Mohan Vishwa Column: ಹಿಂದೂ ಹಬ್ಬಗಳ ಆರ್ಥಿಕತೆ
ಭಾರತದ ಆರ್ಥಿಕತೆಯಲ್ಲಿ ಹಿಂದೂ ಹಬ್ಬಗಳು ದೊಡ್ಡಮಟ್ಟದ ಕೊಡುಗೆಯನ್ನು ನೀಡುತ್ತವೆ. ಯುಗಾದಿ, ದಸರಾ, ದೀಪಾವಳಿ, ನವರಾತ್ರಿ ಹಬ್ಬಗಳು ಬಂತೆಂದರೆ ಸಾಕು ಸಾಲುಸಾಲಾಗಿ ನೂತನ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ನೂತನ ವಸ್ತು ಗಳನ್ನು ಮಾರುಕಟ್ಟೆಗೆ ತರಲು ಹಿಂದೂ ಹಬ್ಬಗಳನ್ನು ಬಳಸಿಕೊಳ್ಳುತ್ತವೆ. ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ನೂತನ ಯೋಜನೆಗಳನ್ನು ಹಿಂದೂ ಹಬ್ಬಗಳಂದು ಮಾರ್ಕೆಟ್ ಮಾಡುತ್ತವೆ


ವೀಕೆಂಡ್ ವಿತ್ ಮೋಹನ್
camohanbn@gmail.com
ಹಿಂದೂ ಹಬ್ಬಗಳೆಂದರೆ ಭಾರತದಲ್ಲಿ ಎಲ್ಲಿಲ್ಲದ ಸಂಭ್ರಮ. ಅನೇಕ ತಲೆಮಾರುಗಳಿಂದ ನಡೆಸಿ ಕೊಂಡು ಬಂದಿರುವ ಹಬ್ಬಗಳನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸುವ ಜವಾಬ್ದಾರಿ ಪ್ರತಿ ಯೊಬ್ಬ ಹಿಂದೂವಿನ ಮೇಲಿದೆ. ಹಿಂದೂ ಧರ್ಮದ ಆಚರಣೆಗಳನ್ನು ಮೂಢನಂಭಿಕೆ ಎಂದು ಹೇಳಿ ನೂತನ ತಲೆಮಾರಿನ ಯುವಜನತೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಎಡಚರರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ನಮ್ಮ ಮುತ್ತಾತ, ತಾತ, ಅಪ್ಪ ಹೇಳಿಕೊಟ್ಟ ಹಬ್ಬದ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಹೇಳಿ ಕೊಡಬೇಕಾಗಿದೆ.
ಹಿಂದೂಗಳ ಮನಸ್ಥಿತಿ ಹೇಗಿರುತ್ತದೆಯೆಂದರೆ, ಮನೆಯಲ್ಲಿ ಕಷ್ಟವಿದ್ದರೂ ಹಬ್ಬಗಳು ಬಂದಾಗ ಕನಿಷ್ಠ ಪಕ್ಷ ಒಂದು ಸಣ್ಣ ಸಿಹಿ ತಿಂಡಿಯನ್ನಾದರೂ ಮಾಡಿ ದೇವರ ಪೂಜೆ ಮಾಡುತ್ತಾರೆ. ಕಷ್ಟ ವಾದರೆ, ಯುಗಾದಿ ಹಬ್ಬಕ್ಕೆ ಒಂದು ಕೆ.ಜಿ.ಬೇಳೆ ಬಳಸಿ ಒಬ್ಬಟ್ಟು ಮಾಡುವ ಜಾಗದಲ್ಲಿ, ಕಾಲು ಕೆ.ಜಿ. ಬೇಳೆ ಬಳಸಿ ಒಬ್ಬಟ್ಟು ಮಾಡಬಹುದಷ್ಟೆ. ಆದರೆ ಹಬ್ಬ ಮಾಡುವುದನ್ನು ಮರೆಯುವುದಿಲ್ಲ. ಆಧುನಿಕ ಸಮಾಜದಲ್ಲಿ ಸಮಯದ ಕಾರಣವೊಡ್ಡಿ ಮನೆಯಲ್ಲಿ ಸಿಹಿ ತಿನಿಸು ಮಾಡುವುದನ್ನೇ ನಿಲ್ಲಿಸಿರುವ ವರ್ಗ ಒಂದೆಡೆಯಾದರೆ, ವಾರಾಂತ್ಯದಲ್ಲಿ ದೊಡ್ಡ ದೊಡ್ಡ ಪಾರ್ಟಿ ಮಾಡಲು ಆರಾಮಾಗಿ ಸಮಯ ಹೊಂದಿಸಿಕೊಳ್ಳುವ ವರ್ಗ ಮತ್ತೊಂದೆಡೆ.
ಇದನ್ನೂ ಓದಿ: Mohan Vishwa Column: ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ
ಭಾರತದ ಆರ್ಥಿಕತೆಯಲ್ಲಿ ಹಿಂದೂ ಹಬ್ಬಗಳು ದೊಡ್ಡಮಟ್ಟದ ಕೊಡುಗೆಯನ್ನು ನೀಡುತ್ತವೆ. ಯುಗಾದಿ, ದಸರಾ, ದೀಪಾವಳಿ, ನವರಾತ್ರಿ ಹಬ್ಬಗಳು ಬಂತೆಂದರೆ ಸಾಕು ಸಾಲುಸಾಲಾಗಿ ನೂತನ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ನೂತನ ವಸ್ತು ಗಳನ್ನು ಮಾರುಕಟ್ಟೆಗೆ ತರಲು ಹಿಂದೂ ಹಬ್ಬಗಳನ್ನು ಬಳಸಿಕೊಳ್ಳುತ್ತವೆ. ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ನೂತನ ಯೋಜನೆಗಳನ್ನು ಹಿಂದೂ ಹಬ್ಬಗಳಂದು ಮಾರ್ಕೆಟ್ ಮಾಡುತ್ತವೆ.
ನೂರಾರು ಕಂಪನಿಗಳು ಜಿದ್ದಿಗೆ ಬಿದ್ದು ತಮ್ಮ ವಸ್ತುಗಳ ಮೇಲೆ ಸಾಲು ಸಾಲು ರಿಯಾಯಿತಿ ನೀಡು ತ್ತವೆ. ಗ್ರಾಹಕರನ್ನು ಸೆಳೆಯಲು ವಿನೂತನ ಮಾರ್ಕೆಟಿಂಗ್ ತಂತ್ರಗಾರಿಕೆಯನ್ನು ಹಿಂದೂ ಹಬ್ಬ ದಂದು ಬಳಸಿಕೊಳ್ಳುತ್ತವೆ. ’ Confeder ation of Indian Industries’ ನೀಡಿರುವ ವರದಿಯ ಪ್ರಕಾರ ಭಾರತದ ಜಿಡಿಪಿಯ ವಾರ್ಷಿಕ ಅಭಿವೃದ್ಧಿ ದರದ ಶೇ.1.5ರಿಂದ 2ರಷ್ಟು ಹಿಂದೂ ಹಬ್ಬಗಳ ಕೊಡುಗೆಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ಆರ್ಥಿಕ ನೀತಿಯನ್ನು ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಘೋಷಣೆ ಮಾಡುತ್ತದೆ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಅನೇಕ ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳ ಮಾರಾಟವು ಉಳಿದ ಸಂದರ್ಭಗಳಿಗಿಂತಲೂ ಹೆಚ್ಚಾಗಿರು ತ್ತದೆ.
ಹಿಂದೂ ಹಬ್ಬಗಳು ವರ್ಷಕ್ಕೆ ಸುಮಾರು 80 ಲಕ್ಷದಿಂದ ಒಂದು ಕೋಟಿಯವರೆಗೂ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ ಮಾಡುತ್ತವೆಯೆಂದು ವರದಿಗಳು ಹೇಳುತ್ತವೆ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಉತ್ಪಾದನಾ ವಲಯ, ಚಿಲ್ಲರೆ ವ್ಯಾಪಾರ ಮತ್ತು ಸಾರಿಗೆ ವಲಯದಲ್ಲಿ ಹೆಚ್ಚಿನ ಉದ್ಯೋಗ ಗಳು ಸೃಷ್ಟಿಯಾಗುತ್ತವೆ. ಈಗಿನ ಕಾಲದಲ್ಲಿ ವ್ಯವಹಾರವೆಂದರೆ ಇ-ಕಾಮರ್ಸ್ ಕಂಪನಿ ಗಳದ್ದೇ ಕಾರುಬಾರು.
ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಕಂಪನಿಗಳು ಹಿಂದೂ ಹಬ್ಬಗಳಂದು ವಾರಗಟ್ಟಲೆ ರಿಯಾಯಿತಿ ದರದಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತವೆ. ‘ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ’, ‘ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ’ ಪ್ರತಿ ವರ್ಷವೂ ನಡೆಯುತ್ತವೆ. 2024ರ ದಸರಾ ಹಬ್ಬದ ಸಂದರ್ಭದಲ್ಲಿ ಇ-ಕಾಮರ್ಸ್ ಮೂಲಕ ಸುಮಾರು 11 ಬಿಲಿಯನ್ ಅಮೆರಿಕನ್ ಡಾಲರ್ (94000 ಕೋಟಿ ರೂಪಾಯಿ) ವ್ಯವಹಾರ ನಡೆದಿದೆ.
ಹಿಂದೂ ಹಬ್ಬಗಳ ಆರ್ಥಿಕತೆಯ ಪ್ರಮುಖ ಪಾಲುದಾರರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು. ಅನೇಕ ಸಣ್ಣ ಕೈಗಾರಿಕೆಗಳು ಹಿಂದೂ ಹಬ್ಬಗಳ ಸಂದರ್ಭದಲ್ಲಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತವೆ. ಇದರಿಂದ ದೇಶದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹಬ್ಬಗಳ ಆಚರಣೆ ಹಿಂದೂಗಳದ್ದು, ಆದರೆ ಆರ್ಥಿಕವಾಗಿ ಇತರ ಧರ್ಮದವರೂ ಹಬ್ಬದ ಫಲಾನುಭವಿ ಗಳಾಗಿದ್ದಾರೆ.
ಹಿಂದೂ ಹಬ್ಬಗಳಂದು ಇತರ ಧರ್ಮದವರೂ ವ್ಯಾಪಾರ ನಡೆಸುತ್ತಾರೆ ಮತ್ತು ಅನೇಕ ಕಾರ್ಖಾನೆ ಗಳಲ್ಲಿ ಕೆಲಸ ಮಾಡುತ್ತಾರೆ. ಗಣೇಶ ಚತುರ್ಥಿ ಹಿಂದೂಗಳಿಗೆ ದೊಡ್ಡ ಹಬ್ಬ. ಈ ಹಬ್ಬದ ಸಂದರ್ಭ ದಲ್ಲಿ, ಒಂದೇ ವಾರದಲ್ಲಿ 20000 ಕೋಟಿ ರುಪಾಯಿಗೂ ಅಧಿಕ ಆರ್ಥಿಕ ವಹಿವಾಟು ನಡೆಯುತ್ತದೆ. ಮುಂಬೈ, ತೆಲಂಗಾಣ ಮತ್ತು ಹೈದರಾಬಾದ್ ಸುತ್ತಮುತ್ತಲ ಪ್ರದೇಶಗಳಿಂದ 5000 ಕೋಟಿ ರುಪಾಯಿಗೂ ಅಧಿಕ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ. ಗಣೇಶ ಚತುರ್ಥಿಯು ಸುಮಾರು 20000 ಕುಟುಂಬಗಳಿಗೆ ಉದ್ಯೋಗ ನೀಡುತ್ತದೆ.
ಅಹ್ಮದಾಬಾದಿನಲ್ಲಿ 2000ಕ್ಕೂ ಅಧಿಕ, ಪುಣೆಯಲ್ಲಿ 4000 ಮತ್ತು ಮುಂಬೈ ಮಹಾನಗರಿಯಲ್ಲಿ 15000ಕ್ಕೂ ಅಧಿಕ ಗಣೇಶ ಪೆಂಡಾಲುಗಳಿವೆ. ಮುಂಬೈನ ಗಣೇಶ ಚತುರ್ಥಿ ಮೆರವಣಿಗೆಯಲ್ಲಿ ಬಾಲಿವುಡ್ ನಟ-ನಟಿಯರು ಭಾಗವಹಿಸುತ್ತಾರೆ. 2024ರಲ್ಲಿ ಮುಂಬೈನ ಮಾತುಂಗ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಪೆಂಡಾಲಿಗೆ 316 ಕೋಟಿ ರುಪಾಯಿಯ ವಿಮೆ ತೆಗೆದುಕೊಳ್ಳಲಾಗಿತ್ತು.
‘ಪೆನ್’ ಸಿಟಿ ಮತ್ತು ‘ಅಮ್ರಾಪುರ್’ ಮಹಾರಾಷ್ಟ್ರದಲ್ಲಿ ಗಣೇಶ ಮೂರ್ತಿ ತಯಾರಿಸುವ ಪ್ರಸಿದ್ಧ ಸ್ಥಳಗಳು. ಅಮ್ರಾಪುರ್ ಹಳ್ಳಿಯಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ 200 ಕೋಟಿಗೂ ಅಧಿಕ ವ್ಯವಹಾರ ನಡೆಯುತ್ತದೆ. ಮಹಾರಾಷ್ಟ್ರದಲ್ಲಿ ಗಣೇಶ ಮೂರ್ತಿ ತಯಾರಿಕೆಗೆ ಬೇಕಿರುವ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ ರಾಜಸ್ಥಾನದಿಂದ ಬರುತ್ತದೆ. ಗಣೇಶನನ್ನು ಪ್ಯಾಕ್ ಮಾಡಲು ಬೇಕಿರುವ ಒಣ ಹುಲ್ಲನ್ನು ಕರ್ನಾಟಕದಿಂದ ತರಿಸಿಕೊಳ್ಳಲಾಗುತ್ತದೆ.
ಗಣೇಶ ಚತುರ್ಥಿಯಂದು ದೇಶದ ವಿವಿಧ ನಗರಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಯು ತ್ತದೆ. ಮಾವಿನ ಸೊಪ್ಪು, ಹಣ್ಣು, ಹೂವು, ಬಟ್ಟೆ ಮತ್ತು ಚಿನ್ನದ ಅಂಗಡಿಗಳಲ್ಲಿ ಹಬ್ಬದ ವಾತಾ ವರಣವನ್ನು ಒಂದು ವಾರದ ಹಿಂದಿನಿಂದಲೇ ಕಾಣಬಹುದು.
ಸಣ್ಣಹಬ್ಬ ‘ರಕ್ಷಾಬಂಧನ’ದ ಸಮಯದಲ್ಲಿ ಗುಜರಾತ್ ರಾಜ್ಯವೊಂದರಲ್ಲೇ 400 ಕೋಟಿಗೂ ಅಧಿಕ ಆರ್ಥಿಕ ವ್ಯವಹಾರ ನಡೆಯುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ 50 ಕೋಟಿಗೂ ಅಧಿಕ ರಾಖಿ ಮಾರಾಟವಾಗುತ್ತದೆ. ರಕ್ಷಾಬಂಧನದ ಸಂದರ್ಭದಲ್ಲಿ ದೇಶದಾದ್ಯಂತ 10000 ಕೋಟಿ ರುಪಾಯಿಗೂ ಅಧಿಕ ಆರ್ಥಿಕ ವ್ಯವಹಾರವು ಸಿಹಿತಿನಿಸುಗಳ ಮಾರಾಟದಿಂದ ಆಗುತ್ತದೆ.
2020ಕ್ಕಿಂತಲೂ ಮೊದಲು, ಚೀನಾದಲ್ಲಿ ಉತ್ಪಾದನೆಯಾದ ರಾಖಿಗಳು ದೇಶದಲ್ಲಿ ಮಾರಾಟ ವಾಗುತ್ತಿದ್ದವು. ಗಲ್ವಾನ್ ಕಣಿವೆಯಲ್ಲಿ ಚೀನಿಯರು ನಡೆಸಿದ ಹಯ ನಂತರ ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ರಾಖಿಗಳ ಉತ್ಪಾದನೆ ಹೆಚ್ಚಾಗಿದ್ದು, ಭಾರತದೊಳಗೆ ಈ ರಾಖಿಗಳು ಮಾರುಕಟ್ಟೆಯನ್ನು ಆವರಿಸಿ ಕೊಂಡಿವೆ. ಪಶ್ಚಿಮ ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜಾ ಹಬ್ಬದ ಸಮಯದಲ್ಲಿ 50000 ಕೋಟಿ ರುಪಾಯಿಯಷ್ಟು ಆರ್ಥಿಕ ಚಟುವಟಿಕೆಗಳು ನಡೆಯುತ್ತ ದೆಂದು ಅಂದಾಜಿಸಲಾಗಿದೆ.
ಹತ್ತು ದಿನ ನಡೆಯುವ ಈ ಹಬ್ಬವು 30000ಕ್ಕೂ ಅಧಿಕ ಕುಟುಂಬಗಳಿಗೆ ಉದ್ಯೋಗ ನೀಡುತ್ತದೆ. ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ನೂತನ ಉತ್ಪನ್ನಗಳನ್ನು ಮಾರ್ಕೆಟ್ ಮಾಡಲು ದುರ್ಗಾ ಪೂಜೆ ಸಮಯವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ. - ಮತ್ತು ಅಮೆರಿಕ ದೇಶಗಳ ಕಂಪನಿಗಳು ದುರ್ಗಾಪೂಜೆಯಂದು ನಡೆಯುವ ಮೆರವಣಿಗೆಯಲ್ಲಿ ದೊಡ್ಡಮಟ್ಟದ ಜಾಹೀರಾತುಗಳನ್ನು ನೀಡಿ ತಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುತ್ತವೆ.
ದುರ್ಗಾಪೂಜೆಯಂದು ಕೋಲ್ಕತ್ತಾದಲ್ಲಿ ಸೀರೆಗಳು, ಪೂಜಾ ಸಾಮಗ್ರಿಗಳು, ಅರಿಸಿನ, ಕುಂಕುಮದ ವ್ಯವಹಾರ ಜೋರಾಗಿ ನಡೆಯುತ್ತದೆ. ಜನವರಿ 2024ರ ಉತ್ತರಾಯಣ ಸಮಯದಲ್ಲಿ ಗುಜರಾತಿ ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಅಂದಾಜು 500 ಕೋಟಿ ರುಪಾಯಿಯಷ್ಟು ಆರ್ಥಿಕ ಚಟುವಟಿಕೆ ನಡೆದಿತ್ತು. 6000ಕ್ಕೂ ಅಧಿಕ ಕುಟುಂಬಗಳಿಗೆ ಈ ಸಣ್ಣ ಹಬ್ಬದಿಂದ ಉದ್ಯೋಗ ಸಿಕ್ಕಿದೆಯೆಂದರೆ ಹಿಂದೂಗಳ ಹಬ್ಬದ ಮಹತ್ವ ಎಷ್ಟೆಂದು ಅರ್ಥ ಮಾಡಿಕೊಳ್ಳಬೇಕು. ಗಾಳಿಪಟ ಹಾರಿಸುವ ಹಿಂದೂ ಹಬ್ಬದಲ್ಲಿ ಅನ್ಯ ಧರ್ಮದವರೂ ಗಾಳಿಪಟ ಮಾರಿ ತಮ್ಮ ಜೀವನ ನಡೆಸುತ್ತಾರೆ.
ದೇವರನ್ನೇ ನಂಬದ ಕಮ್ಯುನಿಸ್ಟರ ಆಳ್ವಿಕೆ ಇರುವ ಕೇರಳ ರಾಜ್ಯದಲ್ಲಿ ಹಿಂದೂ ಹಬ್ಬಗಳಿಂದಾಗಿ ದೊಡ್ಡ ಮಟ್ಟದ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ. 2024ರ ಓಣಂ ಹಬ್ಬದಂದು ನಾಲ್ಕು ದಿನದಲ್ಲಿ 80 ಲಕ್ಷ ಕೆ.ಜಿ.ಯಷ್ಟು ಹಾಲಿನ ಮಾರಾಟವಾಗಿತ್ತು. ಓಣಂ ಹಬ್ಬದಂದು ಕೇರಳ ಸರಕಾರಕ್ಕೆ ಲಾಟರಿ ಟಿಕೆಟ್ ಮಾರಾಟದಿಂದ ಒಂದು ದಿನದಲ್ಲಿ 300 ಕೋಟಿ ರುಪಾಯಿಗೂ ಅಧಿಕ ಲಾಭವಾಗಿದೆ. 2024ರಲ್ಲಿ ಮದ್ಯ ಮಾರಾಟದಿಂದ ಕೇರಳ ಸರಕಾರಕ್ಕೆ 550 ಕೋಟಿ ಆದಾಯ ಬಂದಿತ್ತು.
ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಹಿಂದೂಗಳ ಆಚರಣೆಗಳನ್ನು ಮೂಢ ನಂಬಿಕೆಯೆಂದು ಹೇಳುವ ದೇವರ ನಾಡಿನಲ್ಲಿ ಹಿಂದೂ ಹಬ್ಬಗಳಂದು ಸಾವಿರಾರು ಕೋಟಿ ರುಪಾಯಿಯ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ. ಹಿಂದೂಗಳ ಮತ್ತೊಂದು ದೊಡ್ಡ ಹಬ್ಬ ದೀಪಾವಳಿ ಬಂತೆಂದರೆ ಸಾಕು, ದೇಶದ ಮೂಲೆ ಮೂಲೆಗಳಲ್ಲಿ ಎಲ್ಲ ವರ್ಗದವರಿಗೂ ಮೂರು ದಿವಸದ ಸಂಭ್ರಮ. ಅನೇಕ ಕಂಪನಿಗಳು ಈ ಹಬ್ಬದ ವೇಳೆ ತಮ್ಮ ವರ್ಷದ ಲಾಭದಲ್ಲಿನ ಪಾಲನ್ನು ಕೆಲಸಗಾರರಿಗೆ ಬೋನಸ್ ರೂಪದಲ್ಲಿ ನೀಡುತ್ತವೆ.
ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರು ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿರುತ್ತಾರೆ. ವರ್ಷದ ಬೋನಸ್ ನೆಚ್ಚಿಕೊಂಡು ಹೊಸ ವಸ್ತುಗಳನ್ನು ಮನೆಗೆ ಖರೀದಿಸುವ ಬಗ್ಗೆ ಯೋಜಿಸಿರುತ್ತಾರೆ. ದೀಪಾವಳಿಯಂದು ಎಲ್ಲಾ ತರಹದ ವಸ್ತುಗಳ ಮಾರಾಟದಲ್ಲೂ ಏರಿಕೆಯಾಗುತ್ತದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿನ ವ್ಯವಹಾರವೂ ಹೆಚ್ಚಿರುತ್ತದೆ.
2023ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ 375000 ಕೋಟಿ ರುಪಾಯಿಯ ಆರ್ಥಿಕ ಚಟುವಟಿಕೆ ಗಳು ದೇಶದಾದ್ಯಂತ ನಡೆದಿವೆ. ಈ ಅವಽಯಲ್ಲಿ ಸಿಹಿತಿಂಡಿಗಳು, ಹೊಸ ಬಟ್ಟೆಗಳು, ಚಿನ್ನದ ಆಭರಣಗಳು, ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ವಸ್ತುಗಳು, ಪೂಜಾ ಸಾಮಗ್ರಿಗಳು, ಉಡುಗೊರೆಗಳು, ಮಕ್ಕಳ ಆಟಿಕೆಗಳು, ವಾಹನಗಳ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗು ತ್ತದೆ.
ದೊಡ್ಡ ದೊಡ್ಡ ಕಂಪನಿಗಳ ವರ್ಷದ ವಹಿವಾಟಿನಲ್ಲಿ ಹಿಂದೂ ಹಬ್ಬಗಳ ಸಮಯದಲ್ಲಿ ಅರ್ಧ ಕ್ಕಿಂತಲೂ ಹೆಚ್ಚಿನ ವಸ್ತುಗಳ ಮಾರಾಟವಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ 2021ರಲ್ಲಿ 58600 ಕೋಟಿ ರುಪಾಯಿ ಮೌಲ್ಯದ ಸಿಹಿತಿಂಡಿಗಳ ಮಾರಾಟವಾಗಿದೆ. ಮತ್ತೊಂದೆಡೆ ಪ್ರತಿ ವರ್ಷ ಹಳ್ಳಿಗಳಲ್ಲಿ ನಡೆಯುವ ಊರ ಹಬ್ಬಗಳ ಆರ್ಥಿಕತೆಯನ್ನು ಅಂದಾಜಿಸುವುದು ಸಾಧ್ಯವಿಲ್ಲ.
ಸಾಮಾನ್ಯವಾಗಿ ಹಳೇ ಮೈಸೂರು ಭಾಗದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ,ಸಾವಿರಾರು ಹಳ್ಳಿ ಗಳಲ್ಲಿ ಊರಹಬ್ಬ ಆಚರಿಸಲಾಗುತ್ತದೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹಿಂದೂ ಹಬ್ಬಗಳ ಪಾಲು ದೊಡ್ಡದಿದೆ. ಹಿಂದೂ ಹಬ್ಬಗಳನ್ನು ನಂಬಿ ಜೀವನ ನಡೆಸುವ ಅನ್ಯಧರ್ಮಗಳ ಲಕ್ಷಾಂತರ ಕುಟುಂಬಗಳಿವೆ. ಹಿಂದೂ ಹಬ್ಬಗಳು ಭಾರತದ ಆರ್ಥಿಕ ಬೆಳವಣಿಗೆಯ ಬೆನ್ನೆಲು ಬೆಂದರೆ ತಪ್ಪಿಲ್ಲ.