ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕನ್ನಡ ಸಾಹಿತ್ಯ: ಶ್ರೀಸಾಮಾನ್ಯ ಮತ್ತು ಗುಂಪುಗಾರಿಕೆ

ತಾವು ಬರೆದ ಪುಸ್ತಕಗಳನ್ನು ಸಾರ್ವಜನಿಕ ಬಸ್ಸಿನಲ್ಲಿ ಅತಿ ಕಡಿಮೆ ಬೆಲೆಗೆ ಜನರಿಗೆ ನೀಡು ತ್ತಿದ್ದರು. ಕಾಡಿಗೆ ತೆರಳಿ ಗಿರಿಜನರೊಂದಿಗೆ ಕಾಲ ಕಳೆಯುತ್ತಿದ್ದರು. ನಿವೃತ್ತಿಯ ನಂತರವೂ ಹತ್ತಾರು ರೈತರನ್ನು ಭೇಟಿ ಮಾಡುವಿಕೆ, ಸಂತೆಗೆ ಹೋಗಿ ಸಂತನಂತೆ ಸುತ್ತಾಡಿ ಮತ್ತಷ್ಟು ಕಲಿಯುವಿಕೆಯಲ್ಲಿ ತೊಡಗುತ್ತಿದ್ದರು.

ಡಾ.ರವಿಶಂಕರ್ ಎ.ಕೆ., ಬೆಂಗಳೂರು

ಖ್ಯಾತ ಸಾಹಿತಿ ಬಿ.ಎಂ.ಶ್ರೀಕಂಠಯ್ಯ ಅವರು 1911ರಲ್ಲಿ, ‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ವಿಷಯದ ಕುರಿತು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಉಪನ್ಯಾಸ ನೀಡಿ ದರು. ಅದರ ಪ್ರತಿ ಸಾಲೂ ಇಂದಿಗೂ ಪ್ರಸ್ತುತವಾಗಿದೆ. ಏಕೆಂದರೆ, “ಸಂಸ್ಕೃತ, ಇಂಗ್ಲಿಷ್ ಮತ್ತು ದೇಶಭಾಷೆಗಳನ್ನು, ಅವುಗಳ ಸಾಹಿತ್ಯವನ್ನು ಕಲಿಸುವ ಜವಾಬ್ದಾರಿಯು ವಿಶ್ವವಿದ್ಯಾ ಲಯಗಳ ಪಂಡಿತರ ಮೇಲಿದೆ; ಇವನ್ನು ಉಳಿಸಿಕೊಂಡು ಹೋಗುವ ತೇಜಸ್ಸು ಜನರಲ್ಲಿದೆ" ಎಂದು ತಿಳಿಸಿದ್ದ ಬಿಎಂಶ್ರೀ, ಈ ನಿಟ್ಟಿನಲ್ಲಿ ಸರಿಯಾದ ಶ್ರದ್ಧೆ ಕಾಣದಿರುವುದನ್ನು ಗುರುತಿಸಿದ್ದರು.

ಈ ವಿಚಾರವನ್ನು ವರ್ತಮಾನಕ್ಕೆ ಅನ್ವಯಿಸಿ ಚರ್ಚಿಸುತ್ತಿದ್ದೇನೆ. ಈ ಭಾಷೆಗಳ ಪರಿಧಿ ಹಿಡಿದು ನೂರಾರು ಗುಂಪುಗಳಾಗಿ ಹೋಗಿರುವ ಕನ್ನಡದ ‘ಸ್ವಯಂ-ಪಂಡಿತರು’ ಯಾರ ಜತೆಯಲ್ಲಿ ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಸಾಹಿತ್ಯ ಸಮ್ಮೇಳನಗಳ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದೆ, ಇದು ಶ್ರೀಸಾಮಾನ್ಯರ ಹಣ.

ಆದರೆ ಅಲ್ಲಿ ‘ಐಡಿ’ ಧರಿಸಿ ವಕ್ತಾರರಾಗುವ ಒಬ್ಬರಲ್ಲೂ ಇದರ ಕುರಿತಾದ ಎಚ್ಚರವಿಲ್ಲ ದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಎರಡು ವರ್ಗದವರ ಹಪಾಹಪಿಗಳು ವೇದಿಕೆಗಳಲ್ಲಿ ಚೀಟಿ ಕೊಟ್ಟು ತೋಡಿಕೊಳ್ಳುವ ಹಂತದವರೆಗೂ ಹೋಗುತ್ತವೆ.

ಇದನ್ನೂ ಓದಿ: Roopa Gururaj Column: ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು

ಹಾಗೆ ನೋಡಿದರೆ, ಒಂದು ಕಾಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಜಾರ್ಥದ ಅಧ್ವರ್ಯು ತನದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳು ಒಂದು ಶ್ರೇಷ್ಠಮಾಗವನ್ನು ನಿರ್ಮಿಸಿ ದ್ದವು. ಆ ಮಾರ್ಗವು ಜನಸಾಮಾನ್ಯರಿಂದ ದೂರವಾಗಿ, ಸರಕಾರದ ಹಣವನ್ನು ಖರ್ಚು ಮಾಡಿಸುವ ಜಾತ್ರೆಗಳಾಗಿ ಬದಲಾದ ಮೇಲೆ ಪ್ರತ್ಯೇಕ ಸಮ್ಮೇಳನಗಳು ಪ್ರಾರಂಭವಾದವು.

ಆದರೆ, ಈ ಪ್ರತ್ಯೇಕ ಸಮ್ಮೇಳನಗಳಾದರೂ ದುಂದುವೆಚ್ಚವಿಲ್ಲದೆ ಜನಸಾಮಾನ್ಯರ ಬಳಿಗೆ ಹೋಗಿವೆಯಾ ಎಂಬುದನ್ನು ಹೇಗೆ ತಿಳಿಯುವುದು? ಆ ಮಾದರಿಗಳಿದ್ದರೆ ಪ್ರತ್ಯೇಕತೆಗೂ ಅರ್ಥವಿರುತ್ತಿತ್ತು. ಒಟ್ಟಾರೆ ಹೇಳುವುದಾದರೆ, ಒಂದು ಪತ್ರಿಕೆಯನ್ನು ಓದಿ ಸುಖಿಸುವಷ್ಟೂ ನೆಮ್ಮದಿಯು ಈ ಸಮ್ಮೇಳನಗಳಲ್ಲಿ ಸಿಗುತ್ತಿಲ್ಲ. ಈ ಸಾಲನ್ನು ನಮ್ಮ ವಿದ್ವಾಂಸರು ಓದಿದರೆ, ‘ಇದು ಅವಕಾಶವಂಚಿತರ ಹಪಾಹಪಿ’ ಎಂದು ಸುಮ್ಮನಾಗುತ್ತಾರೆಯೇ ಹೊರತು, ಪರಿಹಾರ ವನ್ನು ಆಲೋಚಿಸಲಾರರು.

ಇಲ್ಲೊಂದು ಜನೋಪಯೋಗಿ ಕಾರ್ಯ ನಡೆಯುತ್ತಿದೆ. ಅದುವೇ- ‘ಪುಸ್ತಕ ಸಂತೆ’. ಒಂದಿಷ್ಟು ಪುಸ್ತಕ ಪ್ರಕಾಶಕರು/ವ್ಯಾಪಾರಿಗಳು ಹೊತ್ತು ತಂದು ರಿಯಾಯಿತಿಯಲ್ಲಿ ನೀಡುವ ಪುಸ್ತಕಗಳನ್ನು, ಸಾಕಷ್ಟು ಜನರು ಅಭಿಮಾನ-ಅವಶ್ಯಕತೆ-ಅರಿವಿನ ಹಸಿವು ಮುಂತಾದ ಕಾರಣಗಳಿಂದ ಕೊಳ್ಳುತ್ತಾರೆ. ಈ ಬೆಳವಣಿಗೆಯಿಂದ ಹಲವು ನೆಲೆಗಳಲ್ಲಿ ಪ್ರಯೋಜನವಾಗುತ್ತಿದೆ- ಪ್ರಕಾಶಕರಿಗೆ/ಮಾರಾಟಗಾರರಿಗೆ ಇಂಥ ಸಮ್ಮೇಳನಗಳಿಂದ ವ್ಯಾಪಾರವಾಗುತ್ತಿದೆ, ತನ್ಮೂಲಕ ಅವರ ಉದ್ಯಮ/ವ್ಯವಹಾರದ ವಿಸ್ತರಣೆಯೂ ಆಗುತ್ತದೆ; ಇಂಥ ಸಮ್ಮೇಳನಗಳಿಗೆ ಊಟ-ತಿಂಡಿ ತಯಾರಿಸುವಿಕೆ, ಬಡಿಸುವಿಕೆ, ಗುಡಿಸುವಿಕೆ ಮಾಡುವ ಕಾರ್ಯಪಟುಗಳ ದುಡಿಮೆಗೊಂದು ಆಸರೆಯಾಗುತ್ತದೆ.

ಈಗ ಪ್ರಾರಂಭದ ವಿಚಾರಕ್ಕೆ ಬರೋಣ. ‘ಕನ್ನಡ ಮಾತು ತಲೆ ಎತ್ತುವ ಬಗೆಗಳು’ ಬದಲಾ ಗಿವೆ. ಭಾಷೆ, ಜನಾಂಗ, ಧರ್ಮ, ಇವುಗಳ ನಡುವೆ ಸುಳಿವ ಆತ್ಮಗಳು ಮೊದಲಾದಂತೆ ಪ್ರತ್ಯೇಕ ಗುಂಪುಗಳಾಗಿವೆ. ಆದರೆ, ಕಿವಿ ತೆರೆದು ಕೇಳಿ, ಎದೆಯುಬ್ಬಿಸಿ ಸಾಗುತ್ತಿದ್ದ ಶ್ರೀಸಾ ಮಾನ್ಯರು ಪ್ರತ್ಯೇಕವಾಗಿ ಉಳಿದಿದ್ದಾರೆ. ಇವರು ಕೇಳಿದರೆ ನಾಲ್ಕು ಕಾಸು ಕೊಡಬಲ್ಲರು, ಆದರೆ ಇವರಿಗೆ ಈ ಸಮ್ಮೇಳನಗಳ ಸಾರ, ವಿಚಾರ, ಸರ್ವೋದ್ಧಾರ ಸಂಸ್ಕಾರಗಳು ಬೇಕಿಲ್ಲ.

ಅದಕ್ಕೆ ಬೇರೆ ಬೇರೆ ‘ಲೌಕಿಕ’ ಕಾರಣಗಳೂ ಇರಬಹುದು ಎನ್ನಿ... ಹಿಂದೆಲ್ಲಾ ಒಬ್ಬ ಕಾಲೇಜು ಮೇಷ್ಟ್ರು ಪಾಠ ಮಾಡುವಾಗ ವಿದ್ಯಾರ್ಥಿಗಳೊಂದಿಗೆ ತಮ್ಮ ಮಾತು-ಬರಹಗಳನ್ನು ಹಂಚಿಕೊಳ್ಳುತ್ತಿದ್ದುದರ ಜತೆಗೆ, ತರಗತಿ ಮುಗಿದ ಮೇಲೆ ‘ಲೋಕಜ್ಞಾನ’ವನ್ನೂ ನೀಡು ತ್ತಿದ್ದರು. ರಜೆಯಲ್ಲಿ ತೋಟ-ಗದ್ದೆ, ಕಾಡು-ಮೇಡುಗಳನ್ನು ಸುತ್ತಿಸುತ್ತಿದ್ದರು.

ತಾವು ಬರೆದ ಪುಸ್ತಕಗಳನ್ನು ಸಾರ್ವಜನಿಕ ಬಸ್ಸಿನಲ್ಲಿ ಅತಿ ಕಡಿಮೆ ಬೆಲೆಗೆ ಜನರಿಗೆ ನೀಡು ತ್ತಿದ್ದರು. ಕಾಡಿಗೆ ತೆರಳಿ ಗಿರಿಜನರೊಂದಿಗೆ ಕಾಲ ಕಳೆಯುತ್ತಿದ್ದರು. ನಿವೃತ್ತಿಯ ನಂತರವೂ ಹತ್ತಾರು ರೈತರನ್ನು ಭೇಟಿ ಮಾಡುವಿಕೆ, ಸಂತೆಗೆ ಹೋಗಿ ಸಂತನಂತೆ ಸುತ್ತಾಡಿ ಮತ್ತಷ್ಟು ಕಲಿಯುವಿಕೆಯಲ್ಲಿ ತೊಡಗುತ್ತಿದ್ದರು.

ಇವನ್ನೆಲ್ಲಾ ನೋಡಿದರೆ, ಬದುಕಿನ ಸಮ್ಮೇಳನಗಳು ಗುಂಪು ಕಳಚಿ, ಈ ಮಾರ್ಗದಲ್ಲಿ ಪ್ರತ್ಯೇಕವಾಗುವುದೇ ಮೇಲು ಎನಿಸುತ್ತದೆ. ಅಷ್ಟಲ್ಲದೆಯೇ ಬಸವಣ್ಣನವರು, ‘ವೇದ ವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ’ ಎಂದು ಹೇಳಿದ್ದಾರೆಯೇ? ಈ ಕುರಿತು ಆಲೋಚಿಸಬೇಕಿದೆ...

(ಲೇಖಕರು ಸಹಾಯಕ ಪ್ರಾಧ್ಯಾಪಕರು