ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Naveen Sagar Column: ಇತಿಹಾಸ ತಿರುಚಿ ಅಂಬೇಡ್ಕರ್‌ ಆತ್ಮವನ್ನು ನೋಯಿಸದಿರಿ

ಅಜೆಂಡಾ ಅಂದ್ರೇನು ಪ್ರಪಗ್ಯಾಂಡ ಅಂದ್ರೆ ಏನು ಅನ್ನೋದನ್ನು ನಕಲಿ ಹಿಸ್ಟಾರಿಯನ್‌ಗಳಿಂದ, ಬುದ್ಧಿಜೀವಿಗಳಿಂದ ಕಲಿಯಬೇಕು. ನಮ್ಮ ಇತಿಹಾಸದ ಪುಸ್ತಕಗಳು, ನಮ್ಮ ಲೆಫ್ಟಿ ಮೀಡಿಯಾಗಳು, ನಮ್ಮ ಬುದ್ಧಿಜೀವಿಗಳು ಇಷ್ಟೂ ದಿನಗಳಲ್ಲಿ ಹೈಲೈಟ್ ಮಾಡ್ತಾ ಬಂದಿರೋದು ಅಂಬೇಡ್ಕರ್ ಅವರಿಗೆ ಹಿಂದುತ್ವದ ವಿರುದ್ಧ ತಕರಾರು ಇತ್ತು ಅನ್ನೋದನ್ನು ಮಾತ್ರ.

ಇತಿಹಾಸ ತಿರುಚಿ ಅಂಬೇಡ್ಕರ್‌ ಆತ್ಮವನ್ನು ನೋಯಿಸದಿರಿ

-

ಪದಸಾಗರ

ಇಂದು ಏಪ್ರಿಲ್ ಹದಿನಾಲ್ಕು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಸ್ಮರಣೆ ಯ ದಿನ. ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಇಂದು ಬದುಕಿದ್ದಿದ್ದರೆ ತಮ್ಮ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರನ್ನು ಕಂಡು, ತಮ್ಮ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವವರನ್ನು ಕಂಡು, ತಮ್ಮ ಮಾತುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರನ್ನು ಕಂಡು ಅದೆಷ್ಟು ಮರುಗುತ್ತಿದ್ದರೋ, ಅದೆಷ್ಟು ಆಕ್ರೋಶಗೊಳ್ಳುತ್ತಿದ್ದರೋ!

ಈ ದೇಶ ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಷ್ಟು ಗಾಂಧಿಯ ಹೆಸರನ್ನೂ ಮಾಡಿರಲಿಕ್ಕಿಲ್ಲ. ಯಾವುದೇ ವಿಚಾರವಿರಲಿ, ಅಂಬೇಡ್ಕರ್ ಹೆಸರು ಪ್ರಸ್ತಾಪಿಸಿಬಿಟ್ಟರೆ ಅಲ್ಲಿಗೆ ಚೆಕ್ಮೇಟ್ ಎಂಬಂತಾಗಿ ಹೋಗಿದೆ. ಜಾತಿ ನಿಂದನೆಗೆ, ಜಾತಿಲಾಭ ಪಡೆಯೋದಕ್ಕೆ, ಮತ ಸೆಳೆಯೋ ದಕ್ಕೆ, ಅಪರಾಧಗಳಿಂದ, ಹಗರಣಗಳಿಂದ ಬಚಾವಾಗೋದಕ್ಕೆ ಎಲ್ಲದಕ್ಕೂ ಅಂಬೇಡ್ಕರ್ ಎಂಬ ಹೆಸರೇ ಅಸ ಅಂಬೇಡ್ಕರ್ ಎಂಬ ಹೆಸರೇ ಗುರಾಣಿ!

ಇದರ ಜತೆಗೆ ಅಂಬೇಡ್ಕರ್ ಹಿಂದೂ ವಿರೋಧಿಯಾಗಿದ್ದರು, ಹಿಂದೂ ಧರ್ಮದಿಂದ ರೋಸತ್ತಿದ್ದರು ಎಂದು ಬಿಂಬಿಸುವ ಶತಪ್ರಯತ್ನ. ಅವರ ಜನ್ಮಸ್ಮರಣೆಯ ಸಂದರ್ಭದಲ್ಲಿ ಒಂದಷ್ಟು ಸತ್ಯ ಹೇಳುವ ಮೂಲಕ ಅವರಿಗೆ ಗೌರವ ಸಮರ್ಪಿಸುವುದು ಈ ಬರಹದ ಉದ್ದೇಶ.

ಅಜೆಂಡಾ ಅಂದ್ರೇನು ಪ್ರಪಗ್ಯಾಂಡ ಅಂದ್ರೆ ಏನು ಅನ್ನೋದನ್ನು ನಕಲಿ ಹಿಸ್ಟಾರಿಯನ್‌ಗಳಿಂದ, ಬುದ್ಧಿಜೀವಿಗಳಿಂದ ಕಲಿಯಬೇಕು. ನಮ್ಮ ಇತಿಹಾಸದ ಪುಸ್ತಕಗಳು, ನಮ್ಮ ಲೆಫ್ಟಿ ಮೀಡಿಯಾಗಳು, ನಮ್ಮ ಬುದ್ಧಿಜೀವಿಗಳು ಇಷ್ಟೂ ದಿನಗಳಲ್ಲಿ ಹೈಲೈಟ್ ಮಾಡ್ತಾ ಬಂದಿರೋದು ಅಂಬೇಡ್ಕರ್ ಅವರಿಗೆ ಹಿಂದುತ್ವದ ವಿರುದ್ಧ ತಕರಾರು ಇತ್ತು ಅನ್ನೋದನ್ನು ಮಾತ್ರ.

ಇದನ್ನೂ ಓದಿ: Naveen Sagar Column: ಟಿಕೆಟ್‌ ಕೊಡಿಸಲಾಗದವ ಯಾವ ಸೀಮೆ ಶಾಸಕ !?

ಆದರೆ, ಅಂಬೇಡ್ಕರ್ ಅವ್ರು ಇಸ್ಲಾಂ ವಿರುದ್ಧ ಆಡಿರೋ ಮಾತುಗಳನ್ನು, ಇಸ್ಲಾಂನಲ್ಲಿ ಇರೋ ಅಕ್ಷೇಪಣೆಗಳ ಬಗ್ಗೆ ಮಾತಾಡಿರೋದನ್ನು ಯಾವತ್ತಿಗೂ ಜನರೆದುರು ಇಡಲೇ ಇಲ್ಲ. ನಾನು ಹಿಂದೂ ಆಗಿ ಹುಟ್ಟಿರೋದು ಹೌದು. ಆದರೆ ನಾನು ಹಿಂದೂ ಆಗಿ ಸಾಯೋದಿಲ್ಲ. ಒಂದ್ ವೇಳೆ ಭಾರತ ಹಿಂದೂರಾಷ್ಟ್ರ ಆಗೋದು ಅನಿವಾರ್ಯ ಅಂತಾದ್ರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ...!

ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಾಗಿತ್ತು ಅಂತಾರೆ ಸೋ ಕಾಲ್ಡ ಹಿಸ್ಟಾರಿಯ. ನಿಜಾನಾ? ಯಾರಿಗೆ ಗೊತ್ತು? ಇತಿಹಾಸ ಏನು ಹೇಳಿದೆಯೋ ಅದನ್ನು ನಾವು ನಂಬಲೇಬೇಕಲ್ವಾ? ಇಂಥ ಮಾತುಗಳನ್ನೇ ಅಸವಾಗಿಟ್ಟುಕೊಂಡು ಹಿಂದೂ ದಲಿತರನ್ನು ಮತ್ತು ಮುಸ್ಲಿಮರನ್ನು ಒಗ್ಗೂಡಿಸೋ ಸಂಚುಗಳು ಶುರುವಾಗಿದ್ದು. ಅರ್ಥಾತ್ ಪರೋಕ್ಷ ಮತಾಂತರ.

ಮೇಲ್ಜಾತಿಯ ಹಿಂದೂಗಳೆಲ್ಲರೂ ಮುಸಲ್ಮಾನರನ್ನು ಮತ್ತು ಹಿಂದೂ ದಲಿತರನ್ನು ತುಂಬ ಕೆಟ್ಟದಾಗಿ ನಡೆಸ್ಕೊಳ್ತಾ ಇದ್ದಾರೆ. ಹೀಗಾಗಿ ಹಿಂದೂ ದಲಿತರು ಮತ್ತು ಮುಸ್ಲಿಮರು ಒಂದಾಗಬೇಕು ಎಂಬ ಮಾತಿಗೆ ಪೂರಕವಾಗಿ ಹುಟ್ಟಿದ್ದೇ ಜೈ ಭೀಮ್ ಜೈ ಮೀಮ್ ಸ್ಲೋಗನ್.

ಸತ್ಯಾಂಶದತ್ತ ನೋಡೋದಾದ್ರೆ, ಸ್ಕೂಲು-ಕಾಲೇಜು ಅಥವಾ ಮೀಡಿಯಾಗಳಲ್ಲಿ ನಮ್ಮ ಮನೆ ಮಕ್ಕಳಿಗೆ, ಸ್ಟೂಡೆಂಟ್‌ಗಳಿಗೆ ಓದೋಕೆ ಸಿಕ್ಕಿರೋದು ಅಂಬೇಡ್ಕರ್ ಅವರ ಪೂರ್ತಿ ವಿಚಾರ ಅಲ್ಲ. ಅಪೂರ್ಣ ವಿಚಾರಗಳು ಮಾತ್ರ.

Dr B R Am ok

ಇನ್ನರ್ಧದಷ್ಟು ವಿಚಾರಗಳನ್ನು ಬೇಕಂತಾನೇ ಬಚ್ಚಿಟ್ಟರು ಜಾಣ ಹಿಸ್ಟಾರಿಯ. ಅವರು ಮುಚ್ಚಿಟ್ಟಿ ದ್ದಾದರೂ ಏನು? ಅಂಬೇಡ್ಕರ್ ಅವ್ರಿಗೆ ಇಸ್ಲಾಂ ಮತ್ತು ಮುಸ್ಲಿಂ ಸಮಾಜದ ಬಗ್ಗೆ ಇದ್ದ ಅಸಲಿ ಅಭಿಪ್ರಾಯಗಳನ್ನು. ಹೌದು. ಇದನ್ನು ಯಾವ ಪುಸ್ತಕ ಕೂಡ ತಿಳಿಸಲೇ ಇಲ್ಲ. ಆದರೆ, ಯಾವ ಸತ್ಯ ಗಳೂ ಶಾಶ್ವತವಾಗಿ ಬಚ್ಚಿಡಲು ಸಾಧ್ಯವಿಲ್ಲ.

ಅಂದು ಬಚ್ಚಿಟ್ಟಿದ್ದ ಅಂಬೇಡ್ಕರ್ ವಿಚಾರಗಳು ಈಗ ಒಂದೊಂದಾಗಿ ಹೊರಗೆ ಬರ್ತಾ ಇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟಿದ್ದು 1891ರಲ್ಲಿ. ಮಧ್ಯಪ್ರದೇಶದ ಮೌವ್ ಗ್ರಾಮದಲ್ಲಿ. ಅಂಬೇಡ್ಕರ್ ತಂದೆ ಹೆಸ್ರು ರಾಮ್ಜಿ ಸಕ್ ಪಾಲ್, ತಾಯಿ ಭೀಮಾಬಾಯಿ. ಅಂಬೇಡ್ಕರ್ ಹದಿನಾಲ್ಕನೇ ಮಗು. ಆ ಮನೇಲಿ ಅವ್ರೇ ಅತ್ಯಂತ ಚಿಕ್ಕವ್ರು. ಅಂಬೇಡ್ಕರ್ ಮಹಾಡ್ ಅನ್ನೋ ಸಮುದಾಯಕ್ಕೆ ಸೇರಿದವ್ರು. ಈಗ ಅದನ್ನು ದಲಿತ ಅಥವಾ ಪರಿಶಿಷ್ಟ ಜಾತಿ ಅಂತ ಪರಿಗಣಿಸಲಾಗತ್ತೆ.

ಅಂಬೇಡ್ಕರ್ ಅವ್ರ ಮೇಲೆ ಜಾತಿ ಕಾರಣದಿಂದ ಸಾಕಷ್ಟು ದೌರ್ಜನ್ಯ ನಡೆದಿತ್ತು. ಶಾಲೆಯಲ್ಲಿ ಎಲ್ಲ ಮಕ್ಕಳ ಜೊತೆ ಕೂರೋಕೆ ಅವಕಾಶ ಇರ್ತಿರ್ಲಿಲ್ಲ. ಎಲ್ಲರೂ ಕುಡಿಯೋ ನೀರನ್ನು ಕುಡಿಯೋ ಹಾಗೆ ಇರ್ಲಿಲ್ಲ. ಒಂದಲ್ಲ ಎರಡಲ್ಲ.. ಹೆಜ್ಜೆ ಹೆಜ್ಜೆಗೂ ಜಾತಿ ತಾರತಮ್ಯವನ್ನು ಅನುಭವಿಸಿದ್ರು ಬಾಬಾ ಸಾಹೇಬ್ ಅಂಬೇಡ್ಕರ್. ಬಸ್ ಹತ್ತೋಕೆ ಅವಕಾಶ ಕೊಡ್ತಾ ಇರ್ಲಿಲ್ಲ.

ಸಂಸ್ಕೃತ ಕಲಿಯೋ ಆಸೆ ಇದೆ ಅಂದ್ರೆ ಶೂದ್ರರಿಗೆ ಕಲಿಸೋದಿಲ್ಲ ಅಂತ ಅವರನ್ನು ದೂರ ಇಟ್ಟಿದ್ದರು. ಇವೆಲ್ಲವೂ ನಿಜ. ಇಂಥ ಸಾಕಷ್ಟು ವಿಚಾರಗಳಿಂದ ನೊಂದ ಅಂಬೇಡ್ಕರಿರ್‌ಗೆ ಹಿಂದೂ ಧರ್ಮದಲ್ಲಿ ಏನೂ ಪಾಸಿಟಿವ್‌ಗಳೇ ಇಲ್ಲ ಅನ್ಸೋದಕ್ಕೆ ಶುರು ಆಗಿತ್ತು. ಇದೇ ಬೇಸರದಲ್ಲಿ ಮನು ಸ್ಮೃತಿಯನ್ನು ಪ್ರಶ್ನಿಸಿ ಎಂದು ಜನರನ್ನು ಪ್ರಚೋದಿಸಿದರು. ಹಿಂದೂಧರ್ಮ ತುಂಬ ಸಂಕುಚಿತ ಭಾವನೆ ಹೊಂದಿದೆ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೆ, ಅಂಬೇಡ್ಕರ್ ಅವರ ಈ ವಿಚಾರಗಳನ್ನು ದೇಶಾದ್ಯಂತ ಹರಡೋ ನಕಲಿ ಚಿಂತಕರು, ಅದೇ ಅಂಬೇಡ್ಕರ್ ಅವರ ಇನ್ನೊಂದು ಬಹುಮುಖ್ಯವಾದ ಮಾತನ್ನು ಬೇಕಂತಲೇ ಮುಚ್ಚಿಟ್ಟರು.

ಹಿಂದೂ ಧರ್ಮದಲ್ಲಿ ಸುಧಾರಣೆಗೆ ಅವಕಾಶ ಇದೆ. ಇಲ್ಲಿ ಬದಲಾವಣೆಗೆ ಮುಕ್ತವಾದ ವಾತಾವರಣ ಇದೆ. ಎಲ್ಲದಕ್ಕೂ ಹೊಂದಿಕೊಳ್ಳೋ ಮನೋಭಾವ ಹಿಂದೂ ಧರ್ಮದಲ್ಲಿದೆ. ಆದರೆ ಆ ವೈಶಾಲ್ಯ ಮತ್ತು ಪ್ರಬುದ್ಧತೆ ಇಸ್ಲಾಂ ಧರ್ಮದಲ್ಲಿಲ್ಲ ಅನ್ನೋ ಮಾತನ್ನು ಅಂಬೇಡ್ಕರ್ ಅವರೇ ಹೇಳಿದ್ದು. ಇತಿಹಾಸಕಾರರು ಮತ್ತು ಅನುಕೂಲಸಿಂಧು ರಾಜಕಾರಣಿಗಳು ಇದನ್ಯಾಕೆ ಮುಚ್ಚಿಡುತ್ತಾರೆ?ಮುಸಲ್ಮಾನ ಸಮುದಾಯದಲ್ಲಿ ಇಲ್ಲಿ ತನಕ ಯಾರೊಬ್ರೂ ತಮ್ಮ ಧರ್ಮದಲ್ಲಿರೋ ಮೌಢ್ಯಗಳ ವಿರುದ್ಧ, ಪಿಡುಗುಗಳ ವಿರುದ್ಧ ಧ್ವನಿ ಎತ್ತಿಲ್ಲ. ಅಂದೋಲನ ಮಾಡಿಲ್ಲ.

ಮಾಡೋದೂ ಇಲ್ಲ. ಅಫ್‌ʼಕೋರ್ಸ್ ಮಾಡೋಕೆ ಅವಕಾಶ ಸಿಗೋದೂ ಇಲ್ಲ. ಆದರೆ ಹಿಂದೂ ಧರ್ಮದಲ್ಲಿ ಆ ಸ್ವಾತಂತ್ರ್ಯ ಇದೆ. ಇಲ್ಲಿ ಪ್ರಶ್ನಿಸೋದಕ್ಕೆ ಅವಕಾಶ ಇದೆ. ಇಲ್ಲಿನ ತಪ್ಪುಗಳನ್ನು ಎತ್ತಿ ತೋರಿಸೋಕೆ, ತಿದ್ದೋಕೆ ಅವಕಾಶ ಇದೆ. ಆದರೆ ಇಸ್ಲಾಂನಲ್ಲಿ ಇಲ್ಲ ಎಂಬ ಮಾತನ್ನು ಅಂಬೇಡ್ಕರ್ ಹೇಳಿದ್ದರು. ಇದನ್ನು ಇಂದಿನ ಪೀಳಿಗೆಯಿಂದ ಮುಚ್ಚಿಡಲು ಕಾರಣವೇನು? ನನ್ನ ಮೇಲೆ ಜಾತಿ ವಿಚಾರವಾಗಿ ದೌರ್ಜನ್ಯ ನಿಂದನೆ ಎಲ್ಲ ನಡೆದಿದ್ದು ನಿಜ.

ಆದರೆ ಮೇಲ್ಜಾತಿಯ ಹಲವಾರು ಜನ ನನ್ನ ಜತೆ ಚೆನ್ನಾಗಿ ಕೂಡ ಇದ್ದರು. ಬ್ರಾಹ್ಮಣ ಜಾತಿಯ ಟೀಚರ್ʼಗಳೂ ಕೆಲವರು ನನ್ನನ್ನು ಚೆನ್ನಾಗಿ ನೋಡ್ಕೊಂಡಿದ್ರು. ಮಹಾದೇವ್ ಅನ್ನೋ ಬ್ರಾಹ್ಮಣ ಗುರುಗಳೊಬ್ರು ನನ್ನ ಜತೆ ಊಟ ಸಹ ಹಂಚ್ಕೊಂಡು ತಿನ್ತಾ ಇದ್ರು. ನನ್ನ ಹೆಸರನ್ನು ಅಂಬಾ ವಾಡೇಕರ್ ಅಂತ ಇದ್ದಿದ್ದನ್ನು ಅಂಬೇಡ್ಕರ್ ಅಂತ ಬದಲಿಸಿದ್ದೂ ಅವ್ರೇ.. ಅಂತ ಮುಕ್ತವಾಗಿ ಹೇಳ್ಕೊಂಡಿದ್ರು ಅಂಬೇಡ್ಕರ್. ಆದರೆ ಬ್ರಾಹ್ಮಣರ ವಿರುದ್ಧ ದ್ವೇಷ ಬಿತ್ತೋ ಬುದ್ಧಿಜೀವಿಗಳು ಇಂಥ ಸಾಮರಸ್ಯದ ಸತ್ಯವನ್ನು ಮುಚ್ಚಿಡ್ತಾನೇ ಬಂದ್ರು.

ಅಂಬೇಡ್ಕರ್ ಅವ್ರಿಗೆ ಬ್ರಾಹ್ಮಣರಿಂದ ಬರೀ ಅನ್ಯಾಯ ನೋವೇ ಆಗಿದ್ದು ಅಂತ ಬಿಂಬಿಸುತ್ತಾ ಬಂದರು. ಸಂಸ್ಕೃತ ಭಾಷೆಯನ್ನು, ಅದು ಬ್ರಾಹ್ಮಣರ ಭಾಷೆ ಅಂತ ಮೂಲೆಗುಂಪು ಮಾಡೋಕೆ ಟ್ರೈ ಮಾಡ್ತಾ ಇರುವ ನೀಚರಿಗೆ, ಅಂಬೇಡ್ಕರ್ ಅವ್ರು ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡ್ಬೇಕೆಂಬ ಅಭಿಲಾಷೆ ಹೊಂದಿದ್ರು ಎಂಬುದು ಗೊತ್ತಾ? ಗೊತ್ತಿಲ್ಲದೇ ಏನು. ಇಂಥ ಸತ್ಯಗಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರಷ್ಟೆ.

ಅಂಬೇಡ್ಕರ್ ಅವ್ರಿಗೆ ಬಾಲ್ಯದಲ್ಲಿ ಸಂಸ್ಕೃತ ಕಲಿಯೋ ಅವಕಾಶ ಸಿಕ್ಕಿಲ್ದೇ ಇರಬಹುದು. ಆದರೆ ಅವರು ಆ ಭಾಷೆಯನ್ನು ಪರ್ಷಿಯನ್ ಭಾಷೆಗಿಂತ ಗ್ರೇಟ್ ಅಂತ ಪರಿಗಣಿಸಿದ್ದರು. ಇಡೀ ದೇಶದಲ್ಲಿ ಸಂಸ್ಕೃತವೇ ಪ್ರಧಾನ ಭಾಷೆ ಆಗಬೇಕು ಅಂತ ಆಸೆ ಪಟ್ಟಿದ್ದರು. ಅಂಬೇಡ್ಕರ್ ಅವರು ಮನುಸ್ಮೃತಿ ಯನ್ನು ಸುಟ್ಟು ಹಾಕಿದ್ದು ನಿಜಾನೋ ಸುಳ್ಳೋ ಅನ್ನೋ ಪ್ರಶ್ನೆ ಇವತ್ತಿಗೂ ಇದೆ.

ಸುಳ್ಳಲ್ಲ ನಿಜವೇ. ಹಿಂದೂ ಧರ್ಮದಲ್ಲಿ ಸುಧಾರಣೆ ತರಬೇಕು.. ದಲಿತರಿಗೂ ದೇವಸ್ಥಾನಗಳಲ್ಲಿ ಪ್ರವೇಶ ಸಿಗಬೇಕು ಹೀಗೆಲ್ಲ ಸುಮಾರು ವಿಚಾರಗಳನ್ನು ಆಚರಣೆಗೆ ತರೋಕೆ ಅವರು ಪ್ರಯತ್ನ ಪಟ್ಟಿದ್ದು ಹೌದು. ಆದರೆ, ಆ ಕಾಲಘಟ್ಟದಲ್ಲಿ ಅದು ಸಾಧ್ಯ ಆಗಿರಲಿಲ್ಲ. ಅದೇ ಬೇಸರದಲ್ಲಿ ಅವ್ರು 1927ರಲ್ಲಿ ಮಹಾಡ್ ಸತ್ಯಾಗ್ರಹ ಅಂತ ಶುರು ಮಾಡಿ ಮನುಸ್ಮೃತಿಯನ್ನು ಸುಟ್ಟುಹಾಕಿದ್ದು.

ಅಷ್ಟೇ ಅಲ್ಲ, ನಾನು ಹಿಂದೂ ಧರ್ಮದಿಂದ ಹೊರಗೆ ಹೋಗ್ತಾ ಇದೀನಿ ಅಂತ ಘೋಷಿಸಿದ್ದೂ ಸತ್ಯವೇ. ನಾನು ಹಿಂದೂ ಆಗಿ ಹುಟ್ಟಿರೋದು ಹೌದು. ಆದರೆ, ಹಿಂದೂ ಆಗಿ ಸಾಯೋದಿಲ್ಲ. ಅಂತ ದೊಡ್ಡ ಧ್ವನೀಲಿ ಘೋಷಿಸಿದ್ದು ಅಕ್ಷರಶಃ ಸತ್ಯ. ಅಂಬೇಡ್ಕರ್ ಅವರ ಆದರ್ಶಗಳು ಕೇವಲ ಹಿಂದುತ್ವ ವಿರೋಧಕ್ಕೆ ಮಾತ್ರ ಸೀಮಿತವಾ? ಅಂಬೇಡ್ಕರ್ ಅವರನ್ನು ಹಿಂದೂವಿರೋಧಿ ಅಂತ ಬ್ರ್ಯಾಂಡ್ ಮಾಡೋ ಇವರ ಹುನ್ನಾರ ಅರ್ಥ ಆಗ್ಬೇಕು ಅಂದರೆ ಮುಂದಿನ ಸಾಲುಗಳನ್ನು ಗಮನವಿಟ್ಟು ಓದಿ.

ಹಿಂದುತ್ವ ಜನರನ್ನು ಒಡೆಯುತ್ತೆ. ಇಸ್ಲಾಂ ಜನರನ್ನು ಬೆಸೆಯುತ್ತೆ ಅನ್ನೋ ಮಾತು ನಿಜ ಅಲ್ಲ. ಇದು ಅರ್ಧ ಸತ್ಯ ಅಂತ ನೇರವಾಗಿ ಹೇಳಿದ್ದರು ಅಂಬೇಡ್ಕರ್. ಮುಸ್ಲಿಂ ಸಮುದಾಯದಲ್ಲಿ ಹಿಂದೂ ಸಮಾಜದಲ್ಲಿರೋದಕ್ಕಿಂತ ಜಾಸ್ತಿ ಸಮಸ್ಯೆಗಳಿವೆ ಎಂಬ ಮಾತನ್ನು ಖುದ್ದು ಬಾಬಾಸಾಹೇಬರೇ ಹೇಳಿದ್ದರು.

‘ಒಬ್ಬ ಮುಸ್ಲಿಂ ಯಾವತ್ತೂ ಒಬ್ಬ ಹಿಂದೂ ಪರವಾಗಿ ಹಾಗೂ ಮುಸ್ಲಿಂ ವಿರುದ್ಧ ಧ್ವನಿ ಎತ್ತೋದಿಲ್ಲ. ಬಂಡವಾಳಶಾಹಿ ವಿರೋಧಿ ಪ್ರತಿಭಟನೇಲಿ ಮುಸಲ್ಮಾನ ಕಾರ್ಮಿಕರು ಹಿಂದೂ ಕಾರ್ಮಿಕರ ಜತೆ ಕೈ ಜೋಡಿಸೋದಿಲ್ಲ. ಮುಸಲ್ಮಾನರು ಯಾವತ್ತೂ ಭಾರತವನ್ನು ತನ್ನ ತಾಯ್ನಾಡು ಎಂದು ಒಪ್ಪೋದಿಲ್ಲ. ಇಸ್ಲಾಂ ಧರ್ಮವನ್ನು ಬೆಳೆಸೋದಕ್ಕೆ ಅವ್ರು ಜಿಹಾದ್ ಮಾಡೋಕೂ ಹಿಂದುಮುಂದು ನೋಡೋದಿಲ್ಲ. ಮುಸಲ್ಮಾನರು ಪ್ರಜಾಪ್ರಭುತ್ವ, ದೇಶಭಕ್ತಿ ಇದೆಲ್ಲದ್ಕಿಂತ ಷರಿಯಾ ಕಾನೂನನ್ನೇ ಹೆಚ್ಚು ಗೌರವಿಸುತ್ತಾರೆ.’

- ನಂಬಿ, ಇವೆಲ್ಲವೂ ಅಂಬೇಡ್ಕರ್ ಅವ್ರೇ ಆಡಿದ್ದ ಮಾತುಗಳು. ಬಚ್ಚಿಟ್ಟಿರೋ ಇತಿಹಾಸದ ಸಾಲು‌ ಗಳು ಅಂಬೇಡ್ಕರ್ ಅಂದು ಆಡಿದ ಮಾತುಗಳು ಇಂದಿಗೂ ಸತ್ಯ. ಇವತ್ತಿಗೂ ಮುಸ್ಲಿಮರಿಗೆ ವಂದೇ ಮಾತರಂ ಹೇಳೋದಕ್ಕೆ ಇಷ್ಟ ಇಲ್ಲ. ಭಾರತ್ ಮಾತಾಕೀ ಜೈ ಅನ್ನೋದು ಕೋಮುವಾದ ಅಂತಾರೆ ಇಲ್ಲಿರೋ ಮುಸಲ್ಮಾನರು.

ವಂದೇಮಾತರಂ ಹೇಳಿದ್ರೆ ಫತ್ವಾ ಹೊರಡಿಸ್ತಾರೆ. ಅಂಬೇಡ್ಕರ್ ಅವ್ರು ಇದೇ ಕಾರಣಕ್ಕೆ ಮುಸಲ್ಮಾನ ರನ್ನು ಸೇನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ‘ಮುಸಲ್ಮಾನರು ಯುರೋಪಿಯನ್ ದಂಡನಾಯಕನ ಮಾತನ್ನು ಬೇಕಾದರೂ ಪಾಲಿಸ್ತಾರೆ. ಆದರೆ, ಒಬ್ಬ ಹಿಂದೂ ಸೇನಾನಾಯಕನ ಮಾತಿಗೆ ತಲೆಬಾಗೋದಿಲ್ಲ. ಬೈ ಚಾನ್ಸ್ ಮುಸಲ್ಮಾನ ದೇಶಗಳೇನಾದ್ರೂ ಭಾರತದ ವಿರುದ್ಧ ದಂಡೆತ್ತಿ ಬಂದರೆ, ಯುದ್ಧ ನಡೆದರೆ, ಮುಸಲ್ಮಾನರು ಭಾರತದ ಪರ ಪ್ರಾಮಾಣಿಕವಾಗಿ ಹೋರಾಡ್ತಾರೆ ಅನ್ನೋದನ್ನು ನಂಬೋಕಾಗಲ್ಲ’ ಅಂತ ಅಂಬೇಡ್ಕರ್ ತಮ್ಮ ಅನುಮಾನ ವ್ಯಕ್ತಪಡಿಸಿದ್ದರು.‌

ಘಜ್ನಿ ಘೋರಿ ತೈಮೂರ್ ಇವರೆಲ್ಲ ಭಾರತಕ್ಕೆ ಬಂದಿದ್ದು ಬರೀ ಲೂಟಿ ಹೊಡೆಯೋಕಲ್ಲ, ಭಾರತ ದಲ್ಲಿರೋ ಮುಸ್ಲಿಂ ಕಾಫೀರರನ್ನು ಕೊದು ಅವರ ಉದ್ದೇಶ ಆಗಿತ್ತು ಹಾಗೂ ಇಸ್ಲಾಂ ಧರ್ಮವನ್ನು ಬಿತ್ತೋದು ಅವರ ಗುರಿ ಆಗಿತ್ತು ಎಂದು ಅಂಬೇಡ್ಕರ್ ಬಹಳ ಸ್ಪಷ್ಟವಾಗಿ ಹೇಳಿದ್ದರು. ವಿವಾದಿತ ಹಿಜಾಬ್ ಬಗ್ಗೆ ಕೂಡ ಅಂಬೇಡ್ಕರ್ ಆ ಕಾಲದ ತಮ್ಮ ಬಲವಾದ ಅಭಿಪ್ರಾಯವನ್ನು ಮಂಡಿಸಿ ದ್ದರು.

ಹಿಜಾಬ್ ನಿಂದಾಗಿ ಮುಸಲ್ಮಾನ ಹೆಣ್ಮಕ್ಕಳು ಇನ್ನಷ್ಟು ಮತ್ತಷ್ಟು ಹಿಂದುಳಿಯೋ ಹಾಗೆ ಆಗ್ತಾ ಇದೆ. ಇದೊಂದು ಅತ್ಯಂತ ಕೆಟ್ಟ ಪದ್ಧತಿ ಎಂದು ಬಾಬಾ ಸಾಹೇಬರು ಆ ಜಮಾನದ ಖಂಡಿಸಿದ್ದರು. ಹಿಜಾಬ್ ಹೆಣ್ಮಕ್ಕಳ ಮೇಲೆ ಸಾಮಾಜಿಕ ಪರಿಣಾಮ ಬೀರೋದು ಮಾತ್ರವಲ್ಲ ಅವರ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ ಅಂದಿದ್ದರು ಅಂಬೇಡ್ಕರ್.

ಇಸ್ಲಾಂ ಮೂಲಭೂತವಾದಿಗಳ ಬಗ್ಗೆ ಕೂಡ ತುಂಬ ಗಟ್ಟಿಯಾದ ಧ್ವನೀಲಿ ಮಾತಾಡಿದ್ದು ಅಂಬೇ ಡ್ಕರ್ ಮಾತ್ರ. ‘ಇಸ್ಲಾಂನಲ್ಲಿ ಬೇಕಂತಲೇ ಕೆಲವರು ತಮ್ಮ ಧರ್ಮದ ಜನರನ್ನು ಧರ್ಮಾಂಧತೆಯ ಇರುವ ಹಾಗೆ ಮಾಡ್ತಾ ಇದ್ದಾರೆ.

ಇಸ್ಲಾಂನಲ್ಲಿ ಗೋಹತ್ಯೆ ಮಾಡ್ಬೇಕು ಅಂತ ಎಲ್ಲೂ ಬರೆದಿಲ್ಲ. ಆದ್ರೂ ಹಿಂದೂಗಳನ್ನು ನೋಯಿಸ ಬೇಕು ಅಂತಾನೇ ಗೋಹತ್ಯೆಗೆ ಪ್ರಚೋದನೆ ಕೊಟ್ಟು ಮಾಡಿಸಲಾಗತ್ತೆ.’ ಎಂಬ ಕಟು ಸತ್ಯವನ್ನು ದಿಟ್ಟವಾಗಿ ಹೇಳಿದ್ದು ಅಂಬೇಡ್ಕರ್ ಮಾತ್ರ. ಅಂಬೇಡ್ಕರ್ ಅವ್ರು ಹಿಂದೂ ಧರ್ಮದ ಬಗ್ಗೆ ಬೇಸರ ಬಂದು ಧರ್ಮ ತೊರೆದು ಹೋದರು ಎಂದು ಬರೆಯುವ ಇತಿಹಾಸಕಾರರು, ಅಂಬೇಡ್ಕರ್ ಯಾಕೆ ಮುಸ್ಲಿಂ ಧರ್ಮಕ್ಕೋ ಕ್ರಿಶ್ಚಿಯನ್ ಧರ್ಮಕ್ಕೋ ಹೋಗ್ಲಿಲ್ಲ ಎಂದು ತಿಳಿಸೋದಿಲ್ಲ.

ಅಂಬೇಡ್ಕರ್ ಅವ್ರು ಮುಸಲ್ಮಾನ ಸಮಾಜದಲ್ಲಿರೋ ಜಾತಿಪದ್ಧತಿ ಬಗ್ಗೆ ಕ್ಲಿಯರ್ ಆಗಿ ಮಾತಾಡಿ ದ್ದರು. ಅಲ್ಲಿ ಕೂಡ ಅಶ್ರ- ಅರ್ಜಲ್ ಅಜ್ಲಾ- ಹೀಗೆ ಮೇಲ್ವರ್ಗ ಕೆಳವರ್ಗ ಅನ್ನೋ ತಾರತಮ್ಯ ಇರೋದನ್ನು ಎತ್ತಿ ತೋರಿಸಿದ್ದರು. ಇದೇ ಕಾರಣದಿಂದ ಅವರು ಹಿಂದೂ ಧರ್ಮವನ್ನು ಬಿಟ್ಟು ಬೌದ್ಧ ಧರ್ಮ ಸೇರಿದ್ದರು. ಇಸ್ಲಾಂ ಧರ್ಮಕ್ಕೆ ಸೇರಲು ಹೈದರಾಬಾದ್ ನಿಜಾಮನಿಂದ ಐದುಕೋಟಿ ರುಪಾಯಿಗಳ ಆಫರ್ ಕೂಡ ಬಂದಿದ್ದರೂ ಅಂಬೇಡ್ಕರ್ ಮಾತ್ರ ಇಸ್ಲಾಂ ಕಡೆಗೆ ಒಲವು ತೋರಿಸಲೇ ಇಲ್ಲ. ಏಕೆಂದರೆ ಅವರಿಗೆ ಭಾರತ ಈ ಥರ ಕನ್ವರ್ಷನ್‌ಗಳಿಂದ ಮುಸ್ಲಿಂ ರಾಷ್ಟ್ರ ಆಗುವುದು ಇಷ್ಟ ವಿರಲಿಲ್ಲ. ಬಾಂಗ್ಲಾ ಪಾಕಿಸ್ತಾನಗಳ ಥರ ಭಾರತ ಮತ್ತೆ ಒಡೆಯೋದು ಇಷ್ಟ ಇರಲಿಲ್ಲ.

ಅಂಬೇಡ್ಕರ್ ಅವರ ಇಂಥ ಸಾಕಷ್ಟು ವಿಚಾರಗಳನ್ನು ಬೇಕಂತಲೇ ನಮ್ಮ ಇತಿಹಾಸಕಾರರು, ಬುದ್ಧಿಜೀವಿಗಳು, ಭ್ರಷ್ಟ ಮೀಡಿಯಾಗಳು ಮುಚ್ಚಿಡುತ್ತಲೇ ಬಂದರು. ಏಕೆಂದರೆ ಅವರಿಗೆ ಹಿಂದೂ ಗಳನ್ನು ಜಾತಿ ಹೆಸರಲ್ಲಿ ಒಡೆಯಬೇಕಿತ್ತು. ಅದಕ್ಕೆ ಅಂಬೇಡ್ಕರ್ ಅವರು ಹೇಳಿರೋ ಮಾತುಗಳಲ್ಲಿ ತಮಗೆ ಬೇಕಾದಷ್ಟು ಮಾತ್ರ ಬಳಸಿಕೊಂಡರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಂಥ ಮಹಾನ್ ಮಾನವತಾವಾದಿಯ, ವಿಚಾರವಾದಿಯ ಮಾತುಗಳನ್ನು ತಿರುಚುವುದು, ಅರ್ಧ ಸತ್ಯಗಳನ್ನು ಮಾತ್ರ ಇಂದಿನ ಜನರೇಷನ್‌ಗೆ ತಿಳಿಸುವುದು, ಈ ದೇಶಕ್ಕೆ ಮತ್ತು ಅಂಬೇಡ್ಕರ್ ಗೆ ಮಾಡುವ ಘೋರ ಅಪಮಾನ.