ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Jagadeesh Maane Column: ಸುಳ್ಳು ಪ್ರಪೊಗಾಂಡ ಚಿತ್ರಗಳ ಮಧ್ಯೆ ಧುರಂಧರನ ಪ್ರತಿಬಿಂಬ

2016ರಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಕೆಲವೇ ದಿನಗಳ ಮೊದಲು ನೋಟ್‌ ಬ್ಯಾನ್ ಮಾಡಿದ್ದು? ಉತ್ತರ ಪ್ರದೇಶದ ದುಷ್ಟ ರಾಜಕಾರಣಿ ಅತೀಕ್ ಅಹ್ಮದ್‌ನನ್ನು ಬಂಧಿಸಿ ಜೈಲಿಗೆ ಹಾಕಿದ ಕಾರಣಗಳು? ನಿವೃತ್ತರಾಗಿದ್ದ ಅಜಿತ್ ದೊವಲ್‌ರು ಪುನಃ ಅಧಿಕಾರದಲ್ಲಿ ಮುಂದುವರಿಯಲು ಕಾರಣಗಳು? ಹೀಗೆ ನಮ್ಮೊಳಗಿನ ಈ ರೀತಿಯ ನೂರಾರು ಪ್ರಶ್ನೆಗಳಿಗೆಲ್ಲದಕ್ಕೂ ಈ ಸಿನಿಮಾದಲ್ಲಿ ಉತ್ತರ ಸಿಗುತ್ತದೆ.

ತೆರೆಯ ನೋಟ

ಡಾ.ಜಗದೀಶ ಮಾನೆ

ಧುರಂಧರ ಎನ್ನುವ ಸತ್ಯ ಘಟನೆಗಳ ಆಧಾರಿತವಾದ ಸಿನಿಮಾ ಜಗತ್ತಿನಾದ್ಯಂತ ಬಹಳ ದೊಡ್ಡ ದಾದ ಸದ್ದು ಮಾಡುತ್ತಿದೆ. ಅದು ಆರಂಭದಲ್ಲಿ ಸಣ್ಣ ಕಿಡಿಯಾಗಿ ಹೊತ್ತಿದ ಧುರಂಧರ ಇದೀಗ ಇಡೀ ಜಗತ್ತಿನಾದ್ಯಂತ ದೊಡ್ಡ ಜ್ವಾಲೆಗಳ ರೂಪದಲ್ಲಿ ಹಬ್ಬಿದೆ. ಈ ಚಿತ್ರವನ್ನು ಭಾರತೀಯ ಮಕ್ಕಳು, ಯುವಕರಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ನೋಡಲೇಬೇಕು.

ಯಾಕೆಂದರೆ ಧುರಂಧರ ಕೇವಲ ಒಂದು ಸಿನಿಮಾ ಮಾತ್ರವಲ್ಲ, ಅದು ಭಾರತ ಕಂಡ ಐತಿಹಾಸಿಕ ಕರಾಳ ದಿನಗಳ ಚರಿತ್ರೆಯಾಗಿದೆ. ಜನರ ಭಾವನೆಗಳನ್ನು ಬಡಿದೆಬ್ಬಿಸಿ ಭಾರತದ ಅಖಂಡತೆಯನ್ನು ಎತ್ತಿ ಹಿಡಿಯುವ ಚಿತ್ರವಾಗಿದೆ. ಕೆಲವು ಸಿನಿಮಾಗಳು ನೋಡಿದ ಕ್ಷಣಕ್ಕೆ ಮುಗಿದು ಹೋಗುತ್ತವೆ; ಆದರೆ ಕೆಲವು ಸಿನಿಮಾಗಳು ಮನಸ್ಸಿನಲ್ಲಿ ಬೆಂಕಿ ಹಚ್ಚಿ, ಚಿಂತನೆಯತ್ತ ದಿಕ್ಕು ತೋರಿಸುತ್ತವೆ.

ಅದೇ ‘ಧುರಂzsರ್’, ಈ ಚಿತ್ರದಲ್ಲಿನ ಪ್ರತಿ ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮತ್ತು ಇವತ್ತಿನ ನಮ್ಮ ಯುವಜನತೆಗೆ ಬೇಕಾಗಿರುವುದು ಕೇವಲ ಯಶಸ್ಸಿನ ಕಥೆಗಳಷ್ಟೆ ಅಲ್ಲ; ಸೋಲಿನ ನಡುವೆ ಮತ್ತೆ ಎದ್ದೇಳುವಂತೆ ಶಕ್ತಿ ತುಂಬಬಲ್ಲ ಸ್ಪೂರ್ತಿಯ ಕಥನ ಗಳು. ಈ ಧುರಂಧರ್ ಅಂಥದ್ದೇ ಸಂದೇಶಗಳನ್ನು ನೀಡಿದೆ.

ಪಾಕಿಸ್ತಾನದ ಭೂಗತ ಜಗತ್ತು ನಮ್ಮ ಮಗ್ಗಲು ಮುಳ್ಳಾಗಿ ಕಾಡುತ್ತಿರುವಂತಹ ರೀತಿ ಮತ್ತು ಭಾರತ ದ ಮೇಲೆ ಪಾಕಿಸ್ತಾನದ ಐಎಸ್‌ಐನ ನಿರಂತರ ಅಟ್ಯಾಕ್‌ಗಳೆಲ್ಲವನ್ನೂ ಸವಾಲಾಗಿ ಸ್ವೀಕರಿಸಿದ ನಮ್ಮ ಬೇಹುಗಾರಿಕಾ ‘ರಾ’ ಸಂಸ್ಥೆಯ ಹಲವಾರು ಏಜೆಂಟ್‌ಗಳ ಬಲಿದಾನಗಳನ್ನು ಹೃದಯಕ್ಕೆ ತಾಕುವಂತೆ ತೋರಿಸಿದ್ದಾರೆ.

ಇದನ್ನೂ ಓದಿ:Jagadeesh Maane Column: ಅದು ಭವ್ಯ ಕಾಲವಾಗಿತ್ತು...

ಇನ್ನು 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣ ಹೋಮದ ಗುರುತುಗಳು ಮತ್ತು 2014ಕ್ಕೂ ಮುಂಚಿನ ಐದಾರು ದಶಕಗಳ ರವರೆಗೆ ಘಟಿಸಿದ ಎಲ್ಲ ಘಟನೆಗಳು, ಭಾರತದಲ್ಲಿ ದೇಶ ವನ್ನು ತುಂಡರಿಸುವ ವಿದ್ಯಮಾನಗಳ ಬೇರುಗಳು ಮತ್ತು 2014ರಿಂದ 2025ರವರೆಗಿನ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ಆದಂತಹ ವಿದ್ಯಮಾನಗಳನ್ನು ಚಿತ್ರದ ಭಾಗ-2ರಲ್ಲಿ ಬಹಳ ಅದ್ಭುತವಾಗಿ ತೋರಿಸಿದ್ದಾರೆ.

ದೇಶಭಕ್ತರ ಮೈನವೆರೆಳಿಸುವ ಈ ಧುರಂಧರ ಚಿತ್ರವಂತೂ ಎಡಚರ ರಾಷ್ಟ್ರ ವಿರೋಧಿಗಳ ಎದೆ ಯಲ್ಲಿ ಮಾತ್ರ ನಡುಕ ಹುಟ್ಟಿಸಿದೆ ಬಿಟ್ಟಿಲ್ಲ. ಈ ಎಡಚರರ ಮನಸ್ಥಿತಿ ಹೇಗಿದೆ ಅಂದರೆ ಇವರಿಗೆಲ್ಲ ದೇಶದಲ್ಲಿ ರಾಷ್ಟ್ರಪ್ರೇಮ ಆಧಾರಿತವಾದ ಯಾವುದಾದರೊಂದು ಚಲನಚಿತ್ರ ಬಂತೆಂದರೆ ಸಾಕು, ಇವರ ಒಳಗೊಳಗೆ ಉರಿ ಶುರುವಾಗಿ ಆ ದೇಶ ವಿರೋಧಿ ಭಿಕಾರಿಗಳೆಲ್ಲರೂ ಒಟ್ಟಾಗಿ ಬೊಗಳೊದಕ್ಕೆ ಶುರುಮಾಡುತ್ತಾರೆ.

ಉದಾಹರಣೆ 2014ರಲ್ಲಿ ಮೋದಿ ಅವರು ಈ ದೇಶದ ಪ್ರಧಾನಿ ಆದ ಸಂದರ್ಭದಲ್ಲಿ, ರಾಮ ಮಂದಿರ ಉದ್ಘಾಟನೆಯಾದಾಗ ಮತ್ತು ದೇಶಭಕ್ತಿ ಆಧಾರಿತ ತಾಸ್ಕೆಂಟ್ ಪೈಲ, ಚಾವಾ, ಬಾಹುಬಲಿ, ಕೇರಳ ಫೈಲ್ಸ್ ಮತ್ತು ಕಾಶ್ಮೀರ್ ಫೈಲ್ಸ್ ಗಳಂತಹ ಚಿತ್ರಗಳು ಬಿಡುಗಡೆಯಾದಾಗ ಮತ್ತು ಪಾಶ್ಚಾತ್ಯ ಅನೇಕ ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳು ತಲೆಎತ್ತಿ ನಿಂತ ಸಂದರ್ಭಗಳು, ಹೀಗೆ ಭಾರತದಲ್ಲಿ ಹಿಂದುತ್ವಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಆದಾಗಲೆಲ್ಲ ಇಲ್ಲಿನ ಎಡಚರರೆಲ್ಲರೂ ಒಟ್ಟಾಗಿ ಸೇರಿಕೊಂಡು ಹೆಂಡ ಕುಡಿದ ಮಂಗನಂತೆ ವರ್ತಿಸಲು ಶುರು ಮಾಡುತ್ತಾರೆ.

ಈ ಧುರಂಧರ ಸಿನಿಮಾಗಂತೂ ಇಡೀ ದೇಶದ ಯುವ ಜನತೆ ಬಹಳ ಅಟ್ರ್ಯಾಕ್ಟ್ ಆಗಿದೆ. ಇದರಲ್ಲಿ ಪಾಕಿಸ್ತಾನದ ರಾಜಕೀಯಕ್ಕೆ ಇರುವ ಭೂಗತ ಜಗತ್ತಿನ ನಂಟು, ಭೂಗತ ಜಗತ್ತಿಗೆ ಐಎಸ್‌ಐನ ನಂಟು ಮತ್ತು ಭಾರತದ ಮೇಲಿನ ದ್ವೇಷದ ಧರ್ಮ ರಾಜಕಾರಣ ಹಾಗೂ ಭಾರತವನ್ನು ಕಾಡುತ್ತಿರುವ ಜಿಹಾದಿ ಮನಸ್ಥಿತಿಯ ಉಗ್ರವಾದ ಎಲ್ಲವನ್ನೂ ಅದ್ಭುತವಾಗಿ ತೋರಿಸಿದ್ದಾರೆ.

dhurandhar ok

2016ರಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಕೆಲವೇ ದಿನಗಳ ಮೊದಲು ನೋಟ್‌ ಬ್ಯಾನ್ ಮಾಡಿದ್ದು? ಉತ್ತರ ಪ್ರದೇಶದ ದುಷ್ಟ ರಾಜಕಾರಣಿ ಅತೀಕ್ ಅಹ್ಮದ್‌ನನ್ನು ಬಂಧಿಸಿ ಜೈಲಿಗೆ ಹಾಕಿದ ಕಾರಣಗಳು? ನಿವೃತ್ತರಾಗಿದ್ದ ಅಜಿತ್ ದೊವಲ್‌ರು ಪುನಃ ಅಧಿಕಾರದಲ್ಲಿ ಮುಂದುವರಿ ಯಲು ಕಾರಣಗಳು? ಹೀಗೆ ನಮ್ಮೊಳಗಿನ ಈ ರೀತಿಯ ನೂರಾರು ಪ್ರಶ್ನೆಗಳಿಗೆಲ್ಲದಕ್ಕೂ ಈ ಸಿನಿಮಾ ದಲ್ಲಿ ಉತ್ತರ ಸಿಗುತ್ತದೆ.

ಅದರಲ್ಲೂ ಪಾಕಿಸ್ತಾನದ ಮೊಸ್ಟ್ ವಾಂಟೆಡ್ ಉಗ್ರ ಕಮಾಂಡರ್‌ಗಳು ಅಪರಿಚಿತ ಗನ್‌ಮ್ಯಾನ್ ಗಳಿಂದ ಹತ್ಯೆಯಾಗಿದ್ದಾರೆ. 1999ರಲ್ಲಿ ಐಸಿ814 ವಿಮಾನ ಅಪಹರಣದ ರುವಾರಿ ಶಾಹಿದ್ ಅಕುಂಡ್, ಪಠಾಣ್ ಕೋಟ್ ಏರ್ ಬೇಸ್ ಮೇಲೆ ದಾಳಿ ನಡೆಸಿದ ಶಾಹಿದ್ ಲತೀಫ್, ಜಲಂಧರ್ ಬಾಂಬ್ ಬ್ಲಾಸ್ಟ್, ಮಾಲೆಗಾಂವ್ ದಾಳಿ, ಪಾರ್ಲಿಮೆಂಟ್ ಅಟ್ಯಾಕ್, ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿ, ಉರಿ, ಪುಲ್ವಾಮಾ ಹಾಗೂ ಪಹಲ್ಗಾಮ್ ಮೇಲೆ ನಡೆದ ಅಟ್ಯಾಕ್‌ಗಳು ಹೀಗೆ ಒಟ್ಟಾರೆ ಈ ಎಲ್ಲ ದಾಳಿಗಳ ಹಿಂದಿರುವ ಪಾಕಿಸ್ತಾನದ ಸುಮಾರು 32ಕ್ಕೂ ಹೆಚ್ಚು ಜನ ಟಾಪ್‌ಲೆವೆಲ್ ಉಗ್ರರ ನಾಯಕರೆಲ್ಲರನ್ನೂ ಈ 2020 ರಿಂದ 2025ರ ಅವಧಿಯ ಹತ್ಯೆಗೈಯಲಾಗಿದೆ.

ಇದರಿಂದ ಕಂಗೆಟ್ಟ ಪಾಕಿಸ್ತಾನಕ್ಕೆ ಈ ಉಗ್ರ ಹತ್ಯೆಯ ಹಿಂದಿರುವವರನ್ನು ಕಂಡು ಹಿಡಿಯುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಈ ಹತಾಶೆಯಿಂದ ಆಫ್ಘಾನಿಸ್ತಾನದ ಮೇಲೆ ಅನುಮಾನಗೊಂಡ ಪಾಕಿಸ್ತಾನ ಅಲ್ಲಿನ 25 ಲಕ್ಷಕ್ಕೂ ಹೆಚ್ಚಿನ ಆಫ್ಘಾನಿಸ್ತಾನಿಗಳನ್ನು ದೇಶದಿಂದ ಹೊರ ದಬ್ಬಿದೆ.

ಬಲೂಚಿಸ್ಥಾನದ ಅನೇಕ ಹೆಣ್ಣುಮಕ್ಕಳ ಮೇಲೆ ಪಾಕಿಸ್ತಾನದ ಸೈನಿಕರು ನಿರಂತರವಾಗಿ ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾರೆ. ಇದರಿಂದ ಬಲೂಚಿಗರ ಮೇಲಾಗುವ ದೌರ್ಜನ್ಯದ ಕಾರಣಕ್ಕಾಗಿಯೇ ಬಲೂಚ್‌ನಲ್ಲಿ ‘ಬಲೂಚ್ ಲಿಬರೇಷನ್ ಆರ್ಮಿ’ ಎಂಬ ಸಂಘಟನೆಯು ಹುಟ್ಟಿಕೊಂಡಿದೆ. ಇಂದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಟಾರ್ಗೆಟ್ ಕಿಲ್ಲಿಂಗ್ಸ್‌ ಗಳಲ್ಲಿ ಅಪ್ಘಾನ್ ಮತ್ತು ಬಲೂಚಿಗರ ಪಾತ್ರದ ಬಗ್ಗೆಯೂ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.

ಈ ಚಿತ್ರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಕ್ರೌರ್ಯವನ್ನು ವೈಭವೀಕರಿಸಿದ್ದಾರೆ ಅಂತ ಕೆಲವರಿಗೆ ಅನಿಸಬಹುದು, ಆದರೆ ಭಯೋತ್ಪಾದನೆಯನ್ನು ಮೂಲ ವಸ್ತುವನ್ನಾಗಿ ಇಟ್ಟುಕೊಂಡ ಈ ಚಿತ್ರ ದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಭಾರತದಲ್ಲಿ ಎಸಗಿರುವ ಕ್ರೌರ್ಯಗಳ ಪ್ರತಿಯಾಗಿ ಅದನ್ನು ಹೀಗೆ ತೋರಿಸದೆ ಹೋದರೆ ಅದು ನಮ್ಮ ಮನಸ್ಸುಗಳ ಮೇಲೆ ಪರಿಣಾಮ ಬೀರುವುದಕ್ಕೆ ಸಾಧ್ಯ ವಿಲ್ಲ.

ಅಮಾಯಕರ ಮೇಲಿನ ದಾಳಿಗಳು, ಮಂದಿರ ಮಸೀದಿಗಳಲ್ಲಿ ನಡೆಸಿದ ಸ್ಪೋಟಗಳು, ಅಂಡರ್ ವರ್ಲ್ಡ್‌ʼನ ಕರಾಳತೆ, ಮುಸುಕುಧಾರಿಗಳ ಆರ್ಭಟ ಹೀಗೆ ಇದೆಲ್ಲವನ್ನು ಕಟ್ಟಿಕೊಡಬೇಕಾದರೆ ಅದಕ್ಕೆ ನೈಜತೆಯನ್ನು ತುಂಬುವ ನಿಟ್ಟಿನಲ್ಲಿ ಈ ರೀತಿಯ ಒಂದಿಷ್ಟು ವೈಭವೀಕರಣ ಅತ್ಯಗತ್ಯವಿದೆ. ಪಾಕಿಸ್ತಾನಿ ಭಯೋತ್ಪಾದಕರು ಭಾರತದಲ್ಲಿ ನಡೆಸಿದ ಕೃತ್ಯಗಳಿಗೆಲ್ಲ ಹೋಲಿಕೆ ಮಾಡಿ ನೋಡಿದರೆ ಈ ಚಿತ್ರದಲ್ಲಿ ತೋರಿಸಿದ ಕ್ರೌರ್ಯ ತುಂಬಾನೇ ಕಡಿಮೆ ಅಂತ ಅನಿಸುತ್ತದೆ.

ಈ ಚಿತ್ರದಲ್ಲಿ ಬರುವ ಇಕ್ಬಾಲ್ ಪಾಕಿಸ್ತಾನದ ಐಎಸ್‌ಐನಲ್ಲಿದ್ದ ಎಂಬುದು ಮುಂಬೈ ದಾಳಿಯ ರೂವಾರಿ ಡೇವಿಡ್ ಹೆಡ್ಲಿಯ ಇಂಟ್ರಾಗೇಶನ್‌ನಲ್ಲಿ ಮಾಹಿತಿ ಸಿಕ್ಕಿದೆ. ಈ ಡೇವಿಡ್ ಹೆಡ್ಲಿ ಅಮೆರಿಕ ಮೂಲದ ವ್ಯಕ್ತಿ ಮತ್ತು ಪಾಕ್ ಏಜೆಂಟ್ ಆಗಿದ್ದ. ಆತ ಭಾರತಕ್ಕೆ ಬಂದು ತಾಜ್ ಹೋಟೆಲ್ ಸೇರಿದಂತೆ ಭಾರತದ ಅನೇಕ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಪಾಕಿಸ್ತಾನದ ಐಎಸ್‌ಐಗೆ ನೀಡಿದ್ದ. ಈ ಹೆಡ್ಲಿಯಿಂದ ಭಾರತದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡವನೇ ಐಎಸ್‌ಐ ಅಧಿಕಾರಿ ಇಕ್ಬಾಲ್. ‌

ಹಾಗಾಗಿ ನಿರ್ದೇಶಕ ಆದಿತ್ಯಧರ್ ಆ ಪಾತ್ರಕ್ಕೆ ‘ಮೇಜರ್ ಇಕ್ಬಾಲ್’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಚಿತ್ರದ ಕಥಾ ನಾಯಕ ಹಮ್ಜಾ ಪಾಕಿಸ್ತಾನಕ್ಕೆ ಹೋಗುವುದಕ್ಕೂ ಮೊದಲು ಅಲ್ಲಿ ಭಾರತದ ಸಾಕಷ್ಟು ಏಜೆಂಟರು ಕೆಲಸಮಾಡುತ್ತಿದ್ದರು. ಜಮೀಲ್ ಜಮಾಲಿ 40 ವರ್ಷಗಳ ಹಿಂದೆ ನಾನಿಲ್ಲಿ ಬಂದೇ ಎಂಬುದಾಗಿ ಆ ಪಾತ್ರದಲ್ಲಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.

ಇನ್ನು ಎಸ್ಪಿ ಪಾತ್ರದಲ್ಲಿ ನಟಿಸಿದ ‘ಅಸ್ಲಂ ಚೌಧರಿ’ ಲ್ಯಾರಿಯ ರೌಡಿ ಗ್ಯಾಂಗ್ ಗಳನ್ನು ಮಟ್ಟ ಹಾಕಲು ಆತ ಕೂಡಾ ನಿಜ ರೌಡಿಗಳಂತೆಯೇ ವರ್ತಿಸಿದ್ದ. ಹೀಗಂತ ಪಾಕಿಸ್ತಾನದ ಅನೇಕ ಮೀಡಿಯಾಗಳಲ್ಲಿ ದಾಖಲಾಗಿತ್ತು. ಈ ಅಸ್ಲಂ ಚೌಧರಿಯು 2014ರ ಸಂದರ್ಭದಲ್ಲಿ ಬಲೂಚಿಗಳ ಅಟ್ಯಾಕ್‌ನಲ್ಲಿ ಸಾವನ್ನಪ್ಪಿದ. ಅಸ್ಲಂ ಚೌಧರಿ ಪಾತ್ರದಲ್ಲಿ ಸಂಜಯ್ ದತ್ ಅದ್ಭುತವಾಗಿ ಜೀವಿಸಿ ದ್ದಾರೆ. ಇನ್ನು ಚಿತ್ರದ ನಾಯಕ ರಣವೀರಸಿಂಗ್ ಅವರಂತೂ ತಮ್ಮ ಕರಿಯರ್ ಗ್ರಾಫ್ʼನಲ್ಲಿ ತಾವು ನಟಿಸಿದ ಪ್ರತಿಯೊಂದು ಚಿತ್ರಗಳಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ಆ ಪಾತ್ರದ ಶೇಡ್‌ಗಳನ್ನ ಗಮನಿಸಿದರೆ ಎಲ್ಲವೂ ನೈಜ ಅಂತ ಅನಿಸುತ್ತದೆ.

ಬಾಜಿರಾವ್ ಮಸ್ತಾನಿಯಲ್ಲಿ ಡಿಟೋ ಬಾಜಿರಾವ್ ಪೇಶ್ವೆಯನ್ನೇ ನೋಡಿದಂತಾಗುತ್ತದೆ. ಪದ್ಮಾವತಿ ಚಿತ್ರದಲ್ಲಿ ಇವರೇ ನಿಜವಾದ ಖಿಲ್ಜಿ ಅಂತ ಅನಿಸುತ್ತದೆ. ಅದೇ ರೀತಿ ಈ ಧುರಂಧರ್‌ನಲ್ಲೂ ಆ ಪಾತ್ರ ಬಯಸಿದ್ದಕ್ಕಿಂತಲೂ ಹೆಚ್ಚಾಗಿಯೇ ಜೀವಿಸಿದ್ದಾರೆ. ಹೀಗಾಗಿ ಈ ಚಿತ್ರ ಗೆದ್ದಿದೆ. ಈ ಚಿತ್ರದ ಯಶಸ್ಸನ್ನು ಅರಗಿಸಿಕೊಳ್ಳಲಾಗದ ಎಡಚರರೆಲ್ಲ ‘ಧುರಂಧರ್’ ಇದೊಂದು ಪ್ರೊಪಗಾಂಡ ಚಿತ್ರ ಅಂತ ಬೊಬ್ಬೆ ಹಾಕುತ್ತಿದ್ದಾರೆ.

ಯಾಕೆಂದರೆ ಇಲ್ಲಿಯವರೆಗೂ ಸುಳ್ಳುಗಳನ್ನೇ ಸತ್ಯದ ರೀತಿಯಲ್ಲಿ ಬಿಂಬಿಸುತ್ತಾ ಬಂದಿರುವ ಎಡಚರರಿಗೀಗ ತಡೆದುಕೊಳ್ಳಲಾಗುತ್ತಿಲ್ಲ. ಈ ಹಿಂದೆ ಬಾಲಿವುಡ್‌ನ ಅನೇಕ ಚಿತ್ರಗಳಲ್ಲಿ ಹಿಂದು ಗಳನ್ನು ಬಹಳ ಅಶ್ಲೀಲ ರೀತಿಯಲ್ಲಿ ಬಿಂಬಿಸಿದ್ದ ಅದೆಷ್ಟೋ ನಿರ್ದೇಶನಗಳಿವೆ. ಅವುಗಳಲ್ಲಿ ಅಮಾಯಕರನ್ನು ಕ್ರಿಶ್ಚನ್- ಮುಸಲ್ಮಾನರೇ ರಕ್ಷಿಸುವಂತೆ ಬಿಂಬಿಸಿ, ಹಿಂದೂಗಳನ್ನು ವಿಲನ್, ರೇಪಿ, ಮಂತ್ರವಾದಿಗಳ ರೀತಿ ಅನೇಕ ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

ಉದಾಹರಣೆ ‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ‘ಶಾರುಖ್ ಖಾನ್’ ಕೋಚ್ ಪಾತ್ರವನ್ನು ನಿರ್ವಹಿಸಿದ್ದು ಅದು ನೈಜ ಜೀವನದ ಚಿತ್ರದ ಕಥೆ. ಆ ನಿಜವಾದ ಕೋಚ್ ‘ರಂಜನ್ ನೇಗಿ’ ಎನ್ನುವ ಒಬ್ಬ ಹಿಂದೂ ಆಗಿದ್ದ. ಆದರೆ ಈ ಚಿತ್ರದಲ್ಲಿ ಆತನನ್ನು ಒಬ್ಬ ಮುಸ್ಲಿಂ ಕಬೀರನ ರೀತಿ ಬಿಂಬಿಸಿ ದ್ದಾರೆ.

‘ಪಿಕೆ’ ಚಿತ್ರದಲ್ಲಿ ಹಿಂದೂ ದೇವರನ್ನು ಬಹಳ ಅಸಹ್ಯವಾಗಿ ಚಿತ್ರಿಸಿದ್ದಾರೆ. ‘ಫಾರ್’ ಒಂದು ‘ಉಪನ್ಯಾಸ’ ಎಂಬ ಕಾದಂಬರಿ ಆಧಾರಿತ ಚಿತ್ರ ಬಂದಿತ್ತು. ಆ ಕಾದಂಬರಿಯಲ್ಲಿ ‘ಬೇಗಂ ಜಾನ್’ ಮತ್ತು ‘ರಬ್ಬೊ’ ಎನ್ನುವ ಎರಡು ಪಾತ್ರಗಳಿವೆ. ಆದರೆ ಚಿತ್ರದಲ್ಲಿ ಮಾತ್ರ ಅವರ ಹೆಸರುಗಳು ರಾಧಾ ಮತ್ತು ಸೀತಾ ಅಂತ ತೊರಿಸಲಾಗಿದೆ. ಇನ್ನು ‘ಶೇರ್‌ನಿ’ ಎನ್ನುವ ಚಿತ್ರ ಒಬ್ಬ ಲೇಡಿ ಆಫೀಸರ್ ಮತ್ತು ಕಾಡುಗಳ್ಳನ ನೈಜ ಜೀವನದ ಕಥೆ ಆಧಾರಿತವಾಗಿದೆ. ಆ ಮಹಿಳಾ ಅಧಿಕಾರಿಯ ನೈಜ ಹೆಸರು ಎಂ.ಕೆ. ಆಭರಣಾ, ಆ ಕಾಡುಗಳ್ಳ ಅಸ್ಗರ್ ಅಲಿ, ಆದರೆ ಚಲನಚಿತ್ರದಲ್ಲಿ ಮಾತ್ರ ಆಕೆಯನ್ನು ವಿದ್ಯಾ ವಿನ್ ಸೆಟ್ ಎನ್ನುವ ಕ್ರಿಸ್ಚಿಯನ್ ಪಾತ್ರದಲ್ಲಿ ಮತ್ತು ಅಸ್ಗರ್ ಅಲಿಯನ್ನು ರಂಜನ್ ರಾಜಕನಸು ಎನ್ನುವ ಹಿಂದೂ ಹೆಸರಲ್ಲಿ ತೊರಿಸಿದ್ದಾರೆ.

‘ದಿವಾರ್’ ಚಿತ್ರದಲ್ಲಿ ಅಮಿತಾ ಬಚ್ಚನ್ ತನ್ನ ಬಟ್ಟೆಯ ಮೇಲೆ ‘786’ ಎಂಬ ಅಚ್ಚು ಹಾಕಿಸಿ ಕೊಂಡು ದೇವಸ್ಥಾನದ ಒಳಗಡೆ ನಿಂತು ತಾನು ದೇವರನ್ನ ನಂಬದಿರುವುದಾಗಿ ಹೇಳುತ್ತಾನೆ. ‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದಲ್ಲಿ ಒಬ್ಬ ಪಂಡಿತ ತಾನು ರೇಪ್ ಮಾಡುವುದಕ್ಕೂ ಮುಂಚೆ ‘ಓಂ ನಮಃ ಶಿವಾಯ’ ಎಂಬ ಮಂತ್ರ ಹೇಳಿದ ರೀತಿಯಲ್ಲಿ ಬಿಂಬಿಸಿದ್ದಾರೆ.

‘ಕುಚ್ ಕುಚ್ ಹೋತಾ ಹೈ’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕಾಜಲ್ ಇಬ್ಬರೂ ಹಿಂದೂ ಪಾತ್ರ ಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಎಂಟು ವರ್ಷದ ಮಗಳು ಹಿಜಾಬ್ ಹಾಕಿ ನಮಾಜ್ ಮಾಡು ವಂತೆ ತೋರಿಸಿದ್ದಾರೆ. ವಾಸ್ತವವಾಗಿ ಈ ಚಿತ್ರಗಳು ನೈಜ ಕರಾಚಿವುಡ್ ಪ್ರೊಪಗಾಂಡ. ಆದರೆ, ಈ ಎಡಚರರಿಗಂತೂ ಎಲ್ಲ ವಿಲನ್‌ಗಳು ಹಿಂದೂಗಳೇ ಆಗಿರಬೇಕು ಮತ್ತು ಎಲ್ಲ ಅನಿಷ್ಟಗಳಿಗೂ ಹಿಂದೂ ಧರ್ಮವೇ ಆಗಬೇಕು. ಈಗ ಇವರೆಲ್ಲ ಧುರಂಧರ್ ನೋಡಿ ಉರಿದುಕೊಳ್ಳುವುದನ್ನು ನೋಡುವುದಕ್ಕೂ ಒಂದು ರೀತಿಯ ಖುಷಿಯಾಗುತ್ತದೆ.

ಭಾರತದ ಒಳಗಿದ್ದುಕೊಂಡು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುವ ಕಿರಾತಕರು, ಮತ್ತು ಭಯೋ ತ್ಪಾದನೆ ಮೂಲಕ ಪೈಶಾಚಿಕ ಕೃತ್ಯವೆಸಗುವ ರಾಕ್ಷಸರ ಬೆನ್ನಿಗೆ ನಿಂತ ನಮ್ಮ ದುಷ್ಟ ರಾಜಕಾರಣಿ ಗಳು, ಅವರ ಷಡ್ಯಂತ್ರಗಳ ಬಗ್ಗೆ ಧುರಂಧರನಲ್ಲಿ ಬಹಳ ಅದ್ಭುತವಾಗಿ ತೋರಿಸಿದ್ದಾರೆ.

ಉದಾಹರಣೆ 2016ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಆ ಮೂಲಕ 2019ರಲ್ಲಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಮಂತ್ರಿ ಆಗುವುದನ್ನು ತಡೆಯುವುದು ಪಾಕಿಸ್ತಾನದ ಟಾರ್ಗೆಟ್ ಆಗಿತ್ತು. ಯಾಕೆಂದರೆ ಉತ್ತರ ಪ್ರದೇಶವನ್ನು ಗೆದ್ದವರೇ ದೇಶದ ಪ್ರಧಾನಿ ಆಗುತ್ತಾರೆ.

ಹೀಗಾಗಿ ಬಿಜೆಪಿಯನ್ನು ಸೋಲಿಸಲು ಪಾಕಿಸ್ತಾನದಿಂದ ಸುಮಾರು 60000 ಕೋಟಿಯಷ್ಟು ನಕಲಿ ನೋಟುಗಳನ್ನು ನೇಪಾಳದ ಮೂಲಕ ಉತ್ತರ ಪ್ರದೇಶದ ಅತೀಖ್ ಅಹಮದ್‌ನಿಗೆ ತಲುಪಿಸುವ ಯೋಜನೆಯಾಗಿತ್ತು. ಈ ಸುದ್ದಿ ತಿಳಿದ ಭಾರತ ಸರಕಾರವು 2016ರಲ್ಲಿ ನೋಟ್‌ಬ್ಯಾನ್ ಮಾಡುತ್ತದೆ. ಈ ಅತೀಖ್ ಅಹಮದ್ ಬಿಎಸ್‌ಪಿ ಪಕ್ಷದಲ್ಲಿದ್ದ ಬಳಿಕ ಸಮಾಜವಾದಿ ಪಕ್ಷಕ್ಕೆ ಶಿಫ್ಟ್ ಆಗಿ ಒಟ್ಟು ಮೂರು ಬಾರಿ ಎಂಎಲ್ಎ ಮತ್ತು ಒಂದು ಬಾರಿ ಎಂಪಿ ಆಗಿದ್ದ. ಪಾಕಿಸ್ತಾನದೊಂದಿಗೆ ನಿರಂತರ ನಂಟು ಹೊಂದಿದ ಈತ ಅಲ್ಲಿಂದ ನಕಲಿ ನೋಟುಗಳನ್ನು ತರಿಸಿಕೊಂಡು ತನ್ನ ಚುನಾವಣೆಗಳಲ್ಲಿ ಬಳಸಿಕೊಳ್ಳುತ್ತಿದ್ದ. ಮೇಲಾಗಿ ಈತನ ಮೇಲೆ ಸಾಕಷ್ಟು ಕೊಲೆ ಕೇಸುಗಳಿದ್ದವು. ‌

ಭಾರತದ ಅನ್ನ ತಿಂದು ಪಾಕಿಸ್ತಾನಕ್ಕೆ ನಿಯತ್ತಾಗಿದ್ದ ರಾಷ್ಟ್ರ ದ್ರೋಹಿ ಅತೀಖ್ ಅಹಮದ್‌ನನ್ನು 2017ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಈತನನ್ನು ಬಂಧಿಸಲಾಯಿತು. ಬಳಿಕ 2023ರಲ್ಲಿ ಎಲ್ಲ ಮೀಡಿಯಾಗಳ ಮುಂದೆ ಎಲ್ಲರೂ ದಂಗಾಗುವ ರೀತಿಯಲ್ಲಿ ಈತನನ್ನು ಹತ್ಯೆ ಮಾಡಲಾಯಿತು.

ಇಂತಹ ಲಜ್ಜೆಗಟ್ಟ ರಾಜಕಾರಣಿಗಳ ಕಾರಣಕ್ಕೆ ನಮ್ಮ ಹಲವಾರು ‘ಸ್ಪೈ’ಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪುಣ್ಯಾತ್ಮ ಮುರಾರ್ಜಿ ದೇಸಾಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿಯ ಮೇಲಿನ ಸಿಟ್ಟಿನ ಕಾರಣಕ್ಕೆ ನಮ್ಮ ಗುಪ್ತಚರ ‘ರಾ’ ವ್ಯವಸ್ಥೆಯನ್ನೇ ಮೂಲೆ ಗುಂಪು ಮಾಡಿದ್ದ. ಆಗ ಪಾಕಿಸ್ತಾನದಲಿದ್ದು ಅಲ್ಲಿನ ನ್ಯೂಕ್ಲಿಯರ್ ಬಗೆಗಿನ ಮಾಹಿತಿಯನ್ನು ತಂದಿದ್ದ ನಮ್ಮ ಸ್ಪೈಗಳ ಕುರಿತಾದ ಎಲ್ಲ ವಿಷಯವನ್ನು ಲೀಕ್ ಮಾಡಿದರು.

ಆ ಪರಿಣಾಮವಾಗಿ ಪಾಕಿಸ್ತಾನವು ನಮ್ಮ ನೂರಾರು ‘ರಾ’ ಏಜೆಂಟ್ ಗಳನ್ನು ಕಗ್ಗೊಲೆ ಮಾಡಿತ್ತು. ನಮ್ಮ ಮತ್ತೋರ್ವ ಪ್ರಧಾನಿ ಐ.ಕೆ. ಗುಜ್ರಾಲ್ ಅಂತೂ ಪಾಕಿಸ್ತಾನದಲ್ಲಿರುವ ಭಾರತೀಯ ಸ್ಪೈಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನೇ ಪಾಕ್ ಸರಕಾರಕ್ಕೆ ಕೊಟ್ಟಿದ್ದ. ಆದ್ದರಿಂದ ಪಾಕಿಸ್ತಾನ ಸಾವಿರಕ್ಕೂ ಹೆಚ್ಚು ಭಾರತದ ಸ್ಪೈಗಳನ್ನು ಹತ್ಯೆ ಮಾಡುತ್ತದೆ. ಈ ರೀತಿಯ ಹೇಡಿ ನಾಯಕರ ಕಾರಣದಿಂದ ಅಂದು ನಮ್ಮ ‘ರಾ’ ಗುಪ್ತಚರ ಸಂಸ್ಥೆ ನಲುಗಿಹೋಗಿತ್ತು.

ಇಂದು ನಮ್ಮ ಗುಪ್ತಚರ ಸಂಸ್ಥೆಗೆ ಮೋದಿ, ಅಜಿತ್ ದೊವಲ್‌ರವರು ಬಹಳಷ್ಟು ಶಕ್ತಿತುಂಬಿದ್ದಾರೆ. ‘ಧುರಂಧರ್’ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ಥಿಯೇಟರ್ ನಿಂದ ಕೇವಲ ಮನರಂಜನೆಯನ್ನು ಪಡೆದು ಮಾತ್ರ ಹೊರಬರುವುದಿಲ್ಲ. ಬದಲಿಗೆ ‘ನಾನೂ ನನ್ನ ಬದುಕಿನ ಧುರಂಧರನಾಗಬೇಕು’ ಎಂಬ ಮನೋಭಾವದ ಜತೆಗೆ ದೇಶದ ಬಗ್ಗೆ, ವೀರರ ಬಗ್ಗೆ ಗೌರವ, ಮತ್ತು ರಾಷ್ಟ್ರದ ಸುರಕ್ಷತೆಯ ಬಗ್ಗೆ ಹೊಸದಾದ ಚಿಂತನೆಯನ್ನು ಹೊತ್ತ ನಾಗರಿಕರಾಗಿ ಹೊರ ಬರುತ್ತಾರೆ.