ಪುರುಷೋತ್ತಮ್ ವೆಂಕಿ, ಚಿತ್ರದುರ್ಗ
ಮೊದಲೆಲ್ಲ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ, ಹಬ್ಬ- ಹರಿದಿನಗಳ ಸಂದರ್ಭದಲ್ಲಿ ಮನೆಯ ಗೋಡೆಗಳಿಗೆ ಸುಣ್ಣ ಬಳಿಯುವುದು ವಾಡಿಕೆಯಾಗಿತ್ತು. ಆದರೆ ಕಾಲ ಬದಲಾಗುತ್ತಾ ಹೋದಂತೆ, ಹೊಸ ಹೊಸ ತಂತ್ರಜ್ಞಾನಗಳು/ವಿಧಾನಗಳು/ಆಯ್ಕೆ ಗಳು ಲಭ್ಯವಾಗುತ್ತಿದ್ದಂತೆ, ತಲೆತಲಾಂತರದಿಂದ ಬಂದಿದ್ದ ದೇಸಿ ಕಸುಬುಗಳು ನಿಧಾನ ವಾಗಿ ಮೂಲೆಗುಂಪಾಗತೊಡಗಿದವು.
ಅಂತೆಯೇ ‘ಸುಣ್ಣ ಹೊಡೆಸುವಿಕೆ’ ಕೂಡ ಇಂದು ಕಣ್ಮರೆಯಾಗುತ್ತಿದೆ. ಇವತ್ತಿನ ದುಬಾರಿ ಮತ್ತು ಫ್ಯಾಷನ್ ಯುಗದಲ್ಲಿ ಜನರು ಇನ್ನಷ್ಟು ಚಿತ್ತಾಕರ್ಷಕ ಮತ್ತು ವರ್ಣರಂಜಿತ ಆಯ್ಕೆ ಗಳನ್ನು ಇಷ್ಟಪಡುತ್ತಿರುವುದರಿಂದ, ಜೀವನೋಪಾಯಕ್ಕಾಗಿ ಹಿಂದಿನಿಂದಲೂ ನೆಚ್ಚಿ ಕೊಂಡಿದ್ದ ‘ದೇಸಿ ಲೇಪ’ದ ಉದ್ಯೋಗಗಳಿಂದ ಬದುಕು ಸಾಗಿಸುವುದು ಅಸಾಧ್ಯವಾಗಿದೆ. ಇದನ್ನು ಅರಿತ ಬಹುತೇಕರು ಪರ್ಯಯ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ.
ಇವರ ಪೈಕಿ ಕಲ್ಲು ಸುಟ್ಟು ಸುಣ್ಣ ತಯಾರು ಮಾಡುವ ಸುಣ್ಣಗಾರರು ಕೂಡ ಹೊರತಾ ಗಿಲ್ಲ. ಬೇಡಿಕೆಯಿಲ್ಲದ ಕಾರಣದಿಂದಾಗಿ, ಈಗ ಸುಣ್ಣದ ಮಾರಾಟ ಕಾಣಿಸುತ್ತಿಲ್ಲ. ದೇಸಿ ಸುಣ್ಣಗಳನ್ನು ಖರೀದಿಸುವವರೇ ಇಲ್ಲ ಎಂದ ಮೇಲೆ ಅದನ್ನು ತಯಾರು ಮಾಡುವವರು ತಾನೆ ಏನು ಮಾಡಬೇಕು? ದೂರದ ಊರುಗಳಿಂದ ಮಣ್ಣಿನಡಿ ಸಿಗುವ ಕಲ್ಲುಗಳನ್ನು ತಂದು ಭಟ್ಟಿ ಕಟ್ಟಿ ಸುಟ್ಟು ಶ್ರಮಪಟ್ಟರೂ ಅದರಿಂದ ಯಾವುದೇ ಲಾಭವಿಲ್ಲ ಎನ್ನುವು ದಾದರೆ ಆ ಕೆಲಸವನ್ನು ಏಕೆ ಮಾಡಬೇಕು? ಹೀಗಾಗಿ ಬಹಳಷ್ಟು ವೃತ್ತಿ ನಿರತರು ಅದರಿಂದ ವಿಮುಖವಾಗಿ ಬೇರೆ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ.
ಇದನ್ನೂ ಓದಿ: Vidyashankar Sharma Column: ಲೌಕಿಕ ಸಮಸ್ಯೆಗಳಿಗೆ ಅಲೌಕಿಕ ಪರಿಹಾರ
ಸಂಕಷ್ಟದ ಸುಳಿಯಲ್ಲಿರುವ ರಾಜ್ಯದ ಬಹುತೇಕ ಸುಣ್ಣಗಾರರು ಇತ್ತೀಚಿನ ದಿನಗಳಲ್ಲಿ ವೃತ್ತಿಯನ್ನು ತೊರೆದಿದ್ದಾರೆ. ಕಾರಣ ಈ ಕಸುಬಿನಿಂದ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬುದು ಗೊತ್ತಾಗಿದೆ. ಜತೆಗೆ ಜನರೂ ಕಾರ್ಖಾನೆ ಸುಣ್ಣದತ್ತ ಮುಖ ಮಾಡಿ ರುವುದರಿಂದ ಮುಂದೆ ಇದರಿಂದ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬಂತಾಗಿದೆ.
ಇದನ್ನು ತಿಳಿದ ಮೇಲೆ ಕಸುಬನ್ನು ಮುಂದುವರಿಸಲು ಯುವಜನರೂ ಮುಂದೆ ಬರುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸುಣ್ಣ ತಯಾರು ಮಾಡುವ ಕೆಲಸಕ್ಕೆ ವಿದಾಯ ಹೇಳಲಾ ಗುತ್ತಿದೆ. ಇದರೊಟ್ಟಿಗೆ, ಸುಣ್ಣ ಸುಡುವ ಭಟ್ಟಿಗಳಿಂದ ನಿರಂತರವಾಗಿ ಹೊಮ್ಮುವ ಹೊಗೆಯಿಂದ ಆರೋಗ್ಯಕ್ಕೆ ಹಾನಿಯಾಗುವ ಕಾರಣ ಸ್ಥಳೀಯರು ಹಾಗೂ ಸುಣ್ಣ ಸುಡು ವವರ ನಡುವೆ ನಿತ್ಯ ಸಂಘರ್ಷ ಕಾಣಬರುತ್ತಿದೆ. ಈಗಲೂ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ, ಅಲ್ಲಿನ ಭಟ್ಟಿಗಳಲ್ಲಿ ಹೊಗೆಯಾಡುತ್ತಿಲ್ಲ.
ಕಾರಣ ಹಿಂದಿನಿಂದಲೂ ವೃತ್ತಿ ಮಾಡಿಕೊಂಡು ಬಂದವರಿಗೆ ಈಗ ವಯಸ್ಸಾಗಿದೆ. ಇನ್ನು ಕೆಲವರು ಮೃತಪಟ್ಟಿzರೆ. ಈಗಿನವರಿಗೆ ಅದನ್ನು ನಿಭಾಯಿಸುವುದು ಕಷ್ಟವಾಗಿದೆ. ಇಷ್ಟ ಕ್ಕೂ ಸುಣ್ಣಗಾರರು ಸುಣ್ಣ ತಯಾರಿಸುವ ಕೆಲಸದಿಂದ ಏಕೆ ದೂರವಾದರು ಎಂಬುದನ್ನು ನೋಡುತ್ತಾ ಹೋದರೆ ಅವರ ಕೆಲಸದ ಹಿಂದಿರುವ ಸಂಕಷ್ಟಗಳು ಎದ್ದು ಕಾಣಿಸುತ್ತವೆ.
ಈ ಕೆಲಸದಿಂದ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡುವುದು ಕಷ್ಟ ಎಂಬುದು ಗೊತ್ತಾಗಿ ಬಿಡುತ್ತದೆ. ಹಿಂದಿನ ಕಾಲದಲ್ಲಿ ಎಲೆ-ಅಡಕೆ ಸೇವನೆಯ ವೇಳೆ ಮತ್ತು ಮನೆಗಳ ಗೋಡೆಗೆ ಬಳಿಯಲು, ಕೃಷಿ ಜಮೀನಿಗೆ ಇದೇ ಸುಣ್ಣವನ್ನು ಬಳಸುತ್ತಿದ್ದರು. ಹೀಗಾಗಿ ಸುಣ್ಣಗಾರರು ತಯಾರಿಸುವ ಸುಣ್ಣಕ್ಕೆ ಆಗ ಬೇಡಿಕೆಯಿತ್ತು. ಈಗ ಫ್ಯಾಕ್ಟರಿಗಳು ಬಂದಿವೆ.
ಎಲ್ಲದಕ್ಕೂ ಕಂಪನಿ ಸುಣ್ಣ ವನ್ನೇ ಬಳಸುತ್ತಾರೆ. ಇನ್ನು ಸುಣ್ಣ ತಯಾರಿಸಲು ಬೇಕಾಗುವ ಕಲ್ಲುಗಳು ಸ್ಥಳೀಯವಾಗಿ ಸಿಗುವುದಿಲ್ಲ. ಹೆಚ್ಚುವರಿ ಹಣ ನೀಡಿ ಅವುಗಳನ್ನು ದೂರದೂರಿ ನಿಂದ ತರಬೇಕಾಗುತ್ತದೆ. ಅಷ್ಟೇ ಅಲ್ಲದೆ ಅವನ್ನು ಬೇಯಿಸಲು ಸೌದೆ ಬೇಕಾಗುತ್ತದೆ. ಹಿಂದಿನ ದಿನಗಳಲ್ಲಿ ಸುಣ್ಣದ ಕಲ್ಲು ಮತ್ತು ಸೌದೆ ಸ್ಥಳೀಯವಾಗಿ ಸಿಗುತ್ತಿತ್ತು.
ಹೀಗಾಗಿ ನಷ್ಟವಾಗುತ್ತಿರಲಿಲ್ಲ. ಆದರೆ ಈಗ ಎಲ್ಲವನ್ನು ಮತ್ತೊಂದೆಡೆಯಿಂದ ತರಬೇಕಾಗು ತ್ತಿದ್ದು, ಬಂಡವಾಳ ಸುರಿದು ಸುಣ್ಣ ತಯಾರಿಸುವುದು ಸವಾಲಾಗಿದೆ. ಒಂದು ಟ್ರ್ಯಾಕ್ಟರ್ ಸುಣ್ಣದ ಕಲ್ಲುಗಳನ್ನು ಬೇಯಿಸಿದರೆ 100-110 ಮೂಟೆ ಸುಣ್ಣ ಬರುತ್ತದೆ.
ಇದರಲ್ಲಿ ಕಚ್ಚಾ ಸುಣ್ಣ ಕಳೆದು ಶುದ್ಧವಾದ ಹರಳು ಸುಣ್ಣ 70-80 ಮೂಟೆ ಸಿಗುತ್ತದೆ ಯಂತೆ. ಇನ್ನು ಕನಿಷ್ಠ 30 ಮೂಟೆ ಸುಣ್ಣ ಬೇಯಿಸಲು 10 ಪ್ಲ್ಯಾಸ್ಟಿಕ್ ಚೀಲಗಳಷ್ಟು ಸೌದೆ, ಇದ್ದಿಲು ಬೇಕಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಇದೆಲ್ಲವನ್ನು ಹಣ ಕೊಟ್ಟು ಖರೀದಿಸ ಬೇಕು. ಇಷ್ಟೆಲ್ಲ ಕಷ್ಟಪಟ್ಟು ಸುಣ್ಣ ತಯಾರಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಏಕೆಂದರೆ ಸುಣ್ಣಕ್ಕೆ ಮೊದಲಿನಂತೆ ಬೇಡಿಕೆಯಿಲ್ಲ ಎಲೆ-ಅಡಕೆ ತಿನ್ನುವವರು ಮಾತ್ರ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಚಿಕ್ಕ ಪೊಟ್ಟಣ ಮಾಡಿ ಮಾರಾಟ ಮಾಡಬೇಕು. ಸಂತೆ ಗಳಿಗೆ ಹೋಗಿ ಮಾರಿದರೂ ಸುವಾಸನೆ ಮತ್ತು ಬಣ್ಣದ ಆಧುನಿಕ ಸುಣ್ಣಕ್ಕೆ ಪೈಪೋಟಿ ನೀಡುವುದು ಕಷ್ಟವಾಗುತ್ತಿದೆ. ಈ ಹಿಂದೆ ರೈತರು ಕೃಷಿ ಕಾರ್ಯದಲ್ಲಿ ಬಳಸಲು ಸುಣ್ಣ ವನ್ನು ಖರೀದಿಸುತ್ತಿದ್ದರು. ಆದರೆ ಫ್ಯಾಕ್ಟರಿಯ ಸುಣ್ಣ ಕಡಿಮೆ ದರದಲ್ಲಿ ದೊರೆಯುವು ದರಿಂದ ಅಂಗಡಿಗಳಿಂದ ಗೊಬ್ಬರ ಖರೀದಿಸುವಾಗಲೇ ಸುಣ್ಣವನ್ನೂ ರೈತರು ಕೊಳ್ಳುವು ದರಿಂದ ದೇಸಿ ಸುಣ್ಣಕ್ಕೆ ಬೇಡಿಕೆ ಕಡಿಮೆಯಾಗಿದೆ.
ಹೀಗೆ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿರುವ ಸುಣ್ಣಗಾರರು ತಮ್ಮ ವೃತ್ತಿಗೆ ವಿದಾಯ ಹೇಳುತ್ತಿದ್ದಾರೆ. ಇದರಿಂದಾಗಿ ಮುಂದಿನ ತಲೆಮಾರಿಗೆ ಸುಣ್ಣವನ್ನು ಹೀಗೂ ತಯಾರಿಸು ತ್ತಿದ್ದರು ಎಂಬುದು ಕೌತುಕವಾಗಿ ಉಳಿಯಲಿದೆ.