ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ತನ್ನ ಸ್ವಾಮಿಯ ಆಜ್ಞಾಪಾಲಕನಾದ ಹನುಮಂತ

ಕೋಪಗೊಂಡ ಹನುಮಂತನನ್ನು ನೋಡಿದ ಕರ್ಣನು ಧನುಸ್ಸನ್ನು ರಥದ ಮೇಲೆ ಇಟ್ಟು ಕೈ ಮುಗಿದು ಕ್ಷಮೆಯಾಚಿಸಿದನು. ಶ್ರೀ ಕೃಷ್ಣನು ಹನುಮಂತನು ಕೋಪದಲ್ಲಿದ್ದುದ್ದನ್ನು ಕಂಡು ತನ್ನತ್ತ ತಿರುಗಿ ನೋಡುವಂತೆ ಹೇಳುತ್ತಾನೆ. ನಂತರ ಹನುಮಂತನು ಕೋಪದಿಂದಲೇ ಶ್ರೀಕೃಷ್ಣನನ್ನು ನೋಡುತ್ತಾನೆ. ತನ್ನ ಪ್ರಭುವನ್ನು ನೋಡುತ್ತಿದ್ದಂತೆ ಹನುಮಂತನ ಕೋಪ ಕರಗಿ ಮತ್ತೆ ಹಿಂದಿರುಗಿ ಬಂದು ರಥವನ್ನೇರಿ ಕುಳಿತುಕೊಳ್ಳುತ್ತಾನೆ.

ತನ್ನ ಸ್ವಾಮಿಯ ಆಜ್ಞಾಪಾಲಕನಾದ ಹನುಮಂತ

ಒಂದೊಳ್ಳೆ ಮಾತು

rgururaj628@gmail.com

ಕುರುಕ್ಷೇತ್ರ ಯುದ್ಧದಲ್ಲಿ ರಾಮನ ಅವತಾರ ಶ್ರೀಕೃಷ್ಣನನ್ನು ಬೆಂಬಲಿಸಿದ ಆಂಜನೇಯ. ಶ್ರೀ ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾದನು. ಅಂತೆಯೇ ಅರ್ಜುನನ ರಥದ ಮೇಲೆ ಜೋಡಿಸಲಾದ ಧ್ವಜದ ಮೇಲೆ ಹನುಮಂತನು ತನ್ನ ಸೂಕ್ಷ್ಮ ರೂಪದಲ್ಲಿ ವಿರಾಜಮಾನ ನಾದನು.

ಕರ್ಣ ಮತ್ತು ಅರ್ಜುನ ಇಬ್ಬರೂ ಸಹೋದರರು, ಇಬ್ಬರೂ ಒಂದೇ ತಾಯಿಯ ಮಕ್ಕಳು. ಆದರೆ ಇಬ್ಬರೂ ಬೇರೆ ಬೇರೆ ಪಕ್ಷಗಳಿಗಾಗಿ ಹೊಡೆದಾಡುತ್ತಿದ್ದರು. ಮಹಾಭಾರತದ ಯುದ್ಧವು ತನ್ನ ನಿರ್ಣಾ ಯಕ ತಿರುವಿನತ್ತ ಸಾಗುತ್ತಿತ್ತು. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅನೇಕ ಯೋಧರು ಹುತಾತ್ಮ ರಾಗಿದ್ದರು.

ಕರ್ಣನನ್ನು ಅರ್ಜುನನಂತೆ ಮಹಾನ್ ಯೋಧ ಎಂದು ಪರಿಗಣಿಸಲಾಗಿತ್ತು. ಇಬ್ಬರೂ ತಮ್ಮ ಶಕ್ತಿಶಾಲಿ ಆಯುಧಗಳಿಂದ ಪರಸ್ಪರ ಒಬ್ಬರ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದರು. ಅರ್ಜುನನ ಬಳಿ ಗಾಂಢೀವ ಎಂಬ ಬಿಲ್ಲಿದ್ದರೆ, ಕರ್ಣನ ಬಳಿ ವಿಜಯ ಎಂಬ ಬಿಲ್ಲಿತ್ತು.

ಇದನ್ನೂ ಓದಿ: Roopa Gururaj Column: ನವಗುಂಜರದ ಭಕ್ತಿ ಸಾರ

ಅರ್ಜುನ ಮತ್ತು ಕರ್ಣ ಪರಸ್ಪರ ಬಾಣಗಳ ಸುರಿಮಳೆಗೈದರು. ಅರ್ಜುನನು ಕರ್ಣನ ಕಡೆಗೆ ಬಾಣ ಗಳನ್ನು ಹೊಡೆಯುತ್ತಿದ್ದಾಗ ಅವನ ರಥವು 25-30 ಹೆಜ್ಜೆ ಹಿಂದಕ್ಕೆ ಸರಿಯುತ್ತಿತ್ತು. ಅದೇ ಸಮಯ ದಲ್ಲಿ ಕರ್ಣನ ಬಾಣಗಳ ದಾಳಿಯಿಂದ ಅರ್ಜುನನ ರಥವು ಕೇವಲ 2-3 ಹೆಜ್ಜೆ ಹಿಂದಕ್ಕೆ ಚಲಿಸು ತ್ತಿತ್ತು. ಅರ್ಜುನನ ರಥವು ಹಿಂದೆ ಸರಿದಾಗಲೆಲ್ಲಾ ಶ್ರೀ ಕೃಷ್ಣನ ಮುಖದಲ್ಲಿ ನಗು ಮೂಡುತ್ತಿತ್ತು ಮತ್ತು ಮುಕ್ತವಾಗಿ ಕರ್ಣನನ್ನು ಹೊಗಳುತ್ತಿದ್ದನು.

ಇದನ್ನು ನೋಡಿದ ಅರ್ಜುನನಿಗೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲಾಗಲಿಲ್ಲ. ತಾನು ಕರ್ಣನ ರಥವನ್ನು 30 ಹೆಜ್ಜೆ ಹಿಂದೆ ಸರಿಸಿದರೂ ಪ್ರಸನ್ನಗೊಳ್ಳದ ಕೃಷ್ಣ, ಕರ್ಣನನ್ನು ಈ ಪರಿ ಹೊಗಳಲು ಕಾರಣವನ್ನು ಕೇಳಿದನು. ಅರ್ಜುನ ಶ್ರೀಕೃಷ್ಣನನ್ನು ಪ್ರಶ್ನಿಸಿದಾಗ, ಶ್ರೀ ಕೃಷ್ಣನು ಮುಗುಳ್ನಕ್ಕು ಹೇಳಿದನು - ಓ ಪಾರ್ಥ!

ನಾನೇ ನಿನ್ನ ಸಾರಥಿ. ಈ ರಥದ ಧ್ವಜದ ಮೇಲೆ ಸಾಕ್ಷಾತ್ ಹನುಮಂತನೇ ಕುಳಿತಿದ್ದಾನೆ. ಚಕ್ರಗಳ ಮೇಲೆ ಶೇಷನಾಗ ಅಂದರೆ ನಮ್ಮ ಅಣ್ಣ ಬಲರಾಮನೂ ಇದ್ದಾನೆ. ನೀನಂತೂ ದೊಡ್ಡ ಬಿಲ್ಲುಗಾರ, ನಿನ್ನ ಶೌರ್ಯದೊಂದಿಗೆ ಈ ಎಲ್ಲಾ ಶಕ್ತಿಗಳ ಒಗ್ಗೂಡುವಿಕೆಯಿದ್ದರೂ, ಕರ್ಣನು ತನ್ನ ಆಕ್ರಮಣ ದಿಂದ ನಿನ್ನ ರಥವನ್ನು 2-3 ಹೆಜ್ಜೆ ಹಿಂದಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇದರಿಂದ ನಾವು ಕರ್ಣ ಎಷ್ಟು ಬಲಶಾಲಿಯಾಗಿದ್ದಾನೆ ಎಂಬುದನು ಅರ್ಥಮಾಡಿಕೊಳ್ಳಬೇಕು. ಶ್ರೀ ಕೃಷ್ಣನ ಈ ಮಾತುಗಳನ್ನು ಕೇಳಿದ ಅರ್ಜುನನಿಗೆ ಕರ್ಣನಂತಹ ಯೋಧನ ಶಕ್ತಿಯ ಬಗ್ಗೆ ಅರಿವು ಮೂಡಿತು. ಕರ್ಣನು ಅತ್ಯಂತ ಶಕ್ತಿಶಾಲಿಯಾಗಿದ್ದನು. ಆದರೆ ಯುದ್ಧ ನೀತಿಗಳನ್ನು ಮುರಿಯುವ ಹಕ್ಕು ಅವನಿಗೆ ಇರಲಿಲ್ಲ. ಕರ್ಣನು ಅರ್ಜುನನ ಮೇಲೆ ನಿರಂತರವಾಗಿ ಆಕ್ರಮಣ ಮಾಡಿದರೂ ಅರ್ಜುನನಿಗೆ ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ ಎಂದು ಕಡು ಕೋಪದಿಂದ ಒಂದೇ ಬಾರಿ ಅನೇಕ ಬಾಣಗಳನ್ನು ಪ್ರಯೋಗಿಸಿದನು.

ಬಾಣಗಳ ಸಂಖ್ಯೆ ಎಷ್ಟು ಹೆಚ್ಚಾಗಿತ್ತೆಂದರೆ ಅವುಗಳಲ್ಲಿ ಕೆಲವು ಶ್ರೀ ಕೃಷ್ಣನನ್ನೂ ಹೊಡೆಯ ಲಾರಂಭಿಸಿತು. ಕರ್ಣನ ಒಂದು ಬಾಣವು ಶ್ರೀ ಕೃಷ್ಣನ ಎದೆಗೆ ಮತ್ತು ಅವನ ರಕ್ಷಣಾ ಕವಚಕ್ಕೆ ಬಡಿದಿರುವುದನ್ನು ಕಂಡು ಹನುಮಂತನು ಕರ್ಣನ ಮೇಲೆ ಕೋಪಗೊಳ್ಳುತ್ತಾನೆ. ತಕ್ಷಣವೇ ಹನುಮಂತನು ರಥದ ಮೇಲಿನ ಧ್ವಜದಿಂದ ಕೆಳಗೆ ಜಿಗಿದು ತನ್ನ ರೂಪವನ್ನು ಪ್ರಸ್ತುತಪಡಿಸಿದನು.

ಕೋಪಗೊಂಡ ಹನುಮಂತನನ್ನು ನೋಡಿದ ಕರ್ಣನು ಧನುಸ್ಸನ್ನು ರಥದ ಮೇಲೆ ಇಟ್ಟು ಕೈ ಮುಗಿದು ಕ್ಷಮೆಯಾಚಿಸಿದನು. ಶ್ರೀ ಕೃಷ್ಣನು ಹನುಮಂತನು ಕೋಪದಲ್ಲಿದ್ದುದ್ದನ್ನು ಕಂಡು ತನ್ನತ್ತ ತಿರುಗಿ ನೋಡುವಂತೆ ಹೇಳುತ್ತಾನೆ. ನಂತರ ಹನುಮಂತನು ಕೋಪದಿಂದಲೇ ಶ್ರೀಕೃಷ್ಣನನ್ನು ನೋಡುತ್ತಾನೆ. ತನ್ನ ಪ್ರಭುವನ್ನು ನೋಡುತ್ತಿದ್ದಂತೆ ಹನುಮಂತನ ಕೋಪ ಕರಗಿ ಮತ್ತೆ ಹಿಂದಿರುಗಿ ಬಂದು ರಥವನ್ನೇರಿ ಕುಳಿತುಕೊಳ್ಳುತ್ತಾನೆ. ಎಷ್ಟೇ ಶಕ್ತಿವಂತನಾಗಿದ್ದರೂ, ಹನುಮಂತ ತನ್ನ ಸ್ವಾಮಿಯ ಅನುಮತಿ ಇಲ್ಲದೆ ಒಂದು ಹೆಜ್ಜೆಯನ್ನೂ ಇಡುತ್ತಿರಲಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಅಂತೆಯೇ ನಾವು ಎಷ್ಟೇ ದೊಡ್ಡವರಾದರೂ, ವಿದ್ಯಾವಂತರಾದರೂ ತಂದೆ ತಾಯಿಗಳಿಗೆ, ಗುರು ಹಿರಿಯರ ಮಾತಿಗೆ ಬೆಲೆ ಕೊಡಲೇಬೇಕು. ಇದು ನಮ್ಮ ಸನಾತನ ಧರ್ಮದಿಂದ ನಾವು ಕಲಿಯುವ ಸತ್ಸಂಸ್ಕಾರ.