ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Janamejaya Umarji Column: ಬಸವಾದಿ ಶರಣರ ಹಿಂದೂ ಸಮಾವೇಶ

ಹಿಂದೂ ದೇವರುಗಳನ್ನು ಹೀಗಳೆಯುವುದು, ದ್ವೇಷ ಭಾಷಣ ಮಾಡುವುದು ಹೀಗೆ ಚಳವಳಿಯೋ ಪಾದಿಯಲ್ಲಿ ಇದು ನಡೆಯುತ್ತಿದೆ. ಹೇಳಿದ್ದನ್ನೇ ಹೇಳುವ ಗೊಬೆಲ್ಸ್ ತಂತ್ರಕ್ಕೆ, ಜನರ ಸುಪ್ತಮಾನಸ ದವರೆಗೂ ಒಯ್ಯುವ ಪ್ರಯತ್ನಕ್ಕೆ ವಿರೋಧಿ ಗಟ್ಟಿ ಧ್ವನಿಗಳೇ ಇಲ್ಲ, ಇದ್ದರೂ ಅದನ್ನು ಅಧಿಕಾರ ಬಳಸಿ ಅದುಮಲಾಗುತ್ತಿದೆ ಎಂಬ ಅಭಿಪ್ರಾಯವು ವಚನಗಳಲ್ಲಿ ‘ಇಸಂ’ ಅನ್ನು ಹುಡುಕದವರಲ್ಲಿ ಇದೆ.

ಅಭಿಮತ

ಜನಮೇಜಯ ಉಮರ್ಜಿ

ಎಡಪಂಥೀಯ-ಕಮ್ಯುನಿಸ್ಟ್ ಲಾಬಿ ಉದ್ದೇಶಪೂರ್ವಕವಾಗಿ ಲಿಂಗಾಯತ ಪರಂಪರೆಯನ್ನು ರಾಜಕೀಯವಾಗಿ ಅಪಹರಿಸಿದೆ. ಲಿಂಗಾಯತರನ್ನು ಹಿಂದೂ ಸಮಾಜದಿಂದ ಬೇರ್ಪಡಿಸು ವುದು. ಬಸವಣ್ಣನವರನ್ನು ಹಿಂದೂ ವಿರೋಧಿಯಾಗಿ ರೂಪಿಸುವುದು. ಈ ವಿಭಜನೆಯ ಮೂಲಕ ಮತಬ್ಯಾಂಕ್ ರಾಜಕೀಯ ನಡೆಸುವುದು ಎಂಬಂಥ ಅವರ ಕಾರ್ಯತಂತ್ರ ಸ್ಪಷ್ಟ ವಾಗಿದೆ.

ಯಾರು ಮೋಕ್ಷಕ್ಕೆ ಹೋಗಬಹುದು? ಎಂಬ ಪ್ರಶ್ನೆಗೆ ಕನಕದಾಸರ ಒಂದು ಸಾರ್ವಕಾಲಿಕ ಉತ್ತರ ವಿದೆ. ಅದು, ‘ನಾನು ಹೋದರೆ ಹೋದೇನು’ ಎಂಬುದು. ಶಿವಶರಣರ ವಚನಗಳಲ್ಲಿಯೂ ಇದೇ ಭಾವ ಹಲವು ಕಡೆ ಬಂದಿದೆ. ‘ಸೋಹಂ ಎನಿಸದಿರಯ್ಯಾ, ದಾಸೋಹಂ ಎನಿಸಯ್ಯ, ಅಹಂಕಾರದ ಅಳಿವೇ ಲಿಂಗಾಂಗ ಸಾಮರಸ್ಯದ ಮೊದಲ ಮೆಟ್ಟಿಲು. ಎನಗಿಂತ ಕಿರಿಯರಿಲ್ಲ, ನಾನಳಿದರೇ ಉಳಿವು’ ಎಂಬ ಸದುವಿನಯದ ಸಂದೇಶವನ್ನು ಎಲ್ಲ ಶಿವಶರಣರು ನೀಡಿದ್ದಾರೆ.

ಶುದ್ಧ ಜೀವನಕ್ರಮ, ಸಾಮಾಜಿಕ ಸಾಮರಸ್ಯ, ಲಿಂಗಾಂಗ ಸಾಮರಸ್ಯ ಇವು, 12ನೆಯ ಶತಮಾನ ದಿಂದಲೂ ಶಿವಶರಣ ಪರಂಪರೆಯು ಒಪ್ಪಿಕೊಂಡು ಬಂದ ಗುರಿಗಳು. ಕಳೆದ 30-40 ವರ್ಷಗಳಿಂದ ಕಮ್ಯುನಿಸ್ಟ್ ಶಕ್ತಿಗಳು ವಚನಗಳನ್ನು ಬಂಡವಾಳ ಮಾಡಿಕೊಂಡು ಅವುಗಳಿಗೆ ಇಲ್ಲದ ಅರ್ಥ ಹಚ್ಚಿ, ಕಾರ್ಮಿಕ ಚಳವಳಿ ಮಾಡಿ, ಸಮಾಜ ಒಡೆಯಲು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ.

ಹಿಂದೂ ದೇವರುಗಳನ್ನು ಹೀಗಳೆಯುವುದು, ದ್ವೇಷ ಭಾಷಣ ಮಾಡುವುದು ಹೀಗೆ ಚಳವಳಿಯೋ ಪಾದಿಯಲ್ಲಿ ಇದು ನಡೆಯುತ್ತಿದೆ. ಹೇಳಿದ್ದನ್ನೇ ಹೇಳುವ ಗೊಬೆಲ್ಸ್ ತಂತ್ರಕ್ಕೆ, ಜನರ ಸುಪ್ತಮಾನಸ ದವರೆಗೂ ಒಯ್ಯುವ ಪ್ರಯತ್ನಕ್ಕೆ ವಿರೋಧಿ ಗಟ್ಟಿ ಧ್ವನಿಗಳೇ ಇಲ್ಲ, ಇದ್ದರೂ ಅದನ್ನು ಅಧಿಕಾರ ಬಳಸಿ ಅದುಮಲಾಗುತ್ತಿದೆ ಎಂಬ ಅಭಿಪ್ರಾಯವು ವಚನಗಳಲ್ಲಿ ‘ಇಸಂ’ ಅನ್ನು ಹುಡುಕದವರಲ್ಲಿ ಇದೆ.

‘ಗುಹೇಶ್ವರನಲ್ಲಯ್ಯಂಗೆ ಮೂಗಿಲ್ಲ ತಂಗಿ’ ಇದು ಪ್ರಭುದೇವರ ವಚನದ ಸಾಲು. ವಚನಗಳಲ್ಲಿ ಹಲವು ಕಡೆ ಮೂಗು ಅಹಂಕಾರದ ಸಂಕೇತವಾಗಿ ಬಳಕೆಯಾಗಿದೆ. ಗುಹೇಶ್ವರ ನಿರ್ಲಿಪ್ತ, ನಿರ್ವಿಕಲ್ಪ, ನಿರಾಮಯ. ಅಂಥ ಲಿಂಗಪತಿಗೆ ಸತಿಯಾದ ಶರಣನಿಗೂ ಅಭಿಮಾನ, ಅಹಂಕಾರ ಗಳೆಂಬ ಮೂಗಿಲ್ಲ.

ಇದನ್ನೂ ಓದಿ: Janamejaya Umarji Column: ಯಾವುದಾಗಬೇಕು ನಮ್ಮಾಯ್ಕೆ: ಗಾಂಧೀಜಿಯ ಹೆಸರೋ, ಆಶಯವೋ ?

ಮೂಗಿನ ಬಗ್ಗೆ ನಮ್ಮಲ್ಲಿ ಹಲವು ರೂಪಕಗಳಿವೆ. ಮೂಗು ಮುರಿಯುವುದು (ಒಪ್ಪದಿರುವುದು, ಅಸಮಾಧಾನ ಹೊಂದಿರುವುದು), ಮೂಗು ಕೊಯ್ದುಕೊಳ್ಳುವುದು (ತಮ್ಮತನವನ್ನು ನಾಶ ಮಾಡಿ ಕೊಳ್ಳುವುದು), ಮೂಗಿನ ನೇರಕ್ಕೆ ಮಾತನಾಡುವುದು (ನಾನು ಅಂದುಕೊಂಡಿದ್ದೇ ಸರಿ), ಮೂಗು ತೂರಿಸುವುದು (ಸಂಬಂಧವಿಲ್ಲದ ವಿಷಯಗಳಲ್ಲಿ ಪ್ರವೇಶಿಸುವುದು), ಮೂಗು ಹಿಡಿಯು ವುದು (ತಪ್ಪು ಎತ್ತಿ ತೋರಿಸುವುದು) ಹೀಗೆ.

ಗುಹೇಶ್ವರರಿಗೆ ಮೂಗಿಲ್ಲ ಎಂದರೆ ಯಾವ ದೋಷಗಳಿಲ್ಲ, ಪ್ರಾಕೃತ ಶರೀರವಿಲ್ಲ. ಆಕಾರವಿಲ್ಲ. ಆದರೆ ತಾವು ನಡೆದಿದ್ದೇ ಹಾದಿ ಎಂದುಕೊಂಡ ವಚನಾಕ್ರಮಿತ ಕಮ್ಯುನಿಸ್ಟ್ ಶಕ್ತಿಗಳ ಮೂಗು ದೊಡ್ಡದಾಗುತ್ತಲೇ ಹೋಗಿದೆ. ಅದು ಈಗ ಪ್ರಸಂಗವನ್ನು ಬಬಲೇಶ್ವರದ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ತಂದು ನಿಲ್ಲಿಸಿದೆ.

ಅಹಂಕಾರ ಬೆಳೆದರೆ, ಪ್ರತಿ ಕ್ಷಣಕ್ಕೂ ಅದನ್ನು ತಣಿಸಿಕೊಳ್ಳುವ ದಾಹ ಬೆಳೆಯುತ್ತದೆ. ಅದು ಸ್ವಂತಕ್ಕೆ ಮತ್ತು ಸಮಾಜಕ್ಕೆ ಎರಡಕ್ಕೂ ತೊಡಕಾಗುತ್ತದೆ. ಬಸವ ತತ್ವವನ್ನು ಗುತ್ತಿಗೆಗೆ ಹಿಡಿದಿದ್ದೇವೆ ಎಂದು ಕೊಂಡ ಕೆಲವರ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

ಕಳೆದ ವರ್ಷ ಬಂದ ‘ವಚನ ದರ್ಶನ’ವೆಂಬ ಪುಟ್ಟ ಪುಸ್ತಕ ಸಮಾಜದಲ್ಲಿ ಒಂದು ಜಾಗೃತಿ ಮೂಡಿ ಸಿತು. ಅದನ್ನು ಈ ಮಂದಿಗೆ ಸಹಿಸಿಕೊಳ್ಳಲಾಗಲಿಲ್ಲ. ಅದನ್ನೇ ಬಳಸಿಕೊಂಡು ತಾವು ಹೀರೋ ಆಗಲು ಪುಸ್ತಕವನ್ನು ವಿಲನ್ ಮಾಡಲಾಯಿತು. ಹೀಗಾಗಿ ಅವರು ಕಲಬುರಗಿಯಲ್ಲಿ ತಮ್ಮದಲ್ಲದ ಕಾರ್ಯಕ್ರಮದಲ್ಲಿ ಬಂದು ಗೊಂದಲ ಎಬ್ಬಿಸಿದರು.

ಪುಸ್ತಕದ ಯಶಸ್ಸಿಗೆ ಆ ಘಟನೆಯೂ ಕಾರಣ. ಪುಸ್ತಕವನ್ನು ನಿಷೇಧಿಸಬೇಕೆಂದು ಹಟ ತೊಟ್ಟ ಪಟಾಲಮ್ಮಿಗೆ ಎದುರಾಗಿದ್ದು ನಿರಾಸೆ. ಸಮಾಧಾನಕ್ಕಾಗಿ ಇದರ ವಿರುದ್ಧ ನಾಲ್ಕು ಪುಸ್ತಕವನ್ನು ತರಲಾಯಿತು. ಅವುಗಳನ್ನು ಊರೂರಲ್ಲಿ ಬಿಡುಗಡೆ ಮಾಡಲಾಯಿತು. ಇದು ಅಲ್ಲಿಗೇ ನಿಲ್ಲಲಿಲ್ಲ. ಬಸವ ಜಯಂತಿಯ ನಿಮಿತ್ತ ಮಾಡಿಕೊಂಡು, ಇತ್ತ ಶಿವಶರಣರ ಸಂದೇಶಗಳೂ ಇಲ್ಲ, ಈ ಪರಂಪರೆ ಗೆ ಸಂಬಂಧವೇ ಇಲ್ಲದವರ ಭಾವಚಿತ್ರಗಳನ್ನೂ ಹಾಕಿ ರಾಜ್ಯಾದ್ಯಂತ ರಥಯಾತ್ರೆ ನಡೆಸಲಾಯಿತು. ಸಮಾಧಾನವಾಗಲಿಲ್ಲ.

ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನು ವಿಜೃಂಭಿಸುವ ಅಭಿಯಾನ ವನ್ನು ಮಾಡಲಾಯಿತು. ಅದೇ ಕಾಲಕ್ಕೆ ಜಾತಿಗಣತಿ ಮಾಡಿಸಿ ವೀರಶೈವ-ಲಿಂಗಾಯತ ಒಡಕನ್ನು ತಾರಕಕ್ಕೇರಿಸಲು ಪ್ರಯತ್ನಿಸಲಾಯಿತು. ಆತ್ಮೋದ್ಧಾರದ ಮಾತು ಆ ಕಡೆ ಇರಲಿ, ಇದು ರಾಜಕೀಯದ ರಂಗಮಂಚ ವಾಯಿತು. ಆದರೂ ಸಮಾಧಾನವಾಗಲಿಲ್ಲ. ತಾತ್ಕಾಲಿಕವಾಗಿಯಾದರೂ ಒಂದಿಷ್ಟು ಸಮಾಧಾನ ಕ್ಕಾಗಿ ಸಿಕ್ಕ ಅವಕಾಶವೇ ಕನ್ಹೇರಿ ಶ್ರೀಗಳ ವಿಜಯಪುರ ಜಿಲ್ಲಾ ನಿರ್ಬಂಧ.

ಅದು ತಿರುಗುಬಾಣವಾಗಿದ್ದು ಬಬಲೇಶ್ವರದಲ್ಲಿ ವಿದಿತವಾಗಿದೆ. ಅವರನ್ನು ತಡೆಯುವ ತೆರೆಯ ಮುಂದಿನ ಮತ್ತು ಹಿಂದಿನ ಎಲ್ಲಾ ಪ್ರಯತ್ನಗಳನ್ನು ಶ್ರೀಗಳೇ ವೇದಿಕೆಯಲ್ಲಿ ಸಾರ್ವಜನಿಕವಾಗಿ ಬಿಡಿಸಿಟ್ಟಿದ್ದಾರೆ.

ಬಸವಾದಿ ಶರಣರ ಹಿಂದೂ ಸಮಾವೇಶ ಎಂಬುದು ಕೇವಲ ಒಂದು ಸಭೆ ಅಥವಾ ಕಾರ್ಯಕ್ರಮ ವಲ್ಲ. ಅದು ಯಾರ ವಿರುದ್ಧವೂ ಅಲ್ಲ ಎಂಬ ಸ್ಪಷ್ಟನೆಯನ್ನು ಅದರ ಆಯೋಜಕರು ನೀಡಿದ್ದಾರೆ. ಸಮಾವೇಶವು ಶಿವಶರಣರ ಇತಿಹಾಸ, ತತ್ವ, ಸಂಸ್ಕೃತಿಯ ಸತ್ಯವನ್ನು ಪುನರುಚ್ಚರಿಸುವ ಮಹಾ ಪ್ರವಾಹ. 12ನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣನವರ ಮತ್ತು ಶಿವಶರಣರ ಚಿಂತನೆಯ ಮೂಲಭೂತ ತತ್ವಗಳನ್ನು ರಾಜಕೀಯ ಮತ್ತು ವೈಚಾರಿಕ ವಿಕೃತಿಯಿಂದ ರಕ್ಷಿಸುವ ಪ್ರಯತ್ನ ಇದು ಎಂಬುದು ಆಯೋಜಕರ ಅಂಬೋಣ.

ಒಟ್ಟಿನಲ್ಲಿ ಸಮಾವೇಶ ಯಶಸ್ವಿಯಾಗಿದೆ. ಇದು ಸಮಾಜದ ಒಳಗಿನಿಂದಲೇ ಮೂಡಿ ಬಂದ ಜಾಗೃತಿ ಯ ಪ್ರತೀಕವಾಗಿದೆ. ಬಸವಣ್ಣನವರು ಮತ್ತು ಶಿವಶರಣರು ಹಿಂದೂ ಧರ್ಮವನ್ನು ತಿರಸ್ಕರಿಸಿದ ವರಲ್ಲ, ಕಾಲವಶವಾಗಿ ಅದರಲ್ಲಿ ಬಂದ ಕೊಳೆಯನ್ನು ತೊಳೆದವರು. ಬಸವಣ್ಣನವರು ಹೊಸ ಧರ್ಮ ಸ್ಥಾಪನೆ ಮಾಡಿದ್ದಾರೆ ಎಂಬುದಕ್ಕೆ ಒಂದು ವಚನದಲ್ಲಿಯೂ ಪ್ರಮಾಣವಿಲ್ಲ.

ಅಂತೆಯೇ ಕಮ್ಯುನಿಸ್ಟರು ಹೇಳುವ ಕಾರ್ಮಿಕ ಚಳವಳಿ, ಬಂಡಾಯ, ಸಮಸಮಾಜ ಈ ಯಾವ ಶಬ್ದಗಳೂ ಒಂದೂ ವಚನದಲ್ಲಿ ಬಂದಿಲ್ಲ. ಈ ಅಭಿಪ್ರಾಯಗಳು ಜನಮಾನಸದಲ್ಲಿ ಮೂಡು ತ್ತಿರುವುದಕ್ಕೆ ಸಮಾವೇಶವೇ ಸಾಕ್ಷಿ. ಇತ್ತೀಚಿನ ದಶಕಗಳಲ್ಲಿ ಎಡಪಂಥೀಯ-ಕಮ್ಯುನಿಸ್ಟ್‌ ಲಾಬಿ ಉದ್ದೇಶಪೂರ್ವಕವಾಗಿ ಲಿಂಗಾಯತ ಪರಂಪರೆಯನ್ನು ರಾಜಕೀಯವಾಗಿ ಅಪಹರಿಸಿದೆ.

ಲಿಂಗಾಯತರನ್ನು ಹಿಂದೂ ಸಮಾಜದಿಂದ ಬೇರ್ಪಡಿಸುವುದು. ಬಸವಣ್ಣನವರನ್ನು ಹಿಂದೂ ವಿರೋಧಿಯಾಗಿ ರೂಪಿಸುವುದು. ಈ ವಿಭಜನೆಯ ಮೂಲಕ ಮತಬ್ಯಾಂಕ್ ರಾಜಕೀಯ ನಡೆಸು ವುದು ಎಂಬಂಥ ಅವರ ಕಾರ್ಯತಂತ್ರ ಸ್ಪಷ್ಟವಾಗಿದೆ. ಮಾರ್ಕ್ಸ್ ವಾದಿ ಚಿಂತನೆ ಸದಾ ಸಂಘರ್ಷ ಮತ್ತು ವಿಭಜನೆಯ ಮೇಲೆ ನಿಂತಿದೆ. ಹಿಂದೂ ನಾಗರಿಕತೆ ಸಹಜವಾಗಿ ಸಮನ್ವಯ ಮತ್ತು ವೈವಿಧ್ಯ ವನ್ನು ಒಳಗೊಂಡಿರುವುದರಿಂದ, ಅದನ್ನು ನೇರವಾಗಿ ಕುಸಿತಗೊಳಿಸಲು ಸಾಧ್ಯವಾಗದೆ, ಒಳಗಿಂದಲೇ ಒಡೆದು ಆಳುವ ತಂತ್ರವನ್ನು ಬಳಸಲಾಗುತ್ತಿದೆ.

ಲಿಂಗಾಯತ ಸಮುದಾಯ ಈ ಪ್ರಯತ್ನಕ್ಕೆ ಸುಲಭದ ಗುರಿಯಾಗಿದೆ. ವಚನಗಳನ್ನು ಆಯ್ದು ಕೊಂಡು ವ್ಯಾಖ್ಯಾನಿಸುವುದು, ಆಧುನಿಕ ರಾಜಕೀಯ ಸಿದ್ಧಾಂತಗಳನ್ನು 12ನೇ ಶತಮಾನದ ಶಿವಶರಣ ಪರಂಪರೆಯ ಮೇಲೆ ಹೇರುವುದು, ಇಂಥ ಬೌದ್ಧಿಕ ಅಪ್ರಾಮಾಣಿಕತೆಯನ್ನು ಜನ ಅರಿತುಕೊಂಡಿರುವುದಕ್ಕೆ ಸೇರಿದ ಜನವೇ ಸಾಕ್ಷಿ.

ಇದರೊಂದಿಗೆ ಎಡಪಂಥೀಯ ಬುದ್ಧಿಜೀವಿಗಳು ಪ್ರಚಾರ ಮಾಡಿದ ‘ಲಿಂಗಾಯತರು ಹಿಂದೂಗಳಲ್ಲ’ ಎಂಬ ವಾದ ಮತ್ತೊಮ್ಮೆ ನಿರಸನವಾಗಿದೆ. ಗ್ರಾಮೀಣ ಮಟ್ಟದಿಂದ ಮಠ-ಮಾನ್ಯಗಳವರೆಗೆ, ಜಗುಲಿ ಪೂಜೆಗಳಿಂದ ಮಹಾಶಿವರಾತ್ರಿ ಆಚರಣೆಯವರೆಗೆ ಎಲ್ಲವೂ ಹಿಂದೂವೇ ಆಗಿದೆ. ಬಸವಣ್ಣ ಹಿಂದೂ ಧರ್ಮದ ಸುಧಾರಕರು, ವಿರೋಧಿಗಳಲ್ಲ. ಶಿವಶರಣರ ವಚನಗಳು ಆತ್ಮೋನ್ನತಿಗೆ ದಾರಿ, ರಾಜಕೀಯ ಟೂಲ್‌ಕಿಟ್‌ಗಳಲ್ಲ.

ಹಿಂದೂ ಅಸ್ಮಿತೆ ಧಾರ್ಮಿಕ ಪಂಜರವಲ್ಲ, ಈ ದೇಶದ ಅಸ್ತಿತ್ವ. ಈ ವಿಚಾರದಲ್ಲಿ ಮೊದಲಿಗೂ ಈಗೂ ಯಾವುದೇ ಗೊಂದಲಗಳಿಲ್ಲ ಎಂಬುದನ್ನು ಜನರು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಬಸವಾದಿ ಶರಣರ ಹಿಂದೂ ಸಮಾವೇಶವು ಒಂದು ದಿನದ ಕಾರ್ಯಕ್ರಮವಲ್ಲ, ಇದು ಆತ್ಮರಕ್ಷಣೆ ಯ ಆಂದೋಲನ. ಹಿಂದೂ ಧರ್ಮದೊಳಗೆ ನಡೆದ ಎಲ್ಲ ಸುಧಾರಣಾ ಚಳವಳಿಗಳು ಸಮಾಜ ವನ್ನು ವಿಭಜಿಸದೆ, ಬಲಪಡಿಸಿವೆ.

ಬಸವಣ್ಣನವರ ಧ್ಯೇಯ ಆಧ್ಯಾತ್ಮಿಕ ವಿಮುಕ್ತಿ, ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ಜೀವನವೇ ವಿನಾ ವಿಭಜನೆ ಅಲ್ಲ. ರಾಜಕೀಯ ವಿಕೃತಿಗೆ ಪ್ರತಿಯಾಗಿ ಸತ್ಯವನ್ನು ಸ್ಥಾಪಿಸುವ ಇಂಥ ಸಮಾ ವೇಶಗಳ ಅವಶ್ಯಕತೆ ಇದೆ. ಆದರೆ ಇದು ಇಲ್ಲಿಗೆ ನಿಲ್ಲುತ್ತಾ ಅಥವಾ ತಾರ್ಕಿಕ ಅಂತ್ಯದವರೆಗೆ ಮುಂದುವರಿಯುತ್ತಾ? ಕಾಲವೇ ಹೇಳಬೇಕು...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)