ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ನರಕದ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ʼಗಳ ಬಲೆಗೆ ಬೀಳದಿರಿ !

ಶಾಲಾ ಕಾಲೇಜುಗಳಲ್ಲಿ, ಖಾಸಗಿ ಕಂಪೆನಿಗಳಲ್ಲಿ, ಎಂದರಲ್ಲಿ ಮತಾಂತರದ ಬಲೆ ಬೀಸಲಾಗು ತ್ತಿದೆ. ಪ್ರೀತಿ ಹೆಸರಿನಲ್ಲಿ ಯುವತಿಯರ ಮನಸು ಕೆಡಿಸಿ ತಮ್ಮೆಡೆಗೆ ಎಳೆದು ಕೊಳ್ಳುವ ಜಿಹಾದಿ ಗಳು ಒಂದೆಡೆಯಾದರೆ, ಮುಸಲ್ಮಾನ ಧರ್ಮದಲ್ಲಿ ಸಮಾನತೆ ಇದೆ, ಜಾತಿಭೇದ ಇಲ್ಲ, ಆರ್ಥಿಕ ಪರಿಸ್ಥಿತಿ ಉನ್ನತವಾಗುತ್ತದೆ ಎಂದೆಲ್ಲ ಆಮಿಷ ತೋರಿಸಿ ಸೆಳೆಯುವ ತಂತ್ರ ಮತ್ತೊಂದೆಡೆ.

ಪದಸಾಗರ

ಕಳೆದ ಕೆಲವು ವಾರಗಳಿಂದ ಮತಾಂತರದ ವಿವಿಧ ಬಣ್ಣಗಳು ವಿಪರೀತ ಡಿಸ್ಟರ್ಬ್ ಮಾಡುವಂತಿವೆ. ಟಿಸಿಎಸ್‌ನಲ್ಲಿ ಬೆಳಕಿಗೆ ಬಂದ ಕಾರ್ಪೊರೇಟ್ ಜಿಹಾದ್ ನೋಡಿದಾಗಿ ನಿಂದ, ಮತಾಂತರದ ಕರಾಳ ರೂಪ ಎಲ್ಲ ಹೇಗೇಗೆಲ್ಲ ತನ್ನ ಕೈಗಳನ್ನು ಚಾಚಿ ಹಿಂದೂ ಸ್ಥಾನವನ್ನು ಆಪೋಶನ ತೆಗೆದುಕೊಳ್ಳುತ್ತಿದೆಯಲ್ಲ ಎಂದು ಭಯವಾಗುತ್ತಿದೆ.

ಇತ್ತೀಚೆಗೆ ಕೇರಳ ಸ್ಟೋರಿ-2 ಚಿತ್ರ ತೆರೆ ಕಂಡಾಗ, ಅದನ್ನು ನೋಡಿ ಬಂದು ಇದು ಪ್ರತಿ ಹಿಂದೂ ಕುಟುಂಬದ ಯುವತಿಯರು ಕಡ್ಡಾಯವಾಗಿ ನೋಡಬೇಕೆಂದು ರೆಕಮೆಂಡ್ ಮಾಡಿದ್ದೆ. ಯಾಕಂದ್ರೆ ಈ ಮತಾಂತರದ ತಕ್ಷಣದ ಬಲಿಗಳೇ ಅವರು. ಕ್ರೈಸ್ತ ಮಿಷನರಿಗಳ ಲ್ಲೊಂದು ಥರದ ಮತಾಂತರವಾದರೆ ಮುಸಲ್ಮಾನರ ಮತಾಂತರಜಾಲ ಭಯ ಹುಟ್ಟಿಸು ವಂಥದ್ದು.

ಅದರ ನಡುವೆ ರವೂಫ್ ಎಂಬ ಮುಸಲ್ಮಾನನೊಬ್ಬ ಹಿಂದೂ ಹೆಸರಿಟ್ಟುಕೊಂಡು ಪತ್ರಕರ್ತನ ಸೋಗಿನಲ್ಲಿ ಸಮಾಜಕ್ಕೆ ಮಾಡಿರುವ ವಂಚನೆ, ಹಿಂದೂ ಯುವತಿಗೆ ಪ್ರೀತಿಯ ಹೆಸರಿನಲ್ಲಿ ಮಾಡಿದ ಮೋಸ ಇವೆಲ್ಲವನ್ನೂ ಗಮನಿಸುತ್ತಾ ಹೋದಂತೆಲ್ಲ ಮತಾಂತರ ಮತ್ತು ಜಿಹಾದ್ ಇವುಗಳ ಗಂಭೀರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ತಕ್ಷಣದಲ್ಲಿ ಮತ್ತು ಬಿರುಸಿನಲ್ಲಿ ನಡೆಯಬೇಕಿದೆ ‌ಎಂದು ಅನಿಸುತ್ತಿದೆ.

ಕೇರಳ ಸ್ಟೋರಿ ಚಿತ್ರಗಳು ಮತಾಂತರ ಮತ್ತು ಲವ್ ಜಿಹಾದ್‌ನ ಆಫ್ಟರ್ ಎಫೆಕ್ಟ್‌ಗಳನ್ನು ಸತ್ಯಘಟನೆಗಳ ಆಧಾರದ ಮೇಲೆಯೇ ಚಿತ್ರಿಸಲಾಗಿತ್ತು. ಆದರೆ ಅದನ್ನು ನಮ್ಮ ಹಿಂದೂ ಜಾತ್ಯತೀತರು, ಪ್ರಗತಿಪರರು ಅಜೆಂಡಾ, ಪ್ರೊಪಗ್ಯಾಂಡ, ಧಾರ್ಮಿಕ ದ್ವೇಷ ಉಂಟು ಮಾಡಲು ಕಟ್ಟಿರುವ ಸುಳ್ಳು ಕಥೆ ಅಂದುಬಿಟ್ಟರು.

ಕೇರಳದ ಹೆಣ್ಣು ಮಗಳ ಬ್ರೇನ್ ವಾಷ್ ಮಾಡಿ, ಪ್ರೀತಿ ಬಲೆಯಲ್ಲಿ ಬೀಳಿಸಿ, ಮತಾಂತರ ಗೊಳಿಸಿ ನಂತರ ಐಸಿಸ್‌ನಲ್ಲಿ ಆತ್ಮಾಹುತಿ ದಳಕ್ಕೆ ದೂಡಿದ ಕಥೆ ಸತ್ಯದ್ದು ಎಂದು ಜಗತ್ತಿಗೆ ಗೊತ್ತು. ಅದೇ ರೀತಿ ಕೇರಳ ಸ್ಟೋರಿಯಲ್ಲಿ ಹೇಳಲಾಗಿರುವ ಪ್ರತಿ ಕಥೆಯೂ ನೈಜಘಟನೆಯ ಪ್ರತಿಬಿಂಬವೇ. ಆದರೆ, ಆ ಚಿತ್ರಗಳು ಹಿಂದೂ ಹೆಣ್ಣು ಮಕ್ಕಳನ್ನು ತಲುಪದಂತೆ ತಡೆಯುವ ಶತಪ್ರಯತ್ನ ನಡೆದವು.

ಇದನ್ನೂ ಓದಿ: Naveen Sagar Column: ಇತಿಹಾಸ ತಿರುಚಿ ಅಂಬೇಡ್ಕರ್‌ ಆತ್ಮವನ್ನು ನೋಯಿಸದಿರಿ

ಅದರಲ್ಲಿರುವ ಕಥೆ ಸುಳ್ಳು ಎಂದು ನಂಬಿಸುವ ಸಾಹಸ ನಡೆದವು. ಸಿನಿಮಾವನ್ನು ಪ್ರೊಪ ಗ್ಯಾಂಡ ಅನ್ನುವ ಇವರು ಟಿಸಿಎಸ್ ಘಟನೆಯನ್ನು ಏನೆನ್ನುತ್ತಾರೆ? ಈಗ ಟಿಸಿಎಸ್ ಘಟನೆ ಆಧರಿಸಿ ಸಿನಿಮಾ ಬಂದರೆ ಏನನ್ನುತ್ತಾರೆ? ಹಿಂದೂಗಳಲ್ಲಿರುವ ಸೋ ಕಾಲ್ಡ್ ಪ್ರಗತಿಪರರೇ ಹಿಂದೂ ಧರ್ಮದ ಶತ್ರುಗಳು ಮತ್ತು ವಿನಾಶಕರು. ರವೂಫ್ ಎಂಬಾತ ಹಿಂದೂ ಹೆಸರಿಟ್ಟು ಕೊಂಡು, ತಂದೆಯ ಹೆಸರನ್ನೂ ಹಿಂದೂ ಹೆಸರಿಗೆ ಬದಲಿಸಿ ಸಮಾಜವನ್ನು ವಂಚಿಸು ತ್ತಿದ್ದರೆ, ಆತನನ್ನು ಬೆಂಬಲಿಸುತ್ತಿರುವವರು ಮುಸಲ್ಮಾನರಲ್ಲ. ಉಂಡಮನೆಯ ನಮ್ಮ ನಡುವಿನ ಗಳಹಿರಿಯುವ ಹಿಂದೂ ಪ್ರಗತಿಪರರೇ.‌

ಶಾಲಾ ಕಾಲೇಜುಗಳಲ್ಲಿ, ಖಾಸಗಿ ಕಂಪೆನಿಗಳಲ್ಲಿ, ಎಂದರಲ್ಲಿ ಮತಾಂತರದ ಬಲೆ ಬೀಸ ಲಾಗುತ್ತಿದೆ. ಪ್ರೀತಿ ಹೆಸರಿನಲ್ಲಿ ಯುವತಿಯರ ಮನಸು ಕೆಡಿಸಿ ತಮ್ಮೆಡೆಗೆ ಎಳೆದುಕೊಳ್ಳುವ ಜಿಹಾದಿಗಳು ಒಂದೆಡೆಯಾದರೆ, ಮುಸಲ್ಮಾನ ಧರ್ಮದಲ್ಲಿ ಸಮಾನತೆ ಇದೆ, ಜಾತಿಭೇದ ಇಲ್ಲ, ಆರ್ಥಿಕ ಪರಿಸ್ಥಿತಿ ಉನ್ನತವಾಗುತ್ತದೆ ಎಂದೆಲ್ಲ ಆಮಿಷ ತೋರಿಸಿ ಸೆಳೆಯುವ ತಂತ್ರ ಮತ್ತೊಂದೆಡೆ.

ಅತ್ತ ಮುಸಲ್ಮಾನ ಹುಡುಗರ ರೂಪಕ್ಕೆ, ಸ್ಟೈಲು ಶೋಕಿಗಳಿಗೆ, ಅವರು ಮಾಡುವ ಖರ್ಚು ಗಳಿಗೆ, ಕೊಡುವ ಗಿಫ್ಟ್‌ʼಗಳಿಗೆ, ದೈಹಿಕ ಸುಖಕ್ಕೆ ಮರುಳಾಗುವ ಯುವತಿಯರು ಬೀಳುತ್ತಿದ್ದರೆ, ಇತ್ತ ಸಾಮಾಜಿಕ-ಆರ್ಥಿಕ ಆಮಿಷಗಳನ್ನು ನಂಬಿ ಬಡಹಿಂದೂಗಳು, ದಲಿತ-ಹಿಂದುಳಿದ ವರ್ಗದ ಹಿಂದೂಗಳು ಮತಾಂತರಗೊಳ್ಳಲು ಮುಂದಾಗುತ್ತಿದ್ದಾರೆ.

ಮತಾಂತರಗೊಂಡ ನಂತರ ಯಾರೊಬ್ಬರ ಬದುಕೂ ಚೆಂದಗೊಂಡ ಉದಾಹರಣೆ ಇಲ್ಲ. ಪಂಜರದ ಹಕ್ಕಿಯಾಗಿ, ಬುರ್ಖಾ ಹಿಜಾಬುಗಳ ನಡುವೆ ಪ್ರತಿನಿತ್ಯ ಹಿಂಸೆ ಅನುಭವಿಸುವ ಯುವತಿಯರು ಘರ್ ವಾಪಸಿ ಮಾಡಲಾಗದೇ ಪ್ರಾಣಭಯದಿಂದ ಬದುಕುತ್ತಿದ್ದಾರೆ.

ಕೆಲವರಂತೂ ಫ್ರಿಜ್ಜು, ವಾಷಿಂಗ್ ಮಷಿನ್‌ಗಳಲ್ಲಿ, ಕಸಾಯಿ ಖಾನೆಗಳಲ್ಲಿ ಮಾಂಸದ ತುಂಡುಗಳಾಗಿ ಹೋಗಿದ್ದಾರೆ. ಇನ್ನು ಬಡತನ-ಜಾತೀಯತೆ ಕಾರಣಗಳಿಗೆ ಮತಾಂತರ ವಾದವರು, ಮೊದಲೇ ಚೆನ್ನಾಗಿದ್ವಿ ಎಂದು ಪರಿತಪಿಸುವಷ್ಟು ಕಂಗಾಲಾಗಿ ಹೋಗಿದ್ದಾರೆ. ಈ ಹಂತದಲ್ಲಿ ಮತಾಂತರದ ಆಮಿಷಕ್ಕೆ ನಿತ್ಯವೂ ಒಳಗಾಗುತ್ತಿರುವ ಹಿಂದೂಗಳು, ಮುಸಲ್ಮಾನ ಧರ್ಮದಲ್ಲಿರುವ ಜಾತಿಪದ್ಧತಿ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ ಎಂಬು ದು ನನ್ನ ಅನಿಸಿಕೆ.

ಬಡತನ, ಅನಾರೋಗ್ಯ, ಜಾತಿಭೇದ ಇಂಥ ವಿಷಯಗಳನ್ನು ಮುಂದಿಟ್ಟುಕೊಂಡು, ಇಸ್ಲಾಂಗೆ ಕನ್ವರ್ಟ್ ಆಗ್ತಾರಲ್ಲ. ಅವರಿಗೆ ನಿಜಕ್ಕೂ ಅಲ್ಲಿ ನ್ಯಾಯ ಸಮಾನತೆ ಸಿಗುತ್ತದೆಯಾ? ರಾಯಲ್ ಟ್ರೀಟ್ ಮೆಂಟು ಸಿಗುತ್ತಾ? ಉಹೂಂ. ಭ್ರಮೆ ಅಷ್ಟೇ. ಮೇಲ್ನೋಟಕ್ಕೆ ಹಿಂದೂ ಗಳು ನೂರಾರು ಜಾತಿ ಉಪಜಾತಿಗಳಿಂದ ನಲುಗಿ ಹೋಗಿದ್ದಾರೆ, ಮುಸಲ್ಮಾನರಲ್ಲಿ ಮಾತ್ರ ಜಾತಿಗಳೇ ಇಲ್ಲ. ಅಲ್ಲಿ ಎಲ್ಲರೂ ಧರ್ಮದಿಂದ ಮಾತ್ರ ಗುರುತಿಸಿಕೊಳ್ಳುತ್ತಾರೆ ಎಂಬಂತೆ ಬಿಂಬಿಸಲಾಗಿದೆ. ಆದರೆ ಅದು ಸತ್ಯ ಅಲ್ಲ. ಮುಸಲ್ಮಾನರಲ್ಲೂ ಜಾತಿ ಇದೆ, ಪಂಗಡ ಇದೆ.

ವ್ಯತ್ಯಾಸ ಏನಂದ್ರೆ ಮುಸಲ್ಮಾನರು ಧರ್ಮ ಅಂತ ಬಂದಾಗ ಒಗ್ಗಟ್ಟಾಗಿ ನಿಲ್ಲುತ್ತಾರೆ. ಆದರೆ ಹಿಂದೂಗಳು ಜಾತಿಗಳಲ್ಲಿ ಒಡೆದು ಹೋಗುತ್ತಾರೆ. ಇದೇ ರಾಜಕಾರಣಿಗಳ ಟ್ರಂಪ್ ಕಾರ್ಡ್ ಕೂಡ. ಹೌದು. ಮುಸಲ್ಮಾನರಲ್ಲೂ ಜಾತಿ ಅಸಮಾನತೆ ಇದೆ, ಜಾತಿ ವೈಷಮ್ಯ ಇದೆ, ಮೇಲ್ಜಾತಿಯವರು ಕೆಳಜಾತಿಯವರ ಮೇಲೆ ದೌರ್ಜನ್ಯ ನಡೆಸೋ ಉದಾಹರಣೆ ಇದೆ. ಆದರೆ ರಾಜಕಾರಣಿಗಳು ಮಾತ್ರ ಹಿಂದೂಗಳನ್ನು ಒಡೆಯೋ ಹಾಗೆ ಮುಸಲ್ಮಾನರನ್ನು ಜಾತಿ ಹೆಸರಲ್ಲಿ ಒಡೆಯೋ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ.

ಯಾಕಂದ್ರೆ, ಅಲ್ಪಸಂಖ್ಯಾತರನ್ನು ಒಗ್ಗೂಡಿಸ್ಕೊಂಡು ಇದ್ರೆ ಲಾಭ. ಬಹುಸಂಖ್ಯಾತರನ್ನು ಒಡೆದು ಆಳಿದ್ರೆ ಲಾಭ ಅನ್ನೋ ಸತ್ಯ ರಾಜಕೀಯದವ್ರಿಗೆ ಚೆನ್ನಾಗಿ ಗೊತ್ತಿದೆ. ಬಹಳಷ್ಟು ಮಂದಿ ಅಂದುಕೊಂಡಿರೋದು ಮುಸ್ಲಿಮರಲ್ಲಿ ಎರಡು ಪಂಗಡ ಮಾತ್ರ ಇದೆ- ಶಿಯಾ ಮತ್ತು ಸುನ್ನಿ ಅಷ್ಟೇ ಅಂತ. ಆದರೆ ಅದು ತಪ್ಪು ಕಲ್ಪನೆ.

ಇಸ್ಲಾಂ ನಾವೆಲ್ಲ ಒಂದೇ ಅಂತ ಹೇಳುತ್ತೆ. ಆದರೆ ಮುಸಲ್ಮಾನ ಸಮಾಜ ಮಾತ್ರ ಈ ಏಕತೆ ಮಂತ್ರವನ್ನು ಒಪ್ಪುವುದಿಲ್ಲ. ಅವರಲ್ಲಿ ಜಾತಿಭೇದ ಹೇರಳವಾಗಿ ಇದೆ. ನೀವು ಮುಸಲ್ಮಾನ ಮ್ಯಾಟ್ರಿಮೊನಿ, ಅರ್ಥಾತ್ ಶಾದಿ ವೆಬ್ ಸೈಟ್‌ಗಳಿಗೆ ಹೋದರೆ ನಿಮಗೆ ಮುಸಲ್ಮಾನರಲ್ಲಿ ಎಷ್ಟು ಜಾತಿ ಇದೆ, ಎಷ್ಟು ಉಪಜಾತಿ ಇದೆ ಅನ್ನೋ ವಾಸ್ತವ ಅರ್ಥ ಆಗತ್ತೆ. ಅಂದ ಹಾಗೆ, ಪಸ್ಮಂಡಾ ಮುಸ್ಲಿಂ ಅಂತ ಕರೆಯೋದನ್ನು ನೀವು ಎಂದಾದರೂ ಕೇಳಿದ್ದೀರಾ? ಪಸ್ಮಂಡಾ ಮುಸ್ಲಿಂ ಅನ್ನೋದು ಮುಸಲ್ಮಾನರ ಪ್ರಕಾರ ಒಂದು ಕೆಳವರ್ಗ.

ಹಿಂದೂಗಳಲ್ಲಿ ದಲಿತ ಮತ್ತು ಹಿಂದುಳಿದವರು ಅಂತ ಹೇಗೆ ಇದ್ದಾರೋ, ಹಾಗೆ ಮುಸಲ್ಮಾನರಲ್ಲಿ ಪಸ್ಮಂಡಾ ಮುಸ್ಲಿಂ ಅಂತ ಇದ್ದಾರೆ. ಒಂದು ನಿದರ್ಶನದ ಮೂಲಕ ಹೇಳುವುದಾದರೆ, ಡಿಸೆಂಬರ್ 2019ರಲ್ಲಿ ಒಬ್ಬ ಮುಸಲ್ಮಾನ ಯುವಕ ಪಠಾಣರ ಡ್ರೆಸ್ ಹಾಕ್ಕೊಂಡು ಗುಜರಾತ್‌ನ ಒಂದು ಜಾಗದಲ್ಲಿ ಟೀ ಕುಡೀತಾ ನಿಂತಿರುತ್ತಾನೆ. ಅವನ ಮೇಲೆ ಮುಸಲ್ಮಾನರೇ ಬಂದು ದಾಳಿ ಮಾಡ್ತಾರೆ. ಕಾರಣ ಅವನು ಕೀಳು ಜಾತಿಯ ಮುಸ್ಲಿಂ ಎಂಬುದು. ಅವನು ಪಠಾಣರ ಡ್ರೆಸ್ ಹಾಕುವಂತಿಲ್ಲವಂತೆ. ಆತನ ಮೇಲೆ ಹಲ್ಲೆ ಮಾಡಿದ್ದು ಮೇಲ್ಜಾತಿಯ ಮುಸ್ಲಿಮರು. ಮುಸ್ಲಿಮರಲ್ಲಿ ಮೇಲ್ಜಾತಿ ಅಂದರೆ ಯಾವುದು? ಭಾರತೀಯ ಮುಸ್ಲಿಮರಲ್ಲಿ ಮುಖ್ಯವಾಗಿ ಮೂರು ಜಾತಿಗಳಿವೆ. ಅತ್ಯಂತ ಶ್ರೇಷ್ಠ ಅಥವಾ ಮೇಲ್ಜಾತಿ ಯನ್ನು ಅಶ್ರಫ್ ಮುಸ್ಲಿಮ್ಸ್ ಅಂತಾರೆ. ಸೈಯದ್, ಶೇಖ್, ಪಠಾಣ್, ಮುಘಲ್ಸ್ ಇವರೆಲ್ಲ ಅಶ್ರಫ್ ಮುಸ್ಲಿಮರು. ಇವರನ್ನು ತುಂಬ ಶ್ರೇಷ್ಠರು ಅಂತ ಪರಿಗಣಿಸಲಾಗತ್ತೆ. ಈ ಅಶ್ರಫ್ ಮುಸಲ್ಮಾನರಲ್ಲಿ ಕೂಡ ಕನ್ವರ್ಟೆಡ್ ಮುಸಲ್ಮಾನರು ಇರುತ್ತಾರೆ. ಆದರೆ ಬೇರೆ ಧರ್ಮ‌ ದಲ್ಲಿರುವ ಮೇಲ್ಜಾತಿಯವರು ಇಸ್ಲಾಮಿಗೆ ಕನ್ವರ್ಟ್ ಆದ್ರೆ ಅವರನ್ನು ಈ ಮೇಲ್ಜಾತಿ ಮುಸಲ್ಮಾನರನ್ನಾಗಿ ಟ್ರೀಟ್ ಮಾಡಲಾಗುತ್ತೆ. ‌

ಉದಾಹರಣೆಗೆ, ಹಿಂದೂಗಳಲ್ಲಿ ಬ್ರಾಹ್ಮಣ ಅಥವಾ ಲಿಂಗಾಯತ ಒಬ್ಬ ಇಸ್ಲಾಮಿಗೆ ಕನ್ವರ್ಟ್ ಆದ ಅಂದುಕೊಳ್ಳಿ, ಅವನನ್ನು ಅಶ್ರಫಿ ಮುಸಲ್ಮಾನ ಎಂಬ ಕೆಟಗರಿಗೆ ಸೇರಿಸು‌ ತ್ತಾರೆ. ಮುಸಲ್ಮಾನರಲ್ಲಿ ಅಪ್ಪರ್ ಕ್ಯಾ ಅಂದ್ರೆ ಅದು ಅಶ್ರಫ್ ಮುಸ್ಲಿಮ್ಸ್.‌ ಅವರ ನಂತರ, ಅಂದ್ರೆ ಅವರಿಗಿಂತ ಸ್ವಲ್ಪ ಕೆಳಗೆ ಬರುವ ವರ್ಗ, ಅಜ್ಲಫ್ಸ್‌. ವ್ಯಾಪಾರ ವ್ಯವಹಾರ ಜಮೀನಿನ ಕೆಲಸ, ಇತ್ಯಾದಿ ಮಾಡುವವರನ್ನು ಈ ಅಜ್ಲ- ಜಾತಿಯವರೆಂದು ಪರಿಗಣಿಸಲಾಗುತ್ತದೆ. ಮೂರನೇ ಕೆಟಗರಿ ಅರ್ಜಲ್!

ಹಿಂದೂಗಳಲ್ಲಿರುವ ದಲಿತರು, ಬಡವರು, ಜಾತಿ ಪದ್ಧತಿ ಬೇಸತ್ತು ಕನ್ವರ್ಟ್ ಆಗಿರುವವರು ಈ ಅರ್ಜಲ್ ಮುಸಲ್ಮಾನರು. ಕೂಲಿನಾಲಿ ಮಾಡ್ತಾ ಇರೋವ್ರು, ಕ್ಷೌರಿಕ ವೃತ್ತಿ, ಬಟ್ಟೆ ಒಗೆಯೋ ಕೆಲಸ, ಕಸಾಯಿ ಕೆಲಸ ಇಂಥದ್ದನ್ನೆಲ್ಲ ಮಾಡುವವರು ಮುಸಲ್ಮಾನರಾಗಿ ಕನ್ವರ್ಟ್ ಆದಾಗ ಅವರನ್ನು ಅರ್ಜಲ್ ಮುಸ್ಲಿಂ ಪಂಗಡಕ್ಕೆ ಸೇರಿಸುತ್ತಾರೆ.

ಸರಳವಾಗಿ ಅರ್ಥವಾಗುವ ಹಾಗೆ ಹೇಳುವುದಾದರೆ, ಹಿಂದೂಗಳಲ್ಲಿ ಬ್ರಾಹ್ಮಣ, ವೈಶ್ಯ, ಶೂದ್ರ ಅಂತ ಇರುವ ಹಾಗೆ ಇಲ್ಲಿ ಅಶ್ರಫ್ ಅಜ್ಲಫ್ ಮತ್ತು ಅರ್ಜಲ್ ಎಂಬ ವಿಭಾಗ ಇದೆ. ಹಾಗಾದರೆ ಪಸ್ಮಂಡಾ ಮುಸ್ಲಿಂ ಅಂದ್ರೆ ಯಾರು? ಅಲ್ಜಫ್ ಹಾಗೂ ಅರ್ಜಲ್ ಮುಸಲ್ಮಾನರ ಒಟ್ಟು ಸಮೂಹವೇ ಪಸ್ಮಂಡಾ ಮುಸ್ಲಿಂ! ನಮ್ಮ ರಾಜ್ಯದಲ್ಲಿ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದವರನ್ನು ಸೇರಿಸಿ ಅಹಿಂದ ಮಾಡಿದ ಹಾಗೆ, ಒಬ್ಬ ಮುಸಲ್ಮಾನ ರಾಜಕಾರಣಿ ಅಲ್ಜಫ್ ಮತ್ತು ಅರ್ಜಲ್ ಮುಸ್ಲಿಮರನ್ನು ಸೇರಿಸಿ ಪಸ್ಮಂಡಾ ಮಾಡಿದ. ಆತನ ಹೆಸರು ಡಾಕ್ಟರ್ ಅಲಿ ಅನ್ವರ್ ಅನ್ಸಾರಿ.

1998ರಲ್ಲಿ ರಾಜಕೀಯ ಲಾಭಗಳಿಗಾಗಿ ಈ ಪಸ್ಮಂಡಾ ಎಂಬ ಪದ ಹುಟ್ಟು ಹಾಕಲಾಯ್ತು. ಅಚ್ಚರಿ ಏನೆಂದರೆ, ಭಾರತದಲ್ಲಿ ಇರುವ ಶೇ.85ರಷ್ಟು ಮುಸ್ಲಿಮರು ಪಸ್ಮಂಡಾ ಮುಸ್ಲಿಂಸ್! ಅಂದರೆ, ನಮ್ಮಲ್ಲಿ ಕನ್ವರ್ಷನ್ ಎಂಬುದು ಯಾವ ಪ್ರಮಾಣದಲ್ಲಿ ಆಗಿದೆ ಅನ್ನೋದಕ್ಕೆ ಈ ಸಂಖ್ಯೆಯೇ ಸಾಕ್ಷಿ. ನೀವು ಕೇರಳಕ್ಕೆ ಹೋದರ ಅಲ್ಲಿ ತಂಗಲ್ಸ್, ಅರೇಬೀಸ್, ಮಲಬಾರೀಸ್, ಓಸಾನ್ ಪುಸಲಾ ಅಂತ ಬೇರೆ ಬೇರೆ ಜಾತಿ ಮುಸ್ಲಿಮ್ ಇದ್ದಾರೆ. ‌

ಅಲ್ಲಿ ಅರೇಬೀಸ್ ಮತ್ತು ಥಂಗಲ್ ಮುಸ್ಲಿಮರದ್ದು ಮೇಲ್ಜಾತಿ ಆದ್ರೆ, ಮಲಬಾರೀಸ್ ಮತ್ತು ಓಸಾನ್‌ಗಳದ್ದು ಕೆಳಜಾತಿ. ಅದೇ ತಮಿಳುನಾಡಿಗೆ ಹೋದರೆ, ಮೂರು ಥರದ ಮುಸ್ಲಿಮ್ಸ್ ಸಿಗುತ್ತಾರೆ. ಅರಬ್ ದೇಶದಿಂದ ಬಂದು ಸೆಟ್ಲ್ ಆದ ಮುಸ್ಲಿಮ್ಸ್, ತಮಿಳುನಾಡಿನ ಇಸ್ಲಾಮಿಗೆ ಕನ್ವರ್ಟ್ ಆಗಿರೋ ಮುಸ್ಲಿಮ್ಸ್ ಹಾಗೂ ದೇಶದ ಬೇರೆ ಭಾಗದಿಂದ ಬಂದು ತಮಿಳು‌ ನಾಡಿನಲ್ಲಿ ಸೆಟ್ಲ್ ಆಗಿರೋ ಮುಸ್ಲಿಮ್ಸ್. ‌

ಅಷ್ಟೇ ಅಲ್ಲ, ಇವರೆಲ್ಲರ ನಡುವೆ ಜಾತಿ ವೈಷ್ಯಮ್ಯ ಜೋರಾಗಿಯೇ ಇದೆ. ಮುಸಲ್ಮಾನರಲ್ಲಿ ಸರ್‌ನೇಮ್ನೋಡಿಯೇ ಇವ್ರು ಮೇಲ್ಜಾತಿಯ ಮುಸಲ್ಮಾನರೋ, ಕೀಳು ಜಾತಿಯ ಮುಸಲ್ಮಾನ ರೋ ಎಂದು ನಿರ್ಧಾರ ಮಾಡುತ್ತಾರೆ. ತಮ್ಮನ್ನು ಗೌರವದಿಂದ ನೋಡಲಿ ಎಂದೇ ಎಷ್ಟೋ ಮುಸ್ಲಿಮರು ಅನ್ಸಾರಿ, ಸಲ್ಮಾನಿ, ಖುರೇಶಿ, ಜುಬೇರಿ ಎಂಬ ಸರ್‌ನೇಮ್‌ಗಳನ್ನು ಬಳಸುವು ದಿದೆ. ಯಾಕಂದ್ರೆ ಅವೆಲ್ಲ ಮೇಲ್ಜಾತಿಯ ಮುಸ್ಲಿಮರು ಇಟ್ಟುಕೊಳ್ಳುವಟ್ಕೊಳೋ ಸರ್‌ ನೇಮ್‌ಗಳು. ಅಂತೆಯೇ ಖಾನ್, ಖಾನ್ ಬಹದೂರ್, ಖಾನ್ ಸಾಹೇಬ್ ಅನ್ನೋ ಟೈಟಲ್‌ ಗಳೂ ಕೂಡ, ಕ್ರಮೇಣ ಮೇಲ್ಜಾತಿಯ ಸೂಚಕ ಆಗಿ ಬಿಟ್ಟಿದೆ.

ಮುಸಲ್ಮಾನರಲ್ಲಿ ಮದುವೆ ಆಗುವಾಗ ಕೂಡ ಮೇಲ್ಜಾತಿ ಕೀಳುಜಾತಿ ಅಂತ ನೋಡುತ್ತಾರೆ. ಅದೇ ಕಾರಣಕ್ಕೆ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಸರ್ಚ್ ಬೈ ಕಾ ಎಂಬ ಆಯ್ಕೆ ಇಟ್ಟಿದಾರೆ. ಇವರಲ್ಲಿ ಜಾತೀಯತೆ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಒಂದು ಉದಾಹರಣೆ- ಉತ್ತರಪ್ರದೇಶದಲ್ಲಿ ಒಂದು ರಜಪೂತ ಕುಟುಂಬ ಇಸ್ಲಾಮಿಗೆ ಕನ್ವರ್ಟ್ ಆಗಿತ್ತು.

ಆ ಕನ್ವರ್ಟೆಡ್ ಕುಟುಂಬದ ಒಬ್ಬ ಮುಸ್ಲಿಂ ಹುಡುಗಿಗೆ, ಹಿಂದೂ ದಲಿತ ಹುಡುಗನ ಮೇಲೆ ಲವ್ ಆಯಿತು. ಹುಡುಗಿ ಅವನನ್ನು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದಳು.

ದಲಿತನ ಜತೆ ಮದುವೇನಾ? ಸಾಧ್ಯನೇ ಇಲ್ಲ ಅಂದುಬಿಟ್ಟಿತು ಕುಟುಂಬ. ಆಗ ಆ ಹುಡುಗ ಪ್ರೀತಿಗೋಸ್ಕರ ಇಸ್ಲಾಮಿಗೆ ಕನ್ವರ್ಟ್ ಆಗಲು ಸಿದ್ಧನಾದ. ಆದರೂ ಆ ಮುಸ್ಲಿಂ ಫ್ಯಾಮಿಲಿ ಒಪ್ಪುವುದಿಲ್ಲ. ಒಬ್ಬ ದಲಿತ ಇಸ್ಲಾಮಿಗೆ ಕನ್ವರ್ಟ್ ಆದ ಮಾತ್ರಕ್ಕೆ ಅವನು ನಮ್ಮವ ನಾಗುವುದಿಲ್ಲ. ನಾವು ಮೇಲ್ಜಾತಿ ಮುಸ್ಲಿಮರು. ಅವನು ದಲಿತ ಮುಸ್ಲಿಮ್ ಅಂತ ಹೇಳಿ ಅವನನ್ನು ದೂರ ತಳ್ಳಿದರು. ಮದುವೆ ಅಂದ್ರೆ ಸಾಯಿಸಿ ಬಿಡ್ತೀವಿ ಅಂತ ಹೆದರಿಸಿದರು.

ಹೌದು, ಮುಸಲ್ಮಾನರಾಗಿ ಕನ್ವರ್ಟ್ ಆದ ತಕ್ಷಣ ಒಬ್ಬ ದಲಿತ ಹಿಂದೂವನ್ನು ಮುಸ್ಲಿಂ ಸಮಾಜ ಸಮಾನತೆಯಿಂದ ನೋಡುವುದಿಲ್ಲ. ಮಹಾನ್ ಜಾತ್ಯತೀತ ಅಲಿಘರ್ ಯೂನಿ‌ ವರ್ಸಿಟಿ ಒಳಗೂ ಈ ಜಾತಿ ಭೇದ ಇದೆ.

ಬಿಹಾರದ ಮುಜಾಫರ್‌ಪುರದಲ್ಲಿ ಒಂದು ಏರಿಯಾ ಇದೆ. ಅದು ಮುಸ್ಲಿಂ ಏರಿಯಾ. ಅಲ್ಲಿ ರಸ್ತೆಯ ಮಧ್ಯಕ್ಕೆ ಒಂದು ಕಂಪೌಂಡ್ ಹಾಕಿzರೆ. ಕಾರಣ, ಶೇಖ್ ಮತ್ತು ಆನ್ಸಾರಿ ಎಂಬ ಎರಡು ಮೇಲ್ಜಾತಿ ಕೆಳಜಾತಿ ಮಧ್ಯ ಇರುವ ವೈಷಮ್ಯ!

ಇವತ್ತಿಗೂ ಮೇಲ್ಜಾತಿ ಮುಸ್ಲಿಮರು ದಲಿತ ಮುಸ್ಲಿಮರನ್ನು ಮದುವೆಗೆ ಕರೆಯುವುದಿಲ್ಲ. ಹಾಗೊಮ್ಮೆ ಕರೆದರೂ ಪ್ರತ್ಯೇಕವಾಗಿಯೇ ಕೂರಿಸುತ್ತಾರೆ. ಪ್ರತ್ಯೇಕ ಊಟ ಹಾಕುತ್ತಾರೆ. ಮೇಲ್ಜಾತಿಯವ್ರು ಊಟ ಮಾಡಿದ ನಂತರವೇ ಊಟ ಮಾಡಬೇಕು ಎಂದು ಕಂಡಿಷನ್ ಹಾಕ್ತಾರೆ.

ಅಷ್ಟೇ ಯಾಕೆ, ಮುಸ್ಲಿಮರ ಸ್ಮಶಾನದಲ್ಲೂ ಜಾತಿ ಭೇದ ಇದೆ. ಪಮಡಿಯಾ, ಮನ್ಸೂರಿ, ಸೈಯದ್, ದೂನಿಯಾ ಹೀಗೆ ಒಂದೊಂದು ಜಾತಿ ಮುಸ್ಲಿಮರಿಗೆ ಒಂದೊಂದು ಸ್ಮಶಾನ ಇದೆ. ಹೊರಗಿನವರಿಗೆ ಎಲ್ಲವೂ ಮುಸ್ಲಿಂ ಸ್ಮಶಾನ ಅಂತಷ್ಟೇ ಅನಿಸುತ್ತದೆ.

ಇನ್ನು ರಾಜಕೀಯದಲ್ಲಿ ನಾವು, 1952ರಿಂದ 2004ರ ತನಕದ ಡೇಟಾ ನೋಡಿದರೆ, ಅಶ್ರ- ಮುಸಲ್ಮಾನರಿಗೆ ಇರೋ ಪ್ರಾಧಾನ್ಯ ಪಸ್ಮಂಡಾ ಮುಸಲ್ಮಾನರಿಗೆ ಇಲ್ಲ. ಭಾರತದಲ್ಲಿ ಇರುವ ಅಶ್ರಫ್ ಮುಸ್ಲಿಮ್ಸ್ ಶೇ.2.1ರಷ್ಟು ಮಾತ್ರ. ಪಸ್ಮಂಡಾ ಮುಸ್ಲಿಮರು‌ ಶೇ.11.4ರಷ್ಟು ಇದ್ದಾರೆ.

ಆದರೆ ಸ್ಥಾನಮಾನ ಸಿಕ್ತಾ ಇರೋದು ಅಶ್ರಫ್ ಮುಸಲ್ಮಾನರಿಗೆ ಮಾತ್ರ ಅನ್ನುತ್ತೆ ಅಂಕಿ-ಅಂಶ. ಇದೇ‌ ಕಾರಣಕ್ಕೆ, ಪಸ್ಮಂಡಾ ಮುಸಲ್ಮಾನರು ತಮಗೆ ಪರಿಶಿಷ್ಟ ಜಾತಿ ಸ್ಥಾನಮಾನ ಕೊಡಿ ಅಂತ ಕೇಳ್ತಾ ಇದ್ದಾರೆ. ಹಿಂದೂಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ರಿಸರ್ವೇಶನ್ ಕೊಡ್ತೀರಿ, ಮುಸಲ್ಮಾನರಲ್ಲಿ ಮಾತ್ರ ಯಾಕೆ ಪಸ್ಮಂಡಾಗಳಿಗೆ ರಿಸರ್ವೇಶನ್ ಇಲ್ಲ ಅಂತ ಕೇಳ್ತಿzರೆ. ಖುದ್ದು ಮಸೀದಿಗಳ ನಮಗೆ ಸಮಾನತೆ ಸಿಗುವುದಿಲ್ಲ.

ನಮ್ಮಂಥ ದಲಿತ ಮುಸಲ್ಮಾನರನ್ನು ಕೊನೆಯ ಸಾಲಲ್ಲಿ ನಿಲ್ಲಿಸ್ತಾರೆ ಅಂತ ಪಸ್ಮಂಡಾ ಮುಸ್ಲಿಮರು ಇವತ್ತಿಗೂ ತಮ್ಮ ದುಃಖ ತೋಡಿಕೊಳ್ಳುತ್ತಾರೆ. ಇವತ್ತಿಗೂ ಮದರಸಾಗಳಲ್ಲಿ ಕಲೀತಾ ಇರುವವರು, ಕೆಳವರ್ಗದ ಮುಸಲ್ಮಾನರೇ. ಮೇಲ್ಜಾತಿಯವರೆಲ್ಲ ಒಳ್ಳೊಳ್ಳೆ ಸ್ಕೂಲ್ ಕಾಲೇಜ್‌ಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಮುಸ್ಲಿಮರಲ್ಲಿ ಹೀಗೆ ಜಾತಿಪದ್ದತಿ ಎಲ್ಲಿಂದ ಬಂತು.. ಹೇಗೆ ಶುರು ಆಯ್ತು ಅಂತ ಹೇಳ್ತಾ ಹೋದ್ರೆ ಅದು ತುಂಬ ದೊಡ್ಡ ಕತೆಯೇ ಆದೀತು. ಆದರೆ ಇಲ್ಲಿ ಗಮನಿಸಬೇಕಿರುವುದು ಏನೆಂದರೆ, ಕನ್ವರ್ಟ್ ಆಗಿರುವ ದಲಿತರು ಹಿಂದುಳಿದವರು ಇಸ್ಲಾಮಿಗೆ ಬಂದನಂತರ ಸಮಾನತೆಯನ್ನು ಗಳಿಸುವುದಿಲ್ಲ ಎಂಬ ವಾಸ್ತವ.

ಮತಾಂತರ ಆದರೆ ಜೀವನ ಚೆನ್ನಾಗಿ ಆಗಿಬಿಡುತ್ತದೆ ಎಂಬುದೆಲ್ಲ ಭ್ರಮೆ ಹಾಗೂ ಜಿಹಾದಿ ಗಳು ಹುಟ್ಟಿಸುವ ಆಮಿಷ ಅಷ್ಟೇ. ಒಬ್ಬ ದಲಿತ ಹಿಂದೂ ಧರ್ಮದಲ್ಲಿ ತನಗೆ ಅನ್ಯಾಯ ಆಗ್ತಿದೆ, ದೌರ್ಜನ್ಯ ಆಗ್ತಿದೆ ಅಂತ, ಇಸ್ಲಾಮಿಗೆ ಹೋದರೆ ಅಲ್ಲಿ ಕೂಡ ಆತ ದಲಿತನಾಗಿಯೇ ಇರುತ್ತಾನೆ. ಅಗ್ಗದ ಆಮಿಷಗಳಿಗೆ ಬಲಿಯಾಗಿ ಮತಾಂತರಗೊಳ್ಳುವ ಮುನ್ನ ನಿಮ್ಮ ಗಮನಕ್ಕಿರಲಿ. ಆಯ್ಕೆ ಮಾಡಿಕೊಂಡು ನರಕ ಪ್ರವೇಶಿಸದಿರಿ.

ನವೀನ್‌ ಸಾಗರ್‌

View all posts by this author