ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Basavaraj Kannale Column: ಸುಸ್ಥಿರ ಅಭಿವೃದ್ದಿಯ ದೂರದರ್ಶಿ ನಾಯಕ ಕೆಂಪೇಗೌಡ

ಇಂದು ಬೆಂಗಳೂರು ವಿಶ್ವದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿ ಗುರುತಿಸಿಕೂಂಡಿದೆ. ಜಾಗತೀಕರಣ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ ಮತ್ತು ಸಂಶೋ ಧನಾ ಕ್ಷೇತ್ರಗಳಲ್ಲಿ ಬೆಂಗಳೂರು ಸಾಧಿಸಿರುವ ಅಸಾಧಾರಣ ಪ್ರಗತಿಯ ಹಿಂದೆ ನಾಲ್ಕು ಶತಮಾನಗಳ ಹಿಂದೆ ಕೆಂಪೇಗೌಡರು ಹಾಕಿದ ದೂರದರ್ಶಿತ್ವದ ಅಡಿಪಾಯ ಅಡಗಿದೆ.

ಕೆಂಪೇಗೌಡ ಜಯಂತಿ

ಬಸವರಾಜ್‌ ಕನ್ನಾಳೆ

ಇತಿಹಾಸ ಕೇವಲ ರಾಜರ, ಸಾಮ್ರಾಜ್ಯಗಳ ಮತ್ತು ಯುದ್ಧಗಳ ಕಥನವಲ್ಲ, ಅದು ಸಮಾಜವನ್ನು ರೂಪಿಸಿದ ಜನಜೀವನದ ಗುಣಮಟ್ಟವನ್ನು ಹೆಚ್ಚಿಸಿದ ಮತ್ತು ಭವಿಷ್ಯದ ಪೀಳಿಗೆಗಳ ಬದುಕಿಗೆ ದಾರಿ ದೀಪವಾದ ವ್ಯಕ್ತಿತ್ವಗಳ ದಾಖಲೆ. ಅಂತಹ ಮಹನೀಯರಲ್ಲಿ ನಾಡಪ್ರಭು ಕೆಂಪೇಗೌಡರು ಅಗ್ರಗಣ್ಯರು. ಅವರು ಕೇವಲ ಒಂದು ನಗರ ಕಟ್ಟಿದ ಆಡಳಿತಗಾರರಲ್ಲ. ಜನಪರ ಆಡಳಿತ, ಸುಸ್ಥಿರ ನಗರ ಯೋಜನೆ, ಕೃಷಿ ಅಭಿವೃದ್ಧಿ, ನೀರಾವರಿ ವ್ಯವಸ್ಥೆ, ವ್ಯಾಪಾರೋದ್ಯಮ, ಧಾರ್ಮಿಕ ಸಹಿಷ್ಣುತೆ ಮತ್ತು ಸಾಂಸ್ಕೃತಿಕ ಸಾಮರಸ್ಯದ ಪ್ರತೀಕವಾಗಿದ್ದರು.

ಇಂದು ಬೆಂಗಳೂರು ವಿಶ್ವದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿ ಗುರುತಿಸಿಕೂಂಡಿದೆ. ಜಾಗತೀಕರಣ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ ಮತ್ತು ಸಂಶೋ ಧನಾ ಕ್ಷೇತ್ರಗಳಲ್ಲಿ ಬೆಂಗಳೂರು ಸಾಧಿಸಿರುವ ಅಸಾಧಾರಣ ಪ್ರಗತಿಯ ಹಿಂದೆ ನಾಲ್ಕು ಶತಮಾನಗಳ ಹಿಂದೆ ಕೆಂಪೇಗೌಡರು ಹಾಕಿದ ದೂರದರ್ಶಿತ್ವದ ಅಡಿಪಾಯ ಅಡಗಿದೆ. ಆ ಕಾರಣಕ್ಕಾಗಿಯೇ ಅವರನ್ನು ಬೆಂಗಳೂರು ನಿರ್ಮಾತೃ ಎಂದು ಮಾತ್ರ ಕರೆಯುವುದು. ಅವರು ಒಬ್ಬ ನಗರ ನಿರ್ಮಾತೃ, ಜನಪರ ಆಡಳಿತಗಾರ, ಪರಿಸರ ಸಂರಕ್ಷಕ, ಅಭಿವೃದ್ಧಿಯ ಹರಿಕಾರ ಮತ್ತು ಸಮಾಜಮುಖಿ ಚಿಂತಕರಾಗಿ ದ್ದರು.

ಕೆಂಪೇಗೌಡರ ಆರಂಭಿಕ ಜೀವನ ನಾಡಪ್ರಭು ಕೆಂಪೇಗೌಡರು ಕ್ರಿ.ಶ. 1513ರ ಸುಮಾರಿಗೆ ಯಲಹಂಕ ನಾಡಪ್ರಭು ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕೆಂಪ ನಂಜೇಗೌಡರು ಸ್ಥಳೀಯ ಆಡಳಿತ ಗಾರ. ಬಾಲ್ಯದಿಂದಲೇ ಕೆಂಪೇಗೌಡರು ಆಡಳಿತ, ಸಮಾಜಜೀವನ, ಕೃಷಿ ಮತ್ತು ಯುದ್ಧಕಲೆಗಳಲ್ಲಿ ಆಸಕ್ತ ಹೊಂದಿದ್ದರು. ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಯಲಹಂಕ ಪ್ರದೇಶದಲ್ಲಿ ಬೆಳೆದರು. ವಿಜಯನಗರದ ಆಡಳಿತ ವ್ಯವಸ್ಥೆ, ಮಾರುಕಟ್ಟೆ ವ್ಯವಸ್ಥೆ, ಕೋಟೆ ನಿರ್ಮಾಣ ಮತ್ತು ಜನಪರ ಆಡಳಿತದಿಂದ ಪ್ರಭಾವಿತರಾಗಿದ್ದರು.

ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ 8: ನಿಂದನೆಯನ್ನು ಸಾಧನೆಯ ಮೆಟ್ಟಿಲಾಗಿಸುವ ಪರಿ

ಇದೇ ಅನುಭವ ಮುಂದೆ ಬೆಂಗಳೂರಿನ ನಿರ್ಮಾಣದಲ್ಲಿ ಪ್ರತಿಫಲಿಸಿತು. ಬೆಂಗಳೂರು ಸ್ಥಾಪನೆಯ ಮೈಲಿಗಲ್ಲು ಕ್ರಿ.ಶ. 1537ರಲ್ಲಿ ಕೆಂಪೇಗೌಡರು ಬೆಂಗಳೂರನ್ನು ಸ್ಥಾಪಿಸಿ ದರು. ಇದು ಯೋಜಿತ ನಗರಾಭಿವೃದ್ಧಿಯ ಮಾದರಿಯಾ ಗಿತ್ತು. ಆ ಕಾಲದಲ್ಲಿ ಅನೇಕ ಪಟ್ಟಣಗಳು ಸಹಜವಾಗಿ ಬೆಳೆ ಯುತ್ತಿದ್ದವು. ಆದರೆ ಬೆಂಗಳೂರು ಪೂರ್ವಯೋಜಿತ ನಗರ ವಾಗಿತ್ತು. ನಗರಕ್ಕ ಕೋಟೆ ನಿರ್ಮಿಸಲಾಯಿತು. ಪ್ರಮುಖ ರಸ್ತೆಗಳು, ವ್ಯಾಪಾರ ಕೇಂದ್ರಗಳು, ವಸತಿ ಪ್ರದೇಶಗಳು, ದೇವಾಲಯ ಗಳು ಮತ್ತು ಕೆರೆಗಳನ್ನು ಸಮನ್ವಯಗೊಳಿಸಿ ನಗರ ರೂಪಿಸಲಾಯಿತು. ಇಂದು ನಗರ ಯೋಜನೆ ಎಂದು ಕರೆಯುವ ಪರಿಕಲ್ಪನೆಯನ್ನು ಕೆಂಪೇಗೌಡರು ಸುಮಾರು ಐದು ಶತಮಾನ ಹಿಂದೆ ಕಾರ್ಯರೂಪಕ್ಕೆ ತಂದಿದ್ದರು. ಕೃಷಿ ಮತ್ತು ವ್ಯಾಪಾರದ ಅಭಿವೃದ್ಧಿ, ಸುರಕ್ಷತ ವಸತಿ ವ್ಯವಸ್ಥೆ, ನೀರಿನ ನಿರ್ವಹಣೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ, ಉದ್ಯೋಗ ಸೃಷ್ಟಿ, ಜನಸಾಮಾ ನ್ಯರ ಜೀವನಮಟ್ಟ ಸುಧಾರಣೆ ಇವು ಬೆಂಗಳೂರು ನಿರ್ಮಾಣದ ಪ್ರಮುಖ ಉದ್ದೇಶಗಳಾಗಿದ್ದವು.

ಇಂದು ವಿಶ್ವದ ಅನೇಕ ನಗರಗಳು ಅತಿಯಾದ ಜನಸಂಖ್ಯ, ಟ್ರಾಾಫಿಕ್ ಸಮಸ್ಯೆ, ನೀರಿನ ಕೊರತೆ ಮತ್ತು ಪರಿಸರ ಹಾನಿಯಿಂದ ಬಳಲುತ್ತಿವೆ. ಆದರೆ ಕೆಂಪೇಗೌಡರು ಐದು ಶತಮಾನ ಹಿಂದೆಯೇ ಈ ಸಮಸ್ಯಗಳನ್ನು ಊಹಿಸಿ ಯೋಜನೆ ರೂಪಿಸಿದ್ದರು. ಅವರು ನಗರದ ನಾಲ್ಕು ದಿಕ್ಕುಗಳಲ್ಲಿ ಗೋಪುರ ನಿರ್ಮಿಸಿ ನಗರದ ವಿಸ್ತರಣೆಯ ಮಿತಿಯನ್ನು ಗುರುತಿಸಿದರು. ಈ ಗೋಪುರಗಳು ಕೇವಲ ಸ್ಮಾಾರಕ ಕಟ್ಟಡಗಳಲ್ಲ; ಅವು ನಗರಾಭಿವೃದ್ಧಿಯ ನಿಯಂತ್ರಣದ ಸಂಕೇತವಾಗಿದ್ದವು. ನಗರದೊಳಗೆ ವ್ಯಾಪಾರ ಬೀದಿಗಳು, ವೃತ್ತಿಪರರ ವಸತಿ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತವಾಗಿ ರೂಪಿಸಲಾಯಿತು.

Kann

ಇಂದಿನ ಸ್ಮರ್ಟ್ ಸಿಟಿ ಪರಿಕಲ್ಪನೆಯ ಮೂಲ ಅಂಶಗಳಾದ ಯೋಜನೆ, ಸಂಪನ್ಮೂಲ ನಿರ್ವಹಣೆ ಮತ್ತು ನಾಗರಿಕ ಸೌಲಭ್ಯಗಳ ವ್ಯವಸ್ಥೆೆಯನ್ನು ಕೆಂಪೇಗೌಡರ ಆಡಳಿತದಲ್ಲಿಯೇ ಕಾಣಬಹುದು. ಕೆರೆಗಳ ನಿರ್ಮಾಣ, ಜಲಸಂರಕ್ಷಣೆ ಕೆಂಪೇಗೌಡರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಕೆರೆಗಳ ನಿರ್ಮಾಣ ಪ್ರಮುಖ. ಅವರು ಅರಿತಿದ್ದ ಒಂದು ಸತ್ಯವೇ ನೆಂದರೆ: ‘ನೀರನ್ನು ಉಳಿಸಿದವನೇ ನಾಗರಿಕತೆಯನ್ನು ಉಳಿಸು ತ್ತಾನೆ.’ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಕೆರೆಗಳನ್ನು ನಿರ್ಮಿಸಲಾಯಿತು.

ಧರ್ಮಾಂಬುಧಿ, ಸಂಪಂಗಿ, ಕೆಂಪಾಂಬುಧಿ ಸೇರಿದಂತೆ ಅನೇಕ ಜಲಾಶಯಗಳು ನಿರ್ಮಾಣ ಗೊಂಡವು. ಕುಡಿಯುವ ನೀರಿನ ಪೂರೈಕೆ, ಕೃಷಿಗೆ ನೀರಾವರಿ, ಅಂತರ್ಜಲ ಮರುಪೂರಣ, ಪರಿಸರ ಸಮತೋ ಲನ, ಪಶುಸಂಗೋಪನೆ ಇವು ಕೆರೆಗಳ ಉದ್ದೇಶವಾಗಿತ್ತು. ಇಂದು ಬೆಂಗಳೂರು ನೀರಿನ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಕೆಂಪೇಗೌಡರ ಜಲಸಂರಕ್ಷಣೆಯ ಮಾದರಿ ಅತ್ಯಂತ ಪ್ರಸ್ತುತ. ಕೆಂಪೇಗೌಡರು ಕೃಷಿಯನ್ನು ಆರ್ಥಿಕತೆಯ ಬೆನ್ನೆೆಲುಬು ಎಂದು ಪರಿಗಣಿಸಿದ್ದರು. ಅಗಾಗ್ಗೆ ಕೆರೆಗಳನ್ನು ನಿರ್ಮಿಸಿದರು. ಕೃಷಿಭೂಮಿಯನ್ನು ವಿಸ್ತರಿಸಿದರು, ರೈತರಿಗೆ ಭೂಹಕ್ಕುಗಳನ್ನು ಒದಗಿಸಿದರು. ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಪಡಿಸಿದರು. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಗ್ರಾಮೀ ಣ ಆರ್ಥಿಕತೆಯನ್ನು ಬಲಪಡಿಸಿದರು. ರೈತರ ಶ್ರಮಕ್ಕೆ ನ್ಯ ಯಯುತ ಮೌಲ್ಯ ದೊರಕುವ ವ್ಯವಸ್ಥೆೆಯನ್ನು ರೂಪಿಸಿದರು. ಆರ್ಥಿಕ ಅಭಿವೃದ್ಧಯ ಹರಿಕಾರ ಬೆಂಗಳೂರು ಬೆಳವಣಿಗೆಯಲ್ಲಿ ವ್ಯಾಪಾರ ಪ್ರಮುಖ ಪಾತ್ರವಹಿಸಿತು.

ಕೆಂಪೇಗೌಡರು ಮಾರುಕಟ್ಟೆಗಳನ್ನು ಸ್ಥಾಪಿಸಿದರು. ವ್ಯಾಪಾರಿಗಳಿಗೆ ಭದ್ರತೆ ಒದಗಿಸಿದರು. ವಿವಿಧ ಪ್ರದೇಶಗಳ ಜನರನ್ನು ನೆಲೆಸಲು ಪ್ರೋತ್ಸಾಹಿಸಿದರು. ಕೈಗಾರಿಕೆ ಮತ್ತು ಕೌಶಲ್ಯಾಧಾರಿತ ವೃತ್ತಿಗಳಿಗೆ ಉತ್ತೇಜನ ನೀಡಿದರು. ಪರಿಣಾಮವಾಗಿ ಬೆಂಗಳೂರು ವ್ಯಾಪಾರ ಕೇಂದ್ರವಾಗಿ ಬೆಳೆಯತೊಡಗಿತು. ಇಂದಿನ ಜಾಗತಿಕ ಹೂಡಿಕೆಗಳು ಮತ್ತು ಕೈಗಾರಿಕಾ ಬೆಳವಣಿಗೆಗೆ ಅಡಿಪಾಯ ಹಾಕಿದ ಮೊದಲ ಆಡಳಿತಗಾರರಲ್ಲಿ ಕೆಂಪೇಗೌಡರು ಒಬ್ಬರು. ಕೆಂಪೇಗೌಡರು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲಿಲ್ಲ. ದೇವಾಲಯಗಳ ನಿರ್ಮಾಣಕ್ಕೆ ನೆರವಾದರು. ವಿವಿಧ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡಿದರು. ಅವರ ಆಡಳಿತದಲ್ಲಿ ಧರ್ಮ, ಜಾತಿ ಮತ್ತು ವೃತ್ತಿಯ ಆಧಾರದ ಮೇಲೆ ದ್ವೇಷಕ್ಕಿಂತ ಸಹಬಾಳೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು.

ಇಂದಿನ ಭಾರತದಲ್ಲಿ ಸಾಮಾಜಿಕ ಸಾಮರಸ್ಯದ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಂಪೇಗೌಡರ ಈ ದೃಷ್ಟಿಕೋನ ಪ್ರಸ್ತುತವಾಗಿದೆ. ಕೆಂಪೇಗೌಡರ ಆಡಳಿತ ತತ್ವಗಳು ಒಬ್ಬ ಆಡಳಿತಗಾರನ ಯಶಸ್ಸು ಅವನ ಅಧಿಕಾರದಲ್ಲಲ್ಲ ಜನರ ವಿಶ್ವಾಸದಲ್ಲಿ ಅಡಗಿರುತ್ತದೆ. ಕೆಂಪೇಗೌಡರ ಆಡಳಿತದ ಪ್ರಮುಖ ಲಕ್ಷಣಗಳು ಎಂದರೆ ಜನಪರತೆ. ಜನರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಆಡಳಿತ ನಡೆಸಿದರು. ಅಭಿವೃದ್ಧಿ ಕೇಂದ್ರಿತ ಆಡಳಿತ, ಸಾರ್ವಜನಿಕ ಮೂಲಸೌಕ ರ್ಯಗಳ ನಿರ್ಮಾಣಕ್ಕೆೆ ಆದ್ಯತೆ ನೀಡಿದರು. ಕೆರೆಗಳು, ತೋಟಗಳು ಮತ್ತು ಹಸಿರು ಪ್ರದೇಶಗಳನ್ನು ಅಭಿವೃದ್ಧಿಪಡಿ ಸಿದರು. ಆರ್ಥಿಕ ಸ್ವಾವಲಂಬನೆ, ಕೃಷಿ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡಿದರು.

ಎಲ್ಲ ವರ್ಗದ ಜನರನ್ನು ಒಳಗೊಂಡ ಆಡಳಿತ ನಡೆಸಿದರು. ಆಧುನಿಕ ಬೆಂಗಳೂರಿನ ಮೇಲೆ ಪ್ರಭಾವ ಇಂದು ಬೆಂಗಳೂರು ಭಾರತದ ಐಟಿ ರಾಜಧಾನಿ. ಜಾಗತಿಕ ಹೂಡಿಕೆ ಕೇಂದ್ರ, ಶಿಕ್ಷಣ ಮತ್ತು ಸಂಶೋಧನೆಯ ಪ್ರಮುಖ ತಾಣ. ಬಹುಸಾಂಸ್ಕೃತಿಕ ನಗರ. ಈ ಬೆಳವಣಿಗೆಯ ಹಿಂದೆ ಕೆಂಪೇಗೌಡರ ದೂರದೃಷ್ಟಿಯಿದೆ. ಅವರು ನಿರ್ಮಿಸಿದ ನಗರ ಕಾಲಕ್ರಮೇಣ ಬ್ರಿಟಿಷರ ಕಾಲದಲ್ಲಿ ಕಂಟೋನ್ಮೆಂಟ್ ಆಗಿ, ಸ್ವಾತಂತ್ರ್ಯ ನಂತರ ಕೈಗಾರಿಕಾ ಕೇಂದ್ರವಾಗಿ ಮತ್ತು ನಂತರ ಐಟಿ ನಗರವಾಗಿ ರೂಪುಗೊಂಡಿತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 2022ರಲ್ಲಿ ಸ್ಥಾಪಿಸಲಾದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಕೇವಲ ಒಂದು ಶಿಲ್ಪವಲ್ಲ; ಅದು ಕನ್ನಡ ನಾಡಿನ ಐತಿಹಾಸಿಕ ಸ್ಮತಿಗೆ ಸಲ್ಲಿಸಿದ ಗೌರವ. ಸ್ಟ್ಯಾಚು ಆಫ್ ಪ್ರಾಸ್ಪರಿಟಿ ಎಂದು ಕರೆಯಲ್ಪಡುವ ಈ ಪ್ರತಿಮೆ ವಿಶ್ವದ ಅತಿ ಎತ್ತರದ ಕಂಚಿನ ಪ್ರತಿಮೆಗಳಲ್ಲಿ ಒಂದು.

ಬೆಂಗಳೂರಿಗೆ ಆಗಮಿಸುವ ದೇಶ-ವಿದೇಶಗಳ ಜನರಿಗೆ ಇದು ನಗರದ ಇತಿಹಾಸ, ಸಂಸ್ಕೃತಿ ಮತ್ತು ನಿರ್ಮಾತೃವನ್ನು ನೆನಪಿಸುತ್ತದೆ. ‘ಆಧುನಿಕತೆಯತ್ತ ಸಾಗುವಾಗ ನಮ್ಮ ಇತಿಹಾಸ ಮರೆಯಬಾರದು’ ಎಂಬ ಸಂದೇಶ ನೀಡುತ್ತದೆ. ಇತ್ತೀಚೆಗೆ ಕರ್ನಾಟಕ ಸರಕಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ, ಕೆಂಪೇಗೌಡ ಜಯಂತಿಗೆ ಮಹತ್ವ ನೀಡುತ್ತಿರುವುದು ಅವರ ಪರಂಪರೆಯ ಮರುಪರಿಶೀಲನೆಯ ಸಂಕೇತ. ಅವರ ಚಿಂತನೆಗಳು ಮತ್ತು ಆಡಳಿತದ ಮಾದರಿ ಇಂದಿನ ನಗರೀಕರಣ, ಪರಿಸರ ಸಮಸ್ಯೆಗಳು, ಸಾಮಾಜಿಕ ಅಸಮಾನತೆ ಮತ್ತು ಅಭಿವೃದ್ಧಿಯ ಸವಾಲುಗಳಿಗೆ ಉತ್ತರ ಗಳನ್ನು ಒದಗಿಸುತ್ತವೆ. ಇವು ಅವರ ಅಭಿವೃದ್ಧಿ ಮಾದರಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ. ಇಂದಿಗೆ ಕೆಂಪೇಗೌಡರ ಸಂದೇಶ ಕೆಂಪೇಗೌಡರ ಜೀವನದಿಂದ ಕಲಿಯಬಹುದಾದ ಪ್ರಮುಖ ಪಾಠಗಳು- ನೀರನ್ನು ಉಳಿಸಬೇಕು, ಕೆರೆಗಳ ಸಂರಕ್ಷಣೆ ಅತ್ಯಗತ್ಯ. ಅನಿಯಂತ್ರಿತ ನಗರೀಕರಣ ತಡೆಯಬೇಕು. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಇರಬೇಕು. ಧರ್ಮ, ಜಾತಿ ಮತ್ತು ಭಾಷೆಗಳ ವೈವಿಧ್ಯತೆ ಯನ್ನು ಗೌರವಿಸಬೇಕು.

ಅಭಿವೃದ್ಧಿಯ ಫಲ ಎಲ್ಲರಿಗೂ ತಲುಪಬೇಕು. ನಾಡಪ್ರಭು ಕೆಂಪೇಗೌಡರನ್ನು ಕೇವಲ ಬೆಂಗಳೂರಿನ ಸಂಸ್ಥಾಾಪಕ ಎಂದು ನೆನಪಿಸುವುದು ಅವರ ವ್ಯಕ್ತಿತ್ವದ ವಿಶಾಲತೆಯನ್ನು ಕುಗ್ಗಿಸಿದಂತೆ. ಅವರು ದೂರದರ್ಶಿ ನಗರ ಯೋಜಕ, ಪರಿಸರ ಸಂರಕ್ಷಕ, ಜನಪರ ಆಡಳಿತಗಾರ, ಕೃಷಿ ಮತ್ತು ವ್ಯಾಪಾರ ಅಭಿವೃದ್ಧಿಿಯ ಹರಿಕಾರ ಹಾಗೂ ಸಾಮಾಜಿಕ ಸಾಮರಸ್ಯದ ಪ್ರತಿಪಾದಕ. ಇಂದು ಬೆಂಗಳೂರು ವಿಶ್ವನಗರವಾಗಿ ಬೆಳೆದಿದ್ದರೆ ಅದರ ಬೀಜ ಬಿತ್ತಿದವರು ಕೆಂಪೇಗೌಡರು. ಅವರ ಚಿಂತನೆಗಳು ಇಂದಿನ ನಗರಾಭಿವೃದ್ಧಿ, ನೀರಿನ ನಿರ್ವಹಣೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಮಾರ್ಗದರ್ಶಿ.