ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Hunj Column: ಮಳೆ ನಿಂತರೂ ಮರದ ಹನಿ ಹನಿಯಂತೆ ರೇವಣ್ಣಸಿದ್ಧ !

ರೇವಣಸಿದ್ಧರ ಬಗ್ಗೆ ಇರುವ ಚಾರಿತ್ರಿಕ ಗ್ರಂಥ, ಶಾಸನ, ಪುರಾಣ ಮತ್ತು ಜನಪದ ಕಥನಗಳ ಆಧಾರದ ಮೇಲೆ ಹಿಂದಿನ ಲೇಖನಗಳಲ್ಲಿ ಸಮಗ್ರವಾಗಿ ಓದಿದ್ದೀರಷ್ಟೇ. ಓರ್ವ ದಕ್ಷ ಐತಿಹಾಸಿಕ ಸಂಶೋಧಕನು ತನ್ನ ಸಂಶೋಧನೆಯ ವಿಷಯದ ಕುರಿತಾದ ಎಲ್ಲಾ ಆಕರಗಳನ್ನು ವಾಸ್ತವಾಂಶದ ತಾರ್ಕಿಕ ನೆಲೆಯಲ್ಲಿ ಹೀಗಿದ್ದರೆ ಹೇಗೆ ಎನ್ನುವ ಸಂಭಾವ್ಯತೆ (probability) ಪ್ರತಿಶತದ ಮೂಲಕ ತಾರ್ಕಿಕ ನೆಲೆಗಟ್ಟನ್ನು ಹೇಳಬಲ್ಲನೇ ಹೊರತು ಇದು ಹೀಗೆಯೇ ಎಂದು ಬೆರಳು ತೋರಿಸಿ ನ್ಯಾಯಾಧೀಶರಂತೆ ಸುತ್ತಿಗೆಯನ್ನು ಮೇಜಿಗೆ ಕುಟ್ಟಿ ತೀರ್ಪನ್ನು ಕೊಡಲಾರನು.

ವಚನಾಮೃತ (ಭಾಗ-1)

ರವಿ ಹಂಜ್

ರೇವಣಸಿದ್ಧರ ಬಗ್ಗೆ ಇರುವ ಚಾರಿತ್ರಿಕ ಗ್ರಂಥ, ಶಾಸನ, ಪುರಾಣ ಮತ್ತು ಜನಪದ ಕಥನಗಳ ಆಧಾರದ ಮೇಲೆ ಹಿಂದಿನ ಲೇಖನಗಳಲ್ಲಿ ಸಮಗ್ರವಾಗಿ ಓದಿದ್ದೀರಷ್ಟೇ. ಓರ್ವ ದಕ್ಷ ಐತಿಹಾಸಿಕ ಸಂಶೋಧಕನು ತನ್ನ ಸಂಶೋಧನೆಯ ವಿಷಯದ ಕುರಿತಾದ ಎಲ್ಲಾ ಆಕರ ಗಳನ್ನು ವಾಸ್ತವಾಂಶದ ತಾರ್ಕಿಕ ನೆಲೆಯಲ್ಲಿ ಹೀಗಿದ್ದರೆ ಹೇಗೆ ಎನ್ನುವ ಸಂಭಾವ್ಯತೆ ( probability) ಪ್ರತಿಶತದ ಮೂಲಕ ತಾರ್ಕಿಕ ನೆಲೆಗಟ್ಟನ್ನು ಹೇಳಬಲ್ಲನೇ ಹೊರತು ಇದು ಹೀಗೆಯೇ ಎಂದು ಬೆರಳು ತೋರಿಸಿ ನ್ಯಾಯಾಧೀಶರಂತೆ ಸುತ್ತಿಗೆಯನ್ನು ಮೇಜಿಗೆ ಕುಟ್ಟಿ ತೀರ್ಪನ್ನು ಕೊಡಲಾರನು.

ಇದೇ ತತ್ವದನ್ವಯ ನಾನು ರೇವಣರ ಬಗ್ಗೆ ಇರುವ ಎಲ್ಲ ವಿಷಯಗಳನ್ನು ಓದುಗರ ಮುಂದಿಟ್ಟಿದ್ದೇನೆ. ಸುತ್ತಿಗೆಯನ್ನು ಮೇಜಿಗೆ ಕುಟ್ಟಿ ತೀರ್ಪು ಕೊಟ್ಟಿದ್ದ ಜನಪದ ತಜ್ಞ, ಸಮ್ಮೋ ಹನ ತಜ್ಞ ಕಂ ಸಂಶೋಧಕ, ಮತ್ತು ಪ್ರಮುಖ ಉದಯೋನ್ಮುಖ ಸಂಶೋಧಕರನೇಕರ ಸಂಶೋಧನೆಗಳ ಪೊಳ್ಳನ್ನೂ ಓದುಗರಿಗೆ ಈ ಮೂಲಕ ತೋರಿದ್ದೇನೆ. ಆದರೆ ಇದು ರೇವಣ ಸಿದ್ಧನ ಭಕ್ತರಿಗಿಂತ ಈ ಮೂವರು ಸಂಶೋಧಕರ ಮತ್ತವರ ನೂರ್ಮಡಿ ಪ್ರತಿಬಿಂಬಿ ಸಂಶೋಧಕರ ಚಿತ್ತವನ್ನು ಕಂಗೆಡಿಸಿಬಿಟ್ಟಿದೆ.

ಎಲ್ಲಾ ತರ್ಕಗಳನ್ನೂ ಗಾಳಿಗೆ ತೂರಿ ಇವರು ಕಟ್ಟಕಡೆಗೆ ಬಂದು ನಿಂತಿರುವುದು, ಹಂಜನು ಕಲ್ಲಿನಿಂದ ಉದ್ಭವವಾದ ರೇವಣಸಿದ್ಧ ಉರ್ಫ್- ರೇಣುಕನೇ ಸತ್ಯ ಎನ್ನುತ್ತಾನೆ. ಕಲ್ಲಿನಿಂದ ಯಾರಾದರೂ ಹುಟ್ಟಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ! ನನ್ನ ಲೇಖನಗಳಲ್ಲಿ ವ್ಯಕ್ತಿಗಳು ಕಲ್ಲಿನಿಂದ ಹುಟ್ಟುವ ಸಾಮರ್ಥ್ಯ ಸತ್ಯವೆಂದು ಹೇಳಿರುವುದು ಎಲ್ಲಿದೆಯೋ ಕಾಣೆ!

ವಿಶ್ವಗುರು ಎನ್ನುವ ಭಾರತ ದೇಶದ ತಂತ್ರಜ್ಞಾನದ ಮುಕುಟಮಣಿ ಬೆಂಗಳೂರನ್ನು ಹೊಂದಿರುವ ಕರ್ನಾಟಕ ರಾಜ್ಯ ಸರಕಾರವು ದೆವ್ವ ಭೂತ ಪ್ರೇತಗಳನ್ನು ಬಿಡಿಸುವ, ಮುಗ್ಧರನ್ನು ಶೋಷಿಸುವ ವ್ಯಕ್ತಿಗೆ ಪ್ರಶಸ್ತಿ ಕೊಟ್ಟಿರುವುದನ್ನು ನಾನು ಖಂಡಿಸಿರುವುದನ್ನು ಶಿರಹಟ್ಟಿಮಠ ಎನ್ನುವವರು ಇದು ವೈಯಕ್ತಿಕ ದಾಳಿ ಎಂದರು.

ಇದನ್ನೂ ಓದಿ: Ravi Hunj Column: ಬಿಜ್ಜರಗಿಯವರು ಬಸವಣ್ಣನ ಬಗ್ಗೆ ಏನು ಸಂಶೋಧನೆ ಮಂಡಿಸಿದ್ದಾರೆ ?

ಸತ್ಯವಿರುವುದು ಶಾಸನಗಳಲ್ಲಲ್ಲ, ತಳ ಸಮುದಾಯದ ಉಸಿರಿನಲ್ಲಿ ಎಂದು ಕಣ್ಣೀರ ಕತೆಹೇಳಿದರು. ಜನಪದ ತಜ್ಞರು ಕಲ್ಲುಮುಳ್ಳಿನ ಹಾದಿಯಲ್ಲಿ ಸವೆದ ಪರಿ ಅಪಾರ ಎಂದರು. ಎಲ್ಲಿಯೂ ವಾಸ್ತವಿಕ ತರ್ಕವನ್ನು ಈ ರಶ್‌ಮೋರ್ ವಿಶ್ವವಿದ್ಯಾಲಯದಲ್ಲಿ ಡಾಕ್ಟೋರಲ್ಸಂ ಶೋಧನಾ ತಜ್ಞರು ಹೇಳಲಿಲ್ಲ. ಜನಪದೀಯ ಮೌಖಿಕ ಇತಿಹಾಸವೇ ಸತ್ಯ ಶಾಸನಗಳು ರಾಜರ ದರ್ಪದ ತೀಟೆಗಳೆಂಬಂತೆ ತರ್ಕಕ್ಕೆ ಒರೆಯ ಕಟ್ಟಿ ತಾವು ಬಸವಣ್ಣನ ಅನುಯಾಯಿ ಗಳು ಎಂಬ ಮುಖವಾಡದಲ್ಲಿ ಮುಖವನ್ನು ಅಡಗಿಸಿಕೊಂಡರು.

ಜನಸಾಮಾನ್ಯರ ಕುರಿತಾದ ವೀರಗಲ್ಲು, ವೇಶ್ಯೆಯರು ಕಟ್ಟಿಸಿರುವ ಕೆರೆ ಬಾವಿ ದೇವಸ್ಥಾನ ಗಳ ಕುರಿತಾದ ಶಾಸನಗಳನ್ನು ನಿವಾಳಿಸಿ ಎಲ್ಲ ಶಾಸನಗಳೂ ಅಮಾನ್ಯ ಎನ್ನುವಂತೆ ಇವರೂ ಸಹ ಮತ್ತದೇ ಕಲ್ಲಿನಿಂದ ಹುಟ್ಟುವ ಬಗೆಯನ್ನೇ ಪ್ರಶ್ನಿಸಿದ್ದಾರೆ.

ಕಲ್ಲಿನಲ್ಲಿ ಹುಟ್ಟುವ ಬಗೆಯನ್ನು ಇವರಂತೆಯೇ ‘ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’ ಎಂಬ ಕವಿವಾಣಿಯನ್ನು ಈ ಬಲೆಯಲ್ಲಿ ಮೀನುಗಳು ಇವೆಯೇ ಎಂದೋ, ಕಾಳಿದಾಸಾದಿ ಕವಿಪುಂಗವರೆ ಹೆಣ್ಣಿನ ಕಣ್ಣುಗಳನ್ನು ಕಮಲಕ್ಕೆ ತುಟಿಗಳನ್ನು ತೊಂಡೆಗೆ, ಮೂಗನ್ನು ಸಂಪಿಗೆಗೆ... ಇತ್ಯಾದಿಯಾಗಿ ವರ್ಣಿಸಿರುವುದನ್ನು ವಿತಂಡವಾಗಿ ಪ್ರಶ್ನಿಸಲಾಗು ವುದೇ! ಈ ಕುರಿತು ಬಸವ ಮಂಟಪ ಅಂಕಣದಲ್ಲಿ ಈ ಹಿಂದೆಯೇ ಬರೆದಿದ್ದರೂ ರೇವಣ ಸಿದ್ಧರ ಈ ಲೇಖನದಲ್ಲಿ ಇನ್ನೊಮ್ಮೆ ಸಂಕ್ಷಿಪ್ತವಾಗಿ ಗಮನಿಸೋಣ.

ಭಾರತದಲ್ಲಿನ ಅವೈದಿಕರ ಹಿರಿಯರ ಹಬ್ಬ, ಮತ್ತು ವೈದಿಕರ ಪಿತೃಪಕ್ಷಗಳಂತೆಯೇ ಚೈನಾದ ಕಿಂಗ್ಮಿಂಗ್, ಜಪಾನಿನ ಬಾನ್, ಕೊರಿಯಾದ ಜೇಸಾ, ಥಾಯ್ಲೆಂಡಿನ ಫೌನ್ ಫೀ, ಯುರೋಪಿನ ಆಲ್ ಸೇಂಟ್ಸ್ ಡೇ/ಸೇಂಹೈನ್/ಹ್ಯಾಲೋವೀನ್, ಮೆಕ್ಸಿಕೋದ ದಿಯಾ ದೆ ಮುಯೆರ್ತೋ (ಮರಣಿಸಿದವರ ದಿನ) ಹಬ್ಬಗಳು ಹಿರಿಯರನ್ನು ದೈವತ್ವಕ್ಕೇರಿಸಿ ಅವರಿಗೆ ಅತಿಮಾನವ ಶಕ್ತಿಗಳಿದ್ದವೆಂದು ಸೃಜಿಸಿ ಪೂಜಿಸುವ ಆಚರಣೆಗಳಾಗಿವೆ.

ppp  30

ಇದು ಮಾನವನ ಉಗಮದಿಂದಲೂ ಸಂಪರ್ಕರಹಿತವಾಗಿ ಅತೀಂದ್ರಿಯ ಶಕ್ತಿಯಂತೆ ಜಾಗತಿಕವಾಗಿದೆ. ಭಾರತೀಯರ ಆದಿದೈವ ಶಿವನಲ್ಲದೆ ಇಂದು ಭಾರತೀಯರು ದೇವರೆಂದು ಪೂಜಿಸುವ ಪ್ರತಿಯೊಂದು ದೇವಾನುದೇವತೆಗಳು ಹಿಂದೊಮ್ಮೆ ಆಗಿಹೋದ ಮಾನವರೇ ಆಗಿದ್ದಾರೆ ಅಥವಾ ಅಂತಹ ಮಾನವರ ಸೂರ್ತಿಯ ಕಾಲ್ಪನಿಕ ಪಾತ್ರಗಳೇ ಆಗಿವೆ.

ಲಿಂಗದಿಂದ ಉದ್ಭವಿಸಿದ ರೇಣುಕರ ಪೌರಾಣಿಕ ಕಥನದಂತೆಯೇ ಗ್ರೀಕರು ಆರಾಧಿಸುವ ಜಿಯಾಸನ ತಲೆಯಿಂದ ಅಥೀನ, ಸಮುದ್ರದ ನೊರೆಯಿಂದ ಅಫ್ರೋಡೈಟ್, ಮೊಟ್ಟೆ‌ ಯಿಂದ ಹೆಲೆನ್ ಅಲ್ಲದೆ ಅಕ್ಷತ ಯೋನಿಯಲ್ಲಿ ಜನಿಸಿದ ಜೀಸಸ್ ಕ್ರೈ ಆರಾಧಿಸುವ ಕ್ರಿಶ್ಚಿಯನ್ನರು ಸಹ ಇಂತಹುದೇ ನಂಬಿಕೆಯವರು!

ಹೀಗೆ ಮಹಾಮಹಿಮರ ಹುಟ್ಟಿನ ಅಸ್ವಾಭಾವಿಕ ರೋಚಕಕತೆಗಳು ವಿಶ್ವವ್ಯಾಪಿಯಾಗಿವೆ. ಇದೆಲ್ಲದರ ಉದ್ದೇಶವೂ ಸಾಧನೆಗೈದ ಮಹಾಮಹಿಮರನ್ನು ದೈವತ್ವಕ್ಕೇರಿಸಿ ಆ ಮೂಲಕ ಅವರನ್ನು ಚರಿತ್ರೆಯಲ್ಲಿ ಮತ್ತು ಜನಮಾನಸದಲ್ಲಿ ಭಕ್ತಿಪೂರ್ವಕವಾಗಿ ಚಿರಸ್ಥಾಯಿಯಾಗಿ ಉಳಿಸುವುದು.

ಪ್ರಮುಖವಾಗಿ ಈ ಮಹಾಮಹಿಮರು ನಮ್ಮ ನಿಮ್ಮಂತಹ ಯಕಶ್ಚಿತ್ ಹುಲುಮಾನವರಲ್ಲ, ಪೂಜನೀಯರು, ಅವತಾರ ಪುರುಷರು ಎಂದು ನಿರೂಪಿಸಿ ಅವರ ಎಲ್ಲಾ ಪೂರ್ವಾಶ್ರಮ ವನ್ನು ಅಳಿಸುವ ಸಕಾರಣವಾಗಿದೆ. ಹಾಗಾಗಿಯೇ ‘ನದಿ ಮೂಲ ಋಷಿ ಮೂಲ ಹುಡುಕ ಬೇಡ’ ಎಂಬ ನಾಣ್ಣುಡಿ ಇರುವುದು. ಇದೇ ರೇಣುಕರು ಲಿಂಗದಿಂದ ಉದ್ಭವಿಸಿದ ಕಥನದ ಹಿಂದಿನ ಉದ್ದೇಶ.

ಇನ್ನು ರೇವಣರ ಕುರಿತಾಗಿ ಹಿಂದಿನ ಲೇಖನಗಳಲ್ಲಿ ಶಾಸನ, ಪುರಾಣ, ಗ್ರಾಂಥೈತಿಹಾಸ ಮತ್ತು ಜನಪದೀಯ ಡೊಳ್ಳಿನ ಪದಗಳನ್ವಯ ವಿಶ್ಲೇಷಿಸಿದ್ದರೂ ಮತ್ತಷ್ಟು ಆಳಕ್ಕ ರೇವಣನು ನಮ್ಮ ಜಾತಿಯವನು ಎಂದು ಹಕ್ಕೊತ್ತಾಯ ಮಂಡಿಸುತ್ತಿರುವವರ ಪರವಾಗಿ ಅವರದೇ ಹಾಲುಮತ ಪುರಾಣವನ್ನೇ ತೆಗೆದುಕೊಂಡು ನೋಡೋಣ.

ಕ್ರಿ.ಶ.1910ರಲ್ಲಿ ಶ್ರೀ ಬಸವಣ್ಣೆಪ್ಪ ನೀಲಪ್ಪ ಶಿಳವಳ್ಳಿ ಇವರು ‘ಹಾಲುಮತದ ಪುರಾಣ’ ಎಂಬ ಪುಸ್ತಕವನ್ನು ಧಾರವಾಡದ ಕರ್ಣಾಟಕ ಬುಕ್ ಡಿಪೋ ಮುದ್ರಾಲಯ ಇವರಿಂದ ಪ್ರಕಟಿಸಿದ್ದಾರೆ. ಈ ಪುರಾಣದ ಪದ್ಯಗಳ ಸಂಧಿ 1ರಿಂದ ಸಂಧಿ 5ರ ಪ್ರಕಾರ: ಶಿವನು ರೇವಣ ಸಿದ್ಧನಾಗಿ ಭೂಲೋಕಕ್ಕೆ ತೆರಳಿ ಆದಿಗೊಂಡನ ಬಳಿ ಐದು ಮೊಳ ಭೂದಾನವನ್ನು ಬೇಡಿ ತೆಗೆದುಕೊಳ್ಳುತ್ತಾನೆ.

ಆದಿಗೊಂಡನಿಂದ ಪಡೆದ ಐದು ಮೊಳ ಭೂಮಿಯಲ್ಲಿ ಒಂದು ಗುಹೆಯನ್ನು ಮಾಡಿ ಅಲ್ಲಿ ತನ್ನ ಶಾಪದಿಂದ ಕುರಿ ಮೇಕೆಗಳಾಗಿದ್ದ ದೇವತೆಗಳನ್ನು ರೇವಣಸಿದ್ಧರೂಪಿ ಶಿವನು ಇರಿಸು ತ್ತಾನೆ. ನಂತರ ಗವಿಯ ಬಾಗಿಲನ್ನು ಮುಚ್ಚಿ ಅದರ ಮೇಲೊಂದು ಮುತ್ತುಗದ ಮರವನ್ನು ನೆಟ್ಟು ಲೋಕಸಂಚಾರಕ್ಕೆ ನಡೆಯುತ್ತಾನೆ.

ಕೆಲವು ಕಾಲದ ನಂತರೆ ರೇವಣಸಿದ್ದನು ಲಕ್ಷದೇಶವ ತಿರುಗಿ ದಕ್ಷಿಣ ದಿಕ್ಕಿಗೆ ಬರುತ್ತ ಹಿರವೂ ರಲ್ಲಿ (ಸರವೂರು) ಮುದ್ದುಗೊಂಡ ಮತ್ತವನ ಹೆಂಡತಿ ಸುಗ್ಗಲೆಯನ್ನು ಮನೆಯ ಮುಂದೆ ‘ಶಿವಧರ್ಮಭಿಕ್ಷ’ ಎಂದು ಬೇಡುತ್ತಾನೆ. ತಲೆಯಲ್ಲಿ ಜಡೆ, ಕೈಯಲ್ಲಿ ತ್ರಿಶೂಲ ಹಿಡಿದು ಕೆಂಡಗಣ್ಣಿನ ಸಿದ್ಧನಾಗಿ ಶಿವನಂತೆ ಕಂಡ ರೇವಣಸಿದ್ಧನನ್ನು ಸುಗ್ಗಲೆಯು, ‘ಹೊಟ್ಟೆಯಲ್ಲಿ ಶಿಶುವಿಲ್ಲ, ಕೊಟ್ಟು ಪಾಲಿಸು’ ಎಂದು ಬೇಡಿಕೊಳ್ಳುತ್ತಾಳೆ.

ಹಸ್ತವನ್ನು ಮಸ್ತಕದ ಮೇಲಿಟ್ಟು ಕಂದನಾಗಲಿ ಎಂದು ಹರಸುತ್ತಾನೆ. ಆಗ ಮೂರು ಬೆರಳ ಗಲದ ಬಟ್ಟೆಯನ್ನು ಸುಗ್ಗಲೆಯು ನುಂಗಲು ಅದು ಶಿಶುವಿಗೆ ಕೌಪೀನವಾಗಿ ಮರುಳು ಸಿದ್ಧೇಶನು ಆಕೆಯ ಕಿವಿಯಲ್ಲಿ ಜನಿಸುತ್ತಾನೆ. ಇತ್ತ ರೇವಣಸಿದ್ಧನಿಗೆ ಐದುಮೊಳ ಭೂಮಿ ಯನ್ನು ಕೊಟ್ಟ ಆದಿಗೊಂಡನ ಆರು ಮಕ್ಕಳಲ್ಲಿ ಕಡೆಯವನಾದ ಪದ್ಮಗೊಂಡನು ಉಂಡಾಡಿ ಗುಂಡನಾಗಿರುತ್ತಾನೆ.

ಅವನ ಸೋದರರು ನಮ್ಮಂತೆ ಕೆಲಸಮಾಡು ಎಂದು ಹೊಲದಲ್ಲಿ ಬೆಳೆದಿದ್ದ ಗಿಡಗಂಟೆ ಗಳನ್ನು ಕಡಿಯುವ ಕೆಲಸಕ್ಕೆ ಹಚ್ಚುತ್ತಾರೆ. ಕೆಲಸ ಮಾಡುತ್ತ ಪದ್ಮಗೊಂಡನು ರಾತ್ರಿ ಹೊಲದಲ್ಲಿಯೇ ಮಲಗಿ ಬೆಳಿಗ್ಗೆ ಎದ್ದು ಕಲ್ಯಾಣಕ್ಕೆ ಬಸವಣ್ಣನಲ್ಲಿಗೆ ಹೋಗುತ್ತಾನೆ. ಅಲ್ಲಿ ಬಸವೇಶ್ವರನು ಅವನಿಗೆ ಭೂಮಿಯನ್ನು ಕೊಡಿಸುತ್ತಾನೆ. ಆ ಭೂಮಿಯನ್ನು ಪದ್ಮಗೊಂಡ ನು ಹರಗುತ್ತಾ ಇದ್ದು ಅಡ್ಡ ಬಂದ ಮುತ್ತುಗದ ಮರವನ್ನು ಕಡಿಯುತ್ತಾನೆ.

ಕೊಡಲಿಯ ಪೆಟ್ಟಿನ ಅಬ್ಬರಕ್ಕೆ ಭೂಮಿಯು ಬಾಯಿದೆರೆಯಲು ಗವಿಯಿಂದ ಕುರಿಯ ಹಿಂಡು ಹೊರಡುವುದನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಇದನ್ನು ಮಂತ್ರಿ ಬಸವೇಶ್ವರನಿಗೆ ಹೇಳಿದಾಗ ಅವನು ಉಪ್ಪರಿಗೆಯ ಮೇಲೆ ನಿಂತು ನೋಡಿದಾಗ ಆಕಾಶವೇ ಹರಿದು ಬಿದ್ದಿತೇನೋ ಎಂಬ ಹಾಗೆ ಅಸಂಖ್ಯ ಕುರಿಗಳು ಕಾಣುತ್ತವೆ.

ಆಗ ಬಸವಣ್ಣನು, ‘ಇವು ಪರಶಿವನ ನಿಧಿ, ನೀನು ಕುರಿಗಳನ್ನು ಮೇಯಿಸಿಕೊಂಡು ಹೋಗು’ ಎಂದು ಪದ್ಮಗೊಂಡನಿಗೆ ಅಪ್ಪಣೆ ಮಾಡುತ್ತಾನೆ. ಪದ್ಮಗೊಂಡನು ಏಳು ದಿವಸ ಕುರಿಯ ಹಿಂಡನ್ನು ಹೊಡೆದುಕೊಂಡು ಹೋಗುತ್ತಾ ಅನ್ನ ನೀರಿಲ್ಲದೆ ಬಹಳ ಬಳಲಿಕೆಯಿಂದ ಇರಲು ಅವನಲ್ಲಿ ರೇವಣಸಿದ್ದನು ಬಟ್ಟಲನ್ನು ಹಿಡಿದು ಭಿಕ್ಷೆ ಬೇಡುತ್ತಾನೆ.

ಪದ್ಮಗೊಂಡನು ‘ಊರಿಲ್ಲ ಮನೆಯಿಲ್ಲ ನೀರಿಲ್ಲದಲ್ಲಿ | ಈ ಅರಣ್ಯದೊಳಗೆ ಭಿಕ್ಷವನು ಸಾರಿ ಕೇಳ್ವುದು ನಿನಗುಚಿತನೆ | ನನಗಶನ ಆರೇಳುದಿನವಾಯಿತ?’ ಎನ್ನುತ್ತಾನೆ. ಆಗ ರೇವಣರು ಕುರಿಯ ಹಾಲಿನಿಂದ ಗಿಣ್ಣವನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟು, ಗಿಣ್ಣವನ್ನು ಮಾಡಿಸಿ ತಾನೂ ಸೇವಿಸಿ ‘ಅಗ್ನಿಯಿದ್ದಲ್ಲಿ ಅಡಿಗೆ ಯನ್ನು ಮಾಡಿ ಉಂಡು ಸುಖವಾಗಿ ನಡೆ’ ಎಂದು ಆಶೀರ್ವದಿಸಿ ಹೋಗುತ್ತಾನೆ.

ಪದ್ಮಗೊಂಡನಿಗೆ ಬೆಂಕಿಯನ್ನು ಕೊಟ್ಟ ಚನ್ನಮ್ಮ ಎಂಬಾಕೆಯ ಜೊತೆ ಮೈತ್ರಿ ಬೆಳೆದು ರೇವಣಸಿದ್ಧೇಶ್ವರರ ಬಳಿ ತೆರಳಿ ಅವರ ಆಶೀರ್ವಾದ ಪಡೆದು ಮದುವೆಯಾಗುತ್ತಾರೆ. ಸಂಸಾರಿಯಾದ ಪದ್ಮಗೊಂಡನು ಕುರಿಯ ಹಾಲು, ಮೊಸರು, ತುಪ್ಪ ಇವುಗಳನ್ನು ಮಾರಿ ಕೊಂಡಿರಲು ಬಿಜ್ಜಳನು ಬೇಂಟೆಯಾಡಲಿಕ್ಕೆ ಹೋದಾಗ ಪದ್ಮಗೊಂಡನು ಬಿಜ್ಜಳನ ಪರಿವಾರಕ್ಕೆ ಭೋಜನ ಮಾಡಿಸುತ್ತಾನೆ. ಆಗ ಬಿಜ್ಜಳ ಪರಿವಾರವು ಇವನು ಕಲ್ಯಾಣದಲ್ಲಿ ಇದ್ದರೆ ಅನುಕೂಲವೆಂದು ಅವನನ್ನು ಕಲ್ಯಾಣಕ್ಕೆ ಕರೆದುಕೊಂಡು ಬರುತ್ತಾರೆ.

ಹೀಗೊಮ್ಮೆ ಕಲ್ಯಾಣದಲ್ಲಿ ಬಿರುಗಾಳಿ ಬೀಸಿದ ಕಾರಣ ಹೊರವಲಯದಲ್ಲಿದ್ದ ಬಹಳಷ್ಟು ಕುರಿಗಳು ಸಾಯುತ್ತವೆ. ಅದೇ ರೀತಿ ಊರೊಳಗೆ ಒಂದು ಗೂಳಿ ಬಸವನೂ ಸತ್ತಿರುತ್ತದೆ. ಅದನ್ನು ಹೂಳಲಿಕ್ಕೆ ಊರ ಹೊರಗೆ ಮೆರವಣಿಗೆಯಿಂದ ತರುತ್ತಿರುವ ಕಲ್ಯಾಣವಾಸಿ ಗಳನ್ನು ರೇವಣಸಿದ್ದೇಶ್ವರನು ತಡೆದು ನಿಮ್ಮ ಬಸವನ ಪ್ರಾಣವನ್ನು ನೀವು ಪಡೆಯಿರಿ.

ನಾವು ಸತ್ತ ಕುರಿಯನ್ನು ಬದುಕಿಸಿ ಪವಾಡವನ್ನು ತೋರುತ್ತೇನೆ ಎಂದು ಸತ್ತ ಕುರಿಗಳನ್ನು ಬದುಕಿಸುತ್ತಾನೆ. ಈ ಮೂಲಕ ಶರಣರು ಕುರುಬರನ್ನೊಳಗೊಂಡು ಕಲ್ಯಾಣಪಟ್ಟಣದ ಕುರಿಯ ಹಾಲು, ಮೊಸರು, ಬೆಣ್ಣೆ ವ್ಯಾಪಿಸುತ್ತವೆ. ಹೀಗೆ ಕುರಿಗಳನ್ನು ಕೊಟ್ಟು, ಅವುಗಳಿಂದ ಬದುಕು ಕಟ್ಟಿಕೊಳ್ಳಲು ಕಲಿಸಿದ ರೇವಣಸಿದ್ಧೇಶ್ವರನು ಕುರುಬರಿಗೆ ಮನೆದೇವನಾಗಿ ಗುರುವೆಂದು ಪೂಜಿಸಲ್ಪಡುತ್ತಾನೆ!