ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !

ಅಮೆರಿಕ,‌ ಯುಎಇ, ಸೌದಿ ಅರೇಬಿಯಾ, ಜರ್ಮನಿ, ಇಟಲಿ, ನೆದರ್ಲೆಂಡ್ಸ್ ಸೇರಿದಂತೆ ಇನ್ನೂರಕ್ಕೂ ಹೆಚ್ಚು ದೇಶಗಳಿಗೆ ಭಾರತ ನಾನಾ ವಸ್ತುಗಳನ್ನು ರಫ್ತು ಮಾಡುತ್ತದೆ. ಮೂರನೆಯದಾಗಿ ಸ್ಟಾಕ್ ಮಾರ್ಕೆಟ್ ಬೆಳವಣಿಗೆ. 2014ರಲ್ಲಿ ನಿಫ್ಟಿ 7360ರಲ್ಲಿತ್ತು. ಈಗ 25100ಕ್ಕೆ ಏರಿದೆ. 240 ಪರ್ಸೆಂಟ್ ಹೆಚ್ಚಳ ವಾಗಿದೆ. ಸೆನ್ಸೆಕ್ಸ್ 24690‌ ರಿಂದ 82000ಕ್ಕೆ ಏರಿದೆ, ಶೇ. 235ರಷ್ಟು ವೃದ್ಧಿಸಿದೆ. ಹಣದುಬ್ಬರ ಶೇ. 4ರಿಂದ 6ರ ಮಟ್ಟದಲ್ಲಿದೆ.

ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !

-

ಮನಿ ಮೈಂಡೆಡ್

ಭಾರತವು ಕಳೆದ ಹನ್ನೊಂದು ವರ್ಷಗಳಲ್ಲಿ ರಷ್ಯಾ, ಬ್ರೆಜಿಲ್, ಫ್ರಾನ್ಸ್, ಬ್ರಿಟನ್ ಅನ್ನು ಹಿಂದಿಕ್ಕಿ 4ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಜರ್ಮನಿಗೆ ತೀವ್ರ ಸ್ಪರ್ಧೆಯೊಡ್ಡಿದೆ. 2013 ರಲ್ಲಿ ವಿಶ್ವದ ದೊಡ್ಡ‌ ಆರ್ಥಿಕತೆಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್, ಬ್ರೆಜಿಲ್, ರಷ್ಯಾ, ಇಟಲಿಯ ಬಳಿಕ ಭಾರತ ಹತ್ತರಲ್ಲಿತ್ತು. ಆದರೆ ಈಗ 2025ರಲ್ಲಿನ ಚಿತ್ರಣವೇ ಬೇರೆ.

ಅಮೆರಿಕದ ಬಹುರಾಷ್ಟ್ರೀಯ ಬ್ಯಾಂಕ್ ಮೋರ್ಗಾನ್ ಸ್ಟ್ಯಾನ್ಲಿಯು 2013ರ ಆಗಸ್ಟ್‌ನಲ್ಲಿ ‘ಫ್ರಾಜೈಲ್ ಫೈವ್’ ಎಂಬ ಪದವನ್ನು ಹುಟ್ಟುಹಾಕಿತ್ತು. ಟರ್ಕಿ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ ಮತ್ತು ಭಾರತ‌ ದೇಶಗಳು ಇದರಲ್ಲಿದ್ದವು. ಏನಿದು ‘ಫ್ರಾಜೈಲ್ ಫೈವ್’? ಹೀಗೆಂದರೆ- ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಬೆಳವಣಿಗೆಗೆ ವಿದೇಶಿ ಹೂಡಿಕೆಯನ್ನೇ ಅವಲಂಬಿಸಿರುವ ಸಂಕಷ್ಟ ಪೀಡಿತ ರಾಷ್ಟ್ರಗಳು ಎಂದರ್ಥ.

2008ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಹಲವಾರು ರಾಷ್ಟ್ರಗಳು ಕಂಗಾಲಾಗಿದ್ದವು. ಕ್ರಮೇಣ ಅಮೆರಿಕ ಚೇತರಿಸಿಕೊಂಡಿತು. ಆಗ ಹೂಡಿಕೆದಾರರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಹೂಡಿಕೆಯನ್ನು ಹಿಂತೆಗೆದುಕೊಂಡು, ಡಾಲರ್‌ನಲ್ಲಿ ಇನ್ವೆ ಮಾಡಲು ಆರಂಭಿಸಿದರು. ಇದರ ಪರಿಣಾಮವಾಗಿ ಬ್ರೆಜಿಲ್, ಭಾರತ, ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿಯಲ್ಲಿ ವಿದೇಶಿ ಹೂಡಿಕೆ ಯ ಹಠಾತ್ ಹೊರಹರಿವು ಸಂಭವಿಸಿತು.

ಇದರ ಪರಿಣಾಮವಾಗಿ ಈ‌ ದೇಶಗಳಿಗೆ ತಮ್ಮ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸಾಧ್ಯ ವಾಗುತ್ತಿಲ್ಲ, ವಿದೇಶಿ ಸಾಲವನ್ನು ಮರುಪಾವತಿಸಲು ಆಗುತ್ತಿಲ್ಲ, ಹೊಸ ಸಾಲಗಳು ಹುಟ್ಟುತ್ತಿಲ್ಲ. ಹೀಗಾಗಿ ಇಂಥ ದೇಶಗಳು ಆರ್ಥಿಕ ಹಿಂಜರಿತಕ್ಕೆ ಮರಳುವ ಸಾಧ್ಯತೆ ಇದೆ ಎಂದು ಮೋರ್ಗಾನ್ ಸ್ಟ್ಯಾನ್ಲಿ ವರದಿ ಮಾಡಿತ್ತು. ಇದೇ ಮೋರ್ಗಾನ್ ಸ್ಟ್ಯಾನ್ಲಿ ಈ ವರ್ಷ ತನ್ನ ವರದಿಯಲ್ಲಿ, ಭಾರತ 2025ರಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ.

K P B

2035ಕ್ಕೆ ಜಿಡಿಪಿ ಇಮ್ಮಡಿಯಾಗಲಿದ್ದು, 10.6 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಉತ್ತರಪ್ರದೇಶ ರಾಜ್ಯಗಳು ತಲಾ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದ್ದು, ಜಗತ್ತಿನ ಟಾಪ್ 20 ಇಕಾನಮಿಗಳ ಪಟ್ಟಿಗೆ ಸೇರ್ಪಡೆ‌ ಯಾಗಲಿವೆ ಎಂದೂ ತಿಳಿಸಿದೆ.

ಭಾರತವು ಕಳೆದ ಹನ್ನೊಂದು ವರ್ಷಗಳಲ್ಲಿ ರಷ್ಯಾ, ಬ್ರೆಜಿಲ, ಫ್ರಾನ್ಸ್, ಬ್ರಿಟನ್ ಅನ್ನು ಹಿಂದಿಕ್ಕಿ 4ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಜರ್ಮನಿಗೆ ತೀವ್ರ ಸ್ಪರ್ಧೆಯೊಡ್ಡಿದೆ. 2013ರಲ್ಲಿ ವಿಶ್ವದ ದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್, ಬ್ರೆಜಿಲ್, ರಷ್ಯಾ, ಇಟಲಿಯ ಬಳಿಕ ಭಾರತ ಹತ್ತರಲ್ಲಿತ್ತು.‌

ಆಗ 1.9 ಟ್ರಿಲಿಯನ್ ಡಾಲರ್ (ಲಕ್ಷ ಕೋಟಿ) ಇಕಾನಮಿಯಾಗಿತ್ತು. ಆದರೆ ಈಗ 2025ರಲ್ಲಿನ ಚಿತ್ರಣವೇ ಬೇರೆ. ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ‌ ಬರೋಬ್ಬರಿ 50 ಪರ್ಸೆಂಟ್ ಸುಂಕ ವಿಧಿಸುವುದಾಗಿ ಘೋಷಿಸಿ ದ್ದರೂ, ಭಾರತದ ಇಕಾನಮಿಯನ್ನು ಪುಡಿಮಾಡುವುದಾಗಿ ತನ್ನ ಬಂಟರ ಮೂಲಕ ಅಬ್ಬರಿಸಿ ದ್ದರೂ, ಭಾರತ ‘ಐ ಡೋಂಟ್ ಕೇರ್’ ಎಂಬ ಸಂದೇಶ ರವಾನಿಸಿದೆ.

ಇದನ್ನೂ ಓದಿ: ‌Keshava Prasad B Column: ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

ಟ್ರಂಪ್ ತಿಪ್ಪರಲಾಗ ಹಾಕಿದರೂ, ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಸಾಂಗವಾಗಿ ಮುಂದು ವರಿಸಿದೆ. ಭಾರತದ ಛಲವನ್ನು ಕಂಡು ಬೆಚ್ಚಿರುವ ಟ್ರಂಪ್, ಮೋದಿಯವರ ಜನ್ಮದಿನದ ನೆಪದಲ್ಲಿ ಕರೆ ಮಾಡಿ, ಮೈತ್ರಿಯನ್ನು ಬಯಸಿದ್ದಾರೆ. ಇದರೊಂದಿಗೆ ಭಾರತ ತನ್ನ ಆರ್ಥಿಕ ಹಿತಾಸಕ್ತಿ ಯನ್ನೂ ತಾನೇ ನೋಡಿಕೊಳ್ಳಬಲ್ಲದು, ಅಮೆರಿಕ ಆಮದು ಮಾಡಿಕೊಳ್ಳದಿದ್ದರೂ ಪರ್ವಾಗಿಲ್ಲ ಎಂಬ ದಿಟ್ಟ ಉತ್ತರ ಕೊಟ್ಟಿದೆ.

ಆದ್ದರಿಂದಲೇ ಟ್ರಂಪ್ ಮತ್ತೆ ದೋಸ್ತಿಯ ಮಾತುಗಳನ್ನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯವರ 75ನೇ ಜನ್ಮದಿನದ ಸಂಭ್ರಮದ ವೇಳೆಯಲ್ಲಿ, ಕಳೆದ 11 ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ನೆನಪಾಗುವುದು ಸಹಜ. ಭಾರತದ ಆರ್ಥಿಕತೆಯ ಮೇಲೆ ಮೋದಿಯವರ ಪ್ರಭಾವವನ್ನು ನೀವು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಜವಾಹರಲಾಲ್ ನೆಹರು, ನರೇಂದ್ರ ಮೋದಿ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು 10 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿದ್ದವರು. ಈಗ ಭಾರತದ ಆರ್ಥಿಕತೆ ಹತ್ತರಿಂದ ನಾಲ್ಕನೇ ಸ್ಥಾನಕ್ಕೆ ಏರಿಕೆಯಾಗಿರುವುದು ಮತ್ತು ಮೂರನೇ ಸ್ಥಾನ ಅಲಂಕರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ದುರದೃಷ್ಟವಶಾತ್ ಕೋವಿಡ್-19ರ ಬಿಕ್ಕಟ್ಟು ಮೂರು ವರ್ಷಗಳ ಕಾಲ ಪ್ರಗತಿಯನ್ನು ಕುಂಠಿತ ಗೊಳಿಸಿತ್ತು. ಈ ಸವಾಲಿನ ನಡುವೆಯೂ ಭಾರತ ತಲೆಯೆತ್ತಿ ನಿಂತಿರುವುದನ್ನು ಜಗತ್ತು ಬೆರಗಿನಿಂದ ನೋಡಿದೆ. ಹಾಗಾದರೆ ಮೋದಿಯವರು ಭಾರತದ ಆರ್ಥಿಕತೆಯ ವೇಗವನ್ನು ಹೇಗೆ ಹೆಚ್ಚಿಸಿದರು? ಎಂಬುದನ್ನು ನೋಡೋಣ.

ಮೊದಲನೆಯದಾಗಿ ಮೋದಿಯವರು 2014ರಲ್ಲಿ ಪ್ರಧಾನಿಯಾದ ಬಳಿಕ ಭಾರತದ ಜಿಡಿಪಿ ಗ್ರೋತ್ ರೇಟ್ ಏರತೊಡಗಿತು. ಕೋವಿಡ್-19ರ ಪರಿಣಾಮ ಮಾತ್ರ 2020-21ರಲ್ಲಿ ಮೈನಸ್ 5.8 ಪರ್ಸೆಂಟ್‌ಗೆ ಕುಸಿದಿತ್ತು. ಅದು ಬೇರೆ ವಿಚಾರ. 2014-2024ರಲ್ಲಿ ಭಾರತದ ಜಿಡಿಪಿ ಮೌಲ್ಯವು 106 ಲಕ್ಷ ಕೋಟಿ ರುಪಾಯಿಗಳಿಂದ 331 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಕೇವಲ ಹತ್ತೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ!

ಎರಡನೆಯದಾಗಿ, ಕಳೆದ ದಶಕದಲ್ಲಿ ದೇಶದ ರಫ್ತು 76 ಪರ್ಸೆಂಟ್ ವೃದ್ಧಿಸಿದೆ. 2014ರಲ್ಲಿ 466 ಶತಕೋಟಿ ಡಾಲರ್ ನಷ್ಟಿದ್ದ ರಫ್ತು 2024ರಲ್ಲಿ 466 ಶತಕೋಟಿ ಡಾಲರ್‌ಗೆ ವೃದ್ಧಿಸಿದೆ. ಎಂಜಿನಿಯ ರಿಂಗ್ ಉತ್ಪನ್ನಗಳು, ಇಲೆಕ್ಟ್ರಾನಿಕ್ಸ್, ಔಷಧಿಗಳ ರಫ್ತಿನಲ್ಲಿ ದೇಶವು ಮುಂಚೂಣಿಯಲ್ಲಿದೆ.

ಅಮೆರಿಕ,‌ ಯುಎಇ, ಸೌದಿ ಅರೇಬಿಯಾ, ಜರ್ಮನಿ, ಇಟಲಿ, ನೆದರ್ಲೆಂಡ್ಸ್ ಸೇರಿದಂತೆ ಇನ್ನೂರಕ್ಕೂ ಹೆಚ್ಚು ದೇಶಗಳಿಗೆ ಭಾರತ ನಾನಾ ವಸ್ತುಗಳನ್ನು ರಫ್ತು ಮಾಡುತ್ತದೆ. ಮೂರನೆಯದಾಗಿ ಸ್ಟಾಕ್ ಮಾರ್ಕೆಟ್ ಬೆಳವಣಿಗೆ. 2014ರಲ್ಲಿ ನಿಫ್ಟಿ 7360ರಲ್ಲಿತ್ತು. ಈಗ 25100ಕ್ಕೆ ಏರಿದೆ. 240 ಪರ್ಸೆಂಟ್ ಹೆಚ್ಚಳವಾಗಿದೆ. ಸೆನ್ಸೆಕ್ಸ್ 24690‌ ರಿಂದ 82000ಕ್ಕೆ ಏರಿದೆ, ಶೇ. 235ರಷ್ಟು ವೃದ್ಧಿಸಿದೆ. ಹಣದುಬ್ಬರ ಶೇ. 4ರಿಂದ 6ರ ಮಟ್ಟದಲ್ಲಿದೆ.

ನಾಲ್ಕನೆಯದಾಗಿ 2014ರಿಂದ 2024ರ ತನಕ ಭಾರತ 667 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಸ್ವೀಕರಿಸಿದೆ. ಈ ಹಿಂದಿನ ದಶಕಕ್ಕೆ ಹೋಲಿಸಿದರೆ 67 ಪರ್ಸೆಂಟ್ ಹೆಚ್ಚಳವಾಗಿದೆ. ಕಳೆದ ಹತ್ತು ವರ್ಷದಲ್ಲಿ ಮೋದಿಯವರು ಆರ್ಥಿಕ ಉದಾರೀಕರಣವನ್ನೂ ಹೆಚ್ಚಿಸಿದರು. ರಕ್ಷಣಾ ಕ್ಷೇತ್ರದಲ್ಲಿ ಆಟೋಮ್ಯಾಟಿಕ್ ರೂಟ್‌ನಲ್ಲಿ 74 ಪರ್ಸೆಂಟ್ ಮತ್ತು ಸರಕಾರಿ ಮಾರ್ಗದಲ್ಲಿ ಎಫ್‌ ಡಿಐ ಮಿತಿಯನ್ನು 100 ಪರ್ಸೆಂಟ್‌ಗೆ ಹೆಚ್ಚಿಸಿದರು.

ರೈಲ್ವೆ, ರಕ್ಷಣಾ ಉತ್ಪಾದನೆ, ಸ್ಪೇಸ್ ಇಂಡಸ್ಟ್ರಿ, ವಿಮಾನಯಾನ, ಸಿಂಗಲ್ ಬ್ರಾಂಡ್ ರಿಟೇಲ್, ವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯ ಮಿತಿಯನ್ನು ಹೆಚ್ಚಿಸಿದರು. ಡಿಜಿಟಲ್ ಕ್ಷೇತ್ರದ ಮೂಲ‌ ಸೌಕರ್ಯವನ್ನು ವೃದ್ಧಿಸಿದರು. ಐದನೆಯದಾಗಿ ತೆರಿಗೆ ಸುಧಾರಣೆ. 2017ರಲ್ಲಿ ಜಾರಿಯಾದ ಜಿಎಸ್‌ಟಿ, ಸ್ವತಂತ್ರ ಭಾರತದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆ.

ದೇಶಾದ್ಯಂತ ಏಕರೂಪದ ತೆರಿಗೆ, ಮಾರುಕಟ್ಟೆ ವ್ಯವಸ್ಥೆ ಅನುಷ್ಠಾನಕ್ಕೆ ಬಂತು. “ಜಿಎಸ್‌ಟಿ ಅತ್ಯಂತ ನಿರ್ಣಾಯಕ ನೀತಿಯಾಗಿತ್ತು. ಇದರ ಜಾರಿಯೂ ಸಂಕೀರ್ಣವಾಗಿತ್ತು. ಅಷ್ಟೂ ರಾಜ್ಯಗಳ ಒಮ್ಮತ ವನ್ನು ಪಡೆಯುವುದು, ಸಾಂವಿಧಾನಿಕ ತಿದ್ದುಪಡಿಗಳು, ಹಳೆಯ ಡಜನುಗಟ್ಟಲೆ ಪರೋಕ್ಷ ತೆರಿಗೆಗಳನ್ನು ರದ್ದುಪಡಿಸುವುದು, ಆರಂಭಿಕ ವರ್ಷಗಳಲ್ಲಿ ರಾಜ್ಯಗಳಿಗೆ ನಷ್ಟ ಪರಿಹಾರ ನೀಡುವುದು ಹೀಗೆ ಹಲವಾರು ಆಯಾಮಗಳ ಪ್ರಕ್ರಿಯೆಗಳಿದ್ದವು.

ಆದರೆ ಇದು ಬಡತನ ನಿರ್ಮೂಲನೆಗೆ, ತೆರಿಗೆ ಇಳಿಕೆಗೆ ಸಹಕರಿಸಿದೆ. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಆದಾಯ ಹೆಚ್ಚಿಸಿದೆ" ಎನ್ನುತ್ತಾರೆ ನೀತಿ ಆಯೋಗದ ಮೊದಲ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ. ಆರನೆಯದಾಗಿ ಬ್ಯಾಂಕಿಂಗ್ ಸುಧಾರಣೆ. ಜನ್‌ಧನ್ ಯೋಜನೆ ಅಡಿಯಲ್ಲಿ ಕೆಲವೇ ವರ್ಷಗಳಲ್ಲಿ 56 ಕೋಟಿಗೂ ಹೆಚ್ಚು ಮಂದಿ ಬ್ಯಾಂಕ್ ಖಾತೆಗಳನ್ನು ಪಡೆದಿರುವುದು ಮತ್ತು ಅವುಗಳಲ್ಲಿ 2 ಲಕ್ಷದ 66 ಸಾವಿರ ಕೋಟಿಗೂ ಹೆಚ್ಚು ಬ್ಯಾಲೆನ್ಸ್ ಇರುವುದು ಗಮನಾರ್ಹ. ‌

ಆರಂಭದಲ್ಲಿ ಈ ಖಾತೆಗಳಲ್ಲಿ ಯಾರು ದುಡ್ಡು ಇಡುತ್ತಾರೆ? ಎಂದು ಟೀಕಿಸಲಾಗಿತ್ತು. ಆದರೆ ಇವತ್ತು ಸರಕಾರಿ ಯೋಜನೆಗಳ ಪ್ರಯೋಜನಗಳು ಇದರ ಮೂಲಕ ಫಲಾನುಭವಿಗಳಿಗೆ ನೇರವಾಗಿ ಸಿಗುತ್ತಿವೆ. ಸೋರಿಕೆ ತಡೆಯಲಾಗಿದೆ. ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟಸಿ ಕೋಡ್ (ಐಬಿಸಿ) ಕೂಡ ಚಾರಿತ್ರಿಕ. ಇದರಿಂದಾಗಿ ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ವಸೂಲಾಗದಿರುವ ಸಾಲದ ಪ್ರಮಾಣ ಗಣನೀಯವಾಗಿ ಇಳಿಯಿತು. ಇವತ್ತು ಪಿಎಸ್ ಯು ಬ್ಯಾಂಕುಗಳು ಲಾಭದ ಹಳಿಗೆ ಮರಳಿವೆ. ಭಾರತದಲ್ಲಿ ದೇಶೀಯ ಉತ್ಪಾದನೆ ಹೆಚ್ಚಿಸಲು ಪಿಎಲಐ ಸ್ಕೀಮ್ ಪರಿಣಾಮಕಾರಿಯಾಗಿದೆ.

ಏಳನೆಯದಾಗಿ, ದೇಶದ ಮೂಲಸೌಕರ್ಯ ವಲಯದ ಅಭಿವೃದ್ಧಿ. ಕಳೆದೊಂದು ದಶಕದಿಂದ ಇದು ಅಭೂತಪೂರ್ವ ರೀತಿಯಲ್ಲಿ ನಡೆದಿದೆ. ಇದಕ್ಕಾಗಿ ಕ್ಯಾಪಿಟಲ್ ಎಕ್ಸ್‌ಪೆಂಡೀಚರ್ 2 ಲಕ್ಷ ಕೋಟಿ ರುಪಾಯಿಯಿಂದ 11.21 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ (ಚೆನಾಬ್ ಬ್ರಿಡ್ಜ್), ಜಗತ್ತಿನ ಅತಿ ಎತ್ತರದ ಮತ್ತು ಉದ್ದದ ಹೆದ್ದಾರಿ ಸುರಂಗ ಮಾರ್ಗ (ಅಟಲ್‌ ಟನೆಲ್‌) ನಿರ್ಮಿಸಲಾಗಿದೆ.

ಜಗತ್ತಿನ ಎರಡನೇ ದೊಡ್ಡ ಹೆದ್ದಾರಿ ನೆಟ್‌ವರ್ಕ್ ಭಾರತದ್ದು. 2014-24ರ ಅವಧಿಯಲ್ಲಿ ಹೆದ್ದಾರಿ ಗಳು 91,287 ಕಿಲೋಮೀಟರ್‌ನಿಂದ 146,195 ಕಿಲೋಮೀಟರ್‌ಗೆ ವೃದ್ಧಿಸಿವೆ! ಅತ್ಯಾಧುನಿಕ ಮೆಟ್ರೊ ರೈಲ್ವೆ ಮಾರ್ಗ 248 ಕಿ.ಮೀ.ಗಳಿಂದ 1011 ಕಿಲೋಮೀಟರ್‌ಗೆ ವಿಸ್ತರಿಸಿದೆ. ಇನ್ನೇನು 2028-2029 ರೊಳಗೆ ಭಾರತವು ಅಮೆರಿಕ-ಚೀನಾದ ಬಳಿಕ ಮೂರನೇ ಸ್ಥಾನಕ್ಕೆ ಜಿಗಿಯುವುದು ಬೆಳಕಿನಷ್ಟೇ ಸ್ಪಷ್ಟ!

ಪ್ರಸ್ತುತ ಭಾರತದ ಜಿಡಿಪಿ ಮೌಲ್ಯ 4.19 ಟ್ರಿಲಿಯನ್ ಡಾಲರ್ ಆಗಿದ್ದರೆ, ಜರ್ಮನಿಯದ್ದು 4.74 ಟ್ರಿಲಿಯನ್ ಡಾಲರ್. ಹೀಗಾಗಿ ಅಂತರ ಕಡಿಮೆ. ಮಾತ್ರವಲ್ಲದೆ, ಕರೆನ್ಸಿಯ ಖರೀದಿ ಸಾಮರ್ಥ್ಯ ಅಥವಾ ಪರ್ಚೇಸಿಂಗ್ ಪವರ್ ಪಾರಿಟಿಯಲ್ಲಿ ಭಾರತ ಈಗಾಗಲೇ ಮೂರನೇ ಸ್ಥಾನದಲ್ಲಿದೆ. ಹಾಗಾ ದರೆ ತಲಾ ಆದಾಯದಲ್ಲಿ ಹಿಂದುಳಿದಿರುವುದೇಕೆ? ಎಂಬ ಪ್ರಶ್ನೆಯನ್ನು ಕೇಳಬಹುದು.

ಜನಸಂಖ್ಯೆಯ ಹೆಚ್ಚಳವೇ ಇದಕ್ಕೆಕ ಕಾರಣ. ಆದರೆ ಮುಂದಿನ ದಶಕದಲ್ಲಿ ಪ್ರತಿ ವರ್ಷವೂ ಭಾರತವು ತನ್ನ ಜಿಡಿಪಿಗೆ ಒಂದು ಟ್ರಿಲಿಯನ್ ಡಾಲರ್‌ಗಳನ್ನು ಸೇರಿಸಲಿದೆ. ಹೀಗಾಗಿ ಭವಿಷ್ಯದ ದಿನಗಳಲ್ಲಿ ತಲಾ ಆದಾಯವೂ ಏರಿಕೆಯಾಗಲಿದೆ. ಇನ್ನೊಂದೈವತ್ತು ವರ್ಷ ಚೀನಾವನ್ನು ಹಿಂದಿಕ್ಕಲು ಸಾಧ್ಯವಾಗದಿರಬಹುದು. ಆದರೆ ಜಿಡಿಪಿ ಮತ್ತು ತಲಾ ಆದಾಯ ಎರಡೂ ಏರಿಕೆಯಾಗ ಲಿರುವುದು ನಿಶ್ಚಿತ.

ಈ ಬಗೆಯ ಗಣನೀಯ ವೇಗ ಇದೆಯಲ್ಲವೇ? ಅದು ಚಾರಿತ್ರಿಕ. ಭಾರತದ ಇತಿಹಾಸದ ಸುವರ್ಣಾಕ್ಷರ ಗಳಲ್ಲಿ ಇದು ದಾಖಲಾಗಲಿದೆ. ಹಾಗಾದರೆ ಮೋದಿಯವರ ಮುಂದಿನ ಸುಧಾರಣಾ ಕ್ರಮಗಳೇನಿರ ಬಹುದು? ಎಸ್‌ಬಿಐನ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ಪ್ರಕಾರ, ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದ ಸುಧಾರಣೆ ಆಗಿರಬಹುದು! ದೇಶ ಕುತೂಹಲದಿಂದ ಇದನ್ನು ನಿರೀಕ್ಷಿಸುತ್ತಿದೆ.