ಒಂದೊಳ್ಳೆ ಮಾತು
ಜಂಬೂದ್ವೀಪದಲ್ಲಿರುವ ಒಂಬತ್ತು ವರ್ಷಗಳಲ್ಲಿ (ವಿಭಾಗಗಳಲ್ಲಿ) ‘ಭರತವರ್ಷ’ ಅತ್ಯಂತ ಪವಿತ್ರವಾದದ್ದು ಎಂದು ಪುರಾಣಗಳು ಬಣ್ಣಿಸುತ್ತವೆ. ವಿಷ್ಣು ಪುರಾಣದ ಎರಡನೇ ಅಧ್ಯಾಯದ ಪ್ರಕಾರ, ಉಳಿದ ಎಂಟು ವರ್ಷಗಳು ಸ್ವರ್ಗಸಮಾನವಾದ ‘ಭೋಗಭೂಮಿ’ಗಳಾಗಿದ್ದು, ಅಲ್ಲಿನ ಜನರು ಕೇವಲ ಸುಖ-ಭೋಗಗಳನ್ನು ಅನುಭವಿಸುತ್ತಾರೆ. ಆದರೆ, ಭರತವರ್ಷ ಮಾತ್ರ ‘ಕರ್ಮ ಭೂಮಿ’. ತಪಸ್ಸು ಇಲ್ಲಿ ಮಾಡುವ ಪ್ರತಿಯೊಂದು ಧರ್ಮ, ಕರ್ಮ, ಜಪ, ಮತ್ತು ತ್ಯಾಗಗಳು ಜೀವಿಗೆ ಮೋಕ್ಷವನ್ನು ನೀಡುತ್ತವೆ.
ದೇವತೆಗಳು ಸಹ ಮಾನವ ಜನ್ಮ ತಳೆದು ಮುಕ್ತಿ ಪಡೆಯಲು ಭರತವರ್ಷದಲ್ಲಿ ಜನಿಸಲು ಬಯಸು ತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ.
ಸಂಕಲ್ಪ ಮಂತ್ರದ ನಂಟು: ಇಂದಿಗೂ ಪ್ರತಿಯೊಬ್ಬ ಭಾರತೀಯನು ಮನೆಗಳಲ್ಲಿ ಪೂಜೆ, ಹವನ ಅಥವಾ ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಹೇಳುವ ‘ಸಂಕಲ್ಪ ಮಂತ್ರ’ದಲ್ಲಿ ಜಂಬೂದ್ವೀಪದ ಭೌಗೋಳಿಕ ಉಲ್ಲೇಖ ಬರುತ್ತದೆ: ‘ಜಂಬೂದ್ವೀಪೇ ಭರತವರ್ಷೇ ಭರತಖಂಡೇ ಮೇರೋಃ ದಕ್ಷಿಣೇ ಪಾರ್ಶ್ವೇ...’ ಇದರ ಅರ್ಥ ಹೀಗಿದೆ.
ಜಂಬೂದ್ವೀಪೇ- ವಿಶಾಲವಾದ ಜಂಬೂದ್ವೀಪದಲ್ಲಿ, ಭರತವರ್ಷೇ- ಅದರ ವಿಭಾಗವಾದ ಭರತವರ್ಷದಲ್ಲಿ, ಭರತ ಖಂಡೇ- ಭರತರಾಜ ಆಳಿದ ಈ ಪವಿತ್ರ ಭೂಖಂಡದಲ್ಲಿ, ಮೇರೋಃ ದಕ್ಷಿಣೇ ಪಾರ್ಶ್ವೇ- ಮಹಾಮೇರು ಪರ್ವತದ ದಕ್ಷಿಣ ಭಾಗದಲ್ಲಿ ನಾವು ಈ ಪೂಜೆಯನ್ನು ಮಾಡು ತ್ತಿದ್ದೇವೆ. ಈ ಒಂದು ಮಂತ್ರವು ನಮ್ಮ ಪ್ರಾಚೀನ ಖಗೋಳ ಮತ್ತು ಭೌಗೋಳಿಕ ಜ್ಞಾನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಇದನ್ನೂ ಓದಿ: Roopa Gururaj Column: ಜಂಬೂದ್ವೀಪದ ಆಂತರಿಕ ದರ್ಶನ: ಪಿಂಡಾಂಡದಿಂದ ಬ್ರಹ್ಮಾಂಡದತ್ತ
ನದಿಗಳು ಮತ್ತು ಪವಿತ್ರ ಪರ್ವತಗಳು: ವಿಷ್ಣು ಪುರಾಣದ ವಿವರಣೆಯಂತೆ, ಭಾರತವರ್ಷದಲ್ಲಿ ಹರಿಯುವ ಪವಿತ್ರ ನದಿಗಳು ಮತ್ತು ಪರ್ವತಗಳು ಈ ಭೂಮಿಗೆ ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತವೆ.
ಸಪ್ತ ಕುಲಪರ್ವತಗಳು: ಮಹೇಂದ್ರ, ಮಲಯ, ಸಹ್ಯಾದ್ರಿ, ಶುಕ್ತಿಮಾನ್, ಋಕ್ಷವಂತ, ವಿಂಧ್ಯ ಮತ್ತು ಪಾರಿಯಾತ್ರ.
ಪುಣ್ಯ ನದಿಗಳು: ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಗೋದಾವರಿ, ಕಾವೇರಿ ಮತ್ತು ಸಿಂಧೂ ನದಿಗಳು ಈ ಭೂಮಿಯನ್ನು ಸಮೃದ್ಧಗೊಳಿಸುತ್ತವೆ. ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮತ್ತು ಅವುಗಳ ತೀರದಲ್ಲಿ ಸತ್ಕರ್ಮಗಳನ್ನು ಮಾಡುವುದರಿಂದ ಪಾಪಗಳು ನಾಶವಾಗಿ ಆಧ್ಯಾತ್ಮಿಕ ಉನ್ನತಿ ಸಿಗುತ್ತದೆ ಎಂಬುದು ನಂಬಿಕೆ.
ಯುಗ ಧರ್ಮಗಳು ಮತ್ತು ಕಾಲ ಚಕ್ರ: ಜಂಬೂದ್ವೀಪದ ಇತರ ವಿಭಾಗಗಳಲ್ಲಿ ಕಾಲದ ಪ್ರಭಾವ ಅಥವಾ ವಯಸ್ಸಾಗುವಿಕೆಯ ಬಾಧೆ ಇರುವುದಿಲ್ಲ. ಆದರೆ ಭರತವರ್ಷ ದಲ್ಲಿ ಮಾತ್ರ ಕಾಲಚಕ್ರ (ಚತುರ್ಯುಗಗಳು- ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಯುಗಗಳು) ನಿರಂತರವಾಗಿ ಚಲಿಸುತ್ತದೆ. ಪ್ರತಿಯೊಂದು ಯುಗದಲ್ಲೂ ಧರ್ಮದ ಸ್ವರೂಪ ಬದಲಾಗುತ್ತಾ ಸಾಗುತ್ತದೆ: ಕೃತಯುಗದಲ್ಲಿ ಅಡಗಿದೆ.
ಈ ಪವಿತ್ರ ಭೂಮಿಯ ಭಾಗವಾಗಿ ನಾವಿರುವುದು ಸೌಭಾಗ್ಯ. ಇಂತಹ ನಮ್ಮ ಭೂಮಿಯ ಮೇಲಿರುವ ನಾವು ಒಳ್ಳೆಯ ಜ್ಞಾನಾರ್ಜನೆಯಿಂದ, ಸತ್ಸಂಸ್ಕಾರವನ್ನು ಬೆಳೆಸಿಕೊಂಡು ಒಳಿತಿನ ದಾರಿಯಲ್ಲಿ ನಡೆದಾಗ ನಮ್ಮ ಜನ್ಮಕ್ಕೂ ಒಂದು ಅರ್ಥ. ಇಂತಹ ವಿಚಾರಗಳನ್ನು ಆಸಕ್ತಿಯಿಂದ ತಿಳಿದುಕೊಳ್ಳುವುದು ಅದನ್ನು ನಮ್ಮ ಮನೆಯ ಮಕ್ಕಳಿಗೆ ತಿಳಿ ಹೇಳುವುದು, ನಮ್ಮ ತಪಸ್ಸಿಗೆ ಪ್ರಾಧಾನ್ಯತೆ. ತ್ರೇತಾಯುಗದಲ್ಲಿ eನ ಮತ್ತು ಯಜ್ಞಗಳಿಗೆ ಮಹತ್ವ. ದ್ವಾಪರ ಯುಗದಲ್ಲಿ ದೇವತಾ ಪೂಜೆ ಮತ್ತು ಆರಾಧನೆ. ಕಲಿಯುಗದಲ್ಲಿ ಕೇವಲ ಹರಿನಾಮ ಸ್ಮರಣೆ ಮತ್ತು ದಾನದಿಂದಲೇ ಮುಕ್ತಿ ಸಾಧ್ಯ.
ಸನಾತನ ಪರಂಪರೆಯ ಹೆಮ್ಮೆ: ಜಂಬೂದ್ವೀಪದ ಪರಿಕಲ್ಪನೆಯು ಕೇವಲ ಒಂದು ಕಲ್ಪನೆಯಲ್ಲ. ಅದು ನಮ್ಮ ಪೂರ್ವಜರು ಬ್ರಹ್ಮಾಂಡದ ವಿಶಾಲತೆಯನ್ನು ಮತ್ತು ಅದರಲ್ಲಿ ಈ ಜಗತ್ತಿನ ಸ್ಥಾನವನ್ನು ಗ್ರಹಿಸಿದ ರೀತಿ. ಪ್ರಕೃತಿ, ಪರ್ವತ, ನದಿ ಮತ್ತು ವೃಕ್ಷಗಳನ್ನು ಕರ್ತವ್ಯ. ಮನುಷ್ಯ ಜನ್ಮ ಎಷ್ಟು ಅಮೂಲ್ಯವಾದದ್ದು ಎಂದು ಅರಿತು ಜವಾಬ್ದಾರಿಯಿಂದ ಬದುಕೋಣ. ಹತೋಟಿ ಇಲ್ಲದ ಮನಸ್ಸನ್ನು ಹರಿಯಬಿಟ್ಟು ಆ ಕ್ಷಣಕ್ಕೆ ಏನು ಸುಖ ಕೊಡುತ್ತದೋ ಅದರಂತೆ ನಡೆದುಕೊಳ್ಳುವುದು ತುಂಬಾ ಸುಲಭ. ಆದರೆ ಮನಸ್ಸನ್ನು ದೇಹ ವನ್ನು ಒಂದು ಶಿಸ್ತಿಗೆ ಒಳಪಡಿಸಿ, ದಿನವೂ ಅದರಂತೆ ಬದುಕುವ ಒಂದು ಸಂಸ್ಕಾರವನ್ನು ಬೆಳೆಸಿಕೊಳ್ಳುವ ಪರಿಶ್ರಮ ಪಟ್ಟಾಗ ನಿಜವಾಗಿಯೂ ಔನತ್ಯಕ್ಕೆ ಏರುತ್ತೇವೆ. ಇಂತಹ ಒಳ್ಳೆಯ ಬದುಕು ನಮ್ಮದಾಗಲಿ. ಧರ್ಮೋ ರಕ್ಷತಿ ರಕ್ಷಿತಃ.