ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಭಾರತದ ಪೆನ್‌ ಉದ್ಯಮ

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ, ಅಂದರೆ 1950ರ ದಶಕದ ಕೊನೆಯ ಅವಧಿಯಲ್ಲಿ ಭಾರತೀಯ ಪೆನ್ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ ಭದ್ರ ಅಡಿಪಾಯವನ್ನು ಹಾಕಿ ಕೊಂಡಿತು. ಆ ಸಮಯದಲ್ಲಿ ದೇಶದ ಒಳಗಿನ ಮಾರುಕಟ್ಟೆಯ ಬರೋಬ್ಬರಿ 60 ಕೋಟಿ ರುಪಾಯಿಗಳಿಗೂ ಹೆಚ್ಚಿನ ವಹಿವಾಟಿನಿಂದ ಈ ಉದ್ಯಮವು ತನ್ನ ಬಲವನ್ನು ಪ್ರದರ್ಶಿಸಿತ್ತು.

ಸಂಪಾದಕರ ಸದ್ಯಶೋಧನೆ

ನಾನು ಪ್ರತಿದಿನ ‘ದಿ ಹಿಂದೂ’ ಪತ್ರಿಕೆಯಲ್ಲಿ Fifty Years Ago ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗುವ ಒಂದು ಸುದ್ದಿಯನ್ನು ತಪ್ಪದೇ ಓದುತ್ತೇನೆ. ಇಂದಿಗೆ ಐವತ್ತು ವರ್ಷಗಳ ಹಿಂದಿನ ವಿದ್ಯಮಾನ ಕುತೂಹಲವಾಗಿರುತ್ತದೆ. ಅಂತೆಯೇ ಇಂದಿಗೆ ಐವತ್ತು ವರ್ಷಗಳ ಹಿಂದೆ (ಜೂನ್ 11, 1976) ಪ್ರಕಟವಾದ ಸುದ್ದಿಯನ್ನು ಓಡುತ್ತಿದ್ದೆ.

Decline in Pen exports ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಈ ಸುದ್ದಿ ಗಮನ ಸೆಳೆಯಿತು. ಅದರಲ್ಲಿ ಹೀಗೆ ಬರೆದಿತ್ತು- ಭಾರತದ ಪೆನ್ ತಯಾರಿಕಾ ಉದ್ಯಮವು ದೇಶದ ಆರ್ಥಿಕ ಇತಿಹಾಸದಲ್ಲಿ ಒಂದು ವಿಶಿಷ್ಟ ಅಧ್ಯಾಯವನ್ನು ಹೊಂದಿದೆ.

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ, ಅಂದರೆ 1950ರ ದಶಕದ ಕೊನೆಯ ಅವಧಿಯಲ್ಲಿ ಭಾರತೀಯ ಪೆನ್ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ ಭದ್ರ ಅಡಿಪಾಯವನ್ನು ಹಾಕಿಕೊಂಡಿತು. ಆ ಸಮಯದಲ್ಲಿ ದೇಶದ ಒಳಗಿನ ಮಾರುಕಟ್ಟೆಯ ಬರೋಬ್ಬರಿ 60 ಕೋಟಿ ರುಪಾಯಿಗಳಿಗೂ ಹೆಚ್ಚಿನ ವಹಿವಾಟಿನಿಂದ ಈ ಉದ್ಯಮವು ತನ್ನ ಬಲವನ್ನು ಪ್ರದರ್ಶಿಸಿತ್ತು.

ಇದನ್ನೂ ಓದಿ: Vishweshwar Bhat Column: ವಿಜಿಗೀಷು ಪ್ರವೃತ್ತಿ ಎಂದರೇನು ?

ದೇಶೀಯವಾಗಿ ಗಳಿಸಿದ ಈ ಅಗಾಧ ಯಶಸ್ಸು ಮತ್ತು ಆತ್ಮವಿಶ್ವಾಸವು ಭಾರತೀಯ ಪೆನ್ ತಯಾರಕರನ್ನು ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡುವಂತೆ ಪ್ರೇರೇಪಿಸಿತು. ಇದು ಕೇವಲ ಒಂದು ವಸ್ತುವಿನ ರಫ್ತು ಆಗಿರದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಒಂದು ಮಹತ್ವದ ಹೆಜ್ಜೆಯಾ ಗಿತ್ತು.

ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದ ನಂತರ, ಭಾರತೀಯ ಪೆನ್ ಉದ್ಯಮವು ವ್ಯವಸ್ಥಿತ ವಾಗಿ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸುತ್ತಾ ಹೋಯಿತು. 1973-74ರಲ್ಲಿ ಈ ಉದ್ಯಮ ವು ತನ್ನ ಸುವರ್ಣ ಕಾಲವನ್ನು ತಲುಪಿತು. ಆ ವರ್ಷದಲ್ಲಿ ಒಟ್ಟು ರಫ್ತು ಆದಾಯವು ಭರ್ಜರಿ 80 ಲಕ್ಷ ರುಪಾಯಿಗಳ ದಾಖಲೆಯ ಮಟ್ಟವನ್ನು ಮುಟ್ಟಿತ್ತು. ಇದು ಭಾರತೀಯ ಪೆನ್‌ಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಈ ಯಶಸ್ಸು ಉದ್ಯಮಿಗಳಲ್ಲಿ ಹಾಗೂ ರಫ್ತುದಾರರಲ್ಲಿ ಭವಿಷ್ಯದ ಕುರಿತು ಭಾರಿ ನಿರೀಕ್ಷೆ ಗಳನ್ನು ಮೂಡಿಸಿತ್ತು.

ಆದರೆ, 1973-74ರಲ್ಲಿದ್ದ ಈ ವಾತಾವರಣ ಮುಂದಿನ ವರ್ಷಗಳಲ್ಲಿ ಮುಂದುವರಿಯ ಲಿಲ್ಲ. ಕೇವಲ ಒಂದೇ ವರ್ಷದಲ್ಲಿ ಒಟ್ಟು ರಫ್ತು ಪ್ರಮಾಣವು ಸುಮಾರು ಅರ್ಧದಷ್ಟು ಕುಸಿ ಯಿತು. ಈ ನಕಾರಾತ್ಮಕ ಪ್ರವೃತ್ತಿಯು ಅಲ್ಲಿಗೆ ನಿಲ್ಲದೇ, ನಂತರದ ವರ್ಷದಲ್ಲಿ ಮತ್ತಷ್ಟು ಇಳಿಯಿತು. ಇಷ್ಟು ಸುಲಭವಾಗಿ ಮತ್ತು ವೇಗವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪೆನ್ ಉದ್ಯಮವು ನೆಲಕಚ್ಚಿದ್ದು ಆರ್ಥಿಕ ತಜ್ಞರನ್ನು ಮತ್ತು ರಫ್ತುದಾರರನ್ನು ಚಿಂತೆಗೆ ದೂಡಿತು. ಈ ಹಠಾತ್ ಕುಸಿತದ ಹಿಂದಿನ ಆಳವಾದ ಕಾರಣಗಳನ್ನು ಹುಡುಕಲು ಉದ್ಯಮದ ಪ್ರಮುಖರು ಮುಂದಾದರು. ಈ ಕಳಪೆ ಸಾಧನೆಗೆ ಕಾರಣವನ್ನು ಪರಿಶೀಲಿಸಿ ದಾಗ, ವ್ಯವಸ್ಥೆಯಲ್ಲಿದ್ದ ಗಂಭೀರ ಲೋಪದೋಷಗಳು ಬೆಳಕಿಗೆ ಬಂದವು.

ಇದರ ಹಿಂದೆ ಭಾರತೀಯ ಉದ್ಯಮಿಗಳ ಕೆಲವು ಕೆಟ್ಟ ವ್ಯವಹಾರ ಪದ್ಧತಿಗಳು ಬಹಿರಂಗ ವಾದವು. ಭಾರತಕ್ಕೆ ಯುರೋಪ್ ಮಾರುಕಟ್ಟೆಯ ದೊಡ್ಡ ಬಾಗಿಲೇನೋ ತೆರೆದು ಕೊಂಡಿತ್ತು. ಪೋಲೆಂಡ್, ಭಾರತೀಯ ಪೆನ್‌ಗಳ ಗುಣಮಟ್ಟವನ್ನು ನಂಬಿ ಒಮ್ಮೆಗೆ ಬರೋಬ್ಬರಿ 37 ಲಕ್ಷ ರುಪಾಯಿ ಮೌಲ್ಯದ ಬೃಹತ್ ಆರ್ಡರ್ ಅನ್ನು ನೀಡಿತು. ಆದರೆ, ಆ ದೇಶಕ್ಕೆ ಬೇಕಾಗಿದ್ದುದು ಬಾಲ್ ಪಾಯಿಂಟ್ ಪೆನ್‌ಗಳಾಗಿದ್ದವು.

ದುರದೃಷ್ಟವಶಾತ್, ಆ ದಿನಗಳಲ್ಲಿ ಬಾಲ್ ಪಾಯಿಂಟ್ ಪೆನ್ ತಯಾರಿಸುವ ತಂತ್ರಜ್ಞಾನ ಮತ್ತು ಪರಿಣತಿಯಲ್ಲಿ ನಮ್ಮವರು ಇನ್ನೂ ಪರಿಪೂರ್ಣತೆಯನ್ನು ಹೊಂದಿರಲಿಲ್ಲ. ಪೋಲೆಂಡ್‌ನಿಂದ ಬಂದ ಈ ಬೃಹತ್ ಆರ್ಡರ್ ಭಾರತೀಯ ಪೆನ್ ತಯಾರಕರಲ್ಲಿ ಅತಿಯಾದ ಆಸೆಯನ್ನು ಹುಟ್ಟಿಸಿತು. ಪರಿಣಾಮವಾಗಿ, ಮಾರುಕಟ್ಟೆಯಲ್ಲಿದ್ದ ಸಣ್ಣ-ಪುಟ್ಟ ಬಾಲ್ ಪೆನ್ ತಯಾರಕರು ಸೂಕ್ತ ಸಿದ್ಧತೆ ಇಲ್ಲದೆಯೇ ಈ ಬೃಹತ್ ಆರ್ಡರ್ ಪೂರೈಸಲು ಮುಗಿಬಿದ್ದರು.

ಗುಣಮಟ್ಟದ ಕಡೆಗೆ ಗಮನ ಹರಿಸದೇ, ಕೇವಲ ಲಾಭದ ಉದ್ದೇಶದಿಂದ ತಯಾರಾದ ಈ ಪೆನ್‌ಗಳ ಬೃಹತ್ ಸರಕುಗಳನ್ನು ಪೋಲೆಂಡ್‌ಗೆ ರಫ್ತು ಮಾಡಲಾಯಿತು. ಅಂತಾ ರಾಷ್ಟ್ರೀಯ ವ್ಯಾಪಾರದಲ್ಲಿ ಗುಣಮಟ್ಟದ ನಿಯಂತ್ರಣ ಎಷ್ಟು ಮುಖ್ಯ ಎಂಬುದನ್ನು ಇಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಪೋಲೆಂಡ್‌ನ ತೀವ್ರವಾದ ಹಿಮದ ಚಳಿಗೆ ಭಾರತೀಯ ಪೆನ್‌ಗಳಲ್ಲಿ ಬಳಸಲಾಗಿದ್ದ ಕಳಪೆ ಗುಣಮಟ್ಟದ ಶಾಯಿಯು ಹೆಪ್ಪುಗಟ್ಟಿ ಅವು ಬರೆಯದಂತಾದವು. ಇದು ವಿಶ್ವ ಮಾರುಕಟ್ಟೆಯಲ್ಲಿ ಭಾರತ ಪೆನ್ ಉದ್ಯಮ ನೆಲ ಕಚ್ಚುವಂತೆ ಮಾಡಿತು.

ವಿಶ್ವೇಶ್ವರ ಭಟ್‌

View all posts by this author