ಶಿಶಿರಕಾಲ
ಅಮೆರಿಕನ್ನರಿಗೆ ಬಿಡಿ, ಖುದ್ದು ಟ್ರಂಪ್ ಮಹಾಶಯ, ದೊಡ್ಡಣ್ಣ ಮತ್ತು ಅಣ್ಣತಮ್ಮಂದಿರಲ್ಲಿ ಈ ಯುದ್ಧ ಏಕೆ? ಎಂಬ ಬಗ್ಗೆಯೇ ಸ್ಪಷ್ಟತೆ, ಏಕತೆ ಇಂದಿಗೂ ಇಲ್ಲ. ಯುದ್ಧ ಶುರು ಮಾಡಿದ್ದೇಕೆ? ಇರಾನ್‌ನಿಂದ ಇದ್ದ ಅಪಾಯವೇನು? ಹೋಗಿ ಅಲ್ಲಿನ ದೇಶದ ಮುಖ್ಯಸ್ಥನನ್ನೇ ಕೊಂದದ್ದರ ಉದ್ದೇಶವೇನು? ಮುಗಿಯುವುದು ಯಾವಾಗ, ಹೇಗೆ? ಇಂತಹ ಯಾವುದೇ ಪ್ರಶ್ನೆಗಳಿಗೆ ರಾಜಕೀಯ ಪಂಡಿತರುಗಳು ಏನೇ ಹೇಳಿದರೂ, ಬಹುತೇಕ ಕಥೆಗಳ ತಾಳಮೇಳ ಸರಿ ಹೊಂದುವುದಿಲ್ಲ.
ಒಟ್ಟಾರೆ ಒಂದಂತೂ ಸತ್ಯ - ಇಸ್ರೇಲ್ ದೇಶ ಅಮೆರಿಕದ ಆಡಳಿತದೊಳಗಿರುವ ಯುದ್ಧದ ಜಾಗೃತ ವಾಗಿಸಿದೆ. ಯಂತ್ರವನ್ನು ಮತ್ತೆ ಹಾಗಾದರೆ ಈ ಯುದ್ಧ ಸಂಪೂರ್ಣ ಅಮೆರಿಕ ಅಥವಾ ಟ್ರಂಪ್ ಕೈಯಲ್ಲಿದೆಯೇ? ಟ್ರಂಪ್ ಹೇಳಿದಂತೆ ಎಲ್ಲವೂ ನಡೆಯುತ್ತಿದೆಯೇ? ಉತ್ತರಿಸುವುದು ಕಷ್ಟ.
ಇಸ್ರೇಲ್ ಮತ್ತು ಅಮೆರಿಕ ಒಂದು ಕಡೆ, ಇನ್ನೊಂದು ಕಡೆ ಇರಾನ್. ಉಳಿದೆಲ್ಲ ನ್ಯಾಟೋ ( NATO ) ದೇಶಗಳು ಬಹುತೇಕ ತಟಸ್ಥ. ಇಸ್ರೇಲ್ ಅಮೆರಿಕ ನಡುವೆಯೂ ಎಮ್ಮೆ ಏರಿಗೆ, ಕೋಣ ನೀರಿಗೆ ಎಂಬಂತೆ. ಅಮೆರಿಕ ಒಂದು ಮಾಡಲು ಹೊರಟರೆ ಇಸ್ರೇಲ್ ಇನ್ನೋನೋ ಒಂದನ್ನು ಮಾಡಿ ಧೈರ್ಯದಿಂದ ಕೂತು ಗುಟುರು ಹಾಕುತ್ತದೆ.
ಇದೆಲ್ಲದರ ನಡುವೆ ಟ್ರಂಪ್ ಈ ಯುದ್ಧದಲ್ಲಿ ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಿದ್ದಾನೆ. ಜೀವನ ದಲ್ಲಿ ಅವನಿಗೇನೂ ಆಗಬೇಕಾದದ್ದಿಲ್ಲ. ಅಮೆರಿಕ ಅಧ್ಯಕ್ಷನ ಸ್ಥಾನಕ್ಕಿಂತ ಮಿಗಿಲಾದದ್ದೇನಿದೆ? ಅವನದು ಇದು ಎರಡನೇ ಅವಧಿ. ಅಮೆರಿಕ ಕಾನೂನಿನ ಪ್ರಕಾರ ಮೂರನೇ ಬಾರಿ ಅಧ್ಯಕ್ಷನಾಗು ವಂತಿಲ್ಲ.
ಈಗ ಕಾನೂನು ಬದಲಿಸಿ ಅವನೇ ಮೂರನೇ ಬಾರಿಗೆ ಅಧ್ಯಕ್ಷನಾಗಲು ಮುಂದಾದರೂ - ಅವನಿಗೆ ಇನ್ನೆರಡು ತಿಂಗಳಲ್ಲಿ ವಯಸ್ಸು ಎಂಬತ್ತು ತುಂಬುತ್ತದೆ. ಇಂತಹ ತಿಕ್ಕಲು ವ್ಯಕ್ತಿ, ಯಾರಿಗೆ ಏನನ್ನು ಬೇಕಾದರೂ ಹೇಳಬಲ್ಲ ಟ್ರಂಪ್ - ಇಸ್ರೇಲ್ ಮತ್ತು ನೆತನ್ಯಾಹು ಬಗ್ಗೆ ಒಂದೇ ಒಂದು ಬಾರಿ, ಅವರು ಮಾಡಿದ ಈ ಕೆಲಸ ಸರಿಯಲ್ಲ, ಹಾಗೆ ಮಾಡಬಾರದಿತ್ತು ಎಂದೆಲ್ಲ ತಮಾಷೆಗೂ ಹೇಳುವುದಿಲ್ಲ.
ಇದನ್ನೂ ಓದಿ: Shishir Hegde Column: ಸಾಕು...ಎರಡನೆಯ ಬಾಣ ಚುಚ್ಚಿಕೊಂಡಷ್ಟು ಸಾಕು !
ಏಕೆಂದು ಯೋಚಿಸಿದ್ದೀರಾ? ಇಸ್ರೇಲ್ ಹೇಗೆಂದರೆ, ಮೊನ್ನೆ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಪಾಕಿಸ್ತಾನದಲ್ಲಿ ಇರಾನಿನ ಜತೆ ಮಾತುಕತೆಗೆ ಮುಂದಾದರೆ, ಯುದ್ಧ ವಿರಾಮ ಅಂದರೆ - ಅದೇ ದಿನ ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮಾಡಿ ಆ ಮಾತುಕತೆಯನ್ನು ಸಂಪೂರ್ಣ ಹಳ್ಳ ಹಿಡಿಸಿತು. ಆದರೆ ಟ್ರಂಪ್, ಮತ್ತು ಅಮೆರಿಕ ವ್ಯವಸ್ಥೆಯ ಒಬ್ಬನೇ ಒಬ್ಬ ಇಸ್ರೇಲಿನ ವಿರುದ್ಧ ಸೊತ್ತುವುದಿಲ್ಲ - ಪಕ್ಷಾತೀತವಾಗಿ.
ಏಕದು? ಟ್ರಂಪ್ ಮತ್ತವನ ನಾಲಿಗೆ ಬಗ್ಗೆ ಪ್ರತ್ಯೇಕ ವಿವರಿಸಿ ಹೇಳಬೇಕಿಲ್ಲ, ಅವನು ಬಿಟ್ಟರೂ ಅವನ ನಾಲಿಗೆ ಯಾರನ್ನೂ ಬಿಡುವುದಿಲ್ಲ. ಆದರೆ ಇಸ್ರೇಲ್ ವಿಷಯದಲ್ಲಿ - ಊಹು, ಬಿಲ್ಕುಲ್ ಮಾತೇ ಇಲ್ಲ. ಇದೇಕೆ ಹೀಗೆ? ಒಂದು ಮಜವೆಂದರೆ ಎಲ್ಲರೂ ಅಮೆರಿಕದ ವ್ಯವಸ್ಥೆಯ ಬಗ್ಗೆ ಮಾತನಾಡು ತ್ತಾರೆ, ಬರೆಯುತ್ತಾರೆ, ಕೊರೆಯುತ್ತಾರೆ. ಆದರೆ ಯಾರೂ ಈ ಅವಸ್ಥೆಯ ಬಗ್ಗೆ ಮಾತನಾಡುವುದಿಲ್ಲ. ಏಕೆ? ಆನೆಯಂತಹ ಅಮೆರಿಕವನ್ನು ಆಡಿಸುವ ಇಸ್ರೇಲಿನ ಅಂಕುಶ ಯಾವುದು? ಏನಿದೆಲ್ಲದರ ಹಕೀಕತ್? ಈ ಕಥೆ ಶುರುವಾಗುವುದು ಅಜಮಾಸು ನಾಲ್ಕು ಸಾವಿರ ವರ್ಷದ ಹಿಂದೆ.
ಒಬ್ಬ ವ್ಯಕ್ತಿಯಿಂದ. ಆಗ ಮನುಷ್ಯರೆಲ್ಲ ಪೂಜೆ ಮಾಡುತ್ತಿದ್ದುದು ಸೂರ್ಯ, ಪ್ರಕೃತಿ ಇತ್ಯಾದಿ. ಈಜಿ, ಚೀನಾದ ಹ್ವಾಂಗೆ ನದಿತಟ ಪ್ರದೇಶ, ರೋಮನ್, ಇಂಕಾ ಇತ್ಯಾದಿ ನಾಗರಿಕತೆಗಳು ಪ್ರತ್ಯೇಕವಾಗಿಯೇ ಬೆಳೆಯುತ್ತಿದ್ದವು. ಭಾರತ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಪ್ರಾಂತ್ಯದಲ್ಲಿ ಇದೆಲ್ಲ ಆಚರಣೆ ಇನ್ನಷ್ಟು ರೂಪಗಳನ್ನು ಪಡೆದುಕೊಂಡಿದ್ದವು. ಇಲ್ಲಿ ಆಗ ವೇದಕಾಲ. ಆದರೆ ಎಲ್ಲಿಯೂ ಯಾವುದೇ ಮತ (ಇಂದಿನ ರಿಲಿಜಿಯನ್) ಎಂದು ಇರಲಿಲ್ಲ.
ಎಲ್ಲರದೂ ಸನಾತನ - ಪ್ರಕೃತಿ ಆಧಾರಿತ ಬದುಕುವ ರೀತಿ, ಅದುವೆ ಧರ್ಮ. ಆ ಬದುಕುವ ರೀತಿ ಯಲ್ಲಿ ಭಿನ್ನತೆ ಇತ್ತೇ ವಿನಃ ಮತವನ್ನಾಧರಿಸಿದ ವೈಷಮ್ಯವಿರಲಿಲ್ಲ. ಒಂದು ಕಡೆ ನದಿ, ಮಳೆ, ಸೂರ್ಯನನ್ನು ಪೂಜಿಸಿದರೆ ಇನ್ನೊಂದು ಕಡೆ ಬೆಂಕಿ, ಗಿಡಮರ, ಕಲ್ಲು ಇತ್ಯಾದಿ. ಹೇಗೆ ನಮ್ಮಲ್ಲಿ ಪ್ರಕೃತಿ ಆಧಾರಿತ ದೇವದೇವತೆಗಳ ಕಲ್ಪನೆಗಳಿದ್ದವೋ ಅದೇ ರೀತಿ ಎಲ್ಲ ರೋಮನ್, ಮತ್ತುಳಿದ ನಾಗರೀಕತೆಯಲ್ಲೂ ಪ್ರತ್ಯೇಕ ಆದರೆ ಹೋಲುವ ನಂಬಿಕೆಗಳಿದ್ದವು.
ಅತಿ ಸಂಕೀರ್ಣ ಭೂಮಿಯ ವ್ಯವಸ್ಥೆ ಮತ್ತು ಮೇಲೆ ಆಕಾಶದಾಚೆ ಅಂತರಿಕ್ಷ ಇವೆಲ್ಲ ದೈವಪ್ರಜ್ಞೆ ಯಿಲ್ಲದೆ ಸಾಧ್ಯವೇ ಇಲ್ಲ ಎನ್ನುವ ಭಾವನೆ ಎಡೆಯೂ ಬಹಳ ಕಾಲದಿಂದ ಇತ್ತು. ಇಂತಹ ದೈವ ಪ್ರಜ್ಞೆ, ಅತಿಮಾನುಷ ಶಕ್ತಿಯ ಪ್ರಜ್ಞೆಗೆ ಅದೆಷ್ಟೋ ಬಹಳ ಹಳೆಯದು. ಸುಮಾರು ಒಂದು ಲಕ್ಷ ವರ್ಷದಿಂದ ಮನುಷ್ಯ ಆಚರಣೆಗಳಲ್ಲಿ ತೊಡಗಿಕೊಂಡಿದ್ದಾನೆ ಎನ್ನುವುದು ಕುರುಹುಗಳಾಧಾರಿತ ಅಂದಾಜು. ಆದರೆ ಅವು ಯಾವುದೂ ನಾವು ಇಂದು ಸಂಬೋಧಿಸುವ ರೀತಿಯ ರಿಲಿಜಿಯನ್ ಆಗಿರಲಿಲ್ಲ.
ಅವನ ಹೆಸರು ಅಬ್ರಹಾಂ. ಅವನು ಹುಟ್ಟಿದ್ದು ಇಂದಿನ ದಕ್ಷಿಣ ಇರಾಕ್ ಭಾಗದಲ್ಲಿ. ಒಬ್ಬ ಸಾಮಾನ್ಯ ಜನ. ಅವನ ಹೆಂಡತಿ ಸಾರಾ. ಅವರಿಬ್ಬರಿಗೆ ಮಕ್ಕಳಾಗುವುದಿಲ್ಲ. ಆಗ ಅಬ್ರಹಾಂ ಮತ್ತು ಮನೆ ಕೆಲಸದವಳು ಹಗರ್‌ಗೆ ಹುಟ್ಟಿದವನು ಇಸ್ಮಾಯಿಲ್. ಕೆಲವು ವರ್ಷಗಳ ನಂತರ ಸಾರಾಗೂ ಒಬ್ಬ ಮಗ ಹುಟ್ಟುತ್ತಾನೆ.
ಮುಂದಿನ ಕಥೆ ಬಿಬ್ಲಿಕಲ್ ಕಥೆಯ ಪ್ರಕಾರ - ಅಬ್ರಹಾಂಗೆ ಇಸ್ಮಾಯಿಲ್ ಹುಟ್ಟುವಾಗ 86 ವರ್ಷ. ಅವನಿಗಿಂತ ಸಾರಾಗೆ ಹುಟ್ಟಿದ ಐಸಾಕ್ 14 ವರ್ಷ ಚಿಕ್ಕವನು. ಅದರರ್ಥ ಅಬ್ರಹಾಂಗೆ 100 ವರ್ಷ ತುಂಬಿದಾಗ ಐಸಾಕ್ ಹುಟ್ಟಿದ್ದು. ಒಟ್ಟಾರೆ ಯಾವ ಕಾರಣಕ್ಕೋ, ಅಬ್ರಹಾಂ ದೇವರು ಆಯ್ಕೆ ಮಾಡಿದ ಮನುಷ್ಯ ಎಂದೇ ಪ್ರಸಿದ್ಧಿ ಪಡೆದ. ಆಮೇಲೆ ಅವನು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದ, ದೇವರು ಎಲ್ಲಿಗೋ ಕರೆದನೋ, ಅವನು ಅಲ್ಲಲ್ಲಿಗೆ ಹೋದ ಎಂದೆಲ್ಲ ಕಥೆ. ಈ ಕಥೆಯ ಹಲವಾರು ರೂಪಾಂತರಗಳಿವೆ.
ಒಟ್ಟಾರೆ ಅಬ್ರಹಾಂನ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರ ನಡುವೆ ವೈಷಮ್ಯ ಬಂದು ದಾಸಿ ಹಗರ್ ಮತ್ತು ಅವಳಿಗೆ ಹುಟ್ಟಿದ ಇಸ್ಮಾಯಿಲ್‌ರನ್ನು ಪರಾನ್ ಮರಳುಗಾಡಿಗೆ, ಇಂದಿನ ಅರಬ್ ಮರಳುಗಾಡಿಗೆ (ಉತ್ತರ ಅರೇಬಿಯಾ - ಈಜಿ ಕಡೆ) ಅಟ್ಟಲಾಯಿತು. ಈ ಮೂಲಕ ಇತ್ತ ಐಸಾಕ್ ಮತ್ತವನ ವಂಶ ಕಾನನ್ ಪ್ರದೇಶದಲ್ಲಿ (ಇಂದಿನ ಇಸ್ರೇಲ್)ಮತ್ತು ಅತ್ತ ಇಸ್ಮಾಯಿಲ್ ವಂಶದವರು ಅರೇಬಿಯಾ ಮರಳುಗಾಡಿನಲ್ಲಿ. ಈ ಎರಡು ವಂಶಾವಳಿಗಳೇ ಮುಂದೆ ಯಹೂದಿ ಮತ್ತು ಇಸ್ಲಾಂ ಆದದ್ದು.
ಇಲ್ಲಿ - ಇಸ್ರೇಲಿಗಳ ಪ್ರಕಾರ ನೆಲದ ಹಕ್ಕು ಮತ್ತು ಅಬ್ರಹಾಂನ ವಂಶಾವಳಿಯ ಹಕ್ಕು ಐಸಾಕ್‌ನದು, ಅವನ ಮಗ ಜೇಕಬ್ ಮತ್ತು ಮುಂದಿನ ವಂಶಾವಳಿಯದ್ದು. ಈಗ ಇಸ್ರೇಲ್ ಇರುವ ಜಾಗ ಅಬ್ರಹಾಂ ಬಳುವಳಿಕೊಟ್ಟ ಜಾಗ (Promised Land) ಇದು ಯಹೂದಿಗಳ ನಂಬಿಕೆ. ಇಸ್ಲಾಮಿಕ್ ನಂಬಿಕೆ ಯ ಪ್ರಕಾರ ಇಬ್ರಾಹಿಂ(ಅಬ್ರಹಾಂ) ಮತ್ತು ಇಷ್ಮಾಯಿಲ್ (ಇಸ್ಮಾಯಿಲ್) ಪ್ರವಾದಿಗಳು.
ಅವರೇ ಪವಿತ್ರ ಜಾಗ ಕಾಬಾವನ್ನು ಕಟ್ಟಿದ್ದು. ಹಾಗಾಗಿ ಎಲ್ಲ ಹಕ್ಕೂ, ನೆಲ, ವಂಶಾವಳಿ ಎಲ್ಲ ಹಕ್ಕೂ ಇಸ್ಮಾಯಿಲ್ ಮತ್ತವನ ಸಂತತಿಗೆ ಎಂದು ಅವರು. ಇದುವೇ ಇಲ್ಲಿನ ಮೂಲ - ಕುಟುಂಬ ವ್ಯಾಜ್ಯ. ಐಸಾಕ್ ವಂಶಸ್ಥರಿದ್ದ ಇಸ್ರೇಲ್ ಪ್ರಾಂತ್ಯದ ರಾಜ ಸೊಲೊಮನ್ ಕ್ರಿಸ್ತ ಪೂರ್ವ ಹತ್ತನೇ ಶತಮಾನದಲ್ಲಿ ಜರುಸಲೇಂನಲ್ಲಿ ಯಹೂದಿಗಳ ದೇವಸ್ಥಾನ (ಸೂಕ್ಷ್ಮ - ಟೆಂಪಲ್ ಎಂದೇ ಕರೆಯುವುದು) ಕಟ್ಟಿದ.
ಯಹೂದಿಗಳಿಗೆ ಅದು ಪವಿತ್ರ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಇಸ್ಲಾಂ ಕರುಳಬಳ್ಳಿಯ, ವಂಶದ ಮೂಲ ಅದೇ ಇಸ್ರೇಲ್ ಎಂಬ ಭಾವನೆ ಇದೆ. ಅದರಲ್ಲಿ ಕೆಲವು ಉಪಸಮುದಾಯಗಳಂತೂ ಹಿಬ್ರೂ ಬೈಬಲ್ ಅನ್ನು ನೇರವಾಗಿ ಅನುಮೋದಿಸುತ್ತವೆ, ನಂಬುತ್ತವೆ, ಪಾಲಿಸುತ್ತವೆ. ಹೀಗಾಗಿ ಇಸ್ರೇಲಿನ ವಿರುದ್ಧ ಹೋಗುವುದೆಂದರೆ ಅದು ಈ ಎಲ್ಲ ರಾಜಕೀಯ ದೊಂಬರಾಟದಾಚೆಯ ವಿಷಯ, ಇದು ಜನರ, ಕ್ರಿಶ್ಚನ್ ಮತದಾರರ ನಂಬಿಕೆಯ ವಿಷಯ. ಅಲ್ಲಿ, ಇಸ್ಲಾಂ ಮತದ ನಂಬಿಕೆ. ಜೀಸಸ್ ಕೂಡ ಒಬ್ಬ ಯಹೂದಿ! ಇಸ್ಲಾಮಿನಲ್ಲಿ ಇಸಾ ಒಬ್ಬ ಪ್ರವಾದಿ.
ಹಾಗಾಗಿಯೇ ಇಸ್ರೇಲಿನ ವಿರುದ್ಧ ಅಮೆರಿಕ, ಅದರ ಅಧ್ಯಕ್ಷ, ವ್ಯವಸ್ಥೆ ಎಂದೂ ತುಟಿ ಬಿಡುವುದಿಲ್ಲ. ಇಸ್ರೇಲ್ ಎಲ್ಲರೂ ಹೇಳುವಂತೆ ಕೇವಲ ಅಲ್ಲಿನ ಜನರ ಶೃದ್ಧೆ, ಬುದ್ಧಿವಂತಿಕೆ ಮತ್ತು ದೇಶಪ್ರೇಮ ದಿಂದಷ್ಟೇ ಇಷ್ಟು ಗಟ್ಟಿಯಾಗಿ ನಿಂತಿರುವುದಲ್ಲ. ಅದರಾಚೆ ಇಂದು ಪ್ರಬಲವಾದ ಧಾರ್ಮಿಕ ಸೆಂಟಿಮೆಂಟ್ ಅವರ ರಕ್ಷಣೆಗೆ ಇದೆ. ಇಲ್ಲದಿದ್ದರೆ, ಅದೊಂದು ಬೇರೆ ಮತದ, ಹಿನ್ನೆಲೆಯಿಲ್ಲದ ದೇಶವಾಗಿದ್ದರೆ- ಅರಬ್ ರಾಷ್ಟ್ರಗಳ ಜತೆ ಸೇರಿ, ತೈಲದಾಸೆಗೆ ಅಮೆರಿಕವೇ ಇದಕ್ಕೊಂದು ಗತಿ ಕಾಣಿಸುತ್ತಿತ್ತೇನೋ? ಅಬ್ರಹಾಂನಿಂದ ವಾಷಿಂಗ್ಟನ್ ವರೆಗೆ - ಸವತಿ ಮಕ್ಕಳ ವೈಷಮ್ಯ ಅದೆಲ್ಲಿಂದ ಅದೆಲ್ಲಿಗೆ ಬಂದು ನಿಂತಿತು ನೋಡಿ? ಅಷ್ಟಕ್ಕೂ ಮಹಾಭಾರತ, ರಾಮಾಯಣ ಹೀಗೆ ಎಲ್ಲದರ ಮೂಲವೂ ಸವತಿ ಮಕ್ಕಳ ಸಮಸ್ಯೆಯೇ ಅಲ್ಲವೇ? ಸುಮ್ಮನೆ ಹಾಗೊಂದು ದೃಷ್ಟಿಕೋನಕ್ಕೆ ಹೋಲಿಕೆ.
ಕಳೆದ ಆರಂಭದಲ್ಲಿ ಎಲ್ಲರೂ ಮೆಕ್ಕಾ ಬದಲಿಗೆ ಜರುಸಲೇಂ ನತ್ತ ಮುಖ ಮಾಡಿ ನಮಾಜ್ ಮಾಡು ತ್ತಿದ್ದರಂತೆ. ಏಕೆ? ಅವರ ಪ್ರಕಾರ ಅಬ್ರಹಾಂ ಮೆಕ್ಕಾದಲ್ಲಿದ್ದದಲ್ಲವೇ? ಇಸ್ರಾ ಮಿರಾಜ್ ಪ್ರಕಾರ ಪ್ರಾಫೆಟ್ ಮೊಹಮ್ಮದ್ ಮೆಕ್ಕಾದಿಂದ ಜರುಸಲೇಂಗೆ ಮಾಯಾರೂಪದಲ್ಲಿ ಸಂಚರಿಸಿ ಅಲ್ಲಿಂದ ಸ್ವರ್ಗಕ್ಕೇರಿದರು ಎಂದು.
ಮೋಸೆಸ್ - ಮೂಸಾ, ಡೇವಿಡ್ - ದಾವೂದ್, ಸೊಲೊಮನ್ - ಸುಲೈಮಾನ್, ಜೀಸಸ್ - ಇಸಾ ಇವರೆಲ್ಲರೂ ಪ್ರೊಫೆಟ್‌ಗಳು. ಆದರೆ ನಜರೆತ್‌ನ ಜೀಸಸ್ ಯಹೂದಿ! ಅವರಿಂದ ಮುಂದಿನದು ಕ್ರಿಶ್ಚಿಯಾನಿಟಿ. ಅಲ್ಲಿಂದ ಮುಂದೆ ಇಸ್ರೇಲ್ ನೆಲದ ಮೇಲೆ ಅಸೈರನ್, ಬೆಬಿಲೋನಿಯನ್, ಪರ್ಷಿಯನ್, ಗ್ರೀಕ್, ರೋಮನ್ ಇತ್ಯಾದಿ ದಾಳಿಗಳಾದವು. ಇಲ್ಲಿಯವರೆಗೂ ನಿರಂತರ ದಾಳಿಯನ್ನು ಯಹೂದಿಗಳು ಎದುರಿಸುತ್ತಾ ಬಂದಿದ್ದಾರೆ.
ಅವರದು ಗಟ್ಟತನವೇ, ಅನುಮಾನವೇ ಬೇಡ. ವಿಶ್ವಯುದ್ಧವಾಯ್ತು, ಹಿಟ್ಲರ್ ನಿಂದ ಹೋಲೋಕಾ - ಸಾಮೂಹಿಕ ನರಮೇಧವಾಯಿತು. ಯಹೂದಿಗಳು ಪ್ರಪಂಚದಾದ್ಯಂತ ದಿಕ್ಕಪಾಲದರು ಇತ್ಯಾದಿ. ಆಮೇಲೆ 1947ರಲ್ಲಿ ಯಹೂದಿಗಳಿಗೊಂದು ಜಾಗ, ಅರಬ್ಬರಿಗೆ ಇನ್ನೊಂದು ಜಾಗ ಎಂದು ಬ್ರಿಟಿಷರು, ವಿಶ್ವಸಂಸ್ಥೆ ಭಾಗಾಯತ ಮಾಡಲು ಮುಂದಾಯಿತು.
ಆಮೇಲೊಂದು ಯುದ್ಧ - ಅದರಲ್ಲಿ ಯಹೂದಿಗಳು ಹೋರಾಡಿ ಗೆದ್ದರು. ಇದೆಲ್ಲದರ ನಡುವೆ ಪಲಸ್ಟೀನ್ʼನಲ್ಲಿ, ಆಮೇಲೆ ಗಾಜಾದಲ್ಲಿ ಮುಸ್ಲಿಮರು ಹಾಗೆಯೇ ಉಳಿದುಕೊಂಡರು. ಒಟ್ಟಾರೆ ಬ್ರಿಟಿಷರು ಭಾರತದಲ್ಲಿ - ಪಾಕಿಸ್ತಾನ ವಿಭಜನೆ ಹೇಗೆ ಅರ್ಧಂಬರ್ಧ ಮಾಡಿ ಕೈಬಿಟ್ಟರೋ ಹಾಗೆಯೇ ಇಲ್ಲೂ ಆಯಿತು.
ಈ ಎಲ್ಲ ಹಿನ್ನೆಲೆ, ಕಥೆ ಕೇಳಿದ ನಂತರ ಇಸ್ರೇಲಿಗೆ ಮತ್ತು ಅಕ್ಕಪಕ್ಕದ ಇಸ್ಲಾಮಿಕ್ ದೇಶಗಳಿಗೆ ಏಕೆ ಆಗಿಬರುವುದಿಲ್ಲ ಎನ್ನುವುದೇನೋ ಸ್ಪಷ್ಟವಾಯ್ತು. ಆದರೆ ಅಮೆರಿಕ ಇವರ ಬೆನ್ನಿಗೆ ನಿಲ್ಲುವುದೇಕೆ? ಇಸ್ರೇಲ್ 1948ರಲ್ಲಿ ತಾನೊಂದು ಸ್ವತಂತ್ರ ದೇಶ ವಾರ ಅಮೆರಿಕದ ಮೂವರು ಮತ್ತು ಒಬ್ಬ ಕೆನಡಾದವನು ಗಗನನೌಕೆ ಆರ್ಟಿಮಸ್2ರಲ್ಲಿ ಕೂತು ಚಂದ್ರನ ಸುತ್ತ ಹಾಕಿಬಂದರಲ್ಲ. ಅದು ಗುಡ್ ಫ್ರೈಡೇ ದಿನ.
ಕ್ರೈಸ್ತರ ಪ್ರಕಾರ ಜೀಸಸ್ ಶಿಲುಬೆಗೇರಿಸಿದ ದಿನ. ಇಡೀ ಕ್ರಿಶ್ಚಯಾನಿಟಿಯ ಮೂಲ ಆ ಘಟನೆ. ಇಸ್ಲಾಂ ನಂಬಿಕೆಯಂತೆ ಇಸಾನನ್ನು ಶಿಲೇಬೆಗೆ ಏರಿಸಲಾಗಿಲ್ಲ (ಸುರಾ 4:157). ಈ ವಿಶೇಷ ದಿನದಂದು ಗಗನಯಾನಿಗಳು ಅಂತರಿಕ್ಷದಿಂದಲೇ ಟಿವಿ ಸಂದರ್ಶನವೊಂದನ್ನು ಕೊಟ್ಟಿದ್ದರು. ಆಗ ಗಗನಯಾನಿ ವಿಕ್ಟರ್ ಗ್ಲೋವರ್‌ನಿಗೆ ಗುಡ್ ಫ್ರೈಡೇ ದಿನ ನಮಗೆ ನಿಮ್ಮ ಹಾರೈಕೆ ಏನು? ಇಂದು ಕೇಳಿದರು. ಅದಕ್ಕೆ ಅವನು ಕೊಟ್ಟ ಮಾತಿನ ಭಾವಾರ್ಥ ಹೀಗಿದೆ, ಇದೆಲ್ಲ ಹಿನ್ನೆಲೆಯನ್ನು ಪಕ್ಕಕ್ಕಿಟ್ಟು ಒಮ್ಮೆ ಓದಿಕೊಳ್ಳಿ.
ವಿಕ್ಟರ್ ಗ್ಲೋವರ್: ನಾನು ಈ ಪ್ರಶ್ನೆಯ ಬಗ್ಗೆ ಯೋಚಿಸಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಇದನ್ನು ಹೇಳಬಹುದು. ನಮ್ಮ ನೌಕೆ ಭೂಮಿಯಿಂದ ದೂರವಾಗುತ್ತಿದ್ದಂತೆ, ಭೂಮಿಯತ್ತ ನಾನು ನೋಡಿ ದಾಗ ಕರ್ತೃವಿನ ಸೃಷ್ಟಿ ಅದೆಷ್ಟು ಅದ್ಭುತವೆನಿಸುತ್ತಿದೆ. ಬ್ರಹ್ಮಾಂಡದ ವಿಶಾಲತೆಯಲ್ಲಿ ಅದೆಲ್ಲಿಯೋ ತೇಲಿ ಹೊರಟ ಇಡೀ ಭೂಮಿ ಒಂದೇ ಎಂದೆನಿಸುತ್ತಿದೆ.
ನಾನು ಸ್ಪೇಸ್ ಶಿಪ್‌ನಲ್ಲಿ ಕೂತು ಈಗ ನಿಮ್ಮೊಡನೆ ಮಾತನಾಡುತ್ತಿದ್ದೇನೆ. ಆದರೆ ನಾನು ಭೂಮಿ ಯನ್ನು ಇಷ್ಟು ದೂರದಿಂದ ನೋಡಿದರೆ ಇಲ್ಲಿಂದ ಭೂಮಿ ಕೂಡ ಇನ್ನೊಂದು ಚಿಕ್ಕ ಸ್ಪೇಸ್ ಶಿಪ್‌ನಂತೆಯೇ ಕಾಣಿಸುತ್ತದೆ. ನಾನಿರುವುದು ಮನುಷ್ಯ ನಿರ್ಮಿಸಿದ ಅತ್ಯಂತ ಅತ್ಯಾಧುನಿಕ ಸ್ಪೇಸ್ ಶಿಪ್.
ಇಲ್ಲಿಂದ ನನಗೆ ಕಾಣಿಸುತ್ತಿರುವುದು ದೇವರು ಮಾಡಿದ, ಕಾಸ್ಮೋಸ್‌ನಲ್ಲಿ ಚಲಿಸುತ್ತಿರುವ ಅತ್ಯಂತ ಸಂಕೀರ್ಣ ಸ್ಪೇಸ್ ಶಿಪ್, ನಮಗೆ ಬದುಕಲು ದೇವರು ಒಂದು ಪರಮಾದ್ಭುತ ಗಗನ ನೌಕೆಯನ್ನೇ ನಿರ್ಮಿಸಿಕೊಟ್ಟಿದ್ದಾನೆ. ಇದು ಸಂಪೂರ್ಣ ಮನುಕುಲ, ಜೀವಸಂಕುಲವನ್ನು ಉಳಿಸಿ ಬೆಳೆಸುತ್ತ ಎಂದು ಘೋಷಿಸಿಕೊಂಡಾಗ ಅದನ್ನು ಮೊದಲು ಗುರುತಿಸಿ ಹೌದೆಂದದ್ದು ಅಮೆರಿಕದ ಅಧ್ಯಕ್ಷ ಹೆನ್ರಿ ಟ್ರೂಮನ್. ಎರಡನೇ ದೇಶ ಸೋವಿಯತ್ ಯೂನಿಯನ್.
ಏಕಿರಬಹುದು ಹೇಳಿ? ಎರಡು ಕಾರಣ. ಬಹಳ ಮಜಾ ಇದೆ ಕಥೆ. ಅಮೆರಿಕಗೆ ಅರಬ್ ದೇಶಗಳ ಪೆಟ್ರೋಲ್ ಬೇಕು. ಹಾಗಾಗಿ ಅವರ ಜತೆ ಸಂಬಂಧ, ಒಪ್ಪಂದ ಇತ್ಯಾದಿ ಹಾಳಾಗಬಾರದು. ಆದರೆ ಅವುಗಳಿಗೆ ಇಸ್ರೇಲ್ ಕಂಡರಾಗದು. ಅಮೆರಿಕ ಸರಕಾರೀ ವ್ಯವಸ್ಥೆಗೆ ಇಸ್ರೇಲ್‌ಅನ್ನು ಬಿಡುವಂತಿಲ್ಲ. ಇದಕ್ಕೆ ಕಾರಣ, ಮೊದಲನೆಯದು ಅಮೆರಿಕನ್ ಯಹೂದಿಗಳ ಮತ್ತು ಇಸ್ರೇಲ್ ಸರಕಾರದ ಅಮೆರಿಕಾದ ವ್ಯವಸ್ಥೆಯ ಮೇಲಿರುವ ರಾಜಕೀಯ ಮತ್ತು ವಶೀಲಿ ಪ್ರಾಬಲ್ಯ. ಅದೆಲ್ಲದಕ್ಕಿಂತ ಮುಖ್ಯವಾಗಿ ಮತ (ವೋಟ್) ಮತ್ತು ಮತ (ರಿಲಿಜಿಯನ್).
ಯಾರ ಮತ? ಯಾವ ಮತ? ಅಮೆರಿಕದ ಅಧ್ಯಕ್ಷರಿಗೆ ಇಸ್ರೇಲಿಗಳು ವೋಟ್ ಮಾಡುವುದಿಲ್ಲವಲ್ಲ. ಅಮೆರಿಕದಲ್ಲಿರುವ ಯಹೂದಿಗಳ ಸಂಖ್ಯೆ ಕೇವಲ 2-2.5%. ಲೆಕ್ಕಕ್ಕೇ ಇಲ್ಲದ ಪ್ರಮಾಣ ಅಲ್ಲವೇ? ಹಾಗಾದರೆ ಅಮೆರಿಕನ್ ವ್ಯವಸ್ಥೆಯನ್ನು ಇಸ್ರೇಲಿಗರು ವಶೀಕರಣ ಮಾಡಿದ್ದಾರೆಯೇ? ಒಂದು ಚಿಕ್ಕ ಲೆಕ್ಕ ಕೊಡುತ್ತೇನೆ.
ಅಮೆರಿಕದಲ್ಲಿ 65% ಕ್ರಿಶ್ಚನ್ ಮತದಾರರು. ಉಳಿದ ಸುಮಾರು 30% ಯಾವುದೇ ಮತದ ಜತೆ ಗುರುತಿಸಿಕೊಳ್ಳದವರು. ಉಳಿದವರು ಆಟಕ್ಕುಂಟು, ಲೆಕ್ಕಕ್ಕಿಲ್ಲ. 65% ಕ್ರೈಸ್ತ ಸಮುದಾಯದಲ್ಲಿ ಇಂದಿಗೂ ತಮ್ಮ ಕಾಸ್ಮೋಸ್‌ನಲ್ಲಿ ಎಲ್ಲಿಗೋ ಸಾಗುತ್ತಿದೆ. ಈ ಸ್ವಸಮರ್ಥ ಗಗನ ನೌಕೆ. ನಿಮಗೆ ನಾವು ದೂರದಲ್ಲಿದ್ದೇವೆ ಎಂದೆನಿಸಬಹುದು, ಆದರೆ ನೀವು ಕೂಡ ನನ್ನಿಂದ ಅಷ್ಟೇ ದೂರದಲ್ಲಿ ದ್ದೀರಿ.
ತಮಾಷೆಗಲ್ಲ, ಹೇಗೆ ನಾವಿಲ್ಲಿ ನೌಕೆಯಲ್ಲಿ ಇರುವುದು ವಿಶೇಷವೆನಿಸುತ್ತದೆಯೋ, ನಾವು ಇಲ್ಲಿಂದ ನೋಡಿದಾಗ ನಮಗೆ ನೀವು ಅಲ್ಲಿ ಭೂಮಿಯ ಮೇಲಿರುವುದು ಅದಕ್ಕಿಂತ ಜಾಸ್ತಿ ವಿಶೇಷ ವೆನಿಸು ತ್ತದೆ. ನಮ್ಮ ನಡುವೆ ಇರುವುದು ’nothing’ - ವಿಶ್ವವೆಂಬ ಮತಿಯ ಮಿತಿಗೆ ಸಿಗದಷ್ಟು ಖಾಲಿ ಜಾಗ, ನಿರ್ವಾತ. ನಿಮಗೆ (ಭೂಮಿಯಲ್ಲಿವವರಿಗೆ) ಒಟ್ಟಾಗಿ ಬದುಕಲು ಈ ವಿಶೇಷ, ಸುಂದರ ಜಾಗವಿದೆ. ಈ ದಿನ, ನೀವು ಯಾವುದೇ ಮತದವರಾಗಿರಲಿ, ನಾವೆಲ್ಲ ಯಾವತ್ತೂ ಯೋಚಿಸಬೇಕಾದದ್ದು, ಪ್ರಶ್ನಿಸಿ ಕೊಳ್ಳಬೇಕಾದದ್ದೇನೆಂದರೆ - ನಾವು ಮನುಷ್ಯರು ನಿಜವಾಗಿಯೂ ಯಾರು? ಮತ್ತು ಎಲ್ಲಿ ಹೊರಟಿದ್ದೇವೆ? ಎಂದು.