ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಸಾಕು...ಎರಡನೆಯ ಬಾಣ ಚುಚ್ಚಿಕೊಂಡಷ್ಟು ಸಾಕು !

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಮಲಗದ ಅದ್ಭುತ ಜಾಗ. ಅಲ್ಲಿ ಎಲ್ಲಿ, ಯಾವಾಗ ನೋಡಿದರೂ ಜನವೇ ಜನ. ಒಂದು ಕಡೆ ಅದೆಷ್ಟೋ ತಾಸು ಎಲ್ಲಿಂದಲೋ ಬಂದು ಮುಂದೆ ಹೋಗುವ, ನಿದ್ರೆ ಸರಿಯಾಗಿರದೆ, ಹೊಟ್ಟೆ ಕೆಟ್ಟ, ಸ್ನಾನವಿಲ್ಲದ, ಮಾನಸಿಕವಾಗಿಯೂ ದಣಿದ ಪ್ರಯಾಣಿಕರು. ಕೆಲವರಿಗೆ ಭಾಷೆ ಬರುವುದಿಲ್ಲ. ಕೆಲವರು ಕಂಗಾಲಾಗಿರುತ್ತಾರೆ, ಇನ್ನು ಕೆಲವರು ವಿಮಾನ ನಿಲ್ದಾಣ ದಲ್ಲಿಯೇ ದಾರಿ ತಪ್ಪಿ ಇತ್ತಿಂದತ್ತ ದಿಕ್ಕು ಬಳ್ಳಿ ದಾಟಿದವರಂತೆ ಓಡಾಡುತ್ತಿರುತ್ತಾರೆ ಇತ್ಯಾದಿ.

ಶಿಶಿರಕಾಲ

ಗ್ವಾಂಟೆನಾಮೋ ಬೇ. 2005 ಸುಮಾರಿಗೆ ಅಲ್ಲಿಂದ ಒಂದು ಸುದ್ದಿ ಬಂತು. ಅಮೆರಿಕಾ ಸೈನಿಕರು ಕ್ಯೂಬಾದೇಶದಲ್ಲಿರುವ ತಮ್ಮ ನೌಕಾನೆಲೆಯಲ್ಲಿ ಶಂಕಿತ ಉಗ್ರನನ್ನು ವಿಚಾರಣೆ ನಡೆಸುವಾಗ ನಡೆದಿದೆ ಎನ್ನಲಾದ ಘಟನೆ. ಅಲ್ಲಿ ವಿಚಾರಣೆ ನಡೆಸುತ್ತಿದ್ದ ಜೈಲರ್ ಭಯೋತ್ಪಾದಕನ ಪವಿತ್ರ ಗ್ರಂಥವನ್ನು ಟ್ಪಾಯ್ಲೆಟ್‌ನಲ್ಲಿ ಹಾಕಿ ಫ್ಲಶ್ ಮಾಡಿಬಿಟ್ಟಿದ್ದಾನೆ ಎಂದು. ಆಗ ದೊಡ್ಡ ಸುದ್ದಿ, ಚರ್ಚೆಯೂ ಚರ್ಚೆ.

ಮಾಧ್ಯಮದವರು - ‘ಅಮೆರಿಕಾದವರು ಹೀಗೆ ಮಾಡಿದ್ದು ಸರಿಯಾ?’ ಎಂದು ದೇಶದ ನಾಯಕ ರನ್ನು, ಧರ್ಮ ಗುರುಗಳನ್ನೆಲ್ಲ ಮೈಕ್ ಕೇಳಿದರು. ಆಗ ಆಸ್ಟ್ರೇಲಿಯಾದ ಬುದ್ಧ ಬಿಕ್ಕು ‘ಆಜಾ ಬ್ರಾಹ್ಮ’ ಅವರಿಗೂ ಇದೇ ಪ್ರಶ್ನೆ ಕೇಳಲಾಯಿತು. ಧರ್ಮಗ್ರಂಥವನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡುವುದು ಸರಿಯೇ? ನೀವು ನಿಮ್ಮ ಧರ್ಮಗ್ರಂಥವನ್ನು ಫ್ಲಶ್ ಮಾಡಿದ್ದರೆ ಏನು ಮಾಡ್ತಿದ್ರಿ.

ಇದಕ್ಕೆ ಆಜಾ ಬ್ರಹ್ಮ ಉತ್ತರಿಸಿದ ರೀತಿ ಅನನ್ಯ. ಒಂದುವೇಳೆ ತ್ರಿಪಿಟಕವನ್ನು ಅಥವಾ ಯಾವುದೇ ಧರ್ಮಗ್ರಂಥವನ್ನು. ಅಷ್ಟೇ ಏಕೆ, ರದ್ದಿ ಪುಸ್ತಕವನ್ನು ಫ್ಲಶ್ ಮಾಡಿದರೂ, ನಾನು ಮಾಡುತ್ತಿದ್ದುದು ಒಂದೇ ಕೆಲಸ. ಮೊದಲು - ತಕ್ಷಣ ಪ್ಲಂಬರ್(ಕೊಳಾಯಿಗಾರ)ನನ್ನು ಕರೆಯಿಸಬೇಕು. ಮೊದಲು ಕಟ್ಟಿದ ಟಾಯ್ಲೆಟ್ ಅನ್ನು ಸರಿ ಮಾಡಿಸಬೇಕು!

ಮನೆ ಸರಿಯಿಲ್ಲದಿದ್ದರೂ ಸರಿ, ಮನೆಯ ಟಾಯ್ಲೆಟ್ ಎಂದೂ ಕೆಟ್ಟಿರಬಾರದು. ಅದರಲ್ಲೂ ಜೈಲಿನಲ್ಲಿ ಟಾಯ್ಲೆಟ್ ಕೆಲಸ ಮಾಡಿಲ್ಲ ಎಂದರೆ ಅಲ್ಲಿ ಇನ್ನಷ್ಟು ಅಸಹ್ಯವಾಗಬಹುದು. ಇದು ಅತ್ಯಂತ ಮುಖ್ಯ ವಿಷಯ. ಎರಡನೇ ವಿಷಯ, ಧರ್ಮಗ್ರಂಥದ್ದು. ಧರ್ಮವನ್ನು ಫ್ಲಶ್ ಮಾಡಿ ದ್ದಲ್ಲ, ಮಾಡಲಿಕ್ಕಾಗುವುದಿಲ್ಲ. ಹಾಗಾಗಿ ಸಮಸ್ಯೆ ಇಲ್ಲ. ನನಗೆ ಪತ್ರಕರ್ತ ಕೇಳಿದ ಪ್ರಶ್ನೆ, ಅದಕ್ಕೆ ಆಜಾ ಬ್ರಹ್ಮ ಉತ್ತರಿಸಿದ ರೀತಿ, ಯಾವತ್ತೂ ಮರೆಯಲಿಕ್ಕೆ ಸಾಧ್ಯವಿಲ್ಲ. ಅರ್ನಾಬ್ ಗೋಸ್ವಾಮಿ ನಡೆಸಿದ ಸಂದರ್ಶನದಂತೆ !

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಮಲಗದ ಅದ್ಭುತ ಜಾಗ. ಅಲ್ಲಿ ಎಲ್ಲಿ, ಯಾವಾಗ ನೋಡಿದರೂ ಜನವೇ ಜನ. ಒಂದು ಕಡೆ ಅದೆಷ್ಟೋ ತಾಸು ಎಲ್ಲಿಂದಲೋ ಬಂದು ಮುಂದೆ ಹೋಗುವ, ನಿದ್ರೆ ಸರಿಯಾಗಿರದೆ, ಹೊಟ್ಟೆ ಕೆಟ್ಟ, ಸ್ನಾನವಿಲ್ಲದ, ಮಾನಸಿಕವಾಗಿಯೂ ದಣಿದ ಪ್ರಯಾಣಿಕರು. ಕೆಲವರಿಗೆ ಭಾಷೆ ಬರುವುದಿಲ್ಲ. ಕೆಲವರು ಕಂಗಾಲಾಗಿರುತ್ತಾರೆ, ಇನ್ನು ಕೆಲವರು ವಿಮಾನ ನಿಲ್ದಾಣದಲ್ಲಿಯೇ ದಾರಿ ತಪ್ಪಿ ಇತ್ತಿಂದತ್ತ ದಿಕ್ಕು ಬಳ್ಳಿ ದಾಟಿದವರಂತೆ ಓಡಾಡುತ್ತಿರು ತ್ತಾರೆ ಇತ್ಯಾದಿ.

ಇನ್ನೊಂದು ಕಡೆ ಎಲ್ಲಿಲ್ಲದ ರಗಳೆಯೆನಿಸುವಷ್ಟು ಭದ್ರತಾ ವ್ಯವಸ್ಥೆ. ಏರ್ಪೋರ್ಟ್ ಎಂದರೆ ಎಲ್ಲಿ ನೋಡಿದರಲ್ಲಿ ಸರತಿ ಸಾಲುಗಳು. ಚೆಕ್ ಇನ್, ತಪಾಸಣೆ, ಇಮಿಗ್ರೇಷನ್, ವಿಮಾನವನ್ನೇರಲು ಗೇಟ್‌ನ ಬಳಿ, ಹೀಗೆ - ಸಾಲಿಂದ ಮುಂದೆ ಇನ್ನೊಂದು ಸಾಲು, ಸಾಲುಗಳದ್ದೇ ಸಾಲು ಸಾಲು. ಅಂತರಾಷ್ಟ್ರೀಯ ವಿಮಾನ ಪ್ರಯಾಣ ಎಂದರೆ ಇದೆಲ್ಲ ಸರತಿ ಸಾಲುಗಳನ್ನು ನಿಂತು ಮೀರುತ್ತಾ ಹೋಗುವುದು.

ಇದನ್ನೂ ಓದಿ: Shishir Hegde Column: ಜ್ಞಾನದಿಂದ ವಿಜ್ಞಾನದೆಡೆಗೆ ಹೊರಳುತ್ತಿದೆಯೇ ಸೈನ್ಸ್‌ ?

ಅದೆಲ್ಲದರ ನಡುವೆ ವಿಮಾನಯಾನ ಕಂಪನಿಗಳು, ಅವರ ವಿಮಾನಗಳು, ಹಾರಾಟದ ಸಂಕೀರ್ಣ ವ್ಯವಸ್ಥೆ. ಹೀಗಿರುವಾಗ ವಿಮಾನ ತಡವಾಗುವುದು ಇತ್ಯಾದಿ ಸಹಜ, ಮತ್ತು ಅದು ನಡೆದಲ್ಲಿ ಪ್ರಯಾ ಣಿಕರ ಸಹನೆಯ ಕಟ್ಟೆಯೂ ಸುಲಭದಲ್ಲಿ ಒಡೆದುಹೋಗುತ್ತದೆ. ಯಾವುದೇ ಅವ್ಯವಸ್ಥೆ ಏಕಕಾಲಕ್ಕೆ ಇನ್ನೂರು- ಮುನ್ನೂರು ಜನರನ್ನು ಬಾಧಿಸುತ್ತದೆ.

ಕೆಲವೊಮ್ಮೆ ತಾಂತ್ರಿಕ ದೋಷ ಕಾರಣಗಳಿಗೆ, ವಿಮಾನದೊಳಕ್ಕೆ ಹೊರಡಲು ಕೂತ ಅಷ್ಟೂ ಜನರನ್ನು ವಾಪಸ್ ಇಳಿಸುವುದು, ಇನ್ನೊಂದು ವಿಮಾನಕ್ಕೆ ಹತ್ತಿಸುವುದು ಇತ್ಯಾದಿ ತೀರಾ ಅವ್ಯವಸ್ಥೆಯಾಗಿ ಬಿಡುತ್ತದೆ. ಆಗ ಕ್ಲಾಸಿಕ್ ಸನ್ನಿವೇಶವೊಂದು ಅಲ್ಲಿ ನಿರ್ಮಾಣವಾಗುತ್ತೆ. ಕ್ಷಣ ಮಾತ್ರದಲ್ಲಿ ವಿಮಾನ ನಿಲ್ದಾಣ ಮನಶಾಸ್ತ್ರದ ಪ್ರಯೋಗಾಲಯವಾಗಿ ಬಿಡುತ್ತದೆ.

ಆ ಮುನ್ನೂರರಲ್ಲಿ ಎಂಟು ಹತ್ತು ಜನ ಜಗಳಕ್ಕೆ ಹೋಗಿ ನಿಲ್ಲುತ್ತಾರೆ. ಇನ್ನೊಂದಿಷ್ಟು ಮಂದಿ ಕೂಗಾಡುತ್ತಾರೆ, ಸೋಡ್ಡು ಮುರಿಯುತ್ತಾರೆ, ಗೊಣಗುತ್ತಾರೆ ಇತ್ಯಾದಿ. ಇಂತಹ ಘಟನೆಯಾದಾಗ ನೂರಕ್ಕೆ ತೊಂಭತ್ತರಷ್ಟು ಮಂದಿ ಒಂದಿಂದು ರೀತಿಯಲ್ಲಿ ತಮ್ಮ ಅಸಹನೆಯನ್ನು ಪ್ರದರ್ಶಿಸು ತ್ತಾರೆ.

ಹಾಗಂತ ಆ ಗಲಾಟೆಯಿಂದ ಪ್ರಯೋಜನೆವನಿಲ್ಲ. ಏನಾದಮೇಲೆ ಏನಾಗಬೇಕೋ ಹಾಗೆಯೇ ಅಲ್ಲಿ ನಡೆಯಬೇಕು. ವಿಮಾನಯಾನ ಕೆಲಸಗಾರರು ಇವರನ್ನು ಸುಧಾರಿಸಲು ಹೆಣಗುತ್ತಿರುತ್ತಾರೆ. ಅದೇ ಸಮಯದಲ್ಲಿ - ಇನ್ನೊಂದು ಕಡೆ ಉಳಿದ ಶೇಕಡಾ ಹತ್ತರಷ್ಟಿನವರು. ಅವರು ಸುಮ್ಮನಿದ್ದು ಪ್ರತಿಕ್ರಿಯಿಸುವವರು.

ಅವರು ಅಲ್ಲಿಯೇ ಒಂದು ಖುರ್ಚಿ ಹಿಡಿದು ನಿಶ್ಚಿಂತೆಯಿಂದ ಕೂತು ಬಿಡುತ್ತಾರೆ. ಈ ಗಲಾಟೆ ಮಾಡುವವರಿಗೆ ಇಂಥವರನ್ನು ಕಂಡರೆ ಸಿಟ್ಟು. ಇವರಿಗೆ ಸಿಟ್ಟು ಬರುತ್ತಿಲ್ಲವಲ್ಲ ಎಂಬ ಸಿಟ್ಟು. ಪ್ರತಿಭಟಿಸುವುದಿಲ್ಲವಲ್ಲ ಎಂದು ಸಿಟ್ಟು. ಆದರೆ ಈ ಶೇ.10ರಷ್ಟು ಜನ ಮಾತ್ರ ಸಂಬಂಧವೇ ಇಲ್ಲವೇನೋ ಎಂಬ ರೀತಿಯಲ್ಲಿ ಶಾಂತವಾಗಿರುತ್ತಾರೆ.

ಅವರಿಗೆ ಸಿಟ್ಟು ಸಾಂಕ್ರಾಮಿಕವಾಗಿ ಹಬ್ಬುವುದಿಲ್ಲ. ಒಳಿದೆಲ್ಲವರ ತಲೆಯಲ್ಲಿ ನಮನಮನಿ ರಾಸಾ ಯನಿಕ, ಉದ್ವೇಗ, ರಕ್ತದೊತ್ತಡ. ಆದರೆ ಅದು ಪಯೋಜನವಿಲ್ಲದ ಸಿಟ್ಟು. ಈ ಎರಡು ಸಂಬಂಧವೇ ಇಲ್ಲದ ವಿಷಯದಲ್ಲಿ ಗಮನಿಸಬೇಕಾದ ಒಂದು ಅಂಶವಿದೆ.

ನಾವು ಗುಂಪಿನಲ್ಲಿರಲಿ ಅಥವಾ ಒಬ್ಬರೇ ಇರಲಿ, ಪ್ರಶ್ನೆಗೆ ಉತ್ತರಿಸಬೇಕಾದಾಗ, ಪರಿಸ್ಥಿತಿಗೆ ಪ್ರತಿಕ್ರಿಯಿ ಸಲೇಬೇಕಾದ - ಎಲ್ಲ ಕಾಲದಲ್ಲೂ ಪ್ರತಿಕ್ರಿಯೆ ವೈಯಕ್ತಿಕ ಸ್ವಾತಂತ್ರ್ಯ ಎಂಬ ವಿಚಾರವನ್ನು. ಯಾವ ರೀತಿ ಪ್ರತಿಕ್ರಿಯಿಸಬಹುದು ಎನ್ನುವುದು ಪರಿಸ್ಥಿತಿ ಅಥವಾ ಪ್ರಶ್ನೆಯನ್ನೇ ಆಧರಿಸಿರಬೇಕಾಗಿಲ್ಲ, ಅಥವಾ ಇನ್ನೊಬ್ಬರು ಬಯಸಿದಂತೆ ನಮ್ಮ ಪ್ರತಿಕ್ರಿಯೆ ಇರಬೇಕಿಲ್ಲ ಎಂಬ ಸೂಕ್ಷ್ಮವನ್ನು.

ನಾವು ಯಾವುದೇ ಪೂರ್ವನಿರ್ಧಾರಿತ ಅಥವಾ ಸಮಾಜ ಹೇರಿದ ರೀತಿಯಲ್ಲಿಯೇ ಪ್ರತಿಕ್ರಿಯಿಸ ಬೇಕಿಲ್ಲ ಎಂಬುದನ್ನು. ಎಸ್‌ಬಿಐ ಬ್ಯಾಂಕಿನ ಸಾಲಿನಲ್ಲಿ ನಿಂತಾಗ, ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿ‌ ಕೊಂಡಾಗ, ಯಾರೋ ನಮ್ಮೆದುರು ಸಿಗ್ನಲ್ ಜಂಪ್ ಮಾಡಿ ಹೋದಾಗ, ಇಂಟರ್ನೆಟ್ ನಿಧಾನ ವಾದಾಗ, ಬಸ್ ತಡವಾಗಿ ಬಂದಾಗ, ಮಗ ಒಳ್ಳೆಯ ಮಾರ್ಕ್ಸ್ ಪಡೆಯದಿದ್ದಾಗ, ಅಡುಗೆಗೆ ಉಪ್ಪು ಹೆಚ್ಚಾದಾಗ, ಕಸ್ಟಮರ್ ಕೇರ್ ನವರು ಸರಿಯಾಗಿ ವ್ಯವಹರಿಸದಿದ್ದಾಗ - ಅದೆಂತಹುದೇ ಪರಿಸ್ಥಿತಿ ನಮ್ಮ ಮುಂದಿರಲಿ.

ಇಲ್ಲಿ ಸಿಟ್ಟಾಗುವುದು ಸರಿ - ಸುಮ್ಮನಿರುವುದು ಸರಿ ಎಂಬ ವಾದ ಅತ್ಲಾಗಿರಲಿ. ಕೆಲವು ಕಡೆ ಗಲಾಟೆ ಮಾಡದೆ ಕೆಲಸವಾಗುವುದಿಲ್ಲ ಎನ್ನುವುದೆಲ್ಲ ಸರಿ. ಆದರೆ ಪ್ರತಿಕ್ರಿಯೆ ಎಲ್ಲ ಕಾಲದಲ್ಲೂ ವೈಯಕ್ತಿಕ - ನಮ್ಮದೇ ಸ್ವಾತಂತ್ರ್ಯ . ಅಯ್ಯೋ, ಯಾರಿಗೆ ಗೊತ್ತಿಲ್ಲ ಈ ವಿಷಯ? ನಾವು ಈ ವಿಷಯವನ್ನು ಬಹುತೇಕ ಸಮಯ, ಹೆಚ್ಚಿನ ಸಂದರ್ಭದಲ್ಲಿ ಮರೆತಿರುತ್ತೇವೆ ಎನ್ನುವುದು ಬಿಟ್ಟರೆ ವಿಷಯ ಎಲ್ಲರಿಗೂ ಗೊತ್ತಿದ್ದದ್ದೇ.

ಅದೇಕೋ ಗೊತ್ತಿಲ್ಲ - ನಮಗೆಲ್ಲರಿಗೂ ಅಷ್ಟೇ. ನಮ್ಮ ಎಲ್ಲ ಪ್ರತಿಕ್ರಿಯೆಗಳೂ ಅನಿವಾರ್ಯ ಎಂದು ನಂಬಿಕೊಳ್ಳುವುದರಲ್ಲಿ ಅದೇನೋ ಖುಷಿಯಿದೆ. ಪ್ರತಿಕ್ರಿಯೆಗಳೆಂದರೆ ಹುಳು ಕಣ್ಣ ಹತ್ತಿರ ಬಂದಾಗ ಮುಚ್ಚಿದಂತೆ, ಎದೆಬಡಿತದಂತೆ ಇತ್ಯಾದಿ. ಯಾರೋ ಕ್ಯೂ ತಪ್ಪಿಸಿ ಮಧ್ಯ ನುಸುಳಿದರೆ ತಕ್ಷಣ ಸಿಟ್ಟು ಬರುತ್ತದೆ. ಯಾರೋ ಏನೋ ಅಸಂಬದ್ಧ ಮಾತನಾಡಿಸಿದರೆ, ಕಮೆಂಟ್ ಮಾಡಿದರೆ, ಹಂಗಿಸಿದರೆ ತಕ್ಷಣ ಹುಬ್ಬು ಗಂಟಾಗಿ, ಭುಜಗಳು ಬಿಗಿಯಾಗುತ್ತವೆ.

ಒಮ್ಮೆ ಕುಮಟಾ ಬಸ್‌ಸ್ಟ್ಯಾಂಡಿನಲ್ಲಿ ನಮ್ಮೆಲ್ಲರದುರಿಗೆ ಹೀಗೊಂದು ಘಟನೆಯಾಯಿತು. ಶುಭ್ರಬಟ್ಟೆ ಧರಿಸಿ ಸಭ್ಯರೊಬ್ಬರು ನಿಂತಿದ್ದರು. ಆ ಬಸ್‌ಸ್ಟಾಂಡ್ ನಲ್ಲಿ ನಮ್ಮೆಲ್ಲರ ಚಿರಪರಿಚಿತ ಒಬ್ಬ ಹುಚ್ಚ ನಿದ್ದ. ಅವನು ಬಸ್‌ಸ್ಯಾಂಡಿನ ಭಾಗವೇ ಆಗಿದ್ದ. ಅವನು ಬಾಯಿಗೆ ಬಂದಂತೆಲ್ಲ ಮಾತನಾಡು ವುದು ಎಲ್ಲರಿಗೂ ಗೊತ್ತಿತ್ತು.

ಆ ದಿನ ಈ ಸಭ್ಯರ ಬಳಿ ಅಡ್ಡದಿಂದ ಬಂದು ‘ಬೊಮಗನೆ ದಾರಿಬಿಡು’ ಎಂದುಬಿಟ್ಟ. ತಕಳಿ, ನಾವೆಲ್ಲರೂ ಯಾರನ್ನು ಸಭ್ಯರಂತೆ ಎರಡು ಕ್ಷಣದ ಹಿಂದೆ ನೋಡಿzವೋ, ಅವರು ಮಾರನೆಯ ಕ್ಷಣ ಆ ಹುಚ್ಚನನ್ನು ನೆಲಕ್ಕೆ ಹಾಕಿಕೊಂಡು ಥಳಿಸುತ್ತಿದ್ದರು. ನನಗೆ ಇಂತಹ ಘಟನೆ ಗ್ರೀಕ್ ತತ್ವಜ್ಞಾನಿ ಸೆನೆಕಾ ಹೇಳಿದ ಒಂದು ಮಾತು ನೆನಪು ಮಾಡುತ್ತದೆ.

We do not respond to messages but we respond to the meaning we assign to it. ಹಾಗೆ ಹೇಳಿದ್ದು ಹುಚ್ಚ ಎಂದು ಅವರಿಗೆ ಗೊತ್ತಿಲ್ಲವೇ? ಗೊತ್ತಿದೆ. ಈ ಹಿಂದೆಯೂ ಆ ಹುಚ್ಚ ಇದೇ ಮಾತನ್ನು ಇನ್ನೊಬ್ಬರಿಗೂ ಹೇಳಿದ್ದಿದೆ. ಸೆನೆಕಾ ಗುರುತಿಸಿ ಹೇಳಿದ್ದು ಇದನ್ನೇ ನಾವು ಸಂದೇಶ, ಘಟನೆ ಇವಕ್ಕೆ ಪ್ರತಿಕ್ರಿಯಿಸುವುದಿಲ್ಲ. ಬದಲಿಗೆ ಅದಕ್ಕೆ ನಾವು ಆರೋಪಿಸಿದ ನಮ್ಮದೇ ಅರ್ಥಕ್ಕೆ ಪ್ರತಿಕ್ರಿಯಿಸುತ್ತಿರುತ್ತೇವೆ ಎಂದು.

ಇಂದು ವಿಷಯ ಪ್ರತ್ಯೇಕಿಸಿ ಸ್ಪಷ್ಟಪಡಿಸಬೇಕು. ಈ ಲೇಖನ ಯೋಚಿಸಿ ಪ್ರತಿಕ್ರಿಯಿಸಬೇಕು ಎನ್ನುವ ಗಿಳಿ ಪಾಠವಂತೂ ಖಂಡಿತ ಅಲ್ಲ. ನಮ್ಮೆದುರು ಏನೇ ನಡೆಯಲಿ ಪ್ರತಿಕ್ರಿಯಿಸದೆ ಕಲ್ಲಿನಂತಿದ್ದು ಬಿಡಬೇಕು ಎನ್ನುವ ಜೀವಪಲಾಯನವೇ ಉಪಾಯವಲ್ಲ. ಕಲ್ಲಿನಂತಾದರೆ ಪೆಟ್ಟು ಹೆಚ್ಚಿಗೆ ಬೀಳುತ್ತದೆ. ಕನ್ನಡಿಯಾಗಲು ಹೊರಟರೆ ಕ ಇಲ್ಲದೆ ಒಡೆದುಹೋಗುತ್ತದೆ.

ಹಾಗಾದರೆ ಏನಿದಕ್ಕೆ ಪರಿಹಾರ? ವಿಷಯ ಬಹಳ ಸರಳ - ಸುಲಭ. ನಮ್ಮದುರು ಏನು ಸಂಭವಿಸು ತ್ತದೆ ಮತ್ತು ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಇದು ಎರಡು ಹಂತದ ಘಟನೆ ಅಲ್ಲ, ಬದಲಿಗೆ ಇಲ್ಲಿ ಮೂರು ಹಂತವಿದೆ. ಮೊದಲನೆಯದು ಕ್ರಿಯೆ, ಮೂರನೆಯದು ನಮ್ಮ ಪ್ರತಿಕ್ರಿಯೆ. ಎರಡನೆಯದು ಇವೆರಡರ ನಡುವಿನ ಒಂದು ಚಿಕ್ಕ ಸ್ಪೇಸ್ - ಅಂತರ. ಬಹಳ ಚಿಕ್ಕದು ಆ ಅಂತರ.. ಅದೆಷ್ಟು ಚಿಕ್ಕದೆಂದರೆ - ಕೆಲವೊಮ್ಮೆ ಇದು ಫ್ರಾಕ್ಷನ್ ಆಫ್ ಸೆಕೆಂಡ್ ಎನ್ನುತ್ತೇವಲ್ಲ ಅಷ್ಟು.

ಹಾಗಾಗಿ ಬಹುತೇಕ ಸಂದರ್ಭದಲ್ಲಿ ಅದು ಇರುವುದು, ಘಟಿಸಿಹೋಗುವುದು ನಮ್ಮ ಗಮನಕ್ಕೇ ಬರುವುದಿಲ್ಲ. ಆದರೆ ಅದೊಂದು ಗ್ಯಾಪ್ ಇರುವುದಂತೂ ನಿಜ. ಏಕೆಂದರೆ ಸ್ವಲ್ಪ ಗಮನಿಸಿದರೆ ಎಲ್ಲರಿಗೂ ಅದು ಕಾಣಿಸುತ್ತದೆ. ಆ ಅಂತರದಲ್ಲಿಯೇ ಗಮನಾರ್ಹವಾದzಂದು ಸಾಧ್ಯವಿದೆ. ಅದುವೆ ನಮಗೆ ಸಿಟ್ಟು ಬರುವುದಕ್ಕೂ ಮತ್ತು ನಾವೇ ಸಿಟ್ಟಾಗುವುದಕ್ಕೂ, ನಮಗೆ ಬೇಸರವಾಗುವುದಕ್ಕೂ, ನಾವೇ ಬೇಸರವಾಗುವುದಕ್ಕೂ ಇರುವ ನಡುವಿನ ಅಂತರ.

ಇಲ್ಲಿ - ಕ್ರಿಯೆಯ ನಂತರ ನಮ್ಮ ಪ್ರತಿಕ್ರಿಯೆ ಪ್ರಕಟವಾಗುವುದಕ್ಕಿಂತ ಒಂಚಣ ಮೊದಲು, ಪ್ರತಿಕ್ರಿಯೆ ರೂಪಗೊಳ್ಳುವುದನ್ನು ಗಮನಿಸಿದರೆ ಆಯ್ತು. ಅಷ್ಟೇ. ನಮ್ಮ ಎಲ್ಲ ಪ್ರತಿಕ್ರಿಯೆ ಬರುವಾಗಲೇ ಗಡಿಬಿಡಿಯಲ್ಲಿ ಬರುತ್ತವೆ - ಗಮನಿಸಿದ್ದೀರಾ? ಈಗಲೇ ಪ್ರತಿಕ್ರಿಯಿಸಿ‌ ಬಿಡಬೇಕು, ಈಗಲೇ ಸ್ಪಷ್ಟಪಡಿಸಿಬಿಡಬೇಕು, ಈ ಕ್ಷಣದ ಎಲ್ಲವನ್ನೂ ಕ್ಲಿಯರ್ ಮಾಡಿಬಿಡಬೇಕು, ಇದುವೇ ನನ್ನ ನಿಲುವು ಎಂದು ಹೇಳಿಬಿಡಬೇಕು. ಕೆಲವೊಮ್ಮೆ ಪ್ರಶ್ನೆ ಮುಗಿಯುವುದಕ್ಕಿಂತ ಮೊದಲೇ ಉತ್ತರ ತಯಾರಾಗಿಬಿಡುತ್ತದೆ.

ಪ್ರಶ್ನೆ ಕೇಳುವಾಗಲೇ, ಕ್ರಿಯೆ ಸಂಭವಿಸುವಾಗಲೇ ಪ್ರತಿಕ್ರಿಯೆಗೆ ಎಲ್ಲಿಲ್ಲದ ಗಡಿಬಿಡಿ. ಈ ಪ್ರತಿಕ್ರಿಯೆ ತಯಾರಾಗುವ ಪರಿಯನ್ನು ಗಮನಿಸಿದಾಗ ಅಲ್ಲಿಯೇ ನಾನು ಹೇಳಲು ಹೋರಟ ಅದ್ಭುತ ಸಂಭವಿಸುವುದು. ಅರೆ ಕ್ಷಣದ ಅತಿ ಚಿಕ್ಕ ವಿರಾಮ - ನಿಲ್ಲುವಿಕೆ- pause ಗಮನಿಸಿದ ತಕ್ಷಣ.ಇವು ಯಾವುದೂ ನಾನೇ ಕಲ್ಪಿಸಿಕೊಂಡ ಕಥೆಯಲ್ಲ, ಅಥವಾ ಯಾರೋ ಬಿಡುವ ಬುರುಡೆ ತತ್ವಶಾಸವೂ ಅಲ್ಲ.

ಇವೆಲ್ಲ ಈಗ ವೈಜ್ಞಾನಿಕ. ಯಾರಾದರೂ ಹಂಗಿಸಿದಾಗ, ಕೊಂಕು ಮಾತನಾಡಿದಾಗ ಸಿಟ್ಟು ತಕ್ಷಣ ನೆತ್ತಿಗೇರುತ್ತದೆ ಅಲ್ಲವೇ? ಈ ಸಿಟ್ಟು ನೆತ್ತಿಗೇರುವುದು ಎನ್ನುವುದು ಕಾಲ್ಪನಿಕವಲ್ಲ ಅಥವಾ ಮಾನಸಿಕವಷ್ಟೇ ಅಲ್ಲ. ಇದು ನಿಜವಾಗಿಯೂ ನಡೆಯುವ ದೈಹಿಕ - ಭೌತಿಕ ಪ್ರಕ್ರಿಯೆ. ಮೆದುಳಿನ ಅಲಾರಾಂ ವ್ಯವಸ್ಥೆ - ಅಮಿಗ್ಡೇಲಾ ತಕ್ಷಣ ಜಾಗೃತವಾಗುವ ಕ್ರಿಯೆ.

ಅಮಿಗ್ಡೇಲಾ ಇರುವುದು ಮೆದುಳಿನ ಮಧ್ಯದಲ್ಲಿ, ಆದರೆ ಅದರ ಅನುಭವಾಗುವುದು ನೆತ್ತಿ - ಸಹಸ್ರಾರದಲ್ಲಿ. ಈ ಭಾಗ ಜಾಗೃತವಾಗುವ, ಇಡೀ ದೇಹವನ್ನು ಸಂಪೂರ್ಣ ವಶಕ್ಕೆ ಪಡೆಯುವ ಆ ಅನುಭವವೇ ಸಿಟ್ಟು ನೆತ್ತಿಗೇರಿದ ಅನುಭವ. ದೇಹ ನಡುಗಿ, ಪರಮೋದ್ವೇಗಕ್ಕೆ ಕ್ಷಣಾರ್ಧದಲ್ಲಿ ತಲುಪಿಬಿಡುತ್ತದೆಯಲ್ಲ ಅದುವೇ ಅಮಿಗ್ಡೇಲಾ.

ಆಗ ದೇಹದಲ್ಲಿ ಏನಾಗುತ್ತದೆ? ಅಡ್ರಾನಲಿನ್ ರಾಸಾಯನಿಕ ಹೆಚ್ಚಿಗೆ ಸ್ರವಿಸುತ್ತದೆ, ಹೃದಯಬಡಿತ ಹೆಚ್ಚಾಗುತ್ತದೆ, ಸ್ನಾಯುಗಳು ಗಟ್ಟಿಯಾಗುತ್ತವೆ, ಏಕಾಗ್ರತೆ ಎಲ್ಲಿಲ್ಲದಷ್ಟು ಹೆಚ್ಚುತ್ತದೆ ಇತ್ಯಾದಿ. ರಸ್ತೆಯಲ್ಲಿ ಹುಲಿ ಕಂಡಾಗ ನಡೆಯುವ ಜೀವ ಕ್ರಿಯೆಗಳೇ ಇಲ್ಲಿ ಕೂಡ ಅರೆ ಕ್ಷಣದಲ್ಲಿ ಸಂಭವಿಸು ತ್ತದೆ. ಮೆದುಳು ಮಾಡುವುದು ಅಷ್ಟೇ ಕೆಲಸ.

ಒಂದಿಷ್ಟು ರಾಸಾಯನಿಕ ಬಿಡುಗಡೆ ಮಾಡಿ, ಓಡು ಇಲ್ಲವೇ ಹೊಡೆದಾಡು - ಎರಡಕ್ಕೂ ದೇಹ ವನ್ನು ತಯಾರು ಮಾಡಿಬಿಡುವುದು. ಹುಲಿ ಕಂಡಾಗ ನಿರ್ಣಯವನ್ನು ವಿವೇಚನೆಗೆ ಬಿಟ್ಟರೆ ಅದು ಅವಿವೇಕವಾಗುತ್ತದೆ. ಸಿಟ್ಟಾದಾಗ ವಿವೇಚನೆ ಕಳೆದುಕೊಳ್ಳುವುದೇಕೆ? ಅದು ಕೂಡ ಮೆದುಳಿನದೇ ಕೆಲಸ. ವಿವೇಚನೆ ನಡೆಯುವುದು ಮೆದುಳಿನ ಇನ್ನೊಂದು ಭಾಗದಲ್ಲಿ prefrontal cortex ಪ್ರಿ - ಫ್ರಂಟಲ್ ಕೋರ್ಟೆಕ್ಸ್. ಆಡಿರುವುದು ಹಣೆ - ಬ್ರೂ ಮಧ್ಯೆ ಒಳಕ್ಕೆ. ಆಜ್ಞೆ ಚಕ್ರ. ಮೆದುಳು ಅಮೈಗ್ಡೇಲಾ ಭಾಗವನ್ನು ಜಾಗೃತ ಮಾಡುವುದರ ಜತೆಜತೆಯಲ್ಲಿ ಪ್ರಿ - ಫ್ರಂಟಲ್ ಕೋರ್ಟೆಕ್ಸ್ ಅನ್ನು ಮಂದ ಮಾಡಿರುತ್ತದೆ.

ಅದರರ್ಥ ಮೆದುಳಿನ ಈ ಕೆಲಸದಿಂದಾಗಿ ನಮಗೆ ಸಿಟ್ಟು ನೆತ್ತಿಗೇರಿದಾಗ ವಿವೇಚಿಸಲು ಅಷ್ಟು ಕಷ್ಟವಾಗಿಬಿಡುತ್ತದೆ. ಆದರೆ ಈ ಹೇಳಿದ ಅರೆಕ್ಷಣದ ಅಂತರವನ್ನು, ನಮ್ಮ ಪ್ರತಿಕ್ರಿಯೆ ರೂಪು‌ ಗೊಳ್ಳುವುದನ್ನು ಗ್ರಹಿಸಿದಾಕ್ಷಣ ಈ ಸ್ರವಿಸಿದ ರಾಸಾಯನಿಕಗಳು ಸ್ವಲ್ಪ ಶಾಂತವಾಗುತ್ತವೆ. ಜತೆಯಲ್ಲಿ ಇಷ್ಟು ಹೊತ್ತು ಅಮಿಗ್ಡೇಲಾ ಕೈಯಲ್ಲಿದ್ದ ನಿಯಂತ್ರಣವನ್ನು ಈಗ ವಿವೇಚನೆಯ prefrontal cortex ಎಂಬ ಭಾಗಕ್ಕೆ ವರ್ಗಾವಣೆಯಾಗುತ್ತದೆ.

ಅಂತರವನ್ನು ಗ್ರಹಿಸುವುದು ಎಂದರೆ ಪ್ರಿ-ಫ್ರಂಟಲ್ ಕೋರ್ಟೆಕ್ಸ್ - ವಿವೇಚನೆಯ ಭಾಗಕ್ಕೆ ಅವಕಾಶ ಮಾಡಿಕೊಡುವುದು. ಈಗಲೂ ನಮ್ಮೆದುರಿಗಿನ ಸ್ಥತಿ ಬದಲಾಗಿಲ್ಲ. ಆದರೆ ಈಗ ಪ್ರತಿಕ್ರಿಯೆ ತಯಾ ರಾಗುತ್ತಿರುವುದು ಆಜ್ಞಾ- ಪ್ರಿ-ಫ್ರಂಟಲ್ ಕೋರ್ಟೆಕ್ಸ್ ಭಾಗದಲ್ಲಿ. ಹಾಗಾಗಿ ಈಗ ಅದು ಹೆಚ್ಚಿನ ವಿವೇಚನೆಯದು, ಸಮಾಧಾನದ್ದು ಮತ್ತು ಐಚ್ಛಿಕ. ಈ ಗ್ಯಾಪ್ - ಅಂತರ - ಅದು ಖಾಲಿ ನಿರ್ವಾತ ವಲ್ಲ ಘಟನೆಯ ಜೊತೆಗಿನ ಸಂಬಂಧ ಹೊಸರೂಪ ಪಡೆಯಲು ಮಾಡಿಕೊಡುವ ಒಂದು ಅವಕಾಶ.

ಒಂದು, ಎರಡು, ಮೂರು, ನಾಲ್ಕು, ಐದು. ಇಷ್ಟೇ ಐಚ್ಛಿಕ ಅಂತರ ಕೊಟ್ಟರೆ ನಮ್ಮ ಕೆಲಸ ಮುಗಿಯಿತು. ಇದನ್ನು ಪ್ರಯೋಗಿಸಲು ಮುಂದಾದಾಗ ಮೊದಲೆರಡು ಬಾರಿ ಅಮೈಗ್ಡೇಲಾ ಬಿಟ್ಟುಕೊಡುವುದಿಲ್ಲ. ಕ್ರಮೇಣ ಅಭ್ಯಾಸ ಮಾಡಿಕೊಂಡರೆ, ನೆನಪಿಸಿಕೊಳ್ಳುತ್ತಲೇ ಇದ್ದರೆ ಈ ಚಿಕ್ಕ ವಿಚಾರಕ್ಕೆ ನಮ್ಮ ಬದುಕನ್ನೇ ಬದಲಿಸುವ ಶಕ್ತಿಯಿದೆ.

ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಮೇಲೆಯೇ ಜಗತ್ತು ಮತ್ತು ಅದರೊಟ್ಟಿಗಿನ ನಮ್ಮ ಸಂಬಂಧ ನಿಂತಿದೆ ಅಲ್ಲವೇ? ಈ ವಿಷಯದಲ್ಲಿ ನಾವೆಷ್ಟೇ ಚೌಕಾಸಿ ಮಾಡಲಿ, ಅದು ಬದಲಾಗುವು ದಿಲ್ಲ. ಅಂತೆಯೇ ಜಗತ್ತು ಮತ್ತು ಎರಡನೇ ವ್ಯಕ್ತಿ ಅದೆಂದಿಗೂ ನಮಗೆ ಬೇಕಾದಂತೆ ಬದಲಾಗುವು ದಿಲ್ಲ. ನನ್ನ ವೃತ್ತಿಯಲ್ಲಿ ದಿನನಿತ್ಯ ಕಂಪನಿಯ ವಿವಿಧ ದೇಶ, ಸ್ಥರ, ವಿಭಾಗಗಳವರ ಜತೆ ನಿರಂತರ ಸಂವಹಿಸಬೇಕಾಗುತ್ತದೆ.

ಯಾವ ಯಾವುದೋ ಹಿನ್ನೆಲೆ, ವಯಸ್ಸು, ಇತಿಹಾಸ, ಮಾತೃ ಭಾಷೆ, ಹುz ಇತ್ಯಾದಿ. ಹೊಸತಾಗಿ ಕಂಪನಿ ಸೇರಿದ ಎಂಜಿನಿಯರ್‌ನಿಂದ ಐದಾರು ಕಂಪನಿಯ ವೈಸ್ ಪ್ರೆಸಿಡೆಂಟ್ ವರೆಗೆ. ನನ್ನ ಇಷ್ಟು ವರ್ಷದ ವೃತ್ತಿಯಲ್ಲಿ ಗ್ರಹಿಸಿದ್ದೇನೆಂದರೆ - ಯಾರಿಗೆ ಪ್ರತಿಕ್ರಿಯಿಸುವುದು ಹೇಗೆಂದು ಗೊತ್ತೋ ಅವರು ಸುಲಭದಲ್ಲಿ ಮೇಲಕ್ಕೇರುತ್ತಾರೆ - ಮುಂಬಡ್ತಿ ಹೊಂದುತ್ತಾರೆ.

ಪ್ರತಿಕ್ರಿಯೆಯಲ್ಲಿ ಬುದ್ಧಿವಂತಿಕೆ ಒಂದು ವಿಷಯವೇ ಅಲ್ಲ. ಈಗಂತೂ ಎಲ್ಲರೂ ಬುದ್ಧಿವಂತರೇ. ವ್ಯತ್ಯಾಸ ಪ್ರತಿಕ್ರಿಯೆಯದ್ದು. ಕಂಪನಿಯ ಉನ್ನತ ಹುದ್ದೆಯಲ್ಲಿರುವ ಎಲ್ಲರಲ್ಲೂ ಕಾಣಿಸುವ ಸಾಮಾನ್ಯ ಗುಣ. ಅದು ಬಿಟ್ಟರೆ ಇಲ್ಲಿ ಬುದ್ಧಿವಂತಿಕೆಯ ಅಂತರ ಜಾಸ್ತಿ ಇರುವುದಿಲ್ಲ. ಅವರು ಎಂದೂ ಗಡಿಬಿಡಿ ಬಿದ್ದು ಸಿಕ್ಕಿದ್ದಕ್ಕೆ ಪ್ರತಿಕ್ರಿಯಿಸುವುದಿಲ್ಲ.

ಆ ಚಿಕ್ಕ ಅಂತರ - ಗ್ಯಾಪ್, ಅರೆಕ್ಷಣದ ಮೌನ, ಅರೆಕ್ಷಣದ ಸಮಾಧಾನ - ಅಲ್ಲಿಯೇ - ಆ ಕ್ರಿಯೆ ಪ್ರತಿಕ್ರಿಯೆಯ ನಡುವಿನ ಅಂತರದಲ್ಲಿ ಜೀವನದ ಸರ್ವ ಸಮಾಧಾನವೂ ಅಡಗಿದೆ. ನಮಗೆ ಇದೆಲ್ಲ ತಿಳಿದಿದ್ದರೂ ಯಾವತ್ತೂ ನೆನಪಾಗುವುದಿಲ್ಲ. ತಪ್ಪು ನಮ್ಮದಲ್ಲ - ಅಮಿಗ್ಡೇಲಾದ್ದು. ನಾವು ಮಾಡಬೇಕಾದದ್ದು ಇಷ್ಟೇ. ಕೇವಲ ಆ ಅಂತರವನ್ನು ಗುರುತಿಸಿಬಿಟ್ಟರಾಯ್ತು.

ಮರೆತುಹೋಗುತ್ತದೆ, ಆದರೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಅದುವೆ ಅಭ್ಯಾಸವಾಗಿ ಬಿಡುತ್ತದೆ. ಅಭ್ಯಾಸವಾದ ಮೇಲೆ ನಮಗೆ ಕೆಲಸವಿಲ್ಲ. ಕೆಲವೊಮ್ಮೆ ನಾವು ಮಾಡಬೇಕಾದ ಕೆಲಸ ಚಿಕ್ಕದೇ ಇರುತ್ತದೆ. ಗಡಿಬಿಡಿಯಲ್ಲಿ ಮರೆತು ಹೋಗಿರುತ್ತದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯನ್ನೇ ಕೊಡಬೇಕು, ಆಗಲೇ ಅದು ಸರಿ ಮತ್ತು ನಮಗೆ ಸಮಾಧಾನ, ಅಂತೆಯೇ ಒಂದು ಕಲಹ ಕಮ್ಮಿಯಾದರೂ ಅಷ್ಟೇ ಸಮಾಧಾನ.

ಈ ಬೌದ್ದ ಜಗತ್ತಿನ ವಿಚಾರಗಳಲ್ಲಿ ‘ಎರಡು ಬಾಣ’ದ ವಿಷಯ ಆಗಾಗ ಬರುತ್ತಿರುತ್ತದೆ. ಮೊದಲನೆ ಯ ಬಾಣ - ಸಂಭವಿಸುವ ಘಟನೆ. ಅದು ನಮ್ಮ ಕೈಯಲ್ಲಿಲ್ಲ. ಎರಡನೆಯದು - ನಮಗೆ ನಾವೇ ಚುಚ್ಚಿಕೊಳ್ಳುವ ಬಾಣ. ಆ ಬಾಣ ಮಾತ್ರ ಐಚ್ಛಿಕ !

ಶಿಶಿರ್‌ ಹೆಗಡೆ

View all posts by this author