ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಸಾವನ್ನು ನಗುತ್ತಲೇ ಗೆದ್ದ ಅಪ್ರತಿಮ ವೀರ: ಸ್ಯಾಮ್‌ ಮಾಣಿಕ್‌ʼಶಾ

ಒಂಬತ್ತು ಗುಂಡುಗಳು ಅವರ ಹೊಟ್ಟೆ, ಶ್ವಾಸಕೋಶ ಮತ್ತು ಯಕೃತ್ತನ್ನು ಛಿದ್ರ ಗೊಳಿಸಿದ್ದವು. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಸ್ಯಾಮ್ ಅವರನ್ನು ನೋಡಿ, ಜತೆಗಿದ್ದವರು ಅವರು ಬದುಕುವುದು ಅಸಾಧ್ಯವೆಂದೇ ಭಾವಿಸಿದ್ದರು. ಅವರ ಅದಮ್ಯ ಶೌರ್ಯವನ್ನು ಕಣ್ಣಾರೆ ಕಂಡಿದ್ದ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಡೇವಿಡ್ ಕೋವನ್ ಓಡಿ ಬಂದು ಸ್ಯಾಮ್ ಅವರ ಸ್ಥಿತಿಯನ್ನು ಕಂಡರು.

ಒಂದೊಳ್ಳೆ ಮಾತು

1942ರಲ್ಲಿ ಎರಡನೇ ಮಹಾಯುದ್ಧದ ಜಗತ್ತನ್ನು ಜ್ವಾಲೆ ಇಡೀ ಆವರಿಸಿತ್ತು. ಬರ್ಮಾದ ಈಗಿನ ಮ್ಯಾನ್ಮಾರ್) ದಟ್ಟ ಕಾಡುಗಳಲ್ಲಿ ಜಪಾನಿ ಸೈನಿಕರ ಅಬ್ಬರ ಜೋರಾಗಿತ್ತು. ಅಲ್ಲಿನ ಸಿಟ್ಟಾಂಗ್ ಸೇತುವೆಯ ಬಳಿ ನಡೆದ ಆ ಭೀಕರ ಯುದ್ಧ, ಇತಿಹಾಸದ ಪುಟಗಳಲ್ಲಿ ಅಳಿಸ ಲಾಗದ ಸ್ಮರಣೆಯಾಗಿ ಉಳಿದಿದೆ. ಆ ಯುದ್ಧ ಭೂಮಿಯಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯ 4/12 ಫ್ರಾಂಟಿಯರ್ ಫೋರ್ಸ್ ರೆಜಿಮೆಂಟ್‌ನ ಯುವ ಕ್ಯಾಪ್ಟನ್ ಒಬ್ಬರು ನಡುಕ ಶತ್ರುಗಳ ಎದೆಯಲ್ಲಿ ಹುಟ್ಟಿಸುತ್ತಿದ್ದರು.

ಅವರೇ ‘ಸ್ಯಾಮ್ ಮಾಣಿಕ್‌ಶಾ.’ ಜಪಾನಿ ಪಡೆಗಳು ಮುನ್ನುಗ್ಗುತ್ತಿದ್ದಂತೆ, ಸ್ಯಾಮ್ ಅವರ ತುಕಡಿಯ ಮೇಲೆ ಗುಂಡಿನ ಮಳೆ ಸುರಿಯಲಾರಂಭಿಸಿತು. ಪರಿಸ್ಥಿತಿ ಕೈ ಮೀರುತ್ತಿರುವು ದನ್ನು ಕಂಡ ಸ್ಯಾಮ್, ಸೈನಿಕರಲ್ಲಿ ಧೈರ್ಯ ತುಂಬಲು ಸ್ವತಃ ರಣರಂಗದ ಮುಂಚೂಣಿಗೆ ಬಂದರು. ‌ತಮ್ಮ ಸಹೋದ್ಯೋಗಿಗಳು ಸುರಕ್ಷಿತವಾಗಿ ಹಿಂದೆ ಸರಿಯಲು ದಾರಿ ಮಾಡಿ ಕೊಡುವ ಸಲುವಾಗಿ ಅವರು ಪ್ರತಿ-ದಾಳಿಯನ್ನ ನಡೆಸಿದರು. ಆದರೆ, ಆ ಭೀಕರ ಹೋರಾಟದ ಮಧ್ಯೆ, ಶತ್ರುಗಳ ಮೆಷಿನ್ ಗನ್‌ನಿಂದ ಸಿಡಿದ ಸರಣಿ ಗುಂಡುಗಳು ನೇರವಾಗಿ ಸ್ಯಾಮ್ ಅವರ ದೇಹವನ್ನು ತೂರಿ ಹೋದವು.

ಒಂಬತ್ತು ಗುಂಡುಗಳು ಅವರ ಹೊಟ್ಟೆ, ಶ್ವಾಸಕೋಶ ಮತ್ತು ಯಕೃತ್ತನ್ನು ಛಿದ್ರ ಗೊಳಿಸಿದ್ದವು. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಸ್ಯಾಮ್ ಅವರನ್ನು ನೋಡಿ, ಜತೆಗಿದ್ದವರು ಅವರು ಬದುಕುವುದು ಅಸಾಧ್ಯವೆಂದೇ ಭಾವಿಸಿದ್ದರು. ಅವರ ಅದಮ್ಯ ಶೌರ್ಯವನ್ನು ಕಣ್ಣಾರೆ ಕಂಡಿದ್ದ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಡೇವಿಡ್ ಕೋವನ್ ಓಡಿ ಬಂದು ಸ್ಯಾಮ್ ಅವರ ಸ್ಥಿತಿಯನ್ನು ಕಂಡರು.

ಇದನ್ನೂ ಓದಿ: Roopa Gururaj Column: ತುಳಸೀದಾಸರ ಹನುಮಾನ್ ಚಾಲೀಸಾದ ಉಗಮದ ಕಥೆ

ಸತ್ತ ನಂತರ ಯಾರಿಗೂ ಮಿಲಿಟರಿ ಕ್ರಾಸ್ ಪದಕ ನೀಡುವುದಿಲ್ಲ ಎಂದು ಭಾವಿಸಿದ ಕೋವನ್, ತಕ್ಷಣ ತಮ್ಮ ಎದೆಯ ಮೇಲಿದ್ದ ‘ಮಿಲಿಟರಿ ಕ್ರಾಸ್’ (Military Cross) ಪದಕ ವನ್ನು ತೆಗೆದು ಸ್ಯಾಮ್ ಅವರ ಎದೆಯ ಮೇಲೆ ತೊಡಿಸಿದರು. ಅದು ಒಬ್ಬ ವೀರನಿಗೆ ಯುದ್ಧಭೂಮಿಯ ಸಿಕ್ಕ ಅತ್ಯುನ್ನತ ಗೌರವವಾಗಿತ್ತು.‌

ಅರೆಪ್ರಜ್ಞಾವಸ್ಥೆಯಲ್ಲಿದ್ದ ಸ್ಯಾಮ್ ಅವರನ್ನು ಹೇಗೋ ಮಾಡಿ ಫೀಲ್ಡ್ ಆಸ್ಪತ್ರೆಗೆ ಸಾಗಿಸಲಾ ಯಿತು. ಅಲ್ಲಿನ ಆಸ್ಟ್ರೇಲಿಯನ್ ಸರ್ಜನ್ ಸ್ಯಾಮ್ ಇವರ ದಾರುಣ ಸ್ಥಿತಿಯನ್ನು ನೋಡಿ ದಾಗ, ಸಾವಿನ ಅಂಚಿನಲ್ಲಿದ್ದರೂ ಸ್ಯಾಮ್ ಅವರಲ್ಲಿನ ಹಾಸ್ಯಪ್ರಜ್ಞೆ ಬತ್ತಿರಲಿಲ್ಲ. ಅವರು ನಿಧಾನವಾಗಿ, ‘ನನ್ನನ್ನು ಒಂದು ಕತ್ತೆ ಒದೆಯಿತು!’ ಎಂದು ಪಿಸುಗುಟ್ಟಿದ್ದರಂತೆ.

ಅಷ್ಟು ನೋವಿನಲ್ಲೂ ತಮಾಷೆ ಮಾಡುತ್ತಿದ್ದೆ. ಆ ಮನುಷ್ಯನ ಬದುಕುವ ಛಲವನ್ನು ಕಂಡ ವೈದ್ಯರು ಆಶ್ಚರ್ಯಚಕಿತರಾದರು. ಯಾವ ಮನುಷ್ಯ ಸಾವು ಹತ್ತಿರವಿದ್ದಾಗಲೂ ಇಷ್ಟು ಧೈರ್ಯದಿಂದ ನಗಬಲ್ಲನೋ, ಅವನು ಖಂಡಿತಾ ಬದುಕುತ್ತಾನೆ ಎಂದು ಹೇಳಿ ಅತ್ಯಂತ ಅಪಾಯಕಾರಿ ಶಸ್ತ್ರಚಿಕಿತ್ಸೆ ನಡೆಸಿ ಸ್ಯಾಮ್ ಅವರನ್ನು ಬದುಕಿಸಿದರು.

ಆದರೆ, ಈ ಘಟನೆ ಅವರ ವೃತ್ತಿಜೀವನದ ಅಂತ್ಯವಾಗಲಿಲ್ಲ, ಬದಲಾಗಿ ಅದೊಂದು ಹೊಸ ಯುಗದ ಆರಂಭವಾಗಿತ್ತು. ಮುಂದೆ ಅವರು ಭಾರತೀಯ ಸೇನೆಯಲ್ಲಿ ಉನ್ನತ ಸ್ಥಾನಕ್ಕೇ ರುತ್ತಾ ಹೋದರು. ಸುಮಾರು ಮೂರು ದಶಕಗಳ ನಂತರ, 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿ ಅವರು ತೋರಿದ ಚಾಣಾಕ್ಷ ತನ ಮತ್ತು ನಾಯಕತ್ವ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು.

ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಐತಿಹಾಸಿಕ ಜಯದ ರೂವಾರಿ ಸ್ಯಾಮ್ ಮಾಣಿಕ್‌ಶಾ ಅವರೇ ಆಗಿದ್ದರು. 1973ರಲ್ಲಿ ಅವರು ಭಾರತದ ಮೊದಲ ‘ಫೀಲ್ಡ್ ಮಾರ್ಷಲ್’ ಆಗಿ ಗೌರವಿಸಲ್ಪಟ್ಟರು. ಬರ್ಮಾದ ಕಾಡಿನಲ್ಲಿ ಹೆಣವಾಗಿ ಬೀಳಬೇಕಿದ್ದ ಒಬ್ಬ ಯುವ ಅಧಿಕಾರಿ, ತನ್ನ ಅಪ್ರತಿಮ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ದಕ್ಷಿಣ ಏಷ್ಯಾದ ಇತಿಹಾಸವನ್ನೇ ಬದಲಿಸಿದರು.

ಬದುಕುವ ಛಲ ಮತ್ತು ಪರಿಸ್ಥಿತಿಯನ್ನು ಎದುರಿಸುವ ಸಮಯಪ್ರಜ್ಞೆ ಇದ್ದರೆ, ಸಾವಿನ ಹೊಸ್ತಿಲಿನಿಂದಲೂ ಮರಳಿ ಬಂದು ಬದುಕಲ್ಲಿ ಗೆದ್ದು ತೋರಿಸಬಹುದು. ಇಂತಹ ನೂರಾರು ಉದಾಹರಣೆ ನಮ್ಮ ಸುತ್ತಲೂ ಸಿಗುತ್ತದೆ. ಜೀವನೋತ್ಸಾಹ ನಮ್ಮೊಳಗೆ ಹುಟ್ಟಬೇಕು ಅಷ್ಟೇ.

ರೂಪಾ ಗುರುರಾಜ್

View all posts by this author