ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Piyush Goel Column: ಭಾರತ-ನ್ಯೂಜಿಲೆಂಡ್‌ ಒಪ್ಪಂದ: ಅಭಿವೃದ್ದಿಯ ಮೈಲಿಗಲ್ಲು

ರಫ್ತು ಮತ್ತು ಉದ್ಯೋಗಗಳಿಗೆ ಬಲವಾದ ಉತ್ತೇಜನ ಪರಸ್ಪರ ಲಾಭದಾಯಕವಾದ ಈ ಒಪ್ಪಂದದ ಪ್ರಮುಖ ಅಂಶವೆಂದರೆ, ಎಲ್ಲಾ ಭಾರತೀಯ ಉತ್ಪನ್ನಗಳ ಮೇಲಿನ ಸುಂಕ ವನ್ನು ತಕ್ಷಣವೇ ರದ್ದುಗೊಳಿಸುವ ನ್ಯೂಜಿಲೆಂಡ್ನ ಬದ್ಧತೆಯಾಗಿದೆ. ಪ್ರಸ್ತುತ ನಮ್ಮ ಪ್ರಮುಖ ರಫ್ತುಗಳು ಶೇಕಡಾ 10ರಷ್ಟು ಸುಂಕವನ್ನು ಎದುರಿಸುತ್ತಿರುವ ಮಾರುಕಟ್ಟೆ ಯಲ್ಲಿನ ಈ ಮಹತ್ವದ ಅಡಚಣೆಯನ್ನು ಇದು ನಿವಾರಿಸುತ್ತದೆ.

ಪ್ರಗತಿಪಥ

ಪಿಯೂಷ್‌ ಗೋಯಲ್

ಸೋಮವಾರ ಸಹಿ ಹಾಕಲಾಗುತ್ತಿರುವ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು (FTA), ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಭಾರತದ ಒಡನಾಟದಲ್ಲಿ ಒಂದು ನಿರ್ಣಾಯಕ ಮೈಲಿಗಗಿದೆ. ರೈತರು, ಮಹಿಳೆಯರು, ಯುವಜನರು ಮತ್ತು ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ, ಜಾಗತಿಕ ಆರ್ಥಿಕ ಪಾಲುದಾರಿಕೆಯನ್ನು ಸ್ಪಷ್ಟ ಲಾಭಗಳಾಗಿ ಪರಿವರ್ತಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಯ ನಿರ್ಣಾಯಕ ಮುನ್ನಡೆಯನ್ನು ಇದು ಪ್ರತಿಬಿಂಬಿಸುತ್ತದೆ.

ಯುನೈಟೆಡ್ ಕಿಂಗ್‌ಡಮ್ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಪ್ರಮುಖ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಮಾಡಿಕೊಂಡ ಐತಿಹಾಸಿಕ ವ್ಯಾಪಾರ ಒಪ್ಪಂದಗಳ ಸರಣಿಯ ಮುಂದುವರಿದ ಭಾಗವಾಗಿ ಈ ಒಪ್ಪಂದ ರೂಪುಗೊಂಡಿದೆ. ಈ ಒಪ್ಪಂದಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತವೆ ಮತ್ತು ಜಾಗತಿಕ ಅನಿಶ್ಚಿತತೆ ಮತ್ತು ಏರಿಳಿತಗಳ ನಡುವೆಯೂ ವಿಶ್ವದ ಅತ್ಯಂತ ಲಾಭದಾಯಕ ಆರ್ಥಿಕತೆಗಳಲ್ಲಿ ನಮ್ಮ ರಫ್ತುದಾರರಿಗೆ ಸ್ಪರ್ಧಾತ್ಮಕ ಮೇಲುಗೈಯನ್ನು ಒದಗಿಸುತ್ತವೆ.

ರಫ್ತು ಮತ್ತು ಉದ್ಯೋಗಗಳಿಗೆ ಬಲವಾದ ಉತ್ತೇಜನ ಪರಸ್ಪರ ಲಾಭದಾಯಕವಾದ ಈ ಒಪ್ಪಂದದ ಪ್ರಮುಖ ಅಂಶವೆಂದರೆ, ಎಲ್ಲಾ ಭಾರತೀಯ ಉತ್ಪನ್ನಗಳ ಮೇಲಿನ ಸುಂಕ ವನ್ನು ತಕ್ಷಣವೇ ರದ್ದುಗೊಳಿಸುವ ನ್ಯೂಜಿಲೆಂಡ್ನ ಬದ್ಧತೆಯಾಗಿದೆ. ಪ್ರಸ್ತುತ ನಮ್ಮ ಪ್ರಮುಖ ರಫ್ತುಗಳು ಶೇಕಡಾ 10ರಷ್ಟು ಸುಂಕವನ್ನು ಎದುರಿಸುತ್ತಿರುವ ಮಾರುಕಟ್ಟೆ ಯಲ್ಲಿನ ಈ ಮಹತ್ವದ ಅಡಚಣೆಯನ್ನು ಇದು ನಿವಾರಿಸುತ್ತದೆ.

ಸಿದ್ಧ ಉಡುಪುಗಳು, ಕಾರ್ಪೆಟ್‌ಗಳು, ನೂಲು, ಬಟ್ಟೆಗಳು, ಪಾದರಕ್ಷೆಗಳು, ಬ್ಯಾಗ್‌ಗಳು, ಬೆಲ್ಟ್‌ಗಳು, ಆಟೋಮೊಬೈಲ್ ಘಟಕಗಳು, ಯಂತ್ರೋಪಕರಣಗಳು, ಉಪಕರಣಗಳು, ರತ್ನ ಮತ್ತು ಆಭರಣಗಳು ಹಾಗೂ ಕರಕುಶಲ ವಸ್ತುಗಳಂತಹ ಕಾರ್ಮಿಕ-ಪ್ರಧಾನ ವಲಯಗಳಿಗೆ ಇದು ದೊಡ್ಡ ಉತ್ತೇಜನ ನೀಡಲಿದೆ.

ಇದನ್ನೂ ಓದಿ: Piyush Goyal Column: ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಉದ್ಯೋಗ ಸೃಷ್ಟಿಸುವ ಈ ಕೈಗಾರಿಕೆಗಳು ಭಾರತದ ಎಂಎಸ್‌ಎಂಇ (MSME) ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಇವು ಬೆಲೆ ಸ್ಪರ್ಧಾತ್ಮಕತೆ ಮತ್ತು ಮಾರುಕಟ್ಟೆ ಪ್ರವೇಶದ ಪ್ರಯೋಜನ ವನ್ನು ಪಡೆಯಲಿವೆ. ಇದು ರಫ್ತನ್ನು ಹೆಚ್ಚಿಸುವುದಲ್ಲದೆ, ಉತ್ಪಾದನಾ ಕ್ಲಸ್ಟರ್‌ಗಳು, ಕುಶಲ ಕರ್ಮಿ ಸಮುದಾಯಗಳು ಮತ್ತು ಸಣ್ಣ ಉದ್ಯಮಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.

ಈ ಒಪ್ಪಂದವು 2014ರಲ್ಲಿ ಮೋದಿ ಸರ್ಕಾರ ರಚನೆಯಾದಾಗಿನಿಂದ ಭಾರತದ ವ್ಯಾಪಾರ ನೀತಿಯನ್ನು ಮುನ್ನಡೆಸುತ್ತಿರುವ ವಿಶಾಲ ತತ್ವಶಾಸವನ್ನು ಪ್ರತಿಬಿಂಬಿಸುತ್ತದೆ. ಇದು ಒಳಗೊಳ್ಳುವಿಕೆ, ಸಬಲೀಕರಣ ಮತ್ತು ಸಹಭಾಗಿತ್ವದ ಸಮೃದ್ಧಿಯ ತತ್ವದೊಂದಿಗೆ ಆಳ ವಾಗಿ ಬೇರೂರಿದೆ. ಇಲ್ಲಿ ವ್ಯಾಪಾರವನ್ನು ಕೇವಲ ಸಂಖ್ಯೆಗಳಾಗಿ ನೋಡದೆ,

ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಹಿಂದುಳಿದವರಿಗೆ ಪ್ರಯೋಜನ ನೀಡುವ ರಾಷ್ಟ್ರೀಯ ಪರಿವರ್ತನೆಯ ಸಾಧನವಾಗಿ ನೋಡಲಾಗುತ್ತದೆ.

ನಾರಿ ಶಕ್ತಿ: ಈ ಒಪ್ಪಂದದ ಒಂದು ವಿಶಿಷ್ಟ ಲಕ್ಷಣವೆಂದರೆ, ಇದು ಭಾರತದ ಮೊದಲ ಮಹಿಳಾ ನೇತೃತ್ವದ ಎಫ್‌ʼಟಿಎ (FTA) ಆಗಿದೆ. ಸಮಾಲೋಚನೆ ನಡೆಸಿದ ಇಡೀ ತಂಡ ದಲ್ಲಿ ಬಹುಪಾಲು ಮಹಿಳೆಯರೇ ಆಗಿದ್ದರು. ಇದರಲ್ಲಿ ಮುಖ್ಯ ಸಮಾಲೋಚಕರು, ಉಪ ಮುಖ್ಯ ಸಮಾಲೋಚಕರು, ವಲಯದ ಮುಖ್ಯಸ್ಥರು ಮತ್ತು ನ್ಯೂಜಿಲೆಂಡ್‌ಗೆ ಭಾರತದ ರಾಯ ಭಾರಿಯೂ ಮಹಿಳೆಯೇ ಆಗಿದ್ದಾರೆ.

ಈ ಮೈಲಿಗಲ್ಲು ಮೋದಿ ಸರ್ಕಾರದಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಪ್ರಾಮುಖ್ಯತೆ ಯನ್ನು ಪ್ರತಿಬಿಂಬಿಸುತ್ತದೆ. ಇದು ಆಡಳಿತ, ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳು ವಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪ್ರಯತ್ನಗಳೊಂದಿಗೆ ಹೊಂದಿಕೆ ಯಾಗುತ್ತದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಚಾಲಕ ಶಕ್ತಿಯಾಗಿ ’ನಾರಿ ಶಕ್ತಿ’ ಯ ಕಲ್ಪನೆಯನ್ನು ಬಲಪಡಿಸುತ್ತದೆ.

Screenshot_6 R

ರೈತರಿಗೆ ಮೊದಲ ಆದ್ಯತೆ: ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಈ ಎಫ್ಟಿಎ ಅನ್ನು ಎಚ್ಚರಿಕೆಯಿಂದ ರೂಪಿಸಲಾಗಿದೆ. ಕಿವಿ, ಸೇಬು ಮತ್ತು ಜೇನುತುಪ್ಪಕ್ಕಾಗಿ ‘ಕೃಷಿ ಉತ್ಪಾದಕ ತಾ ಕ್ರಿಯಾ ಯೋಜನೆ’ಗಳನ್ನು ನ್ಯೂಜಿಲೆಂಡ್ ಬೆಂಬಲಿಸಲಿದೆ. ಈ ಉಪಕ್ರಮಗಳು ಸುಧಾರಿತ ನೆಟ್ಟ ವಸ್ತುಗಳು, ಸಂಶೋಧನಾ ಸಹಯೋಗ, ಬೆಳೆಗಾರರ ಸಾಮರ್ಥ್ಯ ವೃದ್ಧಿ, ತೋಟದ ನಿರ್ವಹಣಾ ಪದ್ಧತಿಗಳು, ಕೊಯ್ಲಿನ ನಂತರದ ಸುಧಾರಣೆಗಳು, ಆಹಾರ ಸುರಕ್ಷತಾ ವ್ಯವಸ್ಥೆಗಳು ಮತ್ತು ಉತ್ಕೃಷ್ಟತಾ ಕೇಂದ್ರಗಳ (Centres of Excellence) ಸ್ಥಾಪನೆಯನ್ನು ಒಳಗೊಂಡಿವೆ.

ಸೇಬು ಬೆಳೆಗಾರರು ಮತ್ತು ಸುಸ್ಥಿರ ಜೇನುಸಾಕಣೆಗಾಗಿ ಕೈಗೊಳ್ಳುವ ಈ ಯೋಜನೆಗಳು ಉತ್ಪಾದನೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲಿವೆ, ಇದು ರೈತರ ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಇದೇ ವೇಳೆ, ಭಾರತವು ತನ್ನ ಪ್ರಮುಖ ಕೃಷಿ ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಿದೆ. ಡೈರಿ ಉತ್ಪನ್ನಗಳು (ಹಾಲು, ಕ್ರೀಮ, ಹಾಲಿನ ರಸ (ವೇ), ಮೊಸರು ಮತ್ತು ಚೀಸ್ ಸೇರಿದಂತೆ), ಈರುಳ್ಳಿ, ಚನ್ನಾ, ಬಟಾಣಿ, ಜೋಳ, ಬಾದಾಮಿ, ಸಕ್ಕರೆ ಮತ್ತು ಕೆಲವು ತೈಲಗಳಂತಹ ಸೂಕ್ಷ್ಮ ಉತ್ಪನ್ನಗಳನ್ನು ಸುಂಕದ ರಿಯಾಯಿತಿಗಳಿಂದ ಹೊರಗಿಡಲಾಗಿದೆ.

ಇದರಿಂದ ದೇಶೀಯ ರೈತರು ವಿದೇಶಿ ಆಮದು ಪೈಪೋಟಿಯಿಂದ ಸುರಕ್ಷಿತವಾಗಿರುತ್ತಾರೆ. ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳನ್ನು ರಕ್ಷಿಸುವುದು ಭಾರತದ ಎಲ್ಲಾ ವ್ಯಾಪಾರ ಸಂಧಾನಗಳ ಕೇಂದ್ರಬಿಂದುವಾಗಿದೆ.

ಯುವಜನತೆ ಮತ್ತು ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ನುರಿತ ವೃತ್ತಿಪರರಿಗೆ ಹೆಚ್ಚಿನ ಚಲನಶೀಲತೆಯು ಈ ಒಪ್ಪಂದದ ಪ್ರಮುಖ ಆಧಾರಸ್ತಂಭವಾಗಿದೆ, ಇದು ಭಾರತದ ಯುವಜನತೆಗೆ ಹೊಸ ಜಾಗತಿಕ ಅವಕಾಶಗಳನ್ನು ಸೃಷ್ಟಿಸುತ್ತದೆ.

ಯಾವುದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಮೊದಲ ಬಾರಿಗೆ, ನ್ಯೂಜಿಲೆಂಡ್ ಭಾರತೀಯ ವಿದ್ಯಾರ್ಥಿಗಳ ಚಲನಶೀಲತೆ ಮತ್ತು ಓದಿನ ನಂತರದ ಕೆಲಸದ ಅವಕಾಶ ಗಳಿಗಾಗಿ ವ್ಯವಸ್ಥಿತ ಚೌಕಟ್ಟನ್ನು ಪರಿಚಯಿಸಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಸಂಖ್ಯೆಯ ಮಿತಿಗಳಿಲ್ಲ (numerical caps). ವಿದ್ಯಾರ್ಥಿಗಳು ಅಧ್ಯಯನದ ಸಮಯದಲ್ಲಿ ವಾರಕ್ಕೆ ಕನಿಷ್ಠ 20 ಗಂಟೆಗಳ ಕಾಲ ಕೆಲಸ ಮಾಡಲು ಅನುಮತಿಸಲಾಗುತ್ತದೆ. ವಿದ್ಯಾಭ್ಯಾಸದ ನಂತರದ ಕೆಲಸದ ಹಕ್ಕುಗಳು ಸ್ಟೆಮ್ ( STEM) ಪದವೀಧರರಿಗೆ ಮೂರು ವರ್ಷಗಳವರೆಗೆ ಮತ್ತು ಡಾಕ್ಟರೇಟ್ ವಿದ್ವಾಂಸರಿಗೆ ನಾಲ್ಕು ವರ್ಷಗಳವರೆಗೆ ವಿಸ್ತರಿಸಲ್ಪಡುತ್ತವೆ.

ಐಟಿ, ಎಂಜಿನಿಯರಿಂಗ್, ಆರೋಗ್ಯ ಸೇವೆ, ಶಿಕ್ಷಣ, ನಿರ್ಮಾಣ ಮತ್ತು ಯೋಗ, ಆಯುರ್ವೇ ದ, ಭಾರತೀಯ ಪಾಕಪದ್ಧತಿ ಹಾಗೂ ಸಂಗೀತ ಶಿಕ್ಷಣದಂತಹ ಸಾಂಪ್ರದಾಯಿಕ ಕ್ಷೇತ್ರ ಗಳಲ್ಲಿ 5000 ಭಾರತೀಯ ವೃತ್ತಿಪರರಿಗೆ ಯಾವುದೇ ಸಮಯದಲ್ಲಿ ಮೂರು ವರ್ಷ ಗಳವರೆಗೆ ವಾಸ್ತವ್ಯ ಹೂಡಲು ‘ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ’ (Temporary Employment Entry Visa) ಮಾರ್ಗವನ್ನು ಈ ಒಪ್ಪಂದವು ಒದಗಿಸುತ್ತದೆ.

ಇದರ ಜೊತೆಗೆ, ‘ವರ್ಕಿಂಗ್ ಹಾಲಿಡೇ ವೀಸಾ’ ಯೋಜನೆಯು ವಾರ್ಷಿಕವಾಗಿ 1000 ಯುವ ಭಾರತೀಯರಿಗೆ ನ್ಯೂಜಿಲೆಂಡ್‌ನಲ್ಲಿ 12 ತಿಂಗಳವರೆಗೆ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುತ್ತದೆ. ಇದು ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಅನುಭವವನ್ನು ಹೆಚ್ಚಿಸುತ್ತದೆ.

ಹೂಡಿಕೆ ಮತ್ತು ಆವಿಷ್ಕಾರ: ಭಾರತದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಗೆ ನ್ಯೂಜಿ ಲೆಂಡ್ ಬದ್ಧವಾಗಿದೆ. ಇದು ಉತ್ಪಾದನೆ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಸೇವೆಗಳು, ನಾವೀನ್ಯತಾ ಪರಿಸರ ವ್ಯವಸ್ಥೆಗಳು ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಹೂಡಿಕೆಯ ಬದ್ಧತೆಗಳು ಕಡಿಮೆಯಾದರೆ ಭಾರತವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುವ ‘ರೀ ಬ್ಯಾಲೆನ್ಸಿಂಗ’ ಕ್ಲಾಸ್ (rebalancing clause) ಅನ್ನು ಇದರಲ್ಲಿ ಸೇರಿಸಲಾಗಿದೆ. ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ, ಕೌಶಲ್ಯ ಅಭಿವೃದ್ಧಿ ಹಾಗೂ ನಾವೀನ್ಯತೆ-ಆಧಾರಿತ ವಲಯ ಗಳಲ್ಲಿ ಸಹಯೋಗವನ್ನು ಈ ಒಪ್ಪಂದವು ಪ್ರೋತ್ಸಾಹಿಸುತ್ತದೆ ಮತ್ತು ವ್ಯಾಪಾರವು ದೀರ್ಘಕಾಲೀನ ಅಭಿವೃದ್ಧಿ ಪಾಲುದಾರಿಕೆಗಳಿಂದ ಪೂರಕವಾಗಿದೆ ಎಂಬುದನ್ನು ಖಚಿತ ಪಡಿಸುತ್ತದೆ.

ವ್ಯಾಪಾರ ತಂತ್ರ: ಭಾರತ-ನ್ಯೂಜಿಲೆಂಡ್ ಎಫ್ಟಿಎಯು, ದೇಶೀಯ ಸೂಕ್ಷ್ಮತೆಗಳನ್ನು ಗೌರವಿಸುತ್ತಾ, ಭಾರತದ ಕಾರ್ಮಿಕ-ಪ್ರಧಾನ ವಲಯಗಳಿಗೆ ಅರ್ಥಪೂರ್ಣ ಮಾರುಕಟ್ಟೆ ಪ್ರವೇಶವನ್ನು ಮುಕ್ತಗೊಳಿಸುವ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಪಾಲು ದಾರಿಕೆ ಹೊಂದುವ ಸ್ಪಷ್ಟ ಮತ್ತು ವಿಶ್ವಾಸಾರ್ಹ ವ್ಯಾಪಾರ ತಂತ್ರವನ್ನು ಪ್ರತಿಬಿಂಬಿಸು ತ್ತದೆ. ಭಾರತವು ಇಂದು ಶಕ್ತಿ ಮತ್ತು ವಿಶ್ವಾಸಾರ್ಹತೆಯ ಸ್ಥಾನದಿಂದ ಸಂಧಾನ ನಡೆಸುತ್ತಿದೆ. ವ್ಯಾಪಾರ ಒಪ್ಪಂದಗಳು ಸಾಕಷ್ಟು ರಕ್ಷಣೆಗಳಿಲ್ಲದೆ ಸೂಕ್ಷ್ಮ ವಲಯ ಗಳನ್ನು ಅಸುರಕ್ಷಿತ ಗೊಳಿಸುತ್ತಿದ್ದ ಹಿಂದಿನ ದಶಕಗಳಿಗಿಂತ ಭಿನ್ನವಾಗಿ, ಈಗಿನ ಮಾತುಕತೆ ಗಳು ಕೃಷಿ, ಡೈರಿ ಮತ್ತು ಇತರ ಸೂಕ್ಷ್ಮ ಕ್ಷೇತ್ರಗಳು ಸಂಪೂರ್ಣವಾಗಿ ರಕ್ಷಿತವಾಗಿರುವುದನ್ನು ಖಚಿತಪಡಿಸು ತ್ತವೆ.

ಮುಂದುವರಿದ ಆರ್ಥಿಕತೆಗಳೊಂದಿಗೆ ಭಾರತವು ತನ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತಿದ್ದಂತೆ, ಅಭಿವೃದ್ಧಿ ಹೊಂದಿದ ಪ್ರಪಂಚದೊಂದಿಗಿನ ಈ ವ್ಯಾಪಾರ ಒಪ್ಪಂದಗಳು, ವ್ಯಾಪಾರ ನೀತಿಯನ್ನು ರಾಷ್ಟ್ರೀಯ ಅಭಿವೃದ್ಧಿ ಗುರಿಗಳೊಂದಿಗೆ ಹೇಗೆ ಜೋಡಿಸಬಹುದು ಎಂಬುದಕ್ಕೆ ಒಂದು ಪ್ರಬಲ ಉದಾಹರಣೆಯಾಗಿ ನಿಲ್ಲುತ್ತವೆ ಮತ್ತು ‘ವಿಕಸಿತ ಭಾರತ 2047’ ರ ಹಾದಿಯಲ್ಲಿ ಒಳಗೊಳ್ಳುವ ಬೆಳವಣಿಗೆ ಹಾಗೂ ದೀರ್ಘಕಾಲೀನ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಇವು ಖಚಿತಪಡಿಸುತ್ತವೆ.