ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಶಿಷ್ಟ ಸಂಸ್ಥೆ ಅಡಿಗಾಸ್ ಯಾತ್ರಾಗೆ ಇದೀಗ 32 ವರ್ಷದ ಸಂಭ್ರಮ.
ಕೆ.ನಾಗರಾಜ್ ಅಡಿಗ ಅವರ ಸಾರಥ್ಯದಲ್ಲಿ ಅಡಿಗಾಸ್ ಯಾತ್ರಾ ಲಕ್ಷಾಂತರ ಪ್ರವಾಸಿಗರಿಗೆ ದೇಶ- ವಿದೇಶಗಳ ಪ್ರವಾಸವನ್ನು ಅಚ್ಚುಕಟ್ಟಾಗಿ,ಯಾವುದಕ್ಕೂ ಕೊರತೆ ಇಲ್ಲದಂತೆ ನಡೆಸಿ ಕೊಟ್ಟಿದೆ. ಪ್ರವಾಸದಲ್ಲಿ ವಿನೂತನ ಅನುಭವ ಪಡೆಯಲೆಂದೇ, ಅಡಿಗಾಸ್ ಯಾತ್ರಾದವರ ಜತೆ ಹಲವು ಪ್ರವಾಸಿಗರು ಪ್ರವಾಸಕ್ಕೆ ಹೋಗುವುದುಂಟು! ಇಂತಹ ಉತ್ತಮ ಪ್ರವಾಸಿ ಅನುಭವ ನೀಡುವಲ್ಲಿ, ಕೆ.ನಾಗರಾಜ್ ಅಡಿಗ ಮತ್ತು ಅವರ ತಂಡದ ಮೂರು ದಶಕದ ಅನುಭವ ಸೇರಿದೆ. ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ, ಕುಂದಾಪುರ ತಾಲ್ಲೂಕಿನ ಕಟ್ಕೆರೆ, ನಾಗರಾಜ್ ಅಡಿಗರ ಹುಟ್ಟೂರು.
ಕಕ್ಕುಂಜೆ ಮೂಲದವರಾದ ಇವರು ನಂತರ ಬಂದು ನೆಲೆಸಿದ್ದು ಕೋಟೇಶ್ವರ ಸಮೀಪದ ಕಟ್ಕೆರೆಯಲ್ಲಿ. ಮಹಾಬಲ ಅಡಿಗ ಹಾಗೂ ವಾಗ್ದೇವಿ ಅಡಿಗರ ಮಗನಾಗಿ 1971ರಲ್ಲಿ ಜನನ. ಬಾಲ್ಯ ದಿಂದಲೂ ಚುರುಕುತನ ಹಾಗೂ ಅಸಾಧಾರಣ ಧೈರ್ಯದ ಅಡಿಗರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮುಗಿಸಿದ್ದು ಕೋಟೇಶ್ವರದಲ್ಲಿ. ಶಾಲಾದಿನಗಳಲ್ಲೇ ಬಹುಷಃ ಅವರ ಪ್ರವಾಸೋ ದ್ಯಮದ ಕನಸು ಅಂಕುರಿತವಾಗಿದ್ದು. ಪಠ್ಯ ಪುಸ್ತಕಗಳಲ್ಲಿ, ವಾಸ್ಕೊಡ ಗಾಮಾ ಭಾರತಕ್ಕೆ ಬಂದಿದ್ದು ಹೇಗೆ? ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯುತ್ತಿದ್ದ ಇಂಗ್ಲೆಂಡ್, ಅಮೇರಿಕಾ ಹಾಗೂ ಕೆನಡಾ ಮಧ್ಯದಲ್ಲಿ ಇರುವ ನಯಾಗಾರ ಜಲಪಾತ, ಆಸ್ಟ್ರೇಲಿಯಾದ ಹವಳ ದ್ವೀಪಗಳು ವಿವೇಕಾನಂದರ ಅಮೇರಿಕಾ ದಿಗ್ವಿಜಯ, ಸುಭಾಶಚಂದ್ರ ಬೋಸರ ಜರ್ಮನಿ, ಸಿಂಗಾಪುರದ ಪರ್ಯಟನೆ, ಸಾವರ್ಕರರ ಅಂಡ ಮಾನಿನ ಕರಾಳ ಜೈಲು ವಾಸ ಇದನ್ನೆಲ್ಲ ಪಠ್ಯ ಪುಸ್ತಕ ಗಳಲ್ಲಿ, ತರಂಗ, ಸುಧಾ ವಾರ ಪತ್ರಿಕೆಗಳಲ್ಲಿ ಬರುತ್ತಿದ್ದ ಪ್ರವಾಸ ಕಥನಗಳನ್ನು ಓದುವಾಗ ಈ ಎಲ್ಲಾ ಸ್ಥಳಗಳಿಗೆ ಹೋಗಬೇಕೆನ್ನಿಸುತ್ತಿತ್ತು ಅಂತ ಅಡಿಗರು ಹೇಳುತ್ತಿದ್ದರು.
ಹೊಸ ಹೆಜ್ಜೆ ಹೊಸ ಹಾದಿ ಮುಂದೆ ವಿದ್ಯಾಭ್ಯಾಸ ಮುಗಿಸಿದ ಅಡಿಗರು ಹೊಸದೊಂದು ಪ್ರಯತ್ನಕ್ಕೆ ಮುಂದಾದರು. ಆ ಕಾಲಕ್ಕೆ ಉಡುಪಿಯವರ ವ್ಯವಹಾರ ವೆಂದರೆ ಹೋಟೆಲ್ ಉದ್ಯಮ ಅನ್ನುವ ಕಾಲಕ್ಕೆ ಎಲ್ಲರಿಗಿಂತ ಭಿನ್ನವಾಗಿ ಅಡಿಯಿಟ್ಟ ಅಡಿಗರು 1994ರಲ್ಲಿ ಟ್ರಾವೆಲ್ಸ್ ಉಧ್ಯಮವನ್ನು ಆರಂಭಿಸಿದರು. ಪ್ರವಾಸವೆಂದರೆ ಬರಿ ತೀರ್ಥಕ್ಷೇತ್ರಗಳಿಗೆ ಸೀಮಿತವಾಗಿದ್ದ ಕಾಲವದು. ಮೊದಲು, ನೇಪಾಳ ಪ್ರವಾಸಕ್ಕೆ ಉತ್ತರ ಕರ್ನಾಟಕ ದಿಂದ 22 ಜನರನ್ನು ಕರೆದೊಯ್ದಿದ್ದು ಒಂದು ಸಾಹಸ. ಆದರೆ ಶ್ರಮಜೀವಿ ಅಡಿಗರ ಪ್ರಯತ್ನದಿಂದಾಗಿ, ಮೊತ್ತ ಮೊದಲ ನೇಪಾಳ ಪ್ರವಾಸ ಯಶಸ್ವಿ ಯಾಗಿತ್ತು. ಅಲ್ಲಿಂದ ಅಡಿಗರು ಹಿಂತಿರುಗಿ ನೋಡಿದ್ದೇ ಇಲ್ಲ. ಹೊಸ ಹೊಸ ಪ್ರಯತ್ನಗಳನ್ನು, ಸ್ಥಳಗಳನ್ನು ಪರಿಚಯಿಸಿ ಅದನ್ನು ಯಶಸ್ವಿಗೊಳಿಸುವಲ್ಲಿ ಅವರ ಪರಿ ಶ್ರಮ, ಸತತ ಅಧ್ಯಯನ, ವಿಶ್ವಾಸಾರ್ಹತೆ ಸರಿಸಾಟಿಯಿಲ್ಲದ್ದು. ಮುಂದಿನದ್ದೆಲ್ಲ ಈ ಸಾಧನೆಯ ಮೈಲಿಗಲ್ಲುಗಳು.
ಇದನ್ನೂ ಓದಿ: Adigas Yatra: ನೇಪಾಳಕ್ಕೆ ಅಡಿಗಾಸ್ ಯಾತ್ರಾ ವಿಶೇಷ ಪ್ರವಾಸ!
ಪ್ರವಾಸಿಗರ ಬೇಡಿಕೆ ಹೆಚ್ಚಿದಂತೆಲ್ಲ ಬೆಂಗಳೂರಿನಲ್ಲಿ ಅಡಿಗಾಸ್ ಸಂಸ್ಥೆ ಬಸವನಗುಡಿ, ವಿಜಯ ನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಹಾಗೂ ಹಾಸನದಲ್ಲಿ ತನ್ನ ಕಛೇರಿಗಳ ಮೂಲಕ ಯಶಸ್ವಿಯಾಗಿ ಪ್ರವಾಸಗಳನ್ನು ಪರಿಚಯಿಸಿ ಖ್ಯಾತಿಯನ್ನು ಪಡೆದಿದೆ.
ಈಗಾಗಲೇ 500ಕ್ಕೂ ಹೆಚ್ಚು ಪ್ರವಾಸಗಳು! ಅಡಿಗಾಸ್ ಸಂಸ್ಥೆಯು ಪ್ರವಾಸಿಗರ, ಯಾತ್ರಿಕರ ಅಭಿರುಚಿ ಹಾಗೂ ಬೇಡಿಕೆಗೆ ಅನುಗುಣವಾಗಿ 500ಕ್ಕೂ ಹೆಚ್ಚು ಪ್ರವಾಸಗಳನ್ನು ದೇಶಿಯ, ವಿದೇಶಿ, ಗ್ರಾಹಕಾನುಕೂಲಿತ ಹಾಗೂ ಮಧುಚಂದ್ರ ಪ್ರವಾಸಗಳು ಯೋಜಿಸಿದೆ. ವಿದೇಶಿ ಪ್ರವಾಸ ಗಳಲ್ಲಿ ಯುರೋಪ್, ಯುಕೆ, ಆಸ್ಟ್ರೇಲಿಯಾ, ದುಬೈ, ಇಂಡೋನೆಷಿಯಾ, ಸಿಂಗಾಪುರ್, ಮಲೇಷಿಯಾ, ಥೈಲ್ಯಾಂಡ್, ಬಾಲಿ, ವಿಯಟ್ನಾಮ್, ಕಾಂಬೊ ಡಿಯಾ, ಹಾಂಕಾಂಗ್ -ಮಕಾವು, ಸ್ಕಾಂಡೀನೇವಿ ಯನ್ ಕಂಟ್ರಿಸ್ ಜಪಾನ್, ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ಪ್ರವಾಸಗಳು ಅಪಾರ ಜನ ಮನ್ನಣೆಯನ್ನುಗಳಿಸಿವೆ. ಮೆಚ್ಚುಗೆಗೆ ಕಾರಣಗಳೇನು? ಕರ್ನಾಟಕದ ಹಲವು ಪ್ರವಾಸಿಗರು ಅಡಿಗಾಸ್ ಯಾತ್ರಾವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ.
ಸಹ ಪ್ರಯಾಣಿಕರು ಕರ್ನಾಟಕದವರೇ ಆಗಿದ್ದು, ಭಾಷೆ, ಸಂಸ್ಕೃತಿ ಹಾಗೂ ಉಟೋಪಹಾರ ದಲ್ಲಿ ಸಾಮ್ಯತೆ ಇರುವುದರಿಂದ ಪ್ರವಾಸವೂ ಯಶಸ್ವಿಯಾಗುತ್ತದೆ. ವಿಶ್ವದರ್ಜೆಯ ಹೆಸರಾಂತ ಹೋಟೆಲ್ ಗಳಲ್ಲಿ ವಾಸ್ತವ್ಯ, ಸುಖಾಸೀನ, ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣ, ಕನ್ನಡ ಬಲ್ಲ ಅನುಭವೀ ಟೂರ್ ಮ್ಯಾನೇಜರ್, ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮೊದಲೇ ಕಾದಿರಿಸಿದ ಉತ್ತಮ ಊಟ ಉಪಹಾರಗಳು ಇವೆಲ್ಲ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಂತೆಯೇ, ಪ್ರತಿಯೊಬ್ಬ ಪ್ರವಾಸಿಗನೂ ಖಡ್ಡಾಯವಾಗಿ ಪಾವತಿಸಬೇಕಾದ ಡ್ರೈವರ್ ಟಿಪ್ಸ್, ಗೈಡ್ ಚಾರ್ಜಸ್, ಟ್ರಾವೆಲ್ ಇನ್ಸೂರೆನ್ಸ್, ವೀಸಾ ಎಲ್ಲವೂ ಒಳಗೊಂಡ ಪ್ರವಾಸಿದರ ಮತ್ತು ಪ್ರಮುಖ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನೂ ಸಂಸ್ಥೆ ವಿಧಿಸದೇ ಪ್ರವಾಸಿಗರ ಮೆಚ್ಚುಗೆಯನ್ನು ಗಳಿಸಿದೆ. ಮತ್ತಷ್ಟು ಹೊಸ ತಾಣಗಳು ಅಡಿಗಾಸ್ ಯಾತ್ರಾ, ಹೊಸ ಹೊಸ ಪ್ರವಾಸಿ ಯೋಜನೆಗಳನ್ನು ಪರಿಚಯಿಸುತ್ತಲೇ ಬಂದಿದೆ. ಅಂತೆಯೇ ಈ ಬಾರಿ ‘ಡೊಮೆಸ್ಟಿಕ್ ಫಿಕ್ಸ್‌ಡ್ ಡಿಪಾರ್ಚರ್’ ಎನ್ನುವ ಯೋಜನೆಯಡಿ ಭಾರತದಾದ್ಯಂತ ಪ್ರವಾಸಿ ತಾಣಗಳಿಗೆ ಪಂಚತಾರ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ವಸತಿ, ಐಷಾರಾಮಿ ವಾಹನಗಳಲ್ಲಿ ಪ್ರಯಾಣ, ನಿಖರ ಮಾಹಿತಿಯನ್ನೊಳಗೊಂಡ ಕಾರ್ಯಕ್ರಮ ಪಟ್ಟಿ, ಸುಸಜ್ಜಿತ ಹೋಟೆಲ್‌ಗಳಲ್ಲಿ ಉಟೋಪಹಾರ, ಗೈಡ್ ಗಳ ಸೌಲಭ್ಯವಿದ್ದು, ಪ್ರವಾಸವು ಸುಖಕರವಾಗಿರುತ್ತದೆ.
ಅಡಿಗಾಸ್ ಮೊದಲ ಆಯ್ಕೆ
ಅಡಿಗಾಸ್‌ನ ಪುಣ್ಯಕ್ಷೇತ್ರ ದರ್ಶನಗಳಾದ ಕಾಶಿ ಪ್ರಯಾಗ ಗಯಾ, ಮಾತೃಗಯಾ, ಬದರಿ ಇತ್ಯಾದಿ ಯಾತ್ರೆಗಳಲ್ಲಿ ಯಾತ್ರಿಕರಿಗೆ ಪಿತೃಕಾರ್ಯದ ವ್ಯವಸ್ಥೆ ಕನ್ನಡ ಬಲ್ಲ ಆಚಾರ್ಯರಿಂದ ಮಾಡಿಸ ಲಾಗುತ್ತದೆ. ಇದಲ್ಲದೇ ಪ್ರವಾಸ / ಯಾತ್ರೆಯ ಸಂದರ್ಭದಲ್ಲಿ ಬರುವ ಜನ್ಮದಿನ, ವಿವಾಹ ವಾರ್ಷಿಕೋತ್ಸವಗಳನ್ನು ಟೂರ್ ಮ್ಯಾನೇಜರ್ ಆಯೋಜಿಸಿವುದರಿಂದ ಪ್ರವಾಸಿಗರಿಗೆ ಮನೆಯವ ರೆಲ್ಲರಿಂದ ದೂರಾಗಿ, ಹೊಸ ಜನ, ಮಿತ್ರರೊಂದಿಗೆ ಅವರ ಜನ್ಮದಿನ, ವಾರ್ಷಿಕೋತ್ಸವ ಆಚರಣೆ ಮಾಡಿದಂತಾಗುತ್ತದೆ.
ವಿದೇಶಿ ಪ್ರವಾಸಕ್ಕೆ ಅಡಿಗಾಸ್ ಏಕೆ?
2 ವರ್ಷಗಳ ಅಪಾರ ವೃತ್ತಿಪರ ಅನುಭವ
ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಅನುಭವಿ ಸೇವಾ ಪೂರೈಕೆದಾರ ಮನ್ನಣೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ವಿಶ್ವಾಸಾರ್ಹ ಸಂಸ್ಥೆ.
ವಿಶ್ವ ದರ್ಜೆಯ ಹೋಟೆಲ್‌ಗಳಲ್ಲಿ ವಾಸ್ತವ್ಯ.
ಗುಣಮಟ್ಟದ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಊಟೋಪಚಾರ
ಪ್ರವಾಸಿ ತಾಣಗಳಿಗೆ ಪ್ರವೇಶ ಶುಲ್ಕ ಸಹಿತ ಭೇಟಿ
ಪರಿಣಿತ ಮತ್ತು ಅನುಭವಿ ಟೂರ್ ಮ್ಯಾನೇಜರ್
ಪ್ರವಾಸಿ ದರದಲ್ಲಿ ಕಡ್ಡಾಯವಾಗಿ ಕೊಡಬೇಕಾಗುವ ಡ್ರೈವರ್ ಟಿಪ್ಸ್, ಗೈಡ್ ಚಾರ್ಜ್, ವೀಸಾ ಮತ್ತು ಇನ್ಸೂರೆನ್ಸ್‌ಗಳನ್ನು ಒಳಗೊಂಡಿದೆ.
ಐಷಾರಾಮಿ, ಸುಖಾಸೀನ ವಾಹನ. ನಿಮ್ಮ ಆಯ್ಕೆಯ ದೇಶಿಯ ಅಥವಾ ವಿದೇಶಿ ಪ್ರವಾಸಿ ತಾಣಕ್ಕೆ, ನೀವು ಇಚ್ಛೆಸಿದ ದಿನಾಂಕದಲ್ಲಿ, ನಿಮ್ಮ ಆದಾಯಕ್ಕನುಗುಣವಾಗಿ ಪಂಚಾತಾರಾ ಸೌಲಭ್ಯ ಗಳೊಂದಿಗೆ, ವ್ಯವಸ್ಥೆ ಮಾಡುವ ಸಾಮರ್ಥ್ಯ ಅಡಿಗಾಸ್ ಸಂಸ್ಥೆ ಹೊಂದಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-26616678 / 7022259008 / 9449478944.
website: www.adigasyatra.com