ರಂಜಿತ್ ಎಚ್. ಅಶ್ವತ್ಥ
ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್ ಎಚ್. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.