ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ದೇವಸ್ಥಾನಗಳಲ್ಲಿ ಪಾದುಕೆ ಕಳ್ಳತನ ಆಗೋದು ದೊಡ್ಡ ವಿಷ್ಯ ಏನಲ್ಲ

ಇದು ವಿನೋದ್ ಪ್ರಭಾಕರ್ ಅವರ ಕೆರಿಯರ್‌ನ ಮೈಲಿಗಲ್ಲು ಎನಿಸಿಕೊಳ್ಳುವ ಚಿತ್ರ ಎಂದರೆ ತಪ್ಪಿಲ್ಲ. ಜತೆಗೆ ಇದು ವಿನೋದ್ ಪ್ರಭಾಕರ್ ಅವರ ದೊಡ್ಡ ಬಜೆಟ್ಟಿನ ಚಿತ್ರ ಕೂಡ ಹೌದು. ಒಟ್ಟಿನಲ್ಲಿ ಕನ್ನಡ ಪ್ರೇಕ್ಷಕ ಮಹಾಪ್ರಭುಗಳು ಒಮ್ಮೆ ಬಿಸಿಲು, ಒಮ್ಮೆ ಮಳೆ ಇರುವ ಈ ಸೀಸನ್‌ನಲ್ಲಿ ಮೋಡ ಕವಿದ ವಾತಾ ವರಣ ನೋಡಿ, ಅದರ ಜತೆಗೆ ಬಲರಾಮನ ದಿನಗಳನ್ನೂ ನೋಡಿ ಎಂಜಾಯ್ ಮಾಡ್ತಾ ಇರೋದಂತೂ ಸತ್ಯ

ತುಂಟರಗಾಳಿ

ಸಿನಿಗನ್ನಡ

ಕನ್ನಡದಲ್ಲಿ ಈಗ ಎರಡು ಸಿನಿಮಾಗಳು ಬಿಡುಗಡೆ ಆಗಿ ಸದ್ದು ಮಾಡುತ್ತಿವೆ. ಒಂದು ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಅನ್ನೋ ತಣ್ಣನೆಯ ಚಿತ್ರ. ಇನ್ನೊಂದು ರೌಡಿಸಂನ ಕುಲುಮೆಯಲ್ಲಿ ಧಗಧಗಿಸಿದರೂ ತಣ್ಣನೆಯ ಕ್ರೌರ್ಯ ತೋರಿಸುವ ಕೆ.ಎಂ.ಚೈತನ್ಯ ನಿರ್ದೇಶನದ ಬಲರಾಮನ ದಿನಗಳು ಚಿತ್ರ. ತಮ್ಮ ಶಿಷ್ಯಂದಿರನ್ನೆಲ್ಲಾ ಹೀರೋ ಆಗಿಸುವ ಪಣ ತೊಟ್ಟಿರುವ ಸಿಂಪಲ್ ಸುನಿ, ಮೋಡ ಕವಿದ ವಾತಾವರಣ ಚಿತ್ರದಲ್ಲಿ ತಮ್ಮ ಶಿಷ್ಯ ಶೀಲಂ ಅವರನ್ನು ನಾಯಕ ರನ್ನಾಗಿಸಿದ್ದಾರೆ.

vinod-prabhakar-balaramana-dinagalu ok

ಅಂದ ಹಾಗೆ ಈ ಚಿತ್ರ ಪ್ರದರ್ಶನ ಆಗುತ್ತಿರುವ ಚಿತ್ರ ಮಂದಿರಗಳಲ್ಲಿ ಮೊದಲೇ ಚಳಿ ಇರೋ ದ್ರಿಂದ ಎಸಿ ಆನ್ ಮಾಡಿರ್ತಾರೋ ಇಲ್ಲವೋ ಅನ್ನೋ ಮಾಹಿತಿ ಇಂಟರೆಸ್ಟಿಂಗ್. ಆದರೆ, ಪ್ರೇಕ್ಷಕರ ಕೊರತೆ ಯಿಂದ ಚಿತ್ರಮಂದಿರದಲ್ಲಿ ಮೋಡಕವಿದ ವಾತಾವರಣ ಸೃಷ್ಟಿ ಆಗಿರುವ ಸಾಧ್ಯತೆಗಳು ಕಮ್ಮಿ. ಯಾಕೆಂದರೆ ಈ ಚಿತ್ರಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇನ್ನು ತಮ್ಮ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಬಲರಾಮನ ದಿನಗಳನ್ನು ಮಾಡಿದ್ದಾರೆ ಚೈತನ್ಯ.

ಇದು ವಿನೋದ್ ಪ್ರಭಾಕರ್ ಅವರ ಕೆರಿಯರ್‌ನ ಮೈಲಿಗಲ್ಲು ಎನಿಸಿಕೊಳ್ಳುವ ಚಿತ್ರ ಎಂದರೆ ತಪ್ಪಿಲ್ಲ. ಜತೆಗೆ ಇದು ವಿನೋದ್ ಪ್ರಭಾಕರ್ ಅವರ ದೊಡ್ಡ ಬಜೆಟ್ಟಿನ ಚಿತ್ರ ಕೂಡ ಹೌದು. ಒಟ್ಟಿ ನಲ್ಲಿ ಕನ್ನಡ ಪ್ರೇಕ್ಷಕ ಮಹಾಪ್ರಭುಗಳು ಒಮ್ಮೆ ಬಿಸಿಲು, ಒಮ್ಮೆ ಮಳೆ ಇರುವ ಈ ಸೀಸನ್‌ನಲ್ಲಿ ಮೋಡ ಕವಿದ ವಾತಾವರಣ ನೋಡಿ, ಅದರ ಜತೆಗೆ ಬಲರಾಮನ ದಿನಗಳನ್ನೂ ನೋಡಿ ಎಂಜಾಯ್ ಮಾಡ್ತಾ ಇರೋದಂತೂ ಸತ್ಯ.

ಇದನ್ನೂ ಓದಿ: Hari Paraak Column: ಅರ್ಜುನನ ವಿರುದ್ಧಾರ್ಥಕ ಪದ: ಅ'ಪಾರ್ಥ'

ಲೂಸ್‌ ಟಾಕ್‌ -ಬಿಜೆಪಿ ವಕ್ತಾರ

ಏನ್ರೀ, ರಾಮ ಮಂದಿರದಲ್ಲಿ ಹಣ, ಬೆಳ್ಳಿ, ಬಂಗಾರ ಕದಿಯುವ ಕೆಲಸ ಮಾಡಿದ್ದಾರಲ್ಲ. ಏನ್

ಸಮಾಚಾರ?

- ಅಯ್ಯೋ, ಮಾಡ್ಲಿ ಬಿಡಿ, ಮೋದಿಯವರು ಬಂಗಾರ ಖರೀದಿ ಮಾಡಬೇಡಿ ಅಂತಷ್ಟೇ ಹೇಳಿರೋದು, ಕದೀಬೇಡಿ ಅಂತ ಹೇಳಿಲ್ಲವಲ್ಲ.

ಅದೂ ಸರಿನೇ, ಆದ್ರೂ ರಾಮಮಂದಿರದಲ್ಲಿ ಹಿಂಗೆಲ್ಲಾ...

- ರೀ, ಎಲ್ಲ ದೇವರು ಒಂದೇ ಬಿಡಿ. ರಾಮನ ದೇಗುಲದಲ್ಲಿ ಕೃಷ್ಣನ ಲೆಕ್ಕ ತೋರಿಸಿದ್ದಾರೆ ಅಷ್ಟೇ

ಹೋಗತ್ಲಾಗೆ, ಅಲ್ರೀ ರಾಮನ ಪಾದುಕೆಗಳನ್ನೂ ಕದ್ದಿದ್ದಾರಂತಲ್ಲ?

- ಅಯ್ಯೋ, ದೇವಸ್ಥಾನಗಳಲ್ಲಿ ಚಪ್ಪಲಿ ಕಳ್ಳತನ ಆಗೋದು ದೊಡ್ಡ ವಿಷಯ ಏನಲ್ಲ ಬಿಡಿ.

ಮತ್ತೆ, ಬೆಳ್ಳಿ ಇಟ್ಟಿಗೆ ಕೊಟ್ಟವರಿಗೆ ರಸೀದಿ ಕೊಟ್ಟಿಲ್ಲವಂತೆ?

- ರೀ, ರಶೀದ್‌ಗೂ ರಾಮಮಂದಿರಕ್ಕೂ ಏನ್ರೀ ಸಂಬಂಧ?

ಅಯ್ಯೋ, ನಿಮಗೆ ಯಾವಾಗ್ಲೂ ಮುಸ್ಲಿಮಂರದ್ದೇ ಧ್ಯಾನ. ರಶೀದ್ ಅಲ್ಲ ರಸೀದಿ, ಬೆಳ್ಳಿ ಇಟ್ಟಿಗೆ ಕೊಟ್ಟಿದ್ದಕ್ಕೆ..

- ಇಟ್ಟಿಗೆ ಕೊಟ್ಟವರು ಯಾರೂ ಮಾತಾಡ್ತಾ ಇಲ್ಲ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋರು ಇಟ್ಟಿಗೆ ವಿಷಯ ಮಾತಾಡ್ತಾ ಇದ್ದಾರೆ ಅಷ್ಟೇ.

ಆದ್ರೂ, ಈ ಇಟ್ಟಿಗೆ ವಿಷ್ಯ ಏನಿದೆ...

- ರೀ ಸುಮ್ನೆ ಏನೇನೋ ಮಾತಾಡಿ ಇಟ್ಟಿಗೆ, ಇಟ್ಟಿಗೆ ಅಂತ ನಮ್ಮನ್ನ ಇಕ್ಕಟ್ಟಿಗೆ ಸಿಲುಕಿಸಬೇಡಿ, ಸಂದರ್ಶನ ಮಾಡಿದ್ದು ಸಾಕು ಹೋಗಿ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಒಂದು ದೊಡ್ಡ ಮಿಶನ್ ಮೇಲೆ ಹಡಗಿನಲ್ಲಿ ಹೊರಟಿದ್ದ. ಅವನು ಒಂದು ದೊಡ್ಡ ಟೀಮ್‌ಗೆ ನಾಯಕನಾಗಿದ್ದ. ಆ ಹಡಗಿನಲ್ಲಿ ಒಂದು ಬೆಲೆ ಬಾಳುವ ವಸ್ತುವನ್ನು ಸುರಕ್ಷಿತವಾಗಿ ಸಾಗಿಸಬೇಕಿತ್ತು. ಆದರೆ, ಅವರು ಹೋಗುತ್ತಿದ್ದ ಸಮುದ್ರದಲ್ಲಿ ದರೋಡೆಕೋರರ ಕಾಟ ತುಂಬಾ ಇತ್ತು. ಖೇಮುಗೆ ಈ ಮೊದಲು ದರೋಡೆಕೋರರನ್ನು ಎದುರಿಸಿ ಅನುಭವ ಇರಲಿಲ್ಲ. ಆದರೂ ಆ ವಸ್ತುವನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಜವಾಬ್ದಾರಿಯನ್ನು ಖೇಮುಗೆ ವಹಿಸಲಾಗಿತ್ತು. ಸರಿ, ಆಗಿದ್ದಾಗ್ಲಿ ಅಂತ ಧೈರ್ಯ ಮಾಡಿ ಖೇಮು ತನ್ನ ತಂಡದೊಂದಿಗೆ ಹೊರಟಿದ್ದ. ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ದೂರದಲ್ಲಿ ದರೋಡೆಕೋರರು ಬರ್ತಾ ಇದ್ದಾರಾ ಅಂತ ಗಮನಿಸುತ್ತಿದ್ದ ಸಹಾಯಕ ಬಂದು ಖೇಮುಗೆ ಹೇಳಿದ, ಸರ್, ದೂರದಲ್ಲಿ ಒಂದು ದರೋಡೆಕೋರರ ಟೀಮ್ ಗನ್ ತಗೊಂಡು ಬರ್ತಾ ಇದೆ ಏನ್ ಮಾಡೋಣ ಅಂದ. ಖೇಮುಗೆ ಸಿಕ್ಕಾಪಟ್ಟೆ ಭಯ ಶುರುವಾಯಿತು. ಆದ್ರೆ ಅದನ್ನ ತೋರಿಸಿಕೊಳ್ಳದೆ, ನಮ್ಮ ಟೀಮ್‌ಗೆ ರೆಡಿ ಆಗಿರೋಕೆ ಹೇಳು, ಜತೆಗೆ ಒಳಗೆ ಹೋಗಿ ನನ್ನ ರೆಡ್ ಕಲರ್ ಶರ್ಟ್ ತಗೊಂಡ್ ಬಾ ಅಂದ. ಖೇಮು ಭಯವನ್ನು ನೋಡಿ ಒಳಗೊಳಗೇ ನಗುತ್ತಿದ್ದ ಸಹಾಯಕ, ರೆಡ್ ಕಲರ್ ಶರ್ಟ್ ಯಾಕೆ ಸರ್ ಅಂತ ಕೇಳಿದ್ದಕ್ಕೆ, ನನಗೇನಾದರೂ ಗುಂಡು ಬಿದ್ದು ರಕ್ತ ಬಂದ್ರೆ ಅದು ನಮ್ಮವರಿಗೆ ಕಾಣಬಾರದು. ಅವರು ನನ್ನನ್ನು ಆ ಸ್ಥಿತಿಯಲ್ಲಿ ನೋಡಿದ್ರೆ ನಮ್ಮ ನಾಯಕನಿಗೆ ಹಿಂಗಾಯ್ತಲ್ಲ ಅಂತ ಹೆದರಿಕೊಂಡುಬಿಡ್ತಾರೆ, ಅದಕ್ಕೆ, ಅಂದ ಖೇಮು. ಸ್ವಲ್ಪ ಹೊತ್ತಿನಲ್ಲಿ ಆ ದರೋಡೆಕೋರರ ಟೀಮ್ ಬಂತು. ಖೇಮು ಕಡೆಯವರು ಅವರನ್ನು ಹೊಡೆದು ಉರುಳಿಸಿದರು. ಮತ್ತೆ, ಸ್ವಲ್ಪ ಹೊತ್ತಾದ ಮೇಲೆ ದುರ್ಬೀನು ಹಾಕಿಕೊಂಡು ನೋಡುತ್ತಿದ್ದ ಸಹಾಯಕ ಖೇಮು ಬಳಿ ಬಂದು ಕೇಳಿದ ‘ಸರ್, ಈ ಸಲ 5 ಹಡಗು ಗಳಲ್ಲಿ ದರೋಡೆಕೋರರು ಬರ್ತಾ ಇದ್ದಾರೆ. ಯಾವುದಕ್ಕೂ ರೆಡ್ ಕಲರ್ ಶರ್ಟ್ ಜತೆಗೆ, ನಿಮ್ಮ ಹಳದಿ ಕಲರ್ ಪ್ಯಾಂಟೂ ತರ್ಲಾ?

ಲೈನ್‌ ಮ್ಯಾನ್

ಗಾಡಿ ಓಡಿಸುವಾಗ ಅತಿ ಎಚ್ಚರಿಕೆಯಿಂದ ಇರೋರು ಏನು ಮಾಡ್ತಾರೆ?

- ರಸ್ತೆಯಲ್ಲಿ ಹಂಪ್ ಅಡ್ಡ‌ ಬಂದ್ರೂ ಹಾರ್ನ್ ಮಾಡ್ತಾರೆ

ಕುಡುಕರ ನಡುವೆ ಆಗೋ ಜಗಳ

- ಪೀಪಾಯಿ ದಂಗೆ

ರವಿಚಂದ್ರನ್ ಸಿನಿಮಾದ ಪ್ರೋಮೋ

- ಪ್ರೋಮೋಲೋಕ

ಹುಡುಗಿ ಕೈ ಕೊಟ್ಟರೆ ಅದು

- ‘ಮಾಯ’ದ ಗಾಯ

ಇತ್ತೀಚಿಗೆ ಸಾವಿನ ಸುದ್ದಿಗಳಿಗೆ ತುಂಬಾ ಪ್ರಚಾರ ಸಿಕ್ತಾ ಇದೆ

- ಇದನ್ನೇನಾ ‘ಮೌತ್’ ಪಬ್ಲಿಸಿಟಿ ಅನ್ನೋದು

ಬದುಕಿನ ಸತ್ಯ

- ಬದುಕಿರುವವರೆಗೂ ವಿಐಪಿ ಸತ್ತ ಮೇಲೆ ಆರ್‌ಐಪಿ

ಆತ್ಮಹತ್ಯೆಯ ಸತ್ಯ

- ಬದುಕಲು ನೂರಾರು ದಾರಿಗಳಿವೆ. ಆದರೆ ಕೆಲವರು ಯಾಕೋ ಡೆಡ್ ಎಂಡನ್ನೇ ಹುಡುಕಿಕೊಂಡು ಹೋಗುತ್ತಾರೆ

ಹೋಟೆಲ್ ಸತ್ಯ

- ಮಸಾಲೆ ದೋಸೆನೇ ಚೆನ್ನಾಗಿಲ್ಲದ ಹೋಟೆಲ್‌ನಲ್ಲಿ ಓಪನ್ ದೋಸೆ, ಈರುಳ್ಳಿ ದೋಸೆ ಆರ್ಡರ್

ಮಾಡಬಾರದು

ಎಟಿಎಂಗೆ ವಿರುದ್ಧಾರ್ಥಕ ಪದ

- ಹೆಂಡ್ತಿ

ಮುಖದ ಮೇಲೆ ಹೊಡೆದಂಥ ಸತ್ಯ

ಈ ತ್ರಿಪುರಾ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಜಪಾನ್, ಚೀನಾದ ಗಂಡ ಹೆಂಡತಿಯರು ಅಣ್ಣ ತಂಗಿಯರಂತೇ ಕಾಣುತ್ತಾರೆ. ಇದರಿಂದ ಆಗೋ ಲಾಭ ಅಂದ್ರೆ ಹುಟ್ಟಿದ ಮಗು ಯಾರ ಥರ ಇದೆ ಅನ್ನೋ ವಿಷಯದಲ್ಲಿ ವಾದ ವಿವಾದ ಆಗಲ್ಲ.

ಹರಿ ಪರಾಕ್‌

View all posts by this author