ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ಸಿಎಸ್‌ʼಇಎಲ್‌ ಸಂವಹನ ಸಾಧನ: ಸಮರ ಸೈನಿಕರ ಸಂಜೀವಿನಿ !

ಯುದ್ಧ ವಿಮಾನವನ್ನು ಕಳಕೊಳ್ಳುವುದದ ಜತೆಗೆ ಇಬ್ಬರು ಯೋಧರು ಶತ್ರುಗಳ ಭದ್ರಕೋಟೆ ಯೊಳಗೆ ಬಿದ್ದು, ಅವರನ್ನೂ ಕಳಕೊಳ್ಳಬೇಕಾದ ಪರಿಸ್ಥಿತಿ ಅಮೆರಿಕಗೆ ಬಂದೊದಗಿತು. ಇದರಲ್ಲಿ ‘ಒಬ್ಬ ಪೈಲೆಟ್ ಅನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ’ ಎಂದು ಇರಾನ್ ಘೋಷಿಸಿತು ಮತ್ತು ಅಮೆರಿಕ ಕೂಡ ‘ನಮ್ಮಿಬ್ಬರು ಪೈಲಟ್‌ಗಳ ಶೋಧ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿತು

ರಾಯಲ್‌ ಸೀಮೆ

ರವೀ ಸಜಂಗದ್ದೆ

ನಮಗೆ ಒಮ್ಮೊಮ್ಮೆ ಎಷ್ಟೊಂದು ಮರೆವು ಎಂದರೆ ಕನ್ನಡಕ ಎಲ್ಲಿ ಇಟ್ಟಿದ್ದೇವೆ? ಆಗಷ್ಟೇ ನೋಡಿದ ಮೊಬೈಲ್ ಎಲ್ಲಿ ಕುಕ್ಕಿದ್ದೇವೆ? ಸ್ಕೂಟರ್ ಕೀ ಅದಕ್ಕೇ ಬಿಟ್ಟಿದ್ದೇವೆಯೇ ಅಲ್ಲ ಪ್ಯಾಂಟ್ ಕಿಸೆ ಯಲ್ಲಿಟ್ಟು ಅದಾಗಲೇ ಅದು ವಾಷಿಂಗ್ ಮೆಷಿನ್‌ನಲ್ಲಿ ತಿರುಗುತ್ತಿದೆಯೇ? ಓದಬೇಕು ಎಂದು ವಾರ ಗಳ ಹಿಂದೆ ಎತ್ತಿಟ್ಟಿದ್ದ ಪುಸ್ತಕ ಈಗ ಎಷ್ಟು ಹುಡುಕಿದರೂ ಕಣ್ಣಿಗೆ ಬೀಳುತ್ತಿಲ್ಲವಲ್ಲ? ಹೀಗೆ ಸಣ್ಣ ಪುಟ್ಟ ವಸ್ತುಗಳನ್ನು ಹುಡುಕಲು ಆಗೀಗ ಹರಸಾಹಸ ಪಡುತ್ತಿರುತ್ತೇವೆ!

ಇನ್ನು ಗೂಗಲ್ ಮ್ಯಾಪ್ ಹಾಕಿ ಯಾವುದೋ ಪರಿಚಯವಿಲ್ಲದ ಪ್ರದೇಶ ಇನ್ನೇನು ತಲುಪಿತು ಎನ್ನುವಾಗ ಎಡ-ಬಲ ಗೊತ್ತಾಗದೆ ಪೇಚಾಡುವ, ಹಲವು ಬಾರಿ ‘ರೀ ರೂಟ್’ ಆಗಿ ಅ ಗಿರಕಿ ಹೊಡೆದ ಅನುಭವ ಬಹುತೇಕ ನಮಗೆಲ್ಲ ಆಗಿರುತ್ತದೆ. ಇಂಥಾ ಸಣ್ಣಪುಟ್ಟ ಜಂಜಾಟ-ಹುಡುಕಾಟಗಳ ನಡುವೆ, ವೈರಿ ದೇಶದಲ್ಲಿ ಕಣ್ಮರೆಯಾದ ಸೈನಿಕರನ್ನು ಅವರಿದ್ದ ದುರ್ಗಮ ಪ್ರದೇಶಕ್ಕೆ ಹೋಗಿ, ಜೀವಂತವಾಗಿ ಕರೆದುಕೊಂಡು ಬರಲು ಸಹಕಾರಿಯಾಗುವ ಉಪಯುಕ್ತ ಸಾಧನವೊಂದರ ಕುರಿತ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ!

ಯುದ್ಧ ಎಂದರೆ ಶಸ್ತ್ರಾಸ್ತ್ರಗಳ ಅಬ್ಬರ, ಕ್ಷಿಪಣಿಗಳ ಆರ್ಭಟ ಮತ್ತು ಸಾವು-ನೋವುಗಳು ಮಾತ್ರ ವಲ್ಲ. ಸಾಹಸ, ಬದುಕುಳಿಯುವ ಛಲ ಮತ್ತು ತಂತ್ರಜ್ಞಾನದ ಪರಾಕಾಷ್ಠೆಯನ್ನು ಒರೆಗೆ ಹಚ್ಚುವ ಅಗ್ನಿಪರೀಕ್ಷೆಯ ರಣರಂಗವದು! ಶತ್ರು ರಾಷ್ಟ್ರದ ಪ್ರದೇಶವನ್ನು ಪ್ರವೇಶಿಸಿ, ಅವರದ್ದೇ ನೆಲದಲ್ಲಿ ಪತನಗೊಂಡ ತಮ್ಮ ಯುದ್ಧ ವಿಮಾನದ ಪೈಲಟ್‌ಗಳನ್ನು ಜೀವಂತವಾಗಿ ರಕ್ಷಿಸಿಕೊಂಡು ಬರಲು ಸಾಧ್ಯ ಎಂದಾದರೆ, ಅದು ಯಾವುದೇ ಹಾಲಿವುಡ್ ಸಿನಿಮಾದ ರೋಚಕ ಕಥೆಯನ್ನೂ ಮೀರಿಸು ವಂತಹ ವಾಸ್ತವ!

ಇತ್ತೀಚೆಗೆ ಇರಾನ್‌ನಲ್ಲಿ ಅಮೆರಿಕದ ಸೇನೆ ನಡೆಸಿದ ಸಾಹಸಮಯ ಕಾರ್ಯಾಚರಣೆ ಹುಬ್ಬೇರಿಸು ವಂತೆ, ಜಗತ್ತು ಬೆರಗಾಗುವಂತೆ, ಜಗತ್ತು ಅಚ್ಚರಿ ಪಡುವಂತೆ ಮಾಡಿದೆ. ಶತ್ರು ಪಡೆಗಳ ಹದ್ದಿನ ಕಣ್ಣು, ಪ್ರತಿಕೂಲ ಹವಾಮಾನ, ಕಠಿಣ ಭೌಗೋಳಿಕ ಸವಾಲುಗಳು, ಗೊತ್ತಿರದ ಜಾಗ ಮತ್ತು ಒತ್ತಡ ಗಳ ನಡುವೆ, ಅಮೆರಿಕ ತನ್ನ ಇಬ್ಬರು ಪೈಲಟ್ ಗಳನ್ನು ರಕ್ಷಿಸಿದ ಈ ಸಾಹಸಗಾಥೆಯ ಹಿಂದಿ ರುವುದು ‘ಕಾಂಬಾಟ್ ಸರ್ವೈವರ್ ಇವೇಡರ್ ಲೊಕೇಟರ್’ (CSEL) ಹೆಸರಿನ ಅತ್ಯಾಧುನಿಕ ತಂತ್ರ ಜ್ಞಾನ ವ್ಯವಸ್ಥೆ!

ಇದನ್ನೂ ಓದಿ: Ravi Sajangadde Column: ರಾಘವ್‌ ಛಡ್ಡಾ! ʼಆಪ್‌ʼಗೆ ಅಪಥ್ಯವಾದ ಆಪದ್ಭಾಂದವ !

ಏನಾಯಿತು? ಶತ್ರುನೆಲದ ಮೃತ್ಯುಕೂಪದಲ್ಲಿ ಯುದ್ಧ ವಿಮಾನದ ಪತನ ಇರಾನ್‌ನ ಅತ್ಯಂತ ಅಪಾಯಕಾರಿ ಹಾಗೂ ದುರ್ಗಮ ಪ್ರದೇಶಗಳಂದಾದ ಜಾಗ್ರೋಸ್ ಪರ್ವತ ಶ್ರೇಣಿಗಳ ನಡುವಲ್ಲಿ ಇರಾನಿನ ದಾಳಿಗೆ ಅಮೆರಿಕದ ‘ F&15E ಸ್ಟ್ರೈಕ್ ಈಗಲ್’ ಯುದ್ಧ ವಿಮಾನ ಪತನಗೊಂಡಿತು. ಆ ಸಂದರ್ಭದಲ್ಲಿ ವಿಮಾನದಿಂದ ಇಬ್ಬರು ಪೈಲಟ್‌ಗಳು ಪ್ರಾಣ ರಕ್ಷಣೆಗಾಗಿ ಪ್ಯಾರಾಚೂಟ್ ಮೂಲಕ ಸ್ವಯಂ ಇಜೆಕ್ಟ್ ಆಗಿ ಶತ್ರು ನೆಲದೊಳಗೆ ಅನಿವಾರ್ಯವಾಗಿ ಇಳಿಯ ಬೇಕಾಯಿತು! ‌

ಯುದ್ಧ ವಿಮಾನವನ್ನು ಕಳಕೊಳ್ಳುವುದದ ಜತೆಗೆ ಇಬ್ಬರು ಯೋಧರು ಶತ್ರುಗಳ ಭದ್ರಕೋಟೆ ಯೊಳಗೆ ಬಿದ್ದು, ಅವರನ್ನೂ ಕಳಕೊಳ್ಳಬೇಕಾದ ಪರಿಸ್ಥಿತಿ ಅಮೆರಿಕಗೆ ಬಂದೊದಗಿತು. ಇದರಲ್ಲಿ ‘ಒಬ್ಬ ಪೈಲೆಟ್ ಅನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ’ ಎಂದು ಇರಾನ್ ಘೋಷಿಸಿತು ಮತ್ತು ಅಮೆರಿಕ ಕೂಡ ‘ನಮ್ಮಿಬ್ಬರು ಪೈಲಟ್‌ಗಳ ಶೋಧ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿತು. ಈ ಇಬ್ಬರೂ ಪೈಲಟ್‌ಗಳನ್ನು ರಕ್ಷಿಸುವ ಕಾರ್ಯಾಚರಣೆಯ ರೂಪುರೇಷೆ ಗೌಪ್ಯ‌ ವಾಗಿ ಸಿದ್ಧವಾಗಿ ನುರಿತ ತಂಡ ಫೀಲ್ಡಿಗಿಳಿಯಿತು!

ದುರ್ಘಟನೆ ನಡೆದ ಕೆಲವೇ ಗಂಟೆಗಳೊಳಗೆ ಅಮೆರಿಕದ ವಿಶೇಷ ರಕ್ಷಣಾ ಪಡೆಗಳು ಹೆಲಿಕಾಪ್ಟರ್‌ಗಳ ಮೂಲಕ ಮಿಂಚಿನ ದಾಳಿ ನಡೆಸಿ, ಮೊದಲ ಪೈಲಟ್‌ಅನ್ನು ಯಶಸ್ವಿಯಾಗಿ ರಕ್ಷಿಸಿದವು. ಈ ಕಾರ್ಯಾಚರಣೆ ಪೂರ್ಣಗೊಳ್ಳುವಷ್ಟರಲ್ಲಿ ಶತ್ರುಪಡೆಗಳು ಎಚ್ಚೆತ್ತುಕೊಂಡಿದ್ದವು.

ಪತನಗೊಂಡ ವಿಮಾನದಿಂದ ಇಜೆಕ್ಟ್ ಆಗಿದ್ದ ಮತ್ತೋರ್ವ ಪೈಲಟ್ ಅದ್ಹೇಗೋ ಶತ್ರು ಸೈನ್ಯದ ಕಣ್ತಪ್ಪಿಸಿ, ದಟ್ಟ ಪರ್ವತ ಪ್ರದೇಶದಲ್ಲಿ ಅಡಗಿಕೊಳ್ಳಬೇಕಾಯಿತು. ಇರಾನ್ ಸೇನೆ ಮತ್ತು ಸ್ಥಳೀಯರು ಆತನನ್ನು ಜೀವಂತವಾಗಿ ಸೆರೆ ಹಿಡಿಯಲು ಇಡೀ ಪ್ರದೇಶವನ್ನು ಜಾಲಾಡಲಾ‌ ರಂಭಿಸಿದರು.

ಪ್ರತಿ ಸೆಕೆಂಡ್ ಕೂಡ ಆತನ ಜೀವಕ್ಕೆ ಕುತ್ತು ತರುವಂತಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಬಹುತೇಕ 48 ಗಂಟೆಗಳ ಕಾಲ ಸಾವಿನೊಂದಿಗೆ ಕಣ್ಣುಮುಚ್ಚಾಲೆ ಆಡಿದ ಆತನಿಗೆ ಆಶಾಕಿರಣ ವಾದದ್ದು, ಪುನರ್‌ಜನ್ಮ ನೀಡಿದ್ದು ಆತನ ಬಳಿಯಿದ್ದ CSEL ಹೆಸರಿನ ಈ ಪುಟ್ಟ, ಜೀವ ರಕ್ಷಕ ಸಾಧನ!

ಇರಾನಿನಲ್ಲಿ ಇಳಿದು ಅನಾಥನಾಗಿದ್ದ ಎರಡನೆಯ ಸೈನಿಕ ತನ್ನಲ್ಲಿರುವ ಈ ಸಾಧನದ ಮೂಲಕ ತಾನು ಎಲ್ಲಿದ್ದೇನೆ, ತನ್ನ ದೈಹಿಕ ಪರಿಸ್ಥಿತಿ ಹೇಗಿದೆ ಮತ್ತು ಸುತ್ತಮುತ್ತಲಿನ ಶತ್ರು ಸೈನಿಕರ ಚಲನ ವಲನಗಳ ಕುರಿತು ಅತ್ಯಂತ ಮಹತ್ವದ ಮಾಹಿತಿಯನ್ನು ಅಮೆರಿಕದ ರಕ್ಷಣಾ ಕೇಂದ್ರಕ್ಕೆ ನಿರಂತರ ವಾಗಿ ರವಾನಿಸುತ್ತಿದ್ದನು. ಹೀಗಾಗಿ ಆತನಿರುವ ಜಾಗ ಪತ್ತೆಹಚ್ಚಿ ರಕ್ಷಿಸಲು ಅಮೆರಿಕ ಪಡೆಗೆ ಸಾಧ್ಯ ವಾಯಿತು.

48 ಗಂಟೆಗಳ ರೋಚಕ ರಕ್ಷಣಾ ಕಾರ್ಯಾಚರಣೆ!

ಪತನಗೊಂಡ ಪೈಲಟ್ ನೀಡುತ್ತಿದ್ದ ಮಾಹಿತಿ ಆಧಾರದ ಮೇಲೆ, ಅಮೆರಿಕನ್ ಕಮಾಂಡೋಗಳು ಮಿಲಿಟರಿ ಇತಿಹಾಸದ ಅತ್ಯಂತ ಸಾಹಸಮಯ, ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಯ ನೀಲ ನಕ್ಷೆಯನ್ನು ಸಿದ್ಧಪಡಿಸಿ ಅಖಾಡಕ್ಕಿಳಿದರು. ಇರಾನ್‌ನ ಬಲಿಷ್ಠ ಕಣ್ಗಾವಲಿನ ವಾಯುಪ್ರದೇಶವನ್ನು ಭೇದಿಸಿ, ಯಾವುದೇ ಸುಳಿವು ನೀಡದೆ ಒಳನುಗ್ಗುವುದು ಅಸಾಧ್ಯವಾಗಿತ್ತು.

‘ನಮ್ಮವರನ್ನು ಎಂದಿಗೂ ಹಿಂದೆ ಬಿಡುವುದಿಲ್ಲ’ (Leave No Man Behind) ಎಂಬ ಅಮೆರಿಕನ್ ಸೇನೆಯ ದೃಢ ಸಂಕಲ್ಪ ಈ ಕ್ಲಿಷ್ಟಕರ ಕಾರ್ಯಾಚರಣೆಗೆ ಮುನ್ನುಡಿ ಬರೆಯಿತು. A&10 ಥಂಡ ರ್ಬೋಲ್ಟ್ ಯುದ್ಧ ವಿಮಾನಗಳು ಮತ್ತು ಶಸ್ತ್ರಸಜ್ಜಿತ ಡ್ರೋನ್‌ಗಳು ಈ ರಕ್ಷಣಾ ಕಾರ್ಯಾ‌ ಚರಣೆಗೆ ಧುಮುಕಿದವು. ಒಂದು ಕಡೆ ಇರಾನ್ ಸೈನ್ಯವು ಅಮೆರಿಕದ ಪೈಲಟ್ ಅನ್ನು ಹುಡುಕುತ್ತಾ ಪರ್ವತ ವನ್ನು ಸುತ್ತುವರೆದರೆ, ಮತ್ತೊಂದೆಡೆ ಈ CSEL ಸಾಧನ ನೀಡಿದ ನಿಖರ ಮಾಹಿತಿ- ಮಾರ್ಗ ದರ್ಶನ ದೊಂದಿಗೆ ಅಮೆರಿಕದ ವಿಶೇಷ ಪಡೆಗಳ ಹೆಲಿಕಾಪ್ಟರ್ʼಗಳು (HH&60) ಕತ್ತಲನ್ನು ಸೀಳಿಕೊಂಡು ಜಾಗ್ರೋಸ್ ಪರ್ವತ ಶ್ರೇಣಿಯನ್ನು ತಲುಪಿದವು.

ಭಾರೀ ದಾಳಿ-ಪ್ರತಿದಾಳಿಯ ನಡುವೆ, ಅಮೆರಿಕ ಕಮಾಂಡೋಗಳು ಶತ್ರುಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾದರಲ್ಲ. CSEL ಸಾಧನದ ಸಂಕೇತಗಳನ್ನು ಹಿಂಬಾಲಿಸಿ, ನಿರ್ದಿಷ್ಟ ಜಾಗವನ್ನು ತಲುಪಿದ ರಕ್ಷಣಾ ಪಡೆ, ತಮ್ಮ ಪೈಲಟ್ನನ್ನು ಸುರಕ್ಷಿತವಾಗಿ ಹೆಲಿಕಾಪ್ಟರ್‌ಗೆ ಹತ್ತಿಸಿಕೊಂಡು ಕುವೈತ್ ದೇಶದಲ್ಲಿ ಜಂಭದಿಂದ ಬಂದಿಳಿಯಿತು! ಈ ರೋಚಕ ಕಾರ್ಯಾಚರಣೆ 48 ಗಂಟೆಗಳೊಳಗೆ ಯಶಸ್ವಿ ಯಾಗಿ ಪೂರ್ಣವಾಯಿತು.

ಶತ್ರು ರಾಷ್ಟ್ರದ ಒಳನುಗ್ಗಿ, ಅವರದ್ದೇ ನೆಲದಲ್ಲಿ ಸಿಲುಕಿದ್ದ ಸೈನಿಕರನ್ನು ರಕ್ಷಿಸಿ, ಅಮೆರಿಕ ವಾಪಸ್ ಕರೆತಂದ ಈ ಘಟನೆ ಮಿಲಿಟರಿ ಇತಿಹಾಸದಲ್ಲಿ ಬಹಳ ಅಪರೂಪದ್ದು. ಮನುಷ್ಯ ಪ್ರಯತ್ನದೊಡನೆ ಅತ್ಯಾಧುನಿಕ ತಂತ್ರಜ್ಞಾನಗಳು ಜತೆಯಾದರೆ ಪವಾಡ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ಈ ಕಾರ್ಯಾಚರಣೆಗೆ ಅತ್ಯುತ್ತಮ ನಿದರ್ಶನ!

CSEL ನಂತಹ ತಂತ್ರಜ್ಞಾನವು ಯುದ್ಧಭೂಮಿಯ ಚಿತ್ರಣ ಸಂಪೂರ್ಣವಾಗಿ ಬದಲಾಯಿಸಿದೆ. ಅಸಾಧ್ಯವೆನಿಸುವ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸಿ, ಶತ್ರು ನೆಲದಲ್ಲಿ ಕಣ್ಮರೆಯಾದ ಯೋಧ ರಿಗೆ ಅಕ್ಷರಶಃ ಜೀವದಾನ ನೀಡುತ್ತಿದೆ. ಶತ್ರುಗಳ ನೆಲದಲ್ಲಿ ಗಂಟೆಗಳ ನರಕಯಾತನೆ ಅನುಭವಿಸಿ, ಸಾವನ್ನು ಗೆದ್ದು ಬಂದ ಆ ಸೈನಿಕನ ಕಥೆ ಮತ್ತು ಆತನ ಬೆನ್ನೆಲುಬಾಗಿ ನಿಂತ ತಂತ್ರಜ್ಞಾನದ ಸಾಧನೆ, ಸೇನಾಪಡೆಯ ಮುಂದಿನ ಹಲವು ತಲೆಮಾರುಗಳವರೆಗೆ ಸ್ಪೂರ್ತಿಯ ಸೆಲೆಯಾಗಿ, ವಿಜ್ಞಾನ ಮತ್ತು ಶೌರ್ಯದ ಅಜರಾಮರ ಮೈತ್ರಿಗೆ ಸಾಕ್ಷಿ. ಈ ಕಾರ್ಯಾಚರಣೆಗೆ ಅಂದಾಜು 300 ಕೋಟಿ ಡಾಲರ್ ಹಣ ಖರ್ಚಾಗಿದೆಯಂತೆ!

ಮುಂದಿನ ದಿನಗಳಲ್ಲಿ ಹಾಲಿವುಡ್‌ನಲ್ಲಿ ಈ ಕುರಿತು ಸಿನಿಮಾ, ವೆಬ್ ಸೀರಿಸ್ ಖಂಡಿತಾ ಬರಲೂ ಬಹುದು. ಜನರ ಮಾರಣಹೋಮ ಶಾಶ್ವತವಾಗಿ ಅಂತ್ಯವಾಗಲಿ, ಪರಸ್ಪರರ ಆಸ್ತಿ ಅಂತಸ್ತು ನಿರ್ನಾಮ ನಿಲ್ಲಲಿ ಮತ್ತು ಸಂಪತ್ತಿನ ಮೇಲಿನ ದೊಡ್ಡ ರಾಷ್ಟ್ರಗಳ ದುರಾಸೆ ಕೊನೆಯಾಗಲಿ. ಓಂ ಶಾಂತಿ ಶಾಂತಿ ಶಾಂತಿಃ!.

ಏನಿದು ಸಿಎಸ್‌ಇಎಲ್ (CSEL) ಸಾಧನ?

ಶತ್ರು ನೆಲದಲ್ಲಿ ಸಿಲುಕಿದ ಸೈನಿಕನಿಗೆ ಜೀವದಾನದ ಆಶಾಕಿರಣವಾಗಿ ಕೆಲಸ ಮಾಡಿದ್ದು ಈ CSEL ಎಂಬ ಅತ್ಯಾಧುನಿಕ ತಂತ್ರಜ್ಞಾನ. ಮೇಲ್ನೋಟಕ್ಕೆ ಇದೊಂದು ವಾಕಿ-ಟಾಕಿಯಂತೆ ಕಂಡರೂ, ಇದು ಮಿಲಿಟರಿ ಬಳಕೆಗಾಗಿ ವಿನ್ಯಾಸಗೊಳಿಸಲಾದ ಅತ್ಯಂತ ಸುರಕ್ಷಿತ, ರಹಸ್ಯ ಮತ್ತು ಬಹುಪ ಯೋಗಿ ಸಂವಹನ ವ್ಯವಸ್ಥೆ. ಅದರ ಪ್ರಮುಖ ವಿಶೇಷತೆಗಳು ಇಂತಿವೆ: ಕಠಿಣ ಹವಾಮಾನ, ಶತ್ರುಗಳ ಸಿಗ್ನಲ್ ಜಾಮರ್‌ಗಳ ನಡುವೆಯೂ, ಈ ಸಾಧನ ಹೊಂದಿರುವ ಸೈನಿಕನಿರುವ ನಿಖರ ವಾದ ಸ್ಥಳವನ್ನು (pin point location) ಉಪಗ್ರಹಗಳೊಂದಿಗೆ ನಿರಂತರ ಸಂವಹನ ನಡೆಸುವ ಮೂಲಕ ಅಮೆರಿಕದ ಕಮಾಂಡ್ ಸೆಂಟರ್‌ಗೆ ರವಾನಿಸುವ ಸಾಮರ್ಥ್ಯ ಈ ಸಾಧನಕ್ಕಿದೆ.

ಶತ್ರುಗಳು ಗುರುತಿಸಲು, ಕೇಳಿಸಿಕೊಳ್ಳಲು ಅಥವಾ ಹ್ಯಾಕ್ ಮಾಡಲು ಸಾಧ್ಯವಾಗದಂತೆ, 100% ಗೂಢಲಿಪೀಕರಣ (encrypt) ಸಾಮರ್ಥ್ಯದೊಂದಿಗೆ, ತಲುಪಬೇಕಾದ ಜಾಗಕ್ಕೆ ಸಂದೇಶಗಳನ್ನು ಈ ಸಾಧನ ಕಳುಹಿಸುತ್ತದೆ. ಶತ್ರು ನೆಲದಿಂದಲೇ ಈ ಸಾಧನ ಬಳಸಿದರೂ ಶತ್ರುವಿಗೆ ಪೈಲಟ್‌ಅನ್ನು ಇರುವಿಕೆಯ ಸುಳಿವು, ಈ ಸಾಧನ ನಡೆಸುವ ಸಂವಹನದ ಯಾವುದೇ ಮಾಹಿತಿ ಸಿಗುವುದೇ ಇಲ್ಲ!

ತನ್ನ ದೇಶದ ರಕ್ಷಣಾ ಪಡೆಯ ಹೆಲಿಕಾಪ್ಟರ್‌ಗಳು ಹತ್ತಿರ ಬರುತ್ತಿದ್ದಂತೆ, ಪೈಲಟ್ ನೇರವಾಗಿ ರಕ್ಷಣಾ ತಂಡದೊಂದಿಗೆ ಧ್ವನಿ ಸಂಭಾಷಣೆ ಮೂಲಕ ಮಾತನಾಡಲು ಮತ್ತು ಶತ್ರುಗಳ ಚಲನವಲನಗಳ ಬಗ್ಗೆ ಕರಾರುವಾಕ್ಕಾದ ಎಚ್ಚರಿಕೆ ನೀಡಲು ಈ ಸಾಧನ ಸಹಾಯ ಮಾಡುತ್ತದೆ. ಕತ್ತಲು ಅಥವಾ ಶತ್ರು ದೇಶದ ದಟ್ಟ ಪರ್ವತಗಳ ನಡುವೆ ಸಿಲುಕಿದಾಗ, ಕೇವಲ ತಮ್ಮ ದೇಶದ ರಕ್ಷಣಾ ಪಡೆಗಳ ವಿಶೇಷ ರಡಾರ್‌ಗಳು ಮಾತ್ರ ಗುರುತಿಸಲಾಗುವ ವಿಶೇಷ ರೇಡಿಯೋ ಸಿಗ್ನಲ್ʼಗಳನ್ನು(infrared) ಈ ಉಪಕರಣ ಹೊರಸೂಸುತ್ತದೆ.

CSEL ತಂತ್ರಜ್ಞಾನವು ಸಂಪೂರ್ಣವಾಗಿ ಅಮೆರಿಕಾದ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿದೆ. ಖ್ಯಾತ ವಾಯುಯಾನ ಸಂಸ್ಥೆ ‘ಬೋಯಿಂಗ್’ ಅಭಿವೃದ್ಧಿಪಡಿಸಿರುವ ಈ ಅತ್ಯಾಧುನಿಕ ರಕ್ಷಣಾ ಸಾಧನ ವನ್ನು ಅಮೆರಿಕದ ಎಲ್ಲ ಯೋಧರು ಯುದ್ಧ ಕಾರ್ಯಾಚರಣೆಯ ವೇಳೆ ಕಡ್ಡಾಯ ರಕ್ಷಣಾ ಸಾಧನ ವಾಗಿ ಬಳಸುತ್ತಾರೆ. ಈ ತಂತ್ರಜ್ಞಾನವು ಅಮೆರಿಕ ಸೇನೆಯ ಕಟ್ಟುನಿಟ್ಟಿನ ನಿಯಂತ್ರಣದಲ್ಲಿದ್ದರೂ, ಅಮೆರಿಕ ತನ್ನ ‘ವಿದೇಶಿ ಮಿಲಿಟರಿ ಮಾರಾಟ’ ಯೋಜನೆಯಡಿ ಆಯ್ದ ಮಿತ್ರ ರಾಷ್ಟ್ರಗಳಿಗೆ ಮತ್ತು ಕೆಲವು ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ಈ ತಂತ್ರಜ್ಞಾನವನ್ನು ಪೂರೈಸುತ್ತದೆ.

ಜಂಟಿ ಸೇನಾ ಕಾರ್ಯಾಚರಣೆಗಳ ಸಮಯದಲ್ಲಿ ರಕ್ಷಣಾ ಕಾರ್ಯಗಳನ್ನು ಸುಲಭಗೊಳಿಸಲು ಮಿತ್ರ ಪಡೆಗಳು ಇದನ್ನು ಬಳಸುತ್ತವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, CSEL ಸಂಪೂರ್ಣವಾಗಿ ಅಮೆರಿಕದ ಸ್ವಂತ ಮಿಲಿಟರಿ ತಂತ್ರಜ್ಞಾನ.

CSEL ಗೆ ಸಮನಾದ ಇತರ ದೇಶಗಳು ಬಳಸುವ ತಂತ್ರಜ್ಞಾನಗಳು: ಭಾರತೀಯ ವಾಯುಪಡೆ ( IAF ) ತನ್ನ ಯೋಧರ ಸುರಕ್ಷತೆಗಾಗಿ ದೇಶೀಯ (DRDO ನಿರ್ಮಿತ) ಮತ್ತು ಇಸ್ರೇಲ್‌ನಿಂದ ಆಮದು ಮಾಡಿ ಕೊಂಡ ತಂತ್ರಜ್ಞಾನ ಸಾಧನ-ಸಂಯೋಜನೆಯನ್ನು ಬಳಸುತ್ತದೆ. ಭಾರತೀಯ ಪೈಲಟ್‌ಗಳು ಸುಧಾರಿತ Personal Locator Beacons ಗಳನ್ನು ಧರಿಸುತ್ತಾರೆ.

ತುರ್ತು ಪರಿಸ್ಥಿತಿಯಲ್ಲಿ ಇದು 406 MHz ಕಂಪನಾಂಕದಲ್ಲಿ ಮಿಲಿಟರಿ ಕೋಡ್ ಸಿಗ್ನಲ್ ಕಳುಹಿಸು ತ್ತದೆ. ಇದನ್ನು ಇಸ್ರೋದ INMCC (Indian Mission Control Centre) ನಿಯಂತ್ರಣ ಕೊಠಡಿಯು ಗ್ರಹಿಸಿ, ತಕ್ಷಣ ರಕ್ಷಣಾ ಪಡೆಗಳಿಗೆ ಪೈಲಟ್ ಇರುವ ನಿಖರವಾದ ಜಾಗದ ಮಾಹಿತಿ ನೀಡುತ್ತದೆ. ಇಸ್ರೇಲ್‌ನ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾದ ‘ಎಲ್ಬಿಟ್ ಸಿಸ್ಟಮ್ಸ್’ ನಿರ್ಮಿಸಿರುವ PRC&434 ಸರಣಿಯ ಸಾಧನಗಳು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ. ಇಸ್ರೇಲ್ ಮಾತ್ರವಲ್ಲದೆ, ‌

ಭಾರತ ಸೇರಿದಂತೆ ಹಲವು ನ್ಯಾಟೋ ಮತ್ತು ಇತರ ಮಿತ್ರ ದೇಶಗಳು ತಮ್ಮ ವಾಯುಪಡೆಯ ಪೈಲಟ್‌ಗಳ ರಕ್ಷಣೆಗೆ ಇದನ್ನು ಬಳಸುತ್ತವೆ. ರಷ್ಯಾ ದೇಶವು ತನ್ನದೇ ಆದ ‘ಗ್ಲೋನಾಸ್’ ನ್ಯಾವಿಗೇ ಷನ್ ಜಾಲವನ್ನು ಬಳಸುವ ರಕ್ಷಣಾ ಸಾಧನಗಳನ್ನು ಹೊಂದಿದೆ. ರಷ್ಯಾದ ಯುದ್ಧ ವಿಮಾನದ ಪೈಲಟ್‌ಗಳು R&855A1 ಅಥವಾ ಹೊಸ ತಲೆಮಾರಿನ ‘ಕೋರ್ಮ’ ಪರ್ಸನಲ್ ಲೊಕೇಟರ್ ಬೀಕನ್‌ಗಳನ್ನು ಬಳಸುತ್ತಾರೆ.

ಯುರೋಪಿಯನ್ ದೇಶಗಳು ತಮ್ಮದೇ ದೇಶದ ಕಂಪನಿಗಳು ನಿರ್ಮಿಸಿದ ಸುಧಾರಿತ ರಕ್ಷಣಾ ಸಾಧನಗಳಾದ COSPAS &SARSAT ಮಿಲಿಟರಿ ಬೀಕ ಬಳಸುತ್ತವೆ. ಇವು ಅಂತಾರಾಷ್ಟ್ರೀಯ ಉಪಗ್ರಹ ಜಾಲಗಳೊಂದಿಗೆ ಕಾರ್ಯ ನಿರ್ವಹಿಸುತ್ತವೆ. Becker Avionics ನಿರ್ಮಿಸಿರುವ MR510 ಯುರೋಪಿನಲ್ಲಿ ವ್ಯಾಪಕವಾಗಿ ಬಳಸಲಾಗುವ ಪ್ರಸಿದ್ಧ ಮಿಲಿಟರಿ ಸರ್ವೈವಲ್ ರೇಡಿಯೋ ಆಗಿದೆ.

SeZಛಿo ಕಂಪನಿ ನಿರ್ಮಿಸುವ ಸಾಧನಗಳು ಜಾಗತಿಕ COSPAS&SARSAT ಜಾಲವನ್ನು ಬಳಸಿ ಕಾರ್ಯಾಚರಣೆಗೆ ಸಹಾಯ ಮಾಡುತ್ತವೆ. ಚೀನಾವು ತನ್ನದೇ ಆದ BeiDou ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯನ್ನು ಯುದ್ಧ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಬಳಸಿಕೊಳ್ಳುತ್ತದೆ. ಇದು ಕೇವಲ ಸ್ಥಳವನ್ನು ಟ್ರ್ಯಾಕ್ ಮಾಡುವುದು ಮಾತ್ರವಲ್ಲದೆ, ಉಪಗ್ರಹದ ಮೂಲಕವೇ ‘ಶಾರ್ಟ್ ಮೆಸೇಜ್’ ಕಳುಹಿಸುವ ಸಾಮರ್ಥ್ಯ ಹೊಂದಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)