ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr D H Shankarmurthy Column: ಅಟಲ್‌ʼಜೀ ಜತೆಗಿನ ದಶಕಗಳ ಹಿಂದಿನ ಸವಿಸವಿ ನೆನಪು, ಸಾವಿರ ನೆನಪು...

ನನ್ನ ಪಾಲಿನ ದಿವ್ಯಸ್ಮರಣೆ: ಶಬ್ದ ಮತ್ತು ನಿಶ್ಶಬ್ದದ ನಡುವಿನ ಅನುಬಂಧ ಕಳೆದ 25 ವರ್ಷ ಗಳಿಗೂ ಹೆಚ್ಚು ಕಾಲ ಅಟಲ್‌ಜೀ ಅವರ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸುವ ಸುಯೋಗ ನನ್ನದಾಗಿತ್ತು. ವೇದಿಕೆಯ ಮೇಲೆ ಅವರು ಹಿಂದಿಯಲ್ಲಿ ಗರ್ಜಿಸುತ್ತಿದ್ದರೆ, ಅದರ ಭಾವ ಮತ್ತು ತೀವ್ರತೆ ಕುಂದದಂತೆ ಕನ್ನಡಿಗರಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ.

ನೆನಪಿನ ದೋಣಿ

ಡಾ.ಡಿ.ಎಚ್.ಶಂಕರಮೂರ್ತಿ

ಇವತ್ತು ನಮಗೆ ನಮ್ಮ ರಾಜ್ಯ ಸೇರಿದಂತೆ ಕೆಲವು ರಾಜ್ಯಗಳಲ್ಲಿ ‘ಉಚಿತ ಕೊಡುಗೆ ಗಳ’ ಅಬ್ಬರ ಕಾಣುತ್ತಿದೆ. ಆದರೆ ‘ಮೀನು ನೀಡುವುದಕ್ಕಿಂತ, ಮೀನು ಹಿಡಿಯುವು ದನ್ನು ಕಲಿಸಬೇಕು’ ಎಂಬುದು ಅಟಲ್‌ಜೀ ಅವರ ತತ್ವವಾಗಿತ್ತು. ಅಲ್ಪಾವಧಿಯ ಲಾಭಕ್ಕಾಗಿ ಉಚಿತಗಳನ್ನು ಕೊಡುವ ಬದಲು, ದೇಶಕ್ಕೆ ಶಾಶ್ವತ ಆಸ್ತಿಗಳನ್ನು ಕೊಡುವುದು ಅವರ ಹಾದಿಯಾಗಿತ್ತು. ಅಧಿಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ರಾಷ್ಟ್ರ ಶಾಶ್ವತವಾಗಿರಬೇಕು ಎಂಬ ಆ ಮಹಾನ್ ಚೇತನದ ಹಾದಿಯೇ ನಮಗೆ ಇಂದಿಗೂ ಮತ್ತು ಎಂದಿಗೂ ದಾರಿದೀಪ.

ಬನ್ನಿ, 4 ದಶಕಗಳ ಸುವರ್ಣ ಕ್ಷಣಗಳ ಹಿಂದೆ ಹೋಗೋಣ. ಕಣ್ಣು ಮುಚ್ಚಿ ಒಂದು ಕ್ಷಣ ಕಲ್ಪಿಸಿಕೊಳ್ಳಿ. ನಾವು 1984ರ ಬೆಂಗಳೂರಿನಲ್ಲಿದ್ದೇವೆ. ಸಂಜೆ ಮಂದವಾದ ಬೆಳಕು. ಲೋಕ ಸಭಾ ಚುನಾವಣೆಯ ಸೋಲಿನಿಂದ ಇಡೀ ಬಿಜೆಪಿ ಪಕ್ಷವೇ ಕಂಗಾಲಾಗಿದೆ. ನಾಯಕ ಅಟಲ್‌ಜೀ ಸೋತಿದ್ದಾರೆ, ಸಂಸತ್ತಿನಲ್ಲಿ ನಮ್ಮ ಪಕ್ಷದಿಂದ ಕೇವಲ ಇಬ್ಬರೇ ಉಳಿದಿದ್ದೇವೆ.

ಎಲ್ಲರೂ ಮುಗಿದುಹೋಯಿತು ಅಂದುಕೊಂಡಾಗ, ಅಟಲ್ʼಜೀ ಎದ್ದು ನಿಂತು ಮೌನ ಮುರಿಯುತ್ತಾರೆ. ಅವರ ಆ ಸಿಂಹಗರ್ಜನೆ ಕೇಳಿ- ‘ನಾ ದೈನ್ಯಂ, ನಾ ಪಲಾಯನಂ’ (ನಾನು ದಯೆಯನ್ನು ಬೇಡುವುದಿಲ್ಲ, ನಾನು ರಣರಂಗದಿಂದ ಹಿಂಜರಿಯುವುದಿಲ್ಲ) ಎಂಬ ಮಾತು ನೆನಪಾಯಿತು.

ಸೋಲನ್ನೂ ಗೆಲುವಾಗಿಸುವ ಆ ವಿಶ್ವಾಸವೇ ಅವರನ್ನು ಮತ್ತೆ ಪ್ರಧಾನಿಯ ಗದ್ದುಗೆಗೆ ತಂದು ನಿಲ್ಲಿಸಿತು. ಇನ್ನೊಂದು ದೃಶ್ಯ. ನಾವು ಶಿವಮೊಗ್ಗದ ನಮ್ಮ ಮನೆಯ ಅಡುಗೆಮನೆ ಯಲ್ಲಿದ್ದೇವೆ. ಅಟಲ್‌ಜೀ ಅವರೇ ಸ್ವತಃ ಚಹಾ ತಯಾರಿಸುತ್ತಿದ್ದಾರೆ.

ಇದನ್ನೂ ಓದಿ: Hari Paraak Column: ಅಡ್ಡಗೋಡೆ ಮೇಲೆ ಸುʼದೀಪʼ

“ಶಂಕರಮೂರ್ತಿಯವರೇ, ಬನ್ನಿ... ನಮ್ಮ ಶೈಲಿಯಲ್ಲಿ ಚಹಾ ಮಾಡುವುದನ್ನು ಕಲಿಸು ತ್ತೇನೆ" ಎಂದು ಅವರು ನಗುತ್ತಾ ಹೇಳುವಾಗ, ಆ ಮುಗುಳ್ನಗು ಅವರ ವಿಶ್ವವಿಖ್ಯಾತ ವ್ಯಕ್ತಿತ್ವಕ್ಕಿಂತ ಅವರ ಸರಳತೆಯನ್ನು ನಮಗೆ ಪರಿಚಯಿಸುತ್ತದೆ. ಬಿಸಿಬಿಸಿ ರಸಂ ಸವಿಯುತ್ತಾ, ಜೋಗ ಜಲಪಾತದ ಕುರಿತಾದ ಸುಂದರ ಕವಿತೆಗಳನ್ನು ಅವರು ಅಲ್ಲಿಯೇ ಗುನುಗುತ್ತಿದ್ದರು.

ಸಮಾನತೆಯ ಮಹಾಪರ್ವ: ಒಂದು ಚಪಾತಿಯಲ್ಲಿ ಅಡಗಿದ್ದ ಮಾನವೀಯತೆ 1984ರ ದಿನಗಳು ಅವು. ಕರ್ನಾಟಕದಲ್ಲಿ ಬಿಜೆಪಿ ಬೆಳೆಯುತ್ತಿದ್ದ ಕಾಲವದು. ಅಟಲ್‌ಜೀ ಅವರು ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗ, ಶಿವಮೊಗ್ಗ ಮತ್ತು ಕರಾವಳಿ ಭಾಗ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಚಯಿಸಲು ಅವರನ್ನು ಕಾರಿನಲ್ಲಿ ಕರೆದೊಯ್ಯುವ ಚಾಲಕನಾಗಿ ನಾನು ಸೇವೆ ಸಲ್ಲಿಸುತ್ತಿದ್ದೆ.

ಒಮ್ಮೆ ಪ್ರಯಾಣದ ಮಧ್ಯೆ ಹಸಿವಾದಾಗ ಊಟಕ್ಕಾಗಿ ಹೋಟೆಲ್ ಒಂದರ ಬಳಿ ನಿಲ್ಲಿಸಿ ದೆವು. ಅಲ್ಲಿ ಕೇವಲ ಒಂದೇ ಒಂದು ಚಪಾತಿ ಉಳಿದಿತ್ತು. ಗೌರವಪೂರ್ವಕವಾಗಿ ನಾನು ಅದನ್ನು ಅವರಿಗೆ ನೀಡಿದಾಗ, ಅವರು ತೋರಿದ ಔದಾರ್ಯ ನನ್ನ ಕಣ್ಣು ತೇವಗೊಳಿಸಿತು.

ಅತ್ಯಂತ ಸಹಾನುಭೂತಿಯಿಂದ ನನ್ನತ್ತ ನೋಡಿ, “ಶಂಕರಮೂರ್ತಿಯವರೇ, ಇದನ್ನು ಎರಡು ಭಾಗ ಮಾಡಿ ಇಬ್ಬರೂ ಹಂಚಿಕೊಳ್ಳೋಣ" ಎಂದರು. ಅಂದು ನನಗೆ ಸಾಕ್ಷಾತ್ಕಾರ ವಾಗಿದ್ದು- ಸಮಾನತೆ ಎಂಬುದು ಅಟಲ್‌ಜೀ ಅವರ ಭಾಷಣದಲ್ಲಿ ಮಾತ್ರವಲ್ಲ, ಅವರ ರಕ್ತದ ಇತ್ತು.

Dr D H S

ನನ್ನ ಪಾಲಿನ ದಿವ್ಯಸ್ಮರಣೆ: ಶಬ್ದ ಮತ್ತು ನಿಶ್ಶಬ್ದದ ನಡುವಿನ ಅನುಬಂಧ

ಕಳೆದ 25 ವರ್ಷ ಗಳಿಗೂ ಹೆಚ್ಚು ಕಾಲ ಅಟಲ್‌ಜೀ ಅವರ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸುವ ಸುಯೋಗ ನನ್ನದಾಗಿತ್ತು. ವೇದಿಕೆಯ ಮೇಲೆ ಅವರು ಹಿಂದಿಯಲ್ಲಿ ಗರ್ಜಿಸುತ್ತಿದ್ದರೆ, ಅದರ ಭಾವ ಮತ್ತು ತೀವ್ರತೆ ಕುಂದದಂತೆ ಕನ್ನಡಿಗರಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ಈ ಪ್ರಕ್ರಿಯೆಯಲ್ಲಿ ನಾನು ಅವರನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ.

ಆ ಅಗಾಧವಾದ ಜ್ಞಾನ, ಶಬ್ದಗಳ ಮೇಲಿನ ಹಿಡಿತ ಮತ್ತು ಭವಿಷ್ಯದ ಭಾರತವನ್ನು ಕಟ್ಟುವ ಬಗ್ಗೆ ಅವರಿಗಿದ್ದ ಸ್ಪಷ್ಟವಾದ ದೃಷ್ಟಿಕೋನ ನನ್ನನ್ನು ಸದಾ ಬೆರಗುಗೊಳಿಸುತ್ತಿತ್ತು. ಅವರು ಕೇವಲ ನಾಯಕರಲ್ಲ, ನನ್ನ ಪಾಲಿಗೆ ಒಂದು ಜೀವಂತ ವಿಶ್ವಕೋಶವಾಗಿದ್ದರು ಈಗ ನಾವು 2000ನೇ ಇಸವಿಯ ಆಡಳಿತದ ದರ್ಬಾರಿಗೆ ಬರೋಣ. ಅಟಲ್‌ಜೀ ಅವರು ಕಡತಗಳ ಮೇಲೆ ಸಹಿ ಮಾಡುತ್ತಿದ್ದರೆ. ಆ ಸಹಿಗಳು ಇಂದಿನ ಭಾರತದ ಭವಿಷ್ಯವನ್ನು ಬರೆಯು ತ್ತಿದ್ದವು:

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ (Golden Quadrilateral): ಅಟಲ್‌ಜೀ ಅವರು ಕೇವಲ ರಸ್ತೆಗಳನ್ನು ನಿರ್ಮಿಸಲಿಲ್ಲ, ದೇಶದ ಆರ್ಥಿಕತೆಯ ರಕ್ತನಾಳಗಳನ್ನು ಸೃಜಿಸಿದರು. ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸುವ 5846 ಕಿ.ಮೀ. ಉದ್ದದ ಈ ಯೋಜನೆ ಭಾರತದ ಇತಿಹಾಸದ ಅತ್ಯಂತ ದೊಡ್ಡ ಹೆದ್ದಾರಿ ಯೋಜನೆಯಾಗಿತ್ತು. ಕರ್ನಾಟಕಕ್ಕೆ ಇದರಿಂದ ಬೆಂಗಳೂರು-ಬೆಳಗಾವಿ ಮತ್ತು ಬೆಂಗಳೂರು-ಚೆನ್ನೈ ಆರ್ಥಿಕ ಕಾರಿಡಾರ್‌ಗಳ ಕೊಡುಗೆ ದೊರೆಯಿತು.

ಹಳ್ಳಿಗಳ ಉದ್ಧಾರ (PMGSY): ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರ ಎಂಬ ನಂಬಿಕೆ ಅವರದ್ದಾಗಿತ್ತು. 2000ನೇ ಇಸವಿಯಲ್ಲಿ ಅವರು ಆರಂಭಿಸಿದ ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ ಕುಗ್ರಾಮಗಳಿಗೂ ಕಾಂಕ್ರೀಟ್/ಡಾಂಬರು ರಸ್ತೆಗಳನ್ನು ತಂದಿತು.

ಅಕ್ಷರ ಕ್ರಾಂತಿ ಮತ್ತು ಸುರಕ್ಷಿತ ಭಾರತದ ರೂವಾರಿ: ದೇಶದ ಕಟ್ಟಕಡೆಯ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಹಂಬಲದಿಂದ ಅವರು ತಂದ ‘ಸರ್ವ ಶಿಕ್ಷಣ ಅಭಿಯಾನ’ ಭಾರತದ ಸಾಕ್ಷರತಾ ಪ್ರಮಾಣದಲ್ಲಿ ಮೈಲಿಗಯಿತು. ಅತ್ತ ಶಿಕ್ಷಣಕ್ಕೆ ಒತ್ತು ನೀಡುತ್ತಲೇ, ಇತ್ತ ದೇಶದ ರಕ್ಷಣೆಗಾಗಿ ಪೋಖ್ರಾನ್‌ನಲ್ಲಿ ಅಣುಬಾಂಬ್ ಪರೀಕ್ಷೆ ನಡೆಸಿ ಜಗತ್ತನ್ನೇ ದಿಗ್ಭ್ರಮೆಗೊಳಿಸಿದರು.

ಸಹಮತದ ರಾಜಕಾರಣದ ಪಿತಾಮಹ: 24ಕ್ಕೂ ಹೆಚ್ಚು ವಿವಿಧ ಸಿದ್ಧಾಂತಗಳ ಪಕ್ಷ ಗಳನ್ನು ಒಂದೇ ಸೂರಿನಡಿ ತಂದು ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ’ವನ್ನು (NDA) ಯಶಸ್ವಿಯಾಗಿ ಮುನ್ನಡೆಸಿದ್ದು ಅಟಲ್‌ಜೀ ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇರಲಿ, ಆದರೆ ಮನಸ್ತಾಪ ಇರಬಾರದು ಎಂಬುದು ಅವರ ತತ್ವವಾಗಿತ್ತು.

ಜಿಎಸ್‌ಟಿ ಅಡಿಪಾಯ: ಇಂದು ಜಾರಿಯಲ್ಲಿರುವ ಜಿಎಸ್ʼಟಿಯ ಮೂಲ ಬೇರುಗಳು 2000ನೇ ಇಸವಿಯಲ್ಲಿ ಅಟಲ್ ಜೀ ರಚಿಸಿದ ಅಸೀಮ್ ದಾಸ್‌ಗುಪ್ತ ಸಮಿತಿಯಲ್ಲಿದೆ. ‘ಒಂದೇ ದೇಶ, ಒಂದೇ ಮಾರುಕಟ್ಟೆ’ ಎನ್ನುವ ಅವರ ಕನಸು ಇಂದಿನ ಆರ್ಥಿಕತೆಗೆ ಅಡಿಪಾಯ.

ಕಾರ್ಯಕರ್ತರೇ ಪಕ್ಷದ ಶಕ್ತಿ: ಅಟಲ್‌ಜೀ ಅವರು ಕಾರ್ಯಕರ್ತರನ್ನು ಕೇವಲ ಪಕ್ಷದ ಕೆಲಸಗಾರರೆಂದು ನೋಡದೆ, ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಿದ್ದರು. ಎಷ್ಟೇ ದೊಡ್ಡ ನಾಯಕರಾಗಿದ್ದರೂ, ಸಾಮಾನ್ಯ ಕಾರ್ಯಕರ್ತನ ಹೆಸರನ್ನು ನೆನಪಿಟ್ಟು ಕೊಂಡು ಮಾತನಾಡಿಸುತ್ತಿದ್ದ ಅವರ ಗುಣ ಅಮೋಘ. ವಾಪಸ್ ಇಂದಿನ ಕಾಲಕ್ಕೆ ಬರುವುದಾದರೆ, ಇವತ್ತು ನಮಗೆ ನಮ್ಮ ರಾಜ್ಯ ಸೇರಿದಂತೆ ಕೆಲವು ರಾಜ್ಯಗಳಲ್ಲಿ ‘ಉಚಿತ ಕೊಡುಗೆಗಳ’ ಅಬ್ಬರ ಕಾಣುತ್ತಿದೆ. ಆದರೆ ಅಟಲ್‌ಜೀ ಅವರ ತತ್ವವೊಂದಿತ್ತು- ‘ಮೀನು ನೀಡುವುದಕ್ಕಿಂತ, ಮೀನು ಹಿಡಿಯುವುದನ್ನು ಕಲಿಸು’.

ಅಲ್ಪಾವಧಿಯ ಲಾಭಕ್ಕಾಗಿ ಉಚಿತಗಳನ್ನು ಕೊಡುವ ಬದಲು, ದೇಶಕ್ಕೆ ಶಾಶ್ವತ ಆಸ್ತಿ ಗಳನ್ನು ಕೊಡುವುದು ಅವರ ಹಾದಿಯಾಗಿತ್ತು. ಅಧಿಕಾರಗಳು ಬರುತ್ತವೆ, ಹೋಗುತ್ತವೆ; ಆದರೆ ರಾಷ್ಟ್ರ ಶಾಶ್ವತವಾಗಿರಬೇಕು ಎಂಬ ಆ ಮಹಾನ್ ಚೇತನದ ಹಾದಿಯೇ ನಮಗೆ ಇಂದಿಗೂ ಮತ್ತು ಎಂದಿಗೂ ದಾರಿದೀಪ.

(ಲೇಖಕರು ವಿಧಾನ ಪರಿಷತ್‌ನ ಮಾಜಿ ಸಭಾಪತಿಗಳು ಹಾಗೂ ಮಾಜಿ ಸಚಿವರು)