ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಲ್ಚೆಂಡಿನ ಮಹಾಸಮರ

ಮುಂದಿನ ಒಂದು ತಿಂಗಳ ಕಾಲ ನ್ಯೂಯಾರ್ಕ್, ಲಾಸ್ ಎಂಜಲೀಸ್, ಟೊರೊಂಟೊ ಮತ್ತು ಮೆಕ್ಸಿಕೋ ನಗರದ ಐತಿಹಾಸಿಕ ಕ್ರೀಡಾಂಗಣಗಳು ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರ ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿವೆ. ಈ ಸಲ ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಬಹುಮಾನದ ಮೊತ್ತವನ್ನೂ ಫಿಫಾ ಈ ಸಲ ಹೆಚ್ಚಿಸಿದೆ.

ನರೇಂದ್ರ ಪಾರೆಕಟ್

ವಿಶ್ವದ ಕೋಟ್ಯಂತರ ಫುಟ್ಬಾಲ್ ಪ್ರೇಮಿಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬೀಳುತ್ತಿದೆ. ನಾಳೆಯಿಂದ (ಜೂ.11) 23ನೇ ಆವೃತ್ತಿಯ ಜಗತ್ತಿನ ಅತೀ ದೊಡ್ಡ ಕ್ರೀಡಾ ಹಬ್ಬ ‘ಫಿಫಾ ವಿಶ್ವಕಪ್-2026’ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದ 16 ಪ್ರಮುಖ ನಗರಗಳಲ್ಲಿ ಆರಂಭವಾಗಲಿದೆ.

ಮುಂದಿನ ಒಂದು ತಿಂಗಳ ಕಾಲ ನ್ಯೂಯಾರ್ಕ್, ಲಾಸ್ ಎಂಜಲೀಸ್, ಟೊರೊಂಟೊ ಮತ್ತು ಮೆಕ್ಸಿಕೋ ನಗರದ ಐತಿಹಾಸಿಕ ಕ್ರೀಡಾಂಗಣಗಳು ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾ ರರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿವೆ. ಈ ಸಲ ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಬಹುಮಾನದ ಮೊತ್ತವನ್ನೂ ಫಿಫಾ ಈ ಸಲ ಹೆಚ್ಚಿಸಿದೆ.

ಒಟ್ಟು 6,238.42 ಕೋಟಿ ರು.ಬಹುಮಾನದ ಹಣವನ್ನು ಫಿಫಾ ನೀಡಲಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಇತರೆ ಖರ್ಚುಗಳನ್ನು ಸೇರಿಸಿದರೆ, ಒಟ್ಟು ಮೊತ್ತ 7400 ಕೋಟಿಗೂ ಹೆಚ್ಚು ಆಗಲಿದೆ. ಈ ಬಾರಿ ವಿಶ್ವ ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ 417.50 ಕೋಟಿ ರು. ಬಹುಮಾನ ಸಿಗಲಿದೆ, ಅಂದರೆ ಕಳೆದ ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾಗೆ ಸಿಕ್ಕಿದ್ದಕ್ಕಿಂತ 76 ಕೋಟಿ ಹೆಚ್ಚು. 2ನೇ ಸ್ಥಾನ ಪಡೆಯುವ ತಂಡಕ್ಕೆ 288 ಕೋಟಿ, 3ನೇ ಸ್ಥಾನಕ್ಕೆ 254.675 ಕೋಟಿ ಮತ್ತು 4ನೇ ಸ್ಥಾನಕ್ಕೆ 237 ಕೋಟಿ ರೂಪಾಯಿ ಸಿಗಲಿದೆ.

ಕ್ವಾರ್ಟರ್ ಫೈನಲ್ ಮತ್ತು ಪ್ರೀ-ಕ್ವಾರ್ಟರ್ ಫೈನಲ್ ತಲುಪಿದ ತಂಡಗಳಿಗೂ ಭರ್ಜರಿ ಹಣ ಸಿಗಲಿದೆ. ವಿಶ್ವಕಪ್ ಫುಟ್ಬಾಲ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ಕನಿಷ್ಠ 87.5 ಕೋಟಿ ಸಿಗಲಿದೆ.

ಇದನ್ನೂ ಓದಿ: FIFA Referees: ಫಿಫಾ ರೆಫ್ರಿಗಳ ಪಟ್ಟಿಯಲ್ಲಿ ಭಾರತದ ಮೂವರಿಗೆ ಸ್ಥಾನ

ಅತೀ ಹೆಚ್ಚು ಗೋಲು

ಒಂದೇ ಫಿಫಾ ವಿಶ್ವಕಪ್ ಋತುವಿನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ವಿಶಿಷ್ಟ ದಾಖಲೆ ಫ್ರಾನ್ಸ್‌ನ ಜಸ್ಟ್ ಫಾಂಟೈನ್ ಅವರ ಹೆಸರಿನಲ್ಲಿದೆ. ಅವರು 1958ರ ವಿಶ್ವಕಪ್ ಆವೃತ್ತಿ ಒಂದರಲ್ಲಿ ಬರೋಬ್ಬರಿ 13 ಗೋಲುಗಳನ್ನು ಗಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ, ಅವರು ತಮ್ಮ ವೃತ್ತಿಜೀವನದಲ್ಲಿ ಒಂದೇ ವಿಶ್ವಕಪ್ ಆಡಿದ್ದರು.

ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ

೨೦೨೨ರ ಕತಾರ್ ವಿಶ್ವಕಪ್‌ನಲ್ಲಿ ಅರ್ಜೆಂಟೀನಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದ ಲಿಯೋನೆಲ್ ಮೆಸ್ಸಿ, ಈಗ ಮತ್ತೊಮ್ಮೆ ಅಖಾಡ ಕ್ಕಿಳಿಯುತ್ತಿದ್ದಾರೆ. ಸದ್ಯ 38ನೇ ವಯಸ್ಸಿನ ಇವರು ದಾಖಲೆಯ 6ನೇ ಬಾರಿಗೆ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಅರ್ಜೆಂಟೀನಾ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿ ಕೊಳ್ಳಲು ಮೆಸ್ಸಿ ಅವರ ನಾಯಕತ್ವ ಮತ್ತು ಪ್ರದರ್ಶನ ಅತ್ಯಂತ ನಿರ್ಣಾಯಕವಾಗಲಿದೆ.

ಲ್ಯಾಮಿನ್ ಯಮಲ್

ಸ್ಪೇನ್

2 ಪ್ರಸ್ತುತ ಫುಟ್ಬಾಲ್ ಜಗತ್ತಿನ ಅತ್ಯಂತ ಭರವಸೆಯ ಯುವ ಆಟಗಾರ ಎಂದರೆ ಅದು ಸ್ಪೇನ್‌ನ ಲಾಮಿನ್ ಯಮಲ್. ಯೂರೋ 2024ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ 18 ವರ್ಷದ ಅದ್ಭುತ ಆಟಗಾರ ಇದೀಗ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯೊಂದಿಗೆ ತಮ್ಮ ಚೊಚ್ಚಲ ವಿಶ್ವಕಪ್ ಆಡುತ್ತಿದ್ದಾರೆ. ವಯಸ್ಸನ್ನು ಮೀರಿದ ಪ್ರಬುದ್ಧತೆ ಹೊಂದಿರುವ ಯಮಲ್ ಈ ಟೂರ್ನಿಯ ಸಾರಥಿಯಾಗಬಲ್ಲ ಎಲ್ಲಾ ಲಕ್ಷಣ ಗಳನ್ನೂ ಹೊಂದಿದ್ದಾರೆ.

ಕಿಲಿಯನ್ ಎಂಬಾಪೆ

ಫ್ರಾನ್ಸ್

3 ಕಳೆದ ಬಾರಿ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿ ‘ಗೋಲ್ಡನ್ ಬೂಟ್’ ಗೆದ್ದಿದ್ದರೂ, ಪ್ರಶಸ್ತಿ ಕೈತಪ್ಪಿದ ನೋವಿನಲ್ಲಿದ್ದ ಕಿಲಿಯನ್ ಎಂಬಾಪೆ ಈ ಬಾರಿ ಹೊಸ ಹಠದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. 27ನೇ ವಯಸ್ಸಿನ ಈ ಸ್ಫೋಟಕ ಆಟಗಾರ ಇಂದಿಗೂ ಎದುರಾಳಿ ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಫ್ರಾನ್ಸ್‌ಗೆ 3ನೇ ವಿಶ್ವಕಪ್ ತಂದುಕೊಡುವ ಜವಾಬ್ದಾರಿ ಇವರ ಮೇಲಿದೆ.

ಎರ್ಲಿಂಗ್ ಹಾಲ್ಯಾಡ್

ನಾರ್ವೆ

4 ಬರೋಬ್ಬರಿ 28 ವರ್ಷಗಳ ನಂತರ ನಾರ್ವೆ ದೇಶವನ್ನು ವಿಶ್ವಕಪ್‌ಗೆ ಅರ್ಹತೆ ಪಡೆಯು ವಂತೆ ಮಾಡಿದ ಎರ್ಲಿಂಗ್ ಹಾಲ್ಯಾಂಡ್, ಕೊನೆಗೂ ವಿಶ್ವಕಪ್ ವೇದಿಕೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಯುರೋಪಿಯನ್ ಕ್ವಾಲಿಫೈಯರ್ಸ್‌ನಲ್ಲಿ ಅತೀ ಹೆಚ್ಚು ಗೋಲು ಗಳಿಸಿ ಅಬ್ಬರಿಸಿದ್ದ ಇವರು ಪ್ರಸ್ತುತ ವಿಶ್ವದ ಅತ್ಯಂತ ಅಪಾಯಕಾರಿ ಫಿನಿಶರ್ ಆಗಿದ್ದು, ಇಡೀ ನಾರ್ವೆಯ ಭರವಸೆಯ ಆಟಗಾರನಾಗಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ

ಪೋರ್ಚುಗಲ್

5 ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿರುವ 41 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ಪೋರ್ಚುಗಲ್ ಪರ 6ನೇ ಬಾರಿಗೆ ವಿಶ್ವಕಪ್ ಆಡಲು ಸಿದ್ಧರಾಗಿದ್ದಾರೆ. ಕ್ಲಬ್ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ದಾಖಲೆ ಬರೆದಿರುವ ರೊನಾಲ್ಡೊ ಅವರಿಗೆ ತಮ್ಮ ವೃತ್ತಿಜೀವನದಲ್ಲಿ ಇನ್ನೂ ಕೈಗೆಟುಕದ ಏಕೈಕ ಕನಸಿನ ಈ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಇದು ಕೊನೆಯ ಅವಕಾಶ ಎನ್ನಬಹುದು.

ಹ್ಯಾರಿ ಎಡ್ವರ್ಡ್ ಕೇನ್

ಇಂಗ್ಲೆಂಡ್

6 ಬೇಯರ್ನ್ ಮ್ಯೂನಿಚ್ ಪರ ಅದ್ಭುತ ಪ್ರದರ್ಶನ ನೀಡಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ರಲ್ಲಿ ಒಬ್ಬರಾಗಿದ್ದಾರೆ. 2018ರ ವಿಶ್ವಕಪ್‌ನಲ್ಲಿ ‘ಗೋಲ್ಡನ್ ಬೂಟ್’ ಗೆದ್ದಿದ್ದ ಇವರು ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿದ್ದಾರೆ. ಇಂಗ್ಲೆಂಡ್‌ನ ವಿಶ್ವಕಪ್ ಕನಸು ಕೇನ್ ಅವರ ನಾಯಕತ್ವದ ಮೇಲೆಯೇ ನಿಂತಿದೆ.

ವಿನಿಶಿಯಸ್ ಜೂನಿಯರ್

ಬ್ರೆಜಿಲ್

7 ಕಳೆದ ನಾಲ್ಕು ವರ್ಷಗಳಲ್ಲಿ ಬ್ರೆಜಿಲ್ ತಂಡದ ಅತೀ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿರುವ ವಿನಿಶಿಯಸ್‌ ಜೂನಿಯರ್ ಪ್ರಸ್ತುತ ಜಾಗತಿಕ ಫುಟ್ಬಾಲ್‌ನ ಸೂಪರ್‌ಸ್ಟಾರ್. ತಮ್ಮ ಅಪ್ರತಿಮ ವೇಗ, ಡ್ರಿಬ್ಲಿಂಗ್ ಕೌಶಲ್ಯ ಮತ್ತು ಆಕ್ರಮಣಕಾರಿ ಆಟದ ಮೂಲಕ ಬ್ರೆಜಿಲ್‌ಗೆ 6ನೇ ವಿಶ್ವ ಪ್ರಶಸ್ತಿಯನ್ನು ತಂದುಕೊಡಲು ಇದೀಗ ಸಂಪೂರ್ಣ ಸಜ್ಜಾಗಿದ್ದಾರೆ.

ಆಂಟೊಯಿನ್ ಸೆಮೆನ್

ಘಾನಾ

8 ಕ್ಲಬ್ ಫುಟ್ಬಾಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿರುವ ಘಾನಾದ ಆಂಟೊಯಿನ್ ಸೆಮೆನ್ ಆಫ್ರಿಕಾ ಖಂಡದ ಅತ್ಯದ್ಭುತ ಪ್ರತಿಭೆಯಾಗಿದ್ದಾರೆ. ಸದ್ಯ ಹೊಸ ಬದಲಾವಣೆಗಳ ಹಾದಿಯಲ್ಲಿರುವ ಘಾನಾ ತಂಡಕ್ಕೆ ಈ ವರ್ಸಟೈಲ್ ಫಾರ್ವರ್ಡ್ ಆಟಗಾರನೇ ಜೂನಿಯರ್ ಪ್ರಸ್ತುತ ಜಾಗತಿಕ ಫುಟ್ಬಾಲ್‌ನ ಸೂಪರ್‌ಸ್ಟಾರ್. ತಮ್ಮ ಅಪ್ರತಿಮ ವೇಗ, ಡ್ರಿಬ್ಲಿಂಗ್ ಕೌಶಲ್ಯ ಮತ್ತು ಆಕ್ರಮಣಕಾರಿ ಆಟದ ಮೂಲಕ ಬ್ರೆಜಿಲ್‌ಗೆ 6ನೇ ವಿಶ್ವ ಪ್ರಶಸ್ತಿಯನ್ನು ತಂದುಕೊಡಲು ಇದೀಗ ಸಂಪೂರ್ಣಸಜ್ಜಾಗಿದ್ದಾರೆ.

ಆಂಟೊಯಿನ್ ಸೆಮೆನ್

ಘಾನಾ

8 ಕ್ಲಬ್ ಫುಟ್ಬಾಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿರುವ ಘಾನಾದ ಆಂಟೊಯಿನ್ ಸೆಮೆನ್ʻ ಆಫ್ರಿಕಾ ಖಂಡದ ಅತ್ಯದ್ಭುತ ಪ್ರತಿಭೆಯಾಗಿದ್ದಾರೆ. ಸದ್ಯ ಹೊಸ ಬದಲಾವಣೆಗಳ ಹಾದಿಯಲ್ಲಿರುವ ಘಾನಾ ತಂಡಕ್ಕೆ ಈ ವರ್ಸಟೈಲ್ ಫಾರ್ವರ್ಡ್ ಆಟಗಾರನೇ ಪ್ರಮುಖ ಆಧಾರಸ್ತಂಭವಾಗಿದ್ದು, ತಂಡವನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿದೆ.

ಅರ್ಡಾ ಗುಲರ್

ಟರ್ಕಿ

9 ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ವಿಶ್ವಕಪ್‌ಗೆ ಮರಳಿರುವ ಟರ್ಕಿ ದೇಶದ ಕೋಟ್ಯಂತರ ಅಭಿಮಾನಿಗಳ ಆಶಾಕಿರಣ ಅರ್ಡಾ ಗುಲರ್. ರಿಯಲ್ ಮ್ಯಾಡ್ರಿಡ್ ಈ 21 ವರ್ಷದ ಯುವ ಪ್ರತಿಭೆಯನ್ನು ಟರ್ಕಿಶ್ ಫುಟ್ಬಾಲ್‌ನ ಭವಿಷ್ಯ ಎಂದು ಕರೆಯ ಲಾಗುತ್ತಿದ್ದು, ಜಾಗತಿಕ ಫುಟ್ಬಾಲ್ ವೇದಿಕೆಯಲ್ಲಿ ಮ್ಯಾಜಿಕ್ ಮಾಡಲು ಅವರು ಕಾತರರಾಗಿದ್ದಾರೆ.

ಮೊಹಮ್ಮದ್ ಸಲಾಹ್

ಈಜಿಪ್ಟ್

10 ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಈಜಿಪ್ಟ್‌ನ ಮೊಹಮ್ಮದ್ ಸಲಾಹ್ ತಮ್ಮ ವೃತ್ತಿಜೀವನದ ಅಪೂರ್ಣ ಅಧ್ಯಾಯ ಪೂರ್ಣಗೊಳಿಸಲು ಮರಳುತ್ತಿದ್ದಾರೆ. ಕ್ಲಬ್ ಮಟ್ಟದಲ್ಲಿ ಎಲ್ಲಾ ಪ್ರಶಸ್ತಿಗಳನ್ನು ಗೆದ್ದಿರುವ 33 ವರ್ಷದ ಸಲಾಹ್, ಈ ಬಾರಿ ತಮ್ಮ ದೇಶಕ್ಕೆ ದೊಡ್ಡ ಯಶಸ್ಸನ್ನ ತಂದುಕೊಡುವ ದೃಢ ಸಂಕಲ್ಪದಲ್ಲಿದ್ದಾರೆ. ಬಹುಶಃ ಇದು ಅವರಿಗೆ ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಯಿದೆ.