ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಾಚೀನತೆಯಿಂದ ಆಧುನಿಕತೆಯತ್ತ ಭಾರತ-ಇಂಡೋನೇಷ್ಯಾ ಸಹಭಾಗಿತ್ವ

ಇಂಡೋನೇಷ್ಯಾದ ಸಂಸ್ಕೃತಿಯ ಹೆಗ್ಗುರುತಾಗಿರುವ ಐತಿಹಾಸಿಕ ಮಹತ್ತ್ವದ ಪ್ರಂಬಾನನ್ ಹಿಂದೂ ದೇವಾಲಯದ ಸಂರಕ್ಷಣೆಯಲ್ಲಿ ಭಾರತ ನೀಡುತ್ತಿರುವ ನೆರವು, ಸಾಂಸ್ಕೃತಿಕ ಪರಂಪರೆ ಯನ್ನು ಕಾಪಾಡುವ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರ ಭಾರತೀಯ ಡಿಎನ್‌ಎ ಕುರಿತಾದ ಹೇಳಿಕೆಗಳು ಎರಡೂ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿವೆ.

ನರೇಂದ್ರ ಕುಮಾರ್, ಮಂಗಳೂರು

ಭಾರತೀಯ ಡಿಎನ್‌ಎ ಕುರಿತಾದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರ ಹೇಳಿಕೆಗಳು ಉಭಯ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಭಾವನಾ ತ್ಮಕ ಸಂಪರ್ಕಕ್ಕೆ ಸಾಕ್ಷಿ. ಒಂದು ಕಾಲದಲ್ಲಿ (1965ರಲ್ಲಿ) ಪಾಕಿಸ್ತಾನವನ್ನು ಬೆಂಬಲಿಸಿದ್ದ ಇಂಡೋನೇಷ್ಯಾ, ಇಂದು ಭಾರತದ ಅತ್ಯಂತ ನಿಕಟ ಕಾರ್ಯತಂತ್ರದ ಪಾಲುದಾರ ರಾಷ್ಟ್ರ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಕೇವಲ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಒಪ್ಪಂದವಲ್ಲ.

ಇದು 2000 ವರ್ಷಗಳಿಗೂ ದೀರ್ಘ ಕಾಲದ ನಾಗರಿಕತೆಯ ಬಾಂಧವ್ಯ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಂಧವು ಇಂದು ಶಕ್ತಿಯುತವಾದ ‘ಕಾರ್ಯತಂತ್ರದ ಸಹಭಾಗಿತ್ವ’ವಾಗಿ ರೂಪಾಂತರಗೊಂಡಿದೆ.

ರಾಮಾಯಣ, ಮಹಾಭಾರತ, ಸಂಸ್ಕೃತ ಮತ್ತು ಗರುಡನಂತಹ ಸಾಮಾನ್ಯ ಸಾಂಸ್ಕೃತಿಕ ಸಂಕೇತಗಳು ಈಗ ಕೇವಲ ಇತಿಹಾಸದ ಪುಟಗಳಲ್ಲಿಲ್ಲ. ಪ್ರಧಾನಿ ಮೋದಿಯವರ ವಿಕಾಸ್ ಭೀ, ವಿರಾಸತ್ ಭೀ (ಅಭಿವೃದ್ಧಿಯೊಂದಿಗೆ ಪರಂಪರೆ) ದೃಷ್ಟಿಕೋನದ ಅಡಿಯಲ್ಲಿ, ಇವು ಆಧುನಿಕ ಸಂಬಂಧಗಳ ಬಲವಾದ ಅಡಿಪಾಯವಾಗಿವೆ.

ಇದನ್ನೂ ಓದಿ: PM Modi Indonesia Visit: ಪ್ರಂಬನನ್ ದೇವಾಲಯದ ಅದ್ಭುತ ವೈಮಾನಿಕ ದೃಶ್ಯ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ

ಇಂಡೋನೇಷ್ಯಾದ ಸಂಸ್ಕೃತಿಯ ಹೆಗ್ಗುರುತಾಗಿರುವ ಐತಿಹಾಸಿಕ ಮಹತ್ತ್ವದ ಪ್ರಂಬಾನನ್ ಹಿಂದೂ ದೇವಾಲಯದ ಸಂರಕ್ಷಣೆಯಲ್ಲಿ ಭಾರತ ನೀಡುತ್ತಿರುವ ನೆರವು, ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇಂಡೋ ನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರ ಭಾರತೀಯ ಡಿಎನ್‌ಎ ಕುರಿತಾದ ಹೇಳಿಕೆಗಳು ಎರಡೂ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿವೆ.

ಒಂದು ಕಾಲದಲ್ಲಿ (1965ರಲ್ಲಿ) ಪಾಕಿಸ್ತಾನವನ್ನು ಬೆಂಬಲಿಸಿದ್ದ ಇಂಡೋನೇಷ್ಯಾ, ಇಂದು ಭಾರತದ ಅತ್ಯಂತ ನಿಕಟ ಕಾರ್ಯತಂತ್ರದ ಪಾಲುದಾರರಲ್ಲೊಂದಾಗಿದೆ. ಭಾರತದ ಜಾಗತಿಕ ಕ್ರೆಡಿಬಿಲಿಟಿ ಮತ್ತು ರಾಜತಾಂತ್ರಿಕತೆಯ ಗೆಲುವಿಗೆ ಇದೊಂದು ದೊಡ್ಡ ನಿದರ್ಶನ. ಇಂಡೋನೇಷ್ಯಾವು ಭಾರತದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ಅಸಾ ಕ್ಷಿಪಣಿಗಳನ್ನು ಖರೀದಿಸುತ್ತಿದೆ.

ಜತೆಗೆ, ಎನ್‌ಡಿಎ ಮತ್ತು ಡಿಎಸ್‌ಎಸ್‌ಸಿಯಲ್ಲಿ ಇಂಡೋನೇಷ್ಯಾದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮಲಕ್ಕಾ ಜಲಸಂಽಯ ತುದಿಯಲ್ಲಿರುವ ಸಬಾಂಗ್ ಬಂದರನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದು, ಇದು ಹಿಂದೂ ಮಹಾಸಾಗರದಲ್ಲಿ ಭಾರತದ ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸಲಿದೆ.

‘ಮಹಾಸಾಗರ್’ ಪರಿಕಲ್ಪನೆ: ಪ್ರಧಾನಿ ಮೋದಿಯವರ ‘ಮಹಾಸಾಗರ್’ ಪರಿಕಲ್ಪನೆ ಅಡಿಯಲ್ಲಿ ಭಾರತವು ತನ್ನ ‘ಸಾಫ್ಟ್ ಪವರ್’ ಅನ್ನು ಕೇವಲ ಯೋಗ ಮತ್ತು ಸಂಸ್ಕೃತಿಗೆ ಸೀಮಿತಗೊಳಿಸದೆ, ಶಿಕ್ಷಣ, ಡಿಜಿಟಲ್ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೂ ವಿಸ್ತರಿಸಿದೆ. ಐಐಎಮ್ ಬೆಂಗಳೂರಿನ ಮೊದಲ ಸಾಗರೋತ್ತರ ಕ್ಯಾಂಪಸ್ ಇಂಡೋನೇಷ್ಯಾ ದಲ್ಲಿ ಸ್ಥಾಪನೆಯಾಗುತ್ತಿದೆ. ಇವಿಎಂ ತಂತ್ರಜ್ಞಾನ ಮತ್ತು ಚುನಾವಣಾ ಆಡಳಿತದ ಅನುಭವವನ್ನು ಭಾರತವು ಇಂಡೋನೇಷ್ಯಾದೊಂದಿಗೆ ಹಂಚಿಕೊಳ್ಳುತ್ತಿದೆ. ‌

ಯುಪಿಐ ಪಾವತಿ ಸಂಯೋಜನೆ: ಯುಪಿಐ-ಕ್ಯೂಆರ್‌ಐಎಸ್ ಪಾವತಿ ವ್ಯವಸ್ಥೆಗಳ ಸಂಯೋ ಜನೆ, ಬಾಹ್ಯಾಕಾಶ ಸಂಶೋಧನೆಯಲ್ಲಿನ ಸಹಕಾರವು ಎರಡೂ ಆರ್ಥಿಕತೆ ಗಳನ್ನು ಇನ್ನಷ್ಟು ಹತ್ತಿರ ತಂದಿವೆ. ಕೃಷಿ ಕ್ಷೇತ್ರದಲ್ಲಿ ಗೋಧಿಯ ಬಿತ್ತನೆ ಬೀಜಗಳ ಪೂರೈಕೆ, ಆರೋಗ್ಯ ಕ್ಷೇತ್ರದಲ್ಲಿ ಕೈಗೆಟುಕುವ ದರದ ಭಾರತೀಯ ಔಷಧಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿನ ಸಹಕಾರವು ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವ ಗುರಿಯನ್ನು ಹೊಂದಿದೆ.

ಶಾಂತಿ ಮತ್ತು ಭದ್ರತೆಗೆ ಕಾರ್ಯ: ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯು, ನಮ್ಮ ಪ್ರಾಚೀನ ನಾಗರಿಕತೆಯನ್ನು ಕೇವಲ ಹೆಮ್ಮೆಯ ವಿಷಯವಾಗಿ ಉಳಿಸದೆ, ಅದನ್ನು ಜಾಗತಿಕ ನಾಯಕತ್ವ ಮತ್ತು ಬಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವ ಪ್ರಬಲ ಸಾಧನವಾಗಿ ಪರಿವರ್ತಿಸಿದೆ.

ಇಂಡೋನೇಷ್ಯಾ ಪ್ರಧಾನಿ ಮೋದಿಯವರಿಗೆ ನೀಡಿರುವ ಅತ್ಯುನ್ನತ ನಾಗರಿಕ ಗೌರವ, ಬಿಂಟಾಂಗ್ ಆದಿಪುರ್ಣ, ಈ ಮರೆಯಲಾಗದ ಸ್ನೇಹದ ಸಂಕೇತವಾಗಿದೆ. ಹಿಂದೂ ಮಹಾ ಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಿಕಟವಾಗಿ ಕೆಲಸ ಮಾಡುತ್ತಿವೆ. ಇಂಡೋನೇಷ್ಯಾವನ್ನು ಆಸಿಯಾನ್ ದೇಶಗಳ ಪೈಕಿ ಅತ್ಯಂತ ಪ್ರಮುಖ ರಾಷ್ಟ್ರವೆಂದು ಪರಿಗಣಿಸಿರುವ ಭಾರತ, ಅದರೊಂದಿಗಿನ ನಿಕಟ ಬಾಂಧವ್ಯದ ಮೂಲಕ ಇಡೀ ಆಗ್ನೇಯ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸಿದೆ.