ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಕ್ಕಳಿರಲವ್ವ ಮನೆತುಂಬ

ಮನುಷ್ಯನ ಜೀವಿತಾವಧಿ 1950ರಲ್ಲಿ ಇದ್ದಂತೆ 35.21 ವರ್ಷಗಳು, ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಯಿಂದಾಗಿ 2025ರಲ್ಲಿ ಒಬ್ಬ ಮನುಷ್ಯನ ಸರಾಸರಿ ಆಯಸ್ಸು 70.82 ವರ್ಷಗಳು. 75 ವರ್ಷಗಳಲ್ಲಿ ಜೀವಿ ತಾವಧಿ ಎರಡು ಪಟ್ಟು ಹೆಚ್ಚಾದಂತಾಯಿತು. ವೃದ್ಧರ ಸಂಖ್ಯೆ 153 ಮಿಲಿಯ, 2050ರ ಹೊತ್ತಿಗೆ 347 ಮಿಲಿಯ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ

ಮಿರ್ಲೆ ಚಂದ್ರಶೇಖರ

ಆಂಧ್ರಪ್ರದೇಶದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದನ್ನು ತಡೆಯಲು ಹಾಗೂ ಯುವ ಜನಸಂಖ್ಯೆಯನ್ನು ಹೆಚ್ಚಿಸಲು ಮುಖ್ಯಮಂತ್ರಿಗಳು ಮಹತ್ವದ ಘೋಷಣೆ ಮಾಡಿದ್ದಾರೆ. ಹೊಸ ಜನಸಂಖ್ಯಾ ನೀತಿಯಡಿಯಲ್ಲಿ ಮೂರನೇ ಮಗು ಜನಿಸಿದರೆ ರೂ.30000, ನಾಲ್ಕನೇ ಮಗು ಜನಿಸಿದರೆ ರೂ.40000 ನಗದು ಪ್ರೋತ್ಸಾಹ ಧನ.

ಒಂದು ಕಾಲದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಇನ್ನಿಲ್ಲದ ಒತ್ತು ನೀಡಿದ್ದೆವು. ಆಗಲೂ ಆಮೀಷ ಗಳಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಮತ್ತೆ ಮಕ್ಕಳೇ ನಮ್ಮ ಆಸ್ತಿ ಮತ್ತು ಭವಿಷ್ಯದ ಸಂಪತ್ತು ಎನ್ನುವ ಹಂತಕ್ಕೆ ಬಂದಿದ್ದೇವೆ.

ಸರಕಾರ ಕೊಡುವ ಕೇವಲ ಮೂವತ್ತು- ನಲವತ್ತು ಸಾವಿರಕ್ಕೆ ಮಕ್ಕಳನ್ನು ಮಾಡಿಕೊಳ್ಳುವ ಇರಾದೆ ಯಾವ ಪೋಷಕರಿಗೂ ಇರುವುದಿಲ್ಲ. ಮಗು ಮಾಡಿಕೊಳ್ಳುವಾಗ ಕೊಡುವ ಈ ಅಲ್ಪ ಹಣದಿಂದ ಮಗುವಿನ ಭವಿಷ್ಯವನ್ನು ರೂಪಿಸಲಾಗುತ್ತದೆಯೇ? ಹೋಗಲಿ ಆಸ್ಪತ್ರೆ ಖರ್ಚಿಗಾದರೂ ಸಾಲು ತ್ತದೆಯೇ? ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಅವೈಜ್ಞಾನಿಕವಾಗಿ ಘೋಷಿ ಸುವ ಉಚಿತ ಯೋಜನೆಗಳು ಕೂಡ ಇದೇ ನಿಟ್ಟಿನಲ್ಲಿ ಸಾಗುತ್ತಿವೆ. ದೇಶ ಮತ್ತು ರಾಜ್ಯ ಗಳನ್ನು ದಿವಾಳಿತನಕ್ಕೆ ದೂಡುವ ಆಶ್ವಾಸನೆಗಳು.

ಇದನ್ನೂ ಓದಿ: Mirley Chandrashekher Column: ಬೇಕಿರುವುದು ತಂತ್ರ ಕುತಂತ್ರ, ಹಿರೋಯಿಸಂ ಅಲ್ಲ !

ಕ್ರಿ.ಶ 100ರಲ್ಲಿ ಭಾರತದ ಜನಸಂಖ್ಯೆ 5.27 ಕೋಟಿ ಇದ್ದದ್ದು 1000ನೇ ಇಸವಿಯಲ್ಲಿ 8.67 ಕೋಟಿಗೆ ಏರಿತು, 2001ಕ್ಕೆ 102.86 ಕೋಟಿ, ಪ್ರಸ್ತುತ 147.54 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಮತ್ತೇಕೆ ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ?ರಾಜಕೀಯದಲ್ಲಿ ಲಾಭ ಇಲ್ಲದೆ ಏನನ್ನೂ ಮಾಡುವುದಿಲ್ಲ.

ಮನುಷ್ಯನ ಜೀವಿತಾವಧಿ 1950ರಲ್ಲಿ ಇದ್ದಂತೆ 35.21 ವರ್ಷಗಳು, ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಯಿಂದಾಗಿ 2025ರಲ್ಲಿ ಒಬ್ಬ ಮನುಷ್ಯನ ಸರಾಸರಿ ಆಯಸ್ಸು 70.82 ವರ್ಷಗಳು. 75 ವರ್ಷಗಳಲ್ಲಿ ಜೀವಿತಾವಧಿ ಎರಡು ಪಟ್ಟು ಹೆಚ್ಚಾದಂತಾಯಿತು. ವೃದ್ಧರ ಸಂಖ್ಯೆ 153 ಮಿಲಿಯ, 2050ರ ಹೊತ್ತಿಗೆ 347 ಮಿಲಿಯ ಎಂದು ಅಂದಾಜಿಸಲಾಗಿದೆ.

ಭಾರತದ ಫಲವತ್ತತೆ ದರವು 1950ರಲ್ಲಿ 6.20 ಇದ್ದದ್ದು ಈಗ 2ಕ್ಕಿಂತ ಕೆಳಗಿಳಿದಿದೆ, ಆಂಧ್ರಪ್ರ ದೇಶದಲ್ಲಿ ಫಲವತ್ತತೆಯ ದರವು 1.50ಕ್ಕೆ ಇಳಿದಿದೆ, ಒಂದು ಪ್ರದೇಶದ ಜನಸಂಖ್ಯೆ ಸ್ಥಿರವಾಗಿರಲು ಕನಿಷ್ಟ 2.10 ಇರಬೇಕು. ವಯಸ್ಸಾದವರಿಂದ ರಾಜ್ಯದ ಆರ್ಥಿಕತೆ ಮತ್ತು ಮಾನವ ಸಂಪನ್ಮೂಲ ಗಳ ಮೇಲೆ ಹೊಡೆತ ಬೀಳುವುದು.

ಕೇಂದ್ರ ಸರಕಾರದಲ್ಲಿ ಸುಮಾರು 68 ಲಕ್ಷ ನಿವೃತ್ತರು, ಅವರ ಕುಟುಂಬದವರು ಮತ್ತು ನಮ್ಮ ರಾಜ್ಯದಲ್ಲಿ ಸುಮಾರು 5 ಲಕ್ಷದಷ್ಟು ನಿವೃತ್ತರು ಪಿಂಚಣಿ ಪಡೆಯುತ್ತಿದ್ದಾರೆ. ಪಿಂಚಣಿ ಪಡೆಯು ವುದು ಹಕ್ಕು. ಆದರೆ ಈ ಹಂತದಲ್ಲಿ ಇವರಿಂದ ಕೊಡುಗೆ ತೀರಾ ಕಡಿಮೆ. ಮತ್ತೊಂದು ರಾಜಕೀಯ ಮಹತ್ವದ ಕಾರಣವೆಂದರೆ ಲೋಕಸಭಾ ಕ್ಷೇತ್ರಗಳ ಮರುವಿಂಗಣೆಯಲ್ಲಿ ಜನಸಂಖ್ಯೆ ನಿಯಂತ್ರಣ ದಿಂದ ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳಬಹುದು ಎಂಬ ಆತಂಕದಿಂದ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಲು ಆಂದ್ರ ಪ್ರದೇಶವು ಪ್ರೋತ್ಸಾಹಿಸುತ್ತಿರಬಹುದು.

ಪ್ರಕೃತಿಯ ವಿರುದ್ಧವಾಗಿ ನಡೆಯಬಾರದು. ಸರಕಾರಗಳು ಏನೂ ಮಾಡದೇ ಇದ್ದರೂ ಸಮತೋಲನ ಕಾಪಾಡಿಕೊಳ್ಳುವ ಶಕ್ತಿ ಪ್ರಕೃತಿಗೆ ಇದೆ. ಇತ್ತೀಚೆಗೆ ಕರೋನಾ ಸಂದರ್ಭದಲ್ಲಿ ಹೆಣಗಳು ಉರುಳಿದ್ದನ್ನು ನೋಡಿದ್ದೇವೆ. 147.54 ಕೋಟಿ ಜನಸಂಖ್ಯೆ ಸಾಕಲ್ಲವೇ? ಮುದುಕರನ್ನು ಅಭಿವೃದ್ಧಿಯ ದೃಷ್ಟಿಯಿಂದ ಟಾರ್ಗೆಟ್ ಮಾಡಿದರೆ ಯಶಸ್ವಿ ಆಗುತ್ತೇವೆ ಎನ್ನುವುದು ಭ್ರಮೆ.