ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr R G Hegde Column: ಅಗೌರವದ ಸಂಸ್ಕೃತಿಯತ್ತ ಸಾಗುತ್ತಿರುವ ಜೆನ್‌ ಝೀ

ಪ್ರೀತಿ, ಪ್ರೇಮ, ರಾಷ್ಟ್ರಪ್ರೇಮ, ವಿವಾಹ, ರಾಷ್ಟ್ರೀಯತೆ, ಘನತೆ ಇಂತಹ ಎಲ್ಲ ಪರಿಕಲ್ಪನೆಗಳನ್ನು ಆತ ಹಾಸ್ಯ ಮಾಡಿದ. ನಾಶಮಾಡಿದ. ಉದಾಹರಣೆಗೆ ಶಾನ ‘ಆರ್ಮ್ಸ್ ಆಂಡ್ ದ ಮ್ಯಾನ್’ ನಾಟಕದಲ್ಲಿ ಕೇಂದ್ರ ಪಾತ್ರವಾಗಿ ಬರುವವನು ಒಬ್ಬ ಅಸಹ್ಯ ಮೋರೆಯ ಸೈನಿಕ. (ಸೈನಿಕರು ಆಕರ್ಷಕವಾಗಿರುತ್ತಾರೆ. ಅದನ್ನು ಗೇಲಿ ಮಾಡಲೇ ಶಾ ಈ ಪಾತ್ರ ಸೃಷ್ಟಿಸಿದ.) ಸೈನಿಕ ಹೇಳುತ್ತಾನೆ.

ತಲೆಮಾರು

ಡಾ.ಆರ್.ಜಿ.ಹೆಗಡೆ

ಜೆನ್ ಝೀ ದೆಹಲಿ ಪ್ರತಿಭಟನೆಯ ಸಂದರ್ಭದ ಒಂದು ಸಂಗತಿ: ತನಗೆ ಹದಿನೈದು ವರ್ಷ ಎಂದು ಹೇಳಿಕೊಂಡ ಇಪ್ಪತ್ತೈದು ವರ್ಷದ ‘ಹುಡುಗಿ’ ಒಬ್ಬಳು ಪ್ರಧಾನಿ ಮೋದಿಯವರ ಮತ್ತು ಸ್ವರ್ಗಸ್ಥ ರಾಗಿರುವ ಅವರ ತಾಯಿಯ ಕುರಿತು ಹೊಲಸು ಮಾತನಾಡಿಬಿಟ್ಟಳು. ಎಂತಹ ಅಸಹ್ಯ ಮಾತು ಗಳೆಂದರೆ ಕೇಳಿದವರು ಅರೆಕ್ಷಣ ಥಂಡಾಗಿ ಬಿಟ್ಟರು.

ದೇಶ ‘ಸಾಂಸ್ಕೃತಿಕ ಆಘಾತ’ ಅನುಭವಿಸಿತು. ಏಕೆಂದರೆ ಸಾಮಾನ್ಯವಾಗಿ ನಮ್ಮ ಸಾಂಸ್ಕೃತಿಕ ಗ್ರಹಿಕೆ‌ ಯಲ್ಲಿ ಇಂತಹ ಕೊಳಕು ಮಾತುಗಳನ್ನು ಯಾರೂ ಸಾರ್ವಜನಿಕವಾಗಿ ಆಡುವುದಿಲ್ಲ. ಪ್ರಧಾನಿ ಯಂತಹ ಹಿರಿಯರ, ಅವರ ತಾಯಿಯ ಕುರಿತು ಆಡುವುದಿಲ್ಲ. ಆದರೆ ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ, ಜೆನ್ ಝೀ ಸಂಪರ್ಕದಲ್ಲಿ ಕೆಲಸ ಮಾಡಿದ ನಮ್ಮಂತವರಿಗೆ ಗೊತ್ತಿದೆ. ಏನೆಂದರೆ ಇಂತಹ ಮಾತು ಜೆನ್ ಝೀಯ ಒಂದು ವರ್ಗದ ನಾಲಿಗೆಯ ತುದಿಯ ಮೇಲಿದೆ. ಅದು ಯಾರಿಗೆ ಏನು ಬೇಕಾದರೂ ಮಾತನಾಡು ತ್ತದೆ. ಏಕೆಂದರೆ ಆ ವರ್ಗ ಪಾಶ್ಚಾತ್ಯ ಸಂಸ್ಕೃತಿಯ ತೀವ್ರ ಪ್ರಭಾವ ದಲ್ಲಿದೆ.

ದೆಹಲಿಯಲ್ಲಿ ಬಂದ ಮಾತು ಕೇವಲ ಒಂದು ಹುಡುಗಿಯ ಮಾತಲ್ಲ. ಅದು ಒಂದು ಅನ್ಯ ‘ಸಂಸ್ಕೃತಿಯ’ ಮಾತು. ಹೆಚ್ಚಾಗಿ ನಮ್ಮ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಂಡಿರುವ, ವಿಪರೀತ ಕುಡಿತ, ಡ್ರಗ್, ಪೋರ್ನೋಗ್ರಫಿ (ವಿಕೃತ ಲೈಂಗಿಕತೆ) ಇತ್ಯಾದಿಗಳ ದೋಸ್ತಿಯಲ್ಲಿರುವ, ಮಾನಸಿಕ ವಾಗಿ ಅಸ್ತವ್ಯಸ್ತವಾಗಿ ರುವ, ಜೆನ್ ಝೀಯ ಒಂದು ವರ್ಗ ಇಂತಹ ಮಾತನಾಡುತ್ತದೆ.

ನಾನೇ ಕೇಳಿರುವಂತೆ ‘ಪ್ರಿನ್ಸಿಪಲ್ ಆಯಾರೇ, ‘ಮಿನಿಸ್ಟರ್ ಭೋಸುಡಿಕೆ ಗಯಾರೇ’ ‘ಬುಡ್ಡಾ ರಾಂಡಕೇ ಆಯಾರೇ’ (ಪ್ರೊಫೆಸರ್ ಕುರಿತು) ‘ಲೌಡೇ‘ ಇಂತಹ ಮಾತುಗಳನ್ನು ಆಡುವುದೇ ಜೆನ್ ಝೀಯ ಒಂದು ವರ್ಗದ ಫ್ಯಾಶನ್ ಮತ್ತು ಸಂಸ್ಕೃತಿಯಾಗಿ ಹೋಗಿದೆ. ಅಪಾಯಕಾರಿ ವಿಷಯ ಇದು. ಯಾಕೆ ಅಪಾಯಕಾರಿ ಎಂದು ಹೇಳುವ ಮೊದಲು ಇಂತಹ ವಿಕೃತ (perverted) ಮಾತಿನ ಮತ್ತು ಅದರ ಹಿಂದಿರುವ ‘ಅಗೌರವದ ಸಂಸ್ಕೃತಿ’ಯ (culture of irreverence) ಕಥೆ ಹೇಳಿಕೊಳ್ಳ ಬೇಕು.

ಇದನ್ನೂ ಓದಿ: Prof R G Hegde Column: ಜೆನ್ ಝೀಯನ್ನು ಸಂಭಾಳಿಸುವುದು ಹೇಗೆ ?

ಇಂತಹ ಮನಸ್ಥಿತಿ ಹುಟ್ಟಿಕೊಂಡಿದ್ದು ಇಪ್ಪತ್ತನೆಯ ಶತಮಾನದಲ್ಲಿ. ಹತ್ತೊಂಭತ್ತನೆಯ ಶತಮಾನದ ಕೊನೆಯಲ್ಲಿ ಹುಟ್ಟಿಕೊಂಡ ಎರಡು ಮಹತ್ತರ ಪ್ರಭಾವಗಳು ಇದಕ್ಕೆ ಕಾರಣವಾದವು. ಒಂದನೆಯದು ಮಾರ್ಕ್ಸ್‌ವಾದದ ಸಾಮಾಜಿಕ ಪ್ರಭಾವ. ಎರಡನೆಯದು ಮನಶಾಸ್ತ್ರಜ್ಞ ಸಿಗ್ಮಂಡ್ ಪ್ರಾಯ್ಡ್‌ʼನ ಶೋಧನೆಗಳ ಸಾಮಾಜಿಕ ಪ್ರಭಾವ. ಕಾರ್ಲ್ ಮಾರ್ಕ್ಸ್ ಒಂದು ಪ್ರಸಿದ್ಧ ಮಾತು ಹೇಳಿದ. ಏನೆಂದರೆ ಒಂದು ಯುಗವನ್ನು ಆಳುವ ವಿಚಾರಗಳು ಯುಗವನ್ನು ಆಳುವವರ ವಿಚಾರಗಳಾಗಿರು ತ್ತವೆ. ಈ ಮಾತು ಮಾರ್ಕ್ಸ್ ಸೃಷ್ಟಿಸಿದ ಸಮಾಜಕ್ಕೇ ಸತ್ಯವಾಗಿ ಹೋಯಿತು. ಹೇಗೆಂದರೆ ರಶಿಯಾ ಮತ್ತಿತರ ದೇಶಗಳಲ್ಲಿ ನಡೆದ ರಕ್ತಸಿಕ್ತ ಕ್ರಾಂತಿಗಳ ಫಲವಾಗಿ ಅಂದಿನ ಯೂರೋಪಿಯನ್ ಸಮಾಜ ತಲೆಕೆಳಗಾಗಿ ಹೋಯಿತು.

ಮೊದಲು ಸಮಾಜವನ್ನು ಆಳಿದ್ದ ಉನ್ನತ ಹಾಗೂ ಮಧ್ಯಮವರ್ಗಗಳು (ಬಂಡವಾಳಶಾಹಿ ಮತ್ತು ಬೂರ್ಜ್ವಾಸೀ ವರ್ಗ) ಈಗ ತಮ್ಮ ಅಧಿಕಾರ ಕಳೆದುಕೊಂಡು ಕೆಳಸ್ತರಕ್ಕೆ ಬಂದು ನಿಂತವು. ಹಿಂದೆ ಕೆಳಸ್ತರ ದಲ್ಲಿದ್ದ ಕಾರ್ಮಿಕ ವರ್ಗ (ಪ್ರೊಲೆಟೇರಿಯಟ್) ಈಗ ಅಧಿಕಾರದ ಸ್ಥಾನಗಳನ್ನು ಆಕ್ರಮಿಸಿತು. ಪರಿಣಾಮವಾಗಿ ಸೃಷ್ಟಿಯಾಗಿದ್ದು ಒಂದು ಬೃಹತ್ ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿ. ಅದರ ಫಲವಾಗಿ ಸಮಾಜಗಳು ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳ ವ್ಯವಸ್ಥೆ ತಲೆಕೆಳಗಾಗಿ ಹೋಯಿತು.

62 ok

ಹೊಸ ಮೌಲ್ಯಗಳ ವ್ಯವಸ್ಥೆ ಹುಟ್ಟಿಕೊಳ್ಳಲಿಲ್ಲ. ಏಕೆಂದರೆ ಈಗ ಅಧಿಕಾರಕ್ಕೆ ಬಂದ ಯುರೋಪಿ ಯನ್ ಕಾರ್ಮಿಕ ವರ್ಗಕ್ಕೆ ಒಂದು ಸ್ಪಷ್ಟವಾದ ನೈತಿಕ ಅಥವಾ ಈಸ್ಥೆಟಿಕ್ (ಕಲೆ, ಸೌಂದರ್ಯ, ಇತಿಹಾಸ, ಪರಂಪರೆ ಇತ್ಯಾದಿ ಹೊಂದಿದ) ಮೌಲ್ಯಗಳ ಒಂದು ಸೆಟ್ ಇರಲಿಲ್ಲ. (ಭಾರತೀಯ ‘ದುಡಿಯುವ ವರ್ಗ’ ಸಾಂಸ್ಕೃತಿಕವಾಗಿ ದಿವಾಳಿಯಾದ ವರ್ಗವಲ್ಲ. ಅದು ಬೇರೆಯ ವಿಷಯ.) ಈಗ ಅಧಿಕಾರಕ್ಕೆ ಬಂದ ‘ಇಲ್ಲದವರ’ ಏಕೈಕ ಗುರಿಯಾಗಿದ್ದುದು ಹಿಂದಿನ ಸಂಸ್ಕೃತಿಯನ್ನು ನಾಶ ಮಾಡುವುದು. (ಭಾರತದಲ್ಲಿ ಸಮಾಜವಾದ ಮಾಡಿದ್ದೂ ಇದೇ). ಹಾಗಾಗಿ ಯುರೋಪಿನಲ್ಲಿ ಈಗ ‘ಉಳ್ಳ’ ವರ್ಗದ ಇತಿಹಾಸ ಮತ್ತು ಸಂಸ್ಕೃತಿಯನ್ನು ಗೇಲಿ ಮಾಡುವ, ಧಿಕ್ಕರಿಸುವ ಸಂಪ್ರದಾಯ ಆರಂಭವಾಯಿತು. ಹಿಂದೆ ಗೌರವಾನ್ವಿತ ವೆಂದು ಪರಿಗಣಿಸಲಾಗಿದ್ದ ಮೌಲ್ಯಗಳು ಈಗ ಹಾಸ್ಯಾಸ್ಪದ ವಾದವು. ಉದಾಹರಣೆಗೆ ಫೋಬಿಯನ್ ಸಮಾಜವಾದದಿಂದ ಪ್ರೇರೇಪಿತನಾಗಿದ್ದ ಜಾರ್ಜ್ ಬರ್ನಾರ್ಡ್ ಶಾ ಹಿಂದಿನ ಎಲ್ಲ ಪೂಜನೀಯ ಮೌಲ್ಯಗಳನ್ನು ಲೇವಡಿ ಮಾಡಿದ.

ಪ್ರೀತಿ, ಪ್ರೇಮ, ರಾಷ್ಟ್ರಪ್ರೇಮ, ವಿವಾಹ, ರಾಷ್ಟ್ರೀಯತೆ, ಘನತೆ ಇಂತಹ ಎಲ್ಲ ಪರಿಕಲ್ಪನೆಗಳನ್ನು ಆತ ಹಾಸ್ಯ ಮಾಡಿದ. ನಾಶಮಾಡಿದ. ಉದಾಹರಣೆಗೆ ಶಾನ ‘ಆರ್ಮ್ಸ್ ಆಂಡ್ ದ ಮ್ಯಾನ್’ ನಾಟಕ ದಲ್ಲಿ ಕೇಂದ್ರ ಪಾತ್ರವಾಗಿ ಬರುವವನು ಒಬ್ಬ ಅಸಹ್ಯ ಮೋರೆಯ ಸೈನಿಕ. (ಸೈನಿಕರು ಆಕರ್ಷಕವಾಗಿರುತ್ತಾರೆ. ಅದನ್ನು ಗೇಲಿ ಮಾಡಲೇ ಶಾ ಈ ಪಾತ್ರ ಸೃಷ್ಟಿಸಿದ.) ಸೈನಿಕ ಹೇಳುತ್ತಾನೆ. ಏನೆಂದರೆ ನಾನು ಯಾವಾಗಲೂ ಯುದ್ಧ ಮಾಡಿಯೇ ಇಲ್ಲ. ಓಡಿ ಹೋಗಿ ನನ್ನ ಪ್ರಾಣ ಕಾಪಾಡಿಕೊಳ್ಳುವುದಷ್ಟೇ ನನ್ನ ಕೆಲಸ. ‘ದೇಶಪ್ರೇಮ’ ಇತ್ಯಾದಿಗಳಿಗಾಗಿ ನಾನ್ಯಾಕೆ ಪ್ರಾಣ ತೆರಲಿ? ಹಾಗೆಯೇ ಆತ ಹೇಳುತ್ತಾನೆ.

ನನ್ನ ಕಿಸೆಯಲ್ಲಿ ಮದ್ದು ಗುಂಡು ತುಂಬಿರುವುದಿಲ್ಲ. ನಾನು ಚಾಕಲೇಟ್‌ಗಳನ್ನು ಇಟ್ಟುಕೊಳ್ಳು ತ್ತೇನೆ. ಏಕೆಂದರೆ ಗುಂಡು ಖಾಲಿಯಾಗಿ ಹೋದರೆ ಓಡಿ ಹೋಗಿ ಬದುಕಬಹುದು. ತಿನ್ನಲು ಇಲ್ಲವಾದರೆ ಏನು ಮಾಡುವುದು? ಇಂತಹ ಸೈನಿಕ ಒಂದು ದಿನ ರಣರಂಗದಿಂದ ತಪ್ಪಿಸಿಕೊಂಡು ಓಡುತ್ತಿರುವಾಗ ಅಕಸ್ಮಾತ್ ಸುಂದರಿಯೋರ್ವಳ ಬೆಡ್ ರೂಂ ಪ್ರವೇಶಿಸಿಬಿಡುತ್ತಾನೆ. ಹೊರಗೆ ತಿಂಗಳ ಬೆಳಕು. ಒಳಗೆ ಬೆಳದಿಂಗಳಿ ನಂತಹ ಸುಂದರಿ.

ಸಾಮಾನ್ಯವಾಗಿ ಓದುಗ ನಿರೀಕ್ಷಿಸುವುದೆಂದರೆ ಈಗ ಆತ ಆಕೆಯ ಜತೆ ಪ್ರೇಮದಲ್ಲಿ ಬೀಳುತ್ತಾನೆ. ನೀನಿಲ್ಲದೆ ನಾನು ಬದುಕಲಾರೆ ಎನ್ನುತ್ತಾನೆ ಎನ್ನುವುದು. ಆದರೆ ಆ ಸೈನಿಕ ಅಂತಹ ಮಾತು ಆಡುವುದೇ ಇಲ್ಲ. ಬದಲಿಗೆ ಆತ ಹೇಳುತ್ತಾನೆ. ನೀನು ಸುಂದರಿ ಇರಬಹುದು. ಆದರೆ ನಿನ್ನ ಜತೆ ನಾನು ಪ್ರೇಮದಲ್ಲಿ ಬಿದ್ದು ಬಿಡುತ್ತೇನೆ ಇತ್ಯಾದಿ ಭಾವಿಸಿಕೊಳ್ಳಬೇಡ. ಇಲ್ಲಿಯ ತನಕ ಯಾರನ್ನೂ ಕೊಂದಿಲ್ಲ. ಆದರೆ ಕೂಗಿ ಗದ್ದಲ ಮಾಡಿದರೆ ನಿನ್ನನ್ನು ಕೊಲ್ಲುವುದು ಖಂಡಿತ. ಹೀಗೆ ಮೌಲ್ಯ ಗಳನ್ನು ಧಿಕ್ಕರಿಸುವ ಸೈನಿಕ ನಮಗೆ ಸಾಂಸ್ಕೃತಿಕ ಆಘಾತ ನೀಡಿಬಿಡುತ್ತಾನೆ. ಶಾನ ಇನ್ನೊಂದು ನಾಟಕ ಮಿಸಸ್ ವಾರನ್ಸ್ ಪ್ರೊಫೆಶನ್ ಇರುವುದು ಒಬ್ಬ ವೇಶ್ಯೆಯ ಕುರಿತು. ಎಂತಹ ನಾಟಕವೆಂದರೆ ಅದು ಗೃಹಿಣಿಯರನ್ನೇ, ವಿವಾಹದ ವ್ಯವಸ್ಥೆಯನ್ನೇ ಗೇಲಿ ಮಾಡುತ್ತದೆ.

ಬರ್ನಾಡ್ ಶಾ ಕಲೆ ಇತ್ಯಾದಿ ಪರಿಕಲ್ಪನೆಗಳನ್ನೂ ಹಾಸ್ಯ ಮಾಡಿದ. ಕಲೆಗಾಗಿ ಬರೆಯುವುದಿದ್ದರೆ ಒಂದು ಅಕ್ಷರವನ್ನೂ ತಾನು ಬರೆಯುತ್ತಿರಲಿಲ್ಲ ಎಂದು ಹೇಳಿದ. ಜತೆಯೇ ಆತ ಪ್ರೇಮ ಪ್ರೀತಿ ಸಂಬಂಧಗಳು ಗೌರವ, ಘನತೆ ಅಂತಹ ಪರಿಕಲ್ಪನೆಗಳನ್ನು ಕೀಳಾಗಿ ನೋಡಿದ. ಗಂಡು ಹೆಣ್ಣಿನ ನಡುವೆ ಇರುವ ಆಕರ್ಷಣೆ ಪ್ರೇಮವಲ್ಲ. ಟ್ರೂ ಲವ್ ಇತ್ಯಾದಿ ಈ ಜಗತ್ತಿನಲ್ಲಿ ಇಲ್ಲವೇ ಇಲ್ಲ. ಗಂಡು ಹೆಣ್ಣಿನ ಸಂಬಂಧ ಕಾಮದ ಅಗತ್ಯದ್ದು ಮಾತ್ರ ಎಂದು ಆತ ವಾದಿಸಿದ. ಹೀಗೆ ಪರಂಪರಾಗತ ಮೌಲ್ಯಗಳ ವ್ಯವಸ್ಥೆಯನ್ನೇ ಆತ ತಲೆಕೆಳಗಾಗಿಸಿದ. ಇನ್ನೊಂದು ವಿಷಯ. ಈ ಸಂದರ್ಭದಲ್ಲಿ ಮನಶಾಸ್ತ್ರಜ್ಞ ಸಿಗ್ಮಂಡ್ ಪ್ರಾಯ್ಡ್ ಮಾರ್ಕ್ಸ್‌ವಾದದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಅಗೌರವದ ಸಂಸ್ಕೃತಿಗೆ ಇನ್ನಷ್ಟು ತುಪ್ಪ ಸುರಿದ. ಇಲ್ಲಿಯ ತನಕ ಸಮಾಜಗಳು ಮುಚ್ಚಿಟ್ಟಿದ ‘ಕಾಮ’ ಹಾಗೂ ಲೈಂಗಿಕತೆಯ ವಿಷಯಗಳನ್ನು ಆತ ಬಟಾಬಯಲಿಗೆ ತಂದ.

ಪ್ರಾಯ್ಡ್ ಹೇಳಿದ. ಏನೆಂದರೆ ಸೆಕ್ಸ್ ಮನುಷ್ಯನೊಳಗೆ ಉರಿಯುತ್ತಲೇ ಇರುವ ಬೆಂಕಿ. ಅದನ್ನು ನಂದಿಸ ಲಾಗದು. ಮುಚ್ಚಿಡಲಾಗದು. ಸೆಕ್ಸ್ ವಿಚಾರದಲ್ಲಿ ಮನುಷ್ಯ ಬೇರೆ ಎಲ್ಲ ಪ್ರಾಣಿಗಳಂತ ಹುದೇ ಆದ ಒಂದು ಪ್ರಾಣಿ. ತಂದೆ ಮಗಳನ್ನು ತುಸು ಹೆಚ್ಚಾಗಿ ಪ್ರೀತಿಸುವುದು, ತಾಯಿ ಮಗನನ್ನು ತುಸು ಹೆಚ್ಚಾಗಿ ಪ್ರೀತಿಸುವುದರ ಹಿಂದೆಯೂ ಕಾಮವಿದೆ ಎಂದು ಆತ ಹೇಳಿದ. ಹ್ಯಾಮ್ಲೆಟ್ ರಾಜಕುಮಾರನ ಮನಸ್ಸಿನಲ್ಲಿ ‘ಮದರ್ ಕಾಂಪ್ಲೆಕ್ಸ್’ (ತನ್ನದೇ ತಾಯಿಯ ಕುರಿತಾದ ಲೈಂಗಿಕ ಆಕರ್ಷಣೆ) ಇದೆ ಎಂದು ಹೇಳಿದ. ಪ್ರಾಯ್ಡ್‌ನ ವಾದಗಳು ಪಾಶ್ಚಿಮಾತ್ಯ ಜಗತ್ತಿನ ಮೇಲೆ ಎಂತಹ (ಕೆಟ್ಟ) ಪ್ರಭಾವ ಬೀರಿದವೆಂದರೆ ಈಗ ಯುರೋಪ್ ಇಲ್ಲಿಯ ತನಕ ತಾನು ಕಾದುಕೊಂಡು ಬಂದಿದ್ದ ಪರಂಪರಾಗತ ಮೌಲ್ಯಗಳನ್ನು ಕಳೆದುಕೊಂಡು ನಿಂತುಬಿಟ್ಟಿತು.

ನಾಗರಿಕತೆ ಕಳಚಿ ಬಿದ್ದುಹೋಗಿ ದೊಡ್ಡ ಲೈಂಗಿಕ ಕ್ರಾಂತಿ ಆರಂಭವಾಯಿತು. ಬದಲಾದ ಮನಸ್ಥಿತಿಯನ್ನು ಫ್ರೆಂಚ್ ಸಿಂಬಲಿಸ್ಟ್ ಕಾವ್ಯ ದಟ್ಟವಾಗಿ ನಿರೂಪಿಸುತ್ತದೆ. ಈ ಪರಂಪರೆಯ ಕವಿ ಬೌದಲೇಯರ್ ಮೌಲ್ಯ ಗಳನ್ನು, ಅಕ್ಕ, ತಂಗಿ, ಅಣ್ಣ, ತಮ್ಮ, ತಾಯಿ ತಂದೆ ಇಂತಹ ಸಂಬಂಧ ಗಳನ್ನು ಕೂಡ ಗೇಲಿ ಮಾಡುತ್ತಾನೆ. ಆತನ ಪ್ರಸಿದ್ಧ ಕೃತಿ ‘ಫೈವರ್ಸ್ ಆಫ್ ಸಿನ್’ ಅನ್ನು ಕನ್ನಡಕ್ಕೆ ಪಿ. ಲಂಕೇಶ ‘ಪಾಪದ ಹೂಗಳು’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಬರುವ ಕವಿತೆ ಒಂದರಲ್ಲಿ ‘ಪ್ರಿಯತಮ’ನೊಬ್ಬ ವೇಶ್ಯೆ ಒಬ್ಬಳಿಗೆ ‘ನೀನು ನನ್ನ ಪ್ರೇಯಸಿ ಮತ್ತು ತಂಗಿ’ ಎಂದು ಹೇಳುತ್ತಾನೆ. ‌

ಅಂದರೆ ಆತನಿಗೆ ಪ್ರೇಯಸಿ, ತಂಗಿ ಮತ್ತು ವೇಶ್ಯೆಯ ನಡುವೆ ಇರುವ ವ್ಯತ್ಯಾಸವೇ ತಿಳಿದಿಲ್ಲ. ಎಲ್ಲವೂ ಒಂದೇ. ಕ್ರಮೇಣ ಇಂಗ್ಲೆಂಡ್ ಗೂ ಪಸರಿಸಿಕೊಂಡ ಕೊಳಕು ರುಚಿ ಮತ್ತು ದೃಷ್ಟಿಕೋನದ ಸಿಂಬಲಿಸ್ಟ್ ಕಾವ್ಯ ಟಿ.ಎಸ್.ಎಲಿಯಟ್ಟನ ಕಾವ್ಯವನ್ನೂ ಪ್ರಭಾವಿಸಿತು. ಎಲಿಯಟ್‌ನ ವೇಸ್ಟ್‌ ಲ್ಯಾಂಡ್‌ನಲ್ಲಿ ಓರ್ವ ‘ಪ್ರಿಯಕರ’ ಮತ್ತು ಪ್ರಿಯತಮೆಯ ಮಿಲನದ ಚಿತ್ರ ಬರುತ್ತದೆ. ‘ಪ್ರಿಯಕರ’ ಬರುತ್ತಾನೆ.

ಮಾತಿಲ್ಲ. ಕತೆಯಿಲ್ಲ. ಅವಳ ಮೇಲೆ ನೇರ ಎರಗುತ್ತಾನೆ. ಹೊರಟುಹೋಗುತ್ತಾನೆ. ಅಂದರೆ ಪ್ರೇಮ ನಾಶವಾಗಿ ಹೋಗಿದೆ. ಇರುವುದು ಕಾಮ ಮಾತ್ರ. ಈ ಜಗತ್ತಿನಲ್ಲಿ ಅಸಹ್ಯವೇ ‘ಸೌಂದರ್ಯ’ವಾಗಿ ಹೋಗಿದೆ. (ಎಲಿಯಟ್‌ನಿಗೆ ಈ ಕುರಿತು ತೀವ್ರ ವಿಷಾದವಿದೆ.) ಮಾರ್ಕ್ಸ್ ಮತ್ತು ಪ್ರಾಯ್ಡ್ ಹೀಗೆ ಅಸ್ತವ್ಯಸ್ತ ಗೊಳಿಸಿಹೋದ ಯೂರೋಪಿಯನ್ ಸಮಾಜದ ಮೇಲೆ ಮತ್ತೆ ನಂತರದ ಹಲವು ಸಾಮಾಜಿಕ (ಅವಂಟ್‌ಗಾರ್ಡ್) ಚಳುವಳಿಗಳು ದಾಳಿ ನಡೆಸಿದವು. ಅವುಗಳಲ್ಲಿ ಮುಖ್ಯವಾದವು ಆಂಗ್ರಿ ಯಂಗ್ ಮ್ಯಾನ್ ಚಳುವಳಿ, ಡಾಡಾಯಿಸಂ, ಕ್ಯೂಬಿಸಂ (ಅಸಂಗತತೆಯನ್ನು ಎತ್ತಿ ಹಿಡಿಯುವ, ಸಂಸ್ಕೃತಿ ವಿರೋಧಿ ಚಳುವಳಿಗಳು). ಜತೆಯಲ್ಲಿಯೇ ಬಂದವು ಬ್ರಾ ಬನಿಂಗ್ ಚಳುವಳಿ (ಬ್ರಾ ಸುಟ್ಟು ಹಾಕುವ ಮೂಲಕ ಸಮಾನತೆಯನ್ನು ಎತ್ತಿಹಿಡಿಯಲು ಬಯಸಿದ ಚಳುವಳಿ) ಮತ್ತು ಹಿಪ್ಪಿಯಿಸಂ (ವ್ಯವಸ್ಥೆ ವಿರೋಧಿ ಮಾದಕ ದ್ರವ್ಯ ಸೇವನೆಯ ಚಳುವಳಿ) ಪ್ರಮುಖವಾದವು.

ಇಪ್ಪತ್ತನೆಯ ಶತಮಾನದ ಎರಡನೆಯ ಭಾಗದಲ್ಲಿ ಹುಟ್ಟಿಕೊಂಡ ಇಂತಹ ಚಳುವಳಿಗಳು ದೊಡ್ಡ ಪ್ರಮಾಣದಲ್ಲಿ ಯೂರೋಪಿನಲ್ಲಿ ಸಾಮಾಜಿಕ, ನೈತಿಕ ಮೌಲ್ಯಗಳ ಅಧಃಪತನಕ್ಕೆ ಕಾರಣವಾದವು. ಇವೆಲ್ಲವಕ್ಕೆ ಮತ್ತೆ ದೆಹಲಿಯಲ್ಲಿ ಕಂಡ ಹುಡುಗಿಯ ಬೈಗುಳಕ್ಕೆ ಸಂಬಂಧವಿದೆ. ಏನೆಂದರೆ ಆ ಹುಡುಗಿಯ ಮನಸ್ಸು ಸ್ವಾತಂತ್ರ್ಯದ, ಸಮಾನತೆಯ ಹೆಸರಿನಲ್ಲಿ ಪಶ್ಚಿಮದಲ್ಲಿ ಕಂಡುಬಂದ, ಇರುವ, ಒಂದು ಯುವ ವರ್ಗದ ರೀತಿಯಲ್ಲಿ ಅರಾಜಕವಾದುದು. ಅಸ್ತವ್ಯಸ್ತವಾದುದು.

ಇಂತಹ ಮತ್ತು ಇಂತಹ ಅರಾಜಕ ಮನಸ್ಸು ಹುಟ್ಟಿಕೊಂಡಿರುವ ಕಾರಣ ಅವಳು ಮತ್ತು ಅವಳಂತ ವರ ಕುಟುಂಬಗಳು ಭಾರತೀಯ ಮೌಲ್ಯಗಳನ್ನು, ಸಂಸ್ಕೃತಿಯನ್ನು ಕಳೆದುಕೊಂಡು ಕುಳಿತಿದ್ದು. ನಮ್ಮ ಸಂಸ್ಕೃತಿಗಳು ವಿಕೃತಿಯನ್ನು ಆರಾಧಿಸಿದವುಗಳಲ್ಲ. ಮತ್ತು ಅವಳು ನಮ್ಮ ಸಂಸ್ಕೃತಿಯ, ಚರಿತ್ರೆಯ ಭಾಗವಾಗಿದ್ದರೆ ಇಂತಹ ಮನಸ್ಸು ಹುಟ್ಟಿಕೊಳ್ಳುತ್ತಿರಲಿಲ್ಲ. ಇಂತಹ ಅರಾಜಕವಾದ (anarchist) ಮನಸ್ಸು ಯಾರಿಗೆ ಏನು ಬೇಕಾದರೂ ಮಾತನಾಡುತ್ತದೆ. ಮಾಡುತ್ತದೆ. ಹಾಗಾಗಿ ಜೆನ್ ಝೀಯ ಈ ವರ್ಗ ಅಪಾಯಕಾರಿಯಾದುದು. ಅದನ್ನು ಜೆನ್ ಝೀಯ ಒಳ್ಳೆಯ ವರ್ಗದಿಂದ ಪ್ರತ್ಯೇಕವಾಗಿ ನೋಡಬೇಕಿದೆ. ಮತ್ತು ಜೆನ್ ಝೀಯನ್ನು ನಿಭಾಯಿಸುವುದರಲ್ಲಿ ತುಂಬ ಜಟಿಲವಾದ ವಿಷಯ ಇದು.