ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಗವದ್ಗೀತಾ ಪಠಣದ ಮಹತ್ವ

ಇಂಥ ಅದ್ಭುತ ಧರ್ಮಗ್ರಂಥಗಳನ್ನು ನಮ್ಮ ಹಿರಿಯರು ನಮಗಾಗಿ ನೀಡಿ ಹೋಗಿದ್ದಾರೆ. ಭಾರ ತೀಯ ಸನಾತನ ಧರ್ಮದ ಬೇರುಗಳಾದ ಈ ಮಹಾಗ್ರಂಥಗಳಲ್ಲಿ ಜೀವನಕ್ಕೆ ಬೇಕಾದ ಮುಕ್ತಿಮಾರ್ಗ, ಮೌಲ್ಯ ಗಳು, ಕಷ್ಟಕ್ಕೆ ಬೇಕಾದ ಸಾಂತ್ವನ, ಮನಸ್ಸಿಗೆ ಬೇಕಾದ ನೆಮ್ಮದಿ-ಆತ್ಮವಿಶ್ವಾಸ ಬದುಕಿಗೆ ಬೇಕಾದ ಭರವಸೆ ಎಲ್ಲವೂ ಹಂತಹಂತವಾಗಿ ನಮಗೆ ದಕ್ಕುತ್ತಾ ಹೋಗುತ್ತವೆ.

ಒಂದೊಳ್ಳೆ ಮಾತು

ದುಃಖದಲ್ಲಿದ್ದ ಜನಸಾಮಾನ್ಯರಿಗೆ ಭಗವದ್ಗೀತೆಯ ಸಂದೇಶವನ್ನು ಸಾರಲು ಸಂತರೊಬ್ಬರು ವಿವಿಧ ಊರುಗಳಿಗೆ ಸಂಚರಿಸುತ್ತಿದ್ದರು. ಅವರೊಂದಿಗೆ ಕೆಲ ಶಿಷ್ಯರು ಕೂಡ ಹೋಗುತ್ತಿದ್ದರು. ಒಂದು ಹಳ್ಳಿಯಲ್ಲಿ, ಆ ಸಂತರ ಉಪದೇಶಗಳಲ್ಲಿ ಅಲ್ಲಿನ ಯಾರಿಗೂ ಆಸಕ್ತಿ ಇಲ್ಲವೆಂದು ಶಿಷ್ಯರು ಗಮನಿಸಿ ದರು.

ಹಳ್ಳಿಯವರ ಆಧ್ಯಾತ್ಮಿಕ ಆಸಕ್ತಿಯನ್ನು ಪರೀಕ್ಷಿಸಲು, ಶಿಷ್ಯರು ಭಗವದ್ಗೀತೆಯ ಕೆಲವು ಪ್ರತಿ ಗಳೊಳಗೆ 500 ರುಪಾಯಿಯ ನೋಟನ್ನು ಇಟ್ಟು, ಅವುಗಳನ್ನು ಪುಸ್ತಕಗಳ ಮೇಜಿನ ಮೇಲೆ ಇಟ್ಟು ಬಂದರು. ಒಂದು ವಾರದ ನಂತರವೂ ಆ ಪುಸ್ತಕಗಳನ್ನು ಯಾರೂ ತೆಗೆಯದೇ ಹಾಗೇ ಇದ್ದವು. ನೋಟುಗಳೂ ಅದರೊಳಗೇ ಇದ್ದವು.

ಇದನ್ನು ಕಂಡ ಶಿಷ್ಯರು, ‘ಈ ಹಳ್ಳಿಯವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇಲ್ಲ, ಇವರು ಪುಸ್ತಕಗಳನ್ನು ಮುಟ್ಟಲೂ ಇಲ್ಲ’ ಎಂದು ತೀರ್ಮಾನಿಸಿ, ಗುರುಗಳಿಗೆ ಹಳ್ಳಿಯವರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಿದರು.

ಇದನ್ನು ಕೇಳಿದ ಸಂತರು ಶಿಷ್ಯರನ್ನು ಗದರಿಸುತ್ತಾ, “ಅಯ್ಯೋ ಮೂರ್ಖರೇ! ಭಗವದ್ಗೀತೆ ಎಷ್ಟೊಂ ದು ಮಹಿಮೆಯುಳ್ಳ ಗ್ರಂಥ ಎಂದರೆ ಅದನ್ನು ಕೇವಲ ನೋಡುವುದರಿಂದಲೂ, ಮುಟ್ಟುವುದ ರಿಂದಲೂ, ಓದುವುದರಿಂದಲೂ ಮನುಷ್ಯರ ಹೃದಯ ಶುದ್ಧಗೊಳ್ಳುತ್ತದೆ.

ಇದನ್ನೂ ಓದಿ: Roopa Gururaj Column: ದೃಢಸಂಕಲ್ಪದಿಂದ ನಕ್ಷತ್ರವಾಗಿ ಮಿನುಗಿದ ಧ್ರುವ

ಗೀತೆಯನ್ನು ಓದಿದವರು ಅದರೊಳಗಿನ ಹಣವನ್ನು ಕದಿಯುವ ಪ್ರೇರಣೆಗೆ ಒಳಗಾಗುವುದಿಲ್ಲ. ಏಕೆಂದರೆ ಭಗವದ್ಗೀತೆಯ ಜ್ಞಾನ ಇದ್ದವರು ಹಣವು ಸಾಮಾನ್ಯ ಕಾಗದದಷ್ಟೇ ಮೌಲ್ಯವುಳ್ಳದ್ದು ಎಂಬ ಸತ್ಯವನ್ನೂ ಅರಿತಿರುತ್ತಾರೆ. ವಿಷಯ ಸರಿಯಾಗಿ ತಿಳಿದುಕೊಳ್ಳದೆ ಇತರರನ್ನು ಸಂಶಯಿಸುವ ನಿಮ್ಮಂಥ ಶಿಷ್ಯರು, ಬುದ್ಧಿವಂತರಂತೆ ನಟಿಸುವ ಬದಲು, ನಿಮ್ಮ ನಾಲಗೆಯನ್ನು ನಿಯಂತ್ರಿಸಬೇಕು.

ಅನಗತ್ಯ ಮಾತುಗಳನ್ನು ಬಿಡಬೇಕು ಮತ್ತು ಭಗವದ್ಗೀತೆಯ ಪುಟಗಳಲ್ಲಿ ಸಂಪೂರ್ಣವಾಗಿ ಲೀನ ರಾಗಬೇಕು" ಎಂದರು. ಗುರುಗಳ ಮಾತುಗಳನ್ನು ಕೇಳಿ ಶಿಷ್ಯರು ತಮ್ಮ ತಪ್ಪನ್ನು ಅರಿತು ಪಶ್ಚಾತ್ತಾಪ ಪಟ್ಟರು ಮತ್ತು ಅವರ ಉಪದೇಶಗಳನ್ನು ಗಂಭೀರವಾಗಿ ಅನುಸರಿಸಲು ಆರಂಭಿಸಿ ದರು.

ಭಗವದ್ಗೀತೆಯನ್ನು ಭಕ್ತಿ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ, ಅದು ಹೃದಯವನ್ನು ಶುದ್ಧಗೊಳಿಸಿ ನಮ್ಮ ಸ್ವಭಾವವನ್ನು ಪರಿವರ್ತಿಸುತ್ತದೆ. ಭಗವದ್ಗೀತೆಯ ಮಹಿಮೆಯನ್ನು ಗೀತಾ ಮಹಾತ್ಮ್ಯದಲ್ಲಿ ಈ ಕೆಳಗಿನ ಶ್ಲೋಕಗಳಲ್ಲಿ ಸುಂದರವಾಗಿ ವರ್ಣಿಸಲಾಗಿದೆ: ‘ಗೀತಾಧ್ಯಾಯನ-ಶೀಲಸ್ಯ ಪ್ರಾಣಾ ಯಾಮ-ಪರಸ್ಯ ಚ ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮಕೃತಾನಿ ಚ’- ಅಂದರೆ, ಯಾರು ಭಗವದ್ಗೀತೆಯನ್ನು ಸಂಪೂರ್ಣ ನಿಷ್ಠೆಯೊಂದಿಗೆ ಮತ್ತು ಗಂಭೀರತೆಯಿಂದ ಓದುತ್ತಾರೋ, ಅವರು ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕರ್ಮಗಳ ಫಲಗಳು ಭಗವಂತನ ಕೃಪೆಯಿಂದ ಅವರ ಮೇಲೆ ಪರಿಣಾಮ ಬೀರುವುದಿಲ್ಲ.

‘ಮಲಿನೇ ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ ಸಕೃದ್ಗೀತಾಮೃತ-ಸ್ನಾನಂ ಸಂಸಾರ-ಮಲ-ನಾಶನಂ’- ಅಂದರೆ, ಪ್ರತಿದಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹ ಶುದ್ಧವಾಗುತ್ತದೆ; ಆದರೆ ಭಗವದ್ಗೀತೆಯ ಅಮೃತದಲ್ಲಿ ಒಮ್ಮೆ ಸ್ನಾನ ಮಾಡಿದರೆ, ಸಂಸಾರದ ಎಲ್ಲಾ ಮಲಿನತೆ ಸಂಪೂರ್ಣವಾಗಿ ನಾಶವಾಗುತ್ತದೆ.

ಇಂಥ ಅದ್ಭುತ ಧರ್ಮಗ್ರಂಥಗಳನ್ನು ನಮ್ಮ ಹಿರಿಯರು ನಮಗಾಗಿ ನೀಡಿ ಹೋಗಿದ್ದಾರೆ. ಭಾರ ತೀಯ ಸನಾತನ ಧರ್ಮದ ಬೇರುಗಳಾದ ಈ ಮಹಾಗ್ರಂಥಗಳಲ್ಲಿ ಜೀವನಕ್ಕೆ ಬೇಕಾದ ಮುಕ್ತಿಮಾರ್ಗ, ಮೌಲ್ಯಗಳು, ಕಷ್ಟಕ್ಕೆ ಬೇಕಾದ ಸಾಂತ್ವನ, ಮನಸ್ಸಿಗೆ ಬೇಕಾದ ನೆಮ್ಮದಿ-ಆತ್ಮವಿಶ್ವಾಸ ಬದುಕಿಗೆ ಬೇಕಾದ ಭರವಸೆ ಎಲ್ಲವೂ ಹಂತಹಂತವಾಗಿ ನಮಗೆ ದಕ್ಕುತ್ತಾ ಹೋಗುತ್ತವೆ.

ಆದ್ದರಿಂದಲೇ ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಇವುಗಳನ್ನು ಪರಿಚಯಿಸುತ್ತಾ, ಇವುಗಳ ವಾಚನ, ವ್ಯಾಖ್ಯಾನ, ಕಥೆ-ಉಪಕಥೆಗಳ ಚರ್ಚೆ ಇವೆಲ್ಲವನ್ನೂ ಮನೆಯಲ್ಲಿ ನಡೆಸುತ್ತಿದ್ದರೆ, ಅವುಗಳ ಸಾರ ತಾನೇ ತಾನಾಗಿ ಬದುಕಿನಲ್ಲಿ ದಾರಿ ತೋರುತ್ತ ಹೋಗುತ್ತದೆ.

ಇಂಥ ಸತ್ಸಂಪ್ರದಾಯವು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕಳೆದ ಒಂದಷ್ಟು ದಶಕಗಳಿಂದ ನಾವೆಲ್ಲರೂ ಪಾಶ್ಚಾತ್ಯರ ಪ್ರಭಾವದಿಂದ ನಮ್ಮ ಈ ಬೇರುಗಳ ಕೊಂಡಿ ಗಳನ್ನು ಕಳಚಿಕೊಂಡಿದ್ದೇವೆ. ಆದ್ದರಿಂದಲೇ ಇಂದು ಪ್ರತಿ ಮನೆಯಲ್ಲೂ ಅಸಹನೆ, ಕ್ಲೇಶ, ಮಾನಸಿಕ ಖಿನ್ನತೆ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯಗಳು, ಕುಟುಂಬದಲ್ಲಿ ಒಡಕು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಲ್ಲಿ ವೈಮನುಷ್ಯ, ಇವೆಲ್ಲಕ್ಕಿಂತ ಮಿಗಿಲಾಗಿ ಮನೆಯವರು ಮನೆಯ ವರನ್ನೇ ಹಾಳು ಮಾಡಲು ಸಂಚು ಮಾಡುವ ಅತಿರೇಕಗಳನ್ನು ದಿನವೂ ನೋಡುತ್ತಿದ್ದೇವೆ.

‘ಮರಳಿ ಮಣ್ಣಿಗೆ’ ಎನ್ನುವಂತೆ ಇನ್ನು ಮುಂದಾದರೂ ನಮ್ಮ ಸನಾತನ ಸಂಸ್ಕೃತಿ, ಧರ್ಮ ಇವುಗಳ ಸಾರವನ್ನು ಜನಮಾನಸದಲ್ಲಿ ಮತ್ತೆ ಹರಿಸುವ ಪ್ರಯತ್ನ ಮಾಡುತ್ತಾ ಬದುಕಿಗೆ ಬೇಕಾದ ಜೀವನ ಮೌಲ್ಯಗಳನ್ನು ಮತ್ತೆ ರೂಪಿಸಿಕೊಳ್ಳುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಆಗ ಮಾತ್ರವೇ ಜೀವನಕ್ಕೊಂದು ಅರ್ಥ...

ರೂಪಾ ಗುರುರಾಜ್

View all posts by this author