#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Raghavendra Jois Column: ಪ್ರೀತಿಗೆ ಸಾಕೇ ಒಂದೇ ದಿನ ?

ಈಗ ಪ್ರತೀ ಒಂದಕ್ಕೂ ಒಂದೊಂದು ದಿವಸ ಅಂತ ಆಚರಿಸುತ್ತಿರುವಾಗ ಪ್ರೇಮಿಗಳ ದಿನ ಆಚರಿಸು ವುದರಲ್ಲಿ ತಪ್ಪೇನಿಲ್ಲ ಅಂತ ಆಚರಿಸುವವರ ವಾದ. ಅಪ್ಪನ ದಿನ,ಅಮ್ಮನ ದಿನ ಹಾಗೂ ಪ್ರೀತಿ ವ್ಯಕ್ತಪ ಡಿಸುವ ಈ ವ್ಯಾಲೆಂಟೈನ್ಸ್ ದಿನ ಈ ಮೂರನ್ನೂ ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಿಸು ವಂತದು ಅಷ್ಟು ಸೂಕ್ತವಲ್ಲ ಅನಿಸುತ್ತದೆ.

ಪ್ರೀತಿಗೆ ಸಾಕೇ ಒಂದೇ ದಿನ ?

Profile Ashok Nayak Feb 13, 2025 8:03 AM

ಅಭಿಮತ

ರಾಘವೇಂದ್ರ ಜೋಯಿಸ್

ನಾಳೆ ಫೆಬ್ರವರಿ 14. ಹಲವು ಪ್ರೇಮಿಗಳ ಪಾಲಿಗೆ ಇದು ವ್ಯಾಲಂಟೈನ್ಸ್ ಡೇ. ಹೊರದೇಶದ ಆಚರಣೆ ನಮ್ಮಲ್ಲಿಗೂ ಎರವಲು ತಂದು ಈ ದಿನ ಆಚರಿಸಲಾಗುತ್ತದೆ. ಆಚರಣೆಯ ಪರ ಮತ್ತು ವಿರೋಧದ ಅಭಿಪ್ರಾಯಗಳು ಪ್ರತೀ ವರ್ಷ ಇದ್ದೇ ಇರುತ್ತದೆ. ಈ ಪ್ರೀತಿ ಒಂಥರಾ ಕಚಗುಳಿ. ಆ ಕಚಗುಳಿಯ ನಗು ಪ್ರೇಮಿಗಳಲ್ಲಿ ನಿರಂತರವಾಗಿ ಜೀವನ ದುದ್ದಕ್ಕೂ ಇರುವಂತಹದು. ನಿಜವಾದ ಪ್ರೀತಿ ಇದ್ದರೆ ಅದನ್ನು ವ್ಯಕ್ತಪಡಿಸಲು ಒಂದು ದಿನ ಬೇಕೆ? ಅಥವಾ ಒಂದೇ ದಿವಸ ಸಾಕೇ? ಎನ್ನುವ ಒಂದು ಪ್ರಶ್ನೆ ಬರುತ್ತದೆ. ಹಾಗಾಗಿ ಈ ದಿನ ಮಾತ್ರ ವಿಶೇಷ ಏಕೆ ಅಂತ ಅನಿಸುತ್ತದೆ.

ಈಗ ಪ್ರತೀ ಒಂದಕ್ಕೂ ಒಂದೊಂದು ದಿವಸ ಅಂತ ಆಚರಿಸುತ್ತಿರುವಾಗ ಪ್ರೇಮಿಗಳ ದಿನ ಆಚರಿಸು ವುದರಲ್ಲಿ ತಪ್ಪೇನಿಲ್ಲ ಅಂತ ಆಚರಿಸುವವರ ವಾದ. ಅಪ್ಪನ ದಿನ,ಅಮ್ಮನ ದಿನ ಹಾಗೂ ಪ್ರೀತಿ ವ್ಯಕ್ತಪಡಿಸುವ ಈ ವ್ಯಾಲೆಂಟೈನ್ಸ್ ದಿನ ಈ ಮೂರನ್ನೂ ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಿಸು ವಂತದು ಅಷ್ಟು ಸೂಕ್ತವಲ್ಲ ಅನಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಮುಜುಗರದ ಪ್ರಸಂಗ

ಏಕೆಂದರೆ ತಾಯಿಯ ಪ್ರೀತಿ, ತಂದೆಯ ಮಮತೆ, ಸಂಗಾತಿಯ ಪ್ರೀತಿ ಒಂದು ದಿನ ನೆನಪು ಮಾಡಿ ಕೊಂಡು ಆಚರಿಸುವಂತಹದಲ್ಲ.ಈ ಮೂರೂ ಕೂಡ ಶಾಶ್ವತವಾದ ಬಂಧನದಿಂದ ಕೂಡಿರು ವಂತಹದು. ಜೀವನದುದ್ದಕ್ಕೂ ನಿರಂತರವಾಗಿ ಇರುವಂತಹ ಬಂಧ ಇದು. ಆದರೆ ಆಚರಣೆ ಅವರ ವರ ಸ್ವಂತ ಅಭಿಪ್ರಾಯ.

ಆಯ್ಕೆಗೆ ಬಿಟ್ಟಿದ್ದು. ಆದ್ದರಿಂದ ವಾಲೈಂಟೈನ್ಸ್ ಡೇ ಆಚರಿಸುತ್ತಿರುವವರಿಗೆ ಕೇಳಿದರೆ ರವಿಚಂದ್ರನ್ ಅವರ ಶೈಲಿಯಲ್ಲಿ ’ಪ್ರೀತ್ಸೋದ್ ತಪ್ಪಾ’? ಅಂತ ಕೇಳುತ್ತಾರೆ. ಅದಕ್ಕೆ ರವಿಚಂದ್ರನ್ ಅವರ ಶೈಲಿಯ ‘ಪ್ರೀತ್ಸು ತಪ್ಪೇನಿಲ್ಲ’ ಎನ್ನುತ್ತಾರೆ. ಪ್ರೀತಿಯಲ್ಲಿ ಹಾರಾಡುತ್ತಿರುವ ಹಕ್ಕಿಗಳಿಗೊಂದು ಕಿವಿ ಮಾತು. ಪ್ರೀತಿ ಕೇವಲ ಆಕರ್ಷಣೆ ಆಗದಿರಲಿ, ಪ್ರೀತಿ ಕೇವಲ ಸಮಯ ಕಳೆಯುವ ಅಸ್ತ್ರವಾಗದಿರಲಿ, ಪ್ರೀತಿ ಕೇವಲ ಒಂದು ದಿನದ ಸಂಭ್ರಮವಾಗದಿರಲಿ, ಪ್ರೀತಿಯಲ್ಲಿ ಭರವಸೆ ಇರಲಿ, ನಂಬಿಕೆ ಗಟ್ಟಿಯಾಗಿ ರಲಿ, ಪ್ರಾಮಾಣಿಕತೆಯಿಂದ ಕೂಡಿರಲಿ,ಸಂಬಂಧಗಳಲ್ಲಿ ಹೊಂದಾಣಿಯಿರಲಿ, ಫೆಬ್ರುವರಿಯಲ್ಲಿ ಅರಳಿದ ಪ್ರೀತಿ ಮಾರ್ಚ್ ನಲ್ಲಿ ಬಾಡದಿರಲಿ.

ಪ್ರೀತಿ ಶಾಶ್ವತವಾಗಿರಲಿ. ಆಗ ಅರ್ಥವಿಲ್ಲದ ವ್ಯಾಲೆಂಟೈನ್ಸ್ ಡೇಗೂ ಕೂಡ ಒಂದು ಅರ್ಥ ಬರುತ್ತದೆ.