ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ʼಲೆಫ್ಟಿನೆಂಟ್‌ ಕಮಾಂಡರ್‌ʼ ಯಶಸ್ವಿ ಸೋಲಂಕಿ ಇತಿಹಾಸ ಬರೆದ ಹೆಣ್ಣುಮಗಳು

ಕತ್ತಲ ಹಾದಿಯಲ್ಲಿ ಬೆಳಕಿನ ಕಿರಣದಂತೆ ಮೂಡಿ ಬಂದು, ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಭಾರತೀಯ ನೌಕಾಪಡೆಯ ಧೀರ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ‘ಯಶಸ್ವಿ ಸೋಲಂಕಿ’ ಅವರ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ. ಗುಜರಾತ್‌ನ ಭರೂಚ್ ಜಿಲ್ಲೆಯ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಯಶಸ್ವಿ ಜನಿಸಿದರು.

ಒಂದೊಳ್ಳೆ ಮಾತು

ಕತ್ತಲ ಹಾದಿಯಲ್ಲಿ ಬೆಳಕಿನ ಕಿರಣದಂತೆ ಮೂಡಿ ಬಂದು, ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಭಾರತೀಯ ನೌಕಾಪಡೆಯ ಧೀರ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ‘ಯಶಸ್ವಿ ಸೋಲಂಕಿ’ ಅವರ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಪೂರ್ತಿ ದಾಯಕವಾಗಿದೆ.

ಗುಜರಾತ್‌ನ ಭರೂಚ್ ಜಿಲ್ಲೆಯ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಯಶಸ್ವಿ ಜನಿಸಿದರು. ಆಕೆಯ ತಂದೆ ಒಬ್ಬ ಶಾಲಾ ಶಿಕ್ಷಕರು ಹಾಗೂ ತಾಯಿ ಗೃಹಿಣಿ. ತಂದೆ ಶಾಲೆಯ ಮಕ್ಕಳಿಗೆ ಅಕ್ಷರ ಕಲಿಸುತ್ತಾ ದೇಶದ ಭವಿಷ್ಯವನ್ನು ರೂಪಿಸುತ್ತಿದ್ದರೆ, ಮಗಳು ಯಶಸ್ವಿ ಮಾತ್ರ ದೇಶದ ರಕ್ಷಣೆಯನ್ನೇ ತನ್ನ ಜೀವನದ ಪರಮ ಗುರಿಯಾಗಿಸಿಕೊಂಡಿದ್ದಳು.

ಕೇವಲ ಒಂದು ಸಣ್ಣ ಕೋಣೆಯ ಓದಿನಿಂದ ಹಿಡಿದು ಭಾರತೀಯ ರಕ್ಷಣಾ ಪಡೆಯ ಅತ್ಯುನ್ನತ ಕಚೇರಿಯವರೆಗೆ ಯಶಸ್ವಿ ನಡೆದುಬಂದ ಹಾದಿ ಸುಲಭದ್ದಾಗಿರಲಿಲ್ಲ. ಕಠಿಣ ಪರಿಶ್ರಮ, ಅಚಲ ಶಿಸ್ತು ಮತ್ತು ದೇಶಸೇವೆಯ ತೀವ್ರ ಹಂಬಲವೇ ಅವರನ್ನು ನೌಕಾಪಡೆ ಯಲ್ಲಿ ಒಬ್ಬ ಸಮರ್ಥ ಅಧಿಕಾರಿಯನ್ನಾಗಿ ರೂಪಿಸಿತು. ಭಾರತದ ಸಶಸ್ತ್ರ ಪಡೆಗಳ ಇತಿಹಾಸದ ನೀವೂ ಬರೆಯಬಹುದು.

ಮೇ 2025 ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತದ ಸೈನಿಕ ಇತಿಹಾಸದಲ್ಲಿ ಇದುವರೆಗೆ ಕೇವಲ ಪುರುಷ ಅಧಿಕಾರಿಗಳಿಗಷ್ಟೇ ಸೀಮಿತ ವಾಗಿದ್ದ ಅತ್ಯಂತ ಪ್ರತಿಷ್ಠಿತ ಹುದ್ದೆಯೊಂದರ ಹೆಬ್ಬಾಗಿಲನ್ನು ಯಶಸ್ವಿ ಸೋಲಂಕಿ ಯಶಸ್ವಿಯಾಗಿ ತೆರೆದರು.

ಇದನ್ನೂ ಓದಿ: Roopa Gururaj Column: ಮಹಾವಿಷ್ಣುವಿನ ವರಾಹ ಅವತಾರ ಮತ್ತು ಭೂದೇವಿಯ ಉದ್ಧಾರ

ಭಾರತದ ಸಶಸ್ತ್ರ ಪಡೆಗಳ ಮಹಾದಂಡನಾಯಕರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೊದಲ ಮಹಿಳಾ ‘ಏಡ್-ಡಿ-ಕ್ಯಾಂಪ್’ (ADC - ವೈಯಕ್ತಿಕ ಮಿಲಿಟರಿ ಸಹಾಯಕರ) ರಾಗಿ ನೇಮಕಗೊಳ್ಳುವ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದರು.

‘ಏಡ್-ಡಿ-ಕ್ಯಾಂಪ್’ ಹುದ್ದೆ ಎನ್ನುವುದು ಕೇವಲ ಒಂದು ಗೌರವವಲ್ಲ. ಅದು ಅತ್ಯುನ್ನತ ಶಿಸ್ತು, ರಕ್ಷಣಾ ಕಾರ್ಯತಂತ್ರದ ಜ್ಞಾನ, ಅಪ್ರತಿಮ ಸಮಯಪ್ರಜ್ಞೆ ಮತ್ತು ಜವಾಬ್ದಾರಿಯ ಸಂಕೇತ. ಸಾಮಾನ್ಯವಾಗಿ ರಾಷ್ಟ್ರಪತಿಗಳ ರಕ್ಷಣೆ ಮತ್ತು ಕಾರ್ಯವಿಧಾನಗಳ ಉಸ್ತುವಾರಿ ಗಾಗಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳಿಂದ ಅತ್ಯುತ್ತಮ ಅಧಿಕಾರಿಗಳನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಬಿಳಿ ಬಣ್ಣದ ಗರಿಗರಿಯಾದ ನೌಕಾಪಡೆಯ ಸಮವಸ್ತ್ರ ಧರಿಸಿ, ಹೆಗಲ ಮೇಲೆ ಚಿನ್ನದ ಬಣ್ಣದ ‘ಗುಯಿಲೆಟ್’ (ಗೌರವದ ಹಗ್ಗ) ಧರಿಸಿದ ಯಶಸ್ವಿ ಸೋಲಂಕಿ ಅವರು ರಾಷ್ಟ್ರಪತಿ ಭವನದಲ್ಲಿ ಕರ್ತವ್ಯಕ್ಕೆ ನಿಂತಾಗ, ಅದು ಕೇವಲ ಒಬ್ಬ ಶಿಕ್ಷಕನ ಮಗಳ ಯಶಸ್ಸಾಗಿರಲಿಲ್ಲ, ಬದಲಿಗೆ ಇಡೀ ದೇಶದ ಹೆಣ್ಣುಮಕ್ಕಳ ಆತ್ಮವಿಶ್ವಾಸದ ಪ್ರತೀಕವಾಗಿತ್ತು. ರಾಷ್ಟ್ರಪತಿಗಳ ವೈಯಕ್ತಿಕ ಮಿಲಿಟರಿ ಸಹಾಯಕರಾಗಿ ಕಾರ್ಯನಿರ್ವಹಿಸುವ ಇವರು, ರಾಷ್ಟ್ರಪತಿ ಭವನದಲ್ಲಿ ನಡೆಯುವ ಪದ್ಮ ಪ್ರಶಸ್ತಿ ಪ್ರದಾನದಂತಹ ಅತ್ಯುನ್ನತ ಸಮಾರಂಭಗಳು ಮತ್ತು ವಿದೇಶಿ ಗಣ್ಯರ ಭೇಟಿಯ ಸಂದರ್ಭಗಳಲ್ಲಿ ಕಟ್ಟುನಿಟ್ಟಾದ ಮಿಲಿಟರಿ ಶಿಷ್ಟಾಚಾರ ವನ್ನು (Protocol) ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಅಷ್ಟೇ ಅಲ್ಲದೆ, ರಾಷ್ಟ್ರಪತಿಗಳ ದೇಶ-ವಿದೇಶಗಳ ಪ್ರವಾಸದ ವೇಳಾಪಟ್ಟಿಯನ್ನು ನಿಖರ ವಾಗಿ ರೂಪಿಸಿ, ಸ್ಥಳೀಯ ರಕ್ಷಣಾ ಪಡೆಗಳೊಂದಿಗೆ ಭದ್ರತೆಯನ್ನು ಸಮನ್ವಯ ಗೊಳಿಸುವ ನೆರಳಿನಂತಹ ಜವಾಬ್ದಾರಿ ಇವರ ಮೇಲಿದೆ. ಗಣರಾಜ್ಯೋತ್ಸವದಂತಹ ಐತಿಹಾಸಿಕ ಸಂದರ್ಭಗಳಲ್ಲಿ ‘ಗಾರ್ಡ್ ಆಫ್ ಆನರ್’ ಗೌರವ ವಂದನೆಯ ಉಸ್ತುವಾರಿಯನ್ನು ಹೊರುವ ಯಶಸ್ವಿ ಸೋಲಂಕಿ ಅವರು, ಸಶಸ್ತ್ರ ಪಡೆಗಳ ಮುಖ್ಯಸ್ಥರು ಹಾಗೂ ರಾಷ್ಟ್ರಪತಿಗಳ ಕಚೇರಿಯ ನಡುವೆ ರಕ್ಷಣಾ ವಿಷಯಗಳ ತುರ್ತು ಸಂವಹನ ಸೇತುವೆಯಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

ಲೆಫ್ಟಿನೆಂಟ್ ಕಮಾಂಡರ್ ಯಶಸ್ವಿ ಸೋಲಂಕಿ ಅವರ ಜೀವನ ನಮಗೆ ಕಲಿಸುವುದು ಒಂದೇ- ಹಿನ್ನೆಲೆ ಎಷ್ಟೇ ಸಾಮಾನ್ಯವಾಗಿದ್ದರೂ, ನಮ್ಮಕನಸು ಮತ್ತು ಪರಿಶ್ರಮ ಅಸಾಧಾರಣವಾಗಿದ್ದರೆ ದೇಶದ ಅತ್ಯುನ್ನತ ಶಿಖರವನ್ನು ತಲುಪಬಹುದು. ಇಂದು ಅವರು ದೇಶದ ಕೋಟ್ಯಂತರ ಯುವತಿಯರಿಗೆ, ವಿಶೇಷವಾಗಿ ಭಾರತೀಯ ರಕ್ಷಣಾ ಪಡೆಗೆ ಸೇರಿ ದೇಶಸೇವೆ ಮಾಡಬೇಕೆಂದು ಬಯಸುವ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಆದರ್ಶ ಪ್ರಾಯರಾಗಿದ್ದಾರೆ.

ಹೆಣ್ಣು ಮಕ್ಕಳು ದೈಹಿಕವಾಗಿ ಸದೃಢರಲ್ಲ, ಅವರು ಎಲ್ಲ ಪದವಿಗಳಿಗೂ ಅರ್ಹ ರಾಗುವು ದಿಲ್ಲ ಎಂದು ಹಣೆಪಟ್ಟಿ ಕಟ್ಟಿ ಅವರನ್ನು ಹಗುರವಾಗಿ ಕಾಣುವ ಅನೇಕರಿಗೆ ಯಶಸ್ವಿ ಸೋಲಂಕಿ ಪ್ರತ್ಯುತ್ತರವಾಗಿ ನಿಲ್ಲುತ್ತಾರೆ.

ರೂಪಾ ಗುರುರಾಜ್

View all posts by this author