ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಖಾದ್ರಿ ಕಪ್ರ ಎಡಿಟರ್‌ ಆಗಿದ್ದು ಹೇಗೆ ?

ಖ್ಯಾತ ಪತ್ರಕರ್ತ ಖಾದ್ರಿ ಶಾಮಣ್ಣ ಅವರು ‘ಕನ್ನಡ ಪ್ರಭ’ ಸಂಪಾದಕರಾಗಿದ್ದು ಹೇಗೆ? ಈ ಪ್ರಶ್ನೆಗೆ ಇತ್ತೀಚೆಗೆ ನಾನು ದಿವಂಗತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ಅವರ ‘ದಿ ಗೋಯೆಂಕಾ ಲೆಟರ್ಸ್’ ಪುಸ್ತಕ ವನ್ನು (ಪುಟ 66) ಓದುವಾಗ ಉತ್ತರ ಸಿಕ್ಕಿತು. ಈ ಕೃತಿಯಲ್ಲಿ ಜಾರ್ಜ್ ಅವರು ಗೋಯೆಂಕಾ ಅವರಿಗೆ ಬಂದ ಮತ್ತು ಅವರು ಬೇರೆಯವರಿಗೆ ಬರೆದ ಕೆಲವು ಪ್ರಮುಖ ಪತ್ರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

ಸಂಪಾದಕರ ಸದ್ಯಶೋಧನೆ

ಖ್ಯಾತ ಪತ್ರಕರ್ತ ಖಾದ್ರಿ ಶಾಮಣ್ಣ ಅವರು ‘ಕನ್ನಡ ಪ್ರಭ’ ಸಂಪಾದಕರಾಗಿದ್ದು ಹೇಗೆ? ಈ ಪ್ರಶ್ನೆಗೆ ಇತ್ತೀಚೆಗೆ ನಾನು ದಿವಂಗತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ಅವರ ‘ದಿ ಗೋಯೆಂಕಾ ಲೆಟರ್ಸ್’ ಪುಸ್ತಕವನ್ನು (ಪುಟ 66) ಓದುವಾಗ ಉತ್ತರ ಸಿಕ್ಕಿತು. ಈ ಕೃತಿಯಲ್ಲಿ ಜಾರ್ಜ್ ಅವರು ಗೋಯೆಂಕಾ ಅವರಿಗೆ ಬಂದ ಮತ್ತು ಅವರು ಬೇರೆಯವರಿಗೆ ಬರೆದ ಕೆಲವು ಪ್ರಮುಖ ಪತ್ರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

1978ರ ಜುಲೈ 15ರಂದು ಎಚ್.ಡಿ.ದೇವೇಗೌಡರು ಕರ್ನಾಟಕ ಪ್ರದೇಶ ಜನತಾ ಪಕ್ಷದ ಲೆಟರ್ ಹೆಡ್‌ನಲ್ಲಿ, ಅಂದಿನ ಅಖಿಲ ಭಾರತ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳೂ, ರಾಜ್ಯಸಭಾ ಸದಸ್ಯರೂ ಆದ ರಾಮಕೃಷ್ಣ ಹೆಗಡೆಯವರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ದೇವೇಗೌಡರು ಹೀಗೆ ಬರೆಯುತ್ತಾರೆ- ‘ನನ್ನ ಆತ್ಮೀಯರಾದ ಶ್ರೀ ಹೆಗಡೆ ಅವರೇ, ಈ ಪತ್ರದೊಂದಿಗೆ ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣನವರ ಬಯೋ-ಡೇಟಾವನ್ನು ನಿಮ್ಮ ಮಾಹಿತಿಗಾಗಿ ಲಗತ್ತಿಸಿ ದ್ದೇನೆ.

ಇದನ್ನೂ ಓದಿ: Vishweshwar Bhat Column: ಗೇಮ್ ರಿಸರ್ವ್ ಎಂದರೇನು ?

ನಿಮಗೆ ಗೊತ್ತಿರುವಂತೆ, ಖಾದ್ರಿ ಶಾಮಣ್ಣನವರನ್ನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಿಂದ ಉಚ್ಚಾಟಿಸಲಾಗಿದೆ. ಅವರು ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಬರಹಗಾರರು. ಇಲ್ಲಿಯ ತನಕ ಸಂಪಾದಕರಾಗಿದ್ದ ಶ್ರೀ ರಾಮಕೃಷ್ಣ ಮೂರ್ತಿಯವರ ನಿಧನದಿಂದಾಗಿ ‘ಕನ್ನಡ ಪ್ರಭ’ ಪತ್ರಿಕೆಯ ಸಂಪಾದಕ ಹುದ್ದೆ ಖಾಲಿ ಬಿದ್ದಿದೆ. ದಯವಿಟ್ಟು ನೀವು ಪತ್ರಿಕೆಯ ಮಾಲೀಕರಾದ ಶ್ರೀ ರಾಮನಾಥ ಗೋಯೆಂಕಾ ಅವರ ಬಳಿ ಮಾತಾಡಿ, ಶಾಮಣ್ಣನವರನ್ನು‘ಕನ್ನಡ ಪ್ರಭ’ದ ಸಂಪಾದಕ ರಾಗಿ ನೇಮಿಸುವಂತೆ ಮಾಡಬೇಕು. ಇದು ಪ್ರಸ್ತುತ ಸಂಕಷ್ಟದಲ್ಲಿರುವ ಶಾಮಣ್ಣನವರಿಗೆ ಬಹಳ ದೊಡ್ಡ ಮಟ್ಟದ ಸಹಾಯವಾಗುತ್ತದೆ. ಧನ್ಯವಾದಗಳು. ಇತಿ ನಿಮ್ಮ ವಿಶ್ವಾಸಿ, ಎಚ್.ಡಿ.ದೇವೇಗೌಡ.’ ಈ ಪತ್ರವನ್ನು ಓದಿದ ರಾಮಕೃಷ್ಣ ಹೆಗಡೆ ಅವರು, ದೇವೇಗೌಡರ ಪತ್ರದೊಂದಿಗೆ ಲಗತ್ತಿಸಲಾಗಿದ್ದ ಖಾದ್ರಿ ಶಾಮಣ್ಣ ಅವರ ಬಯೋಡಾಟಾವನ್ನು ಸೇರಿಸಿ, ತಮ್ಮ ಲೆಟರ್ ಹೆಡ್‌ನಲ್ಲಿ ರಾಮನಾಥ ಗೋಯೆಂಕಾ ಅವರಿಗೆ ಪತ್ರ ಬರೆಯುತ್ತಾರೆ.

ಹೆಗಡೆಯವರು ತಮ್ಮ ಪತ್ರದಲ್ಲಿ ಹೀಗೆ ಬರೆಯುತ್ತಾರೆ- ‘ಖಾದ್ರಿ ಶಾಮಣ್ಣ ಅವರು ಕನ್ನಡದ ಹಿರಿಯ ಪತ್ರಕರ್ತರು. ಅವರು ಇಲ್ಲಿಯ ತನಕ ಕನ್ನಡದ ಪ್ರಮುಖ ಪತ್ರಿಕೆಗಳಾದ ‘ಪ್ರಜಾವಾಣಿ’ಯ ಸುದ್ದಿ ಸಂಪಾದಕರಾಗಿದ್ದರು ಮತ್ತು ‘ಸಂಯುಕ್ತ ಕರ್ನಾಟಕ’ದ ಪ್ರಧಾನ ಸಂಪಾದಕರಾಗಿದ್ದರು. ಈಗ ಅವರು ಆ ಪತ್ರಿಕೆಯನ್ನು ತೊರೆದಿದ್ದಾರೆ. ನಿಮ್ಮ ಮಾಲೀಕತ್ವದ ‘ಕನ್ನಡ ಪ್ರಭ’ ಸಂಪಾದಕರ ನಿಧನದಿಂದ ಆ ಹುದ್ದೆ ಖಾಲಿ ಆಗಿದೆ ಎಂದು ಬಲ್ಲೆ. ಆ ಹುದ್ದೆಗೆ ಖಾದ್ರಿ ಶಾಮಣ್ಣನವರನ್ನು ನೇಮಿಸಬೇಕು ಎಂದು ಪ್ರಾರ್ಥಿಸಿಕೊಳ್ಳುತ್ತೇನೆ. ಶಾಮಣ್ಣ ಅವರು ಆ ಹುದ್ದೆಗೆ ಸಮರ್ಥ ವ್ಯಕ್ತಿ ಎಂದು ಹೇಳಬಯಸುವೆ. ಧನ್ಯವಾದಗಳು, ನಿಮ್ಮ ವಿಶ್ವಾಸಿ, ರಾಮಕೃಷ್ಣ ಹೆಗಡೆ.’

ಈ ಪತ್ರವನ್ನು ಓದಿದ ರಾಮನಾಥ ಗೋಯೆಂಕಾ, ಹೆಗಡೆ ಅವರಿಗೆ ಉತ್ತರ ಬರೆದು, ತಾವು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಆಗುವಂತೆ ಖಾದ್ರಿ ಶಾಮಣ್ಣನವರಿಗೆ ತಿಳಿಸಿ ಎಂದು ಹೇಳುತ್ತಾರೆ. ಮುಂದಿನದು ಎಲ್ಲರಿಗೂ ಗೊತ್ತಿದೆ. ನಂತರ ಖಾದ್ರಿ ಶಾಮಣ್ಣ ಅವರು ‘ಕನ್ನಡ ಪ್ರಭ’ ಪತ್ರಿಕೆಯ ಸಂಪಾದಕರಾದರು. ಆ ಹುದ್ದೆಯಲ್ಲಿ 1978ರಿಂದ ತಾವು ನಿಧನರಾಗುವ ತನಕ ಅಂದರೆ 1990ರವರೆಗೆ ಇದ್ದರು. ಆದಾದ ಬಳಿಕ ಸುಮಾರು ಆರು ತಿಂಗಳ ಅವಧಿಗೆ ಕೆ.ಸತ್ಯನಾರಾಯಣ ಅವರು ಪತ್ರಿಕೆಯ ಹಂಗಾಮಿ ಸಂಪಾದಕ ಅಥವಾ ಉಸ್ತುವಾರಿಯಾಗಿದ್ದರು. ಈ ಮಧ್ಯೆ, ಸಂಪಾದಕ ಹುದ್ದೆಗೆ ಕನ್ನಡದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಹೆಗಡೆ ಅವರ ಮೂಲಕ ಲಾಬಿ ಮಾಡಿದರು. ತಕ್ಕಮಟ್ಟಿಗೆ ಯಶಸ್ವಿಯೂ ಆದರು.

ಲಂಕೇಶ ಅವರು ‘ಲಂಕೇಶ ಪತ್ರಿಕೆ’ ಮೂಲಕ ಆಗ ಹೆಸರು ಮಾಡಿದ್ದರಿಂದ ತಾವೂ ಒಂದು ಪ್ರಮುಖ ಪತ್ರಿಕೆಯ ಸಂಪಾದಕರಾಗಬೇಕು ಎಂಬ ಆಸೆ ಅವರಲ್ಲಿ ಗರಿಗೆದರಿತ್ತು. ಆದರೆ ಇದೇ ಸಮಯಕ್ಕೆ ಅವರಿಗೆ ಕೇರಳದ ಕೊಟ್ಟಾಯಂನಲ್ಲಿರುವ ಗಾಂಧಿ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಹುದ್ದೆ ಸಿಕ್ಕಿತು. ಅಷ್ಟೇ ಅಲ್ಲ, ಅವರ ಕೆಲವು ಆಪ್ತರು, ‘ಕನ್ನಡ ಪ್ರಭ’ ಸಂಪಾದಕ ಹುದ್ದೆಯನ್ನು ವಹಿಸಿ ಕೊಳ್ಳುವುದು ಬೇಡ ಎಂಬ ಸಲಹೆಯನ್ನು ನೀಡಿದರು. ಹೀಗಾಗಿ ಅನಂತಮೂರ್ತಿ ಅವರು ಆ ಆಸೆಯನ್ನು ಕೈಬಿಟ್ಟರು. ಅದಾದ ಬಳಿಕ ವೈಯೆನ್ಕೆ ‘ಕನ್ನಡ ಪ್ರಭ’ ಸಂಪಾದಕರಾದರು.

ವಿಶ್ವೇಶ್ವರ ಭಟ್‌

View all posts by this author