ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಗಟಾರದ ಜಿರಳೆ

ಸಾಮಾಜಿಕ ಜಾಲತಾಣಗಳಲ್ಲಿ ಎಡೆ ಜಿರಳೆ ಸದ್ದು ಮಾಡುತ್ತಿದೆ. ಜಿರಳೆ ಕಂಡರೆ ಅಸಹ್ಯ ಪಡುತ್ತಿದ್ದವರು ಈಗ ಆ ಪ್ರಾಣಿಯ ಹೆಸರಿನಲ್ಲಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎದ್ದಿರುವುದನ್ನು ಕಂಡು ಅಚ್ಚರಿಪಡು ತ್ತಿದ್ದಾರೆ. ಈ ಸಂದರ್ಭದಲ್ಲಿ ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಅಮಿತಾಭ್ ಬಚ್ಚನ್ ಅವರು ಬಾಲಿವುಡ್‌ನ ಅಪ್ರತಿಮ ‘ಆಂಗ್ರಿ ಯಂಗ್ ಮ್ಯಾನ್’ ಆಗಿ ಮೆರೆಯು ತ್ತಿದ್ದ ಕಾಲವದು.

ಸಂಪಾದಕರ ಸದ್ಯಶೋಧನೆ

ಸಾಮಾಜಿಕ ಜಾಲತಾಣಗಳಲ್ಲಿ ಎಡೆ ಜಿರಳೆ ಸದ್ದು ಮಾಡುತ್ತಿದೆ. ಜಿರಳೆ ಕಂಡರೆ ಅಸಹ್ಯ ಪಡುತ್ತಿದ್ದವರು ಈಗ ಆ ಪ್ರಾಣಿಯ ಹೆಸರಿನಲ್ಲಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎದ್ದಿರುವುದನ್ನು ಕಂಡು ಅಚ್ಚರಿಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ನನಗೆ ಒಂದು ಪ್ರಸಂಗ ನೆನಪಾಗುತ್ತಿದೆ. ಅಮಿತಾಭ್ ಬಚ್ಚನ್ ಅವರು ಬಾಲಿವುಡ್‌ನ ಅಪ್ರತಿಮ ‘ಆಂಗ್ರಿ ಯಂಗ್ ಮ್ಯಾನ್’ ಆಗಿ ಮೆರೆಯು ತ್ತಿದ್ದ ಕಾಲವದು. ಆಗಿನ ಕಾಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ‘ಈಗಲ್ ಫಿಲ್ಮ್ಸ್ ’ ಮತ್ತು ಅದರ ಮಾಲೀಕರಾದ ಎಫ್.ಸಿ.ಮೆಹ್ರಾ ಹಾಗೂ ಅಮಿತಾಭ್ ನಡುವೆ ನಡೆದ ಒಂದು ಘರ್ಷಣೆ ಇಂದಿಗೂ ಚಿತ್ರರಂಗದ ಇತಿಹಾಸದಲ್ಲಿ ಚರ್ಚೆಯಾಗುವಂಥದ್ದು. ‌

ಈ ವಿವಾದ ಎಷ್ಟು ತಾರಕಕ್ಕೇರಿತ್ತೆಂದರೆ, ಅಮಿತಾಭ್ ಅವರು ನಿರ್ಮಾಪಕರನ್ನು ‘ಗಟಾರದ ಜಿರಳೆ’ ಎಂದು ಕರೆದಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಘರ್ಷಣೆಯ ಮೂಲವಿದ್ದುದು ಅಮಿತಾಭ್ ಮತ್ತು ಜೀನತ್ ಅಮಾನ್ ನಟಿಸಬೇಕಿದ್ದ ‘ಪಾಪಿ’ ಎಂಬ ಚಲನಚಿತ್ರದಲ್ಲಿ. ಈ ಚಿತ್ರವನ್ನು ಈಗಲ್ ಫಿಲ್ಮ್ಸ್ ನಿರ್ಮಿಸುತ್ತಿತ್ತು. ಆ ಸಮಯದಲ್ಲಿ ಅಮಿತಾಭ್ ಅವರ ಜನಪ್ರಿಯತೆ ಗಗನಕ್ಕೇರಿತ್ತು.

ಚಿತ್ರದ ಚಿತ್ರೀಕರಣದ ನಡುವೆ ಸಂಭಾವನೆಯ ವಿಷಯದಲ್ಲಿ ಅಥವಾ ಕಾಲ್ ಶೀಟ್ ಹಂಚಿಕೆಯ ವಿಚಾರದಲ್ಲಿ ಬಿಗ್ ಬಿ ಮತ್ತು ಮೆಹ್ರಾ ಕುಟುಂಬದ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ವಿವಾದದ ಸಮಯದಲ್ಲಿ ಪತ್ರಕರ್ತರು ಅಮಿತಾಭ್ ಅವರನ್ನು ಈ ಗಲಾಟೆಯ ಬಗ್ಗೆ ಪ್ರಶ್ನಿಸಿದಾಗ, ಸಿಟ್ಟಿನಲ್ಲಿದ್ದ ಅಮಿತಾಭ್ ಅವರು ನಿರ್ಮಾಪಕರನ್ನು ಉದ್ದೇಶಿಸಿ ಬಹಳ ಕಟುವಾದ ಶಬ್ದಗಳನ್ನು ಬಳಸಿದ್ದರು.

ಇದನ್ನೂ ಓದಿ: Vishweshwar Bhat Column: ಬಾಳೆಹಣ್ಣಿಗೊಂದು ಕವಚ

‘ನಿರ್ಮಾಪಕರು ತಮ್ಮನ್ನು ತಾವು ಏನಂದುಕೊಂಡಿದ್ದಾರೆ? ಅವರು ಕೇವಲ ಗಟಾರದ ಜಿರಳೆಗಳು’ ಎಂಬರ್ಥದ ಹೇಳಿಕೆಯನ್ನು ನೀಡಿದರು. ಈ ಮಾತು ಅಂದಿನ ಚಿತ್ರರಂಗದ ನಿಯತಕಾಲಿಕೆಗಳಲ್ಲಿ (ಸಿನಿ ಬ್ಲಿಟ್ಜ್ ಮತ್ತು ಸ್ಟಾರ್ ಡ) ಮುಖಪುಟದ ಸುದ್ದಿಯಾಯಿತು.

ಅಮಿತಾಭ್ ಅವರಂಥ ಶಿಸ್ತಿನ ಮತ್ತು ಘನವಂತ ನಟನಿಂದ ಇಂಥ ಮಾತು ಬಂದಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ಆ ಸಮಯದಲ್ಲಿ ಈಗಲ್ ಫಿಲ್ಮ್ಸ್ ಬಾಲಿವುಡ್‌ನಲ್ಲಿ ಬಹಳ ಪ್ರಭಾವಶಾಲಿ ಯಾಗಿದ್ದ ಸಿನಿಮಾ ನಿರ್ಮಾಣ ಸಂಸ್ಥೆಯಾಗಿತ್ತು. ಅಮಿತಾಭ್ ಅವರ ಈ ‘ಜಿರಳೆ’ ಪದದ ಪ್ರಯೋಗ ದಿಂದ ಎಫ್.ಸಿ. ಮೆಹ್ರಾ ಅವರು ತೀವ್ರವಾಗಿ ಆಕ್ರೋಶಗೊಂಡರು. ನನ್ನಂಥ ಒಬ್ಬ ಪ್ರತಿಷ್ಠಿತ ನಿರ್ಮಾಪಕನನ್ನು ಸಾರ್ವಜನಿಕವಾಗಿ ಇಷ್ಟು ಕೀಳಾಗಿ ನಿಂದಿಸಿದ್ದು ತಮ್ಮ ಘನತೆಗೆ ಧಕ್ಕೆ ತಂದಿತು ಎಂದು ಅವರು ಭಾವಿಸಿದರು. ‌

ತಕ್ಷಣವೇ ಅವರು ಅಮಿತಾಭ್ ಬಚ್ಚನ್ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Case) ಹೂಡಲು ಸಿದ್ಧತೆ ನಡೆಸಿದರು. ವಕೀಲರ ಮೂಲಕ ನೋಟಿಸ್ ಕಳುಹಿಸುವ ಪ್ರಕ್ರಿಯೆಯೂ ಆರಂಭ ವಾಯಿತು. ಒಂದು ವೇಳೆ ಈ ಕೇಸ್ ನ್ಯಾಯಾಲಯಕ್ಕೆ ಹೋಗಿದ್ದರೆ, ಅಮಿತಾಭ್ ಅವರ ವೃತ್ತಿ ಜೀವನದ ಮೇಲೆ ಅದು ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿತ್ತು.

‘ಚಿತ್ರರಂಗ ಎನ್ನುವುದು ಒಂದು ಸಣ್ಣ ಕುಟುಂಬದಂತೆ. ಇಲ್ಲಿ ಪರಸ್ಪರರ ವೈಮನಸ್ಸಿನಿಂದ ಕೋರ್ಟಿ ಗೆ ಹೋದರೆ ಕುಟುಂಬದ ವಿಷಯ ಬೀದಿಗೆ ಬಂದಂತಾಗುತ್ತದೆ. ಅಲ್ಲಿ ಜಗಳಗಳಿಗಿಂತ ವ್ಯವಹಾರ ಮುಖ್ಯವಾಗುತ್ತದೆ’ ಎಂದು ಕೆಲವು ಹಿರಿಯರು ಪಂಚಾಯತಿ ಮಾಡಿದರು.

ಅಂತಿಮವಾಗಿ, ಉದ್ಯಮದ ಹಿರಿಯರು ಮತ್ತು ಮಿತ್ರರ ಮಧ್ಯಸ್ಥಿಕೆಯಿಂದ ಈ ವಿವಾದ ಬಗೆಹರಿ ಯಿತು. ಅಮಿತಾಭ್ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದರು. ಅಷ್ಟೇ ಅಲ್ಲ, ವಿಷಯ ವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು. ಮುಂದೆ ಇದೇ ಈಗಲ್ ಫಿಲ್ಮ್ಸ್ ನಿರ್ಮಾಣದ ‘ಕಸ್ಮೆ ವಾದೆ’ ಚಿತ್ರದಲ್ಲಿ ಅಮಿತಾಭ್ ನಟಿಸಿದರು.

ಅಮಿತಾಭ್ ಅವರ ‘ಜಿರಳೆ’ ಎಂಬ ಆ ಕಟು ಟೀಕೆ ಇಂದಿಗೂ ಅವರ ಜೀವನದ ‘ಆಂಗ್ರಿ ಯಂಗ್ ಮ್ಯಾನ್’ ಸ್ವಭಾವಕ್ಕೆ ಒಂದು ಉದಾಹರಣೆಯಾಗಿ ಉಳಿದಿದೆ. ಜಿರಳೆ ಎಷ್ಟೇ ತಿರಸ್ಕೃತ ಪ್ರಾಣಿ ಯಾದರೂ, ಅದು ಬಾಲಿವುಡ್‌ನ ಮಹಾಶಕ್ತಿಯನ್ನು ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿತ್ತು ಎನ್ನುವುದು ಇಲ್ಲಿನ ವಿಶೇಷ!

ಎಂ.ಜಿ. ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಅವರು ವಿರೋಧಿಗಳನ್ನು ಹೀಯಾ ಳಿಸುವಾಗ ‘ಜಿರಳೆ’ ಎಂಬ ರೂಪಕ ಬಳಸುತ್ತಿದ್ದರು. ‘ಬೆಳಕು (ಅಧಿಕಾರ) ಕಂಡ ಕೂಡಲೇ ಸಂದಿ-ಗೊಂದಿಗಳಲ್ಲಿ ಅಡಗಿಕೊಳ್ಳುವ ಜಿರಳೆ ಬುದ್ಧಿಯ ರಾಜಕಾರಣಿಗಳು’ ಎಂದು ಅವರು ಟೀಕಿಸುತ್ತಿದ್ದರು.

ವಿಶ್ವೇಶ್ವರ ಭಟ್‌

View all posts by this author