸೋಮೇಶ್ವರ

View all posts by this author