ವೀಕೆಂಡ್ ವಿತ್ ಮೋಹನ್
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ಸರಕಾರ ಇಂಧನ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಡೀಸೆಲ್ ಬೆಲೆಗಳನ್ನು ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಮುಕ್ತಗೊಳಿಸುವ ಕ್ರಮವೂ ಸೇರಿತ್ತು.
ದಶಕಗಳ ಹಿಂದೆ ವಾರದಲ್ಲಿ ಮೂರು ದಿನ ಪಡಿತರ ಅಂಗಡಿಯ ಮುಂದೆ ಸೀಮೆಎಣ್ಣೆಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ನಮ್ಮ ಮನೆಯ ಸೀಮೆಎಣ್ಣೆ ಡಬ್ಬ ಮೊದಲು ಇರಬೇಕೆಂದು ಕಲ್ಲು ಅಥವಾ ಖಾಲಿ ಡಬ್ಬವಿಟ್ಟು ಮನೆಗೆ ವಾಪಾಸ್ ಬಂದು ಮಲಗಿ ಮತ್ತೆ ಎರಡು ಗಂಟೆ ನಂತರ ಸೀಮೆಎಣ್ಣೆ ಹೊತ್ತು ತರುವ ಎತ್ತಿನಗಾಡಿಗಾಗಿ ಕಾಯಬೇಕಿತ್ತು.
ಸಾಲಿನಲ್ಲಿ ಮೊದಲು ನಿಂತವರಿಗೆ ಸೀಮೆಎಣ್ಣೆ ಸಿಕ್ಕಕೂಡಲೆ ಸಂಭ್ರಮ. ಕೊನೆಯಲ್ಲಿ ಇದ್ದವರಿಗೆ ಸೀಮೆಎಣ್ಣೆ ಸಿಗದೆ ಬೇಜಾರಿನಲ್ಲಿ ಮನೆಗೆ ಹೊರಡುವ ದೃಶ್ಯಗಳು ಸಾಮಾನ್ಯ ವಾಗಿದ್ದವು. ನಂತರ ಮನೆಗೆ ಬಂದು ಪಂಪ್ ಸ್ಟೋವ್‌ಗೆ ಸೀಮೆಎಣ್ಣೆ ಸುರಿದು ಬಾಕಿ ಉಳಿದ ಸೀಮೆಎಣ್ಣೆಯನ್ನು ಡಬ್ಬದಲ್ಲಿ ಭದ್ರವಾಗಿ ತಿಂಗಳ ಬಳಕೆಗಾಗಿ ಸಂಗ್ರಹಿಸಲಾಗುತ್ತಿತ್ತು.
ಸೀಮೆಎಣ್ಣೆ ಸಿಕ್ಕ ನಂತರ ಪಂಪ್ ಸ್ಟೋವ್ ಹಚ್ಚಿ ಅಡುಗೆ ಮಾಡುವುದು ಮತ್ತೊಂದು ಕಥೆ. ದೇಶವನ್ನು ಆರು ದಶಕಗಳ ಕಾಲ ಆಳಿದ ಕಾಂಗ್ರೆಸ್ ಅವಧಿಯಲ್ಲಿ ‘ಅಡುಗೆ ಅನಿಲ’ ಎಂಬುದು ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ನಿಲುಕದ ನಕ್ಷತ್ರವಾಗಿತ್ತು.
ಸರಕಾರಿ ನೌಕರರು ಅಥವಾ ದೊಡ್ಡ ವ್ಯವಹಾರಸ್ಥರ ಮನೆಯಲ್ಲಿ ಮಾತ್ರ ಅಡುಗೆ ಅನಿಲ ಹೆಚ್ಚಾಗಿ ಕಾಣಿಸುತ್ತಿತ್ತು. ನಂತರದ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಅಡುಗೆ ಅನಿಲದ ಬಳಕೆಯಲ್ಲಿ ಏರಿಕೆಯಾದರೂ, ವರ್ಷಕ್ಕೆ ಮೂರರಿಂದ ಐದು ಸಿಲಿಂಡರ್ ಮಾತ್ರ ಸಿಗುತ್ತಿತ್ತು. ಹಳ್ಳಿ ಜನರಿಗೆ ಅದೂ ಸಿಗುತ್ತಿರಲಿಲ್ಲ.
‘ಗರೀಬಿ ಹಠಾವೋ’ ಎಂದು ಚುನಾವಣೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಬಡವರ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಸೀಮೆಎಣ್ಣೆ ಮತ್ತು ಗ್ಯಾಸ್ ಸಿಲಿಂಡರ್ ದೃಶ್ಯವಿದು. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸಾಮಾನ್ಯ ಜನರ ಜೀವನ ಗುಣಮಟ್ಟದ ವಿಷಯದಲ್ಲಿ ಪೆಟ್ರೋಲ್ ಹಾಗೂ ಅಡುಗೆ ಅನಿಲ (ಎಲ್‌ಪಿಜಿ) ಕ್ಷೇತ್ರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.
ದೇಶದ ಜನಸಂಖ್ಯೆ ಮತ್ತು ನಗರೀಕರಣ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂಧನದ ಬೇಡಿಕೆಯೂ ಗಣನೀಯವಾಗಿ ಏರಿದೆ. ಈ ಹಿನ್ನೆಲೆಯಲ್ಲಿ ಸರಕಾರಗಳ ಇಂಧನ ನೀತಿ, ಸಬ್ಸಿಡಿ ವ್ಯವಸ್ಥೆ ಮತ್ತು ವಿತರಣಾ ಕ್ರಮಗಳು ದೇಶದ ಆರ್ಥಿಕ ಸ್ಥಿರತೆ ಮತ್ತು ಜನರ ದೈನಂದಿನ ಬದುಕಿನ ಮೇಲೆ ನೇರವಾದ ಪರಿಣಾಮ ಬೀರುತ್ತವೆ.
2004ರಿಂದ 2014ರವರೆಗೆ ದೇಶವನ್ನು ಆಳಿದ ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಮಾಡಿzದರೂ ಏನು? ಯುಪಿಎ ಆಡಳಿತದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸರಕಾರವೇ ಬಹುಪಾಲು ನಿಯಂತ್ರಿಸುತ್ತಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯ ಏರಿಳಿತಗಳ ಬಗ್ಗೆ ಯೋಚಿಸದೆ, ಕಾಂಗ್ರೆಸ್ ಸರಕಾರ ಸಬ್ಸಿಡಿಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿತ್ತು. ಈ ಕ್ರಮವು ತಾತ್ಕಾಲಿಕವಾಗಿ ಗ್ರಾಹಕರಿಗೆ ರಿಲೀಫ್ ನೀಡಿದಂತೆ ಕಂಡರೂ, ದೀರ್ಘಾವಧಿಯಲ್ಲಿ ಸರಕಾರದ ಹಣಕಾಸು ಸ್ಥಿತಿಯ ಮೇಲೆ ದೊಡ್ಡ ಹೊರೆಯನ್ನು ಉಂಟು ಮಾಡಿತು. ಜನರ ಮುಂದೆ ಒಳ್ಳೆಯವರಂತೆ ಬಿಂಬಿಸಿಕೊಳ್ಳಲು ಕಾಂಗ್ರೆಸ್ ಬಳಸಿಕೊಂಡ ಮಾರ್ಕೆಟಿಂಗ್ ತಂತ್ರಗಾರಿಕೆ ಇದಾಗಿತ್ತು.
2012-13ನೇ ಹಣಕಾಸು ವರ್ಷದಲ್ಲಿ ಸಬ್ಸಿಡಿ ಮೂಲಕ ಭಾರತದಲ್ಲಿನ ತೈಲ ಕಂಪನಿಗಳ ‘ಅಂಡರ್ ರಿಕವರಿ ನಷ್ಟ’ ಸುಮಾರು 1.61 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿತ್ತು. ಆ ನಷ್ಟವನ್ನು ತಾತ್ಕಾಲಿಕವಾಗಿ ಭರಿಸಲು ಅಂದಿನ ಕಾಂಗ್ರೆಸ್ ಸರಕಾರ ಆಯಿಲ್ ಬಾಂಡ್‌ಗಳ ಮೂಲಕ ಮುಂದಿನ ಸರಕಾರದ ಮೇಲೆ ಹೊರೆಯನ್ನು ಹೊರಿಸಿ ಕೈ ತೊಳೆದುಕೊಂಡಿತ್ತು. 2005ರಿಂದ 2010ರ ನಡುವೆ ಸುಮಾರು 1.48 ಲಕ್ಷ ಕೋಟಿ ರುಪಾಯಿ ಮೌಲ್ಯದ ಆಯಿಲ್ ಬಾಂಡ್‌ಗಳನ್ನು ನೀಡಲಾಗಿತ್ತು.
ಕಾಂಗ್ರೆಸ್ ನೀಡಿದ ಆ ಬಾಂಡ್‌ಗಳ ಮೇಲಿನ ಬಡ್ಡಿಯನ್ನು ಮೋದಿಯವರ ಸರಕಾರದಲ್ಲಿ ಇನ್ನೂ ಕಟ್ಟಲಾಗುತ್ತಿದೆ ಮತ್ತು ಆಯಿಲ್ ಬಾಂಡ್‌ಗಳ ಅವಧಿ ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ಅದರ ಅಸಲನ್ನೂ ಮೋದಿ ಸರಕಾರ ಪಾವತಿಸುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ನಷ್ಟವನ್ನು ಮುಂದಿನ ಅವಧಿಗೆ ಮುಂದೂಡಲಾಗಿತ್ತು. ಬೆಲೆ ಇಳಿಸಿದ್ದೇವೆಂದು ಜನರಿಗೆ ಸುಳ್ಳು ಹೇಳಿ ಆಯಿಲ್ ಬಾಂಡ್ ಮೂಲಕ ಮುಂದಿನ ಸರಕಾರಕ್ಕೆ ಹಣಕಾಸಿನ ಹೊರೆಯನ್ನು ನೀಡಿದ್ದು ಮನಮೋಹನ್ ಸಿಂಗ್.
ಸರಕಾರಿ ತೈಲ ಕಂಪನಿಗಳಾದ Indian Oil Corporation, Bharat Petroleum ÊÜáñÜᤠHindustan Petroleum ಕಡಿಮೆ ದರದಲ್ಲಿ ಇಂಧನವನ್ನು ಮಾರಬೇಕಾದ ಪರಿಸ್ಥಿತಿ ಎದುರಾದ ಕಾರಣ, ದೊಡ್ಡ ಮಟ್ಟದ ನಷ್ಟಗಳು ಈ ತೈಲ ಕಂಪನಿಗಳ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದ್ದವು.
ಮತ್ತೊಂದೆಡೆ ಯುಪಿಎ ಆಡಳಿತದ ಅವಧಿಯಲ್ಲಿ ಎಲ್ʼಪಿಜಿ ವಿಸ್ತರಣೆ ನಿರೀಕ್ಷಿತ ವೇಗದಲ್ಲಿ ನಡೆಯಲಿಲ್ಲ. 2014ರ ವೇಳೆಗೆ ಭಾರತದಲ್ಲಿ ಸುಮಾರು 14.5 ಕೋಟಿ ಎಲ್‌ಪಿಜಿ ಸಂಪರ್ಕ ಗಳು ಮಾತ್ರ ಇದ್ದವು. ಗ್ರಾಮೀಣ ಪ್ರದೇಶಗಳ ಬಹುತೇಕ ಕುಟುಂಬಗಳು ಕಟ್ಟಿಗೆ, ಬೆರಣಿ ಮತ್ತು ಕಲ್ಲಿದ್ದಲು ಬಳಸಿ ಅಡುಗೆ ಮಾಡುತ್ತಿದ್ದವು. ಇದರಿಂದ ಆರೋಗ್ಯ ಸಮಸ್ಯೆಗಳು ಮತ್ತು ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಿತ್ತು. ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ತಿಂಗಳುಗಳವರೆಗೆ ಕಾಯಬೇಕಾಗುತ್ತಿತ್ತು.
2012ರಲ್ಲಿ ಕಾಂಗ್ರೆಸ್ ಸರಕಾರ ವರ್ಷಕ್ಕೆ 6 ಸಬ್ಸಿಡಿ ಸಿಲಿಂಡರ್‌ಗಳ ಮಿತಿ ವಿಧಿಸಿತ್ತು. ಕಾಲಾ ನಂತರದಲ್ಲಿ ಈ ಮಿತಿಯನ್ನು 9 ಸಿಲಿಂಡರ್‌ಗಳಿಗೆ ಮತ್ತು 12 ಸಿಲಿಂಡರ್‌ಗಳಿಗೆ ಹೆಚ್ಚಿಸ ಲಾಯಿತು. 2012ರಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ವಿಷಯ ಪ್ರಸ್ತಾಪವಾದಾಗ ಮನಮೋಹನ್ ಸಿಂಗ್ ಅವರು ’ಹಣವು ಗಿಡದಲ್ಲಿ ಬಿಡುವುದಿಲ್ಲ; ಹಾಗಾಗಿ ಏರಿಕೆ ಮಾಡಬೇಕು’ ಎಂಬ ಉಡಾಫೆ ಹೇಳಿಕೆ ನೀಡಿದ್ದರು.
ಮತ್ತೊಂದೆಡೆ 2013ರಲ್ಲಿ ಅಂದಿನ ಇಂಧನ ಸಚಿವರಾಗಿದ್ದ ವೀರಪ್ಪ ಮೊಯ್ಲಿಯವರು ‘ರಾತ್ರಿ ಎಂಟು ಗಂಟೆಯ ನಂತರ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಿದರೆ ಒಳ್ಳೆಯದು’ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು.
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ಸರಕಾರ ಇಂಧನ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಡೀಸೆಲ್ ಬೆಲೆಗಳನ್ನು ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಮುಕ್ತಗೊಳಿಸುವ ಕ್ರಮವೂ ಸೇರಿತ್ತು. ಇದರ ಜತೆಗೆ 2017ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುವ ವ್ಯವಸ್ಥೆ ಜಾರಿಗೆ ತರಲಾಯಿತು. ಇದರ ಪರಿಣಾಮ ಇಂಧನ ಬೆಲೆಯ ನಿರ್ಧಾರದಲ್ಲಿ ಪಾರದರ್ಶಕತೆ ಹೆಚ್ಚಾಯಿತು, ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳಿಗೆ ಅನುಸಾರವಾಗಿ ಹೊಂದಾ ಣಿಕೆ ಸಾಧ್ಯವಾಯಿತು.
ಮೋದಿಯವರು ಪ್ರಧಾನಿಯಾದ ನಂತರ ಎಲ್‌ಪಿಜಿ ಕ್ಷೇತ್ರದಲ್ಲಿ ತಂದ ದೊಡ್ಡ ಬದಲಾವಣೆ ಎಂದರೆ, 2016ರಲ್ಲಿ ಆರಂಭವಾದ ‘ಉಜ್ವಲ ಯೋಜನೆ’. ಈ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಅನಿಲದ ಬಳಕೆಯನ್ನು ವಿಸ್ತರಿಸಲಾಯಿತು. ಈ ಯೋಜನೆಯ ಮೂಲಕ 10 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ.
ಇದರ ಪರಿಣಾಮವಾಗಿ ದೇಶದ ಒಟ್ಟು ಎಲ್‌ಪಿಜಿ ಗ್ರಾಹಕರ ಸಂಖ್ಯೆ 36 ಕೋಟಿಗೆ ತಲುಪಿದೆ. ದೇಶದ ಎಲ್‌ಪಿಜಿ ಕವರೇಜ್ ಸುಮಾರು ಶೇ.55ರಿಂದ 99ರಷ್ಟು ಮನೆಗಳಿಗೆ ಏರಿಕೆಯಾಗಿದೆ. ಇದರಿಂದ ಗ್ರಾಮೀಣ ಮಹಿಳೆಯರ ಆರೋಗ್ಯ ಸುಧಾರಣೆಯಾಗಿದೆ, ಹೊಗೆ ತುಂಬಿದ ಅಡುಗೆಮನೆಯಿಂದ ಹೊರಬಂದು ಗೃಹಿಣಿಯರು ಸ್ವಚ್ಛ ಇಂಧನ ಬಳಸುತ್ತಿದ್ದಾರೆ.
ಸಬ್ಸಿಡಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಎನ್‌ಡಿಎ ಸರಕಾರವು ‘ನೇರ ಲಾಭ ವರ್ಗಾವಣೆ’ (DBT) ವ್ಯವಸ್ಥೆಯನ್ನು ಜಾರಿಗೆ ತಂದಿತು. ಎಲ್‌ಪಿಜಿ ಸಬ್ಸಿಡಿಗೆ ಸಂಬಂಧಿ ಸಿದ DBTL ಯೋಜನೆ ಜಗತ್ತಿನ ಅತಿ ದೊಡ್ಡ ನಗದು ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ಮಾರುಕಟ್ಟೆ ಬೆಲೆಯಲ್ಲಿ ಸಿಲಿಂಡರ್ ಖರೀದಿಸಿ ನಂತರ ಸಬ್ಸಿಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಾರೆ. ಈ ವ್ಯವಸ್ಥೆಯಿಂದಾಗಿ ಲಕ್ಷಾಂತರ ನಕಲಿ ಸಂಪರ್ಕಗಳನ್ನು ರದ್ದುಗೊಳಿಸಲು ಸಾಧ್ಯವಾಗಿದೆ.
ಡಿಜಿಟಲ್ ವ್ಯವಸ್ಥೆಗಳನ್ನು ಪರಿಚಯಿಸುವ ಆನ್‌ಲೈನ್ ಬುಕಿಂಗ್, ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ತ್ವರಿತ ವಿತರಣೆ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಇರಾನ್ ಮತ್ತು ಅಮೆರಿಕ ಯುದ್ಧದ ಪರಿಣಾಮ ಉಂಟಾಗಿರುವ ತಾತ್ಕಾಲಿಕ ಅಡಚಣೆಯ ನಡುವೆಯೂ ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ.
ಅಡುಗೆ ಅನಿಲ ಬುಕ್ ಮಾಡಿದ ಎರಡು ದಿನದೊಳಗೆ ಅದು ಮನೆಗೆ ಬರುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಒಂದು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ ವಾರಗಟ್ಟಲೆ ಕಾಯಬೇಕಿತ್ತು, ಆಗ ಯಾವ ಯುದ್ಧವೂ ಇರಲಿಲ್ಲ. ಯುಪಿಎ ಅವಧಿಯಲ್ಲಿ ಆಯಿಲ್ ಬಾಂಡ್ ಮೂಲಕ ಸಬ್ಸಿಡಿ ಮೇಲೆ ಹೆಚ್ಚು ಅವಲಂಬನೆ ಕಂಡುಬಂದರೆ, ಎನ್ʼಡಿಎ ಅವಧಿ ಯಲ್ಲಿ ಉತ್ತಮ ಸುಧಾರಣೆ, ತಂತ್ರಜ್ಞಾನದ ಬಳಕೆ ಮತ್ತು ವ್ಯಾಪಕ ಎಲ್‌ಪಿಜಿ ವಿಸ್ತರಣೆ ಮೇಲೆ ಹೆಚ್ಚು ಒತ್ತು ನೀಡಲಾಗಿದೆ.
ಭಾರತದ ಬೆಳೆಯುತ್ತಿರುವ ಆರ್ಥಿಕತೆಗೆ ಅನುಗುಣವಾಗಿ ಶಕ್ತಿಸುರಕ್ಷತೆ, ಸ್ವಚ್ಛ ಇಂಧನ ಬಳಕೆ ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆಗಳು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಮಹತ್ವ ಪಡೆಯಲಿವೆ. ಕಳೆದ ಒಂದು ದಶಕದ ಅನುಭವದಲ್ಲಿ ಕಂಡುಬಂದ ಪರಿಣಾಮ ಕಾರಿ ನೀತಿ ಮತ್ತು ಆಡಳಿತವು ಇಂಧನ ಕ್ಷೇತ್ರದಲ್ಲಿ ಹೇಗೆ ಮಹತ್ತರ ಬದಲಾವಣೆ ತರಬಹುದು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.