ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nagaraja Nayak Column: ಉಮರ್ ಖಾಲಿದ್‌ ರಾಷ್ಟ್ರೀಯವಾದಿಯೇ ?

ಅಸಲಿಗೆ ರಾಷ್ಟ್ರೀಯವಾದ ಎಂದರೇನು? ತನ್ನ ರಾಷ್ಟ್ರದ ಹಿತಾಸಕ್ತಿ, ಸಂಸ್ಕೃತಿ ಮತ್ತು ಸಾರ್ವಭೌ ಮತ್ವಕ್ಕೆ ಮೊದಲ ಆದ್ಯತೆ ನೀಡುವ, ಅದರ ಬಗ್ಗೆ ಅಪಾರ ಹೆಮ್ಮೆ ಮತ್ತು ನಿಷ್ಠೆಯನ್ನು ಹೊಂದಿರುವ ವ್ಯಕ್ತಿಯನ್ನು ರಾಷ್ಟ್ರೀಯವಾದಿ ಎಂದು ಕರೆಯುತ್ತಾರೆ. ದೇಶಪ್ರೇಮ, ನಿಷ್ಠೆ ಮತ್ತು ನಮ್ಮ ಸಂಸ್ಕೃತಿಯ ರಕ್ಷಣೆ ರಾಷ್ಟೀಯವಾದದ ಪ್ರಮುಖ ಲಕ್ಷಣಗಳು.

ಪ್ರತಿಮಾತು

ನಾಗರಾಜ ನಾಯಕ

ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದ ಮೇಲೆ ದಾವುದ್ ಇಬ್ರಾಹಿಂ, ಚೋಟಾ ಶಕೀಲ್, ಟೈಗರ್ ಮೆಮೊನ್‌ರನ್ನು ಬಿ.ಕೆ ಹರಿಪ್ರಸಾದ್ ಅವರು ಏನೆನ್ನಬಹುದು ಎಂಬ ಕುತೂಹಲವೇ ತುಂಬಿದೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಹರಿಪ್ರಸಾದರ ಬಾಯಲ್ಲಿ ಈ ಮಾತು ಗಳು ಬರುತ್ತವೆ ಎಂದರೆ ಮುಂದಿನ ದಿನಗಳಲ್ಲಿ ಇನ್ನೇನೆ ನಿರೀಕ್ಷಿಸಬೇಕೊ? ತನಗೆ ಸ್ಪರ್ಧೆ ಕೊಡುವ ಪಕ್ಷ ಒಬ್ಬ ವ್ಯಕ್ತಿಯನ್ನು ವಿರೋಽಸುತ್ತದೆ ಎಂಬ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ‘ರಾಷ್ಟ್ರೀಯವಾದಿ’ ಎಂದು ಕರೆಯುವುದು ಜಗಳಗಂಟತನ ಎನಿಸುತ್ತದೆ.

ಒಂದು ದೇಶದಲ್ಲಿ ಪಕ್ಷಗಳಿವೆ ಎಂದ ಮಾತ್ರಕ್ಕೆ ಆ ಪಕ್ಷಗಳ ಸಿದ್ಧಾಂತಗಳು ಎಲ್ಲವೂ ಒಂದಕ್ಕೊಂದು ವಿರೋಧವೆಂದಲ್ಲ. ಪಕ್ಷಗಳಲ್ಲಿ ಕೆಲವು ಸಾಮ್ಯಗಳು ಸಹ ಇರಬಹುದುದು. ಇಂದು ಹರಿಪ್ರಸಾದರ ಪಕ್ಷ ಸಂಪೂರ್ಣವಾಗಿ ನೆಲಕಚ್ಚುತ್ತಿರುವುದಕ್ಕೆ ಇಂತಹ ಅನಾಹುತಕಾರಿ ನಿಲುವುಗಳು ಮತ್ತು ಹೇಳಿಕೆಗಳೇ ಕಾರಣ. ಹರಿಪ್ರಸಾದರು ಹೈದರಾಬಾದ್‌ನ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್‌ನನ್ನು, ಹೈದ್ರಾಬಾದ್ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ತೀವ್ರ ದೌರ್ಜನ್ಯ, ಲೂಟಿ ಮತ್ತು ಕೊಲೆಗಳನ್ನು ಗೈದ ರಜಾಕರರನ್ನು, ಜುನಾಗಢದ ನವಾಬ್ ಮೊಹಮ್ಮದ್ ಮಹಬತ್ ಖಾನ್‌ನನ್ನು, ಭೂಪಾಲ್‌ನ ನವಾಬ ಹಮೀದು ಖಾನ್‌ನನ್ನು ರಾಷ್ಟ್ರೀಯವಾದಿ ಎಂದು ಯಾವಾಗ ಕರೆಯುತ್ತಾರೆ ಎಂಬುದನ್ನು ನೋಡಬೇಕಿದೆ.

ಅಸಲಿಗೆ ರಾಷ್ಟ್ರೀಯವಾದ ಎಂದರೇನು? ತನ್ನ ರಾಷ್ಟ್ರದ ಹಿತಾಸಕ್ತಿ, ಸಂಸ್ಕೃತಿ ಮತ್ತು ಸಾರ್ವಭೌಮ ತ್ವಕ್ಕೆ ಮೊದಲ ಆದ್ಯತೆ ನೀಡುವ, ಅದರ ಬಗ್ಗೆ ಅಪಾರ ಹೆಮ್ಮೆ ಮತ್ತು ನಿಷ್ಠೆಯನ್ನು ಹೊಂದಿರುವ ವ್ಯಕ್ತಿಯನ್ನು ರಾಷ್ಟ್ರೀಯವಾದಿ ಎಂದು ಕರೆಯುತ್ತಾರೆ. ದೇಶಪ್ರೇಮ, ನಿಷ್ಠೆ ಮತ್ತು ನಮ್ಮ ಸಂಸ್ಕೃತಿಯ ರಕ್ಷಣೆ ರಾಷ್ಟೀಯವಾದದ ಪ್ರಮುಖ ಲಕ್ಷಣಗಳು.

ಇದನ್ನೂ ಓದಿ: Nagaraja Nayak Column: ಬಡವರ ಬಾಳಿನ ಬೆಳಕು ಈ ಮನೆ !

ರಾಷ್ಟ್ರೀಯವಾದದಲ್ಲಿ ಎರಡು ಪ್ರಕಾರಗಳಿವೆ. ಮೊದಲನೆಯದು ನಾಗರಿಕ ರಾಷ್ಟ್ರೀಯವಾದ (Civil Nationalisam). ಇಲ್ಲಿ ದೇಶದ ಸಂವಿಧಾನ, ಕಾನೂನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಒತ್ತು. ಇನ್ನೊಂದು ಸಾಂಸ್ಕೃತಿಕ ರಾಷ್ಟ್ರೀಯವಾದ. ದೇಶದ ಕಲ್ಪನೆಯು ಕೇವಲ ಕಾನೂನಿಗೆ ಸೀಮಿತ ವಾಗಿರದೆ ಪೂರ್ವಜರ ಸಂಸ್ಕೃತಿಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಹರಿಪ್ರಸಾದರ ಪ್ರಕಾರ ಉಮರ್ ಖಲೀದನದು ಯಾವ ಪ್ರಕಾರದ ರಾಷ್ಟ್ರೀಯತೆ? ರಾಷ್ಟ್ರೀಯತೆಯನ್ನು ತೋರಿಸುವ ಯಾವ ನಿಶಾನೆಯನ್ನು ಖಾಲಿದ್ ಈ ದೇಶದ ಮುಂದೆ ತೆರೆದಿಟ್ಟಿದ್ದ ಎನ್ನುವುದನ್ನು ಬಿಕೆ ಹೇಳಬಾರದೆ? ಜೆಎನ್‌ಯುನಲ್ಲಿ 2016ರ ಫೆ.9ರಂದು ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್‌ಗಳ ಮರಣ ದಂಡನೆ ವಿರೋಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಲ್ಲಿ ಈ ಉಮರ್ ಖಾಲಿದ್ ಮತ್ತು ಇನ್ನೂ ಕೆಲವರು ಭಾರತ್ ತೇರೆ ತುಕ್ಡೆ ಹೋಂಗೆ, ಇನ್‌ಶಾ ಅಹ್ (ಭಾರತ ನಿನ್ನ ತುಂಡುಗಳಾಗುತ್ತವೆ, ಅಹ್ ಇಚ್ಛಿಸಿದರೆ), ಭಾರತ ತೇರಿ ಬರ್ಬಾದಿ ತಕ್, ಜಂಗ್ ರಹೇಗಿ (ಭಾರತ ನಾಶವಾಗುವರೆಗೆ ಹೋರಾಟ ಮುಂದುವರೆಯುತ್ತದೆ), ಅಫ್ಜಲ್ ಗುರು ಅಮರ್ ರಹೇ (ಅಫ್ಜಲ್ ಗುರು ಅಮರನಾಗು) ಎಂಬ ಘೋಷಣೆಗಳನ್ನು ಕೂಗಿದ್ದರು. ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ 2019ರಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.

ಜೆಎನ್‌ಯು ಪ್ರಕರಣವನ್ನು ಅವಲೋಕಿಸಿದಾಗ ಹರಿಪ್ರಸಾದರಿಗೆ ಖಾಲಿದ್ ರಾಷ್ಟ್ರೀಯವಾದಿ ಎಂದು ಹೇಗೆ ಅನಿಸುತ್ತದೆ? ರಾಷ್ಟ್ರೀಯವಾದಿ ಎನ್ನಲು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂಬ ಹೊಸ ಸಿದ್ಧಾಂತ ಹುಟ್ಟಿಕೊಂಡಿದೆಯಾ? ನಾಗರಿಕ ರಾಷ್ಟ್ರೀಯವಾದದ ಪ್ರಕಾರ ನೋಡಿದರೂ ಉಮರ್ ಈ ದೇಶದ ಸಂವಿಧಾನವನ್ನೇ ಧಿಕ್ಕರಿಸಿದ್ದಾನೆ.

BKH

ಭಾರತ ತೇರೆ ತುಕ್ಡೆ ಹೋಂಗೆ ಎನ್ನುವುದು ಸಂವಿಧಾನದ ವಿರುದ್ಧವೂ ಹೌದು, ರಾಷ್ಟ್ರದ ವಿರುದ್ಧವೂ ಮಾಡಿದ ಘೋಷಣೆ. ದೆಹಲಿ ಈಶಾನ್ಯ ಭಾಗದಲ್ಲಿ 2020ರ ಫೆ.24-25ರಂದು ನಡೆದ ಗಲಭೆಗಳಲ್ಲಿ 53 ಜನ ಮೃತಪಟ್ಟರು. ಈ ಗಲಭೆಗಳು ಆಕಸ್ಮಿಕವಾಗಿ ಸಂಭವಿಸಿರುವುದಲ್ಲ.

ಡಿಸೆಂಬರ್ 2019ರಿಂದ ಫೆಬ್ರವರಿ 2020ರ ವರೆಗೆ ನಡೆದ ಮೀಟಿಂಗ್, ಪ್ರತಿಭಟನೆ ಮತ್ತು ಇತರೇ ಚಟುವಟಿಕೆಗಳ ಮೂಲಕ ರೂಪಿಸಲಾದ ದೊಡ್ಡ ಷಡ್ಯಂತ್ರ ಇದಾಗಿತ್ತು. ಇದರಲ್ಲಿ ಖಾಲಿದ್‌ ಪ್ರಮುಖ ಆರೋಪಿ. ಖಾಲಿದ್ ಮೇಲೆ ಗಲಭೆಯಲ್ಲಿ ಪಾತ್ರ ವಹಿಸಿದ್ದ, ಭಯೋತ್ಪಾದನಾ ಕೃತ್ಯ ಮಾಡಲು ಷಡ್ಯಂತ್ರ, ಪ್ರಯತ್ನ, ಪ್ರಚೋದನೆ ಆರೋಪಗಳಿವೆ. ಈತನ ಮೇಲೆ UAPA (Unlawfully Activities Prevention Act) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 2026ರ ಜ.5ರಂದು ಭಾರತದ ಸರ್ವೋಚ್ಚ ನ್ಯಾಯಾಲಯ ಖಾಲಿದ್‌ನ ಜಾಮೀನು ಅರ್ಜಿ ಯಾಕೆ ತಿರಸ್ಕರಿಸಿತು ಎನ್ನುವುದನ್ನು ಹರಿಪ್ರಸಾದ್ ಜರೂರಾಗಿ ಓದಬೇಕಾದ ಅವಶ್ಯಕತೆಯಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ನೆಲದ ಕಾನೂನಾಗಿರುತ್ತದೆ. ಸರ್ವೋಚ್ಚ ನ್ಯಾಯಾಲಯ ನಡೆಯುತ್ತಿರುವುದು ಸಂವಿಧಾನದ ಪ್ರಕಾರ. ಹರಿಪ್ರಸಾದ್ ಈ ನೆಲದ ಕಾನೂನನ್ನು ಗೌರವಿಸ ಬೇಡವೆ? ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ನ್ಯಾಯಾಲಯಗಳಲ್ಲಿ ಪ್ರಕರಣ ನಡೆಯುವಾಗ ಹೇಳಬಹುದೆ? ಇದು ನ್ಯಾಯ ವಿಚಾರಣೆಯಲ್ಲಿ ಪರೋಕ್ಷವಾಗಿ ಮೂಗು ತೂರಿಸಿದಂತಲ್ಲವೆ? ಪ್ರಕರಣದಲ್ಲಿ ಬಂಽತನಾಗಿ ಇರುವ ವ್ಯಕ್ತಿಗೆ ಈ ರೀತಿಯ ಸರ್ಟಿಫಿಕೇಟ್ ನೀಡಲು ಹರಿಪ್ರಸಾದರಿಗೆ ಯಾರು ಅಧಿಕಾರ ಕೊಟ್ಟರು? ಉಮರ್ ಖಾಲಿದ್‌ಎಂಬ ವ್ಯಕ್ತಿ ‘ಅಫ್ಜಲ್ ಗುರು ಅಮರ ರಹೇ’ ಎಂದು ಹೇಳಿದ ಆರೋಪ ಹೊತ್ತಿದ್ದಾನೆ.

ಯಾರೀತ ಅಫ್ಜಲ್ ಗುರು? 2001ರ ಡಿ.13ರಲ್ಲಿ ಭಾರತವೇ ಬೆಚ್ಚಿ ಬೀಳುವ ಘಟನೆ ನಡೆಯಿತು. ಐವರು ಶಸ್ತ್ರ ಸುಸಜ್ಜಿತ ಉಗ್ರರು ಭಾರತದ ಸಂಸತ್ ಭವನದ ಆವರಣಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದರು. ಐವರು ದಾಳಿಕೋರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರು. ದಾಳಿಯಲ್ಲಿ 9 ಜನ ಮೃತಪಟ್ಟರು, ಹಲವಾರು ಜನ ಗಾಯಗೊಂಡರು. ತನಿಖೆಯಲ್ಲಿ ಅಫ್ಜಲ್ ಗುರು ಸಮೇತ ಹಲವರನ್ನು ಬಂಧಿಸಲಾಯಿತು.

ದೆಹಲಿ ವಿಶೇಷ ನ್ಯಾಯಾಲಯ ಅವರಿಗೆ ಮರಣ ದಂಡನೆ ವಿಧಿಸಿತು. ಸುಪ್ರೀಂ ಕೋರ್ಟ್ 2005ರಲ್ಲಿ ಅವರ ಅಪೀಲನ್ನು ತಿರಸ್ಕರಿಸಿ ಶಿಕ್ಷೆಯನ್ನು ಎತ್ತಿ ಹಿಡಿಯಿತು. 2013ರ ಫೆ.9ರಂದು ಅಫ್ಜಲ್‌ನನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅಂತಹ ಅಫ್ಜಲ್ ಗುರು ಪರ ಘೋಷಣೆ ಕೂಗಿದ ಆರೋಪದಲ್ಲಿ ಖಾಲಿದ್‌ಮೇಲೆ ಪ್ರಕರಣ ದಾಖಲಿಸಲಾಯಿತು.

ಇಂದು ಅಂತಹ ಖಾಲಿದ್‌ನನ್ನು ಕೇವಲ ಬೆಂಬಲಿಸುವುದಷ್ಟೇ ಅಲ್ಲ, ಆತನನ್ನು ರಾಷ್ಟ್ರೀಯವಾದಿ ಎಂದು ಹರಿಪ್ರಸಾದರು ಘೋಷಿಸಿದರು. ಸಂಸತ್ ದಾಳಿ ನಡೆದಾಗ ದೆಹಲಿಯಲ್ಲಿ ಕಾಂಗ್ರೆಸ್‌ನ ಶೀಲಾ ದೀಕ್ಷಿತರ ಸರ್ಕಾರ ಆಡಳಿತ ನಡೆಸುತ್ತಿತ್ತು. ಕಾಂಗ್ರೆಸ್ ಸರ್ಕಾರದ ಪೊಲೀಸರೇ ಈ ಪ್ರಕರಣದಲ್ಲಿ ಎಫ್ಐಆರ್‌ನ್ನು ದಾಖಲಿಸಿದ್ದರು. ‌

ಹರಿಪ್ರಸಾದರ ಸರ್ಕಾರವೇ ದಾಖಲಿಸಿದ ಪ್ರಕರಣದಲ್ಲಿ ಆರೋಪಿಯಾದ ಮತ್ತು ನಂತರ ಸುಪ್ರೀಂ ಕೋರ್ಟಿನಲ್ಲಿ ಸಹ ದೋಷಿಯೆಂದು ಪರಿಗಣಿಸಿದ ಅಫ್ಜಲ್ ಗುರುವನ್ನು ಬೆಂಬಲಿಸಿದ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಯಾವ ಬಾಯಲ್ಲಿ ಹರಿಪ್ರಸಾದ್ ಉಸುರಿದರು? ದೊಡ್ಡ ನೋವು ಏನೆಂದರೆ, 19 ವರ್ಷಗಳ ಕಾಲ ನಾಲ್ಕು ಅವಧಿಗೆ ಅದೇ ಸಂಸತ್ತಿನಲ್ಲಿ ಇದೇ ಹರಿಪ್ರಸಾದ ಠಿಕಾಣಿ ಹೂಡಿದ್ದರು. ಸಂಸತ್ ಅವರಿಗೆ ಕರ್ಮಭೂಮಿಯಾಗಿತ್ತು.

ಹರಿಪ್ರಸಾದ್ ತಮ್ಮ ಜೀವನದ ಹೆಚ್ಚಿನ ಅವಧಿ ಕಳೆದ ಪ್ರದೇಶಕ್ಕೆ ದಾಳಿ ಮಾಡಿ ನಾಶ ಮಾಡಲು ಸಂಚು ಹೂಡಿದ ಅಫ್ಜಲ್ ಗುರು ಸಮರ್ಥಕ ಉಮರ್ ಖಾಲಿದ್‌ನನ್ನು ಬೆಂಬಲಿಸುವುದೇ? ಮುಸ್ಲಿಂ ತುಷ್ಟೀಕರಣ ಈ ಪರಿ ನಡೆಯುತ್ತಿದ್ದರೆ ಯಾವ ಕೆಲಸ ಮಾಡಿದರೂ ನಡೆಯುತ್ತದೆ ಮತ್ತು ಮುಂದೊಂದು ದಿನ ಹರಿಪ್ರಸಾದರಂತಹ ವ್ಯಕ್ತಿ ಸಮಾಜದಲ್ಲಿ ನಮ್ಮನ್ನು ಬೆಂಬಲಿಸಲು ಇರುತ್ತಾರೆ ಎಂಬ ಕೆಟ್ಟ ಸಂದೇಶ ಹೋಗಲಿಕ್ಕಿಲ್ಲವೇ? ಹರಿಪ್ರಸಾದರ ಹೇಳಿಕೆಯ ಹಿನ್ನಲೆಯಲ್ಲಿ ರಾಜಕೀಯ ಪಕ್ಷವೊಂದು ದೇಶದ ಭದ್ರತೆ, ಅಪರಾಧಿಕ ಪ್ರಕರಣಗಳಲ್ಲಿ ಯಾವ ರೀತಿ ವ್ಯವಹರಿಸಬೇಕು ಎಂಬುದರ ಬಗ್ಗೆ ಸಮಾಜದಲ್ಲಿ ಗಂಭೀರ ಚರ್ಚೆಯ ಅವಶ್ಯಕತೆಯಿದೆ ಮತ್ತು ಇದನ್ನು ಬಹಿರಂಗ ವಾಗಿ ಖಂಡಿಸುವ ಅವಶ್ಯಕತೆ ಇದೆ.

ಹರಿಪ್ರಸಾದರ ಹೇಳಿಕೆ ಕೇವಲ ಹೇಳಿಕೆಯಾಗಿ ಉಳಿದಿಲ್ಲ. ಬದಲಿಗೆ ಸಾರ್ವಜನಿಕ ಶಾಂತಿಗೆ ಧಕ್ಕೆ ತಂದಿದೆ. ನ್ಯಾಯಾಂಗ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ಪ್ರಯತ್ನವಾಗಿದೆ ಮತ್ತು ಸಂವಿಧಾನ ವಿರೋಧಿಯಾಗಿದೆ. ಹರಿಪ್ರಸಾದ್ ತಮ್ಮ ಮಾತನ್ನು ಹಿಂಪಡೆದು ಕ್ಷಮೆ ಯಾಚಿಸಬೇಕಿದೆ. ರಾಷ್ಟ್ರ ಮತ್ತು ಕ್ರಿಮಿನಲ್ ಚಟುವಟಿಕೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದನ್ನು ಇನ್ನಾದರೂ ಬಿಡಬೇಕು.