Ranjith H Ashwath Column: ಅಷ್ಟಕ್ಕೂ ದೇವಾಲಯಕ್ಕೆ ಹೋದರೆ ತಪ್ಪೇನು ?
ಜಾತಿ, ಧರ್ಮಗಳು ಒಂದೊಂದು ಪಕ್ಷಕ್ಕೆ ಸೀಮಿತ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾವ ಪಕ್ಷ ಸಂವಿಧಾನದಲ್ಲಿ ‘ಜಾತ್ಯತೀತ’ ಶಬ್ದವನ್ನು ಸೇರಿಸಿತ್ತೋ ಅದೇ ಪಕ್ಷದ ನಾಯಕರು ಇಂದು ಬಿಜೆಪಿಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಹಿಂದುತ್ವ ವನ್ನು ವಿರೋಧಿಸುವ ಮೂಲಕ ಜಾತ್ಯತೀತ ರಾಷ್ಟ್ರದ ಅರ್ಥವನ್ನೇ ತಲೆಕೆಳಗು ಮಾಡುವ ಪ್ರಯತ್ನ ಮಾಡುತ್ತಿರು ವುದು ಹಲವರ ಅಕ್ಷೇಪಕ್ಕೆ ಕಾರಣವಾಗಿದೆ

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್ ಎಚ್.ಅಶ್ವತ್ಥ

ಅಶ್ವತ್ಥಕಟ್ಟೆ
ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತಿ-ಧರ್ಮವೇ ಬಹುತೇಕ ‘ಮೊದಲ ಆದ್ಯತೆ’ಯಾಗುತ್ತಿದೆ. ಯಾವ ವಿಷಯದ ಮೇಲೆ ದೇಶ ಕಟ್ಟಬಾರ ದೆಂದು ಈ ಹಿಂದಿನವರು ಜಾತ್ಯತೀತ ರಾಷ್ಟ್ರವೆಂದರೋ ಅದೇ ‘ವಿಷಯ’ದ ಮೇಲೆ ದೇಶ ವನ್ನು ಮುನ್ನಡೆಸಬೇಕಿರುವ ಹಂತಕ್ಕೆ ರಾಜಕಾರಣ ಬಂದು ನಿಂತಿದೆ. ಇದು ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾವುದೋ ಪಕ್ಷವೆಂದಲ್ಲ, ಎಲ್ಲ ಪಕ್ಷಗಳಲ್ಲಿಯೂ ಕಾಣಬರುವ ದೃಶ್ಯ; ಟಿಕೆಟ್ ಘೋಷಿಸುವುದರಿಂದ ಹಿಡಿದು, ಸಚಿವ ಸ್ಥಾನ ನೀಡುವ ತನಕ ಜಾತಿ-ಧರ್ಮದ ಮೇಲೆಯೇ ರಾಜಕಾರಣ ನಿಂತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಜಾತಿ-ಧರ್ಮ ಎನ್ನುವುದನ್ನು ಪೂರ್ಣವಾಗಿ ಹೊರಗಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ ಎನ್ನುವುದು ಸತ್ಯ.
ಆದರೆ ಒಂದು ಜಾತಿ-ಧರ್ಮವನ್ನು ಓಲೈಸುವ ಕಾರಣಕ್ಕೆ ಮತ್ತೊಬ್ಬರನ್ನು ಟೀಕಿಸುವ ಪರಿಪಾಠ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿರುವ ಅಂಶ. ಹೌದು, ದೇಶದಲ್ಲಿ ರುವ ಬಹುತೇಕ ರಾಜಕೀಯ ಪಕ್ಷಗಳು ತಮ್ಮದೇ ಆದ ಸೈದ್ಧಾಂತಿಕ ಕಾರಣಕ್ಕೆ ಒಂದೊಂದು ತತ್ವಗಳನ್ನು ಅಳವಡಿಸಿಕೊಂಡಿರುತ್ತವೆ.
ಇದನ್ನೂ ಓದಿ: Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ
ಜಾತಿ, ಧರ್ಮಗಳು ಒಂದೊಂದು ಪಕ್ಷಕ್ಕೆ ಸೀಮಿತ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾವ ಪಕ್ಷ ಸಂವಿಧಾನದಲ್ಲಿ ‘ಜಾತ್ಯತೀತ’ ಶಬ್ದವನ್ನು ಸೇರಿಸಿತ್ತೋ ಅದೇ ಪಕ್ಷದ ನಾಯ ಕರು ಇಂದು ಬಿಜೆಪಿಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಹಿಂದುತ್ವವನ್ನು ವಿರೋಧಿಸುವ ಮೂಲಕ ಜಾತ್ಯತೀತ ರಾಷ್ಟ್ರದ ಅರ್ಥವನ್ನೇ ತಲೆಕೆಳಗು ಮಾಡುವ ಪ್ರಯತ್ನ ಮಾಡುತ್ತಿರುವುದು ಹಲವರ ಅಕ್ಷೇಪಕ್ಕೆ ಕಾರಣವಾಗಿದೆ.
ಅದರಲ್ಲಿಯೂ ಕಳೆದೊಂದು ವಾರದಿಂದ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಹಾಗೂ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ವಿಷಯವೆಂದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದ್ಗುರು ಜಗ್ಗಿ ವಾಸುದೇವ ಅವರ ಈಶಾ ಫೌಂಡೇಶನ್‌ನಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಮೊದಲಿಗೆ ಅಮಿತ್ ಶಾ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಕೆಲ ನಾಯಕರು ವಿರೋಧಿಸಲು ಶುರು ಮಾಡಿದರು.
ಬಳಿಕ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ತಪ್ಪು ಎನ್ನುವ ಅರ್ಥದಲ್ಲಿ ಕೆಲ ಕಾಂಗ್ರೆಸಿಗರು ವಾದ ಮಂಡಿಸಿದರು. ಕೊನೆಗೆ ಹೈಕಮಾಂಡ್ ವರೆಗೂ ಕೆಲವರು ಈ ವಿಷಯ ವನ್ನು ತೆಗೆದುಕೊಂಡು ಹೋಗಿದ್ದು ವಿಪರ್ಯಾಸ.
ಹಾಗೆ ನೋಡಿದರೆ, ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಪೂಜೆ-ಪುನಸ್ಕಾರ, ಹವನ-ಹೋಮ, ದೇವಾಲಯಗಳಿಗೆ ಭೇಟಿ ನೀಡುವಿಕೆ ಇತ್ಯಾದಿ ಕಾರ್ಯದಲ್ಲಿ ಭಾಗಿ ಯಾಗುತ್ತಲೇ ಬಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಹಾ ಕುಂಭಮೇಳವನ್ನು ಟೀಕಿಸಿದ್ದರೂ, ಡಿಕೆಶಿ ಕುಟುಂಬ ಸಮೇತರಾಗಿ ತೆರಳಿ ಪುಣ್ಯಸ್ನಾನದಲ್ಲಿ ಭಾಗವಹಿಸಿದ್ದರು.
ಕುಂಭಮೇಳಕ್ಕೆ ಹೋಗುವಾಗಲೇ ವಿರೋಧ ವ್ಯಕ್ತವಾಗಿದ್ದರಿಂದ “ಇದು ವೈಯಕ್ತಿಕ ವಿಷಯ. ಈ ಬಗ್ಗೆ ಮೇಲಿನವರ ಗಮನಕ್ಕೂ ತರಲಾಗಿದೆ" ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಆದರೆ ಈಶಾ ಫೌಂಡೇಶನ್‌ಗೆ ಹೋಗುವ ಸುದ್ದಿ ಯಿಂದ ಈ ವಿವಾದಕ್ಕೆ ಹೊಸ ಅರ್ಥ ಶುರುವಾಯಿತು. ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದ ಸದ್ಗುರು ಅವರ ಆಶ್ರಮಕ್ಕೆ ಹೋಗುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆಗಳನ್ನು ಕಾಂಗ್ರೆಸ್ಸಿನ ಹಲವರು ಕೇಳಿದರು.
ಆದರೆ ಈ ಎಲ್ಲ ಸಮಯದಲ್ಲಿಯೂ ‘ವೈಯಕ್ತಿಕ ನಂಬಿಕೆ’ ಎಂದ ಡಿಕೆ, “ಕಾಂಗ್ರೆಸ್ ಎಲ್ಲಾ ಧರ್ಮಗಳ ಸಮಾಗಮ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಸಿದ್ಧಾಂತ. ನಾವು ಅಧಿಕಾರ, ಸ್ಥಾನಮಾನ ನೀಡುವಾಗ ಎಲ್ಲರನ್ನು ಪರಿಗಣಿಸಿಯೇ ನೀಡು ತ್ತೇವೆ. ನಮ್ಮ ಸಮಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯನ್ನು, ಬಿಜೆಪಿಯವರು ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲಾಗುವುದೇ? ನಮ್ಮ ದೇಶದಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಅವಕಾಶ ನೀಡಲಾಗಿದೆ. ಅವರೆಲ್ಲ ಬೇರೆ ನೀರು ಕುಡಿಯಲು ಸಾಧ್ಯವೇ? ಈ ಭೂಮಿಗೆ, ಗಾಳಿಗೆ ಜಾತಿ, ಧರ್ಮದ ತಾರತಮ್ಯ ಇದೆಯೇ?" ಎಂದು ಪ್ರಶ್ನಿಸುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದನ್ನು ಅಲ್ಲಿಗೇ ನಿಲ್ಲಿಸದೆ, “ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ" ಎನ್ನುವ ಮೂಲಕ ತಮ್ಮ ವೈಯಕ್ತಿಕ ವಿಷ ಯಕ್ಕೆ ರಾಜ ಕೀಯ ಲೇಪ ಬೇಡ ಎನ್ನುವ ಸಂದೇಶವನ್ನು ನೀಡಿದ್ದರು.
ಆದರೂ ಎಐಸಿಸಿ ಕಾರ್ಯದರ್ಶಿ ಮೋಹನ್ ಅವರು, ಡಿಕೆಶಿ ಈಶಾ ಫೌಂಡೇಶನ್ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದನ್ನು ವಿರೋಽಸಿ, ಮುಂದೆ ಹೈಕಮಾಂಡ್ ಬಳಿ ವಿಷಯ ಪ್ರಸ್ತಾಪಿ ಸುವ ಮಾತುಗಳನ್ನು ಆಡಿದರು. ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ, ಡಿಕೆಶಿಯವರು ಶಿವ ರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಯಾವ ರೀತಿಯಲ್ಲಿ ತಪ್ಪಾಗುತ್ತದೆ? ಚುನಾವಣೆ ಗಳು ಹತ್ತಿರವಾಗುತ್ತಿದ್ದಂತೆ ಎಲ್ಲರೂ ದೇವಾಲಯಗಳ ಮುಂದೆ ಹೋಗಿ ನಿಲ್ಲುವಾಗ, ಇವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಪಕ್ಷಕ್ಕೆ ಆದ ಅಪಚಾರ ವಾದರೂ ಏನು? ಒಂದು ವೇಳೆ ಕಾಂಗ್ರೆಸ್ ನಲ್ಲಿರುವವರು ದೇವಾಲಯಗಳಿಗೆ ಭೇಟಿ ನೀಡುವುದು ಅಕ್ಷಮ್ಯ ಎನ್ನುವುದಾದರೆ, ಈ ಹಿಂದೆ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಾಲು ಸಾಲು ದೇವಾಲಯಗಳಿಗೆ ಹೋದಾಗ ಅದನ್ನು ವಿರೋಧಿ ಸಲಿಲ್ಲವೇಕೆ? ಚುನಾವಣೆಯ ಸಮಯದಲ್ಲಿ ಮಠಗಳಿಗೆ, ದೇವಾಲಯ ಗಳಿಗೆ ಭೇಟಿ ನೀಡಿದಾಗ ಸ್ವಾಗತಿಸುವ ಮಂದಿ, ಈಗ ಡಿಕೆಶಿ ಅವರು ದೇವಾಲಯಕ್ಕೆ ಹೋದರೆ ವಿರೋಧಿಸುವುದು ಏಕೆ? ದೇಶದಲ್ಲಿ ಬಿಜೆಪಿಯು ಹಿಂದುತ್ವದ ಮತಗಳನ್ನು ‘ಸ್ಕೂಪ್’ ಮಾಡಲು ಶುರು ಮಾಡಿದಾಗಿನಿಂದ ಹಲವು ಕಾಂಗ್ರೆಸ್ಸಿಗರಲ್ಲಿ ಈ ರೀತಿಯ ವಿಚಿತ್ರ ಮನಸ್ಥಿತಿ ನಿರ್ಮಾಣವಾಗಿದೆ.
ಹಿಂದೂ ಧರ್ಮದಲ್ಲಿರುವ ಹಿಂದುಳಿದ, ದಲಿತ ಮತದಾರರನ್ನು ಒಪ್ಪಿಕೊಳ್ಳುವ ನಾಯ ಕರು ಹಿಂದುತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮುಸ್ಲಿಮರನ್ನು ಓಲೈಸುವುದಕ್ಕಾಗಿಯೇ ಈ ರೀತಿಯ ನಡೆ ಅನುಸರಿಸಲಾಗುತ್ತಿದೆಯೇ ಎಂಬ ಅನುಮಾನಗಳು ಅನೇಕರಲ್ಲಿವೆ.
ಆದರೆ ಡಿ.ಕೆ.ಶಿವಕುಮಾರ್ ಈಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದನ್ನಾಗಲಿ, ಕುಂಭಮೇಳ ದಲ್ಲಿ ಪುಣ್ಯಸ್ನಾನ ಮಾಡಿದ್ದನ್ನಾಗಲೀ ವಿರೋಽಸುತ್ತಿರುವುದು ಹಿಂದುತ್ವದ ಆಚರಣೆ ಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕಾಗಿ ಅಲ್ಲವೇ ಅಲ್ಲ. ಈ ಹಿಂದೆ ನಡೆದ ಕುಂಭ ಮೇಳದಲ್ಲಿ ಜವಾಹರಲಾಲ್ ನೆಹರು, 2001ರಲ್ಲಿ ನಡೆದ ಕುಂಭಮೇಳದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಬಹುತೇಕ ನಾಯಕರು ಪುಣ್ಯಸ್ನಾನ ದಲ್ಲಿ ಭಾಗವಹಿಸಿದ್ದರು.
ಈ ಹಿಂದೆ ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ನಡೆದ ಬಹುತೇಕ ಕುಂಭಮೇಳಗಳಲ್ಲಿ ಅಂದಿನ ಕಾಂಗ್ರೆಸ್ ಮುಖ್ಯಸ್ಥರು ಭಾಗವಹಿಸಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ನಗ್ನಸತ್ಯ. ಆದರೆ ಈ ಬಾರಿಯ ಮಹಾಕುಂಭಮೇಳ ನಡೆಯುವಾಗ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ, ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಕುಂಭಮೇಳವನ್ನು ವಿರೋಧಿಸುವ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಕುಂಭಮೇಳವೊಂದೇ ಅಲ್ಲ, ಈ ಹಿಂದೆ ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಸ್ಥಾಪನೆಯಾದಾಗ ವಿರೋಧಿ ಸಲೂ ಇದೇ ಕಾರಣವಾಗಿತ್ತು. ಆದರೆ ಅಯೋಧ್ಯೆಯ ರಾಮಮಂದಿರವನ್ನು ವಿರೋಧಿಸು ತ್ತಿರುವ ಬಹುತೇಕ ಕಾಂಗ್ರೆಸ್ಸಿಗರಿಗೆ, ಬಾಲರಾಮನ ಪೂಜೆ ಶುರುಮಾಡಿಸಿದ್ದು ರಾಜೀವ್ ಗಾಂಧಿ ಎನ್ನುವುದು ಮರೆತುಹೋದಂತಿದೆ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಹಿಂದುತ್ವದ ಪ್ರತಿ ಅಂಶವನ್ನೂ ವಿರೋಧಿಸಲು ಧರ್ಮಕ್ಕಿಂತ ಹೆಚ್ಚಾಗಿ ರಾಜಕೀಯ ಕಾರಣಗಳಿವೆ. ಹಿಂದೂ ಹಾಗೂ ಹಿಂದೂತ್ವದ ಆಚರಣೆಗಳನ್ನು ವಿರೋಧಿಸುವ ಮೂಲಕ ಅಲ್ಪಸಂಖ್ಯಾತರ ಅದರಲ್ಲಿಯೂ ಮುಸ್ಲಿಮರ ಮತಗಳನ್ನು ಸೆಳೆಯಬಹುದು ಎನ್ನುವ ತಪ್ಪು ಲೆಕ್ಕಾಚಾರದಲ್ಲಿ ಪದೇಪದೆ ಕೆಟ್ಟ ಹೆಜ್ಜೆಗಳ ಮೂಲಕ ಅದು ಕೈಸುಟ್ಟುಕೊಳ್ಳುವ ಕೆಲಸ ಮಾಡುತ್ತಿದೆ.
ಆದರೆ ಈ ‘ಮಾಡೆಲ್’ನಿಂದ ಕಾಂಗ್ರೆಸ್ಸಿಗೆ ಆಗುತ್ತಿರುವ ಡ್ಯಾಮೇಜ್ ಸರಿಪಡಿಸುವ ಉದ್ದೇಶ ದಿಂದ ಡಿ.ಕೆ.ಶಿವಕುಮಾರ್ ‘ಸಾಫ್ಟ್’ ಹಿಂದುತ್ವದತ್ತ ಒಲವು ತೋರಿದ್ದರು. ಹಾಗೆ ನೋಡಿದರೆ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ದಿನದಿಂದಲೂ ‘ಹಿಂದು ತ್ವ’ದ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದಾರೆ.
ಹಿಂದುತ್ವದ ವಿಷಯದಲ್ಲಿ ಅವರು ಪಕ್ಷದ ಸಿದ್ಧಾಂತಗಳನ್ನು ಮೀರಿ ಕೆಲವೊಮ್ಮೆ ನಡೆದು ಕೊಂಡಿರುವುದನ್ನು ಗಮನಿಸಿದ್ದೇವೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಧಾರಣೆ, ಆಜಾನ್ ಕೂಗುವುದಕ್ಕೆ ಸಂಬಂಧಿಸಿದ ನಿರ್ಬಂಧವಿರಬಹುದು, ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದೇ ಇರುವ ವಿಷಯವಿರಬಹುದು ಹೀಗೆ ಹಲವು ವಿಷಯದಲ್ಲಿ ‘ತಟಸ್ಥ’ ನಿಲುವು ತಾಳುವ ಮೂಲಕ ಅವರು ಇತರೆ ಕಾಂಗ್ರೆಸ್ಸಿಗರಿಗಿಂತ ಭಿನ್ನವಾಗಿ ಕಂಡರು. ಚುನಾವಣಾ ಸಮಯ ದಲ್ಲಿಯೂ ತಮ್ಮ ಭಾಷಣದಲ್ಲಿ ‘ಹಿಂದುತ್ವ’ದ ವಿಷಯಕ್ಕೆ ಹೋಗದೆ, ಬಿಜೆಪಿಗೆ ಸೀಮಿತ ಗೊಳಿಸಿ ಮಾತನಾಡಿದ್ದು ಕಾಣಬಹುದಾಗಿತ್ತು.
‘ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ’ ಎನ್ನುವ ಮೂಲಕ ಹಿಂದೂ ಧರ್ಮದ ಕೆಲ ಮತಗಳನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದರು. ಡಿ.ಕೆ.ಶಿವಕುಮಾರ್ ಅವರ ಈ ಸಾಫ್ಟ್ ಹಿಂದುತ್ವ, ‘ಕೋರ್’ ಹಿಂದೂ ಮತಗಳನ್ನು ಸೆಳೆಯದಿದ್ದರೂ, ಪಕ್ಷಕ್ಕೆ ಹಿಂದೂ ಮತಗಳು ನಷ್ಟವಾಗದ ರೀತಿಯಲ್ಲಿ ಅದು ನೋಡಿಕೊಂಡಿತ್ತು ಎಂದರೆ ತಪ್ಪಾ ಗುವುದಿಲ್ಲ.
ಇದೀಗ ಈಶಾ ಫೌಂಡೇಶನ್‌ನಲ್ಲಿ ನಡೆದ ಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಿದ್ದು, ಅದಕ್ಕೂ ಮೊದಲು ಕುಂಭಮೇಳದಲ್ಲಿ ಭಾಗವಹಿಸಿದ್ದು ರಾಜಕೀಯವಾಗಿ ಕಾಂಗ್ರೆಸ್‌ನ ಸಿದ್ಧಾಂತಕ್ಕೆ ವಿರುದ್ಧವಾಗಿತ್ತು. ಆದರೆ ಇದನ್ನು ಕೆಲವರು ವಿರೋಧಿಸಿದ್ದು ಮಾತ್ರ ಗಾಂಧಿ ಕುಟುಂಬವನ್ನು ಹಾಗೂ ಹೈಕಮಾಂಡ್ ನಾಯಕರನ್ನು ಒಲೈಸುವ ಕಾರಣಕ್ಕೆ ಎನ್ನುವು ದಕ್ಕಷ್ಟೇ ಆಗಿತ್ತು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಒಲೈಕೆ ಮಾಡಿಕೊಂಡು ಮುನ್ನೆಲೆಗೆ ಬರಬೇಕು ಎನ್ನುವ ಉತ್ಸಾಹವನ್ನು ಕೆಲವರು ತೋರುತ್ತಿರುವುದು ಇದೇ ಮೊದಲೇನಲ್ಲ. ಇಂದಿರಾ ಗಾಂಧಿ ಕಾಲದಿಂದಲೂ ನಡೆದು ಬಂದಿರುವ ಈ ಪರಂಪರೆಯನ್ನು ಈಗಲೂ ಕೆಲ ನಾಯಕರು ಮುಂದುವರಿಸಿದ್ದಾರೆ. ‘ಗಾಂಧಿ’ ಕುಟುಂಬದ ಹೊರತಾಗಿ ಯೋಚಿಸುವ ಶಕ್ತಿಯನ್ನೇ ಕೆಲ ಕಾಂಗ್ರೆಸ್ಸಿಗರು ಕಳೆದುಕೊಂಡಿರುವುದು ದುರಂತ.
ದೇವಾಲಯ, ಮಠ-ಮಾನ್ಯಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಪಕ್ಷ ವಿರೋಧಿಎನ್ನುವ ‘ನಿರ್ಧಾರ’ಕ್ಕೆ ಬರುವುದಾದರೆ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂ ಕಾ ಗಾಂಧಿಯಾದಿಯಾಗಿ ಟೆಂಪಲ್ ರನ್ ಮಾಡಿದ್ದ ‘ಹೈಕಮಾಂಡ್’ ನಾಯಕರ ನಡೆಯೂ ಪಕ್ಷ ವಿರೋಧಿ ಎನ್ನಬಹುದೇ? ಮತ್ತೊಂದು ಸಮುದಾಯದ ಓಲೈಕೆಯ ಕಾರಣಕ್ಕೆ, ಇನ್ನೊಂದು ಸಮುದಾಯದ ಯಾವ ಸಂಪ್ರದಾಯವನ್ನು ಅನುಸರಿಸುವುದು ತಪ್ಪು ಎಂದರೆ ಅಥವಾ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂ ಆಚರಣೆಗಳನ್ನು ಆಚರಿಸ ಬಾರದು ಎನ್ನುವ ಮನಸ್ಥಿತಿ ಮುಂದುವರಿದರೆ, ಕಾಂಗ್ರೆಸ್ಸಿಗೆ ಮುಸ್ಲಿಮರ ಬೆಂಬಲವೆಷ್ಟು ಸಿಗುವುದೋ ಬಿಡುವುದೋ ಗೊತ್ತಿಲ್ಲ.
ಆದರೆ ಕಾಂಗ್ರೆಸ್ ನೊಂದಿಗೆ ಈಗಲೂ ಇರುವ ಹಿಂದೂ ಮತಗಳನ್ನು ಅದು ಕಳೆದು ಕೊಳ್ಳುವ ಅಪಾಯವಂತೂ ಕಟ್ಟಿಟ್ಟಬುತ್ತಿ. ಇನ್ನಾದರೂ ಬಿಜೆಪಿಗರನ್ನು ಟೀಕಿಸುವ ಭರದಲ್ಲಿ ಹಿಂದೂಗಳನ್ನು ಅಥವಾ ಹಿಂದುತ್ವವನ್ನು ವಿರೋಧಿಸಿ ಮಾತನಾಡುವ ಮನಸ್ಥಿತಿಯಿಂದ ಕಾಂಗ್ರೆಸ್‌ನ ಕೆಲವರು ಹೊರಬರಲಿ. ಇಲ್ಲವಾದರೆ ಮುಂದಿನ ದಿನದಲ್ಲಿ ಕಾಂಗ್ರೆಸ್ ನೊಂದಿಗೆ ಉಳಿದುಕೊಂಡಿರುವ ಹಿಂದೂಗಳೂ ಇನ್ನೊಬ್ಬರ ಪಾಲಾದರೂ ಅಚ್ಚರಿಯಿಲ್ಲ.