ರೋಹನ್ ಮೂರ್ತಿಯವರ ಕ್ಲಾಸಿಕಲ್ ಲೈಬ್ರೆರಿಗೆ 10 ವರ್ಷದ ಸಂಭ್ರಮ
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯವರ ಮಗ ರೋಹನ್ ನಾರಾಯಣ ಮೂರ್ತಿಯವರು ಕನ್ನಡ ಸೇರಿದಂತೆ ಭಾರತದ ಪ್ರಾಚೀನ ಭಾಷೆಗಳ ಶಾಸ್ತ್ರೀಯ ಮತ್ತು ಅಭಿಜಾತ ಕೃತಿಗಳನ್ನು, ಮಹಾ ಕಾವ್ಯಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿಸಿ ಇಡೀ ಜಗತ್ತಿಗೆ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಅತ್ಯಪರೂಪದ ಸಾಧನೆಯನ್ನು ಕಳೆದ ಹತ್ತು ವರ್ಷಗಳಿಂದಲೂ ಸದ್ದಿಲ್ಲದೆ ಮಾಡುತ್ತಿದ್ದಾರೆ.