ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Laxman R Nirani Column: ಪ್ರಗತಿಪರರಿಗೂ ಪ್ರೇರಣೆ ಸ್ವಾತಂತ್ರ್ಯ ವೀರ ಸಾವರ್ಕರ್

ಇದು ಅವರ ವೈಚಾರಿಕ ನಿಲುವಿಗೆ ಗಟ್ಟಿ ಸಾಕ್ಷಿಯಾಗಿ ನಿಂತಿದೆ. ಇದರ ವಾಸ್ತುಶಿಲ್ಪ ಸರಳ ವಾಗಿದ್ದು, ಯಾವುದೇ ಆಡಂಬರವಿಲ್ಲದೆ ಸಾಮಾಜಿಕ ಅಸಮಾನತೆಗಳ ವಿರುದ್ಧದ ನಿಲುವನ್ನು ಸಂಕೇತಿಸುವಂತೆ ರಚಿಸಲಾಗಿದೆ. ಈ ಮಂದಿರಕ್ಕೆ ಬೇರೆ ಬೇರೆ ತಳ ಸಮುದಾಯ ಕ್ಕೆ ಸೇರಿದ ಯುವಕರನ್ನು ಅರ್ಚಕರನ್ನಾಗಿ ಅವರು ನೇಮಿಸಿದ್ದರು.

ತ‌ನ್ನಿಮಿತ್ತ

ಲಕ್ಷ್ಮಣ ಆರ್.ನಿರಾಣಿ

ವಿನಾಯಕ ದಾಮೋದರ ಸಾವರ್ಕರರು ‘ಸ್ವಾತಂತ್ರ್ಯ ವೀರ ’ಎಂಬ ಮಹಾನ್ ಗೌರವದಿಂದ ಭಾರತೀಯರ ಹೃದಯದಲ್ಲಿ ನೆಲೆಸಿzರೆ. ಅವರು ಉಗ್ರ ಹಿಂದುತ್ವದ ಪ್ರತಿಪಾದಕರಾಗಿದ್ದರು ಎಂದು ಹೆಸರಾಗಿದ್ದಾರೆ. ಆದರೆ ಅವರು ಹಿಂದೂ ಧರ್ಮದಲ್ಲಿಯ ಅಸ್ಪೃಶ್ಯತೆಯ ಆಚರಣೆ ಹಾಗೂ ಅಂಧಶ್ರದ್ಧೆಗಳ ಕಡು ವಿರೋಧಿಯಾಗಿದ್ದರು ಎಂಬುದು ಹೆಚ್ಚು ಮುನ್ನೆಲೆಗೆ ಬಂದಿಲ್ಲ ಎಂಬುದು ನೋವಿನ ಸಂಗತಿ.

ಅವರ ವಿಶಾಲ ಮತ್ತು ವೈವಿಧ್ಯಮಯ ಚಿಂತನೆಗಳನ್ನು ಪರಿಚಯಿಸುವ ಕೆಲಸ ವ್ಯಾಪಕ ವಾಗಿ ನಡೆಯುವುದು ಬಹಳ ಅವಶ್ಯವಿದೆ. ಅವರ ಅರವತ್ತನೆಯ ಸ್ಮರಣೆ ದಿನ ಫೆಬ್ರವರಿ 26ರಂದು (ಮೇ 28, 1993- 26 ಫೆಬ್ರವರಿ 1966) ದೇಶದ ತುಂಬಾ ನಡೆಯಲಿದೆ.

ಮಠ, ಮಂದಿರ, ಧಾರ್ಮಿಕ ಸ್ಥಳಗಳು ಎಲ್ಲರ ಪ್ರವೇಶಕ್ಕೆ ಮುಕ್ತವಾಗಿರಬೇಕು. ಅಸ್ಪೃಶ್ಯತೆ ಆಚರಣೆ ಹಿಂದೂ ಧರ್ಮಕ್ಕೆ ಅಂಟಿರುವ ಕಳಂಕ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಮೇಲ್ಜಾತಿಯವರು ತಳ ಸಮುದಾಯದವರಿಗೆ ಮಂದಿರಗಳ ಪ್ರವೇಶ ನಿರಾಕರಿಸುತ್ತಿದ್ದರು. ಇದು ಸಾವರ್ಕರ್‌ಗೆ ನೋವನ್ನುಂಟು ಮಾಡಿತ್ತು. ಅವರು ಇದಕ್ಕೆ ಪರ್ಯಾಯವಾಗಿ ಎಲ್ಲರಿಗೂ ಪ್ರವೇಶವಿರುವ ‘ಪತಿತ ಪಾವನ ಮಂದಿರ’ವನ್ನು ಮಹಾರಾಷ್ಟ್ರದ ರತ್ನಗಿರಿ ಯಲ್ಲಿ 1931ರಷ್ಟು ಹಿಂದೆಯೇ ನಿರ್ಮಿಸಿದ್ದಾರೆ.

ಇದು ಅವರ ವೈಚಾರಿಕ ನಿಲುವಿಗೆ ಗಟ್ಟಿ ಸಾಕ್ಷಿಯಾಗಿ ನಿಂತಿದೆ. ಇದರ ವಾಸ್ತುಶಿಲ್ಪ ಸರಳವಾಗಿದ್ದು, ಯಾವುದೇ ಆಡಂಬರವಿಲ್ಲದೆ ಸಾಮಾಜಿಕ ಅಸಮಾನತೆಗಳ ವಿರುದ್ಧದ ನಿಲುವನ್ನು ಸಂಕೇತಿಸುವಂತೆ ರಚಿಸಲಾಗಿದೆ. ಈ ಮಂದಿರಕ್ಕೆ ಬೇರೆ ಬೇರೆ ತಳ ಸಮುದಾಯ ಕ್ಕೆ ಸೇರಿದ ಯುವಕರನ್ನು ಅರ್ಚಕರನ್ನಾಗಿ ಅವರು ನೇಮಿಸಿದ್ದರು.

ಇದನ್ನೂ ಓದಿ: Laxman Nirani Column: ಇದು ಬರೀ ರಸ್ತೆಯಲ್ಲ, ಅಭಿವೃದ್ಧಿಯ ಹೆದ್ದಾರಿ

ಈಗಲೂ ಆ ವಿಧಾನ ಮುಂದುವರೆದಿದೆ. ಮಂದಿರದ ವಿಶಾಲ ಆವರಣದಲ್ಲಿ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟದ ಮ್ಯೂಸಿಯಂ ಕೂಡ ನಿರ್ಮಿಸಲಾಗಿದೆ. ಮಂದಿರದಲ್ಲಿಯೇ ‘ರೋಟಿ ಬಂದಿ’ ಸಹ ಭೋಜನ ಕಾರ್ಯಕ್ರಮವನ್ನು ಅವರು ಆರಂಭಿಸಿದರು. ಪ್ರಥಮ ಸಹಭೋಜನ ಮಹಿಳೆಯರಿಗಾಗಿ ಏರ್ಪಡಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ 75 ಮಹಿಳೆಯರು ಪಾಲ್ಗೊಂಡಿದ್ದು ಆಗ ದೊಡ್ಡ ಸಂಚಲನವನ್ನುಂಟು ಮಾಡಿತ್ತು.

ಮಹಾರಾಷ್ಟ್ರದಲ್ಲಿ ಗಣಪತಿ ಉತ್ಸವ ತುಂಬಾ ಪ್ರಸಿದ್ಧ. ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿ ಲೋಕಮಾನ್ಯ ತಿಲಕರು ಇದನ್ನು ಆರಂಭಿಸಿದ್ದರು. ಆದರೆ ಈ ಉತ್ಸವದಲ್ಲಿಯೂ ತಳವರ್ಗ ದವರಿಗೆ ಮುಕ್ತ ಪ್ರವೇಶವಿರಲಿಲ್ಲ. 1933ರಲ್ಲಿ ಸಾವರ್ಕರ್ ಅವರು ಎಲ್ಲರ ಪ್ರವೇಶಕ್ಕೆ ಮುಕ್ತವಾದ ಗಣಪತಿ ಉತ್ಸವ ಏರ್ಪಡಿಸುವ ಮೂಲಕ ದೇಶದ ಗಮನ ಸೆಳೆದರು.

ಜಗತ್ತು ದೇವತೆಗಳ ಇಚ್ಛೆಯಂತೆ ನಡೆಯುವ ಜಾಗವಲ್ಲ, ಬದಲಾಗಿ, ಇದು ಕೆಲವು ನಿರ್ದಿಷ್ಟ ನಿಯಮಗಳಂತೆ ನಡೆಯುವ ಒಂದು ವ್ಯವಸ್ಥಿತ ವಿಶ್ವ. ವಿಶಾಲವಾದ ಈ ಬ್ರಹ್ಮಾಂಡದಲ್ಲಿ, ನನ್ನ ಸ್ಥಾನ ಎಲ್ಲಿದೆ ಎಂಬುದು ಅರ್ಥವಾದರೆ ನಮ್ಮ ನಡುವಿನ ಜಗಳಗಳು, ಯುದ್ಧಗಳು ಎಷ್ಟು ಅರ್ಥಹೀನ ಎಂಬುದು ನಮಗೆ ಅರ್ಥವಾಗುತ್ತದೆ.

ಪ್ರತಿವ್ಯಕ್ತಿ, ಪ್ರತಿ ಜೀವಿ ಅಕ್ಷರ ಅಕ್ಷರಶಃ ತನ್ನನ್ನು ತಾನೇ ಅನುಭವಿಸುತ್ತಿರುವ ಒಂದು ರೂಪ ಮಾತ್ರ. ಧರ್ಮಗ್ರಂಥದಲ್ಲಿ ಇದೆ ಎನ್ನುವ ಮಾತ್ರಕ್ಕೆ ಎಲ್ಲವನ್ನು ನಂಬಬಾರದು. ನೋಡಿ ಪರಿಶೀಲಿಸಬೇಕು ಮುಂತಾದ ಸತ್ಯಶೋಧನೆಯ ವಿಚಾರಗಳನ್ನು ಅವರು ಸದಾ ಹೇಳು ತ್ತಿದ್ದರು.

nirani

ನಿಜ ಹೇಳಬೇಕೆಂದರೆ ಇವತ್ತಿನ ‘ಪ್ರಗತಿಪರ ಗುಂಪು’ಗಳಿಗೆ ಸಾವರ್ಕರ್ ಹೆಚ್ಚು ಹಿಡಿಸಬೇಕು. ಅವರು ಜಾತಿಯ ಮೇಲಾಟಗಳನ್ನು ಉಗ್ರವಾಗಿ ನಿರಾಕರಿಸಿದ್ದರು. ಅಸ್ಪೃಶ್ಯತೆ ನಿವಾರಣೆಗೆ ಪಣತೂಟ್ಟಿದ್ದರು. ದಲಿತರಿಗಾಗಿ ಶಾಲೆ, ದೇವಸ್ಥಾನಗಳನ್ನು ಕಟ್ಟಿದರು. ಎಲ್ಲರೂ ಸೇನೆಗೆ ಸೇರಬೇಕೆಂದು, ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕೆಂದು ನಿರಂತರವಾಗಿ ಹೇಳುತ್ತಿ ದ್ದರು.

ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದರು. ಶೋಷಿತ ಜನಾಂಗದ ಮಹಾಡ ಜಾತಿಯ ದಂಪತಿಗಳ ಪಾದಪೂಜೆ ಮಾಡಿದರು. ಮತಾಂತರ ಗೊಂಡು ಹೋಗಿದ್ದ ಹಿಂದೂಗಳನ್ನು ಮತ್ತೆ ಮಾತ್ರ ಧರ್ಮಕ್ಕೆ ಕರೆ ತಂದರು ಜಾತಿ ಪದ್ಧತಿಯ ನಿರ್ಮೂಲನೆಗೆಂದು ಅಂತರ್ಜಾತೀಯ ಭೋಜನ ಕೂಟಗಳನ್ನು ಏರ್ಪಡಿಸು ತ್ತಿದ್ದರು.

ಅಂತರ್ಜಾತೀಯ ಮದುವೆಗಳೊಂದಿಗೆ ಅಂತರ ಪ್ರಾಂತೀಯ ವಿವಾಹಗಳನ್ನು ಅವರು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಮಗನ ಉಪನಯನವನ್ನೇ ಮಾಡದ ಅವರು, ತಮ್ಮ ಪತ್ನಿಯ ಅಂತ್ಯಸಂಸ್ಕಾರವನ್ನು ತೀರಾ ಸರಳವಾಗಿ ನೆರವೇರಿಸಿದರು. ಉತ್ತರ ಕ್ರಿಯೆಗಳನ್ನು ಮಾಡಲೇ ಇಲ್ಲ. ಇಷ್ಟೇ ಅಲ್ಲ ಸ್ವತಃ ಅವರ ಅಂತಿಮ ಸಂಸ್ಕಾರದಲ್ಲಿ ಧಾರ್ಮಿಕ ವಿಧಿಗಳು ಇರಲಿಲ್ಲ.

ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ದೀನನಾಥ್ ಮಂಗೇಶ್ಕರ್ ಮೇಲಿಂದ ಮೇಲೆ ಸಾವರ್ಕರ್ ಸದನಕ್ಕೆ ಭೇಟಿ ಕೊಡುತ್ತಿದ್ದರು. ಎರಡು ಕುಟುಂಬಗಳ ನಡುವೆ ಹ್ಯಾಪಿ ಸ್ನೇಹ ವಿತ್ತು. ದೀನನಾಥ್ ಅವರೊಂದಿಗೆ ಸಾವರ್ಕರರು ರಾಜಕೀಯ ಕಲೆ ಸಂಸ್ಕೃತಿ ಧಾರ್ಮಿಕ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಸಾವರ್ಕರ್‌ರ ಪ್ರೇರಣೆಯಿಂದ ಮಂಗೇಶ್ಕರ್ ಕುಟುಂಬದವರು ಸಾಮೂಹಿಕ ಊಟ ಮತ್ತು ಮೂಢನಂಬಿಕೆ ವಿರೋಧಿ ಚಟುವಟಿಕೆ ಯಲ್ಲಿ ಭಾಗವಹಿಸುತ್ತಿದ್ದರು.

ಸಾವರ್ಕರ್‌ರ ಸಾರ್ವಜನಿಕ ಸೇವೆಯನ್ನು ಗಮನಿಸಿದ ಗಾಯಕಿ ಲತಾ ಮಂಗೇಶ್ಕರ್ ದೇಶದ ಹಿತಕ್ಕೋಸ್ಕರ ನಿಮ್ಮೊಂದಿಗೆ ಸೇರಿ ಕೆಲಸ ಮಾಡಬೇಕೆಂಬ ಆಸೆ ನನಗೆ ತೀವ್ರವಾಗಿದೆ. ಇದಕ್ಕಾಗಿ ನಾನು ಗಾಯನವನ್ನು ಬೇಕಾದರೂ ಬಿಡಲು ಸಿದ್ಧ ಎಂದು ಹೇಳಿದರಂತೆ. ನೀನು ಹಾಗೆಲ್ಲ ಮಾಡುಕೂಡದು. ನಿನಗೆ ಒಲಿದಿರುವ ಗಾಯನವನ್ನು ನೀನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಕೂಡ ಭಾರತಮಾತೆಯ ಸೇವೆ ಆಗಲಿದೆ. ಆದ್ದರಿಂದ ನೀನು ನಿನ್ನ ಕ್ಷೇತ್ರದಲ್ಲಿ ಮುಂದುವರಿ ಎಂದು ಹೇಳಿದ್ದರು. ಸಾವರ್ಕರ್‌ರ ಕಾವ್ಯ ಕೂಡ ಬಹಳ ಶಕ್ತಿಶಾಲಿಯಾದದ್ದು. ಈ ಗೀತೆಗಳು ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳಗುತ್ತವೆ.