Guruaj Gantihole Column: ಸ್ವಾಭಿಮಾನಿ ಮಾಜಿ ಸೈನಿಕರಿಗೆ ಬದುಕಿನ ಅಭದ್ರತೆ !

ಕರ್ನಾಟಕದಿಂದ ಸೈನಿಕರಾಗಿ, ಸೇನೆಯ ವಿವಿಧ ವಿಭಾಗಗಳಿಗೆ ನಿಯೋಜನೆಗೊಂಡು ದೇಶಸೇವೆಗೆ ಕೊಡುಗೆ ನೀಡು ತ್ತಿರುವವರು ಲಕ್ಷ ಸಂಖ್ಯೆಯಲ್ಲಿದ್ದಾರೆ. ಇಂಥವರು ನಿವೃತ್ತರಾಗಿ

Profile Ashok Nayak Dec 19, 2024 9:33 AM
ಗಂಟಾಘೋಷ
ಗುರುರಾಜ್‌ ಗಂಟಿಹೊಳೆ
ಮಾಜಿ ಸೈನಿಕರು ಸರಕಾರದ ಯಾವೊಂದು ಯೋಜನೆಗೂ ಅರ್ಹತೆ ಪಡೆಯುವುದಿಲ್ಲ. ಬಿಪಿಎಲ್, ಗೃಹಲಕ್ಷ್ಮಿಗಳಂಥ ಯಾವ ಯೋಜನೆಯೂ ಇವರನ್ನು ತಲುಪುವುದಿಲ್ಲ. ಸಮಾಜದ ಒಂದು ಭಾಗವಾಗಿ ದ್ದರೂ, ಇತರರು ಪಡೆವ ಲಾಭಗಳನ್ನು ಪಡೆಯಲೂ ಮಾಜಿ ಸೈನಿಕರು ಹೋರಾಡಬೇಕಾದ ಸ್ಥಿತಿಯಿದೆ.
ದೇಶದ ರಕ್ಷಣೆಗೆ ಸಿಂಹಸದೃಶ ಯುವಕರ ಅಗತ್ಯವಿರುವುದರಿಂದ ಪ್ರತಿವರ್ಷವೂ ಸಾವಿರಾರು ಯುವಕರು ಸೇನೆ ಯನ್ನು ಸೇರುತ್ತಿರುತ್ತಾರೆ ಮತ್ತು ಸಾಮಾನ್ಯವಾಗಿ 35 ರಿಂದ 40 ವರ್ಷಕ್ಕೆಲ್ಲ ನಿವೃತ್ತರಾಗುತ್ತಾರೆ. ಈ ನಿವೃತ್ತಿಯ ನಂತರ ಮುಂದೇನು ಎಂಬ ಸವಾಲು ಅವರಿಗೆ ಎದುರಾಗುತ್ತದೆ. ಜನಸಾಮಾನ್ಯರ ಜೀವನದಲ್ಲಿ ಇದು ನಿವೃತ್ತಿಯವಯಸ್ಸಲ್ಲ. ಹಾಗಾಗಿ, ಸೇನೆಯ ಶಿಸ್ತು, ಬದುಕಿನೆಡೆಗಿನ ಆಸ್ಥೆ, ಇನ್ನೂ ಏನಾದರೂ ಮಾಡುವಂತೆ ಪ್ರೇರೇಪಿಸುತ್ತದೆ. ಕೆಲವರು ನೌಕರಿ, ಸ್ವಯಂ ಉದ್ಯೋಗದಂಥ ಆಯ್ಕೆಯೆಡೆಗೆ ಗಮನಕೊಡುತ್ತಾರೆ.
ಕರ್ನಾಟಕದಿಂದ ಸೈನಿಕರಾಗಿ, ಸೇನೆಯ ವಿವಿಧ ವಿಭಾಗಗಳಿಗೆ ನಿಯೋಜನೆಗೊಂಡು ದೇಶಸೇವೆಗೆ ಕೊಡುಗೆ ನೀಡು ತ್ತಿರುವವರು ಲಕ್ಷ ಸಂಖ್ಯೆಯಲ್ಲಿದ್ದಾರೆ. ಇಂಥವರು ನಿವೃತ್ತರಾಗಿ ಹುಟ್ಟೂರಿಗೆ ಮರಳಿದರೆ ಅವರನ್ನು ಸ್ವಾಗತಿಸುವ ಸಂಭ್ರಮವೇ ಬೇರೆ! ಹಳ್ಳಿಗಳಲ್ಲಂತೂ ಊರಹಬ್ಬದಂತೆ ಅಡುಗೆ ಮಾಡಿ ಖುಷಿಪಡುತ್ತಾರೆ. ಇವರಿಗೆಂದೇ ಕರ್ನಾಟಕ ಸರಕಾರ ದಿಂದ ಸೈನಿಕ ಕಲ್ಯಾಣ ಇಲಾಖೆ ಸ್ಥಾಪಿತವಾಗಿದ್ದು, ಇದಕ್ಕೆ 1,32,295ರಷ್ಟು ಮಾಜಿ ಸೈನಿಕರು, ವೀರನಾರಿ ಯರು ನೋಂದಣಿಯಾಗಿದ್ದಾರೆ. ಹೀಗಿದ್ದರೂ, ಸರಕಾರದಿಂದ ಇವರಿಗೆ ಸಿಗಬೇಕಾದ ಗೌರವ, ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ.
ಕನಿಷ್ಠಪಕ್ಷ, ಸರಕಾರ ಹೊರಡಿಸಿರುವ ಈ ಹಿಂದಿನ ಆದೇಶಗಳನ್ನಾದರೂ ಸರಿಯಾಗಿ ಜಾರಿಗೆ ತಂದರೆ, ಮಾಜಿ ಸೈನಿಕರ ಉಳಿದ ಬದುಕು ಹಸನಾಗಬಲ್ಲದು. ಇವರಿಗೆ ನಿವೇಶನ/ಭೂಮಿ ಮಂಜೂರಾತಿ ಮಾಡಲು ಕರ್ನಾಟಕ ಸರಕಾರವು ಹತ್ತಾರು ಆದೇಶಗಳನ್ನು ಹೊರಡಿಸಿದ್ದರೂ, ಈ ಯೋಜನೆಗಳು ಅವರನ್ನು ತಲುಪುತ್ತಿಲ್ಲ. ಸ್ವತಃ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ದಿವ್ಯನಿರ್ಲಕ್ಷ್ಯ ತೋರುತ್ತಿದ್ದಾರೆಎಂಬ ಅಳಲು ಈ ಮಾಜಿ ಸೈನಿಕರದು.
ಕರ್ನಾಟಕ ಸರಕಾರದ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಬೇಕೆಂದಿದ್ದರೂ, ಕೆಪಿಎಸ್‌ಸಿ, ಕೆಇಎ ಸೇರಿದಂತೆ ಇತರೆ ನೇಮಕಾತಿ ಪ್ರಾಧಿಕಾರಗಳು ಇವರೆಡೆಗೆ ಗಮನ ಕೊಡುತ್ತಿಲ್ಲ. ನಿವೃತ್ತಿಯ ಬಳಿಕ ಸ್ವಾವಲಂಬಿ ಜೀವನ ನಡೆಸಲು ಇವರಿಗೆ ಮತ್ತು ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಬೇಕಾದ ಸ್ಥಳೀಯ ಆಡಳಿತ/ಸರಕಾರಗಳು ನಿರ್ಲಕ್ಷ್ಯವನ್ನು ತೋರುತ್ತಿವೆ.
ಪುನರ್ ಉದ್ಯೋಗ ಪಡೆದವರಿಗೆ ವೇತನ ಭದ್ರತೆ ಕಲ್ಪಿಸಲು ಕೇಂದ್ರ ಸರಕಾರದ ಆದೇಶವಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲದಿರುವುದು ಕೂಡ ಶೋಚನೀಯ. ದೇಶಕ್ಕಾಗಿ ತ್ಯಾಗ-ಬಲಿದಾನ ಗೈದು ಮರಳಿಗೂಡಿಗೆ ಬಂದಿರುವ ಇಂಥವರಿಗೆ ಸಾಮಾಜಿಕ ಭದ್ರತೆ ಒದಗಿಸಲೆಂದು ನಿವೇಶನ/ಜಮೀನಿನ ಮೇಲೆ, ಸಿಎಸ್‌ಡಿ ಕ್ಯಾಂಟೀನ್ ಸಾಮಗ್ರಿಗಳ ಮೇಲೆ ಕೇಂದ್ರ ಸರಕಾರವು ಸಂಪೂರ್ಣ ರಿಯಾಯಿತಿ ನೀಡಿದೆ. ಆದರೆ ರಾಜ್ಯ ಸರಕಾರ ಶೇ.50ರಷ್ಟು ಕಂದಾಯ ವಸೂಲಿ ಮಾಡುತ್ತಿದೆ. ಹಾಗೆಯೇ, ಮಾಜಿ ಸೈನಿಕರ ಮಕ್ಕಳಿಗೆ ತಾಂತ್ರಿಕ, ವೈದ್ಯಕೀಯ ಶಿಕ್ಷಣಗಳಲ್ಲಿ ವಿಶೇಷ ಮೀಸ ಲಾತಿ ನೀಡಬೇಕು, ಮಾಜಿ ಸೈನಿಕರ ಮೇಲೆ ರಾಜ್ಯಾದ್ಯಂತ ವಿನಾಕಾರಣ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಾಮಾಜಿಕ ಭದ್ರತೆಗೆ ಬೇಕಾದ ಅನುಕೂಲ ಗಳನ್ನು ಒದಗಿಸಬೇಕು ಎಂಬುದೂ ಅವರ ಬಹುದಿನದ ಬೇಡಿಕೆಯಾಗಿದೆ.
ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸೈನಿಕ ಭವನ ನಿರ್ಮಿಸಲು ಉಚಿತ ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಬಹಳ ವರ್ಷಗಳಿಂದ ತಾವು ಮಾಡಿರುವ ಹಕ್ಕೊತ್ತಾಯವು ನನೆಗುದಿಗೆ ಬಿದ್ದಿದ್ದು, ಇದನ್ನೂ ಸರಕಾರ ಪರಿಗಣಿಸಬೇಕು ಎಂಬುದೂ ಮಾಜಿ ಸೈನಿಕರ ಕೋರಿಕೆಯಾಗಿದೆ. ಕರ್ನಾಟಕ ಸರಕಾರದ ಸುತ್ತೋಲೆ ಆರ್‌ಡಿ 22 ಎಲ್‌ಜಿಪಿ 2019 ಮತ್ತು 2021ರಲ್ಲೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನು ಅಳವಡಿಸಿಕೊಂಡು ನಿಯಮ 12(5)ರ ಅಡಿಯಲ್ಲಿ ಉಚಿತವಾಗಿ ಕಡ್ಡಾಯವಾಗಿ ಭೂಮಿ ಮಂಜೂರು ಮಾಡಲು ಅವಕಾಶ ಕಲ್ಪಿಸಿ ದ್ದರೂ, ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂಬ ಸಾತ್ವಿಕ ಕೋಪ, ಅಸಹನೆ ಮತ್ತು ನೋವು ಈ ಮಾಜಿ ಸೈನಿಕರದ್ದು.
ಮಿಕ್ಕಂತೆ, ರಾಜೀವ್ ಗಾಂಧಿ ವಸತಿ ಯೋಜನೆಗಳಲ್ಲಿಯೂ ನಮ್ಮನ್ನು ಸರಿಯಾಗಿ ಪರಿಗಣಿಸುತ್ತಿಲ್ಲ. ಇನ್ನು, ಪಾವತಿ ಆಯೋಗ ಕುರಿತಂತೆ ಕೇಂದ್ರ ಸರಕಾರದಿಂದ 10 ವರ್ಷಗಳಿಗಿದ್ದರೆ, ರಾಜ್ಯದಿಂದ 5 ವರ್ಷಕ್ಕೊಮ್ಮೆ ಅನುಷ್ಠಾನಕ್ಕೆ ತರುತ್ತಿದ್ದಾರೆ. ಈ ವಿಷಯದಲ್ಲೂ ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ವೇತನ ಆಯೋಗದ ಶಿಫಾರಸು ಜಾರಿಯಾಗಬೇಕೆಂಬುದು ನಮ್ಮ ಹಕ್ಕೊತ್ತಾಯವಾಗಿದೆ ಎನ್ನುತ್ತಾರೆ ಕುಂದಾಪುರದ ವೀರಯೋಧರೊಬ್ಬರು.
ಇನ್ನು ರೋಸ್ಟರ್ ಪದ್ಧತಿಯಲ್ಲಿ ಉದ್ಯೋಗ ನೀಡುವಿಕೆಯಂತೂ ಮಾಜಿ ಸೈನಿಕರನ್ನು ಹೈರಾಣು ಮಾಡಿಬಿಟ್ಟಿದೆ. ಉದ್ಯೋಗ ಮೀಸಲಾತಿಯು ಶೇ.10 ರಷ್ಟಿದ್ದರೂ, ಈ ಪದ್ಧತಿಯಲ್ಲಿ ನೂರು ಹುದ್ದೆಗಳನ್ನು ಕರೆದಿದ್ದರೆ ಸಿಗುವುದು ಒಂದೋ ಎರಡೋ ಮಾತ್ರ. ಹೀಗಾಗಿ ಬಹುತೇಕರು ಜೀವನ ನಿರ್ವಹಣೆಗಾಗಿ ಸೆಕ್ಯುರಿಟಿ ಗಾರ್ಡ್ ಉದ್ಯೋಗವನ್ನು ಆಯ್ಕೆಮಾಡಿಕೊಂಡಿದ್ದಾರೆ. ಇದರಿಂದಾಗಿ, ಮಾಜಿ ಸೈನಿಕರೆಂದರೆ ಸೆಕ್ಯುರಿಟಿ ಕೆಲಸ ಮಾಡಲು ಅರ್ಹರು ಎಂಬಮನೋಭಾವ ಶ್ರೀಸಾಮಾನ್ಯರಲ್ಲಿ ಬಂದುಬಿಟ್ಟಿದೆ.
ಬಹಳಷ್ಟು ಜನರು ಸೇನೆಯಿಂದ ಮರಳಿದ ಬಳಿಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಸಿನಿಮಾ,ಸೇವಾ ಕ್ಷೇತ್ರಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮಿಕ್ಕಂತೆ, ಶಾಲಾಕಾಲೇಜು ವಿದ್ಯಾರ್ಥಿಗಳಿಗೆವಿವಿಧ ರೀತಿಯ ಶಿಸ್ತು, ದೈಹಿಕ ತರಬೇತಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಕೆಲವರುಮನೆಯ ಅಕ್ಕಪಕ್ಕದಲ್ಲಿ ಚಿಕ್ಕಪುಟ್ಟ ಜನರಲ್ ಸ್ಟೋರ್ ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
ಇಂಥವರಿಗೆ ಸಾಲ ಸೌಲಭ್ಯ, ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ತಲುಪಿಸಲು ಇಲಾಖೆ ಮತ್ತುಸರಕಾರ ಯತ್ನಿಸಬೇಕು.
ಮತ್ತೊಂದು ಬೇಸರವೆಂದರೆ, ಈ ಮಾಜಿ ಸೈನಿಕರು ಸರಕಾರದ ಯಾವೊಂದು ಯೋಜನೆಗೂ ಅರ್ಹತೆ ಪಡೆಯು ವುದಿಲ್ಲ. ಬಿಪಿಎಲ್, ಗೃಹಲಕ್ಷ್ಮಿಗಳಂಥ ಯಾವ ಯೋಜನೆಯೂ ಇವರನ್ನು ತಲುಪುವುದಿಲ್ಲ. ಸಮಾಜದ ಒಂದು ಭಾಗವಾಗಿದ್ದರೂ, ಇತರರು ಪಡೆವ ಲಾಭಗಳನ್ನು ಪಡೆಯಲೂ ಮಾಜಿ ಸೈನಿಕರು ಹೋರಾಡಬೇಕಾದ ಸ್ಥಿತಿಯಿದೆ. ಇನ್ನು, ತಮಗೆ ಬೇಕಾದೆಡೆಗೆ ಉದ್ಯೋಗ ಮಾಡಲು ವರ್ಗಾವಣೆ ಕೇಳಿದರೆ, ‘ನಿಮ್ಮ ಸೇವಾಶ್ರೇಣಿಯನ್ನು ಬಿಟ್ಟು ಕೊಟ್ಟರೆ ಮಾತ್ರ ನೀವು ಕೇಳಿದೆಡೆಗೆ ವರ್ಗ’ ಎನ್ನುತ್ತಾರೆ ಅಧಿಕಾರಿಗಳು.
ದಶಕಗಳ ಕಾಲ ಕುಟುಂಬವನ್ನು ಬಿಟ್ಟು, ದೇಶದ ಗಡಿ ಕಾಯಲು, ಸೇನೆಯ ವಿವಿಧ ಕಾರ್ಯಕ್ಕೆಂದು ನಿಯೋಜಿತ ರಾದವರು ನಿವೃತ್ತಿಯ ಬಳಿಕವಾದರೂ ಕುಟುಂಬಿಕರೊಂದಿಗೆ ಕಾಲ ಕಳೆಯೋಣವೆಂದರೆ, ಕೊಟ್ಟ ಉದ್ಯೋಗದಲ್ಲಿ ಹೀಗೆ ಕಾಡಿಸಲಾಗುತ್ತದೆ ಎನ್ನುತ್ತಾರೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ.ಶಿವಣ್ಣ ಅವರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ ಮೇಲೆ ದಶಕಗಳ ಕಾಲ ಸೇನೆಯ ಬೇಡಿಕೆಯಾಗಿದ್ದ ‘ಒನ್ ರ‍್ಯಾಂಕ್, ಒನ್ ಪೆನ್ಷನ್’ ಜಾರಿಗೆ ತಂದು ಸೇನೆಯನ್ನು ಇನ್ನಷ್ಟು ಸದೃಢಗೊಳಿಸಲಾಯಿತು.
ಅತ್ಯಾಧುನಿಕ ಉಪಕರಣಗಳ ಮೂಲಕ ವಿಶ್ವದರ್ಜೆಯ ಸೇನಾವ್ಯವಸ್ಥೆಯನ್ನು ರೂಪಿಸಲಾಯಿತು. ಹಾಗೆಯೇ,ರಾಷ್ಟ್ರರಕ್ಷಣೆಯ ಭಾಗವಾಗಿ ‘ಅಗ್ನಿಪಥ’ ಎಂಬ ಅಲ್ಪಕಾಲಿಕ ಸೇನಾಸೇವೆಯನ್ನು ಜಾರಿಗೆ ತರಲಾಯಿತು. ಇದು ಸೇನೆಗೆ ಯುವ ಸಮುದಾಯವನ್ನು ಆಕರ್ಷಿಸುವಲ್ಲಿ, ಸೇನೆಯನ್ನು ಸದಾ ‘ತಾರುಣ್ಯದಲ್ಲಿ’ ಇಡುವಲ್ಲಿ ಸಹಕಾರಿ ಯಾಗಿದೆ. 2005ರ ಸುಮಾರಿನಲ್ಲಿ ಕಂದಾಯ ಇಲಾಖೆಯು ವಿಶೇಷ ಆಶ್ರಯ ಯೋಜನೆಯನ್ನು, ಗುಂಜೂರು ಪಾಳ್ಯ, ಕೊಡತಿ, ಗಂಟಿಗಾನಹಳ್ಳಿ, ಬೆಟ್ಟಲಸೂರು, ಯಲಹಂಕ, ಉತ್ತರಹಳ್ಳಿಯಂಥ ಕೆಲ ಪ್ರಮುಖ ಜಾಗಗಳಲ್ಲಿ ಪ್ರತಿ ಬಡಾವಣೆಗೆ 10 ಎಕರೆಯಷ್ಟು ಜಾಗವನ್ನು ಮೀಸಲಿಟ್ಟು ಜಾರಿಗೆ ತಂದಿತು.
ಮೂಲನಿವಾಸಿ ಸೈನಿಕ, ಅಂದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಸೇನೆ ಸೇರಿದವರಿಗೆ ಮಾತ್ರವೇ ಇಲ್ಲಿ ಉಚಿತನಿವೇಶನ ನೀಡುವ ಯೋಜನೆ ಇದಾಗಿತ್ತು. ಇಂಥ ಮಹತ್ವದ ಯೋಜನೆಯಡಿ ಅನ್ಯರಾಜ್ಯದವರು, ಸೈನಿಕರಲ್ಲ ದವರೂ ನಕಲಿ ಹೆಸರಿನಲ್ಲಿ ಇಲ್ಲಿ ನಿವೇಶನ ಪಡೆದಿದ್ದಾರೆ. ಇದರ ಹಿಂದೆ ಅಽಕಾರಿಗಳ ಕೈವಾಡವಿದೆ; ಈ ಒಂದೊಂದು ಜಾಗದಲ್ಲಿ 120 ನಿವೇಶನಗಳಿದ್ದು, ಒಂದೊಂದಕ್ಕೆ ೫೦-೬೦ ಲಕ್ಷ ರು.ನಷ್ಟು ಹಣ ಪಡೆದು ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ವಿಶೇಷ ಆಶ್ರಯ ಯೋಜನೆಯ ಭಾಗವಾದ ಉತ್ತರಹಳ್ಳಿ ಬಡಾವಣೆಯಲ್ಲಿ 44 ಎಕರೆ ಜಾಗವನ್ನು ಸೈನಿಕರಿಗೆ ಕೊಡಲೆಂದು ಖರೀದಿಸಿ, ಬೇರೆಯವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಇದರ ಮೇಲೆ ಬಿಡಿಎ ವಿಚಕ್ಷಣ ದಳದಿಂದ ದಾಳಿಯಾಗಿ, ಪತ್ರಿಕೆಗಳಲ್ಲೆಲ್ಲ ಈ ಹಗರಣದ ಮಾಹಿತಿ ಪ್ರಕಟವಾಗಿದೆ.
ಸಾವಿರಾರು ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದ್ದರೂ, ಕಂದಾಯ ಇಲಾಖೆ, ಸರಕಾರ ಸೈನಿಕರ ಹೆಸರಿನಲ್ಲಿ ನಡೆದ ಭೂಮಾಫಿಯಾವನ್ನು ಬದಿಗೆ ಸರಿಸಿ ತೆಪ್ಪಗೆ ಕುಳಿತಿವೆ. ಕೊಡತಿ ಬಡಾವಣೆಯಲ್ಲೂ ಬಹುಕೋಟಿ ಹಗರಣದ ವಾಸನೆ ಕಂಡುಬರುತ್ತಿದ್ದು, ದೊಡ್ಡ ಅಧಪಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತ ಚಿಕ್ಕ ಪುಟ್ಟ ಸೌಲಭ್ಯಕ್ಕಾಗಿ ನಮ್ಮ ಸೈನಿಕರು ಕಂಡಕಂಡ ಕಚೇರಿಯಲ್ಲಿ ಕೈಚಾಚುತ್ತ ಅಲೆಯುವಂತಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕಿದೆ ಎಂಬುದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಹಕ್ಕೊತ್ತಾಯ. ಸೌಲಭ್ಯದ ವಿಚಾರದಲ್ಲಿ ಹೀಗಿದ್ದರೆ, ಹತ್ತಾರು ವರ್ಷಗಳಿಂದ ಕುಟುಂಬ ಸದಸ್ಯರಿಂದ ದೂರವಿದ್ದು ದೇಶಸೇವೆಯಲ್ಲಿ ನಿರತವಾಗಿದ್ದುದರಿಂದ, ಅಗತ್ಯವಿದ್ದ ಕಡೆಗೆ ಅವರ ಬೇಡಿಕೆ ಪರಿಗಣಿಸಿ, ಕನಿಷ್ಠಪಕ್ಷ ತಮ್ಮದೇ ಜಿಲ್ಲೆಗಾದರೂ ಕಡ್ಡಾಯವಾಗಿ ಕೋರಿರುವ ಜಾಗಕ್ಕೇ ವರ್ಗಾವಣೆ ಮಾಡಲು ಸ್ಪಷ್ಟ ಆದೇಶ ನೀಡಬೇಕೆಂದು ಸರಕಾರದೆಡೆಗೆ ಒತ್ತಿ ಹೇಳುತ್ತಿದ್ದಾರೆ ಮಂಗಳೂರಿನ ಮಾಜಿ ಸೈನಿಕರೊಬ್ಬರು.
ದೇಶಕ್ಕಾಗಿ, ದೇಶವಾಸಿಗಳ ಸುರಕ್ಷತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಸೈನಿಕರಿಗೆ ಕೇಂದ್ರ ಸರಕಾರವು ಭರಪೂರ ಸೌಕರ್ಯಗಳನ್ನು, ಗೌರವವನ್ನು ಯಾವತ್ತೂ ನೀಡುತ್ತಾ ಬಂದಿದೆ. ಇದರೊಂದಿಗೆ ರಾಜ್ಯ ಸರಕಾರಗಳ ಕರ್ತವ್ಯಗಳೂ ಇದ್ದು, ಅವುಗಳನ್ನಾದರೂ ಸರಿಯಾಗಿ ಒದಗಿಸಿಕೊಟ್ಟರೆ, ಮಾಜಿ ಸೈನಿಕರು ಕಚೇರಿಯಿಂದ ಕಚೇರಿಗೆ ಬೇಡಿಕೆಪತ್ರ ಹಿಡಿದುಕೊಂಡು ಅಲೆದಾಡುವ ಅವಮಾನಕರ ಸ್ಥಿತಿಯಾದರೂ ತಪ್ಪುತ್ತದೆ. ದೇಶ ರಕ್ಷಣೆಗೆ ತಮ್ಮನ್ನು ಅರ್ಪಿಸಿಕೊಂಡು ಬದುಕುವ ಧಿರೋದಾತ್ತ ಸೈನಿಕರ ಉತ್ತರಾರ್ಧದ ಬದುಕನ್ನು ಸುಂದರವಾಗಿಸಲು ಬೆಂಬಲಿಸು ವುದು ನಮ್ಮ ನಿಮ್ಮೆಲ್ಲರ ಕರ್ತವ್ಯವೂ ಹೌದು.
ಇದನ್ನೂ ಓದಿ: Gururaj Gantihole Column: ಸರ್ವರ್‌ ಸಮಸ್ಯೆ: ನಂಗೂ ಫ್ರೀ, ನಿಂಗೂ ಫ್ರೀ…!
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು