ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಸಾಧಿಸುವ ಮನಸ್ಸಿದ್ದರೆ ನಮ್ಮೆಲ್ಲಾ ಕನಸುಗಳೂ ಈಡೇರುತ್ತವೆ !

ಮಕ್ಕಳು ಮಾತ್ರವಲ್ಲದೆ ಯುವಕರನ್ನು, ಮುದುಕರನ್ನು ಒಟ್ಟಾರೆ ಎಲ್ಲರನ್ನೂ ಸೆಳೆದ, ಸೆಳೆಯುವ ಚುಂಬಕಶಕ್ತಿ ಮಿಕ್ಕಿ ಮೌಸ್‌ಗಿದೆ. ಇಷ್ಟು ಮೀರಿ ಕೂಡ ನಮಗೂ ಡಿಸ್ನಿ ಗೊತ್ತಿಲ್ಲ ಎನ್ನುವಂತಿಲ್ಲ, ಏಕೆಂದರೆ ವಾಲ್ಟ್‌ಡಿಸ್ನಿ ಕಂಪನಿ ತಯಾರಿಸಿರುವ ಚಲನಚಿತ್ರಗಳನ್ನು ನಾವು ನೋಡಿಲ್ಲ ಎಂದು ಹೇಳಲಾಗುವುದಿಲ್ಲ.

ವಿಶ್ವರಂಗ

ನಮಗೆ ಬೇಕು ಎನ್ನಿಸಿ ಬಿಟ್ಟರೆ ಅದನ್ನು ಪಡೆದುಕೊಳ್ಳಲು ಮೈಲಿ ದೂರ ಕೂಡ ನಡೆಯಲು ನಾವು ಸಿದ್ಧರಾಗುತ್ತೇವೆ. ಬೇಡ ಎನ್ನಿಸಿದರೆ ಆಗ ನಾವು ನೂರಾರು ಕಾರಣಗಳನ್ನು ನೀಡಲು ಶುರುಮಾಡುತ್ತೇವೆ. ನಮ್ಮ ಪ್ರಯಾಣದಲ್ಲಿ ಏನನ್ನಾದರೂ ಹುಟ್ಟು ಹಾಕುವುದು ನಾವು ಮಾತ್ರ ಆಗಿರಬೇಕು ಎಂದು ಬಯಸುವುದಕ್ಕಿಂತ, ಸಾಂಕವಾಗಿ ಪ್ರಯತ್ನಪಡುವುದು ಮತ್ತು ಯಾರು ಯಾವುದರಲ್ಲಿ ಉತ್ತಮರೋ ಅವರು ಆ ಕೆಲಸವನ್ನು ಮಾಡುವುದು ನಾವು ಅಂದುಕೊಂಡ ಫಲಿತಾಂಶ ಪಡೆಯಲು ಇರುವ ಅತಿ ಸರಳ ಮತ್ತು ವೇಗದ ಮಾರ್ಗ.

ಆದರೆ ನಾವು ಇದನ್ನು ಮರೆತುಬಿಡುತ್ತೇವೆ. ಹೀಗಾಗಿ ಸರಳವಾಗಿರಬೇಕಾದ ಬದುಕು, ಸಂಘರ್ಷಮಯವೂ ಸಂಕೀರ್ಣವೂ ಆಗುತ್ತದೆ. ವಾಲ್ಟ್‌ಡಿಸ್ನಿ ಇದನ್ನು ಮೀರಿದವರು. ಅವರಿಗೆ ಕೆಲಸವನ್ನು ಇತರರಿಗೆ ವರ್ಗಾಯಿಸುವ ಕಲೆ ತಿಳಿದಿತ್ತು. ಅಷ್ಟೇ ಅಲ್ಲದೆ ಯಾರಿಗೆ ಯಾವ ಕೆಲಸವನ್ನು ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುವುದು ಕೂಡ ತಿಳಿದಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಹೊಸಬ, ಹಳಬ ಎನ್ನುವ ತಾರತಮ್ಯ ಮಾಡದೆ ಅವರವರ ಯೋಗ್ಯತೆಯನ್ನು ಮಾತ್ರ ಮಾನದಂಡವಾಗಿ ಇಟ್ಟುಕೊಂಡ ಕಾರಣ ವಾಲ್ಟ್‌ಡಿಸ್ನಿ ಮರಣಾ ನಂತರ ಕೂಡ ಕೋಟಿ ಕೋಟಿ ಜನರ ಮನಸ್ಸಿನಲ್ಲಿ ಇಂದಿಗೂ ಬದುಕಿದ್ದಾರೆ.

ಇದನ್ನೂ ಓದಿ: Rangaswamy Mookanahalli Column: ಪುಟಿನ್‌ ಹಿಂದಿನ ದೈತ್ಯಶಕ್ತಿ ಯಾರು ಗೊತ್ತಾ ?

ಅವರು ಸೃಷ್ಟಿಸಿದ ಮಿಕ್ಕಿ ಮೌಸ್ ಎಂಟರ್‌ಟೈನ್‌ಮೆಂಟ್ ಜಗತ್ತಿನ ಲಾಂಛನವಾಗಿ ರಾರಾ ಜಿಸುತ್ತಿದೆ. ಡಿಸ್ನಿ ಮತ್ತು ಮಿಕ್ಕಿ ಮೌಸ್ ನಮಗೆ ಗೊತ್ತಿಲ್ಲ ಎಂದು ಹೇಳುವವರ ಸಂಖ್ಯೆ ಬಹಳ ಕಡಿಮೆ. ಮಕ್ಕಳಿದ್ದ ಮನೆಯಲ್ಲಂತೂ ಇದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರೆ ಅದು ಶುದ್ಧ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ.

ಮಕ್ಕಳು ಮಾತ್ರವಲ್ಲದೆ ಯುವಕರನ್ನು, ಮುದುಕರನ್ನು ಒಟ್ಟಾರೆ ಎಲ್ಲರನ್ನೂ ಸೆಳೆದ, ಸೆಳೆಯುವ ಚುಂಬಕಶಕ್ತಿ ಮಿಕ್ಕಿ ಮೌಸ್‌ಗಿದೆ. ಇಷ್ಟು ಮೀರಿ ಕೂಡ ನಮಗೂ ಡಿಸ್ನಿ ಗೊತ್ತಿಲ್ಲ ಎನ್ನುವಂತಿಲ್ಲ, ಏಕೆಂದರೆ ವಾಲ್ಟ್‌ಡಿಸ್ನಿ ಕಂಪನಿ ತಯಾರಿಸಿರುವ ಚಲನಚಿತ್ರಗಳನ್ನು ನಾವು ನೋಡಿಲ್ಲ ಎಂದು ಹೇಳಲಾಗುವುದಿಲ್ಲ.

ಇದರ ಜತೆಗೆ ಮಾರ್ವೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯನ್ನು 2009ರಲ್ಲಿ, ಲುಕಾಫಿಲಂಸ್ ಎನ್ನುವ ಸಂಸ್ಥೆಯನ್ನು 2012ರಲ್ಲಿ ಮತ್ತು 20th ಸೆಂಚುರಿ ಫಾಕ್ಸ್ ಎನ್ನುವ ಸಂಸ್ಥೆಯನ್ನು 2019ರಲ್ಲಿ ಡಿಸ್ನಿ ಫಿಲಂಸ್ ಕೊಂಡುಕೊಂಡಿದೆ. ಈಗ ಹೇಳಿ ನಮಗೆ ಡಿಸ್ನಿ ಗೊತ್ತಿಲ್ಲವೆಂದು! ವಾಲ್ಟ್‌ಡಿಸ್ನಿ ಕಂಪನಿ 2024ರಲ್ಲಿ 177 ಬಿಲಿಯನ್ ಅಮೆರಿಕನ್ ಡಾಲರಿಗೂ ಮೀರಿದ ಮೌಲ್ಯವುಳ್ಳ ಸಂಸ್ಥೆಯಾಗಿದೆ.

Screenshot_7 ಋ

ವಾರ್ಷಿಕ ಸರಾಸರಿ ೯ ಚಿತ್ರಗಳನ್ನು ಈ ಸಂಸ್ಥೆ ತಯಾರು ಮಾಡುತ್ತಿದೆ. 2024ರಲ್ಲಿ ೩೦ ಸಿನಿಮಾಗಳು ಬಿಡುಗಡೆಯಾಗಲಿವೆ. ಹತ್ತಿರತ್ತಿರ ಎರಡೂವರೆ ಲಕ್ಷ ಜನ ವಾಲ್ಟ್‌ಡಿಸ್ನಿ ಸ್ಟುಡಿ ಯೋಸ್‌ನಲ್ಲಿ ಕೆಲಸ ಮಾಡುತ್ತಾರೆ. ಕೇವಲ 2023ರ ಒಂದು ವರ್ಷದಲ್ಲಿ 89 ಬಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಸಂಸ್ಥೆ ಹೊಂದಿದೆ.

2022ರಲ್ಲಿ ಅದು 82.7 ಬಿಲಿಯನ್ ಡಾಲರ್ ಲಾಭವನ್ನು ಪಡೆದುಕೊಂಡಿತ್ತು. ಇದೆಷ್ಟು ದೊಡ್ಡ ಮೊತ್ತ ಎಂದು ತಿಳಿಯಬೇಕೆ? ಜಗತ್ತಿನಲ್ಲಿ ಒಟ್ಟಾರೆ 197 ದೇಶಗಳಿವೆ, ಅದರಲ್ಲಿ ೯೦ಕ್ಕೂ ಹೆಚ್ಚು ದೇಶಗಳ ವಾರ್ಷಿಕ ವಹಿವಾಟು ತಲಾ ೨೫ ಬಿಲಿಯನ್ ಡಾಲರಿಗಿಂತ ಕಡಿಮೆ.

ಡಿಸ್ನಿ ಸ್ಟುಡಿಯೋಸ್ ವರ್ಷದಲ್ಲಿ ಗಳಿಸಿದ ಆದಾಯ ೨೫ರಿಂದ ೩೦ ದೇಶಗಳ ಒಂದು ವರ್ಷದ ಜಿಡಿಪಿಗೆ ಸಮ! 1966ರಲ್ಲಿ ವಾಲ್ಟ್‌ಡಿಸ್ನಿ ಇಲ್ಲಿನ ಆಟಕ್ಕೆ ವಿದಾಯ ಹೇಳಿ ಹೊರ ಟಾಗ ಅವರ ನಿವ್ವಳ ಆಸ್ತಿಯ ಮೊತ್ತ 150 ಮಿಲಿಯನ್ ಡಾಲರ್. ಇಂದಿನ ಲೆಕ್ಕಾಚಾರದ ಪ್ರಕಾರ ೧.೧ ಬಿಲಿಯನ್ ಅಮೆರಿಕನ್ ಡಾಲರ್!

ಇಷ್ಟೊಂದು ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದ ವಾಲ್ಟ್‌ಡಿಸ್ನಿ ಕೆಲಸ ಶುರು ಮಾಡಿದ್ದು ಮನೆ ಮನೆಗೆ ನ್ಯೂಸ್ ಪೇಪರ್ ತಲುಪಿಸುವ ಕೆಲಸದಿಂದ ಎಂದರೆ ನಂಬು‌ ವಿರಾ? ಸೋಲು, ನೋವು, ಹತಾಶೆ ಎಲ್ಲರ ಬದುಕಿನ ಭಾಗ. ಅದಕ್ಕೆ ಶರಣಾಗುವ ಅಥವಾ ಸೆಡ್ಡು ಹೊಡೆದು ನಿಲ್ಲುವ ಆಯ್ಕೆ ಆಯಾ ವ್ಯಕ್ತಿಗೆ ಸೇರಿದ್ದು.

1901ರ ಡಿಸೆಂಬರ್ ೫ರಂದು ಅಮೆರಿಕದ ಶಿಕಾಗೊ ನಗರದಲ್ಲಿ ಏಲಿಯಾಸ್ ಮತ್ತು ಫ್ಲೋರಾ ಡಿಸ್ನಿ ದಂಪತಿಗಳ ಐದು ಮಕ್ಕಳಲ್ಲಿ ನಾಲ್ಕನೆಯವರಾಗಿ ವಾಲ್ಟರ್ ಏಲಿಯಾಸ್ ಡಿಸ್ನಿ ಜನನವಾಗುತ್ತದೆ. ವಾಲ್ಟ್ ಡಿಸ್ನಿ ನಾಲ್ಕು ವರ್ಷದವರಿರುವಾಗ ಅವರ ಕುಟುಂಬವು ಶಿಕಾಗೊದಿಂದ ಮಿಸೌರಿಯ ಮಾರ್ಸೆಲೈನ್ ಎನ್ನುವ ನಗರಕ್ಕೆ ವಲಸೆ ಹೋಗುತ್ತದೆ.

ಡಿಸ್ನಿ ತಡವಾಗಿ ಶಾಲೆಯನ್ನು ಸೇರುತ್ತಾರೆ. ಎಂಟು ವರ್ಷದ ಹುಡುಗನಾಗಿದ್ದಾಗ ಶಾಲೆ ಸೇರಿದರೂ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಚಿತ್ರ ಬಿಡಿಸುವುದರ ಜತೆಗೆ ಬೇರೆ ಹವ್ಯಾಸಗಳು ಅವರಿಗೆ ಹೆಚ್ಚು ಇಷ್ಟವಾಗಿರುತ್ತವೆ. ನೆರೆಹೊರೆಯವರು ಬಾಲಕ ಡಿಸ್ನಿಯ ಕಲೆಯನ್ನು ಅಂದಿಗೆ ಹೊಗಳುತ್ತಿರುತ್ತಾರೆ.

ನಾಲ್ಕು ವರ್ಷ ಇಲ್ಲಿ ಸದ್ದಿಲ್ಲದೇ ಕಳೆದುಹೋಗುತ್ತದೆ. ಏಲಿಯಾಸ್‌ಗೆ ಟೈಫಾಯ್ಡ್ ಜ್ವರ ಬಂದು ಕೃಷಿ ಕೆಲಸ ಮಾಡುವ ಶಕ್ತಿ ಉಡುಗಿಹೋಗುತ್ತದೆ. ಹೀಗಾಗಿ ಕಾನ್ಸಾಸ್ ನಗರಕ್ಕೆ ವಲಸೆ ಹೋಗುತ್ತಾರೆ. ಇಲ್ಲಿ ಡಿಸ್ನಿ ಅವರ ತಂದೆ ನ್ಯೂಸ್ ಪೇಪರ್ ಏಜನ್ಸಿ ತೆಗೆದುಕೊಳ್ಳು ತ್ತಾರೆ. ಮನೆ ಮನೆಗೆ ನ್ಯೂಸ್ ಪೇಪರ್ ಹಂಚಲು ಬೇರೆಯರನ್ನು ನೇಮಿಸಿಕೊಳ್ಳಲು ಸಾಧ್ಯ ವಿಲ್ಲದ ಕಾರಣ ಕಡ್ಡಾಯವಾಗಿ ಈ ಕೆಲಸ ಮಾಡಬೇಕು ಎಂದು ಮಕ್ಕಳಿಗೆ ಏಲಿಯಾಸ್ ಆಗ್ರಹಿಸುತ್ತಾರೆ.

ಹೀಗಾಗಿ ೧೨ರ ವಯಸ್ಸಿನಿಂದ ಅಣ್ಣ ರಾಯ್ ಡಿಸ್ನಿ ಜತೆಗೆ ವಾಲ್ಟ್ ಡಿಸ್ನಿ ಬೆಳಗ್ಗೆ ನಾಲ್ಕೂ ವರೆಗೆ ಎದ್ದು ಪೇಪರ್ ಹಂಚುವ ಕೆಲಸದಲ್ಲಿ ತೊಡಗುತ್ತಾರೆ. ಮುಂದೆ ಅಪ್ಪನ ಈ ರೀತಿಯ ಕಡ್ಡಾಯ ಮತ್ತು ಶಿಸ್ತು ಜೀವನದಲ್ಲಿ ಬಹಳ ಉಪಯೋಗಕ್ಕೆ ಬಂದಿತು ಎಂದು ವಾಲ್ಟ್ ಡಿಸ್ನಿ ಹೇಳಿಕೊಂಡಿದ್ದಾರೆ. ಬೆಳಗ್ಗೆ-ಸಂಜೆ ಮನೆ ಮನೆಗೆ ಪತ್ರಿಕೆಯನ್ನು ತಲುಪಿಸುವ ಕೆಲಸವು ದೈಹಿಕ ಶ್ರಮವನ್ನು ಹೆಚ್ಚಿಸುತ್ತಿತ್ತು, ಇದರ ಜತೆಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಎಂಟನೇ ತರಗತಿಯ ನಂತರ ಶಾಲೆಯಿಂದ ಡ್ರಾಪ್ ಔಟ್ ಆಗುತ್ತಾರೆ.

ಮುಂದೆ ರೈಲಿನಲ್ಲಿ ನ್ಯೂಸ್ ಪೇಪರ್, ಸ್ವೀಟ್ಸ್ ಮತ್ತು ಸಾಫ್ಟ್ ಡ್ರಿಂಕ್ಸ್ ಮಾರುವ ವ್ಯಾಪಾರ ದಲ್ಲಿ ತೊಡಗಿಕೊಳ್ಳುತ್ತಾರೆ. ೧೬ ಕೂಡ ತುಂಬದ ಹುಡುಗ ಈ ವ್ಯಾಪಾರದಲ್ಲಿ ತೊಡಗಿ ಕೊಳ್ಳಬೇಕು ಎನ್ನುವ ಕಾರಣಕ್ಕೆ ೧೬ ತುಂಬಿದೆ ಎಂದು ಹೇಳಿ ಕೆಲಸದಲ್ಲಿ ತೊಡಗಿಕೊಳ್ಳು ತ್ತಾರೆ. ಆದರೆ ಹುಡುಗುಬುದ್ಧಿ, ಸರಿಯಾಗಿ ಸ್ಟಾಕ್ ಮೇನ್‌ಟೇನ್ ಮಾಡುವುದಿಲ್ಲ, ಲೆಕ್ಕಾಚಾರದಲ್ಲಿ ತಪ್ಪುಗಳಾಗುತ್ತದೆ. ‌

ಹೀಗಾಗಿ ಮಾಲೀಕರಿಗೆ ಹಣ ಕೊಡಬೇಕಾಗಿ ಬರುತ್ತದೆ. ವೇತನ ತೆಗೆದುಕೊಳ್ಳುವ ಬದಲಿಗೆ ಮಾಲೀಕರಿಗೆ ಹಣ ಕೊಡಬೇಕಾದ ಪ್ರಸಂಗ ಎದುರಾಗುತ್ತದೆ. ಅಣ್ಣ ರಾಯ್ ಡಿಸ್ನಿ ತಮ್ಮನ ಸಹಾಯಕ್ಕೆ ಬರುತ್ತಾರೆ. ಅವರಿಗೆ ಅಂದಿಗೆ ತಮ್ಮನ್ನೇ ಕೆಲಸಕ್ಕೆ ತೆಗೆದುಕೊಳ್ಳುವಷ್ಟು ದೊಡ್ಡ ಮಟ್ಟಕ್ಕೆ ಕಿರಿಯ ಸೋದರ ಬೆಳೆಯುತ್ತಾನೆ ಎನ್ನುವ ಅರಿವಿರಲಿಲ್ಲ. ಅಲ್ಲಿ ಇದ್ದದ್ದು ಸಹಜ ಭ್ರಾತೃಪ್ರೇಮ. ಅವರ ಕುಟುಂಬ 1917ರಲ್ಲಿ ಶಿಕಾಗೊಗೆ ಮರುವಲಸೆ ಮಾಡುತ್ತದೆ.

ಇಲ್ಲಿ ಕೂಡ ವಾಲ್ಟ್ ಡಿಸ್ನಿ ಹತ್ತಾರು ಪುಡಿ ಕೆಲಸಗಳನ್ನು ಮಾಡುತ್ತಾರೆ. ಫ್ಯಾಕ್ಟರಿಯಲ್ಲಿ, ಪೋ ಆಫೀಸ್‌ನಲ್ಲಿ ಕೆಲಸ ಮಾಡುತ್ತಾ ರಾತ್ರಿ ಶಾಲೆಯಲ್ಲಿ ಫೈನ್ ಆರ್ಟ್ಸ್‌ನಲ್ಲಿ ತರಬೇತಿ ಪಡೆಯುತ್ತಾರೆ. ಇವರ ಕಾರ್ಟೂನ್‌ಗಳು ಶಾಲೆಯ ನ್ಯೂಸ್ ಮ್ಯಾಗಜಿನ್‌ಗಳಲ್ಲಿ ಪ್ರಕಟ ವಾಗುತ್ತವೆ. ಇದರ ಜತೆಗೆ ಬಾಲಕ ವಾಲ್ಟ್ ಡಿಸ್ನಿ, ಚಾರ್ಲಿ ಚಾಪ್ಲಿನ್ ಅವರ ನಟನೆಯಿಂದ ಬಹಳ ಪ್ರೇರೇಪಿತರಾಗಿ ಶಾಲೆಯಲ್ಲಿ ಕೆಲವು ನಾಟಕಗಳನ್ನು ಮಾಡುತ್ತಾರೆ.

ಕಾನ್ಸಾಸ್ ನಗರದಲ್ಲಿ ಕಮರ್ಷಿಯಲ್ ಆರ್ಟ್ ಸ್ಟುಡಿಯೋ ಸೇರುತ್ತಾರೆ. ಅಲ್ಲಿ ಚಿತ್ರ ಬಿಡಿಸು ವುದು ಬಹಳ ಇಷ್ಟವಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಟಾಯ್ಲೆಟ್‌ಗೆ ಹೋಗುವು ದನ್ನು ಕೂಡ ಮುಂದೂಡಿ ಚಿತ್ರ ಬಿಡಿಸುವಷ್ಟು! ಇಲ್ಲಿ ಅವರಿಗೆ ಯುಬಿ ಇವೆರ್ಕ್ಸ್‌ ಎನ್ನುವರ ಪರಿಚಯವಾಗುತ್ತದೆ. ಮುಂದೆ ಇವರಿಬ್ಬರೂ ಸೇರಿ 1920ರಲ್ಲಿ ‘ಇವೆರ್ಕ್ಸ್‌ ಡಿಸ್ನಿ ಕಮರ್ಷಿ ಯಲ್ ಆರ್ಟಿ’ ಎನ್ನುವ ಸಂಸ್ಥೆಯನ್ನು ತೆರೆಯುತ್ತಾರೆ. ಈ ಸಂಸ್ಥೆಯನ್ನು ಡಿಸ್ನಿ ತಮ್ಮ ಉಳಿತಾಯದ ಹಣದಲ್ಲಿ ತೆರೆಯುತ್ತಾರೆ.

ಮೊದಲ ತಿಂಗಳ ಆದಾಯ ಚೆನ್ನಾಗೇ ಇರುತ್ತದೆ. ನಂತರ ಅದರಲ್ಲಿನ ಆದಾಯ ಅಷ್ಟಕ್ಕಷ್ಟೇ ಎನ್ನುವಂತಾಗುತ್ತದೆ. ಈ ಮಧ್ಯೆ ವಾಲ್ಟ್ ಡಿಸ್ನಿಗೆ ಬೇರೊಂದು ಸಂಸ್ಥೆಯಲ್ಲಿ ಉತ್ತಮ ಆಫರ್ ಬರುತ್ತದೆ. ಅವರು ಅದನ್ನು ಇವೆರ್ಕ್ಸ್‌ ಜತೆಗೆ ಮಾತನಾಡಿ ಒಪ್ಪಿಸಿ ಬೇರೆಡೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಒಂದೆರಡು ತಿಂಗಳ ನಂತರ ಇವೆರ್ಕ್ಸ್‌ ಕೂಡ ಸಂಸ್ಥೆ ತೊರೆದು ಬೇರೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಹೊಸ ಕೆಲಸದಲ್ಲಿ ಅನಿಮೇಟರ್ ಹುದ್ದೆಯಲ್ಲಿ ಡಿಸ್ನಿ ಬಹಳಷ್ಟು ಹೊಸ ಕ್ಯಾರೆಕ್ಟರ್ ಸೃಷ್ಟಿ ಮಾಡುತ್ತಾರೆ. ಅದು ಕೆಲವರಿಗೆ ಇಷ್ಟವಾಗುತ್ತದೆ. ಅವರ ಬಾಸ್‌ಗೆ ಅದು ಇಷ್ಟವಾಗುವುದಿಲ್ಲ. ‘ಲಾಫ್ ಓ ಗ್ರಾಂ’ ಎನ್ನುವ ಕಾರ್ಟೂನ್ ಸೃಷ್ಟಿಸಿ ಮಾರುತ್ತಾರೆ, ಆದರೆ ಅದರಿಂದ ಲಾಭ ಸಿಕ್ಕುವುದಿಲ್ಲ.

ಕೆಲಸದಲ್ಲಿ ಮುಂದುವರಿದುಕೊಂಡು ‘ಲಾಫ್ ಓ ಗ್ರಾಂ ಫಿಲಂಸ್’ ಎನ್ನುವ ಸಂಸ್ಥೆಯನ್ನು ಕಟ್ಟುತ್ತಾರೆ. ಒಳ್ಳೆಯ ಟೀಮ್ ತಯಾರುಮಾಡುತ್ತಾರೆ. ತಾವು ಕಲಿಯುತ್ತ ಹೊಸ ಟೀಮ್ ಸದಸ್ಯರಿಗೆ ಕಲಿಸುತ್ತ ಹೋಗುತ್ತಾರೆ.

1922ರಲ್ಲಿ ಕೆಲಸ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಇದಕ್ಕೆ ವೇಳೆಯನ್ನು ನೀಡಲು ಶುರು ಮಾಡುತ್ತಾರೆ. ಗೆಳೆಯ ಇವೆರ್ಕ್ಸ್‌ ಕೂಡ ಅದೇ ವರ್ಷ ಮತ್ತೆ ಇವರನ್ನು ಸೇರಿಕೊಳ್ಳುತ್ತಾರೆ. ಕೈಯಲ್ಲಿ ಹಣವಿದ್ದಷ್ಟು ತಿಂಗಳು ಎಲ್ಲವೂ ಚೆನ್ನಾಗಿ ಸಾಗುತ್ತದೆ. ಒಳ್ಳೆಯ ಕಾಂಟ್ರಾಕ್ಸ್‌ ಗಳು ಕೂಡ ಸಿಗುತ್ತವೆ. ಆದರೆ ಅವರು ಮುಂಗಡ ಹಣವನ್ನು ನೀಡುವುದಿಲ್ಲ, ಕೆಲಸ ಮಾಡುತ್ತಾ ಒಂದೆರಡು ವರ್ಷದ ನಂತರ ಬರುವ ಹಣಕ್ಕೆ ಕಾಯುವ ಶಕ್ತಿ ಡಿಸ್ನಿಗೆ ಇರುವುದಿಲ್ಲ.

ಆ ದಿನಗಳಲ್ಲಿ ಅಣ್ಣ ರಾಯ್ ಡಿಸ್ನಿ ನೀಡಿದ ಸಹಾಯದಿಂದ ಹೇಗೋ ಜೀವನ ಸಾಗಿಸು‌ ತ್ತಾರೆ. ಸ್ಟುಡಿಯೋ ಎಂಬುದು ಮನೆ, ಬದುಕು ಎಲ್ಲವೂ ಆಗಿರುತ್ತದೆ. 1923ರಲ್ಲಿ ‘ಆಲಿಸ್ ವಂಡರ್‌ಲ್ಯಾಂಡ್’ ಎನ್ನುವ ಪ್ರಾಜೆಕ್ಟ್ ತೆಗೆದುಕೊಳ್ಳುತ್ತಾರೆ. ಅದು ಮುಗಿದು ಜನರು ನೋಡುವ ಮೊದಲೇ ‘ಲಾಫ್ ಓ ಗ್ರಾಂ ಫಿಲಂಸ್’ ದಿವಾಳಿ ಏಳುತ್ತದೆ. ‌

ಇನ್ನೊಂದು ಸೋಲು ವಾಲ್ಟ್ ಡಿಸ್ನಿಗೆ ಜತೆಯಾಗುತ್ತದೆ. ಬೇರೆ ಯಾರಾದರೂ ಆಗಿದ್ದರೆ ಇದ್ದ ಬದ್ದ ಉಳಿತಾಯದ ಹಣವನ್ನು ಕಳೆದುಕೊಂಡು, ವೆಂಚರ್ ನಲ್ಲಿ ಸೋಲು ಕಂಡಿದ್ದರೆ ಧೃತಿಗೆಡುತ್ತಿದ್ದರು. ಆದರೆ ವಾಲ್ಟ್ ಡಿಸ್ನಿ ಏನೂ ಆಗಿಲ್ಲ ಎನ್ನುವಂತೆ ಸೋಲನ್ನು ಹಿಂದೆ ಬಿಟ್ಟು ಮುಂದೆ ನಡೆಯುತ್ತಾರೆ. ಈ ಬಾರಿ ಅವರ ಕಣ್ಣು ಹಾಲಿವುಡ್ ಕಡೆಗೆ ಸಾಗುತ್ತದೆ.

ಇಲ್ಲಿನ ವ್ಯಾಪಾರದ ಗುಟ್ಟುಗಳನ್ನು ತಿಳಿದುಕೊಳ್ಳಲು ಸೈಕಲ್ ಹೊಡೆಯುತ್ತಾರೆ. ಹಲವಾರು ಸ್ಟುಡಿಯೋ ಎಡತಾಕುತ್ತಾರೆ. ಮಾರ್ಗರೆಟ್ ವಿಂಕ್ಲೇರ್ ಎನ್ನುವ ಕಾರ್ಟೂನ್ ಡಿಸ್ಟ್ರಿಬ್ಯೂ ಟರ್ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದು ಅಂದಿನ ದಿನಕ್ಕೆ ಮಹತ್ತರ ತಿರುವು. ಅಣ್ಣ ರಾಯ್ ಡಿಸ್ನಿಯನ್ನು ತಮ್ಮ ಹೊಸ ಉದ್ದಿಮೆಯಲ್ಲಿ ಸೇರಿಕೊಳ್ಳುವಂತೆ ಹೇಳಿ ಕರೆಸಿಕೊಳ್ಳು ತ್ತಾರೆ. ‘ಡಿಸ್ನಿ ಬ್ರದರ್ಸ್’ ಹುಟ್ಟಿದ್ದು ಹೀಗೆ!

1924ರಲ್ಲಿ ಗೆಳೆಯ ಇವೆರ್ಕ್ಸ್‌ ನನ್ನು ಕೂಡ ಸಂಸ್ಥೆಗೆ ಸೇರಿಸಿಕೊಳ್ಳುತ್ತಾರೆ. ಡಿಸ್ನಿ ಮತ್ತು ಅವರ ತಂಡದವರು ‘ಓಸ್ವಾಲ್ಡ್ ದಿ ಲಕ್ಕಿ ರಾಬಿಟ್’ ಎನ್ನುವ ಕ್ಯಾರೆಕ್ಟರ್ ಅನ್ನು ಸೃಷ್ಟಿಸು ತ್ತಾರೆ. ಅದು ಬಹುದೊಡ್ಡ ಯಶಸ್ಸು ಕಾಣುತ್ತದೆ. ಸತತ ಸೋಲುಗಳ ನಡುವೆ ಯಶಸ್ಸು ಸಿಕ್ಕಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಾಗ 1928ರಲ್ಲಿ ‘ಲಕ್ಕಿ ರಾಬಿಟ್ ಕಾಂಟ್ರಾಕ್ಟ್’ ರಿನ್ಯೂ ಮಾಡಿಕೊಳ್ಳುವ ಸಮಯದಲ್ಲಿ ಇನ್ನಷ್ಟು ಉತ್ತಮ‌ ಹಣಕಾಸು ಕೇಳಬೇಕು ಎಂದು ಕೊಳ್ಳುತ್ತಾರೆ.

ಆದರೆ ಅವರಿಗೆ ಶಾಕ್ ಕಾದಿರುತ್ತದೆ. ಮಾರ್ಗರೆಟ್ ಅವರ ಪತಿ ಚಾರ್ಲ್ಸ್ ಅದನ್ನು ಯೂನಿ ವರ್ಸಲ್ ಸ್ಟುಡಿಯೋಸ್‌ಗೆ ಮಾರಿಬಿಟ್ಟಿರುತ್ತಾರೆ. ಯಶಸ್ಸು ಸಿಕ್ಕ‌ ಸ್ವಲ್ಪದರಲ್ಲಿ ‘ಡಿಸ್ನಿ ಬ್ರದರ್ಸ್’ ಮತ್ತೆ ಸೋಲಿನ ದವಡೆಗೆ ಸಿಲುಕುತ್ತದೆ.

ವಾಲ್ಟ್ ಡಿಸ್ನಿ ಬಳಿ ಪ್ರತಿಭಾವಂತ ಜನರಿದ್ದರು. ಸೋಲು ಎನ್ನುವುದು ಆ ಕ್ಷಣದ ಫಲಿತಾಂಶ ಎನ್ನುವುದು ಈ ವೇಳೆಗೆ ಅವರಿಗೆ ಗೊತ್ತಾಗಿತ್ತು. ಅಲ್ಲದೆ ತಲೆಯ ತುಂಬಾ ಕ್ರಿಯೇಟಿವ್ ಐಡಿಯಾಗಳಿದ್ದವು. ಆಗ ಹುಟ್ಟಿದ್ದು ಮೌಸ್, ಮಿಕ್ಕಿ ಮೌಸ್ ಕ್ಯಾರೆಕ್ಟರ್. ನಿಮಗೆ ಗೊತ್ತಿರಲಿ, ಡಿಸ್ನಿ ಉತ್ತಮ ಇಮ್ಯಾಜಿನೇಶನ್ ಹೊಂದಿದ್ದರು, ಆದರೆ ಉತ್ತಮ ಆರ್ಟಿ ಆಗಿರಲಿಲ್ಲ.

ತಮಗೆ ತೋಚಿದ ರೀತಿಯಲ್ಲಿ ಮಿಕ್ಕಿ ಮೌಸ್ ಚಿತ್ರ ಬರೆದು ಗೆಳೆಯ ಇವೆರ್ಕ್ಸ್‌ ಕೈಲಿಡುತ್ತಾರೆ. ಆತ ಚಮತ್ಕಾರ ಸೃಷ್ಟಿಸಿ ಬಿಡುತ್ತಾನೆ. ಇವರಿಬ್ಬರ ಜತೆಗಾರಿಕೆಯಲ್ಲಿ ಹೀಗೆ ಹುಟ್ಟಿದ ಮಿಕ್ಕಿ ಮೌಸ್ ಎಂಟರ್‌ಟೈನ್‌ಮೆಂಟ್ ಜಗತ್ತನ್ನು ಇಂದಿಗೂ ಆಳುತ್ತಿದೆ.

65 ವಸಂತಗಳನ್ನು ಪೂರೈಸಿ ಕೇವಲ ಹತ್ತು ದಿನದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿ 1966ರ ಡಿಸೆಂಬರ್ ೧೫ರಂದು ವಾಲ್ಟ್ ಡಿಸ್ನಿ ತಮ್ಮ ಈ ಲೋಕದ ಕ್ಯಾರೆಕ್ಟರ್ ಅನ್ನು ಕೊನೆ ಗಾಣಿಸುತ್ತಾರೆ. ಅವರೆಂಥ ಕನಸುಗಾರ ಎಂದರೆ, ಅವರ ಪಾತ್ರದ ಅವಧಿ ಮುಗಿದರೂ ಜಗತ್ತಿನಾದ್ಯಂತ ಜನ ಮಾತ್ರ ಇಂದಿಗೂ ಅವರನ್ನು, ಅವರು ಸೃಷ್ಟಿಸಿದ ಪಾತ್ರಗಳನ್ನು, ಲೆಗಸಿಯನ್ನು ಸದಾ ನೆನಪಿನಲ್ಲಿಟ್ಟು ಕೊಳ್ಳುವಂತೆ ಮಾಡಿ ಹೋಗಿದ್ದಾರೆ.

ರಂಗಸ್ವಾಮಿ ಎಂ

View all posts by this author