ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಐ ಸ್ಟ್ಯಾಂಡ್‌ ವಿತ್‌ ಅನ್ನೋದು ಚಟ ಆದ್ರೆ: ʼಸ್ಟ್ಯಾಂಡ್‌ʼ ಅಪ್‌ ಕಾಮೆಡಿ

ಬಾಯಿಗೆ ಬಂದಿದ್ದು ಮಾತಾಡೋದು, ನಂತರ, ‘ನಾನು ಹಾಗೆ ಹೇಳೇ ಇಲ್ಲ, ನನ್ನ ಮಾತನ್ನ ತಿರುಚಲಾಗಿದೆ’ ಅಂತ ಹೇಳೋದು ರಾಜಕಾರಣಿಗಳ ಹಣೆಬರಹ. ಇನ್ನುಳಿದವರಿಗೆ, ಏನೇನೋ ಮಾತಾಡೋದು, ನಂತರ ತಪ್ಪಾಯ್ತು ಅಂತ ಕ್ಷಮೆ ಕೇಳೋದು ಚಾಳಿ. ಇದು ಇತ್ತೀಚೆಗೆ ಚಿತ್ರರಂಗ ದಲ್ಲಿ ಜಾಸ್ತಿ ಆಗಿದೆ. ಚಿತ್ರರಂಗದ ದೊಡ್ಡವರ ಬಗ್ಗೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡೋದು, ನಂತರ ನಾನು ಹಾಗೆ ಮಾತಾಡಬಾರದಿತ್ತು.

ತುಂಟರಗಾಳಿ

ಸಿನಿಗನ್ನಡ

ಬಾಯಿಗೆ ಬಂದಿದ್ದು ಮಾತಾಡೋದು, ನಂತರ, ‘ನಾನು ಹಾಗೆ ಹೇಳೇ ಇಲ್ಲ, ನನ್ನ ಮಾತನ್ನ ತಿರುಚಲಾಗಿದೆ’ ಅಂತ ಹೇಳೋದು ರಾಜಕಾರಣಿಗಳ ಹಣೆಬರಹ. ಇನ್ನುಳಿದವರಿಗೆ, ಏನೇನೋ ಮಾತಾಡೋದು, ನಂತರ ತಪ್ಪಾಯ್ತು ಅಂತ ಕ್ಷಮೆ ಕೇಳೋದು ಚಾಳಿ. ಇದು ಇತ್ತೀಚೆಗೆ ಚಿತ್ರರಂಗದಲ್ಲಿ ಜಾಸ್ತಿ ಆಗಿದೆ. ಚಿತ್ರರಂಗದ ದೊಡ್ಡವರ ಬಗ್ಗೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡೋದು, ನಂತರ ನಾನು ಹಾಗೆ ಮಾತಾಡಬಾರದಿತ್ತು. ನಿಮ್ಮ ಮನಸ್ಸಿಗೆ ನೋವಾಗಿದ್ರೆ ಸಾರಿ ಅನ್ನೋದು. ಇದಕ್ಕೆ ಲೇಟೆ ಉದಾಹರಣೆ ಸ್ಯಾಂಡಲ್‌ವುಡ್ ನರ‍್ಮಾಪಕ ಕನಕಪುರ ಶ್ರೀನಿವಾಸ್. ಇತ್ತೀಚೆಗೆ ತಮ್ಮ ಚಿತ್ರದ ಪ್ರಮೋಷನ್ ಸಮಯದಲ್ಲಿ ಪುನೀತ್ ರಾಜ್ ಕುಮಾರ್, ಧ್ರುವ ರ‍್ಜಾ, ರ‍್ಶನ್, ಜೋಗಿ ಪ್ರೇಮ, ಎ.ಪಿ.ಅರ್ಜುನ್ ಇನ್ನೂ ಮುಂತಾದ ಅನೇಕರ ಬಗ್ಗೆ ಕೀಳುಭಾಷೆಯಲ್ಲಿ ಮಾತಾಡಿದ್ದ ಶ್ರೀನಿವಾಸ್ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದರು.

ಚಿತ್ರದ ಪ್ರಚಾರವೇದಿಕೆಯ ಮೇಲೆ ನಿಂತು ಅಸಹ್ಯವಾದ ಭಾಷೆ ಮತ್ತು ಪದಗಳ ಪ್ರಯೋಗ ಮಾಡಿದ್ದರು ಶ್ರೀನಿವಾಸ್. ಮಾನಸಿಕ ಅಸ್ವಸ್ಥನಂತೆ ಮಾತಾಡಿದ್ದ ಅವರನ್ನು ನೋಡಿ, ‘ಇದು ಹೀಗೇ ಮುಂದುವರಿದರೆ ಶ್ರೀನಿವಾಸನ ಕಥೆ ಗೋವಿಂದ’ ಅಂತ ಅನೇಕರು ಅಂದುಕೊಂಡಿದ್ದರು.

ಅವುಗಳನ್ನು ಕೇಳಿದ ಅನೇಕರು ಈವಯ್ಯನಿಗೆ ಕೇಡುಗಾಲ ಬಂದಿದೆ ಅಂತ ಆಡಿಕೊಂಡರೆ, ಇನ್ನು ಕೆಲವರು ಇನ್ನು ಕೆಲವು ದಿನಗಳಲ್ಲಿ ಸಾರಿ ಅಂತ ತಡವರಿಸುತ್ತಾರೆ ಬಿಡಿ ಅಂತ ಸುಮ್ಮನಾಗಿದ್ದರು. ಈಗ ಹಂಗೇ ಆಗಿದೆ. ಹೊಸದಾಗಿ ಆಯ್ಕೆ ಆಗಿರುವ ವಾಣಿಜ್ಯ ಮಂಡಳಿ ಯ ಅಧ್ಯಕ್ಷೆ ಜಯಮಾಲಾ ಅವರ ಜತೆ ಕೂತು, ‘ನಾನು ಹಾಗೆ ಮಾತಾಡಬಾರದಿತ್ತು, ನಿಮ್ಮ ಮನಸ್ಸಿಗೆ ನೋವಾಗಿದ್ರೆ ಕ್ಷಮಿಸಿ’ ಅಂದಿದ್ದಾರೆ ಶ್ರೀನಿವಾಸ್.

ಇದನ್ನೂ ಓದಿ: Hari Paraak Column: ತುಳಿದವನು ಬಾಳಿಯಾನು

ಅದರಲ್ಲಿ ನೋವಾಗಿದ್ದರೆ ಅನ್ನೋ ಪ್ರಮೇಯವೇ ಇಲ್ಲ. ಅವರ ಮಾತಿನಿಂದ ಹಲವರಿಗೆ ನೋವಾಗಿದ್ದು ನಿಜವೇ. ಆದ್ರೂ ಶ್ರೀನಿವಾಸ್ ಈಗ ‘ಸಾರಿ’ಯ ತಿಪ್ಪೆ ಸಾರಿಸಿದ್ದಾರೆ. ಇದು ಸ್ಯಾಂಡಲ್ ವುಡ್‌ನ ಇತ್ತೀಚಿನ ಕೆಟ್ಟ ಬೆಳವಣಿಗೆ ಆದ್ರೂ ಇವರು ರಾಜಕಾರಣಿಗಳ ಥರ, ‘ನಾನು ಹೇಳಿದ್ದನ್ನು ತಿರುಚಲಾಗಿದೆ’ ಅಂತ ಹೇಳದೆ ನೇರವಾಗಿ ‘ಸಾರಿ’ ಕೇಳಿದ್ದಾರೆ ಅನ್ನೋದು ಮಾತ್ರ ಸಮಾಧಾನದ ವಿಷಯ.

ನೆಟ್ ಪಿಕ್ಸ್

ಅದು ಒಂದು ಸರಕಾರಿ ಹಾಸ್ಪಿಟಲ್. ಸುಮಾರು ಜನ ಅಲ್ಲಿ ಅಡ್ಮಿಟ್ ಆಗಿದ್ದರು. ಆದರೆ ಎಲ್ಲರಿಗೂ ಗೊತ್ತಿರುವಂತೆ ಡಾಕ್ಟರ್‌ಗಳ ಸಂಖ್ಯೆ ಕಮ್ಮಿ,‌ ನರ್ಸ್‌ʼಗಳ ಸಂಖ್ಯೆ ಕಮ್ಮಿ. ವ್ಯವಸ್ಥೆ ಗೊಂದಲಮಯ. ಅಲ್ಲಿದ್ದ ಸ್ಟಾಫ್‌ʼಗಳು ಪಾಪ ಕಷ್ಟಪಟ್ಟು ಪರಿಸ್ಥಿತಿಯನ್ನು ಹೆಂಗೋ ನಿಭಾಯಿಸುತ್ತಿದ್ದರು.

ಅಷ್ಟರಲ್ಲಿ ಒಂದು ದಿನ ಬೆಳಗ್ಗೆ ಅಲ್ಲಿನ ರಿಸೆಪ್ಷನಿಗೆ ಒಂದು ಕಾಲ್ ಬಂತು. ಆಕೆ ಎತ್ತಿ ‘ಹಲೋ’ ಅಂದ್ಳು. ಆ ಕಡೆಯಿಂದ ಒಬ್ಬ ಗಂಡಸಿನ ವಾಯ್ಸ್ ಬಂತು: “ಮೇಡಂ, ಬೆಡ್ ‌ ನಂಬರ್ 302ರಲ್ಲಿ ಇರೋ ಖೇಮು ಅನ್ನೋ ಪೇಷೆಂಟ್ ಪರಿಸ್ಥಿತಿ ಹೇಗಿದೆ ಈಗ?" “ಒಂದ್ ನಿಮಿಷ ಇರಿ, ಡೀಟೇಲ್ಸ್ ನೋಡ್ತೀನಿ... ಹ್ಞಾ ಅವರು ಈಗ ಚೆನ್ನಾಗೇ ಇದ್ದಾರೆ".

“ಆವರ ಆಕ್ಸಿಜನ್ ಲೆವೆಲ್ ಹೇಗಿದೆ?"

“ಕಂಟ್ರೋಲ್‌ನಲ್ಲಿದೆ ಸರ್"

“ಅವರ ಬಿಪಿ ಸರಿ ಇದೆಯಾ, ಹಾರ್ಟ್‌ ಪ್ರಾಬ್ಲಮ್ ಏನೂ ಇಲ್ಲ ತಾನೇ?"

“ಎಲ್ಲ ಸರಿ ಇದೆ ಸರ್"

“ಖೇಮು ಅವರಿಗೆ ಎಲ್ಲಾ ಮೆಡಿಸಿನ್ ಸರಿಯಾಗಿ ಕೊಡ್ತಾ ಇದ್ದಾರಾ,

ಅವರ ಹೆಲ್ತ್ ಪ್ರೋಗ್ರೆಸ್ ಹೇಗಿದೆ?"

“ಸರ್, ಖೇಮು ಅವರು ಎಲ್ಲ ರೀತಿಯಿಂದ ಆರೋಗ್ಯವಾಗಿದ್ದಾರೆ.

ಮೋಲೀ ನಾಳೆ ಅವರನ್ನ ಡಿಸ್‌ಚಾರ್ಜ್ ಮಾಡ್ತಾರೆ. ಅದ್ಸರಿ, ನೀವ್ಯಾರು,‌ ಅವರಿಗೆ ತುಂಬಾ ಹತ್ತಿರವರು ಅನ್ನಿಸುತ್ತೆ, ಅವರ ಮಗನಾ?" “ಅ ಮೇಡಂ, ನಾನೇ ಖೇಮು ಮಾತಾಡ್ತಾ ಇರೋದು; ಬಡ್ಡಿಮಕ್ಳು, ಇಲ್ಲಿ ಯಾರೂ ಏನ್ ಆಗ್ತಿದೆ ಅಂತ ಹೇಳೋರೇ ಗತಿ ಇಲ್ಲ".

ಲೂಸ್‌ ಟಾಕ್:‌ ನರೇಂದ್ರ ಮೋದಿ

ಏನ್ ಸರ್, ಮತ್ತೆ ಸ್ವಚ್ಛ ಭಾರತ್ ಅಭಿಯಾನದ ಇನ್ನೊಂದು ಇನ್ನಿಂಗ್ಸ್‌ ಶುರುಮಾಡಿದ್ದೀರಂತೆ, ಏನ್ ಕಾನ್ಸೆಪ್ಟ್ ಈ ಸಲ?

- ಉಪ್ಪು ತಿಂದವ ನೀರು‌ ಕುಡಿಯಬೇಕು, ‘ಸುಸ್ಸು’ ಮಾಡಿದವ ನೀರು ಹಾಕಲೇಬೇಕು.

ಓಹೋ, ಸರಿ. ಎಲ್ಲರನ್ನೂ ಮತ್ತೆ ಕಸ ಗುಡಿಸೋ ಕೆಲಸಕ್ಕೆ ಇಳಿಸೋ ಪ್ಲ್ಯಾನ್ ಇದೆಯಂತೆ?

- ಹೌದು, ಈಗ ಯಾರು ಬೇಕಾದರೂ ಕಸ ಗುಡಿಸಬಹುದು, ನಮ್ಮದು ಈಗ ‘ಗುಡಿಸಲು’ ಮುಕ್ತ ದೇಶ.

ಈ ಅಭಿಯಾನಕ್ಕೆ ಏನಾದ್ರೂ ಸ್ಲೋಗನ್ ಇಟ್ಟಿದ್ದೀರಾ?

- ಹೌದು. ಭಾರತಕ್ಕಾಗಿ ಕಸ ‘ಗುಡಿ’ಸಿ, ನಿಮ್ಮ ದೇಶ ದೇವರ ‘ಗುಡಿ’ ಆಗುತ್ತದೆ. ಹೆಂಗಿದೆ?

ಸೂಪರ್. ಸರಿ, ಈ ಅಭಿಯಾನದ ಉದ್ದೇಶ ಏನು?

- ಎಲ್ಲರಿಗೂ ಕಸ ಗುಡಿಸೋ ಕೆಲ್ಸ ಕೊಟ್ರೆ, ದೇಶನೂ ಕ್ಲೀನ್ ಆಗುತ್ತೆ, ನಿರುದ್ಯೋಗ ಸಮಸ್ಯೆನೂ ನಿವಾರಣೆ ಆಗುತ್ತೆ ಓಹೋ, ಮಾಸ್ಟರ್ ಪ್ಲ್ಯಾನ್ ನಿಮ್ಮದು.

ಸರಿ, ಇದಕ್ಕೆ ಯಾವಾಗ ಚಾಲನೆ ಕೊಡ್ತೀರಾ?

- ಆದಷ್ಟು ಬೇಗ ಟ್ವೀಟ್ ಮಾಡ್ತೀನಿ- ‘ಕೊಚ್ಚೇ’ ದಿನ್ ಜಾನೇವಾಲೇ ಹೈ ಅಂತ.

(ಕಾಲ್ಪನಿಕ ಸಂದರ್ಶನ)

ಲೈನ್ ಮ್ಯಾನ್

ಸೋಮು: ಕಂಡಕಂಡ ಹುಡುಗಿಯರ ಹತ್ರ ಫ್ಲರ್ಟ್‌ ಮಾಡ್ತೀಯಲ್ಲ ನಿನ್ನ ಹೆಂಡ್ತಿ ಏನೂ ಅನ್ನಲ್ವಾ?

- ಖೇಮು: ಇಲ್ಲಪ್ಪ, ಅವಳು ಅದನ್ನೆ ತುಂಬಾ ಸ್ಪೋರ್ಟಿವ್‌ ಆಗಿ ತಗೋತಾಳೆ. ಅಂದ ಹಾಗೆ ಅವಳ ಫೇವರಿಟ್ ಸ್ಪೋರ್ಟ್‌ WWF

ಕೋಳಿಗಳ ಹಣೆಬರಹ

- ಕೋಳಿಗಳು ಎಷ್ಟ್‌ ವರ್ಷ ಬದುಕಿರ್ವವೆ ಅಂತ ಯಾರಿಗೂ ಗೊತ್ತಿಲ್ಲ ಅನ್ಸುತ್ತೆ. ಪಾಪ, ಬದುಕೋಕೆ ಬಿಟ್ರೆ ತಾನೇ ಗೊತ್ತಾಗೋದು. ಸ್ವಲ್ಪ ದೊಡ್ಡದಾದ ತಕ್ಷಣ ಕೊಯ್ಕೊಂಡ್ ತಿಂದ್ ಬಿಡ್ತೀವಿ

ಲೇಟೆಸ್ಟ್ ಟ್ರೆಂಡ್

- ಕೆಲವರು ‘ಐ ಸ್ಟ್ಯಾಂಡ್‌ ವಿತ್’ ಅನ್ನೋಕೆ ತುದಿಗಾಲ ನಿಂತಿರ್ತಾರೆ.

ಮಾತೆತ್ತಿದರೆ, ‘ಐ ಸ್ಟ್ಯಾಂಡ್ ವಿತ್’ ಅನ್ನೋರದ್ದು

- ‘ಸ್ಟ್ಯಾಂಡ್’ ಅಪ್ ಕಾಮಿಡಿ

‘ಐ ಸ್ಟ್ಯಾಂಡ್ ವಿತ್’ ಅನ್ನೋದು ಎಲ್ಲ ಟೈಮಲ್ಲೂ ಸಪೋರ್ಟ್‌ ಮಾಡಿದ ಹಾಗಾಗಲ್ಲ

- ಯಾಕಂದ್ರೆ, ಯಾರಾದ್ರೂ ಎಲೆಕ್ಷನ್ನಿಗೆ ನಿಂತಾಗ ‘ಐ ಸ್ಟ್ಯಾಂಡ್ ವಿತ್’ ಅಂದ್ರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡ್ತಾ ಇದ್ದೀನಿ ಅಂತ ಅರ್ಥ.

‘ಮತ’ದಾರರು ರಾಜಕಾರಣಿಗಳನ್ನ ಹೇಗೆ ಹೆದರಿಸಬಹುದು?

- ನೀನ್ ಹಿಂಗೇ ಆಡ್ತಾ ಇದ್ರೆ, ನನ್ ‘ಕೈ’ ಮಾತಾಡಲ್ಲ, ನನ್ ‘ಬೆರಳು’ ಮಾತಾಡುತ್ತೆ ಅಷ್ಟೇ.

ರಾಜ್ಯದಲ್ಲಿ ಆಗ್ತಾ ಇರೋ ಎಲ್ಲಾ ಅವಘಡಗಳಿಗೂ ಮುಖ್ಯಮಂತ್ರಿಯೇ ಕಾರಣ

- ಯಾಕಂದ್ರೆ ಇದು ‘ರಾಜ’ಕಾರಣ

ಸೋತವರನ್ನು ಆಡಿಕೊಳ್ಳೋ ಮಂದಿ, ಆಡಿಕೊಂಡು ಸಾಕಾದಾಗ ಏನಂತಾರೆ?

- ಅಯ್ಯೋ, ಹೋಗ್ಲಿ ಬಿಡಿ, ದಿನಾ ಸೋಲೋರಿಗೆ ನಗರ‍್ಯಾರು

ಒಂದರ ಹಿಂದೆ ಒಂದು ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್

- ‘ಸೋಪ್’ ಫ್ಯಾಕ್ಟರಿ

ಧಾರಾವಾಹಿಗಳ ಟಿಆರ್‌ಪಿ

- ‘ಸೀರಿಯಲ’ ನಂಬರ್

ಹರಿ ಪರಾಕ್‌

View all posts by this author